ನಿಮ್ಮ ಭಾವನೆ, ಅನುಭವ ಹಂಚ್ಕೊಬೇಕೆ..? Fuchcha ಇದು ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ..!

ಟೀಮ್​ ವೈ.ಎಸ್​. ಕನ್ನಡ

ನಿಮ್ಮ ಭಾವನೆ, ಅನುಭವ ಹಂಚ್ಕೊಬೇಕೆ..? Fuchcha ಇದು ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ..!

Thursday December 24, 2015,

3 min Read

ಕಾಲೇಜ್ ಎಂದರೆ ಹಾಗೆ. ಅದು ಹೊಸ ಕನಸುಗಳ ಕಾಲ. ಹೊಸತನಕ್ಕಾಗಿ ಮಿಡಿಯುವ ಕಾಲ. ಆದರೆ ಇಲ್ಲಿ ಕನಸು ಮತ್ತು ಆಲೋಚನೆ ಅದು ಮೂಡಿದ ವ್ಯಕ್ತಿಗೆ ಮಾತ್ರ ಸೀಮಿತವಾಗಿರುತ್ತದೆ. ಯಾಕೆಂದರೆ ಅದನ್ನು ಹಂಚಿಕೊಳ್ಳಲು ಇತರರೊಂದಿಗೆ ಶೇರ್ ಮಾಡಿಕೊಳ್ಳಲು ಯಾವುದೇ ವೇದಿಕೆ ಸುಲಭವಾಗಿ ದೊರೆಯುವುದಿಲ್ಲ. ಇದು ಪ್ರತಿಯೊಂದು ಯುವ ಮನಸ್ಸು ಎದುರುತ್ತಿರುವ ಸಮಸ್ಯೆ. ಪರಂಪರಾಗತ ಮಾಧ್ಯಮ ತಾಣಗಳು ಕೂಡ ಯುವ ಪ್ರಾತಿನಿಧ್ಯವಿಲ್ಲದೆ ಕೊರಗುತ್ತಿವೆ.

ಇಂತಹ ಒಂದು ಸಮಸ್ಯೆ, ಅಂತಿಮವಾಗಿ ಒಂದು ಹೊಸ ಆಲೋಚನೆ , ವಿಧಾನಕ್ಕೆ ದಾರಿ ಮಾಡಿಕೊಟ್ಟಿತ್ತು. ದೆಹಲಿ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳಾಗಿದ್ದ ತರುಣ್ ಭಾರದ್ವಾಜ್ ಮತ್ತು ಸನ್ನಿ ತಲ್ವಾರ್ ಕೂಡ ಇದೇ ಅನುಭವವಾಗಿತ್ತು. ಇದು ಅಂತಿಮವಾಗಿ ಈ ಸಮಸ್ಯೆಗೆ ಪರಿಹಾರ ಹುಡುಕಲು ಅವರನ್ನು ಪ್ರೇರೇಪಿಸಿತು. ತಮ್ಮ ಭಾವನೆಗಳನ್ನು, ಅನುಭವಗಳನ್ನು ಕಾಲೇಜ್ ವಿದ್ಯಾರ್ಥಿಗಳಿಗೆ ಅಭಿವ್ಯಕ್ತಿಪಡಿಸಲು ವೇದಿಕೆಯೊಂದನ್ನು ಹುಟ್ಟುಹಾಕಿದರು.

image


ತಮ್ಮ ಆರಂಭಿಕ ದಿನಗಳ ಬಗ್ಗೆ ತರುಣ್ ಈ ರೀತಿ ಹೇಳುತ್ತಾರೆ. ಆರಂಭದಲ್ಲಿ ದೆಹಲಿ ವಿಶ್ವ ವಿದ್ಯಾನಿಲಯವನ್ನು ಗುರಿಯಾಗಿರಿಸಿಕೊಂಡು ಮಾತ್ರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಆದರೆ ದಿನ ಕಳೆದಂತೆ ಇದು ಜನಪ್ರಿಯವಾಯಿತು. ಇದೀಗ 200ಕ್ಕೂ ಹೆಚ್ಚೂ ಕಾಲೇಜುಗಳಲ್ಲಿ ನಮ್ಮ ಪ್ರಾತಿನಿಧ್ಯವಿದೆ. ಒಂದು ಲಕ್ಷ ಬಳಕೆದಾರರಿದ್ದಾರೆ. ಕಳೆದ ಒಂದು ವರ್ಷದಲ್ಲಿ ಈ ಸೈಟ್ ಗೆ ಭೇಟಿ ನೀಡುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದು ಕಾಲೇಜು ವಿದ್ಯಾರ್ಥಿಗಳಿಗಾಗಿ ವೇದಿಕೆ ಕಲ್ಪಿಸಿರುವ ಫಕ್ಕಾ fuchchaದ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ತರುಣ್ ಅವರ ಮಾತು.

ತಮ್ಮ ವೆಬ್ ಸೈಟ್ ಗೆ ಭೇಟಿ ನೀಡುವವರಲ್ಲಿ ಯುವ ಜನಾಂಗದ ಪಾಲೇ ಅಧಿಕ. ಮುಖ್ಯವಾಗಿ 15 ರಿಂದ 30ರ ವಯೋಮಾನದವರ ಸಂಖ್ಯೆ ಶೇಕಡಾ 80ರಷ್ಟಿದೆ. ಕಳೆದ ಎರಡು ವರ್ಷದಲ್ಲಿ 3000ಕ್ಕೂ ಹೆಚ್ಚು ಇಂಟರ್ನ್​​ಶಿಪ್​​ ಅಪ್ಲಿಕೇಷನ್ ಅಭಿವೃದ್ಧಿಪಡಿಸಲಾಗಿದೆ. ಐನೂರಕ್ಕೂ ಹೆಚ್ಚು ಲೇಖಕಕರು ಇದಕ್ಕೆ ಕೊಡುಗೆ ನೀಡುತ್ತಿದ್ದಾರೆ.

ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಫಕ್ಕಾ ಸೈಟ್​​​ಗೆ ಭೇಟಿ ನೀಡುತ್ತಿರುವುದರಿಂದ ಆದಾಯ ಗಳಿಕೆ ಸಮಸ್ಯೆಯಾಗಿಲ್ಲ. ಕಾರ್ಪೋರೇಟ್ ಸಂಸ್ಥೆಗಳು ಕೂಡ ಇದಕ್ಕೆ ಬೆಂಬಲ ಸೂಚಿಸಿವೆ.

ವಿದ್ಯಾರ್ಥಿಗಳ ಮನೆ ಮಾತಾಗಿರುವ ಫಕ್ಕಾ , ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಸಹ ಭಾಗಿತ್ವ ಕೂಡ ಪಡೆದಿದೆ. ಐಐಎಂ ಲಖನೌ, ಐಐಎಂ ಬೆಂಗಳೂರು , ಐಐಎಂ ತಿರುಚ್ಚಿ ಮತ್ತು ಬಿಐಟಿಎಸ್ ಪಿಲಾನಿ ಜೊತೆ ಕೈ ಜೋಡಿಸಿದೆ.

ಸಾಂಪ್ರದಾಯಿಕ ಜಾಹೀರಾತು ಆದಾಯದ ಪ್ರಮುಖ ಮೂಲವಾಗಿದೆ. ಇದರ ಜೊತೆ ಜೊತೆಗೆ ಪ್ರಚಾರ ಅಭಿಯಾನ ಕೂಡ ಸಂಪನ್ಮೂಲ ಸಂಗ್ರಹಕ್ಕೆ ನೆರವು ನೀಡುತ್ತಿದೆ ಎನ್ನುತ್ತಿದ್ದಾರೆ ತರುಣ್. ಸ್ಟಡಿ ಒವರ್ ಸೀಸ್, ರಿಲೇಗೇರ್, ವಿಬೇರ್ ಹೀಗೆ ಹತ್ತು ಹಲವು ಪ್ರಚಾರ ಆಂದೋಲನಗಳು ಹಿಟ್ ಆಗಿವೆ ಎನ್ನುತ್ತಾರೆ ತರುಣ್

ಆರಂಭಿಕ ಹಂತದ ಸವಾಲುಗಳು

ಇತರ ಎಲ್ಲ ಹೊಸ ಆಲೋಚನೆಗಳಂತೆ, ಇದು ಕೂಡ ಸವಾಲುಗಳಿಂದ ಮುಕ್ತವಾಗಿಲ್ಲ. ಹೀಗೆ ಹೇಳುತ್ತ ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ತರುಣ್. ಯಾರಿಗೂ ಕೂಡ ನಮ್ಮ ಈ ಆಲೋಚನೆ ಮೇಲೆ ವಿಶ್ವಾಸ ಇರಲಿಲ್ಲ. ಅವರಿಗೆ ಮನವರಿಕೆ ಮಾಡಿಕೊಡುವುದೇ ಸವಾಲಿನ ಕೆಲಸವಾಗಿತ್ತು. ಮುಖ್ಯವಾಗಿ ವಿಶ್ವಾಸ ನಿರ್ಮಾಣವಾಗಬೇಕು. ಇಲ್ಲವಾದರೆ ಯಾರೂ ಕೂಡ ಅದರಲ್ಲಿ ಬಂಡವಾಳ ಹೂಡಲು ಮುಂದೆ ಬರುವುದಿಲ್ಲ. ಇದು ತರುಣ್ ಅವರ ಮಾತು.

ಅತ್ಯುತ್ತಮ ಗುಣಮಟ್ಟದ ಮಾಹಿತಿಯ ಕೊರತೆ ಪ್ರಮುಖವಾಗಿ ಡಿಜಿಟಲ್ ಸಂಸ್ಥೆಗಳು ಎದುರಿಸುವ ಪ್ರಮುಖ ಸಮಸ್ಯೆಯಾಗಿದೆ. ಕ್ರಿಯಾಶೀಲ ಮನಸ್ಸಿನ ಕೊರತೆ ಕೂಡ ಇಲ್ಲಿ ಕಾಣುತ್ತಿದೆ. ಇದನ್ನು ಮನಗಂಡೆ ಫಕ್ಕಾ ಈ ಸಮಸ್ಯೆ ನೀಗಿಸುವತ್ತ ಹೆಜ್ಜೆ ಇಟ್ಟಿತ್ತು. ಗುಣಮಟ್ಟದ ಮಾಹಿತಿ ಖಾತರಿಪಡಿಸಲು ಮೊದಲ ಆದ್ಯತೆ ನೀಡಿತು ಎನ್ನುತ್ತಾರೆ ತರುಣ್.

ಡಿಜಿಟಲ್ ಕ್ರಾಂತಿ

ಭಾರತದಲ್ಲಿ ಪ್ರಸಕ್ತ 350 ಮಿಲಿಯನ್ ಇಂಟರ್ ನೆಟ್ ಬಳಕೆದಾರರು ಇದ್ದಾರೆ ಎಂಬುದು ಸಮೀಕ್ಷೆ. 2017 ರ ಹೊತ್ತಿಗೆ ಇದು 500 ಮಿಲಿಯನ್ ತಲುಪುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಶೇಕಡಾ 70 ಮಂದಿ 15 ರಿಂದ 35 ವರ್ಷದೊಳಗಿನವರು. ಇದು ಮುಂದಿನ ದಿನಗಳ ಉಜ್ವಲ ಭವಿಷ್ಯದ ಸಂಕೇತ ಎನ್ನುತ್ತಾರೆ ತರುಣ್. ಈ ವಯೋಮಾನದ ಅಭಿರುಚಿ ಕೂಡ ಭಿನ್ನವಾಗಿದೆ. ಇವರಿಗೆ ಸಾಮಾನ್ಯ ಸುದ್ದಿಗಳಲ್ಲಿ ಆಸಕ್ತಿ ಇಲ್ಲ. ಬದಲಾಗಿ ತಮ್ಮ ಅಭಿವ್ಯಕ್ತಿ, ಆಲೋಚನೆ ಪ್ರತಿಫಲಿಸುವಂತಹ ವೇದಿಕೆ ದೊರೆಯಬೇಕು ಎಂದು ಹಂಬಲಿಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ಮುಖ್ಯವಾಗಿ ಯುವ ಮನಸ್ಸುಗಳನ್ನು ಕೇಂದ್ರಿಕರಿಸಿ ಹಲವು ವೇದಿಕೆಗಳು ಜನ್ಮ ತಾಳಿವೆ. ಅವುಗಳಲ್ಲಿ ಮುಖ್ಯವಾದವು ಯುತ್ ಕಿ ಅವಾಜ್, ಸ್ಕೂಪ್ ವೂಪ್. ಎಂಟಿವಿ ಜೊತೆ ಗುರುತಿಸಿಕೊಂಡಿದ್ದ ಸೈರಸ್ 101 ಇಂಡಿಯಾ. ಕಾಮ್ ಎಂಬ ವೇದಿಕೆ ಕೂಡ ಹುಟ್ಟು ಹಾಕಿದ್ದಾರೆ.

ಹಲವು ವೇದಿಕೆಗಳು ಒಂದೇ ಸ್ವರೂಪದಲ್ಲಿ ಕಾಣಿಸಿಕೊಂಡಿರುವುದನ್ನು ತರುಣ್ ಒಪ್ಪಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ವೀಕ್ಷಕರೇ ಬೇರೆ ಎನ್ನುತ್ತಿದ್ದಾರೆ ಅವರು. 2016ರ ಹೊತ್ತಿಗೆ ಪ್ರತಿಯೊಂದು ಕಾಲೇಜಿಗೂ ಚಿಕ್ಕದಾದ ಸೈಟ್ ವೊಂದನ್ನು ಅಭಿವೃದ್ಧಿಪಡಿಸುವ ಕನಸನ್ನು ತರುಣ್ ಹೊಂದಿದ್ದಾರೆ. ಈ ಕನಸನ್ನು ಸಾಕಾರಗೊಳಿಸುವತ್ತ ಹೆಜ್ಜೆ ಹಾಕಿದ್ದಾರೆ.

ಡಿಜಿಟಲ್ ಲೋಕದ ಜಾಹೀರಾತು ಕ್ಷೇತ್ರ 10, 220 ಕೋಟಿ ರೂಪಾಯಿ ತಲುಪುವ ನಿರೀಕ್ಷೆ ಇದೆ. ಇದು ಅಧ್ಯಯನ ಸಮಿತಿಯೊಂದರ ವರದಿ. ಅದೇ ರೀತಿ ಸ್ಥಳೀಯ ಜಾಹೀರಾತು ಆದಾಯ 2018ರ ಹೊತ್ತಿಗೆ 21 ಬಿಲಿಯನ್ ಡಾಲರ್ ತಲುಪುವ ಸೂಚನೆ ನೀಡಿದೆ. ಇದರ ಲಾಭ ಪಡೆಯಲು ತಂತ್ರ ರಚಿಸಲಾಗಿದೆ ಎನ್ನುತ್ತಾರೆ ತರುಣ್. ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 70ರಷ್ಟು ಹೆಚ್ಚಿನ ಬೆಳವಣಿಗೆ ದಾಖಲಿಸಿದೆ. ಇದೀಗ ಜನ ಮಾನಸದಲ್ಲಿ ಸ್ಥಾನ ಪಡೆದಿರುವ ಡಿಜಿಟಲ್ ಇಂಡಿಯಾ ಕ್ರಾಂತಿಯಲ್ಲಿ ‘ಫಕ್ಕಾ’ ಖಂಡಿತವಾಗಿಯೂ ಪ್ರಮುಖ ಸ್ಥಾನ ಪಡೆಯಲಿದೆ. ಇದರಲ್ಲಿ ಎರಡು ಮಾತಿಲ್ಲ ಎನ್ನುತ್ತಾರೆ ಆತ್ಮ ವಿಶ್ವಾಸದ ತರುಣ್.

ಲೇಖಕರು: ತೌಸಿಫ್​​ ಆಲಮ್​

ಅನುವಾದಕರು : ಎಸ್​.ಡಿ.