ಪ್ರಾಣಿಗಳ ಮೇಲೆ ಪ್ರೀತಿ- ಅರಣ್ಯ ಸಂರಕ್ಷಣೆಗೆ ಪಣತೊಟ್ಟ ಲೆಗ್ಗಿ..!

ಟೀಮ್​ ವೈ.ಎಸ್​​.

ಪ್ರಾಣಿಗಳ ಮೇಲೆ ಪ್ರೀತಿ- ಅರಣ್ಯ ಸಂರಕ್ಷಣೆಗೆ ಪಣತೊಟ್ಟ ಲೆಗ್ಗಿ..!

Friday October 16, 2015,

4 min Read

ಅನಿಲ್​​ ಕುಂಬ್ಳೆ.. ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಕ್ರಿಕೆಟ್ ಜಗತ್ತಿನಲ್ಲಿ ಬೌಲಿಂಗ್ ಮಾಂತ್ರಿಕ ಎಂದು ಗುರುತಿಸಿಕೊಂಡವರು. ಲೆಗ್​​ ಸ್ಪಿನ್​​ ಮೂಲಕ ಮೋಡಿ ಮಾಡಿದವ್ರು. ಕುಂಬ್ಳೆಯ ಗೂಗ್ಲಿಗೆ ಹೆದರದೇ ಇದ್ದ ಬ್ಯಾಟ್ಸ್​​ಮನ್​ ಇರಲಿಲ್ಲ. ಪಂದ್ಯ ಗೆಲ್ಲಬೇಕು ಅಂದ್ರೆ ಕುಂಬ್ಳೆ ವಿಕೆಟ್​​ ಪಡೆಯಬೇಕು ಅನ್ನೋ ಮಟ್ಟಕ್ಕೆ ಅನಿಲ್​​ ಬೌಲಿಂಗ್​​ ಮಾಡ್ತಾ ಇದ್ರು. ಟೀಮ್​​ ಇಂಡಿಯಾ ಪರ ಟೆಸ್ಟ್​ನಲ್ಲಿ ಗರಿಷ್ಠ ವಿಕೆಟ್​​ ಪಡೆದ ದಾಖಲೆಯೂ ಕುಂಬ್ಳೆ ಹೆಸರಿನಲ್ಲಿದೆ. ಕ್ರಿಕೆಟ್​​ಗೆ ಗುಡ್​​ ಬೈ ಹೇಳಿದ ಮೇಲೆ ಕುಂಬ್ಳೆ ಸುಮ್ಮನೆ ಕೂತಿಲ್ಲ. ವನ್ಯಜೀವಿಗಳ ಮೇಲೆ ಕುಂಬ್ಳೆಗೆ ಕ್ರಿಕೆಟ್​​​​​​ ಮೇಲಿರುಷ್ಟೇ ಪ್ರೀತಿ ಇದೆ. ಕುಂಬ್ಳೆ ವನ್ಯಜೀವಿಗಳ ಮೇಲಿರುವ ಕಳಕಳಿ ಮತ್ತು ಹವ್ಯಾಸದಿಂದ ವನ್ಯಜೀವಿ ಸಂರಕ್ಷರಣೆಯ ರಾಯಬಾರಿ ಆಗಿದ್ದಾರೆ. ಕ್ರಿಕೆಟ್​​​ನಿಂದ ವಿರಾಮ ಪಡೆದುಕೊಂಡು, ಅರಣ್ಯಗಳಿಗೆ ಬೇಟಿ ನೀಡಿ ಕಾಡು ಪ್ರಾಣಿಗಳನ್ನು ನೋಡಿ ಆನಂದಿಸುವುದು ಅಥವಾ ಪೋಟೊ ತೆಗೆದು ಸಂಭ್ರಮಿಸುವು ಮಾಜಿ ಕ್ರಿಕೆಟಿಗರ ಅತೀ ದೊಡ್ಡ ಹವ್ಯಾಸ. ಆದ್ರೆ ಇದ್ರ ಜೊತೆಗೆ ಕಾಡು ಪ್ರಾಣಿಗಳ ರಕ್ಷಣೆಗೆ ಏನಾದ್ರು ಮಾಡ ಬೇಕು ಎನ್ನವ ತುಡಿತ ಅನಿಲ್​​ ಕುಂಬ್ಳೆಗಿದೆ.

image


ಅನಿಲ್​​ ಕುಂಬ್ಳೆಯ ಈ ತುಡಿತ, ಕನಸೇ `ಜಂಬೊ ಫಂಡ್’ ಹುಟ್ಟಿಗೆ ಕಾರಣವಾಗಿದೆ. ಜಂಭೋ ಫಂಡ್​ ಅರಣ್ಯ ರಕ್ಷಣೆಗೆ ಕೆಲಸ ಮಾಡುವ ಎನ್‍ಜಿಓಗಳು, ಅರಣ್ಯ ಸಿಬ್ಬಂದಿಗಳು, ಅರಣ್ಯ ಸಂರಕ್ಷಣೆ ಮಾಡುವ ವ್ಯಕ್ತಿಗಳ ಸಹಾಯದಿಂದ ಕಾರ್ಯಾರಂಭ ಮಾಡಿತ್ತು. ಕ್ರಿಕೆಟಿಗನಾಗಿದ್ದರೂ ತಾನು ಹುಟ್ಟುಹಾಕಿದ ಜಂಬೋ ಫಂಡ್ ಎನ್‍ಜಿಓ ನಡೆಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಜಂಭೋ ಫಂಡ್​​ಗೆ ಬೇಕಾಗಿದ್ದ ನಿಧಿ ಸಂಗ್ರಹಿಸುವುದು ಹುಡುಗಾಟದ ಮಾತಾಗಿರಲ್ಲಿ. ಆರಂಭದಲ್ಲಿ ಜಂಭೋ ಫಂಡ್​​ ನಡೆಸಲು ಅನಿಲ್​​ ಕುಂಬ್ಳೆ ಅದೆಷ್ಟೋ ಹಣವನ್ನು ಖರ್ಚು ಮಾಡಿದ್ದಾರೆ.

ವನ್ಯಜೀವಿ ಸಂರಕ್ಷಣೆ ಬಗ್ಗೆ ಕುಂಬ್ಳೆಗಿರುವ ಕಾಳಜಿಯನ್ನು ಗಮನಿಸಿದ ಕರ್ನಾಟಕ ಸರಕಾರ 2009ರಲ್ಲಿ ವನ್ಯಜೀವಿ ಮಂಡಳಿಗೆ ಉಪಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಆಗ ವನ್ಯಜೀವಿ ರಕ್ಷಣಾ ಕಾಯ್ದೆ 1972ರ ಬಗ್ಗೆ ಕುಂಳ್ಳೆ ಸಂಪೂರ್ಣ ಅರಿತುಕೊಂಡಿದ್ದರು. ಹೆದ್ದಾರಿ, ರಸ್ತೆ ಇತ್ಯಾದಿ ನಿರ್ಮಾಣದ ಹೆಸರಿನಲ್ಲಿ ಅರಣ್ಯ ನಾಶ ಮಾಡಲಾಗುತ್ತಿತ್ತು. ಅದನ್ನು ಕುಂಬ್ಳೆ ತಮ್ಮ ಅಧಿಕಾರಾವಧಿಯಲ್ಲಿ ತಡೆದು ವನ್ಯಜೀವಿಗಳ ರಕ್ಷಣೆಗೆ ಕಾಡನ್ನು ಉಳಿಸಿಕೊಳ್ಳುವಲ್ಲಿ ಸಾಕಷ್ಟು ಕೆಲಸ ಮಾಡಿದ್ರು.

image


ಜಂಬೋ ಫಂಡ್ ಹುಟ್ಟು:

ಬಗ್ಗಟ್ಟಿನಲ್ಲಿ ಬಲವಿದೆ ಎನ್ನುವದನ್ನು ಅರಿತ ಕುಂಳ್ಳೆ ಕಾಡು ಮತ್ತು ಕಾಡು ಪ್ರಾಣಿಗಳ ರಕ್ಷಣೆಗೆ ಏಕಾಂಗಿಯಾಗಿ ಹೋರಾಟಮಾಡುವುದರಲ್ಲಿ ಅರ್ಥವಿಲ್ಲ ಎನ್ನುವುದನ್ನು ತಿಳಿದು ಕೊಂಡಿದ್ದರು. ಇದಕ್ಕಗಿ ಸಂಘಟಿತರಾಗುವ ನಿರ್ಧಾರಕ್ಕೆ ಬಂದವರು ತಮ್ಮ ಹೆಂಡತಿ ಚೇತನಾ ಕುಂಳ್ಳೆ ಅವರ ಸಹಾಯದೊಂದಿಗೆ `ಕುಂಳ್ಳೆ ಫೌಂಡೇಶನ್’ ಸ್ಥಾಪಿಸಿದ್ರು.. ಇದರ ಅಡಿಯಲ್ಲಿ 2009-10 ರಲ್ಲಿ `ಜಂಭೊ ಫಂಡ್’ ಸ್ಥಾಪನೆ ಮಾಡಿದ್ರು.

ಕುಂಬ್ಳೆ ಸ್ಥಾಪಿಸಿದ ಸಂಸ್ಥೆಯ ಉದ್ದೇಶ ವನ್ಯಜೀವಿಗಳ ರಕ್ಷಣೆಯೇ ಕೇಂದ್ರಬಿಂದುವಾಗಿದೆ. ಅರಣ್ಯದಲ್ಲಿ ನಡೆಯುವ ಅಕ್ರಮಗಳನ್ನು ಕಡಿಮೆ ಮಾಡುವುದು ಮೊದಲ ಆದ್ಯತೆ ಆಗಿದೆ. ಕಾಡು ಪ್ರಾಣಿಗಳಿಗೆ ಚಿಕಿತ್ಸೆ, ಕಾಡಿನ ರಕ್ಷಣೆ ಇತ್ಯಾದಿಗಳನ್ನು ಜನರಿಗೆ ತಿಳಿಯುವಂತೆ ಮಾಡುವ ಉದ್ದೇಶವೂ ಜಂಭೋಫಂಡ್​​ಗಿದೆ. ಜಂಭೋ ಫಂಡ್​​ ಮಾಡ್ತಿರುವ ಕಾರ್ಯಕ್ಕೆ ಉದ್ಯಮಿ ಕಿರಣ ಮುಜುಂದಾರ್​ ಷಾ ಕೈ ಜೋಡಿಸಿದ್ರು. ಇದು ಜಂಭೋ ಫಂಡ್​ಗೆ ಆನೆ ಬಲ ನೀಡಿತು.

ಜಂಭೋ ಫಂಡ್​​​ ಅರಣ್ಯ ಸಿಬ್ಬಂಧಿ ಮತ್ತು ಅಧಿಕಾರಿಗಳ ಕೆಲಸಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಅವರ ಕೆಲಸಗಳ ಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಅರಣ್ಯ ಕಾರ್ಮಿಕರನ್ನು ಗೌರವಿಸುವ ಕೆಲಸವನ್ನೂ ಮಾಡುತ್ತಿದೆ. ಇದೆಲ್ಲದರ ಜೊತೆ ಜಂಭೋಫಂಡ್​​​ ಅರಣ್ಯ ಇಲಾಖೆಯ 4 ಪ್ರತಿಭಾನ್ವಿತ ಅಧಿಕಾರಿಗಳನ್ನು ಆಯ್ಕೆಮಾಡಿಕೊಂಡು ಅವರನ್ನು 2 ವಾರಗಳ ಕಾಲ ಅಧ್ಯಯನಕ್ಕಾಗಿ ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಅಭಯಾರಣ್ಯಕ್ಕೆ ಕಳಿಸಿದ್ರು. ಅಲ್ಲಿನ ಕಾಡುಗಳಲ್ಲಿ ಇರುವ ಸವಾಲುಗಳ ಕುರಿತು ಅಧ್ಯನ ಮಾಡಿಸಿದ್ರು. ಗಾಯಗೊಂಡ ಕಾಡು ಪ್ರಾಣಿಗಳ ರಕ್ಷಣೆ ಮತ್ತು ಚಿಕಿತ್ಸೆಯ ವಿಧಾನ ಮತ್ತು ನಿರ್ವಹಣಾ ಕೌಶಲ್ಯಗಳ ತರಬೇತಿ ಪಡೆಯುವಂತೆ ನೋಡಿಕೊಂಡ್ರು. ಇದೆಲ್ಲವನ್ನೂ ಕಾರ್ಯ ರೂಪಕ್ಕೆ ತರುವಂತೆ ಸಂಸ್ಥೆ ಜವಾಬ್ದಾರಿ ವಹಿಸಿತ್ತು.

image


ಅಂಡಮಾನ್ ದ್ವೀಪದಲ್ಲಿನ ಅರಣ್ಯ ಪ್ರದೇಶದಲ್ಲಿ ಅಧ್ಯಯನ ಮಾಡುತ್ತಿರುವ ವಿದೇಶಿಗರ ಮತ್ತು ಸ್ಥಳೀಯ ಜನಾಂಗಗಳ ಬಗ್ಗೆ ಅಧ್ಯಯನ ನಡೆಸಿತ್ತು. ಅರಣ್ಯಗಳ ಕುರಿತ ಸಂಶೋಧನೆಯನ್ನು ಅರಿತು ಬೆಂಬಲಿಸುತ್ತಾ ಬಂದಿದೆ. ಜಂಭೋಫಂಡ್​​​ ಮುಂದಿನ ದಿನಗಳಲ್ಲಿ ಕರ್ನಾಟಕ ಹೊರತು ಪಡಿಸಿ ಅನ್ಯ ರಾಜ್ಯಗಳ ಅರಣ್ಯದ ಅಧ್ಯಯನ ಮಾಡುವ ಗುರಿ ಇಟ್ಟುಕೊಂಡಿದೆ. ಕಲೆ ಸಂಸ್ಕೃತಿ ಮತ್ತು ಆಧ್ಯಾತ್ಮಗಳ ನಂಟು ಕಾಡಿನೊಂದಿಗೆ ಯಾವ ರೀತಿಯಲ್ಲಿದೆ ಎನ್ನುವ ಬಗ್ಗೆ ಹುಡುಕಾಟ ನಡೆಸುವ ಕನಸನ್ನು ಸಂಸ್ಥೆ ಹೊಂದಿದೆ.

ಫಂಡ್​​​ ರೈಸಿಂಗ್​​​​

ಫೌಂಡೇಶನ್‍ಗೆ ಹಣ ಸಂಗ್ರಹಿಸುವುದು ಸವಾಲಿನ ಕೆಲಸವಾಗಿದೆ. ಇದಕ್ಕೆ ಕುಂಬ್ಳೆ ತಮ್ಮ ಕ್ರಿಕೆಟ್ ಕ್ಷೇತ್ರವನ್ನು ಮಾದ್ಯಮವಾಗಿಟ್ಟುಕೊಂಡಿದ್ದಾರೆ. ಸಂಸ್ಥೆಯ ಕಾರ್ಯ ತಂತ್ರಗಳನ್ನು ಜನರಿಗೆ ಮನವರಿಕೆ ಮಾಡುವ ಕೆಲಸವನ್ನೂ ಇವತ್ತಿಗೂ ಮಾಡುತ್ತಿದ್ದಾರೆ. ಅವಿರತ ಪ್ರಯತ್ನದಿಂದ ಮತ್ತು ಪರಿಚಯದ ಜನರಿಂದ ಸಂಸ್ಥೆ ತಕ್ಕ ಮಟ್ಟಿನ ಆದಾಯ ಕ್ರೂಢೀಕರಣ ಮಾಡುತ್ತಿದೆ.

ಅನಿಲ್​​ ಕುಂಬ್ಳೆ ಮನದ ಮಾತು

ಜಂಭೋಫಂಡ್​​​​​​​​​​​​​​​​​​​​​​​​​​​​​​​​​​​ ಕಾರ್ಯತಂತ್ರಕ್ಕೆ ಇವತ್ತು ಎಲ್ಲಾ ಕಡೆಯಿಂದಲೂ ಮುಕ್ತ ಪ್ರಶಂಸೆ ಸಿಗುತ್ತಿದೆ. ಈ ಬಗ್ಗೆ ಕುಂಬ್ಳೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ``ನಾನು ಕರ್ನಾಟಕ ಸರಕಾರಕ್ಕೆ ಕೃತಜ್ಞನಾಗಿದ್ದೇನೆ . ನನ್ನಲ್ಲಿದ್ದ ಅರಣ್ಯ ಮತ್ತು ವನ್ಯ ಪ್ರಾಣಿಗಳ ಆಸಕ್ತಿಯನ್ನು ಅರಿತು ಕೆಲಸ ಮಾಡಲು ಅವಕಾಶ ನೀಡಿದ್ದು ನನ್ನ ಕನಸಿಗೆ ಹೊಸ ತಿರುವು ನೀಡಿತ್ತು. ಸಿಕ್ಕ ಸೀಮಿತ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಿದ್ದೇನೆ. ನಮ್ಮಲ್ಲಿ ವನ್ಯ ಜೀವಿ ರಕ್ಷಣೆ ಪ್ರದೇಶದ ವಿಸ್ತಾರ ಶೇ. 3.8ರಷ್ಟಿತ್ತು.. ನನ್ನ ಅವಧಿಯಲ್ಲಿ ಆ ವಿಸ್ತಾರವನ್ನು ಶೇ.5.2ರಷ್ಟು ಹೆಚ್ಚಿಸಿದ್ದೇನೆ. ದೇಶದಲ್ಲೇ ಕರ್ನಾಟಕದಲ್ಲಿ ಮಾತ್ರ ಹೀಗೆ ಅಭಿವೃದ್ದಿಯಾಗಿದೆ. ರಾಷ್ಟ್ರೀಯ ಉದ್ಯಾನವನ, ಕಾಯ್ದಿಟ್ಟ ಅರಣ್ಯಕ್ಕೆ ಹೆಚ್ಚಿನ ಮಹತ್ವ ನೀಡಿದ್ದೇನೆ. ನನಗೆ ಸವಾಲಾಗಿದ್ದ ಸಿಬ್ಬಂದಿಗಳ ಕ್ಷೇಮಾಭಿವೃದ್ಧಿ ಮತ್ತು ಖಾಲಿ ಇದ್ದ ಹುದ್ದೆಗಳನ್ನು ಭರ್ತಿ ಮಾಡಿದ್ದೇನೆ. ನನ್ನ ಅವಧಿಯಲ್ಲಿ ಜವಾಬ್ದಾರಿಯನ್ನು ಸಂತೋಷದಿಂದ ನಿಭಾಯಿಸಿದ್ದೇನೆ. ಕೆಲಸದಲ್ಲಿನ ಒತ್ತಡ ನೆನಪಿಸಿಕೊಳ್ಳುವುದಿಲ್ಲ. ನನ್ನ ಸಹೋದ್ಯೋಗಿಗಳು ಮತ್ತು ಸರಕಾರಿ ಅಧಿಕಾರಿಗಳ ಬೆಂಬಲವನ್ನು ಸದಾ ನೆನೆಸಿಕೊಳ್ಳುತ್ತೇನೆ.’’ ಅಂತ ಕುಂಬ್ಳೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ರಕ್ಷಣೆ ಮತ್ತು ಪ್ರವಾಸೋದ್ಯಮ:

ಅರಣ್ಯ ಇಲಾಖೆ ಕಾಡು ಮತ್ತು ಅಲ್ಲಿನ ಪ್ರಾಣಿಗಳ ರಕ್ಷಣೆಗೆ ಮೊದಲ ಆಧ್ಯತೆ ನೀಡಬೇಕಿದೆ. ಅರಣ್ಯ ಪ್ರವಾಸೋದ್ಯಮ ನಿರ್ವಹಣೆ ಮಾಡವುದು, ಈ ಕುರಿತ ಸಮಸ್ಯಗಳೆನಾದ್ರು ಇದ್ದರೆ ಅಧ್ಯಯನ ಮಾಡಿ ಪರಿಹರಿಸಿಕೊಳ್ಳಬೇಕಿದೆ. ಇದಕ್ಕಾಗಿ ಇಲಾಖೆಯಲ್ಲಿ ಪ್ರತ್ಯೇಕ ಪರಿಣಿತರ ವಿಭಾಗದ ಅವಶ್ಯಕತೆ ಇದೆ. ಆ ವಿಭಾಗ ಪ್ರವಾಸಕ್ಕೆ ಮತ್ತು ಅಧ್ಯಯನಕ್ಕೆಂದು ಕಾಡಿಗೆ ಬಂದವರಿಗೆ ಅರಣ್ಯದ ರೀತಿ ರಿವಾಜುಗಳನ್ನು ತಿಳಿಸುವ ಕೆಲಸ ಮಾಡಬೇಕಿದೆ. ಕಾಡು ಪ್ರಾಣಿಗಳ ರಕ್ಷಣೆ, ವನಜಾಗೃತಿ ಮೂಡಿಸುವುದಕ್ಕೆ ಕಾರಣವಾಬೇಕಿದೆ. ಅ

image


ನೆಚ್ಚಿನ ಉದ್ಯಾನವನದ ಬಗ್ಗೆ:

ಕುಂಬ್ಳೆಗೆ ಉದ್ಯಾನವನಗಳು ಅಂದ್ರೆ ಪಂಚಪ್ರಾಣ. ಯಾವುದು ಇಷ್ಟ ಅಂತ ಆಯ್ದು ಕೊಳ್ಳುವುದು ಕಷ್ಟ. ಆದರೆ ಬಂಡಿಪುರ ಮತ್ತು ಕಬಿನಿ ಹತ್ತಿರ ಇರುವದರಿಂದ ಅಲ್ಲಿಗೆ ಕುಂಬ್ಳೆ ಹೆಚ್ಚಾಗಿ ಭೇಟಿ ನೀಡುತ್ತಾರೆ. ಎಲ್ಲಾ ರಕ್ಷಿತಾರಣ್ಯ, ಅಭಯಾರಣ್ಯಗಳ ಬಗ್ಗೆಯೂ ಕಾಳಜಿ ಇದೆ. ಕುಟುಂಬಕ್ಕೆ ಕ್ರಿಕೆಟ್‍ನಂತೆ ಅರಣ್ಯದ ಬಗ್ಗೆಯೂ ಆಸಕ್ತಿ ಇದೆ.

    Share on
    close