ಗ್ರಾಹಕರ ಆನ್‍ಲೈನ್ ಆರ್ಡರ್ರ್ಸ್ ಕಲೆಕ್ಟರ್ `ಡಾಟ್​ಜಾಟ್ಸ್​​'

ಟೀಮ್​ ವೈ.ಎಸ್​. ಕನ್ನಡ

0

ಇ-ಕಾಮರ್ಸ್ ಸಂಸ್ಥೆಯಾದ ಡಾಟ್​ಜಾಟ್ಸ್​​ನಲ್ಲಿ ಹೆಚ್ಚು ಪಾಲನ್ನು ಡಿಟಿಡಿಸಿ ಹೊಂದಿದ್ದು, ಆನ್‍ಲೈನ್ ಖರೀದಿದಾರರು ತಮ್ಮ ಹತ್ತಿರದ ಡಿಟಿಡಿಸಿ ಪಿಕ್‍ಅಪ್ ಶಾಪ್‍ಗಳಲ್ಲಿ ತಮ್ಮ ಆರ್ಡರ್‍ಗಳನ್ನು ಪಡೆಯಬಹುದು ಹಾಗೂ ರಿಟರ್ನ್ ಕೂಡ ಮಾಡಬಹುದು. ಇ-ಕಾಮರ್ಸ್ ಲಾಜಿಸ್ಟಿಕ್ಸ್ ಸಂಸ್ಥೆಯು ಜನವರಿ 2016ರಲ್ಲಿ ದೇಶದ 10 ನಗರಗಳಲ್ಲಿ, ಅಂದರೆ ಮೆಟ್ರೊ ನಗರಗಳಲ್ಲಿ ಜೈಪುರ್, ಅಹಮದಾಬಾದ್ ಸೇರಿದಂತೆ ಹಲವೆಡೆ ಈ ಸೇವೆಗೆ ಚಾಲನೆ ನೀಡಲಿದೆ. ಈ ಸಂಸ್ಥೆಯು ಫ್ರಾನ್ಸ್​ನ ಪಾರ್ಸೆಲ್ ಪಿಕ್ ಅಪ್ ಅಂಡ್ ಡ್ರಾಪ್ ಕಂಪನಿಯೊಂದಿಗೆ ಪಿಕ್ ಅಪ್ ಸೇವೆಗಳಿಗಾಗಿ ಒಪ್ಪಂದ ಮಾಡಿಕೊಂಡಿದೆ.

2000ರಲ್ಲಿ ಸ್ಥಾಪನೆಯಾದ ಪಿಕಪ್, ಜಿಯೋಪೋಸ್ಟ್ ಗ್ರೂಪ್‍ನ ಒಂದು ಭಾಗವಾಗಿದ್ದು, `ಲಿ ಗ್ರೂಪ್ ಲಾ ಪೋಸ್ಟ್'ನ ಎಕ್ಸಪ್ರೆಸ್ ಲಾಜಿಸ್ಟಿಕ್ಸ್​ನ ಅಂಗ ಸಂಸ್ಥೆಯಾಗಿದೆ. ಜಿಯೋಪೋಸ್ಟ್, ಡಿಟಿಡಿಸಿಯ ಶೇ.40 ರಷ್ಟು ಪಾಲನ್ನು ಹೊಂದಿದೆ. ಪಿಕ್‍ಅಪ್, ಐಟಿ ಕ್ಷೇತ್ರದ ಮುಖ್ಯ ರಾಷ್ಟ್ರಗಳಾದ ಯುರೋಪ್‍ನಲ್ಲಿ 22 ಸಾವಿರಕ್ಕೂ ಹೆಚ್ಚು ಪಾರ್ಸೆಲ್ ಶಾಪ್‍ಗಳನ್ನು, ವಿಶ್ವವ್ಯಾಪಿ ಅಂದರೆ, ಫ್ರಾನ್ಸ್, ಜರ್ಮನಿ, ಯುಕೆ, ಸ್ವಿಟ್ಜರ್‍ಲ್ಯಾಂಡ್ ಮತ್ತು ಪೋರ್ಚುಗಲ್‍ನಲ್ಲಿಯೂ ಪಿಕ್‍ಅಪ್ ಸೇವೆಯನ್ನು ಒದಗಿಸುತ್ತಿದೆ. ಈ ನೆಟ್‍ವರ್ಕ್ ವಾರ್ಷಿಕವಾಗಿ ಸುಮಾರು 30ಮಿಲಿಯನ್ ಪಾರ್ಸೆಲ್‍ಗಳನ್ನು ನಿರ್ವಹಣೆ ಮಾಡುತ್ತಿದೆ.

ಈ ಸೇವೆಯು ಇ-ಕಾಮರ್ಸ್ ಕಂಪನಿಗಳ ಲಾಜಿಸ್ಟಿಕ್ಸ್ ವೆಚ್ಚಗಳನ್ನು ಸಮರ್ಥವಾಗಿ ಕಡಿಮೆ ಮಾಡುತ್ತದೆ ಎನ್ನುತ್ತಾರೆ `ಡಾಟ್‍ಜಾಟ್ಸ್​'ನ ಸಿಇಒ ಮತ್ತು ಸಹಸಂಸ್ಥಾಪಕ ಸಂಜೀವ್ ಕಥುರಿಯಾ. "ಇ-ಕಾಮರ್ಸ್‍ನ ಅಭಿವೃದ್ಧಿ ಪ್ರಸ್ತುತ ರೀತಿಯ ವಿತರಣೆಯಿಂದ ಮಾತ್ರ ಉಳಿಸಿಕೊಳ್ಳಲು ಸಾಧ್ಯವಿಲ್ಲ" ಎನ್ನುತ್ತಾರೆ ಸಂಜೀವ್. ಅವರೇ ಹೇಳುವಂತೆ, ಹೈಪರ್‍ಲೋಕಲ್‍ನಂತೆ ಹೊಸ ರೂಪಗಳು ಆರಂಭವಾಗುತ್ತಿರುವುದನ್ನು ಗಣನೆಗೆ ತೆಗೆದುಕೊಳ್ಳುವುದಾದರೆ, 2020ರ ವೇಳೆಗೆ ಸುಮಾರು 2 ಮಿಲಿಯನ್‍ನಷ್ಟು ಡೆಲಿವರಿ ಬಾಯ್‍ಗಳು ಬೇಕಾಗುತ್ತಾರೆ. ಅಷ್ಟೇ ಅಲ್ಲದೆ ಇ-ಕಾಮರ್ಸ್ ಅತಿ ಸಣ್ಣ ಪಟ್ಟಣಗಳನ್ನೂ ಕೂಡ ತಲುಪುತ್ತದೆ.

"ಒಂದು ವೇಳೆ ಇ-ಕಾಮರ್ಸ್ ಕಂಪನಿಗಳು ಈಗಿರುವಂತೆಯೇ ಅದೇ ವ್ಯವಸ್ಥಾಪನ ಪ್ರಕ್ರಿಯೆಯನ್ನು ಮುಂದುವರೆಸಿದರೆ, 2020ರ ವೇಳೆಗೆ ಅದರ ಬೆಲೆ ಶೇ.2ರಷ್ಟು ಹೆಚ್ಚಾಗುತ್ತದೆ. ಹಾಗಾಗಿ, ಆ ರೀತಿಯ ಪಿಕ್‍ಅಪ್ ಮತ್ತು ಡ್ರಾಪ್‍ಆಫ್‍ಪಿಯುಡಿಒ) ಸೇವೆಯ ನಿವ್ವಳ ಪರಿಣಾಮದಲ್ಲಿ ಶೇ.3ರಷ್ಟನ್ನು ಕಡಿಮೆ ಮಾಡುತ್ತದೆ. ಹೋಮ್ ಡೆಲಿವರಿಗೆ ಹೋಲಿಸಿದರೆ `ಡಾಟ್‍ಜಾಟ್' ಕ್ಲೈಂಟ್‍ಗಳಿಗೆ ಪಿಕ್‍ಅಪ್ ಅಂಡ್ ಡ್ರಾಪ್‍ ಆಫ್ ಸೇವೆಯು ಶೇ.15ರಷ್ಟು ಅಗ್ಗವಾಗಲಿದೆ" ಎನ್ನುತ್ತಾರೆ ಸಂಜೀವ್.

ಪಿಕ್ ಅಪ್ ಅಂಡ್ ಡ್ರಾಪ್ ಆಫ್ ಸೇವೆಯಲ್ಲಿ, ಆನ್‍ಲೈನ್‍ನಲ್ಲಿ ಆರ್ಡರ್ ಮಾಡಿದ ಗ್ರಾಹಕ, ಆ ವಸ್ತುವಿನ ಡೆಲಿವರಿ ವಿಳಾಸದಲ್ಲಿ ತನ್ನ ಸ್ವಂತ ವಿಳಾಸದ ಬದಲಿಗೆ ಡೆಲಿವರಿ ಸೆಂಟರ್‍ನ ವಿಳಾಸವನ್ನು ನೀಡಲು ಅವಕಾಶವಿದೆ. ಆರ್ಡರ್ ಮಾಡಿದ ವಸ್ತುಗಳು ಡೆಲಿವರಿ ಸೆಂಟರ್ ತಲುಪಿದ ನಂತರ, ಆ ಪ್ಯಾಕೇಜ್‍ನ್ನು ಸ್ಕ್ಯಾನ್ ಮಾಡಿದಾಗ ಗ್ರಾಹಕರಿಗೆ ಸ್ವಯಂಚಾಲಿತ ಸಂದೇಶ ತಲುಪಿ, ಅವರು ಆ ಉತ್ಪನ್ನಗಳನ್ನು ಪಡೆಯಲು ಬರುತ್ತಾರೆ. ಕಳೆದ ವರ್ಷ, ಆನ್‍ಲೈನ್ ಇ-ಟೇಲರ್ ಆದ ಜಬಾಂಗ್, ಇಂತಹದೇ ಒಂದು ಸೇವೆಯನ್ನು ಆರಂಭಿಸಿ, ಗ್ರಾಹಕರು ಪೆಟ್ರೋಲ್ ಬಂಕ್ ಹಾಗೂ ಕಾಫಿ ಶಾಪ್‍ಗಳಿಂದ ತಮ್ಮ ಪಾರ್ಸೆಲ್‍ಗಳನ್ನು ಪಡೆಯುವಂತೆ ಮಾಡಿದೆ. ಹಾಗಾಗಿ ಮುಂದಿನ ದಿನಗಳಲ್ಲಿ `ಡಾಟ್‍ಜಾಟ್' ತನ್ನ ಸೇವಾ ಕ್ಷೇತ್ರವನ್ನು ಡಿಟಿಡಿಸಿ ಅಲ್ಲದ ಇತರ ಸ್ಟೋರ್‍ಗಳಿಗೂ ವಿಸ್ತರಿಸಲಿದೆ.

ಪಿಕ್‍ಅಪ್ ಸರ್ವೀಸಸ್‍ನ ಸಹ ಸಂಸ್ಥಾಪಕ ಹಾಗೂ ಸಿಇಒ ಡೈಗೋ ಮ್ಯಾಗ್ಡಿಲೆಂಟ್ ಅವರು, "ಮಾರಾಟಗಾರ ಮತ್ತು ಕಟ್ಟಕಡೆಯ ಗ್ರಾಹಕರವರೆಗಿನ ಪ್ರತಿಯೊಂದು ಹಂತದಲ್ಲಿಯೂ ಸೂಕ್ತ ಹಿಡಿತವನ್ನು ಹೊಂದಿರಬೇಕು ಮತ್ತು ಅದಕ್ಕೆ ನಮ್ಮ ಈಟಿ ಕೂಡ ಅವಕಾಶ ನೀಡೋದು". ಡೈಗೋ ಹೇಳುವಂತೆ "ಭಾರತವು ಪಿಕ್ ಅಪ್ ಸೇವೆಗೆ ಒಂದು ಹೊಸ ಮಾರುಕಟ್ಟೆಯಾಗಿದೆ. ಭಾರತ, ಆಫ್ರಿಕ ಮತ್ತು ದಕ್ಷಿಣ ಅಮೆರಿಕಾ, ಈ ಮೂರು ದೇಶಗಳನ್ನೂ ಹೊಸದಾಗಿ ಅಭಿವೃದ್ಧಿ ಮಾಡಬೇಕಿದೆ. ನಾವು 2020ರ ವೇಳೆಗೆ ಸುಮಾರು 1,50,000 ಶಾಪ್‍ಗಳನ್ನು ತಲುಪುವ ಗುರಿ ಹೊಂದಿದ್ದು, ಅದರಲ್ಲಿ ಭಾರತವು ಶೇ.20ರಷ್ಟು ಕೊಡುಗೆ ನೀಡಲಿದೆ".

ಡಾಟ್‍ಜಾಟ್, ಪ್ರಸ್ತುತದಲ್ಲಿ ಪ್ರತಿದಿನ 35,000ಕ್ಕೂ ಹೆಚ್ಚು ಆರ್ಡರ್‍ಗಳನ್ನು ಶಿಪ್‍ಮೆಂಟ್ ಮಾಡುತ್ತಿದ್ದು, ಮಾರ್ಚ್ ವೇಳೆಗೆ 10ಕ್ಕೂ ಹೆಚ್ಚು ನಗರಗಳಲ್ಲಿ ಮತ್ತು 2016ರ ವೇಳೆಗೆ 125 ನಗರ ಮತ್ತು ಪಟ್ಟಣಗಳಲ್ಲಿ ತನ್ನ ಸೇವೆಯನ್ನು ವಿಸ್ತರಿಸಲಿದೆ.

ಯುವರ್‍ಸ್ಟೋರಿ ಟೇಕ್

ಸ್ನ್ಯಾಪ್‍ಡೀಲ್ ಮತ್ತು ಕೆಪಿಎಂಜಿ ವರದಿ ಪ್ರಕಾರ, ಭಾರತದ ಇ-ಕಾಮರ್ಸ್ ಉದ್ಯಮ 2020ರ ವೇಳೆಗೆ $80 ಬಿಲಿಯನ್‍ನಷ್ಟು ಬೆಳೆಯುವ ನಿರೀಕ್ಷೆಯಿದೆ. 2030ರ ವೇಳೆಗೆ ಇದನ್ನು $300 ಬಿಲಿಯನ್ ವಿಸ್ತರಿಸುವ ನಿರೀಕ್ಷೆಯಿದೆ. ಪುಟ್ಟ ನಗರ ಮತ್ತು ಪಟ್ಟಣಗಳ ಗ್ರಾಹಕರಿಂದ ಪ್ರಾಥಮಿಕವಾಗಿ ನಡೆಸಲ್ಪಡುತ್ತಿರುವ ಸಂಸ್ಥೆಗಳ ಬೆಳವಣಿಗೆಗಳನ್ನು ಬೆಂಬಲಿಸಲು ವ್ಯವಸ್ಥಾಪಕ ಕಂಪನಿಗಳು ವಿತರಣಾ ಸಿಬ್ಬಂದಿಗಳ ಒಂದು ಪಡೆಯನ್ನೇ ಹೊಂದುವ ಅಗತ್ಯವಿದೆ. ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಭಾರತವನ್ನು ಹೊರತುಪಡಿಸಿದರೆ, ಸೂಕ್ತ ವಿತರಣಾ ಸಿಬ್ಬಂದಿಯನ್ನು ಹುಡುಕುವುದು ಅಷ್ಟು ಸುಲಭವಲ್ಲ. ಈಗಾಗಲೇ ಹಲವು ಕಂಪನಿಗಳು ವಿತರಣಾ ಸಿಬ್ಬಂದಿಗಳನ್ನು ಹುಡುಕುವ ಹಂತದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ನಿದರ್ಶನಗಳಿವೆ. ಕಳೆದ ಏಪ್ರಿಲ್‍ನಲ್ಲಿ ಫ್ಲಿಪ್‍ಕಾರ್ಟ್ ಮತ್ತು ಮಿಂತ್ರಾದ ವಿತರಣಾ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ದರು. ಇತ್ತೀಚೆಗೆ ಹೈಪರ್ ಲೋಕಲ್ ಲಾಜಿಸ್ಟಿಕ್ ಕಂಪನಿಯಾದ ರೋಡ್ ರನ್ನರ್‍ನ ವಿತರಣಾ ಸಿಬ್ಬಂದಿಗಳು ತಮಗೆ ನೀಡುವ ಗೌರವಧನದ ವಿಚಾರವಾಗಿ ಕೆಲವು ಬದಲಾವಣೆಗಳನ್ನು ತರಬೇಕೆಂದು ಒತ್ತಾಯಿಸಿ ಆ ಕಚೇರಿಯ ಮೇಲೆ ದಾಳಿ ನಡೆಸಿದ್ದರು. ಡಾಟ್‍ಜಾಟ್‍ನ ಪಿಕ್‍ಅಪ್ ಅಂಡ್ ಡ್ರಾಪ್‍ಆಫ್ ಉಪ ಕ್ರಮವು ಇಂತಹ ಸಂದರ್ಭದಲ್ಲಿ ಸಮಯೋಚಿತವಾಗಿಲ್ಲ. ಹಾಗಾಗಿ ಸದ್ಯದಲ್ಲೇ ಇ-ಕಾಮರ್ಸ್ ಲಾಜಿಸ್ಟಿಕ್ಸ್​ನ್ನು ಮತ್ತಷ್ಟು ದಕ್ಷ ಹಾಗೂ ಅಗ್ಗವಾಗಿ ಮಾಡುವಲ್ಲಿ ಹೆಚ್ಚು ನಾವೀನ್ಯತೆಗಳು ಹಾಗೂ ಬದಲಾವಣೆಗಳನ್ನು ಮಾಡುವ ಅಗತ್ಯವಿದೆ.


ಲೇಖಕರು: ರಾಧಿಕಾ ಪಿ. ನಾಯರ್​

ಅನುವಾದಕರು: ಚೈತ್ರಾ ಎನ್​.