ಮಾರ್ಗದರ್ಶನ ಮತ್ತು ಮಾರ್ಗದರ್ಶಕರು : ಉದ್ಯಮಿಯೊಬ್ಬನ ಬದುಕಿನಲ್ಲಿ ಮಹತ್ವದ ಪಾತ್ರ

ಟೀಮ್​ ವೈ.ಎಸ್​​.ಕನ್ನಡ

ಮಾರ್ಗದರ್ಶನ ಮತ್ತು ಮಾರ್ಗದರ್ಶಕರು : ಉದ್ಯಮಿಯೊಬ್ಬನ ಬದುಕಿನಲ್ಲಿ ಮಹತ್ವದ ಪಾತ್ರ

Friday November 27, 2015,

3 min Read

ಮಾರ್ಗದರ್ಶಕ ಅಂದರೆ ಯಾರು..? ಒಂದು ಮಾತಿನಲ್ಲಿ ಹೇಳುದಾದರೆ ಅನುಭವ ಹೊಂದಿರುವ ನಂಬಿಕಸ್ಥ ಸಲಹೆಗಾರ. ಮಾರ್ಗದರ್ಶನ ಅಥವಾ ಮಾರ್ಗದರ್ಶಕರು ಇಂದು ನಿನ್ನೆಯ ಕಲ್ಪನೆಯಲ್ಲ. ಸಹಸ್ರಾರು ವರ್ಷಗಳಿಂದಲೂ ಈ ಪದ್ಧತಿ ಬೆಳೆದು ಬಂದಿದೆ. ಪ್ರಾಚೀನ ಗ್ರೀಕ್ ಇತಿಹಾಸದಲ್ಲಿಯೂ ಇದರ ಉಲ್ಲೇಖವಿದೆ. ಅದು ಕುತೂಹಲಕಾರಿ ಕೂಡ ಆಗಿದೆ. ಒಡಿಸಸ್​ನ ರಾಜ ಇಥಾಕ್ ಯುದ್ಧಕ್ಕೆ ತೆರಳಿದ ಸಂದರ್ಭದಲ್ಲಿ ತನ್ನ ಮನೆಯ ಜವಾಬ್ದಾರಿಯನ್ನು ಮಾರ್ಗದರ್ಶಕನಿಗೆ ಒಪ್ಪಿಸಿದ್ದ. ಮುದ್ದಿನ ಮಗನ ರಕ್ಷಣೆ, ಆರೈಕೆಯ ಜವಾಬ್ದಾರಿಯನ್ನು ಕೂಡ ನೀಡಿದ್ದ.

ಕಾಲ ಕಳೆದಂತೆ ಈ ಮಾರ್ಗದರ್ಶನ ಕುರಿತಾದ ಕಲ್ಪನೆ ಕೂಡ ಬದಲಾಯಿತು. ಶಿಕ್ಷಕರು, ಗುರುಗಳು, ಮಾರ್ಗದರ್ಶಕರು ಹೀಗೆ ಈ ವರ್ಗದೊಂದಿಗೆ ಗುರುತಿಸುವಂತಾಯಿತು. ಉದ್ಯಮಶೀಲತೆ ಹೆಚ್ಚು ಕಡಿಮೆ ಒಂದು ಏಕಾಂಗಿ ಯಾತ್ರೆ ಆಗಿದೆ. ತಮಗೆ ಬೆಂಬಲ ಬೇಕು ಎಂದು ಅನಿಸುತ್ತಿದ್ದ ಸಂದರ್ಭದಲ್ಲಿ ಅವರು ಏಕಾಂಗಿಯಾಗಿರುತ್ತಾರೆ. ತಮ್ಮ ನೋವು ದುಮ್ಮಾನಗಳನ್ನು ಹಂಚಿಕೊಳ್ಳಲು ಅವರಿಗೆ ಯಾರೂ ಲಭಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಾರ್ಗದರ್ಶಕನ ಪಾತ್ರ ಮಹತ್ವ ಪಡೆದುಕೊಳ್ಳುತ್ತದೆ.

image


ಮಾರ್ಗದರ್ಶಕರು ಯಾಕೆ ಮುಖ್ಯ?

ಈ ಪ್ರಶ್ನೆ ಕೂಡ ಅತ್ಯಂತ ಪ್ರಮುಖವಾಗಿದೆ. ಉದ್ಯಮಶೀಲತೆ ಮೈಗೂಡಿಸಿಕೊಂಡಿರುವ ಪ್ರತಿಯೊಬ್ಬ ಉದ್ಯಮಿಗೂ ಮಾರ್ಗದರ್ಶಕ ದೀಪಸ್ತಂಭದಂತೆ ಬೆಳಕು ನೀಡುತ್ತಾನೆ. ಸರಿಯಾದ ಮಾರ್ಗದರ್ಶನ ನೀಡುತ್ತಾನೆ. ಆತ್ಮ ವಿಶ್ವಾಸವನ್ನು ಬಡಿದೆಬ್ಬಿಸುತ್ತಾನೆ. ಸಾಗರದ ಮಧ್ಯೆ, ಕುಡಿಯುವ ನೀರಿಗಾಗಿ ಹಾತೊರೆಯುವಾಗ ನೀರಿನ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ಒಂದು ಮಾತಿನಲ್ಲಿ ಹೇಳುದಾದರೆ ಸಂಕಷ್ಟದ ಸಮಯದಲ್ಲಿ ಆಶಾ ಕಿರಣವಾಗಿ ಗೋಚರಿಸುತ್ತಾನೆ. ಈ ಬಗ್ಗೆ ಮಾತನಾಡಿದ ಯೆಲ್ಲೋ ಬಲ್ಬ್ಸ್ ಸಂಸ್ಥಾಪಕರಾದ ನೆಹಲ್ ಮೋದಿ ಈ ರೀತಿ ಹೇಳುತ್ತಾರೆ. ಆತ್ಮವಿಶ್ವಾಸ ಕುಗ್ಗಿದಾಗ ಅದನ್ನು ಹೆಚ್ಚಿಸುವ ವ್ಯಕ್ತಿಯೇ ನಿಜವಾದ ಮಾರ್ಗದರ್ಶಕ.

ಎಸ್ಎವಿ ಕೆಮಿಕಲ್ ಪ್ರವೈಟ್ ಲಿಮಿಟೆಡ್ ಸಂಸ್ಥೆಯ ಸ್ಥಾಪಕರಾದ ಅಂಕಿತ ಶ್ರೋಫ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸರಿಯಾದ ಹಾದಿಯಲ್ಲಿ ಮುನ್ನಡೆಸುವುದಕ್ಕೆ ಮಾತ್ರ ಮಾರ್ಗದರ್ಶಕ ಸೀಮಿತನಾಗಿರುವುದಿಲ್ಲ. ಬದಲಾಗಿ ಪ್ರೇರಣೆ ಮತ್ತು ಸ್ಫೂರ್ತಿಯ ಚಿಲುಮೆಯಾಗಿಯೂ ಮಾರ್ಗದರ್ಶಕ ಕೆಲಸ ನಿರ್ವಹಿಸುತ್ತಾನೆ. ಉದಯೋನ್ಮುಖ ಉದ್ಯಮಿಯಾಗಿ ನಾನು ಪದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಇತರ ಅನುಭವ ಹೊಂದಿರುವ ಉದ್ಯಮಿಗಳ ಮಾರ್ಗದರ್ಶನ ನನಗೆ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ನೆರವಾಗಿದೆ. ಸೋಲಿನ ಮಧ್ಯೆಯೂ ನಗೆ ಚೆಲ್ಲುವ ಟಾನಿಕ್ ಆಗಿ ಪರಿಣಮಿಸಿದೆ ಎನ್ನುತ್ತಾರೆ ಅಂಕಿತ್ ಶ್ರೋಫ್.

ಮಾರ್ಗದರ್ಶಕರು ಯಾರು?

ಈ ಪ್ರಶ್ನೆಯನ್ನು ಉದ್ಯಮಿಗಳ ಮುಂದಿಟ್ಟಾಗ ದೊರೆತ ಉತ್ತರ ಕೂಡ ಭಿನ್ನವಾಗಿತ್ತು. ಪ್ರತಿಯೊಬ್ಬರೂ ತಮ್ಮ ಅನುಭವದ ಆಧಾರದಲ್ಲಿ ಪ್ರತಿಕ್ರಿಯಿಸಿದರು. ಉದ್ಯಮಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಮಾರ್ಗದರ್ಶಕನೊಬ್ಬ ಒಂದು ಸಮಗ್ರ ಚಿತ್ರಣ ಕೊಡಲು ಪ್ರಯತ್ನಿಸುತ್ತಾನೆ. ಪ್ರಚಲಿತ ಘಟನೆಗಳ ಪರಾಮರ್ಶೆ ಆಧಾರದಲ್ಲಿ ಮಾರ್ಗದರ್ಶನ ನೀಡುತ್ತಾರೆ. ಇದು ನಿಶಿತಾ ಮಂತ್ರಿ ಅವರ ಅಭಿಪ್ರಾಯ.

ಮಾಡೆಲ್ ಹಾಗೂ ಕಿರು ತೆರೆ ನಟಿ ಆಗಿರುವ ಯುಕ್ತಿ ಮೆಹಂದ್ರಿತಾ ಕೂಡಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ತಮ್ಮ ಅಭಿರುಚಿಗೆ ದೃಷ್ಟಿಕೋನದ ಬೆಸುಗೆಯನ್ನು ಅವರು ಸಂಯೋಜಿಸುತ್ತಾರೆ ಎನ್ನುತ್ತಾರೆ ಮೆಹಂದ್ರಿತಾ. ಅರ್ಜಿತ್ ಸಿಸೋಡಿಯಾ ಮಾರ್ಗದರ್ಶಕರ ಬಗ್ಗೆ ಅತ್ಯುನ್ನತ ಗೌರವ ಹೊಂದಿದ್ದಾರೆ. ತಮ್ಮ ವ್ಯವಹಾರ ಸರಿಯಾದ ದಿಕ್ಕಿನಲ್ಲಿ ನಡೆಯಲು ಅವರು ಮಾರ್ಗದರ್ಶನ ನೀಡುತ್ತಾರೆ. ಆತ್ಮ ವಿಶ್ವಾಸ ಕುಗ್ಗಿದಾಗ ಜೀವನೋತ್ಸಾಹ ತುಂಬುತ್ತಾರೆ. ಸಾಹಸ ಎದುರಿಸಲು ಶಕ್ತಿ ನೀಡುತ್ತಾರೆ.

ಪೋರ್ಟಿಟ್ ಪ್ರಾಜೆಕ್ಟ್ ನ ಸಾಕ್ಷಿ ಮಹಾಜನ್ ಕೂಡ ಮಾರ್ಗದರ್ಶಕರ ಕುರಿತಂತೆ ತಮ್ಮದೇ ಆದ ದೃಷ್ಟಿಕೋನ ಹೊಂದಿದ್ದಾರೆ. ಉದ್ಯಮ ಆರಂಭಿಸುವಾಗ ಮಾರ್ಗದರ್ಶನ ಅತ್ಯಗತ್ಯ ಎನ್ನುತ್ತಾರೆ ಸಾಕ್ಷಿ. ಶಿಕ್ಷಕ, ಸ್ನೇಹಿತ, ಮತ್ತು ನಂಬಿಕಸ್ಥನ ಪಾತ್ರವನ್ನು ಮಾರ್ಗದರ್ಶಕ ನಿರ್ವಹಿಸುತ್ತಾನೆ ಎನ್ನುತ್ತಾರೆ ಸಾಕ್ಷಿ ಮಹಾಜನ್.

ಮಾರ್ಗದರ್ಶಕರನ್ನು ಕಂಡು ಹಿಡಿಯುವುದು ಹೇಗೆ?

ಜೀವನದಲ್ಲಿ ಮಾರ್ಗದರ್ಶಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆದುದರಿಂದ ಅತ್ಯಂತ ಜಾಗರೂಕತೆಯಿಂದ ಆಯ್ಕೆ ಮಾಡಬೇಕು. ಇದು ರಿಚ್ ಡ್ಯಾಡ್ ಸಂಸ್ಥೆಯ ರೋಬರ್ಟ್ ಕಿಯೋಸ್ಕಿ ಅಭಿಮತ.

ಉತ್ತಮ ಮಾರ್ಗದರ್ಶಕನನ್ನು ಪತ್ತೆ ಹಚ್ಚುವುದು ಕೂಡ ಸವಾಲಿನ ಕೆಲಸ ಎನ್ನುತ್ತಾರೆ ನಿಶಿತಾ ಮಂತ್ರಿ. ಮೈ ಲೈಫ್ ಟ್ರಾನ್ಸ್ ಕ್ರಿಫ್ಟ್ ಸಂಸ್ಥೆಯ ಸಿಇಒ ಆಗಿರುವ ಅವರು ಹಲವು ಸೂಚನೆ ನೀಡುತ್ತಾರೆ. ಶೇಕಡಾ ನೂರಕ್ಕೆ ನೂರು ಅರ್ಪಣಾ ಮನೋಭಾವ ಹೊಂದಿರುವವರನ್ನು ಆಯ್ಕೆ ಮಾಡಬೇಕು. ತಮ್ಮದೇ ಕುಟುಂಬದಲ್ಲಿ, ಸ್ನೇಹಿತರ ಮಧ್ಯೆ ಜೀವನ ಸಂಗಾತಿ ಅಥವಾ ಶಿಕ್ಷಕರ ಸಮೂಹದಲ್ಲಿ ಇವರು ಕಾಣಿಸಿಕೊಳ್ಳಬಹುದು ಎನ್ನುತ್ತಾರೆ ನಿಶಿತಾ ಮಂತ್ರಿ.

ಪ್ರತಿಯೊಬ್ಬ ಸಾಹಸಿಯೂ ತಮ್ಮ ಉದ್ಯಮಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶಕರಿಂದ ಭಿನ್ನ ವಾದುದದನ್ನು ನಿರೀಕ್ಷೆ ಮಾಡುತ್ತಿರುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ಸಲಹೆಗಳು ಆತ್ಮಚರಿತ್ರೆಯ ರೂಪದಲ್ಲಿ ಮೂಡಿ ಬರುತ್ತವೆ. ಜೊತೆಯಲ್ಲಿರುವ ಸ್ನೇಹಿತರು ಕೂಡ ಅತ್ಯುತ್ತಮ ಸಲಹೆ ನೀಡುವ ಸಾಧ್ಯತೆಗಳು ಇವೆ.

ಇದನ್ನೆಲ್ಲ ಪರಿಗಣಿಸಿದರೆ ಈಗಾಗಲೇ ಯಶಸ್ಸು ಸಾಧಿಸಿರುವ ಮಹಿಳಾ ಉದ್ಯಮಿಗಳು, ಉದಯೋನ್ಮುಖ ಮಹಿಳಾ ಉದ್ಯಮಿಗಳಿಗೆ ಅತ್ಯುತ್ತಮ ಸಲಹೆ, ಮಾರ್ಗದರ್ಶನ ನೀಡುವ ಸಾಧ್ಯತೆ ಉಜ್ವಲವಾಗಿದೆ.

ಲೇಖಕರು: ತಾನ್ವಿ ದುಬೇ

ಅನುವಾದಕರು: ಎಸ್​​.ಡಿ