ಮಾರುಕಟ್ಟೆಗೆ ಬಂದಿದೆ ವುಡನ್ ವಾಚ್ ಗಳು...

ನಿನಾದ

0

ವಾಚ್ ಕೊಂಡುಕೊಳ್ಳಬೇಕು ಅಂದಾಕ್ಷಣ ಹೆಚ್ಚಿನವರು ಯೋಚಿಸೋದು ನಾನು ಬೆಲ್ಟ್ ವಾಚ್ ಕೊಳ್ಳೋದಾ ಇಲ್ಲಾ ಚೈನ್ ವಾಚ್ ಕೊಂಡುಕೊಳ್ಳಬೇಕು ಅಂತಾ.ಆದ್ರೆ ಚೈನ್ ಹಾಗೂ ಬೆಲ್ಟ್ ವಾಚ್ ಗಳಿಗೆ ಸೆಡ್ಡು ಹೊಡೆಯುವಂತಹ ಹೊಸದೊಂದು ರೀತಿಯ ವಾಚ್ ಗಳು ಮಾರುಕಟ್ಟೆ ಅಡಿಯಿಟ್ಟಿವೆ. ಅವೇ ವುಡನ್ ವಾಚ್ ಗಳು.

ಬೆಲ್ಟ್ ಹಾಗೂ ಚೈನ್ ವಾಚ್ ಗಳಿಗೇ ಸವಾಲ್ ಒಡ್ಡುವ ರೀತಿಯಲ್ಲೇ ಈ ವಾಚ್ ಗಳು ತಯಾರಾಗಿವೆ. ಥಟ್ಟನೆ ನೋಡಿದ್ರೆ ಇದು ಯಾವುದೋ ಹೊಸ ಮೆಟಲ್ ನಿಂದ ಮಾಡಿ ವಾಚ್ ಗಳಿರಬೇಕು ಅಂತಾ ಅನ್ನಿಸುತ್ತೆ.ಆದ್ರೆ ಇದು ಯಾವುದೇ ಮೆಟಲ್ ನಿಂದ ತಯಾರಾದ ವಾಚ್ ಗಳಲ್ಲ. ಬದಲಾಗಿ ಸಂಪೂರ್ಣವಾಗಿ ಮರದಿಂದ ರೆಡಿಯಾದ ವಾಚ್ ಗಳು. ಅಂದ್ಹಾಗೆ ಈ ಪರಿಸರ ಸ್ನೇಹಿ ಕೈಗಡಿಯಾರಗಳ ಹಿಂದಿರುವ ಸೂತ್ರಧಾರ ಧರ್ಮೇಶ್.

ಮೂಲತ; ಬೆಂಗಳೂರಿನವರಾದ ಧರ್ಮೇಶ್ ಅವರ ಕುಟುಂಬದವರು ಹಿಂದಿನಿಂದಲೂ ಟಿಂಬರ್ ಬ್ಯುಸಿನೆಸ್ ಮಾಡುತ್ತಾ ಬಂದಿದ್ದಾರೆ. ಹಿಂದಿನಿಂದಲೂ ತಮ್ಮ ಟಿಂಬರ್ ಫ್ಯಾಕ್ಟರಿಯಲ್ಲಿ ಸಾಕಷ್ಟು ಮರದ ಪೀಸ್ ಗಳು ಸುಮ್ಮನೆ ವ್ಯರ್ಥವಾಗಿ ಬೆಂಕಿ ಸೇರುತ್ತಿದ್ದದ್ದನ್ನು ದೀಪಕ್ ನೋಡುತ್ತಾ ಬಂದಿದ್ದರು. ಇದನ್ನು ಹೇಗಾದ್ರೂ ಮಾಡಿ ಸದುಪಯೋಗ ಮಾಡಬೇಕಲ್ವಾ ಅಂತಾ ನಿರ್ಧರಿಸಿದ ದೀಪಕ್ ಅದರಲ್ಲಿ ಯಾಕೆ ಕೆಲವು ಉಪಯೋಗಕಾರಿ ವಸ್ತುಗಳನ್ನು ತಯಾರಿಸಿಬಾರದು ಅಂತಾ ಹೊಸ ಪ್ರಯೋಗವೊಂದಕ್ಕೆ ಕೈ ಹಾಕಿದ್ರು. ಅದರಂತೆ ಮೊದಲು ಆರಂಭಿಸಿದ್ದು ವುಡನ್ ವಾಚ್ ತಯಾರಿಕೆ. ಅದಕ್ಕೆ ಡಿಟ್ರೀ ಅನ್ನೋ ಹೆಸರಿಟ್ಟು ವೆರೈಟಿ ವೆರೈಟಿ ವಾಚ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.ಇದಕ್ಕೆ ಗ್ರಾಹಕರಿಂದಲೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ವಾಚ್ ಗಳ ಜೊತೆ ಸಂಪೂರ್ಣವಾಗಿ ಮರದಿಂದ ತಯಾರಾದ ಕೀ ಬೋರ್ಡ್ ಗಳು, ಮೌಸ್ ಗಳು , ವಿವಿಧ ರೀತಿಯ ಬಾಕ್ಸ್ ಗಳು, ಕನ್ನಡಕ ಹೀಗೆ ಎಲ್ಲಾ ಬಗೆಯ ವಸ್ತುಗಳು ಇಲ್ಲಿ ಲಭ್ಯವಿದೆ. ಅದರಲ್ಲೂ ವಿವಿಧ ವಿನ್ಯಾಸದ ಲೇಡಿಸ್ ಹಾಗೂ ಜಂಟ್ಸ್ ವಾಚ್ ಗಳು ಪ್ರಮುಖ ಆಕರ್ಷಣೆ. ಸದ್ಯ ವಾಚ್ ತಯಾರಿಕೆಯಲ್ಲಿ ಯಶಸ್ಸು ಪಡೆದಿರುವ ದೀಪ್ ಮಂದೆ ಮರದ ನೋಟ್ ಬುಕ್ ಗಳನ್ನು ಮಾಡೋ ಬಗ್ಗೆ ಚಿಂತಿಸುತ್ತಿದ್ದಾರೆ.

ಇವತ್ತು ಎಲ್ಲಾ ರೀತಿಯ ಮೆಟಲ್ ಹಾಗೇ ಪ್ಲಾಸ್ಟಿಕ್ ವಸ್ತುಗಳು ಲಭ್ಯವಿದೆ.ಆದ್ರೆ ಪರಿಸರ ಸ್ನೇಹಿ ವಸ್ತುಗಳ ಲಭ್ಯತೆ ಕಡಿಮೆಯಿದೆ. ದೀಪಕ್ ಅಂತಹ ಪ್ರಯತ್ನವೊಂದಕ್ಕೆ ಕೈ ಹಾಕಿ ಅದರಲ್ಲಿ ಯಶಸ್ಸು ಕಂಡಿದ್ದಾರೆ. ಇನ್ನು ಈ ವಾಚ್ ಹಾಗೂ ಕನ್ನಡಕಗಳನ್ನು ಆನ್ ಲೈನ್ ಮೂಲಕವೇ ಖರೀದಿ ಮಾಡ್ಬಹುದು. www.dtree.in ವೆಬ್ ಸೈಟ್ ಮೂಲಕ ನಿಮ್ಮಿಷ್ಟದ ಡಿಸೈನ್ ನ ವಾಚ್ ಗಳನ್ನು ಖರೀದಿ ಮಾಡ್ಬಹುದು.

ಇದನ್ನು ಓದಿ

1. ಹೆಣ್ ಮಕ್ಳೇ ಸ್ಟ್ರಾಂಗು ಗುರು -ನಾವೆಲ್ಲಾ ಒಂದೇ...

2. ಟೀಂ ಇಂಡಿಯಾದಲ್ಲಿ ಕಾಫಿನಾಡಿನ ಕುವರಿ - ಕರುನಾಡಿಗೆ ಹೆಮ್ಮೆ ತಂದ ವೇದಾ ಕೃಷ್ಣಮೂರ್ತಿ

3. ಸುಮಧುರ ಕಂಠದ ಮನಸ್ಸಿನಲ್ಲಿದೆ ನೂರಾರು ಕನಸು- ಚಿಕ್ಕ ವಯಸ್ಸಿನಲ್ಲೇ ನೂರಾರು ಮಕ್ಕಳಿಗೆ ಆಸರೆ

Related Stories