ಇಟ್ಸ್‌ ಕೂಲ್‌ ಟು ಬಿ ಎ ಸ್ಟಾರ್ಟ್‌ಅಪ್‌: ಶ್ರದ್ಧಾಶರ್ಮಾ

Team YS kannada

0

ಟೆಕ್‌ಸ್ಪಾರ್ಕ್‌-2016ರ ಹಬ್ಬ ಆರಂಭವಾಗಿದೆ. ಯಶವವಂತಪುರದ ತಾಜ್‌ವಿವಾಂತದಲ್ಲಿ ಸ್ಟಾರ್ಟ್‌ಅಪ್‌ಗಳ ಸಮಾಗಮ ನಡೆದಿದೆ. ಖ್ಯಾತ ಉದ್ಯಮಿಗಳು, ಉದ್ಯಮದ ಕನಸು ಕಂಡವರು ಎಲ್ಲರೂ ಕನಸು ಮತ್ತು ಆಶಾಭಾವವನೆಗಳನ್ನು ಇಟ್ಟುಕೊಂಡು ಸ್ಟಾರ್ಟ್‌ಅಪ್‌ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ.

" ಇಟ್ಸ್‌ ಕೂಲ್‌ ಟು ಬಿ ಎ ಸ್ಟಾರ್ಟ್‌ಅಪ್‌..!"
- ಶ್ರದ್ಧಾಶರ್ಮಾ, ಸಂಸ್ಥಾಪಕರು ಯುವರ್‌ಸ್ಟೋರಿ

ಹೀಗಂತ ಹೇಳಿಕೊಂಡೇ ಮಾತು ಆರಂಭಿಸಿದ್ದು.. ಟೆಕ್‌ಸ್ಪಾರ್ಕ್‌ನ 7 ವರ್ಷಗಳ ಬೆಳವಣಿಗೆ ಬಗ್ಗೆ ಸಂತಸ ಹಂಚಿಕೊಂಡು ಎಲ್ಲರಿಗೂ ಧನ್ಯವಾದ ಅರ್ಪಿಸಿದ್ರು. ಕನಸು ನಾವು ಬಿತ್ತುವ ಬೀಜ. ಅದನ್ನು ದೊಡ್ಡ ಮರವನ್ನಾಗಿಸುವುದು ಕೂಡ ನಮ್ಮ ಕೈಯಲ್ಲೇ ಇದೆ. ದೈರ್ಯದಿಂದ ಹೆಜ್ಜೆ ಇಟ್ರೆ ಎಲ್ಲವೂ ಸುಲಭಸಾದ್ಯ. ಇಲ್ದೇ ಇದ್ರೆ ದಾರಿ ಕಷ್ಟವಾಗಿ ಕಾಣುತ್ತದೆ. ಆದ್ರೆ ಸ್ಟಾರ್ಟ್‌ಅಪ್‌ಗಳ ಜೊತೆಯಲ್ಲಿ ಬದುಕು ಸಾಗಿಸುವುದು ಚಾಲೆಂಜಿಂಗ್‌ ಮತ್ತು ಖುಷಿಯ ವಿಚಾರ.

ಕಳೆದ 6 ವರ್ಷಗಳಿಂದ ಟೆಕ್​ಸ್ಪಾರ್ಕ್​ ಸ್ಟಾರ್ಟ್ಅಪ್​ಗಳಿಗೆ ಹಲವು ರೀತಿಯಲ್ಲಿ ಸಹಾಯ ಮಾಡಿದೆ. ಟೆಕ್​ಸ್ಪಾರ್ಕ್​ನಲ್ಲಿ ಪಾಲ್ಗೊಂಡ 180 ಸ್ಟಾರ್ಟ್ಅಪ್​ಗಳ ಪೈಕಿ ಸುಮಾರು 97 ಸ್ಟಾರ್ಟ್ಅಪ್​ಗಳು ಟೆಕ್ 30 ಲಿಸ್ಟ್​ನಲ್ಲಿ ಸೇರ್ಪಡೆಯಾದ ಬಳಿಕ ಆದಾಯದಲ್ಲಿ ಅಭಿವೃದ್ಧಿ ಕಂಡಿವೆ. ಟೆಕ್​ಸ್ಪಾರ್ಕ್​ ಟೆಕ್ 30 ಲಿಸ್ಟ್ ಸೇರಿದ ಬಳಿಕ ಸುಮಾರು 630 ಮಿಲಿಯನ್ ಡಾಲರ್ ವಿವಿಧ ಸ್ಟಾರ್ಟ್ಅಪ್​ಗಳ ಮೂಲಕ ಹರಿದು ಬಂದಿದೆ. ಈಗ ಮತ್ತೆ ಟೆಕ್‌ಸ್ಪಾರ್ಕ್ ಹಬ್ಬ ಆರಂಭವಾಗಿದೆ ಬೆಂಗಳೂರಿನ ಯಶವಂತಪುರದಲ್ಲಿ ನಡೆಯುತ್ತಿರುವ ಈ ಗ್ರಾಂಡ್​ಫಿನಾಲೆ ಹೊಸ ಇತಿಹಾಸ ಸೃಷ್ಟಿ ಮಾಡುವುದು ಖಚಿತ.

" ಫಂಡಿಂಗ್‌ಗಿಂತಲೂ ಭಿನ್ನವಾಗಿ ಯೋಚನೆ ಮಾಡಿದ್ರೆ ಪ್ರಗತಿ, ಬೆಳವಣಿಗೆ ಶೀಘ್ರದಲ್ಲಿ ಸಾಧ್ಯ"
- ಶ್ರದ್ಧಾಶರ್ಮಾ, ಸಂಸ್ಥಾಪಕರು ಯುವರ್‌ಸ್ಟೋರಿ

ಉದ್ಯಮದ ಬೆಳವಣಿಗೆ ನಿಂತಿರುವುದು ಗ್ರಾಹಕ ಮತ್ತು ಉದ್ಯಮಿಯ ನಡುವಿನ ಸಂಪರ್ಕದಲ್ಲಿ ಮತ್ತು ಸಂಹನದಲ್ಲಿ. ಇವೆರಡು ಅತ್ಯುತ್ತಮ ಸ್ಥಿತಿಯಲ್ಲಿ ಇದ್ರೆ ಉದ್ಯಮಿ ಮತ್ತು ಉದ್ಯಮ ಯಶಸ್ವಿ ಆದಂತೆಯೇ. ಟೆಕ್​ಸ್ಪಾರ್ಕ್ ಇಂತಹ ಬೆಳವಣಿಗೆಗೆ ವಿಶ್ವಾಸದ ಜೊತೆಗೆ ಉತ್ಸಾಹವನ್ನು ಕೂಡ ತುಂಬಬಹುದು. ಆದ್ರೆ ಉದ್ಯಮಿ ಯಾವತ್ತೂ ಕೂಡ ಪಂಡಿಂಗ್‌ ಬಗ್ಗೆ ಯೋಚನೆ ಮಾಡುವುದನ್ನು 2ನೇ ಅಂಶವಾಗಿ ಇಟ್ಟುಕೊಳ್ಳಬೇಕು. ಮೊದಲು ಉದ್ಯಮದಲ್ಲಿ ಬೆಳೆಯುವ ಬಗ್ಗೆ ಕನಸು ಕಾಣಬೇಕು ಅನ್ನೋದು ಶ್ರದ್ಧಾಮಾತು.

" ಇದು ಕಠಿಣ ಮತ್ತು ಏಕಾಂಗಿ ಪ್ರಯಾಣ. ಉದ್ಯಮಿಯಾಗಿ ನಾವು ಯಾವತ್ತೂ ಕಠಿಣವಾಗಿರಬೇಕು. ಏಕಾಂಗಿ ಪ್ರಯಾಣದಲ್ಲಿ ಸಂತೋಷವಾಗಿರಬೇಕು"
- ಶ್ರದ್ಧಾಶರ್ಮಾ, ಸಂಸ್ಥಾಪಕರು ಯುವರ್‌ಸ್ಟೋರಿ

ಉದ್ಯಮ ಅನ್ನೋದು ಹಲವು ಗೆಳೆಯರನ್ನು ತಂದುಕೊಡುತ್ತದೆ. ಆದ್ರೆ ಪ್ರಯಾಣ ಮಾತ್ರ ಒಂಟಿಯಾಗಿರಬೇಕು ಯಾಕಂದ್ರೆ ಯಶಸ್ಸಿನಲ್ಲಿ ಹಲವರು ಭಾಗಿಯಾಗುತ್ತಾರೆ. ಸೋತಾಗ ಯಾರೂ ಇರೋದಿಲ್ಲ. ಆದ್ರೆ ಈ ಪ್ರಯಾಣ ಯಾವತ್ತು ಕಠಿಣವೇ ಆಗಿರತ್ತದೆ. ಎಡವುದಕ್ಕೆ ಅವಕಾಶ ಎಲ್ಲೂ ಕೊಡಬಾರದು. ಉದ್ಯಮದಲ್ಲಿ ಈಗಾಗಲೇ ಪಳಗಿರುವ ಕಂಪನಿಗಳಿಗೆ ಹೊಸದಾಗಿ ಆರಂಭವಾಗುವ ಕಂಪನಿಗಳ ಜೊತೆ ಮಾತುಕತೆ ನಡೆಸಿ, ತಮ್ಮ ಉದ್ಯಮವನ್ನು ಇನ್ನಷ್ಟು ಉತ್ತಮಗೊಳಿಸಲು ಇದು ವೇದಿಕೆ ಆಗಲಿದೆ. ಅಷ್ಟೇ ಅಲ್ಲ ಹೊಸ ಕಂಪನಿಗಳನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಇದು ಅವಕಾಶವನ್ನು ಕೂಡ ಒದಗಿಸಲಿದೆ.

“ಟೆಕ್​ಸ್ಪಾರ್ಕ್- 2016”ರಲ್ಲಿ ಯುವರ್​ಸ್ಟೋರಿ ಟೆಕ್30ಯಲ್ಲಿ ಸ್ಥಾನ ಪಡೆದ ಕಂಪನಿಗಳ ಇಂಡಸ್ಟ್ರಿ ರಿಪೋರ್ಟ್​ನ್ನು ಕೂಡ ರಿಲೀಸ್ ಮಾಡಲಿದೆ. ಹೆಲ್ತ್​ಕೇರ್, ಫಿನ್​ಟೆಕ್, ಲಾಜಿಸ್ಟಿಕ್ಸ್, ಡೀಪ್ ಟೆಕ್ ಹೀಗೆ ಹಲವು ವಿಷಯಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಯಲಿದೆ.

“ಟೆಕ್​ಸ್ಪಾರ್ಕ್- 2016”ರಲ್ಲಿ ಕೇವಲ ಉದ್ಯಮಿಗಳನ್ನು, ಹೂಡಿಕೆದಾರರನ್ನು ಮಾತ್ರ ಒಟ್ಟು ಮಾಡುವುದಿಲ್ಲ. ಬದಲಾಗಿ ಉದ್ಯಮಕ್ಕೆ ಸಹಾಯ ಮಾಡಬಲ್ಲ ಮತ್ತು ಸಮಸ್ಯೆಗಳನ್ನು ನಿವಾರಿಸಲು ದಾರಿತೋರಿಸಬಲ್ಲ ಸೆಕ್ಟರ್​ಗಳಾದ ಆ್ಯಕ್ಸಿಸ್ ಬ್ಯಾಂಕ್, ಅಕಮೈ, AWS, ಮೈಕ್ರೋಸಾಫ್ಟ್ ಮತ್ತು ಡಿಜಿಟಲ್ ಓಷನ್​ಗಳು ಕೂಡ ಈ ಗ್ರಾಂಡ್​ಫಿನಾಲೆಯಲ್ಲಿ ಭಾಗವಹಿಸುತ್ತಿವೆ.