ಉದ್ಯಮಗಳಿಗೆ ಲಾಜಿಸ್ಟಿಕ್ಸ್ ಹಾಗೂ ಸಾರಿಗೆ ಸೇವೆ ಒದಗಿಸುತ್ತಿರುವ ಕ್ಯುಬಿಟೋ ಸಂಸ್ಥೆಯ ಯಶೋಗಾಥೆ

ಟೀಮ್​ ವೈ.ಎಸ್​.

ಉದ್ಯಮಗಳಿಗೆ ಲಾಜಿಸ್ಟಿಕ್ಸ್ ಹಾಗೂ ಸಾರಿಗೆ ಸೇವೆ ಒದಗಿಸುತ್ತಿರುವ ಕ್ಯುಬಿಟೋ ಸಂಸ್ಥೆಯ ಯಶೋಗಾಥೆ

Tuesday September 29, 2015,

3 min Read

ಯೋಚನೆ ಅನ್ನೋದು ನಿಂತ ನೀರಾಗಬಾರದು. ಬದಲಾವಣೆ ಅನ್ನೋದು ಕಾಣೋದು ಹೊಸ ಐಡಿಯಾಗಳು ಹುಟ್ಟಿಕೊಂಡಾಗ ಮತ್ತು ಅದನ್ನು ಪ್ರಯೋಗ ಮಾಡಿದಾಗ. ಅದಕ್ಕೊಂದು ಉದಾಹರಣೆ ಕ್ಯುಬಿಟೋ.

ಲಾಸ್ಟ್​​ ಟೈಮ್​​​ ಯುವರ್ ಸ್ಟೋರಿ ಕ್ಯುಬಿಟೋ ಮುಖ್ಯಸ್ಥರೊಂದಿಗೆ ಮಾತನಾಡಿದಾಗ ಕ್ಯುಬಿಟೋ ಜಸ್ಟ್​​ ಒಂದು ಕ್ಯಾಬ್ ಪೋಲಿಂಗ್ ಕಂಪನಿಯಾಗಿತ್ತು. ಬಿಸಿನೆಸ್‌ ಟು ಕಸ್ಟಮರ್ ಎಂಬುದರತ್ತ ದೃಷ್ಟಿ ನೆಟ್ಟಿದ್ದ ಇತರೆ ಕಂಪನಿಗಳ ಪಟ್ಟಿಯಲ್ಲಿತ್ತು. ಕಂಪನಿಯಲ್ಲಿದ್ದ ಜನ ಕೈಗೆಟುಕುವ ದರದಲ್ಲಿ ಪ್ರಯಾಣ ವ್ಯವಸ್ಥೆ ಇದ್ದರೆ ಚೆನ್ನಾಗಿತ್ತು ಎಂದಿದ್ದರು. ಹಿಂದಿನ ಮಾದರಿಯಂತೆ ಕ್ಯುಬಿಟೋ ಒಂದೇ ಪ್ರದೇಶದಿಂದ ಬರುವ ಜನರನ್ನು ಗುರುತಿಸಿ ಅವರಿಗೆಲ್ಲಾ ಒಂದೇ ಕ್ಯಾಬ್‌ನ ವ್ಯವಸ್ಥೆ ಮಾಡಬೇಕಾಗಿತ್ತು. ಆದ್ರೆ ಇದನ್ನೇ ಇನ್ನಷ್ಟು ಕ್ರಿಯಾತ್ಮಕವಾಗಿ ಮಾಡುವತ್ತ ಕ್ಯುಬಿಟೋ ಗಮನಹರಿಸಿತ್ತು.

image


2015ರ ಜನವರಿಯಲ್ಲಿ ಬಿಸಿನೆಸ್ ಟು ಕಸ್ಟಮರ್ ಎಂಬ ಮಾದರಿಯಿಂದ ಬಿಸಿನೆಸ್ ಟು ಬಿಸಿನೆಸ್ ಎಂಬ ಮಾದರಿಗೆ ಬದಲಾಯ್ತು ಕ್ಯುಬಿಟೋ. ಇಂದು ಕ್ಯುಬಿಟೋ ಸಾರಿಗೆ ಲಾಜಿಸ್ಟಿಕ್ಸ್ ಕ್ಷೇತ್ರದತ್ತ ಹೆಚ್ಚಿನ ಗಮನ ಹರಿಸುತ್ತಿದೆ. ಬೆಂಗಳೂರು ಮೂಲದ ಈ ಕಂಪನಿ ಯಾವುದೇ ಬಿಸಿನೆಸ್‌ನ ಸ್ವಯಂಚಾಲಿತ ಸಾರಿಗೆ ಲಾಜಿಸ್ಟಿಕ್ಸ್‌ನ ಪಾತ್ರವಾಗುವ ಗುರಿಹೊಂದಿದೆ. ಇಟ್ಯಾಟ್ (ನೌಕರರ ಸ್ವಯಂಚಾಲಿತ ಆಟೋಮೇಷನ್ ಟೂಲ್) ಮುಖಾಂತರ ಇದನ್ನು ಸಾಧ್ಯವಾಗಿಸಬಹುದಾಗಿದೆ.

ಈ ಬದಲಾವಣೆಗೆ ಕಾರಣ ಏನು ಎಂದು ಕ್ಯುಬಿಟೋ ಕಂಪನಿಯ ಸಹ ಸಂಸ್ಥಾಪಕ ಯಶ್ ಪಟೋಡಿಯಾ ಅವರನ್ನು ಕೇಳಿದಾಗ ಅವರು ಬಿಸಿನೆಸ್ ಟು ಕಸ್ಟಮರ್ ಎಂಬ ಮಾದರಿಗೆ ಹೆಚ್ಚಿನ ಬೇಡಿಕೆ ಇದ್ದಾಗ ಕ್ಯಾಬ್‌ಗಳ ಪೂರೈಕೆಯಲ್ಲಿ ಅವರು ಬಹಳಷ್ಟು ಸವಾಲನ್ನು ಎದುರಿಸಬೇಕಾಗಿ ಬಂತು. ಒಂದು ಸಂಜೆ ಈ ಕುರಿತಂತೆ ಚರ್ಚಿಸುತ್ತಿದ್ದ ಯಶ್ ಮತ್ತು ಸಹ ಸಂಸ್ಥಾಪಕ ಪ್ರಣಯ್‌ಗೆ ಬಿಸಿನೆಸ್‌ ಟು ಬಿಸಿನೆಸ್ ಎಂಬ ಐಡಿಯಾ ಹೊಳೆದಿದ್ದು.

“ತಂತ್ರಜ್ಞಾನವನ್ನು ಸರಿಯಾಗಿ ಬಳಸಿಕೊಂಡು ಮಾರುಕಟ್ಟೆಯಲ್ಲಿ 1 ವರ್ಷದ ಅನುಭವ ಗಳಿಸಿದ ನಂತರ ನಮಗೆ ಬಿಸಿನೆಸ್ ಟು ಬಿಸಿನೆಸ್ ಪ್ರಾಮುಖ್ಯತೆ ಎಷ್ಟು ದೊಡ್ಡದೆಂದು ತಿಳಿಯಿತು. ಹೀಗಾಗಿ ಇದನ್ನು ಕೂಡಲೇ ಜಾರಿಗೆ ತಂದೆವು. ಇದು ತರ್ಕಬದ್ಧವಾಗಿಯೂ ಇತ್ತು. ಸ್ವಾಧೀನದ ಆಯ್ಕೆಯನ್ನು ತಿರಸ್ಕರಿಸಿದ ನಾವು ತಂತ್ರಜ್ಞಾನಕ್ಕಾಗಿ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಿದೆವು ಮತ್ತು ಬ್ಲೂ ಚಿಪ್ ಎಂಟರ್ ಪ್ರೈಸಸ್‌ಗೆ ಸೇವೆ ನೀಡಲು ಆರಂಭಿಸಿದೆವು” ಎನ್ನುತ್ತಾರೆ ಯಶ್.

ಕ್ಯುಬಿಟೋ ನಿರ್ಮಿಸಿದ ಇಟ್ಯಾಟ್ ಟೂಲ್ ಉದ್ಯೋಗಿಗಳ ಎಲ್ಲಾ ಮಾಹಿತಿ, ಭೌಗೋಳಿಕ ಸಂಕೇತಗಳು, ಅವರಿಗೆ ಅಗತ್ಯವಿರುವ, ಸಹಾಯಕ್ಕೆ ತಕ್ಕಂತೆ ಸಾರಿಗೆ ವ್ಯವಸ್ಥೆಯನ್ನು ಗೊತ್ತುಪಡಿಸುತ್ತದೆ. ಇದರಿಂದ ಕಾಗದ ಪತ್ರಗಳ ನಿರ್ವಹಣೆ ತಪ್ಪುವುದು ಮಾತ್ರವಲ್ಲದೇ ರಿಯಲ್ ಟೈಂ ಟ್ರ್ಯಾಕಿಂಗ್ ಮತ್ತು ಪ್ರಾಕ್ಸಿಮಿಟೀ ಅಲರ್ಟ್ಸ್‌ ನಂತಹ ಸೇವೆಯನ್ನೂ ನೀಡುತ್ತದೆ. ಸಾರಿಗೆ ಸಂಸ್ಥೆಗಳು ಮತ್ತು ಕಂಪನಿಗಳು ಪ್ರತಿ ಉದ್ಯೋಗಿಯ ಮೇಲೆ ಪ್ರತಿ ತಿಂಗಳು ಸುಮಾರು 7000 ರೂ.ಗಳನ್ನು ವ್ಯಯಿಸುತ್ತಿವೆ. ಪಾರದರ್ಶಕತೆ, ಸುರಕ್ಷತೆ ಮತ್ತು ಎಲ್ಲಾ ಹೂಡಿಕೆದಾರರ ನಡುವಿನ ಸಂವಹನವನ್ನು ಖಾತ್ರಿಗೊಳಿಸುತ್ತದೆ ಈ ವ್ಯವಸ್ಥೆ ಎನ್ನುತ್ತಾರೆ ಯಶ್.

ಬಿಸಿನೆಸ್ ಟು ಕಸ್ಟಮರ್ ಮಾದರಿಯಲ್ಲಿ ಶೇ.5.8ರಷ್ಟು ಇದ್ದ ಬೆಳವಣಿಗೆ ಬಿಸಿನೆಸ್ ಟು ಬಿಸಿನೆಸ್ ಮಾದರಿಯಿಂದ ವರ್ಷದಿಂದ ವರ್ಷಕ್ಕೆ ಶೇ.21ರಷ್ಟು ಬೆಳವಣಿಗೆ ಸಾಧಿಸುತ್ತಿದೆ. ವಾರದ ಬೆಳವಣಿಗೆಯನ್ನು ಗಮನಿಸಿದರೆ ಪ್ರತಿವಾರವೂ 12.8ರಷ್ಟು ಬೆಳವಣಿಗೆ ಕಾಣುತ್ತಿದೆ. 12 ಹೊಸ ಗ್ರಾಹಕರನ್ನು ಹೊಂದಿರುವ ಕ್ಯುಬಿಟೋದ 5000 ವಾಹನಗಳು ಬೆಂಗಳೂರು, ದೆಹಲಿ, ಗುರ್‌ಗಾಂವ್, ಮುಂಬೈ, ಪುಣೆ, ಜೆಮ್‌ಶೆಡ್‌ಪುರದಲ್ಲಿ ಸಂಚರಿಸುತ್ತಿವೆ. 40 ಮಂದಿ ಪರಿಣಿತ ಪೈಲಟ್ ಚಾಲಕರಿದ್ದಾರೆ.

ಬಿಸಿನೆಸ್ ಟು ಕಸ್ಟಮರ್ ಎಂಬ ನೀತಿಯಿಂದ ಬಿಸಿನೆಸ್‌ ಟು ಬಿಸಿನೆಸ್ ನೀತಿಗೆ ಬದಲಾದದ್ದರಿಂದ ಕ್ಯಾಬ್‌ ಚಾಲಕರಿಗೂ, ಹೂಡಿಕೆದಾರರಿಗೂ ಹೆಚ್ಚಿನ ಲಾಭವಿದೆ. ಹೊಸ ವಿತರಣೆಗಾಗಿ ಪ್ಯಾನ್ ಇಂಡಿಯಾ ಪಾಲುದಾರಿಕೆ ಹೊಂದಿರುವ ಈ ಸಂಸ್ಥೆ, ವಾಹನಗಳ ಪ್ರಮುಖ ಪೂರೈಕೆದಾರರೊಂದಿಗೆ ಕೈಜೋಡಿಸಿದೆ. ತಮ್ಮ ಬ್ರಾಂಡ್‌ನ್ನು ಗಟ್ಟಿಗೊಳಿಸಲು, ಪಾರದರ್ಶಕತೆ ಕಾಯ್ದುಕೊಳ್ಳಲು ದಕ್ಷ ಮತ್ತು ಸರಳ ಆನ್‌ಲೈನ್ ಕರೆಗಳ ಸೇವೆ ನೀಡುವ ಉದ್ದೇಶ ಹೊಂದಿದೆ ಕ್ಯುಬಿಟೋ.

ಈಗಾಗಲೇ ಭಾರತದ ಹಲವೆಡೆ ಯಶಸ್ಸು ಸಾಧಿಸಿರುವ ಕ್ಯುಬಿಟೋ, ಮುಂದಿನ ಕೆಲತಿಂಗಳಲ್ಲೇ ಆಗ್ನೇಯ ಏಷ್ಯಾ ಮಾರುಕಟ್ಟೆ ಪ್ರವೇಶಿಸಲು ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ಯುರೋಪ್ ಮತ್ತು ಅಮೆರಿಕಾದಲ್ಲಿ ಸಾರಿಗೆ ಸಮಸ್ಯೆಯನ್ನು ಪರಿಹರಿಸಲು ಅಗತ್ಯವಿರುವ ಪ್ರಯತ್ನದಲ್ಲಿದೆ.

ಬಿಸಿನೆಸ್ ಟು ಕಸ್ಟಮರ್ ಎಂಬ ನೀತಿಯನ್ನು ಬಿಸಿನೆಸ್ ಟು ಬಿಸಿನೆಸ್ ಮಾದರಿಗೆ ಬದಲಾಯಿಸಿದ ಕಂಪನಿಗಳಲ್ಲಿ ಕ್ಯುಬಿಟೋ ಮೊದಲನೆಯದ್ದೇನಲ್ಲ. ರಿಡೆಲ್ ಇನ್‌ಸಿಂಕ್ ಕಂಪನಿ ಕೂಡ ಬಿಸಿನೆಸ್ ಟು ಬಿಸಿನೆಸ್ ನೀತಿಗೆ ಬದಲಾಗಿದೆ. ಭಾರತದಲ್ಲಿ ಕಾರ್​ಪೂಲಿಂಗ್ ಉದ್ಯಮ ಇನ್ನೂ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿಲ್ಲ. ಬಹುಪಾಲು ಭಾರತೀಯರು ವಾಹನಗಳನ್ನು ಖರೀದಿಸುವಲ್ಲಿ ಆಸಕ್ತಿವಹಿಸುತ್ತಿದ್ದಾರೆ. ಇದಕ್ಕೆ ಭಾವನಾತ್ಮಕ ಹೂಡಿಕೆ ಸೇರಿದಂತೆ ಅವರ ಕೆಲವು ಆಸಕ್ತಿಗಳು ಹಾಗೂ ಅಭ್ಯಾಸಗಳು ಪೂರಕವಾಗಿ ಸ್ಪಂದಿಸುತ್ತಿವೆ. ಕ್ಯಾಬ್ ಚಾಲಕರ ಮೇಲೆ ನಂಬಿಕೆ ಇಟ್ಟುಕೊಳ್ಳುವುದು ದುಸ್ತರವಾಗಿರುವುದು ಇನ್ನೊಂದು ಅಂಶ. ಆಫೀಸ್ ಕ್ಯಾಬ್‌ನಲ್ಲಿ ಬೇರೆಯ ವ್ಯಕ್ತಿಗಳನ್ನು ಕರೆದುಕೊಂಡು ಹೋಗುವುದು ಅಷ್ಟು ಸಮಂಜಸವಲ್ಲದೇ ಇರುವುದು ಇದಕ್ಕೆ ಇನ್ನೊಂದು ಮುಖ್ಯವಾದ ಅಂಶ.