ಬದಲಾಯಿತು ದೂರದರ್ಶನ- ಸ್ಮಾರ್ಟ್​ಫೋನ್​ನಲ್ಲೂ ಟಿವಿಯ ದರ್ಶನ

ಟೀಮ್​ ವೈ.ಎಸ್​.ಕನ್ನಡ

ಬದಲಾಯಿತು ದೂರದರ್ಶನ- ಸ್ಮಾರ್ಟ್​ಫೋನ್​ನಲ್ಲೂ ಟಿವಿಯ ದರ್ಶನ

Sunday July 31, 2016,

2 min Read

ಸ್ಮಾರ್ಟ್​ಫೋನ್ ಲೋಕ ಈಗ ಎಲ್ಲವನ್ನೂ ತನ್ನ ಬಳಿಗೆ ಎಳೆದುಕೊಳ್ಳುತ್ತಿದೆ. ಟಿವಿ ಚಾನೆಲ್​ಗಳನ್ನು ಕೂಡ ಈಗ ಮೊಬೈಲ್​ನಲ್ಲೇ ನೋಡುವ ಕಾಲ ಬಂದಿದೆ. ಭಾರತದ ಅತೀ ದೊಡ್ಡ ಟಿವಿ ನೆಟ್​ವರ್ಕ್ ದೂರದರ್ಶನ ಈಗ ಬದಲಾವಣೆಯತ್ತ ಹೆಜ್ಜೆ ಇಟ್ಟಿದೆ. ಸ್ಮಾರ್ಟ್​ಫೋನ್​ನಲ್ಲಿ ಇಂಟರ್ನೆಟ್ ಸೇವೆ ಇಲ್ಲದೆಯೂ ದೂರದರ್ಶನ ಚಾನೆಲ್​ನ್ನು ವೀಕ್ಷಿಸುವ ಕಾಲ ಬಂದಿದೆ. ನಾಲ್ಕು ಮೆಟ್ರೊ ಸಿಟಿಗಳು ಸೇರಿದಂತೆ 16 ಸಿಟಿಗಳಲ್ಲಿ ಮೊಬೈಲ್ ಫೋನ್ ಬಳಕೆದಾರರು ಇಂಟರ್ನೆಟ್ ಸೇವೆ ಇಲ್ಲದೆ ದೂರದರ್ಶನ ಚಾನೆಲ್​ಗಳನ್ನು ವೀಕ್ಷಿಸಬಹುದು.

ಇದನ್ನು ಓದಿ: ಅಂತರ್ಜಾಲವನ್ನು ಭಾರತೀಕರಣಗೊಳಿಸಲು ಏನು ಮಾಡಬೇಕು?

ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಗುವಾಹಟಿ, ಪಾಟ್ನಾ, ರಾಂಚಿ, ಕಟಕ್, ಲಕ್ನೋ, ಜಲಂಧರ್, ರಾಯ್​ಪುರ, ಇಂಧೋರ್, ಔರಂಗಬಾದ್, ಭೋಪಾಲ್, ಬೆಂಗಳೂರು ಮತ್ತು ಅಹ್ಮದಾಬಾದ್​​ನಲ್ಲಿ ಸ್ಮಾರ್ಟ್​ಫೋನ್ ಬಳಕೆದಾರರು ಈ ಸೌಲಭ್ಯವನ್ನು ಪಡೆಯಬಹುದು. ಮೊಬೈಲ್ ಟಿವಿಯಲ್ಲಿ DVB-T2 ಡಾಂಗಲ್ ಮುಖಾಂತರ, ಒಟಿಜಿ ವ್ಯವಸ್ಥೆಯುಳ್ಳ ಸ್ಮಾರ್ಟ್​ಫೋನ್, ಟ್ಯಾಬ್​ಗಳಲ್ಲಿ ವೀಕ್ಷಿಸಿಬಹುದು. ಚಲಿಸುತ್ತಿರುವ ವಾಹನಗಳಲ್ಲಿ ವೈ-ಫೈ ಡಾಂಗಲ್​ಗಳನ್ನು ಬಳಸಿ, ಇಂಟಗ್ರೆಟೆಡ್ ಡಿಜಿಟಲ್ ಟಿವಿ ವ್ಯವಸ್ಥೆ ಮೂಲಕ ಟಿವಿ ವೀಕ್ಷಿಸಬಹುದು. ಸಾಫ್ಟ್​ವೇರ್ ಇನ್ಸ್ಟಾಲ್ ಮಾಡಿದ ನಂತರ ಯಾವುದೇ ಇಂಟರ್ನೆಟ್ ಸಂಪರ್ಕವಿಲ್ಲದೆ, ಉಚಿತವಾಗಿ ಟಿವಿ ನೋಡಬಹುದು.

image


ಸದ್ಯ ಡಿಡಿ ನ್ಯಾಷನಲ್, ಡಿಡಿ ನ್ಯೂಸ್, ಡಿಡಿ ಭಾರತಿ, ಡಿಡಿ ಸ್ಪೋರ್ಟ್ಸ್, ಡಿಡಿ ರೀಜನಲ್, ಡಿಡಿ ಕಿಸಾನ್ ಚಾನೆಲ್​ಗಳು ಮೊಬೈಲ್​​ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಒಂದು ಬಾರಿ ಡಾಂಗಲ್​ಗಳನ್ನು ಇನ್ಸ್ಟಾಲ್ ಮಾಡುವುದಕ್ಕೆ ಮಾತ್ರ ವೆಚ್ಚವಾಗುತ್ತದೆ. ಇದಾದ ಮೇಲೆ ಇಂಟರ್ನೆಟ್​ಗಾಗಲಿ ಅಥವಾ ಇನ್ಯಾವುದೇ ವಿಚಾರಕ್ಕೆ ದುಡ್ಡು ಖರ್ಚು ಮಾಡಬೇಕಿಲ್ಲ.

"ಜಗತ್ತು ಮುಂದಕ್ಕೆ ಹೋಗುತ್ತಿದೆ. ಆದ್ರೆ ದೂರದರ್ಶನ ಮಾತ್ರ ಹಿಂದಕ್ಕೆ ಹೋಗುತ್ತಿದೆ. ಹೀಗಾಗಿ ನಾವು ಸ್ಮಾರ್ಟ್​ಫೋನ್ ಮೂಲಕ ಮುಂದಕ್ಕೆ ಬರಲೇಬೇಕಿದೆ. ಈಗಿರುವ ತಂತ್ರಜ್ಞಾನಗಳನ್ನು ಬಳಸಿಕೊಂಡರೆ ಮಾತ್ರ ನಾವು ಕೂಡ ಎಲ್ಲಾ ಚಾನೆಲ್​ಗಳಂತೆ ಜನರ ಬಳಿ ಇರುತ್ತೇವೆ. ಇಲ್ಲದಿದ್ದರೆ ಹಿಂದೆಯೇ ಇರುತ್ತೇವೆ."
              - ಸಿಇಒ, ಪ್ರಸಾರ ಭಾರತಿ

ಎಲ್ಲವೂ ಸರಿಯಾಗಿ ನಡೆದ್ರೆ, ಒಂದೇ ವೇದಿಕೆಯಲ್ಲಿ ಒಟ್ಟು 20 ಟಿವಿ ಚಾನಲ್​ಗಳು ಮತ್ತು 20 ರೆಡಿಯೋ ಚಾನಲ್​ಗಳ ಬಳಕೆಗೆ ಅವಕಾಶ ಸಿಗಲಿದೆ. ಈ ಚಾನೆಲ್​ಗಳೆಲ್ಲವೂ ಫ್ರೀ ಟು ಏರ್ ಮತ್ತು ಫ್ರೀ ಟು ಲೈಫ್ ಟೈಮ್. ಡಿಶ್, ಸೆಟ್ಅಪ್​ ಬಾಕ್ಸ್ ಮತ್ತು ಇಂಟರ್ನೆಟ್ ಹೀಗೆ ಎಲ್ಲಾ ಕಿರಿಕಿರಿಗಳಿಂದ ಮುಕ್ತಿ ಸಿಗುತ್ತದೆ.

ಇದನ್ನು ಓದಿ:

1. ಮಾರಕವಾಗುತ್ತಿದೆ ಬೆಂಗಳೂರು ಟ್ರಾಫಿಕ್ - ಪ್ರಯಾಣಿಕರಲ್ಲಿ ಹೆಚ್ಚುತ್ತಿದೆ ನರದೌರ್ಬಲ್ಯ ಸಮಸ್ಯೆ

2. ಸರಳ ವಿವಾಹಕ್ಕೆ ಜೈ ಎಂದ ಯುವ ಜೋಡಿ : ಮದುವೆಗೆ ಕೂಡಿಟ್ಟ ಹಣ ರೈತರಿಗೆ ದಾನ

3. 70 ಕೊಠಡಿ, 11 ಸಿಬ್ಬಂದಿ, ಇರುವವನೊಬ್ಬನೇ ಭಿಕ್ಷುಕ : ಪುನರ್ವಸತಿ ಹೆಸರಲ್ಲಿ ಹಣ ಪೋಲು

    Share on
    close