ಹನಿ ಹನಿ ಸೇರಿದರೆ ಹಳ್ಳ..

ಟೀಮ್​ ವೈ.ಎಸ್​​.

ಹನಿ ಹನಿ ಸೇರಿದರೆ ಹಳ್ಳ..

Friday October 09, 2015,

3 min Read

ಈ ಘಟನೆ ನಡೆದಿದ್ದು ಮಾರ್ಚ್‌ನಲ್ಲಿ. ಹಣದ ಕೊರತೆಯ ನಡುವೆಯೂ ಉತ್ತಮ ಪ್ರದರ್ಶನ ನೀಡಿದ ಫಲವಾಗಿ ದಿ ನ್ಯಾಷನಲ್ ಐಸ್ ಹಾಕಿ ತಂಡ ಏಶಿಯನ್ ಚಾಂಪಿಯನ್‌ಶಿಪ್ ಟ್ರೋಫಿ ಗೆದ್ದುಕೊಂಡಿತು.

ಬಿಟ್ ಗೀವಿಂಗ್ ಎಂಬ ಭಾರತದ ಅತೀ ದೊಡ್ಡ ಕ್ರೌಡ್ ಫಂಡಿಂಗ್ ವೇದಿಕೆ ಮೂಲಕ 20 ದಿನದಲ್ಲೇ 6.5 ಲಕ್ಷ ಹಣ ಸಂಗ್ರಹಿಸುವಲ್ಲಿ ಯಶಸ್ವಿಯಾಗಿತ್ತು ಈ ತಂಡ. ಈ ಹಣವನ್ನು ಯಾವುದೇ ಪ್ರಾಯೋಜಕರಿಲ್ಲದೇ ಚಾಂಪಿಯನ್‌ಶಿಪ್ ನಲ್ಲಿ ಭಾಗಿಯಾಗಲು ಹೊರಟಿದ್ದ ದ ನ್ಯಾಷನಲ್ ಐಸ್ ಹಾಕಿ ತಂಡಕ್ಕೆ ನೀಡಲಾಯಿತು.

ಇದಾದ ನಂತರ ನ್ಯಾಷನಲ್ ಟೀಮ್ ಹಿಂತಿರುಗಿ ನೋಡಲೇ ಇಲ್ಲ. ಆನಂದ್ ಮಹೀಂದ್ರಾ, ಮುಂಚೂಣಿಯಲ್ಲಿರುವ ಟೆಲಿಕಾಂ ಕಂಪನಿ ಮೈಕ್ರೋಮ್ಯಾಕ್ಸ್ ಮತ್ತು ಕ್ರೀಡಾ ಸಚಿವಾಲಯದ ನೆರವಿನೊಂದಿಗೆ ಮಾರ್ಚ್‌ನ ಕೊನೆಯಲ್ಲಿ ಚಾಂಪಿಯನ್‌ ಶಿಪ್‌ಗೆ ಭಾಗಿಯಾಗಲು ಕುವೈತ್‌ಗೆ ತೆರಳಿತು.

image


ಬಿಟ್‌ ಗೀವಿಂಗ್ ಸಂಸ್ಥೆಯನ್ನು ಆರಂಭಿಸಿದ ಹಾಗೂ ಸಿಇಓ ಆಗಿರುವ 26 ವರ್ಷದ ಇಶಿತಾ ಆನಂದ್ ಈ ಬಗ್ಗೆ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ಆ ತಂಡದ ಉಪನಾಯಕ ಚಾಂಪಿಯನ್‌ಶಿಪ್‌ಗೆ ತೆರಳುವ ಮುಂಚಿನ ಸುದ್ದಿಗೋಷ್ಠಿಯಲ್ಲಿ ಹೇಳಿದ ಒಂದು ಮಾತು ನೆನಪಿಸಿಕೊಂಡರು. ತಮ್ಮ ತಂಡ ಮೊದಲ ಬಾರಿಗೆ ರಾಷ್ಟ್ರೀಯ ತಂಡ ಅನಿಸಿಕೊಳ್ಳುತ್ತಿರುವ ಸಂಭ್ರಮವನ್ನು ತಂಡದ ಉಪ ನಾಯಕ ಹಂಚಿಕೊಂಡಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಐಸ್ ಹಾಕಿ ತಂಡದ ಪ್ರದರ್ಶನದ ಕುರಿತಾಗಿ ಸಾಕಷ್ಟು ಕುತೂಹಲ ವ್ಯಕ್ತವಾಗಿದ್ದು ಇಶಿತಾರಿಗೆ ಅಚ್ಚರಿಯನ್ನುಂಟು ಮಾಡಿತ್ತು. ಅಲ್ಲಿಯವರೆಗೆ ಜನರಿಗೆ ಅಂಥದ್ದೊಂದು ತಂಡವಿದೆ ಎಂಬುದೇ ತಿಳಿದಿರಲಿಲ್ಲ. ಆದರೂ ಕೂಡಲೇ ಅಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕ್ರೌಡ್ ಫಂಡಿಂಗ್ ವೇದಿಕೆಯ ಸಾಮರ್ಥ್ಯದಿಂದಾಗಿ. ನೇರ ಪ್ರದರ್ಶನವಾದ 20 ಗಂಟೆಗಳ ಬಳಿಕ ಟ್ವಿಟರ್‌ನಲ್ಲಿ ಇದರ ಬಗ್ಗೆ ಪ್ರಚಾರ ಶುರುವಾಯಿತು. ಆದರೂ ಜನರು ಮುಕ್ತ ಕಂಠದಿಂದ ಈ ಕ್ರೀಡಾಕೂಟವನ್ನು ಶ್ಲಾಘಿಸುವ ಮಾತನಾಡಿದರು.

image


ಲೇಡಿ ಶ್ರೀರಾಮ್ ಕಾಲೇಜ್‌ನಲ್ಲಿ ತಮ್ಮ ಪದವಿ ಕಲಿಕೆಯ ದಿನಗಳಲ್ಲೇ ಡಿಯು ಬೀಟ್ ಅನ್ನುವ ಹೆಸರಿನ ನ್ಯೂಸ್ ಲೆಟರ್‌ವೊಂದರಲ್ಲಿ ಡಿಸೈನ್ ಹೆಡ್ ಆಗಿ ಇಶಿತಾ ಕಾರ್ಯನಿರ್ವಹಿಸುತ್ತಿದ್ದರು. ಹೀಗಾಗಿ 22ನೇ ವರ್ಷಕ್ಕೆ ತಮ್ಮ ಉದ್ಯಮ ಯಾನದ ಮಹತ್ತರ ಮೈಲಿಗಲ್ಲಿನ ಬಳಿ ಅವರು ನಿಂತಿದ್ದರು. ಚಿಕ್ಕ ತಂಡವಿದ್ದರೂ ನ್ಯೂಸ್‌ ಲೆಟರ್‌ನಲ್ಲಿ ಅವರು ಗಳಿಸಿದ ಅನುಭವ ಆರಂಭಿಕ ಉದ್ಯಮಕ್ಕೆ ಬೇಕಿರುವ ಆತ್ಮವಿಶ್ವಾಸ ಒದಗಿಸಿಕೊಟ್ಟಿತ್ತು.

ಬಳಿಕ ಇಶಿತಾ ಅನಿಮೇಷನ್ ಚಿತ್ರೋದ್ಯಮದಲ್ಲಿ ಅತಿಥಿ ಪಾತ್ರಗಳಿಗೆ ಧ್ವನಿ ನೀಡುವ ಹೊಸತೊಂದು ಪ್ರಯತ್ನಕ್ಕೆ ಮುಂದಾದರು. ಇಲ್ಲಿ ಅವರಿಗೆ ಚಿತ್ರೋದ್ಯಮದ ಸಾಕಷ್ಟು ಸಂಪರ್ಕಗಳು ಲಭ್ಯವಾದವು. ಈ ಎಲ್ಲಾ ಕಲಾವಿದರನ್ನು ಒಂದು ವೇದಿಕೆಯಡಿ ಸೇರಿಸುವ ಪ್ರಯತ್ನವನ್ನು ಇಶಿತಾ ಆರಂಭಿಸಿದರು.

ಅನುಭವವಿಲ್ಲದಿದ್ದರೂ ಹಾಗೂ ತಾಂತ್ರಿಕ ಕೌಶಲ್ಯದ ಕೊರತೆ ಇದ್ದರೂ ಇಶಿತಾ ಸಂಸ್ಥೆಯೊಂದನ್ನು ಹುಟ್ಟುಹಾಕಲು ಹಿಂದೆ ಮುಂದೆ ಯೋಚಿಸಲಿಲ್ಲ. ತರಬೇತಿ ಹೊಂದಿದ ಅನಿಮೇಟರ್ ಆಗಿ ಮಾತ್ರ ಅನುಭವ ಹೊಂದಿದ್ದ ಅವರು ತಂತ್ರಜ್ಞಾನಗಳನ್ನು ಕಲಿಯಲು ಮುಂದಾದರು. ಹಾಗೂ ಬ್ಯಾಂಕ್‌ಗಳ ಜೊತೆ ಸಾಕಷ್ಟು ಯೋಜನೆಗಳ ಮೇಲೆ ಕೆಲಸ ಮಾಡಲು ಆರಂಭಿಸಿದರು. ಇದು ಅವರ ಸಾಮರ್ಥ್ಯದ ಮೇಲೆ ಹಿಡಿತ ಸಾಧಿಸಲು ನೆರವಾಯಿತು. 2013ರ ಅಂತ್ಯದಲ್ಲಿ ಇಶಿತಾ ಬಿಟ್ ಗೀವಿಂಗ್ ಸಂಸ್ಥೆ ಹುಟ್ಟುಹಾಕಿದರು.

ಇಶಿತಾ ಮಹತ್ವಾಕಾಂಕ್ಷೆಯಿಂದ ಆರಂಭಿಸಿದ ಬಿಟ್ ಗೀವಿಂಗ್

ಆರಂಭಿಕ ದಿನಗಳಲ್ಲಿ ಬಿಟ್ ಗೀವಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಚಾರ ನಡೆಸಿತು. ಹೂಡಿಕೆ ಮಾಡುವುದು, ಬೇರೆ ಬೇರೆ ಯೋಜನೆಗಳಲ್ಲಿ ಕೆಲಸ ಮಾಡಿ, ಕೆಲವು ಯೋಜನೆಗಳನ್ನು ಹಂಚುವುದು ಇತ್ಯಾದಿ ಸಾಕಷ್ಟು ಕೆಲಸಗಳಿದ್ದವು. ಅಲ್ಲದೇ ಕ್ರೌಡ್ ಫಂಡಿಂಗ್ ಅನ್ನುವ ಹೆಸರೇ ಭಾರತದಲ್ಲಿ ವಿನೂತನವಾಗಿತ್ತು. ಈ ಬಗ್ಗೆ ಜನಗಳಿಗೆ ಸರಿಯಾದ ಮಾಹಿತಿ ಅಥವಾ ಕಾರ್ಯವಿಧಾನಗಳು ತಿಳಿದಿರಲಿಲ್ಲ. ಆರಂಭಿಕ ದಿನಗಳಲ್ಲಿ ಕ್ರೌಡ್ ಫಂಡಿಂಗ್ ಕ್ಯಾಂಪೇನ್ ಅಷ್ಟೇನೂ ಆಶಾದಾಯಕವಾಗಿರಲಿಲ್ಲ ಜೊತೆಗೆ ಪ್ರಗತಿಯೂ ನಿಧಾನಗತಿಯಲ್ಲಿತ್ತು. ಆದರೆ ಛಲಬಿಡದೇ ಕೆಲಸ ಮುಂದುವರಿಸಿದ ಇಶಿತಾ ಸಂಸ್ಥೆಯನ್ನು ಮುಂದುವರೆಸಿದರು.

ನೇಪಾಳ ಭೂಕಂಪವಾದ ಸಂದರ್ಭದಲ್ಲಿ ಅವರ ಸಂಸ್ಥೆಯ ಅಭಿಯಾನದಿಂದ ಸುಮಾರು 60 ಲಕ್ಷ ಹಣ ಸಂಗ್ರಹವಾಗಿತ್ತು.

ಇಂದು ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ರಚನಾತ್ಮಕ ಅಭಿಯಾನಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಇಲ್ಲಿ ಪಾರದರ್ಶಕ ವ್ಯವಹಾರ ಮುಖ್ಯವಾಗಿ ಯುವಜನತೆಯನ್ನು ಈ ವೇದಿಕೆಯತ್ತ ಕರೆತರುತ್ತಿದೆ. ಅಲ್ಲದೇ ಪ್ರತಿಯೊಬ್ಬರೂ ಇಲ್ಲಿ ಸಂಗ್ರಹವಾಗುವ ಹಣದ ಮೂಲ ಹಾಗೂ ಎಲ್ಲಿ ಬಳಕೆಯಾಗುತ್ತಿದೆ ಅನ್ನುವ ಪ್ರತಿಯೊಂದು ವಿವರವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾಗಿ ಯುವಕರು ಮುತುವರ್ಜಿಯಿಂದ ಅಭಿಯಾನಗಳಲ್ಲಿ ಭಾಗಿಯಾಗಲು ಉತ್ಸುಕರಾಗುತ್ತಿದ್ದಾರೆ.

ಉದ್ಯಮಿಗಳಾದ ಮಕ್ಕಳು

ಇಶಿತಾರ ತಂದೆ ಉದ್ಯೋಗ ನಡೆಸುತ್ತಿದ್ದಾಗ ಅವರ ತಾಯಿ ಗೃಹಿಣಿಯಾಗಿ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಇನ್ನೊಂದು ಕಡೆ ಇಶಿತಾರ ದೊಡ್ಡಣ್ಣ ವರುಣ್ ಆನಂದ್ ಉದ್ಯಮಿಯಾಗಿ ಕೆಲಸ ಆರಂಭಿಸಿದಾಗ ಇಶಿತಾರಿಗೆ ಉದ್ಯಮ ಕ್ಷೇತ್ರದ ಪ್ರಾಥಮಿಕ ಜ್ಞಾನವೂ ಇರಲಿಲ್ಲ. ಆದರೆ ಈಗ ಸ್ವತಃ ಉದ್ಯಮಿಯಾಗಿರುವ ಇಶಿತಾರ ಅಣ್ಣ ಅವರ ಬಹುತೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದಾರೆ. ಅಂದ ಹಾಗೆ ವರುಣ್ ಹೆಲ್ತ್ ಕೇರ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಮಹಿಳಾ ಉದ್ಯಮಿಯಾಗಿ ಅನುಭವ

ಯಾವುದೇ ಸಂಸ್ಥೆಯನ್ನು ಆರಂಭಿಸಲು ಯೋಚಿಸುವ ಮಹಿಳಾ ಉದ್ಯಮಿಗಳಿಗೆ ಪೂರಕವಾದ ವಾತಾವರಣ ಇರಲಿಲ್ಲ. ಜೊತೆಗೆ ಸಾಕಷ್ಟು ಆಂತರಿಕ ಸಂಘರ್ಷಗಳು ಹಾಗೂ ಕೇವಲ ಮಹಿಳೆ ಅನ್ನುವ ಕಾರಣಕ್ಕೆ ಅವರ ಪ್ರಯತ್ನವನ್ನು ಹಗುರವಾಗಿ ನೋಡಿದವರೂ ಇದ್ದರು. ಇಶಿತಾ ಹೇಳುವಂತೆ ಉದ್ಯಮ ವಲಯದಲ್ಲಿ ಈಗಾಗಲೇ ಸಾಕಷ್ಟು ಮಹಿಳಾ ಉದ್ಯಮಿಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ಕಾರ್ಯನಿರತರಾಗಿದ್ದರು. ಆದರೆ ಇದು ಇಶಿತಾಗೆ ಮೊದಲು ತಿಳಿದಿರಲಿಲ್ಲ. ಒಂದು ನಿರ್ದಿಷ್ಟ ಹಂತದವರೆಗೆ ಕಠಿಣ ಪರಿಶ್ರಮದಿಂದ ಕೆಲಸ ಮಾಡಿ ಬಳಿಕ ಹಿಂದೆ ಸರಿಯುವ ಮಹಿಳೆಯರನ್ನು ಇಶಿತಾ ಗಮನಿಸಿದ್ದರು. ಆದರೆ ಇಶಿತಾ ಎದುರಿಸಿದ ಸವಾಲು ಬೇರೆಯದೇ ಆಗಿತ್ತು. ಮಹಿಳೆಯೂ ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳಬಲ್ಲಳು ಎಂಬುದನ್ನು ಟೆಕ್ಕಿಗಳಿಗೆ ಅರ್ಥ ಮಾಡಿಸುವುದು ಬಹಳ ಸವಾಲಿನ ಕೆಲಸವಾಗಿತ್ತು. ಪುರುಷನೇ ಆಗಲಿ, ಮಹಿಳೆಯೇ ಆಗಲಿ, ಉದ್ಯಮ ಕ್ಷೇತ್ರದಲ್ಲಿ ನಿರೀಕ್ಷಿತ ಫಲಿತಾಂಶ ಗಳಿಸುವುದಷ್ಟೇ ಮುಖ್ಯವಾಗಿರುತ್ತದೆ ಅನ್ನುವುದು ಇಶಿತಾರ ಅಭಿಪ್ರಾಯ.

ಉದ್ಯಮ ಕ್ಷೇತ್ರದಲ್ಲಿ ನಂಬಿಕೆಯಿಟ್ಟುಕೊಂಡ ವ್ಯಕ್ತಿಗಳು

ಬಿಟ್ ಗೀವಿಂಗ್ ಕೆಲಸಗಳ ಜೊತೆ ಇಶಿತಾ ಲೀನ್ ಇನ್ ಫೌಂಡೇಶನ್ ಅನ್ನುವ ಆನ್‌ಲೈನ್ ಲಾಭಗಳಿಕೆ ಇಲ್ಲದ ಹಾಗೂ ಮಹತ್ವಾಕಾಂಕ್ಷಿ ಮಹಿಳಾ ಸಾಧಕಿಯರಿಗೆ ನೆರವು ನೀಡುವ ಸಮುದಾಯವೊಂದರಲ್ಲಿ ಸಕ್ರಿಯರಾಗಿದ್ದಾರೆ. ಸದ್ಯದಲ್ಲೇ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆಯುವ ಮಹಿಳಾ ಉದ್ಯಮಿಗಳ ಕಾರ್ಯಾಗಾರದಲ್ಲಿ ಭಾರತದ ಮಹಿಳಾ ಉದ್ಯಮಿಗಳನ್ನು ಇಶಿತಾ ಪ್ರತಿನಿಧಿಸಲಿದ್ದಾರೆ. ಸುಮಾರು 50 ಸಂಸ್ಥೆಗಳ ಮಹಿಳಾ ಉದ್ಯಮಿಗಳು ಇದರಲ್ಲಿ ಭಾಗವಹಿಸಲಿದ್ದು, ತಮ್ಮ ಸಂಸ್ಥೆ ಕಟ್ಟುವಲ್ಲಿನ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

ಇಶಿತಾ ಇತ್ತೀಚೆಗಷ್ಟೇ ಲೀನ್ ಇನ್ ಫೌಂಡೇಶನ್‌ಗೆ ಸಂಬಂಧಿಸಿದಂತೆ ಭೇಟಿ ಮಾಡಿದ ಶೆರಿಲ್ ಸ್ಯಾಂಡ್‌ಬರ್ಗ್ ಅನ್ನುವ ಮಹಿಳೆಯಿಂದ ಸಾಕಷ್ಟು ಪ್ರಭಾವಿತರಾಗಿದ್ದಾರೆ. ಜೊತೆಗೆ ಅವರ ಅಣ್ಣ ಹಾಗೂ ಅವರ ಈ ಉದ್ಯಮ ಸಂಘರ್ಷದಲ್ಲಿ ಹೆಜ್ಜೆ ಹೆಜ್ಜೆಗೂ ನೆರವಾದ ವರುಣ್‌ರ ಸಹಕಾರವನ್ನು ನೆನೆಸಿಕೊಳ್ಳುತ್ತಾರೆ ಇಶಿತಾ.