1 ಉತ್ಪನ್ನ ಮಾರಾಟವಾದ್ರೆ 10 ಗಿಡ ನೆಡುವ ಕಂಪನಿ- ಪರಿಸರ ಜಾಗೃತಿ ಮೂಡಿಸುವ ಚಿಕ್ಕ ಪ್ರಯತ್ನ

ಟೀಮ್​ ವೈ.ಎಸ್​. ಕನ್ನಡ

1 ಉತ್ಪನ್ನ ಮಾರಾಟವಾದ್ರೆ 10 ಗಿಡ ನೆಡುವ ಕಂಪನಿ- ಪರಿಸರ ಜಾಗೃತಿ ಮೂಡಿಸುವ ಚಿಕ್ಕ ಪ್ರಯತ್ನ

Thursday April 06, 2017,

2 min Read

ಪರಿಸರ ಸಂರಕ್ಷಣೆ ಬಗ್ಗೆ ಮನುಕುಲ ಯೋಚನೆ ಮಾಡುವುದನ್ನು ಕೂಡ ಬಿಟ್ಟುಟ್ಟಿದೆ. ಪರಿಸರದಲ್ಲಿನ ಏರುಪೇರು ಸಾಕಷ್ಟು ತೊಂದರೆಗಳನ್ನು ಉಂಟು ಮಾಡುತ್ತಿದೆ. ಹೆಚ್ಚಾಗುತ್ತಿರುವ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಮತ್ತು ಕಡಿಮೆ ಆಗುತ್ತಿರುವ ಆಮ್ಲಜನಕದ ಪ್ರಮಾಣ ಸಾಕಷ್ಟು ತೊಂದರೆಗಳಿಗೆ ಕಾರಣವಾಗುತ್ತಿದೆ. ಕಾರ್ಬನ್ ಎಮಿಷನ್ ಅನ್ನು ಕಂಟ್ರೋಲ್ ಮಾಡುವ ಯೋಚನೆ ಇನ್ನೂ ಸರಿಯಾಗಿ ಕಾರ್ಯರೂಪಕ್ಕೆ ಬಂದಿಲ್ಲ. ಕೈಗಾರಿಕಾ ಕ್ರಾಂತಿಯ ಬಳಿಕ ಮಾನವ ಪರಿಸರವನ್ನು ಹೆಚ್ಚು ಹಾಳು ಮಾಡುತ್ತಿದ್ದಾನೆ. ಪರಿಸರಕ್ಕೆ ಹಾನಿಯಾಗುವಂತಹ ಕಾರ್ಯಗಳು ಹೆಚ್ಚಾಗಿ ನಡೆಯುತ್ತಿವೆ. ಕಳೆದ 3 ಮಿಲಿಯನ್ ವರ್ಷಗಳಲ್ಲೇ ಕಂಡು ಕೇಳರಿಯದಂತಹ ಬದಲಾವಣೆ ಪರಿಸರದಲ್ಲಾಗಿದೆ. ಇದು ಅಪಾಯಕಾರಿ ಮಟ್ಟಕ್ಕೆ ಬಂದು ತಲುಪಿದೆ. ಪರಿಸರ ಮಾಲಿನ್ಯ ಅಪಾಯದ ಮಟ್ಟ ತಲುಪಿದ್ರೂ ಮನುಕುಲ ಎಚ್ಚೆತ್ತುಕೊಂಡಿಲ್ಲ. ಪರಿಸರದಲ್ಲಿನ ಸಮತೋಲನ ದಿನದಿಂದ ದಿನಕ್ಕೆ ಹಾಳಾಗುತ್ತಿದೆ.

image


"ವಾವ್ ಸೈನ್ಸ್" ಪ್ರಕಾರ ಅಮೆರಿಕಾದ ಪ್ರತಿಯೊಬ್ಬ ವ್ಯಕ್ತಿ ಕೂಡ ಸುಮಾರು 20 ಮೆಟ್ರಿಕ್ ಟನ್ ಕಾರ್ಬನ್ ಎಮಿಷನ್​ಗೆ ಕಾರಣನಾಗಿದ್ದಾನೆ. ಇದು ಪರಿಸರ ಸಮತೋಲನದಲ್ಲಿ ಸಾಕಷ್ಟು ತೊಂದರೆಯುಂಟು ಮಾಡುವಂತೆ ಮಾಡಿದೆ. ಈ ಮಧ್ಯೆ ಕೆಲವೊಂದು ಕಂಪನಿಗಳು ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುತ್ತಿದೆ. "ಟ್ರೂವುಡ್"​ನಂತಹ ಕಂಪನಿಗಳು ಪರಿಸರ ಸಂರಕ್ಷಣೆಗೆ ತನ್ನ ಕೈಲಾದ ಸೇವೆ ಮಾಡುತ್ತಿದೆ. ಪರಿಸರ ಸಂರಕ್ಷಣೆಯ ಕುರಿತು ತನ್ನ ಗ್ರಾಹಕರಿಗೂ ಈ ಕಂಪನಿ ಜ್ಞಾನ ಮೂಡಿಸುತ್ತಿದೆ. ಈ ಮೂಲಕ ಪರಿಸರ ಜಾಗೃತಿಯನ್ನು ಎಲ್ಲರಲ್ಲೂ ಮೂಡಿಸುವ ಪ್ರಯತ್ನ ಮಾಡುತ್ತಿದೆ.

ಇದನ್ನು ಓದಿ: ಭಾರತದ ವಾರೆನ್ ಬಫೆಟ್ ಕಥೆ ಗೊತ್ತಾ..? ಅಂಬಾನಿ ಸಂಪತ್ತಿಗೆ ಸವಾಲೆಸೆದ “ಧಮನಿ”..!

"ಟ್ರೂವುಡ್" 2016ರಲ್ಲಿ ತನ್ನ ಪಯಣವನ್ನು ಆರಂಭಿಸಿತ್ತು. ಹೋಮ್ ಮೇಡ್ ವಾಚ್ ಮತ್ತು ಫ್ಯಾಷನ್ ಸಂಬಂಧಿತ ವಸ್ತುಗಳನ್ನು ಇದು ಮಾರಾಟ ಮಾಡುತ್ತಿದೆ. ಬಾಳಿಕೆ ಮತ್ತು ಫ್ಯಾಷನ್ ಅನ್ನು ಗಮನದಲ್ಲಿಟ್ಟುಕೊಂಡು ಈ ಕಂಪನಿ ವಾಚು ತಯಾರಿಸುತ್ತಿದೆ. ತನ್ನ ಉದ್ಯಮದ ಜೊತೆಗೆ “ಟ್ರೀಸ್ ಫಾರ್ ದ ಫ್ಯೂಚರ್” ಅನ್ನುವ ಎನ್​ಜಿಒ ಜೊತೆ ಕೈ ಜೋಡಿಸಿರುವ "ಟ್ರೂವುಡ್" ತನ್ನಲ್ಲಿ ಉತ್ಪಾದನೆಯಾದ ಪ್ರತಿಯೊಂದು ವಸ್ತು ಮಾರಾಟವಾದಾಗ ಹತ್ತು ಗಿಡಗಳನ್ನು ನೆಟ್ಟು ಗ್ರಾಹಕರಲ್ಲಿ ಪರಿಸರ ಜಾಗೃತಿ ಮೂಡಿಸಲು ನೆರವಾಗುತ್ತಿದೆ.

ಟ್ರೂವುಡ್ “ ನೀವು ಪಡೆದುಕೊಳ್ಳುವುದಕ್ಕಿಂತ ಕೊಂಚ ಹೆಚ್ಚು ನೀಡಿ ” ಅನ್ನುವ ಧ್ಯೇಯವವನ್ನು ಹೊಂದಿದೆ. ಕಂಪನಿ ಆರಂಭವಾಗಿ ಕೇವಲ ಒಂದು ವರ್ಷ ಮಾತ್ರ ಕಳೆದಿದ್ದರೂ ಸುಮಾರು 75,000 ಮರಗಳನ್ನು ನೆಟ್ಟಿದೆ.

ವಿಶ್ವದಲ್ಲಿ ಹಲವು ಕಂಪನಿಗಳು ಕೇವಲ ಲಾಭದ ಲೆಕ್ಕಾಚಾರವನ್ನಷ್ಟೇ ಮಾಡಿಕೊಂಡು ಉದ್ಯಮ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿವೆ. ಪರಿಸರದ ಬಗ್ಗೆ ಕಾಳಜಿ ಮರೆತು ಬಿಟ್ಟಿವೆ. ಇದರ ಮಧ್ಯೆ "ಟ್ರೂವುಡ್" ಸಾಮಾಜಿಕ ಮತ್ತು ಪರಿಸರ ಕಳಕಳಿ ಎಲ್ಲಾ ಕಂಪನಿಗಳಿಗೂ ಮಾದರಿ. ವಿಶ್ವದ ಎಲ್ಲಾ ಕಂಪನಿಗಳು ಪರಿಸರದ ಬಗ್ಗೆ ಶೇಕಡಾ 1ರಷ್ಟು ಕಾಳಜಿ ವಹಿಸಿದ್ರೂ ಸಾಕಷ್ಟು ಬದಲಾವಣೆ ಸಾಧ್ಯ.

ಇದನ್ನು ಓದಿ:

1. ಆಡುವ ವಯಸ್ಸಿನಲ್ಲಿ ಉದ್ಯಮದ ಕನಸು- 13ನೇ ವರ್ಷದಲ್ಲೇ ಸಿಇಒ ಆಗಿ ದಾಖಲೆ ಬರೆದ ಯುವ ಉದ್ಯಮಿ

2. ನವರಸ ಸಾಧನಗಳ ಪರಿಣಿತ- ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿರುವ ಕನ್ನಡಿಗ

3. 500 ರೂಪಾಯಿ ಸಂಬಳದಿಂದ ಆರಂಭವಾದ ಜೀವನ- ಕೋಟಿ ದಾಟಿದೆ ತಿಂಗಳ ಆದಾಯ