ಟೆಕ್​​​​ಫಾರ್ ಬಿಲಿಯನ್ ಶ್ರದ್ಧಾ ಶರ್ಮಾ-ಇಲ್ಲದ್ದಕ್ಕಾಗಿ ಅರಸಿ ಹೊರಟವರ ಯಶೋಗಾಥೆ

ಟೀಮ್​​ ವೈ.ಎಸ್​​​.

0

ಟೆಕ್ ಫಾರ್ ಬಿಲಿಯನ್ ತಂತ್ರಜ್ಞಾನ ಎಂದರೇನು? ಅದನ್ನು ಸಾಧಿಸಲು ನಾವೇನು ಮಾಡ್ತಿದ್ದೇವೆ..? ಅದು ಹೇಗೆ ಸಾಧ್ಯ? ಹೀಗೆ ಪ್ರಶ್ನೆಗಳ ಜೊತೆಗೆ ಉತ್ತರವೂ ಸ್ಫುಟವಾಗಿ, ಆಕ್ರಮಣಕಾರಿ ಮಾತುಗಳ ಮೂಲಕ ಹೊರಹೊಮ್ಮುತ್ತಿದ್ರೆ ಪ್ರೇಕ್ಷಕರೆಲ್ಲ ತಲೆದೂಗುತ್ತಿದ್ರು. ತಮ್ಮ ತಮ್ಮಲ್ಲೇ ಅದರ ಬಗ್ಗೆ ಚರ್ಚೆ ನಡೆಸ್ತಾ ಇದ್ರು.

ನಮ್ಮ ಸುತ್ತ ಮುತ್ತ ಇರುವ ಎಲ್ಲರ ಕಣ್ಣುಗಳಲ್ಲೂ ಕನಸಿದೆ. ಕೆಲವರು ಮಲ್ಟಿ ಮಿಲಿಯನ್ ಡಾಲರ್ ಮೊತ್ತದ ಸಂಸ್ಥೆ ಕಟ್ಟುವ ಕನಸು ಕಂಡ್ರೆ ಇನ್ನು ಕೆಲವರು ಹೂಡಿಕೆದಾರರ ಗಮನ ಸೆಳೆಯುವ ಕಸರತ್ತು ನಡೆಸ್ತಿದ್ದಾರೆ. ಆದ್ರೆ ಎಲ್ಲರ ಕನಸು ಕೂಡ ಯಶಸ್ಸನ್ನೇ ಆಧರಿಸಿದೆ. ಈ ಕ್ರೂರ ಎಳೆದಾಟದಲ್ಲಿ ನಮ್ಮ ಪರಿಶ್ರಮವನ್ನು ಶ್ಲಾಘಿಸುವುದನ್ನೇ ನಾವು ಮರೆತುಬಿಟ್ಟಿದ್ದೀವಾ? ಇದು ಟೆಕ್‍ಸ್ಪಾರ್ಕ್ಸ್​​​ - 2015ರ ಕೊನೆಯ ದಿನ ಪ್ರೇಕ್ಷಕರತ್ತ ಯುವರ್ ಸ್ಟೋರಿ ಡಾಟ್ ಕಾಮ್ ಸಂಸ್ಥಾಪಕಿ ಶ್ರದ್ಧಾ ಶರ್ಮಾ ಎಸೆದ ಪ್ರಶ್ನೆ.

ಒಬ್ಬ ಉದ್ಯಮಿಯಾಗಿ ನಮ್ಮಲ್ಲಿ ನಮಗೆ ನಂಬಿಕೆ ಇರಬೇಕು. ಆದ್ರೆ ವಾಸ್ತವ ಹಾಗಿಲ್ಲ. ಈ ಬಗ್ಗೆ ಆಳವಾಗಿ ಯೋಚಿಸಿದಾಗ ಮಾತ್ರ ನಮ್ಮ ಬಗ್ಗೆ ನಾವು ವಿಶ್ವಾಸವನ್ನಿಟ್ಟಿಲ್ಲ ಅನ್ನೋದು ಅರಿವಾಗುತ್ತೆ. ಜೊತೆಗೆ ಯಾರಾದರೂ ಇದ್ದಾಗ ಕಠಿಣ ಸಮಯವನ್ನು ಎದುರಿಸೋದು ಬಹಳ ಸುಲಭ. ಆದ್ರೆ ನಿಮ್ಮ ಬೆನ್ನಹಿಂದೆ, ನಿಮ್ಮ ಬೆಂಬಲಕ್ಕೆ ಯಾರೂ ಇಲ್ಲದ ಸಂದರ್ಭದಲ್ಲಿ ಸಾವಿರಾರು ಜನರನ್ನು ಏಕಾಂಗಿಯಾಗಿ ಎದುರಿಸುವುದು ನಿಜಕ್ಕೂ ಕಷ್ಟಕರ ಅನ್ನೋದನ್ನು ಶ್ರದ್ಧಾ ಒತ್ತಿ ಹೇಳಿದ್ದಾರೆ.

ನಮ್ಮನ್ನು ನಾವು ಪ್ರೀತಿಸಿದ್ರೆ, ನಮ್ಮನ್ನು ನಾವು ಗೌರವಿಸಿದ್ರೆ ಮಾತ್ರ ನಮ್ಮ ಸುತ್ತಲೂ ಇರುವವರನ್ನು ನಾವು ಪ್ರೀತಿಸಬಹುದು ಅನ್ನೋದು ಅವರ ಅಭಿಪ್ರಾಯ. ಯುವರ್‍ಸ್ಟೋರಿ ತಂಡ ಕೂಡ ಮಾಡಿದ್ದು ಇದನ್ನೇ, ನಮ್ಮನ್ನು ನಾವು ಪ್ರೀತಿಸಿ, ವಿಶ್ವಾಸವಿಟ್ಟ ಫಲವಾಗಿಯೇ ಯುವರ್‍ಸ್ಟೋರಿ ಡಾಟ್ ಕಾಮ್ ಹುಟ್ಟು ಹಾಕಿದ್ದೇವೆ ಅಂತಾ ಶ್ರದ್ಧಾ ಹೆಮ್ಮೆಯಿಂದ ಹೇಳಿಕೊಳ್ತಾರೆ.

ಆದ್ರೆ ಯಶಸ್ಸು ಗಳಿಸಲು ಇದೊಂದೇ ಮಾರ್ಗವೇ ಅನ್ನೋ ಪ್ರಶ್ನೆ ಬರೀ ಉದ್ಯಮಿಗಳಿಗೆ ಮಾತ್ರವಲ್ಲ ಹೂಡಿಕೆದಾರರಲ್ಲೂ ಮೂಡಬಹುದು. ಆದ್ರೆ ಶದ್ಧಾ ಅವರ ಪ್ರಕಾರ ಯಶಸ್ಸು ಅನ್ನೋದು, ಅವರು ಹೇಗೆ ಅಸಾಮಾನ್ಯರು ಅನ್ನೋದನ್ನು ಜನರಿಗೆ ತಿಳಿಸುವುದು ಮತ್ತು ಪ್ರೋತ್ಸಾಹಿಸುವುದರಲ್ಲಿದೆ. ತಾವು ಯುವರ್‍ಸ್ಟೋರಿ ಡಾಟ್ ಕಾಮ್ ಅನ್ನು ಕಟ್ಟಿ ಬೆಳೆಸಿದ ಬಗೆಯನ್ನು ಕೂಡ ಅವರು ಬಿಚ್ಚಿಟ್ಟಿದ್ದಾರೆ.

ಶ್ರದ್ಧಾ ಶರ್ಮಾ ತುಂಬಾ ತಡವಾಗಿಯೇ ಟ್ವಿಟ್ಟರ್ ಅಕೌಂಟ್ ತೆರೆದಿದ್ರು. ಎಲ್ಲರೂ ತಮ್ಮ ಟ್ವೀಟ್‍ಗೆ ರೀಟ್ವೀಟ್ ಮಾಡ್ಬೇಕು ಅನ್ನೋ ಆಸೆ ಅವರಿಗಿತ್ತು. ಹಾಗಾಗಿಯೇ ಎಲ್ಲರಿಗೂ ಟ್ವೀಟ್ ಟ್ಯಾಗ್ ಮಾಡ್ತಾ ಇದ್ರು. ಆದ್ರೆ ಯಾರೂ ಹೆಚ್ಚಾಗಿ ರೀಟ್ವೀಟ್ ಮಾಡದೇ ಇರೋದು ಅವರಿಗೆ ಅಚ್ಚರಿ ಮೂಡಿಸಿತ್ತು. ಚಿಕ್ಕಪುಟ್ಟ ಒಳ್ಳೆಯ ಕೆಲಸವನ್ನೂ ಜನ ಯಾಕೆ ಮೆಚ್ಚಿಕೊಳ್ಳೋದಿಲ್ಲ ಅನ್ನೋ ಪ್ರಶ್ನೆ ಕಾಡ್ತಾ ಇತ್ತು. ಹಾಗಂತ ಅವರೇನೂ ಸುಮ್ಮನಾಗ್ಲಿಲ್ಲ. ಟ್ವೀಟ್ ಮಾಡೋದನ್ನು ಮುಂದುವರಿಸಿದ್ರು. ಇದೇ ಅವರಿಗೆ ಖುಷಿ ಕೊಡ್ತಾ ಇತ್ತು. ಪ್ರೀತಿ ಹಂಚುವ ಕೆಲಸಕ್ಕೆ ಹಿಂಜರಿಕೆ ಯಾಕೆ ಅನ್ನೋದು ಅವರ ಸ್ಪಷ್ಟ ನಿಲುವಾಗಿತ್ತು. ಇದರ ಫಲವಾಗಿಯೇ ಇವತ್ತು ತಮ್ಮೊಂದಿಗೆ ಎಲ್ಲರೂ ವಿಶ್ವಾಸದ ಸಂಬಂಧ ಇಟ್ಟಿದ್ದಾರೆ ಎನ್ನುತ್ತಾರೆ ಶ್ರದ್ಧಾ.

ಜನರು ತೀರ್ಪು ಹೇಳೋದರಲ್ಲಿ ನಿಸ್ಸೀಮರು. ಆದ್ರೆ ಒಂದು ಕಂಪನಿ ಮಲ್ಟಿ ಬಿಲಿಯನ್ ಘಟಕ ಆಗುತ್ತೋ? ಇಲ್ವೋ? ಅನ್ನೋದನ್ನು ಹೇಳಲು ನಾವ್ಯಾರು ಅನ್ನೋದು ಅವರ ನೇರ ಪ್ರಶ್ನೆ. ಬೇರೆಯವರಿಗೆ ಸಹಾಯ ಮಾಡಿದ್ರೆ, ಒಂದೊಳ್ಳೆ ಸಂದೇಶ ಸಾರಿದ್ರೆ ಅದು ನಿಮಗೆ ಮತ್ತು ನಿಮ್ಮ ಸುತ್ತಮುತ್ತ ಇರುವವರಿಗೆ ಖುಷಿ ಕೊಡುತ್ತದೆ. ಪ್ರೀತಿಯನ್ನು ಪಸರಿಸುವುದರ ಜೊತೆಗೆ ಸಹಾಯ ಮಾಡುವ ಮನೋಭವಾ ಇದ್ರೆ ಅದೇ ನಮಗೆ ಧನಾತ್ಮಕ ಶಕ್ತಿಯಿದ್ದಂತೆ ಎನ್ನುವ ಶ್ರದ್ಧಾ ಈ ಮಾತಿಗೆ ಅವರನ್ನೇ ಉದಾಹರಿಸ್ತಾರೆ. ತಮ್ಮ ಮುಖ ಫಳಫಳನೆ ಮಿಂಚ್ತಾ ಇರೋದಕ್ಕೆ ಕಾರಣ ಮೇಕಪ್ ಅಲ್ಲ ಖುಷಿ ಎಂದು ಖುಷಿಯಾಗಿ ಹೇಳಿಕೊಳ್ತಾರೆ.

ನೀವು ಬದುಕಲು ಸಾಧ್ಯವಿಲ್ಲ ಎಂದವರಿಗೆ ಮುತ್ತು ಕೊಡಿ, ಅನ್ನೋ ಶ್ರದ್ಧಾರ ಸಲಹೆಗಂತೂ ಸಭಿಕರಿಂದ ಚಪ್ಪಾಳೆ ಮಾರ್ದನಿಸಿತ್ತು. ಶ್ರದ್ಧಾ ತಮ್ಮ ಯುವರ್‍ಸ್ಟೋರಿ ಡಾಟ್ ಕಾಮ್ ಆರಂಭಕ್ಕೂ ಮುನ್ನ ಇಂಡಸ್ಟ್ರಿಯ ತಜ್ಞರೊಬ್ಬರ ಜೊತೆ ಮಾತನಾಡಿದ್ರು. ಉದ್ಯಮಿಗಳ ಬಗ್ಗೆ ಬರೆಯಲು ಹೊರಟಿರೋದಾಗಿ ಹೇಳಿಕೊಂಡಿದ್ರು. ಅದಕ್ಕೆ ಪ್ರತಿಕ್ರಿಯಿಸಿದ ಅವರು, ಉದ್ಯಮಿಗಳ ಬಗ್ಗೆ ಬರೆಯುತ್ತೀಯಾ? ಇದು ಏಳು ದಿನವೂ ನಡೆಯೋದಿಲ್ಲ ಎಂದುಬಿಟ್ರು. ಇದನ್ನು ಕೇಳಿ ಕಂಗೆಟ್ಟಿದ್ದ ಶ್ರದ್ಧಾ ಕಣ್ಣೀರು ಹಾಕಿದ್ರು. ತಮ್ಮ ತಂದೆಯ ಬಳಿ ನಡೆದಿದ್ದನ್ನೆಲ್ಲ ಹೇಳಿಕೊಂಡಿದ್ರು. ಆದ್ರೆ ಯುವರ್‍ಸ್ಟೋರಿ ಡಾಟ್‍ಕಾಮ್ ಏಳು ದಿನಗಳಲ್ಲಿ ಮುಚ್ಚಿ ಹೋಗಿಲ್ಲ. ಸಂಸ್ಥೆ 7 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದೆ. ಉದ್ಯಮಿಗಳ ಬದುಕಿನ ಕಹಾನಿಯನ್ನು 10 ಭಾಷೆಗಳಲ್ಲಿ ಜನರ ಮುಂದಿಡುತ್ತಿದೆ.

ಟೆಕ್ ಫಾರ್ ಬಿಲಿಯನ್...

ಯಾವುದು ನಮ್ಮ ಬಳಿ ಇಲ್ವೋ, ಯಾವುದನ್ನು ನಿರಾಕರಿಸಲಾಗಿದೆಯೋ, ನಮ್ಮಲ್ಲೇನು ಕೊರತೆ ಇದೆ ಎಂಬ ಟೀಕೆಗಳಿರುತ್ತವೆಯೇ ಅದೇ ನಮ್ಮ ಯಶಸ್ಸಿಗೆ ದಾರಿ. ಅದೇ ನಾವು ಬಿಲಿಯನೇರ್ ಆಗಲು ಮೂಲ ಅನ್ನೋದು ಶ್ರದ್ಧಾ ಶರ್ಮಾರ ಅನುಭವದ ಮಾತು. ನಿಮ್ಮ ಯಶಸ್ಸಿನಲ್ಲೇ ನಮ್ಮ ಯಶಸ್ಸು ಕೂಡ ಇದೆ ಅನ್ನೋದು ಯುವ ಉದ್ಯಮಿಗಳಿಗೆ ಶ್ರದ್ಧಾ ಶರ್ಮಾ ನೀಡುವ ವಾಗ್ದಾನ.

Related Stories