ಹೆಂಗಳೆಯರ ಪಾಲಿನ ಆತ್ಮರಕ್ಷಕ ಗುರು

ಟೀಮ್​ ವೈ.ಎಸ್​. ಕನ್ನಡ

1

ಮಹಿಳೆಯರಿಗೆ ಆಗ್ಲೀ ಪುರುಷರಿಗೆ ಆಗ್ಲಿ ತಮ್ಮನ್ನ ತಾವು ರಕ್ಷಿಸಿಕೊಳ್ಳೋದು ತುಂಬಾ ಮುಖ್ಯವಾಗುತ್ತೆ. ಒಬ್ಬರೇ ಎಲ್ಲಾದ್ರು ಹೋಗುವಾಗ, ಅಥವಾ ಎಲ್ಲಾದ್ರೂ ಏನಾದ್ರೂ ಜಗಳವಾದಾಗ ನಮ್ಮನ್ನ ನಾವು ರಕ್ಷಿಸಿಕೊಳ್ಳಬೇಕು. ನಾವು ಸಭಲರು ಅಂದ್ರೆ ಯಾರೂ ನಮ್ಮ ತಂಟೆಗೆ ಬರೋದಿಲ್ಲ. ಇದನ್ನು ಮನಸಲ್ಲಿಟ್ಟುಕೊಂಡ ಬಹುಪಾಲು ಪೋಷಕರು ತಮ್ಮ ಗಂಡುಮಕ್ಕಳಿಗೆ ಕುಂಗ್ಫು, ಕರಾಟೆ, ಮಾರ್ಷಲ್ ಆರ್ಟ್ಸ್​ನಂತಹ ವಿದ್ಯೆಗಳನ್ನು ಕಲಿಸಿ ಅವ್ರನ್ನ ಸಭಲರನ್ನಾಗಿ ಮಾಡ್ತಾರೆ. ಆದ್ರೆ ಕೆಲವರಷ್ಟೇ ತಮ್ಮ ಹೆಣ್ಣುಮಕ್ಕಳುಕೂಡ ಅಂಥ ಸಭಲರ ಸಾಲಲ್ಲಿ ಸೇರಲಿ ಅಂತ ಯೋಚಿಸ್ತಾರೆ. ಆದ್ರೆ ಪ್ರತಿಯೊಬ್ಬ ಹೆಣ್ಣುಮಗಳು ತನ್ನನ್ನ ತಾನು ರಕ್ಷಿಸಿಕೊಳ್ಳಬೇಕು ಅನ್ನೋ ಮನಸ್ಸಿಂದ ಇಲ್ಲೊಬ್ಬರು ಮಹಾನುಭಾವಪ್ರತಿ ಹೆಣ್ಣುಮಕ್ಕಳು ಆತ್ಮರಕ್ಷಣೆಯ ಕಲೆಯನ್ನು ಕರಗತವಾಗಿಸಿಕೊಳ್ಳಬೇಕು ಅಂತ ಪಣತೊಟ್ಟಿದ್ದಾರೆ. ತಮಿಳುನಾಡಿನ ಈ ಗುರು ಅದಕ್ಕಾಗಿ ಉಚಿತವಾಗಿ ಹೆಣ್ಣುಮಕ್ಕಳಿಗೆ ಕರಾಟೆ ತರಬೇತಿ ತರಗತಿಗಳನ್ನು ನಡೆಸುತ್ತಿದ್ದಾರೆ.

ದೆಹಲಿಯಲ್ಲಿ ನಡೆದ ನಿರ್ಭಯ ಪ್ರಕರಣದ ರೀತಿ ಮತ್ತೊಂದು ಪ್ರಕರಣ ಆಗಬಾರದು ಅನ್ನೋದು ನಾಗರಾಜ್‍ರ ಆಸೆ. ಇವ್ರು ಮಾಡುತ್ತಿರೋ ಸೇವೆಯಿಂದ ಅದೆಷ್ಟೋ ಹೆಣ್ಣುಮಕ್ಕಳು ತಮ್ಮನ್ನ ರಕ್ಷಿಸಿಕೊಂಡ ಉದಾಹರಣೆಗಳಿವೆ. ಕೆಲವು ವರ್ಷಗಳ ಹಿಂದೆ ತಮಿಳುನಾಡು ಮಧುರೈನ ಬಟ್ಟೆ ಅಂಗಡಿಯೊಂದಕ್ಕೆ ನಾಗರಾಜ್ ಹೋಗಿದ್ರು, ದಂಪತಿ ಇಬ್ಬರು ಇವರನ್ನೇ ನೋಡುತ್ತಾ ಹತ್ತಿರ ಬಂದ್ರು, ಹೆಂಡತಿ ದೊಡ್ಡದೊಂದು ನಗೆ ಬೀರಿದ್ರೆ, ಗಂಡ ಇವ್ರ ಕೈಹಿಡಿದು ನಿಮ್ಮನ್ನ ಭೇಟಿ ಆಗೋದಕ್ಕೆ ಕಾಯ್ತಾಇದ್ದೆ ಅಂದ್ರು. ಹೆಂಡತಿ 1980ರ ತಮ್ಮ ಮೊದಲ ಕರಾಟೆ ಬ್ಯಾಚ್‍ನ ಸ್ಟೂಡೆಂಟ್ ಅಂತ ತಿಳಿದು ನಾಗರಾಜ್ ಖುಷಿಪಟ್ರು. ಆದ್ರೆ, ಆಕೆ ಗಂಡ ತಮ್ಮನ್ನ ಮೀಟ್ ಮಾಡೋದಕ್ಕೆ ಕಾಯ್ತಾ ಇದ್ದದ್ದು ಯಾಕೆ ಅನ್ನೋ ಗೊಂದಲ ಕಾಡ್ತು. ಎರಡೇ ನಿಮಿಷದಲ್ಲಿ ಅವ್ರ ಅನುಮಾನಕ್ಕೆ ತೆರೆ ಎಳೆದವರಂತೆ ಹೇಳಿದ್ದೇನು ಗೊತ್ತಾ? ಮದುವೆಯಾದ ಒಂದೇ ತಿಂಗಳಿಗೆ ನಮ್ಮ ನಡುವೆ ಜಗಳವಾಯ್ತು, ನಾನು ಹೆಂಡತಿಗೆ ಹೊಡೆಯೋದಕ್ಕೆ ಕೈ ಎತ್ತಿದೆ, ಆಕೆ ಸೆಲ್ಫ್ ಡಿಫೈನ್ ಟೆಕ್ನಿಕ್ ಬಳಸಿ, ನನ್ನ ಕೈ ತಿರುಗಿಸಿ ನನಗಿಂತ ಗಟ್ಟಿಗಿತ್ತಿ ಅನ್ನೋದನ್ನ ತೋರಿಸಿದ್ಳು. ಆಗಲೇ ಗೊತ್ತಾಗಿದ್ದು ಆಕೆ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್, ಆಕೆಯ ಗುರುಗಳು ನೀವೇ ಅನ್ನೋದು, ಅದೇ ಕೊನೆ ನಾನು ಆಕೆಯ ಬಗ್ಗೆ ಕೊಂಚ ಭಯದಲ್ಲೇ ಇದ್ದೇನೆ ಅನ್ನೋ ನಗುವಿನ ಮಾತುಗಳು ಅಂತ.

ಇದೊಂದೇ ಅಲ್ಲ. ಮತ್ತೊಂದು ಬಾರಿ ಚೆನ್ನೈನ ಸಿಟಿ ಬಸ್‍ಸ್ಯಾಂಡ್‍ನಲ್ಲಿ ಇವ್ರ ಇಬ್ಬರು ವಿದ್ಯಾರ್ಥಿನಿಯರು, ಪಿಕ್‍ಪಾಕೆಟ್ ಮಾಡುತ್ತಿದ್ದವರಿಗೆ ಕರಾಟೆ ಕರಾಮತ್ತಿನ ಸವಿ ತಿಳಿಸಿದ್ದಾರೆ. ತಮ್ಮಿಂದ ಕಲಿತ ವಿದ್ಯೆಯನ್ನು ಈ ರೀತಿ ವಿದ್ಯಾರ್ಥಿನಿಯರೂ ಹೆದರಿಕೆಯಿಲ್ಲದೆ ಬಳಸುತ್ತಿರೋದು ಅವ್ರಿಗೆ ಹೆವ್ಮ್ಮೆಯ ವಿಚಾರ ಅಂತ ಬೀಗುತ್ತಾರೆ  ನಾಗರಾಜ್. ಹಾಗಂತ ಇಲ್ಲಿ ಕಲಿಯೋದು ಕೇವಲ ಹೆಣ್ಣುಮಕ್ಕಳಷ್ಟೇ ಅಲ್ಲ, ಹುಡುಗರೂ ಇವ್ರ ಬಳಿ ಕರಾಟೆ ಪಟುಗಳಾಗಿ ಹೊರಹೊಮ್ಮಿದ್ದಾರೆ.

ಇದನ್ನು ಓದಿ: "ಕಾಮಿಡಿ ಕಿಲಾಡಿ" ಶಿವರಾಜ್ ಕೆ.ಆರ್.ಪೇಟೆ

ಟೇಕ್ವಾಂಡೋ ಕೋಚ್ ನಾಗರಾಜ್‍ರ ಬಳಿ ಕರಾಟೆ ಕಲಿತದ್ದು ಬೆರಳೆಣಿಕೆಯಷ್ಟು ಹುಡುಗಿಯರೇನಲ್ಲ. 1980ರಲ್ಲಿ ಶುರುವಾದ ಈ ತರಗತಿ, ನಾಲು ದಶಕಗಳಿಂದ ಸುಮಾರು 6 ಲಕ್ಷ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆಯ ಪಾಠ ಹೇಳಿಕೊಟ್ಟಿದೆ. ಹೆಣ್ಣು ಮಕ್ಕಳಿ ಆತ್ಮ ರಕ್ಷಣೆ, ಆತ್ಮಸ್ಥೈರ್ಯ, ಆತ್ಮ ಗೌರವಗಳನ್ನು ಕಲಿಸಿಕೊಟ್ಟ ಹೆಗ್ಗಳಿಕೆ, ರೆಕಾರ್ಡ್ ನಾಗರಾಜ್‍ರದ್ದು. 5 ವರ್ಷದಿಂದ 50 ವರ್ಷದೊಳಗಿನ ಲಕ್ಷಾಂತರ ಹೆಣ್ಣುಮಕ್ಕಳು ಈಗಲೂ ಇವರ ಬಳಿ ಕರಾಟೆ ಕಲಿಯುತ್ತಿದ್ದಾರೆ. ಮೊದಮೊದಲು ಸರ್ಕಾರಿ ಶಾಲಾ, ಕಾಲೇಜುಗಳ ಹೆಣ್ಣುಮಕ್ಕಳಿಗೆ ಸೀಮಿತವಾಗಿದ್ದ ಇವರ ಸೇವೆ ಈಗ ಮದುರೈ ಸೇರಿದಂತೆ ತಮಿಳುನಾಡಿನ ನಾನಾ ಭಾಗಗಳಿಗೆ ಹರಡಿದೆ.

ಚಿಕ್ಕಂದಿನಿಂದಲೇ ಕರಾಟೆ ಕಲಿಯೋಕೆ ಶುರುಮಾಡಿದ ನಾಗರಾಜ್ ಬ್ರೂಸ್ಲೀಯ ಕಟ್ಟಾ ಅನುಯಾಯಿ. ತಂದೆ ತಾಯಿಯ ಆಸೆಯಂತೆ ವೈದ್ಯನಾಗದ ನಾಗರಾಜ್ ಕರಾಟೆಯಲ್ಲಿ ಸಾಧನೆ ಆಡಬೇಕು ಅನ್ನೋದನ್ನೇ ಜೀವನದ ಗುರಿಯನ್ನಾಗಿಸಿಕೊಂಡ್ರು. ತಾವು ಕಲಿತದ್ದು ಆಯಿತು, ಈಗ ಗೊತ್ತಿರೋ ವಿದ್ಯೆಯನ್ನು ಧಾರೆ ಎರೆಯಬೇಕು. ಇವ್ರ ನಿಧಾರದಿಂದ ಈಗ ಮಧುರೈ ಒಂದರಲ್ಲೇ 42 ಜನ ಬಡ ವಿದ್ಯಾರ್ಥಿಗಳು ಬ್ಲಾಕ್‍ಬೆಲ್ಟ್ ಪಡೆದಿದ್ದಾರೆ. ಶ್ರೀಮಂತ ಪಂಗಡದ್ದು ಬೇರೆಯೇ ಇದೆ. ಕಲಿತವರಲ್ಲಿ ಅದೆಷ್ಟೋ ಜನ ಇವರೊಡನೆಯೇ ಕರಾಟೆ ಟ್ರೈನರ್ಸ್​ಗಳಾಗಿ ಕೆಲಸಮಾಡ್ತಿದ್ದಾರೆ. ದುಡ್ಡು ಕೊಟ್ಟು ಕಲಿಯುವವರಿಗೆ ಬೇರೆಕಡೆ ತರಗತಿಗಳನ್ನೂ ನಡೆಸಲಾಗುತ್ತದೆ. 2004ರಲ್ಲಿ ಮಧುರೈನಲ್ಲಿ ಟೇಕ್ವಾಂಡೋ ಸ್ಕೂಲ್‍ನ ಆಟಗಳಲ್ಲೊಂದಾಗಿ ರಾಜ್ಯಸರ್ಕಾರದಿಂದ ಘೋಷಣೆಯಾದಾಗ ನಾಗರಾಜ್ ವಿದ್ಯಾರ್ಥಿಗಳಿಗೆ ಉಚಿತ ತರಭೇತಿ ನೀಡಲಾರಂಭಿಸಿದ್ರು. ಆ ನಂತರ ದೊಡ್ಡ ಮೈದಾನದಲ್ಲಿ ನಡೆಯುತ್ತಿದ್ದ ಕರಾಟೆ ಕ್ಲಾಸ್‍ಗಳು ಸಾಕಷ್ಟು ಸ್ಕೂಲ್‍ಗಳಲ್ಲೂ ಆರಂಭವಾದ್ವು. ಕೆಲವು ಶಾಲೆಗಳಲ್ಲಿ ಕರಾಟೆ ಕಂಪಲ್ಸರಿ ಆಯ್ತು.ನಾಗರಾಜ್ ಮಾಡ್ತಿರೋ ಈ ಕಾರ್ಯಕ್ಕೆ ತಮಿಳುನಾಡು ಸರ್ಕಾರದಿಂದ ಸಾಕಷ್ಟು ಪ್ರಶಂಸನಾ ಪತ್ರಗಳು ಬಂದಿವೆ. ಅಷ್ಟೇಅಲ್ಲ, ನಾಗರಾಜ್‍ರ ಸಾಕಷ್ಟು ವಿದ್ಯಾರ್ಥಿಗಳು ಒಲಂಪಿಕ್ಸ್‍ನಲ್ಲೂ ಭಾಗವಹಿಸಿ ಅವ್ರಿಗೆ ಕೀರ್ತಿ ತಂದಿದ್ದಾರೆ. ಒಟ್ಟಿನಲ್ಲಿ ಕರಾಟೆ ಮಾಸ್ಟರ್​ ಅಂದ್ರೆ ಇವತ್ತು ನಾಗಾರಾಜ್​ ನೆನಪಿಗೆ ಬರುವಂತೆ ಆಗಿದೆ.

ಇದನ್ನು ಓದಿ:

1. ಬಾಯಲ್ಲಿ ನೀರೂರಿಸುವ ದೋಸೆ- ಘಮಘಮ ಪರಿಮಳ ಬೀರುವ ಸಾಂಬಾರ್-ಇದು ಮನೆ ಬಿಟ್ಟು ಓಡಿ ಹೋದ ಜಯರಾಮ್ ಕಥೆ..! 

2. ಕಲಿಯುವ ಹಠ, ಛಲ ಬಿಡಲಿಲ್ಲ- ಗಿನ್ನೆಸ್​ ದಾಖಲೆ ಬರೆದ ಕನ್ನಡ ನೃತ್ಯಗಾರ್ತಿ..!

3. "ಸಾಂಸ್ಕೃತಿಕ ನಗರಿಯಿಂದ ಸಾಗರದ ಸಂಗಮದವೆರೆಗೆ"

Related Stories

Stories by YourStory Kannada