'ಜನಸಾಮಾನ್ಯರಿಗಾಗಿ ಜನ್ಮತಳೆಯುವ ಉದ್ಯಮಗಳಿಗೆ ಸರ್ಕಾರದ ನೆರವು' - ರಾಜೀವ್ ಬನ್ಸಲ್ ಅಭಯ 

ಟೀಮ್ ವೈ.ಎಸ್.ಕನ್ನಡ 

0

ಸರ್ಕಾರ ಮತ್ತು ಅಧಿಕಾರಿಗಳು ಸಾರ್ವಜನಿಕರ ಜೊತೆ ಆರೋಗ್ಯಕರ ಚರ್ಚೆ ಮಾಡುತ್ತಿಲ್ಲ ಅಂದ್ಕೊಂಡ್ರೆ ನಿಮ್ಮ ಲೆಕ್ಕಾಚಾರ ತಪ್ಪು. ದೆಹಲಿಯಲ್ಲಿ ನಡೆದ 'ಮೊಬೈಲ್ ಸ್ಪಾರ್ಕ್ಸ್​ 5ನೇ ಆವೃತ್ತಿ'ಯಲ್ಲಿ ವಿದ್ಯುತ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಜಂಟಿ ಕಾರ್ಯದರ್ಶಿ ರಾಜೀವ್ ಬನ್ಸಲ್ ಅವರ ಜೊತೆಗಿನ ಮಾತುಕತೆಯೇ ಇದಕ್ಕೆ ಸಾಕ್ಷಿ. ಭಾರತೀಯ ಮೊಬೈಲ್ ಕ್ಷೇತ್ರದ ಪ್ರಮುಖ ಉದ್ಯಮಿಗಳು ಮತ್ತು ಸ್ಟೇಕ್ ಹೋಲ್ಡರ್​ಗಳ ಜೊತೆ ರಾಜೀವ್ ಬನ್ಸಲ್ 30 ನಿಮಿಷಗಳ ಕಾಲ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ್ರು. ಭಾರತೀಯ ಮೊಬೈಲ್ ಜಗತ್ತಿನಲ್ಲಿರುವ ಪ್ರತಿಯೊಬ್ಬರಿಗೂ ಉತ್ತಮ ಭವಿಷ್ಯವಿದೆ ಅನ್ನೋದನ್ನು ಅವರು ಒತ್ತಿ ಹೇಳಿದ್ರು. ಅವರ ಮಾತಿನ ಹೈಲೈಟ್ಸ್ ನೋಡೋಣ.

1.ಭಾರತದ ಡಿಜಿಜಟ್ ಲ್ಯಾಂಡ್​ಸ್ಕೇಪ್  ಬದಲಾಗುತ್ತಿದೆ: ಇಂಡಿಯಾಸ್ಟಾಕ್, ಡಿಜಿಟಲ್ ಇಂಡಿಯಾ ಮತ್ತು ಸ್ಟಾರ್ಟ್ಅಪ್ ಇಂಡಿಯಾದಂತಹ ಕಾರ್ಯಕ್ರಮಗಳ ಮೂಲಕ ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ಉತ್ಪಾದನೆ, ಫೈನ್​ಟೆಕ್, ಆ್ಯಪ್ ಅಭಿವೃದ್ಧಿ ಸೇರಿದಂತೆ ಹಲವು ರೀತಿಯ ಅವಕಾಶಗಳು ಮೊಬೈಲ್ ಕ್ಷೇತ್ರಗಳಲ್ಲಿ ಉದ್ಯಮಿಗಳಿಗೆ ಲಭ್ಯವಾಗುತ್ತಿವೆ.

2.1000 ಮಿಲಿಯನ್ ಮೊಬೈಲ್ಗಳುಳ್ಳ ಭಾರತ: ಭಾರತದಲ್ಲಿರುವ 1 ಬಿಲಿಯನ್ ಮೊಬೈಲ್ ಫೋನ್ಗಳಲ್ಲಿ ಶೇ.30ರಷ್ಟು ಸ್ಮಾರ್ಟ್​ಫೋನ್​ಗಳಿವೆ. ಮುಂದಿನ 3-4 ವರ್ಷಗಳಲ್ಲಿ ಸ್ಮಾರ್ಟ್​ಫೋನ್​ಗಳು ದಾಖಲೆ ಮಟ್ಟದಲ್ಲಿ ಮಾರಾಟವಾಗಲಿದೆ. ಆಗ ಸ್ಮಾರ್ಟ್​ಫೋನ್​ ಮತ್ತು ಫೀಚರ್ ಫೋನ್​ಗಳ ಅನುಪಾತ 70:30 ಆಗಲಿದೆ.

3.ಮೇಕ್ ಇನ್ ಇಂಡಿಯಾ ಇಡೀ ವಿಶ್ವಕ್ಕಾಗಿ: ನಾವು ಪ್ರತಿವರ್ಷ 150 ಮಿಲಿಯನ್ ಮೊಬೈಲ್​ಗಳ ಉತ್ಪಾದನೆ/ಜೋಡಣೆ ಮಾಡುತ್ತಿದ್ದೇವೆ. ಅವುಗಳಲ್ಲಿ ಬಹುತೇಕ ಮಧ್ಯಪ್ರಾಚ್ಯ ರಾಷ್ಟ್ರಗಳು ಮತ್ತು ಆಫ್ರಿಕಾದಲ್ಲಿ ಮಾರಾಟವಾಗುತ್ತವೆ. ಇನ್ನು 3 ವರ್ಷಗಳಲ್ಲಿ ನಾವು 500 ಮಿಲಿಯನ್ ಮೊಬೈಲ್​ಗಳನ್ನು ಉತ್ಪಾದಿಸಲಿದ್ದೇವೆ. ಇದರಿಂದ ಕೇವಲ ಭಾರತದಲ್ಲಿ ಮಾತ್ರವಲ್ಲ ಇಡೀ ಜಗತ್ತಿನಲ್ಲಿ ಇಂಟರ್ನೆಟ್ ಬಳಕೆ ಹೆಚ್ಚಲಿದೆ.

4.ಮೊಬೈಲ್ ಭವಿಷ್ಯದ ಏಕೈಕ ಸಾಧನ: ಡೆಸ್ಕ್​ಟಾಪ್​ನಿಂದ ಲ್ಯಾಪ್​ಟಾಪ್​ , ಟ್ಯಾಬ್ಲೆಟ್​ನಿಂದ ಮೊಬೈಲ್ ಹೀಗೆ ಪ್ರತಿಯೊಂದರ ಗಾತ್ರ ಕಡಿಮೆಯಾಗ್ತಿದೆ, ಪವರ್, ವೇಗ ಮತ್ತು ಸಾಮರ್ಥ್ಯ ಹೆಚ್ಚಾಗುತ್ತಿದೆ. ಈ ಟ್ರೆಂಡ್ ಜೊತೆಗೆ ಭವಿಷ್ಯದಲ್ಲಿ ಉಳಿಯುವ ಏಕೈಕ ಸಾಧನ ಮೊಬೈಲ್.

5.ಅಂತರ್ಜಾಲ ಪ್ರವೇಶ: ದೇಶದ 1,250 ಮಿಲಿಯನ್ ಜನರ ಪೈಕಿ 450 ಮಂದಿ ಈಗಾಗ್ಲೇ ಇಂಟರ್ನೆಟ್ ಬಳಸುತ್ತಿದ್ದಾರೆ. ಇಂಟರ್ನೆಟ್ ಬಳಕೆದಾರರ ಸಂಖ್ಯೆ ಕಡಿಮೆ ಎನಿಸಿದ್ರೂ ಪ್ರತಿ ವರ್ಷ 100 ಮಿಲಿಯನ್ ಜನರು ಇಂಟರ್ನೆಟ್ ಸಂಪರ್ಕ ಪಡೆಯುತ್ತಿದ್ದಾರೆ. ಕಳೆದೊಂದು ದಶಕದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ 100 ಮಿಲಿಯನ್​ನಿಂದ 1000 ಮಿಲಿಯನ್​ನಷ್ಟಾಗಿದೆ. ಅಂತರ್ಜಾಲ ಸಂಪರ್ಕದಲ್ಲಿಯೂ ಇದೇ ರೀತಿ ಹೆಚ್ಚಳವಾಗಲಿದೆ.

6.ಭಾರತ್ ನೆಟ್: ಭಾರತ್ ನೆಟ್ ಯೋಜನೆಯಡಿ 2018ರ ಡಿಸೆಂಬರ್ ವೇಳೆಗೆ 6,66,000 ಹಳ್ಳಿಗಳ ಪೈಕಿ 2,50,000 ಗ್ರಾಮಗಳಿಗೆ ಇಂಟರ್ನೆಟ್ ಸಂಪರ್ಕ ನೀಡಲು ಭಾರತ ಸರ್ಕಾರ ಆಪ್ಟಿಕ್ ಫೈಬರ್ ಬಳಸುತ್ತಿದೆ. ಮಿಲಿಯನ್ಗಟ್ಟಲೆ ಹೊಸ ಅಂತರ್ಜಾಲ ಬಳಕೆದಾರರಿಗಾಗಿ ಅಪ್ಲಿಕೇಶನ್ ಅಭಿವೃದ್ಧಿಪಡಿಸುವ, ಸೇವೆ ಒದಗಿಸುವ ಅವಕಾಶ ಉದ್ಯಮಿಗಳಿಗಿದೆ.

7.ಭಾರತೀಯ ಭಾಷೆಗಳ ಪ್ರವೇಶ: ಭಾರತದ ಬಹುತೇಕ ಜನರು ಇಂಗ್ಲಿಷ್ ಮಾತನಾಡುವುದಿಲ್ಲ. ಗ್ರಾಮೀಣ ಪ್ರದೇಶದ ಹೊಸ ಇಂಟರ್ನೆಟ್ ಬಳಕೆದಾರರಿಗೆ ಸ್ಥಳೀಯ ಭಾಷೆಗಳಲ್ಲಿ ಸಂವಹನಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ. ಭಾರತದಲ್ಲಿ 22 ಪ್ರಮುಖ ಭಾಷೆಗಳಿವೆ. ಮುಂದಿನ ವರ್ಷದ ವೇಳೆಗೆ 3 ಭಾಷೆಗಳಲ್ಲಿ (ಇಂಗ್ಲಿಷ್, ಹಿಂದಿ, ಸ್ಥಳೀಯ ಭಾಷೆ) ಇನ್ಪುಟ್ ಟೆಕ್ಸ್ಟ್ ಬೆಂಬಲಿಸುವಂತಹ, 22 ಭಾಷೆಗಳಲ್ಲಿ ಓದಬಹುದಾದ ಮೊಬೈಲ್ ಬಿಡುಗಡೆ ಮಾಡಲಾಗುವುದು.

8.ಆಧಾರ್ ಕ್ರಾಂತಿ: 107 ಕೋಟಿ ಭಾರತೀಯರು ಅಂದ್ರೆ ದೇಶದ ಶೇ.98-99ರಷ್ಟು ಜನ ಈಗಾಗ್ಲೇ ಆಧಾರ್ ಕಾರ್ಡ್ ಹೊಂದಿದ್ದಾರೆ. ಇನ್ನು 3 ವರ್ಷಗಳಲ್ಲಿ ಭಾರತದಲ್ಲಿ 700-800 ಮಿಲಿಯನ್ ಇಂಟರ್ನೆಟ್ ಬಳಕೆದಾರರಿರ್ತಾರೆ. ಅವರಲ್ಲಿ 500 ಮಿಲಿಯನ್ ಮಂದಿ ಸ್ಮಾರ್ಟ್ಫೋನ್ ಹೊಂದಿರುತ್ತಾರೆ. ಸಂಶೋಧಕರು ಮತ್ತು ಸಮಸ್ಯೆಗೆ ಪರಿಹಾರ ಕಂಡುಹಿಡಿಯುವವರಿಗೆ ಅವಕಾಶಗಳ ಸುರಿಮಳೆಯಾಗಲಿದೆ.

9.ಏಕೀಕೃತ ಪಾವತಿ: ಎಟಿಎಂ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಹೀಗೆ ಬ್ಯಾಂಕಿಂಗ್ ವ್ಯವಸ್ಥೆ ಅಭಿವೃದ್ಧಿ ಹೊಂದುತ್ತಲೇ ಇದೆ. ಈ ಮೂರು ಹಂತಗಳನ್ನೂ ಯುಪಿಐ ಮೂಲಕ ಸಂಯೋಜಿಸಿ ಬ್ಯಾಂಕ್ ಖಾತೆ ಇಲ್ಲದವರು ಮೊಬೈಲ್ ಮೂಲಕ ವಹಿವಾಟು ನಡೆಸಲು ಅನುಕೂಲ ಮಾಡಿಕೊಡುತ್ತೇವೆ.

ಇನ್ನು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳಿಗೆ ಒತ್ತು ಕೊಡುವುದಾಗಿ ರಾಜೀವ್ ಬನ್ಸಲ್ ತಿಳಿಸಿದ್ದಾರೆ,

-ಡಿಜಿಟಲ್ ಲಾಕರ್

-ಐಓಟಿ - ಆರೋಗ್ಯ, ಶಿಕ್ಷಣ ಸೇರಿ ಹಲವು ಪ್ರಮುಖ ವಲಯಗಳಿಗೆ

-ಡಿಜಿಟಲ್ ಲಿಟರಸಿ - ದೇಶದ ಜನರಲ್ಲಿ ಡಿಜಿಟಲ್ ಸಾಕ್ಷರತೆ ಮೂಡಿಸಲು 20 ತಾಸುಗಳ ಕಾರ್ಯಕ್ರಮ. ಸ್ಮಾರ್ಟ್ಫೋನ್ ಬಳಕೆ, ಕಂಟೆಂಟ್ ಹುಡುಕಾಟ ಸೇರಿ ಹಲವು ವಿಷಯಗಳ ಬಗ್ಗೆ ತರಬೇತಿ

''ರುಣಾತ್ಮಕ ಊಹೆಗಳ ಜೊತೆಗೆ ಆರಂಭಿಸಬೇಡಿ. ನಿಮ್ಮ ಡೇಟಾ ಮತ್ತು ಗೌಪ್ಯತೆಯನ್ನು ಕಾಪಾಡುವುದು ಸರ್ಕಾರದ ಪ್ರಮುಖ ಆದ್ಯತೆ'' ಎನ್ನುವ ಮೂಲಕ ರಾಜೀವ್ ಬನ್ಸಲ್ ತಮ್ಮ ಮಾತುಗಳನ್ನು ಮುಗಿಸಿದ್ರು.

ಇದನ್ನೂ ಓದಿ...

ಸ್ಮಾರ್ಟ್​ ಇದ್ದರಷ್ಟೇ ಸಾಕಾಗೋದಿಲ್ಲ- ದೆಹಲಿ-ಎನ್​ಸಿಆರ್​ನಲ್ಲಿ ಹುಟ್ಟಿದ ಮೊಬೈಲ್​ ಆ್ಯಪ್​ಗಳ ಕಥೆಯನ್ನೂ ಕೇಳಿ..!

ಪೇಪರ್ ಮಾರುವ ಹುಡುಗಿಯ ಯಶೋಗಾಥೆ