ಅನಾರೋಗ್ಯದಿಂದ ಬಳಲುತ್ತಿದ್ರೆ ಜಸ್ಟ್ ಒಂದು ಕಾಲ್ ಮಾಡಿ- ಮನಗೆ ಬರ್ತಾರೆ ನರ್ಸ್ ಹಾಗೂ ವೈದ್ಯರು..!

ಆರಾಧ್ಯ

0

ಸಿಲಿಕಾನ್ ಸಿಟಿಯ ವಾತಾವಣಕ್ಕೆ ಯಾವಗ, ಯಾರಿಗೆ, ಏನು, ಆರೋಗ್ಯ ಸಮಸ್ಯೆ ಬರುತ್ತೋ ಅಂತ ಗೊತ್ತೇ ಆಗೋದಿಲ್ಲ.. ಬೆಳಗ್ಗೆ, ಮಧ್ಯಾಹ್ನ ಅಥವಾ ರಾತ್ರಿ ಸಮಯದಲ್ಲಿ ಆರೋಗ್ಯ ಸಮಸ್ಯೆ ಬಂದ್ರೆ ಯಾವುದಾದ್ರೂ ಹತ್ತಿರದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು. ಅದೇ ಮಧ್ಯರಾತ್ರಿ ಇಲ್ಲವೇ ಬೆಳಗ್ಗಿನ ಜಾವ ಆರೋಗ್ಯ ಕೆಟ್ರೆ, ಕಥೆ ಗೋವಿಂದ .. ಹಾಗಂತ ನಮ್ಮ ಬೆಂಗಳೂರಿನಲ್ಲಿ ಆಸ್ಪತ್ರೆಗಳೇನು ಕಡಿಮೆ ಇಲ್ಲ, ಆದ್ರೆ ಮಧ್ಯರಾತ್ರಿಯಲ್ಲಿ ವೈದ್ಯರು ಇರಬೇಕಾಲ್ಲ.. ಇತಂಹ ಸಮಸ್ಯೆ ಬಂದ್ರೆ ಇನ್ನು ಮುಂದೆ ಭಯ ಪಡುವ ಅವಶ್ಯಕತೆ ಇಲ್ಲ.. ನಿಮ್ಮ ಸೇವೆಗೆ ಎಂದು ಸದಾ ಸಿದ್ಧರಿರ್ತಾರೆ ಪೋರ್ಷಿಯಾ ಮೆಡಿಕಲ್ ಸಂಸ್ಥೆ..

ಏನಿದು ಪೋರ್ಷಿಯಾ ಮೆಡಿಕಲ್ ?

ಪೋರ್ಷಿಯಾ ಮೆಡಿಕಲ್​ಗೆ ಜಸ್ಟ್ ಒಂದು ಕಾಲ್ ಮಾಡಿದ್ರೆ ಸಾಕು, ವೈದ್ಯರು ಹಾಗೂ ನರ್ಸ್​ಗಳು ನಿಮ್ಮ ಮನೆಗೆ ಬಂದು ಬಿಡ್ತಾರೆ.. ಹೌದು ಹುಷಾರಲ್ಲದಿದ್ದಾಗ ಆಸ್ಪತ್ರೆಗೆ ಹೋಗಬೇಕಾದದ್ದು ಅನಿವಾರ್ಯ. ಆದ್ರೆ ಎಷ್ಟು ಸುಸ್ತಾಗಿರುತ್ತದೆಂದರೆ ಆಸ್ಪತ್ರೆಗೆ ಹೋಗಲು ಮನಸ್ಸೇ ಆಗುವುದಿಲ್ಲ. ಒಂದು ಕಡೆ ಸುಸ್ತು ಇನ್ನೊಂದೆಡೆ ಅಲ್ಲಿ ಕಾಯಬೇಕಲ್ಲ ಎಂಬ ಬೇಜಾರು. ಆ ಹೊತ್ತಲ್ಲಿ ಡಾಕ್ಟರ್ ಮನೆಗೆ ಬಂದು ನೋಡುವಂತಿದ್ದರೆ ಎಂದು ತುಂಬಾ ಅನ್ನಿಸುತ್ತದೆ. ಹಾಗೆ ಅನ್ನಿಸುವವರಿಗೆಲ್ಲಾ ಇಂದು ಬಹಳ ಸಂತಸದ ವಿಷಯವಾಗಿದೆ.. 

ಇದನ್ನು ಓದಿ

ಹರಳುಗಳಿಗೂ ಆತ್ಮವಿದೆ, ಸೌಂದರ್ಯವಿದೆ; ಗುರುತಿಸುವ ಕಂಗಳಿದ್ದಾಗ ಮಾರುಕಟ್ಟೆಗೇನು ಕೊರತೆ-ಭಾರತಿ ರವಿಪ್ರಕಾಶ್:

ಈ ಪೋರ್ಷಿಯಾ ಮೆಡಿಕಲ್ ಎಂಬ ಸಂಸ್ಥೆ ಡಾಕ್ಟರ್​ಗಳನ್ನು, ನ್ಯಾಚುರೋಪತಿ ತಜ್ಞರನ್ನು, ನರ್ಸ್​ಗಳನ್ನು ನಿಮ್ಮ ಮನೆಗೆ ಕಳಿಸುವ ವ್ಯವಸ್ಥೆ ಮಾಡುತ್ತಿದೆ. ನೀವು ಆಸ್ಪತ್ರೆಗೆ ಹೋಗಬೇಕಾಗಿಲ್ಲ, ಆಸ್ಪತ್ರೆಯೇ ನಿಮ್ಮ ಮನೆಗೆ ಬರುತ್ತದೆ ಅಂತ ನೀವು ಭಾವಿಸಿಕೊಳ್ಳಬಹುದು. ಮನೆಯಲ್ಲೇ ಎಲ್ಲಾ ಥರ ಮೆಡಿಕಲ್ ಸೌಲಭ್ಯ ಸಿಗಬೇಕು ಎಂಬ ಆಶಯವನ್ನಿಟುಕೊಂಡು ಕೆಲಸ ಮಾಡುತ್ತಿರುವ ಸಂಸ್ಥೆ ಇದೆ ಪೋರ್ಷಿಯಾ ಮೆಡಿಕಲ್. ಈ ಸಂಸ್ಥೆ ಡಾಕ್ಟರ್​ಗಳು, ನರ್ಸ್​ಗಳು, ಫಿಸಿಯೋಥೆರಪಿಸ್ಟ್, ಟ್ರೈನಿಂಗ್ ಪಡೆದಿರುವ ಅಟೆಂಡೆಂಟ್​ಗಳನ್ನು ಅವಶ್ಯಕತೆಗೆ ತಕ್ಕಂತೆ ಮನೆಗೆ ಕಳಿಸುತ್ತದೆ. ಮನೆಯಲ್ಲಿರುವ ಹಿರಿಯರ ಬೇಕು ಬೇಡಗಳನ್ನು ನೋಡಿಕೊಳ್ಳಬಲ್ಲ ನರ್ಸ್​ಗಳನ್ನು ನೀವು ಪೋರ್ಷಿಯಾ ಮೂಲಕ ಕರೆಸಿಕೊಳ್ಳಬಹುದು. ಈ ಮೂಲಕ ಮನೆಯಲ್ಲೇ ಮೆಡಿಕಲ್ ಕೇರ್ ಒದಗಿಸುವ ಕೆಲಸ ಈ ಸಂಸ್ಥೆ ಮಾಡುತ್ತಿದೆ.

ಈಗಾಗಲ್ಲೇ ಹೊರ ರಾಜ್ಯಗಳಲ್ಲಿ ತಮ್ಮ ಸೇವೆಗಳನ್ನ ಆರಂಭ ಮಾಡಿರೋ ಈ ಸಂಸ್ಥೆ ಇದೀಗ ಬೆಂಗಳೂರಿನ ದೊಮ್ಮಲೂರಿನಲು ಈ ಸೇವೆಯನ್ನ ಪ್ರಾರಂಭ ಮಾಡಿದೆ.. ನೀವು ಕೂಡ ಈ ಸೇವೆಯನ್ನ ಪಡೆಯಬೇಕು ಅಂದ್ರೆ ಪೋರ್ಷಿಯಾ ಸಂಸ್ಥೆಯ ವೆಬ್ಸೈಟ್ಗೆ ಹೋದರೆ ಅಲ್ಲಿ ನಿಮಗೆ ಯಾವ ಸೇವೆ ಬೇಕು ಅನ್ನೋದನ್ನು ಹೇಳಬಹುದು. ನಿಮ್ಮ ಬೇಡಿಕೆ ಪೋರ್ಷಿಯಾ ಸಂಸ್ಥೆಯವರಿಗೆ ತಲುಪುತ್ತದೆ. ಅವರು ತಕ್ಷಣ ನಿಮಗೆ ಏನು ಮಾಡಬೇಕು ಅಂತ ಹೇಳುತ್ತಾರೆ. ವೆಬ್ಸೈಟ್ನಲ್ಲಿ ವ್ಯವಹರಿಸುವುದು ಕಷ್ಟ ಅಂದ್ರೆ ಅವರಿಗೆ ಫೋನ್ ಕೂಡ ಮಾಡಬಹುದು. ಆಗ ನಿಮಗೆ ಬೇಕಾದ ಮಾಹಿತಿಗಳೆಲ್ಲ ನಿಮಗೆ ಲಭ್ಯವಾಗುತ್ತದೆ. ಈಗಾಗಲ್ಲೇ ಈ ಸೇವೆಯನ್ನ ಬೆಂಗಳೂರಿಗರು ಪಡೆದುಕೊಳ್ಳುತ್ತಿದ್ದು ಇವರ ಈ ಸೇವೆಗೆ ಖುಷಿ ವ್ಯಕ್ತಪಡಿಸ್ತಾರೆ.. ಇನ್ನು ಮುಂದಿನ ದಿನಗಳಲ್ಲಿ ಇದರ ಜೊತೆ ಇನ್ನು ಹತ್ತು ಹಲವು ಸೇವೆಗಳನ್ನ ಒದಗಿಸಬೇಕು ಅನ್ನೋದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.. ಹಲವು ನೂರಿತ ತಜ್ಞರು ಈ ಸೇವೆಯನ್ನ ಪ್ರಾರಂಭ ಮಾಡಿರೋದು ಹಿರಿಯರಿಗೆ ಹಾಗೂ ಸದಾ ಕಾಲ ಕೆಲಸದಲ್ಲಿ ಬ್ಯುಸಿ ಇರೋರಿಗೆ ಬಹಳ ಅನುಕೂಲವಾಗಿದೆ .

ಇದನ್ನು ಓದಿ

1. ಬ್ಲಡ್​ ಕ್ಯಾನ್ಸರ್ ಪೀಡಿತರಿಗೆ ಸಹಾಯ ಹಸ್ತ

2. ಕಿರಾಣಿ ಅಂಗಡಿಯಿಂದ ರಿಂಗಿಂಗ್ ಬೆಲ್ಸ್ ಕಟ್ಟಿದ ಮೋಹಿತ್ ಗೋಯೆಲ್

3. ರೋಗಿಗಳ ಆಪತ್ಕಾಲದಲ್ಲಿ ನೆರವಾಗುವ ಸಂಜೀವಿನಿ MediSOS..


Related Stories