ಅದಿತಿಯ ಕಷ್ಟಕ್ಕೆ ಉತ್ತರವಾಗಿ ಸಿಕ್ಕಿದ್ದು Menstrupedia: ಹೆಣ್ಣುಮಕ್ಕಳ ಸಮಸ್ಯೆ ನಿವಾರಣೆಗೊಂದು ಉತ್ತರ..!

ಟೀಮ್ ವೈ.ಎಸ್.

0

ಈ ಹೆಸರು ಪ್ರತಿಯೊಂದು ಹೆಣ್ಣಿಗೂ ಗೊತ್ತಿರುತ್ತದೆ. ಬದಲಾದ ಯುಗದಲ್ಲಿ ಅದ್ರ ಅಗತ್ಯವೂ ಇದೆ. ಏನಿಲ್ಲಾ ಅಂದ್ರು ತಿಂಗಳಿಗೆ ಮೂರುದಿನವಾದ್ರೂ ಇದ್ರ ಉಪಯೋಗ ಇದ್ದೇ ಇರುತ್ತದೆ. ಹೆಣ್ಣು ಅಂದ್ಮೇಲೆ ವಿಸ್ಪರ್ ಅನ್ನೋ ಪದ ಗೊತ್ತಿದ್ದೇ ಇರುತ್ತದೆ. ಋತುಮತಿ ಆದಾಗಲಂತೂ ವಿಸ್ಪರ್ ಹೆಣ್ಣು ಮಕ್ಕಳ ಕೈಯಲ್ಲಿ ಇದ್ದೇ ಇರುತ್ತದೆ. ಹೆಣ್ಣು ಋತುಮತಿ ಆದ ದಿನದಿಂದ ವಿಸ್ಪರ್ ಅನ್ನೋದು ಅವಳ ಜೊತೆಗಾತಿ ಆಗಿರುತ್ತದೆ. ಅದ್ರಲ್ಲೊಂದು ಇಮೋಷನ್ ಅಡಗಿರುತ್ತದೆ. ನಿಜ ಹೇಳ್ಬೇಕು ಅಂದ್ರೆ ವಿಸ್ಪರ್ ಅನ್ನೋದು ಋತುಮತಿ ಅನ್ನೋ ಪದಕ್ಕೆ ಈ ಕಾಂಪಿಟೇಷನ್ ಯುಗದಲ್ಲೂ ಪರ್ಯಾಯವಾಗಿದೆ ಅಂದ್ರೂ ತಪ್ಪಾಗೊದಿಲ್ಲ.

ಹಣ್ಣಿಗೆ ತಿಂಗಳ ಸಮಸ್ಯೆ ಅನಾದಿ ಕಾಲದಿಂದಲೂ ಅತಿ ದೊಡ್ಡ ಸಮಾಜಿಕ ಸಮಸ್ಯೆ ಆಗಿ ಉಳಿದುಕೊಂಡಿದೆ. ಇವತ್ತಿನ ಫಾಸ್ಟ್ ಅಂಡ್ ಪಾಸ್ಟ್ ಯುಗದಲ್ಲೂ ಹೆಣ್ಣು ಆ ಮೂರು ದಿನಗಳನ್ನು ಕಳೆಯೋದು ಜೀವನದ ಅತೀ ದೊಡ್ಡ ಸಮಸ್ಯೆ ಅನ್ನೋ ಮಟ್ಟದಲ್ಲಿದೆ. ಮನೆಗೆ ಹೋದ್ರೆ “ಮಡಿ” ಆನ್ನೋ ಶಿಷ್ಟಾಚಾರವನ್ನು ಮುಂದಿಟ್ಟುಕೊಂಡು ಅದನ್ನು ಮುಟ್ಟಬೇಡ, ಇದನ್ನ ಮುಟ್ಟಬೇಡ, ಅಲ್ಲಿಗೆ ಹೋಗ್ಬೇಡ.. ಇಲ್ಲಿ ಬರಬೇಡ ಅನ್ನೋ ಸಂಪ್ರದಾಯಗಳು ಕೂಡ ಇವೆ. ಆದ್ರೆ ಇದನ್ನೆಲ್ಲವನ್ನೂ ಹೋಗಲಾಡಿಸೋದಿಕ್ಕೆ ಅದಿತಿಗುಪ್ತಾ ಅನ್ನೋ ಹೆಣ್ಣುಮಗಳು ಪರಿಶ್ರಮ ಪಡುತ್ತಿದ್ದಾರೆ. ಅದಿತಿ ಗುಪ್ತಾ Menstrupedia ಅನ್ನೋ ವೆಬ್ ಸೈಟ್  ಸಂಸ್ಥಾಪಕಿ. ಈ Menstrupedia ಹೆಣ್ಣುಮಕ್ಕಳು ಮುಟ್ಟಿನ ಸಮಯದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೆಲಸದಲ್ಲಿದ್ದಾರೆ.

ಅದಿತಿ ಸಮಾಜದಲ್ಲಿನ ಕೆಟ್ಟ ಪದ್ಧತಿಯನ್ನು ದೂರ ಮಾಡೋದಿಕ್ಕೆ ಪಡುತ್ತಿರುವ ಶ್ರಮಕ್ಕೆ ಬೆಲೆ ಕಟ್ಟೋದಿಕ್ಕೆ ಆಗೋದಿಲ್ಲ. ಆದ್ರೆ ಅದಕ್ಕಿಂತಲೂ ಮುಖ್ಯವಾಗಿ ಕಾಣೋದು ಅದಿತಿಯ ಬೆಳವಣಿಗೆ ಮತ್ತು ಬೆಳೆದ ವಾತಾವರಣ. ಅದಿತಿ ಹುಟ್ಟಿದ್ದು ಜಾರ್ಖಂಡ್ ರಾಜ್ಯದ ಘರ್ವ್ಹಾ ಅನ್ನೋ ಚಿಕ್ಕ ಹಳ್ಳಿಯಲ್ಲಿ. ಅದಿತಿ ಬೆಳೆದ ಪರಿಸರದಲ್ಲಿ ಹೆಣ್ಣುಮಕ್ಕಳ ಮುಟ್ಟಿನ ಸಮಯವನ್ನು ಅನಿಷ್ಟ ಅಂತಲೇ ಟೀಕಿಸ್ತಾ ಇದ್ರು. ಅಷ್ಟೇ ಅಲ್ಲ ಚಿಕ್ಕ ವಯಸ್ಸಿನಲ್ಲೇ ಋತುಮತಿಯಾಗುವ ಸಮಸ್ಯೆ ಎದುರಿಸುತ್ತಿದ್ದ ಪ್ರದೇಶದಲ್ಲೇ ಅದಿತಿ ಬೆಳೆದಿದ್ದರು. ಅಪ್ರಾಪ್ತ ವಯಸ್ಸಿನಲ್ಲಿ ಋತುಮತಿ ಆಗೋದಿಕ್ಕೆ ನೈಸರ್ಗಿಕ ಕಾರಣಗಳಿದ್ರೂ ಆದ್ರೆ ಅದರಿಂದ ಸಮಸ್ಯೆ ಎದುರಿಸ್ತಾ ಇರೋದು ಹೆಣ್ಣುಮಕ್ಕಳು.

ಹೆಣ್ಣಿನ ಮುಖ್ಯ ಲಕ್ಷಣವಾಗಿರುವ ಮುಟ್ಟಿನ ಸಮಸ್ಯೆಯನ್ನು ಅದಿತಿ ತನ್ನ ಅಪ್ರಾಪ್ತ ವಯಸ್ಸಿನಲ್ಲೇ ಎದುರಿಸಿದ್ದಳು. ಅದಿತಿ ಮೊದಲ ಬಾರಿ ಋತುಮತಿಯಾಗಿದ್ದಾಗ ಅವಳ ವಯಸ್ಸು ಜಸ್ಟ್ 12. ಇದ್ರ ಬಗ್ಗೆ ಅಮ್ಮನಿಗೆ ಮೊದಲು ವಿಷಯ ತಿಳಿಸಿದ್ದಳು. ಮೂಢ ನಂಬಿಕೆಯ ಬಗ್ಗೆ ಹೆಚ್ಚು ನಂಬಿಕೆ ಇಟ್ಟುಕೊಂಡಿದ್ದ ಅದಿತಿಯ ಅಮ್ಮ ಮಗಳಿಗೆ ಎರಡೂವರೆ ಮಗ್ ನೀರಿನಲ್ಲಿ ಸ್ನಾನ ಮಾಡಿ ಬರುವಂತೆ ತಿಳಿಸಿದ್ದಳು. ಎರಡುವರೆಗ ಮಗ್ ನೀರು ಯಾಕೆ ಅಂದ್ರೆ ಮಗಳ ರಕ್ತಸ್ರಾವ ಎರಡೂವರೆದ ದಿನದ ಮಟ್ಟಿಗೆ ಕಡಿಮೆ ಆಗಲಿ ಅನ್ನೊದಾಗಿತ್ತು. ಆದ್ರೆ ಅದಕ್ಕಿಂತಲೂ ಮುಖ್ಯವಾಗಿದ್ದು ಅದಿತಿ ಮನೆ ಒಳಗೆ ಪ್ರವೇಶ ಮಾಡುವಂತೆ ಇರ್ಲಿಲ್ಲ. ಯಾವುದೇ ವಸ್ತುವನ್ನು ಮುಟ್ಟುವಂತಿರಲಿಲ್ಲ. ಅದಿತಿಗೆ ಸಂಬಂಧಪಟ್ಟ ಎಲ್ಲಾ ವಸ್ತುಗಳನ್ನು ಯಾರೂ ಮುಟ್ಟುತ್ತಿರಲಿಲ್ಲ. ಚಿಕ್ಕ ವಯಸ್ಸಿನ ಅದಿತಿ ಶುದ್ಧಗೊಳ್ಳೋದಿಕ್ಕೆ ತೆಗೆದುಕೊಂಡ ಸಮಯ ಬರೋಬ್ಬರಿ 7 ದಿನ. 7ನೇ ದಿನದ ನಂತರ ಅದಿತಿ ತಲೆ ಸ್ನಾನ ಮಾಡಿ, ಉಪಯೋಗಿಸಿದ್ದ ಬೆಡ್ ಶೀಟ್ ಗಳನ್ನು ಒಗೆದು ಒಣ ಹಾಕಿದ ಮೇಲೆಯೇ ಆಕೆ ಶುದ್ಧವಾದಳು ಅನ್ನೊ ನಂಬಿಕೆ ಅಲ್ಲಿನವರಿಗಿತ್ತು.

ಇದು ಕೇವಲ ಅದಿತಿಯ ಕಥೆ ಮಾತ್ರವಲ್ಲ. ಭಾರತದ ಬಹುತೇಕ ಹೆಣ್ಣು ಮಕ್ಕಳ ಕಥೆಯು ಹೀಗೇ ಇದೆ. ಆರ್ಥಿಕವಾಗಿ ಮುಂದುವರೆದ ಮನೆಗಳಲ್ಲೂ ಈ ಅನಿಷ್ಟ ಪದ್ಧತಿ ಇದ್ದೇ ಇದೆ. ಅದಿತಿ ಮನೆಯವರ ಸ್ಥಿತಿ ಉತ್ತಮವಾಗೇ ಇತ್ತು. ಸ್ಯಾನಿಟರಿ ಪ್ಯಾಡ್ ನ್ನು ತಂದುಕೊಡುವಷ್ಟು ತಾಕತ್ತು ಕೂಡ ಇತ್ತು. ಆದ್ರೆ ಅದನ್ನು ಅಂಗಡಿಯಿಂದ ತರುವವರು ಯಾರು..? ಪುರುಷರು ಈ ವಿಷಯದಲ್ಲಿ ಎಂದು ನೆರವಿಗೆ ಬರುತ್ತಿರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಅದಿತಿ ಕಟ್ಟುಪಾಡುಗಳನ್ನು ಮುಂದುವರೆಸಿಕೊಂಡು ಹೋಗಬೇಕಿತ್ತು. ಅದಿತಿಯ 12ನೇ ವಯಸ್ಸಿನಲ್ಲಿ ಆದ ಅನುಭವ ಇಂದಿಗೂ ಮರೆತು ಹೋಗೋದಿಲ್ಲ. 1992ರಲ್ಲಿ ಈ ಘಟನೆ ನಡೆದ್ರೂ ಅದಿತಿ ಇಂದಿಗೂ ಆ ದಿನಗಳನ್ನು ಮರೆತೆನೆಂದ್ರೂ ಮರೆಯೋದಿಕ್ಕೆ ಸಾಧ್ಯವಾಗ್ತಿಲ್ಲ..

ಶಿಷ್ಟಾಚಾರದ ಹೆಸರಿನಲ್ಲಿನ ಈ ಅನಿಷ್ಟ ಇಲ್ಲೇ ನಿಲ್ಲೋದಿಲ್ಲ. ಶಾಲೆಗಳಲ್ಲೂ ಮುಟ್ಟಿನ ಬಗ್ಗೆ ಯಾವುದೇ ಪಾಠಗಳಿರಲಿಲ್ಲ. 9ನೇ ತರಗತಿಯ ಬಯೋಲಾಜಿ ಸಬ್ಜೆಕ್ಟ್ ನಲ್ಲಿ ಋತುಮತಿಯಾಗುವ ಬಗ್ಗೆ ಪಠ್ಯ ಇದ್ರೂ ಅದನ್ನು ಮೇಸ್ಟ್ರು ಪಾಠ ಮಾಡಿರಲಿಲ್ಲ. ಮಕ್ಕಳ ವಯಸ್ಸು ಬೆಳೆಯುತ್ತಿದ್ರೂ ಶಾಲೆಗಳಲ್ಲಿನ ಪಾಠಗಳು ಮಾತ್ರ ಎಂದೂ ಬದಲಾಗುತ್ತಿರಲಿಲ್ಲ. ಹೀಗಾಗಿ ಅದಿತಿ ಗುಪ್ತಾ ಕೊನೆಗೆ ಆ ಶಾಲೆಯನ್ನು ಬಿಟ್ಟು ನಗರದಲ್ಲಿದ್ದ ಕಾನ್ವೆಂಟ್ ಒಂದಕ್ಕೆ ಸೇರಿಕೊಂಡ್ರು..

ಕಾನ್ವೆಂಟ್ ಗೆ ಸೇರಿಕೊಂಡ ಮೇಲೆ ಎಲ್ಲಾ ಬದಲಾಗಿತ್ತು. ಗೆಳತಿಯರ ಸಲಹೆಯಂತೆ ಸ್ಯಾನಿಟರಿ ಪ್ಯಾಡ್ ಬಳಕೆಗೆ ಮುಂದಾದ್ರು. ಸ್ಯಾನಿಟರಿ ಪ್ಯಾಡ್ ನ್ನು ಯಾವ ಶಾಪ್ನಿಂದ ಬೇಕಾದ್ರೂ ಖರೀದಿ ಮಾಡಬಹುದು ಅನ್ನೋದು ತಿಳಿದಿತ್ತು. ಆದ್ರೆ ಮನಸ್ಸಿನಲ್ಲಿ ಅದ್ಯಾವುದೋ ಗೊಂದಲ. ಅಂಗಡಿ ಹೋಗಿ ಸ್ಯಾನಿಟರಿ ಪ್ಯಾಡ್ ಕೇಳಿದಾಗ ಅದನ್ನು ಕಪ್ಪು ಬಣ್ಣದ ಚೀಲದಲ್ಲಿ ಪ್ಯಾಕ್ ಮಾಡಿಕೊಟ್ಟಿದ್ದರು. ಅದಿತಿ ಸ್ಯಾನಿಟರಿ ಪ್ಯಾಡ್ ನ್ನು ಮೊದಲ ಬಾರಿ ಬಳಿಸಿದ್ದು ತನ್ನ 15ನೇ ವಯಸ್ಸಿನಲ್ಲಿ..!

ಅದಿತಿ ಪಿ.ಜಿ ಓದುತ್ತಿರುವಾಗ ತುಹಿನ್ ಅನ್ನೋ ಹುಡಗನನ್ನು ವರಿಸಿದ್ದಳು. ತುಹಿನ್ ಮತ್ತು ಅದಿತಿ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡಿದ್ದರು. ತುಹಿನ್ ಗೆ ಸಹೋದರಿ ಇಲ್ದೇ ಇದ್ದ ಕಾರಣ ಆತನಿಗೂ ಮುಟ್ಟಿನ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಸ್ಕೂಲ್ಗಳಲ್ಲೂ ತುಹಿನ್ ಈ ಬಗ್ಗೆ ಹೆಚ್ಚೇನು ಕಲಿತಿರಲಿಲ್ಲ.. ಆದ್ರೆ ತುಹಿನ್ ಮನಸ್ಥಿತಿ ವಿಭಿನ್ನವಾಗಿತ್ತು. ಅದಿತಿ ಪ್ರತೀ ತಿಂಗಳು ಎದುರಿಸುತ್ತಿದ್ದ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಆರಂಭಿಸಿದ. ಅಷ್ಟೇ ಅಲ್ಲ ಅದಕ್ಕೆ ಪರಿಹಾರ ಹುಡುಕುವ ಪ್ರಯತ್ನವನ್ನು ಕೂಡ ಮಾಡಲು ಆರಂಭಿಸಿದ.

ಈ ಮಧ್ಯೆ ಅದಿತಿ ಋತುಚಕ್ರದ ಬಗ್ಗೆ ತುಹಿನ್ಗೆ ಪಾಠ ಆರಂಭಿಸಿದ್ದಳು. ತುಹಿನ್ನಂತಹ ಎಜುಕೇಟೆಡ್ ವ್ಯಕ್ತಿಗೆ ಮುಟ್ಟಿನ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಅನ್ನೋದೇ ಅದಿತಿಗೆ ನುಂಗಲಾರದ ತುತ್ತಾಗಿತ್ತು. ಆದ್ರೆ ಅದಿತಿ ಹೇಳಿದ ಮಾತುಗಳನ್ನು ಕೇಳುತ್ತಿದ್ದ ತುಹಿನ್ಗೆ ಸಮಸ್ಯೆ ಬಗ್ಗೆ ಹೆಚ್ಚು ಅರ್ಥವಾಗ ತೊಡಗಿತ್ತು. ಆಷ್ಟೇ ಅಲ್ಲ ಪ್ರಾಕೃತಿಕ ನಿಯಮಕ್ಕೆ ಸಮಾಜ ಬೇರೆ ಅ್ಯಂಗಲ್ ತಂದುಕೊಟ್ಟಿದೆ ಅನ್ನೋದನ್ನ ತುಹಿನ್ ಅರ್ಥಮಾಡಿಕೊಳ್ಳುತ್ತಾನೆ. ಈ ಎಲ್ಲಾ ಬೆಳವಣಿಗೆಗಳು Menstrupedia ಅನ್ನೋ ವೆಬ್ ಸೈಟ್ ಆರಂಭಕ್ಕೆ ದಾರಿ ತೋರಿಸಿಬಿಡುತ್ತದೆ.

ಸಮಾಜದಲ್ಲಿ ಅನಿಷ್ಟ ಅಂತಿದ್ದ ಪ್ರಾಕೃತಿಕ ನಿಯಮ Menstruation ಬಗ್ಗೆ Menstrupediaದಲ್ಲಿ ವಿವರವಾಗಿ ಎಲ್ಲವನ್ನೂ ಬರೆಯಲಾಗಿತ್ತು. ಅದಿತಿಯಸ ಈ ಸಾಹಸಕ್ಕೆ ದೊಡ್ಡ ಬೆಂಬಲವೂ ಸಿಕ್ತು. ಜನ ಈ ವೆಬ್ ಸೈಟ್ ನ್ನುಒಪ್ಪಿಕೊಂಡರು. ಪ್ರತೀ ತಿಂಗಳು ಒಂದುಲಕ್ಷಕ್ಕೂ ಅಧಿಕ ಮಂದಿ Menstrupedia  ವೆಬ್ ಸೈಟ್ ಗೆ ವಿಸಿಟ್ಕೊಡುತ್ತಿದ್ದಾರೆ. ವಿಶ್ವದಾದ್ಯಂತ ಈ Menstrupedia ವೆಬ್ ಸೈಟ್ ಗೆ  ಭಾರೀ ಬೆಂಬಲ ಸಿಕ್ಕಿದೆ. ಅಷ್ಟೇ ಅಲ್ಲ ಆಡಿರೋ ವಿಡಿಯೋ ಆ್ಯಪ್ ಕೂಡ Menstrupedia ಕುರಿತು ಲಭ್ಯವಿದೆ. ಅದಿತಿಯ Menstrupedia ಸಾಹಸಕ್ಕೆ ಅದೆಷ್ಟೇ volunteers ಬೆಂಬಲವು ಸಿಕ್ಕಿದೆ.

ಅಂದಹಾಗೇ Menstrupedia ಉಳಿದೆಲ್ಲಾ ವೆಬ್ ಸೈಟ್  ಗಳಿಗಿಂತ ವಿಭಿನ್ನ. ಇಲ್ಲಿ ಎಲ್ಲರೂ ಬರೆಯಬಹುದು. ಹಾಡುಗಳು, ಕಾಮಿಕ್ ಆಡಿಯೋ- ವಿಡಿಯೋ ಕ್ಲಿಪ್ಗಳು ಎಲ್ಲವೂ ಸಹ ಇಲ್ಲಿದೆ. ಇವತ್ತು Menstrupedia ಸಮಾಜವನ್ನು ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆಯನ್ನು ನಿವಾರಿಸುವಲ್ಲಿ ಅತೀ ದೊಡ್ಡ ಪಾತ್ರವಹಿಸುತ್ತಿದೆ. ಥ್ಯಾಂಕ್ಸ್ Menstrupedia ಮತ್ತು ಅದಿತಿ ಗುಪ್ತಾ..