ಕ್ಯಾಬ್​​​​ ಸೇವೆಯಲ್ಲಿ ಸೂಪರ್​ ಸಕ್ಸಸ್​​​..!

ಟೀಮ್​ ವೈ.ಎಸ್​​.

0

ಆನ್​​ಲೈನ್​ ಟ್ಯಾಕ್ಸಿ ಬುಕ್ಕಿಂಗ್​​ ಈಗ ಜನಮನ್ನಣೆಗಳಿಸ್ತಾ ಇದೆ. ನಿಂತಲ್ಲೇ ಪಿಕ್​​ಅಪ್​​ ಮಾಡ್ತಾರೆ.. ನಾವು ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಡ್ರಾಪ್​​​​ ಕೊಡ್ತಾರೆ..ಇಂತಹ ವ್ಯವಸ್ಥೆ ಇರಬೇಕಾದ್ರೆ ಯಾರಿಗೆ ತಾನೇ ಈ ಸೇವೆ ಇಷ್ಟ ಆಗೋದಿಲ್ಲ..? ಹೀಗಾಗೇ ಇವತ್ತು ಆನ್​ಲೈನ್​​ ಟ್ಯಾಕ್ಸಿ ಬುಕ್ಕಿಂಗ್​​​ ತುಂಬಾ ಡಿಮ್ಯಾಂಡ್​​ ಪಡೆದುಕೊಂಡಿದೆ.

ಆನ್‌ಲೈನ್ ಟ್ಯಾಕ್ಸೀ ಬುಕಿಂಗ್ ನಲ್ಲಿ ಎರಡು ವಿಭಾಗಗಳಿವೆ. ಮೊದಲನೆಯದು ನಗರದೊಳಗಿನ ಬುಕಿಂಗ್.. ಇದ್ರ ಮೂಲಕ ಗ್ರಾಹಕರು ನಗರದ ವಿವಿಧ ಸ್ಥಳಗಳಿಗೆ ಪ್ರಯಾಣ ಮಾಡಬಹುದು. ಮತ್ತೊಂದು ನಗರದಾಚೆಗಿನ ಬುಕಿಂಗ್.. ಅಂದರೆ ಗ್ರಾಹಕರು ಒಂದು ನಗರದಿಂದ ಮತ್ತೊಂದು ನಗರಕ್ಕೆ ಪ್ರಯಾಣ ಮಾಡಬಹುದು.

ಭಾರತದಲ್ಲಿ ನಗರದೊಳಗಿನ ಆನ್‌ಲೈನ್ ಟ್ಯಾಕ್ಸೀ ಬುಕಿಂಗ್ ಮಾರುಕಟ್ಟೆ ಹೆಚ್ಚಾಗುತ್ತಿದೆ. ಔಟ್​ ಆಫ್​ ಸ್ಟೇಷನ್​​​ ಆನ್‌ಲೈನ್ ಟ್ಯಾಕ್ಸೀ ಬುಕಿಂಗ್ ಮಾರುಕಟ್ಟೆ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಯಾಕಂದ್ರೆ ಔಟ್​​ ಆಫ್​ ಸ್ಟೇಷನ್​​ ವ್ಯವಸ್ಥೆ ಪ್ರವಾಸಿ ಟ್ಯಾಕ್ಸೀ ಮತ್ತು ರೌಂಡ್ ಟ್ರಿಪ್ ಗಳಿಗೆ ಮಾತ್ರ ಮೀಸಲಾಗಿದೆ. ಹೀಗಾಗಿ ಈ ಮಾರ್ಕೆಟ್​​​ ಅಸಂಘಟಿತವಾಗಿದೆ.

ಸುನಿಲ್ ಚೌಲ ಐಐಟಿ ಡೆಲ್ಲಿಯ ಹಳೆಯ ವಿದ್ಯಾರ್ಥಿ.ಸುನೀಲ್​​ ಕುಟುಂಬ ಒಂದು ಸಮಾರಂಭಕ್ಕೆ ಚಂಡೀಗಡಕ್ಕೆ ಹೋಗಬೇಕಾಗಿತ್ತು. ರೈಲ್ವೇ ಟಿಕೆಟ್ ಬುಕ್ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕ್ಯಾಬ್ ಬುಕ್ ಮಾಡಬೇಕಾದ ಅನಿವಾರ್ಯಿಯ ಪರಿಸ್ಥಿತಿ. ಹೀಗಾಗಿ ರೌಂಡ್ ಟ್ರಿಪ್ ಗೆ ಕ್ಯಾಬ್ ಬುಕ್ ಮಾಡಿದ್ದರು. ಆದರೆ ಆ ಡ್ರೈವರ್ ಅವರನ್ನು ವಾಪಸ್ ಕರೆತರಲು ಹೋಗಲಿಲ್ಲ. ಆ ಪ್ರಯಾಣದಲ್ಲಿ ಸುನಿಲ್ ಡ್ರೈವರ್ ಜೊತೆ ಮಾತನಾಡಿದಾಗ ಅವರಿಗೆ ತಿಳಿದಿದ್ದು ಏನಂದರೆ ಹೇಗೆ ಟ್ಯಾಕ್ಸೀ ಮಾರುಕಟ್ಟೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿತ್ತು. ಇದರ ಪರಿಣಾಮ ವಿವಿಗೊ. ಕಾಂ ಕಲ್ಪನೆ ಹುಟ್ಟಿಕೊಂಡಿತು. ಸೆಪ್ಟೆಂಬರ್ 2014 ರಂದು ಸಾರ್ವಜನಿಕ ಸೇವೆಯನ್ನು ಆರಂಭಿಸಲಾಯಿತು.

ನಗರದಾಚೆಗಿನ ಕ್ಯಾಬ್ ಬುಕಿಂಗ್ ನಲ್ಲಿ ಗ್ರಾಹಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಟ್ರಾನ್ಸ್​ಫರೆನ್ಸಿ, ಸೇವೆಯ ಗುಣಮಟ್ಟ, ಮತ್ತು ಚಾಲಕರ ನಡವಳಿಕೆಗಳು ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತಿವೆ.

ವಿವಿಗೊ. ಕಾಂ ನಗರದಾಚೆಗಿನ ಪ್ರಯಾಣಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಇನ್ನಿತರ ಕಾರ್ ಸೇವೆಗಳಿಗಿಂತ ಕಡಿಮೆ ಬೆಲೆಯಲ್ಲಿ ಒದಗಿಸುತ್ತಿದೆ. ಸುನಿಲ್ ಐಐಟಿ ಡೆಲ್ಲಿಯ ಬಿಟೆಕ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವೀಧರ. ಉತ್ಪನ್ನ ಸೃಷ್ಟಿ, ತಂತ್ರಜ್ಞಾನ, ಮತ್ತು ತಂಡದ ನಿರ್ವಹಣೆಯಲ್ಲಿ ಅಂತಾರಾಷ್ಟ್ರೀಯ ಅನುಭವವನ್ನು ಹೊಂದಿದ್ದಾರೆ. 10 ವರ್ಷ ಯುಕೆ ಯಲ್ಲಿ ಕಳೆದಿದ್ದಾರೆ ಅವರು ಫಿಲಿಪ್ಸ್ ಸೆಮಿಕಂಡಕ್ಟರ್ ಮತ್ತು ಎಸ್ಟಿ-ಎರಿಕ್ಸನ್ ಮೊಬೈಲ್ ಪ್ಲ್ಯಾಟ್‌ಫಾರ್ಮ್ಸ್ ಗಳಲ್ಲಿ ಕೆಲಸ ಮಾಡಿದ್ದಾರೆ.

ಸುನೀಲ್​​ ಕೇವಲ 5 ಲಕ್ಷ ರೂಪಾಯಿ ಬಂಡವಾಳದಲ್ಲಿ ವಿವಿಗೊ. ಕಾಂ ಆರಂಭಿಸಿದ್ದಾರೆ. ತನ್ನ ಉದ್ಯಮಕ್ಕಾಗಿ ಕಾರ್ಪೊರೆಟ್​​ ಕೆಲಸಕ್ಕೂ ಗುಡ್​ ಬೈ ಹೇಳಿದ್ದಾರೆ. ಕೆಲವರು ಸುನೀಲ್​​ನನ್ನು ಹುಚ್ಚ ಎಂದೂ ಕರೆದಿದ್ದರು. ಅದ್ರೆ ಅದ್ಯಾವುದಕ್ಕೂ ಸುನೀಲ್​ ತಲೆ ಕೆಡಿಸಿಕೊಂಡಿಲ್ಲ.

ಕ್ಯಾಬ್ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ತೃಪ್ತಿ ಪಡಿಸುವಿಕೆ ಮತ್ತು ಸೇವೆಯ ಗುಣಮಟ್ಟ ಕಾಪಾಡುವುದು ಎರಡು ದೊಡ್ಡ ಮಸ್ಯೆಗಳು. ಆದ್ರೆ ನಗರದಾಚೆಗಿನ ಕ್ಯಾಬ್ ಮಾರುಕಟ್ಟೆಯಲ್ಲಿ ವಿವಿಗೊ.ಕಾಂ ಅದ್ಭುತವಾದ ಬೆಳವಣಿಗೆಯನ್ನು ನೋಡಿದೆ.

ವಿವಿಗೊ.ಕಾಂನಲ್ಲಿ ಸುಲಭವಾದ ಮೂರು ಪ್ರಕ್ರಿಯೆಗಳಿವೆ. ಹುಡುಕಾಟ, ಆಯ್ಕೆ ಮತ್ತು ಬುಕ್. ಪ್ರತಿಯೊಬ್ಬ ಗ್ರಾಹಕ ಹೋಗಬೇಕಾದ ನಗರ ಮತ್ತು ದಿನಾಂಕವನ್ನು ಆಯ್ಕೆ ಮಾಡಲೇಬೇಕು. ಬೆಲೆಯನ್ನು ನೋಡಿದ ನಂತರ ಅನೇಕ ಆಯ್ಕೆಗಳನ್ನು ನೋಡಬಹುದು. ಗ್ರಾಹಕರು ನಮ್ಮ ಒಂದು ಕಡೆಯ ಕ್ಯಾಬ್ ಸೇವೆಯನ್ನು ಇಷ್ಟ ಪಡುತ್ತಿದ್ದಾರೆ ಇದರಿಂದ ಅವರಿಗೆ ಶೇಕಡಾ 50 ರಷ್ಟು ಹಣ ಉಳಿತಾಯ ಆಗುತ್ತಿದೆ. ಬೆಲೆಯಲ್ಲಿ ಟ್ಯಾಕ್ಸ್, ಪಾರ್ಕಿಂಗ್ ಚಾರ್ಜ್ ಎಲ್ಲವೂ ಸೇರಿರುತ್ತದೆ. 

ಈ ಉದ್ಯಮ ಆರಂಭವಾಗಿ ಕೇವಲ 3 ತಿಂಗಳಾಗಿದೆ. ಅದಾಗಲೇ ವಿವಿಗೊದಲ್ಲಿ ತಿಂಗಳಿಗೆ 600 ರಿಂದ 800 ಬುಕ್ಕಿಂಗ್​ಗಳು ನಡೆಯುತ್ತಿವೆ. ಸದ್ಯಕ್ಕೆ ವಿವಿಗೊ.ಕಾಂ ಬಳಿ 400 ಕ್ಯಾಬ್ ಗಳಿವೆ. 20 ನಗರಗಳಲ್ಲಿ ಸೇವೆ ಒದಗಿಸುತ್ತಿದ್ದಾರೆ. ಭವಿಷ್ಯದಲ್ಲಿ 100 ನಗರಗಳಿಗೆ ವಿಸ್ತಾರ ಮಾಡುವ ಯೋಜನೆ ನಡೆಯುತ್ತಿದೆ.