ಸ್ಟಾರ್ಟ್ಅಪ್ ಪರಿಸರದಲ್ಲಿ ಸಮಗ್ರತೆಗೇಕೆ ಮಹತ್ವ?

ಟೀಮ್​ ವೈ.ಎಸ್.ಕನ್ನಡ 

ಸ್ಟಾರ್ಟ್ಅಪ್ ಪರಿಸರದಲ್ಲಿ ಸಮಗ್ರತೆಗೇಕೆ ಮಹತ್ವ?

Friday March 04, 2016,

5 min Read

ನಾವೊಂದು ಚುನಾವಣೆ ನಡೆಸಿದ್ರೆ ಏನಾಗಬಹುದು? ಮುಂದಿನ ಸುತ್ತಿನ ಫಂಡಿಂಗ್ನಲ್ಲಿ ಹಣ ಸುಲಭವಾಗಿ ಲಭ್ಯವಿರುವುದಿಲ್ಲ, ಹಾಗಾದ್ರೆ ಭಾರತದ ಹೈಪರ್ ಫಂಡೆಡ್ ಸ್ಟಾರ್ಟ್ಅಪ್ಗಳು ಯಾವುದರ ಬಗ್ಗೆ ಗಮನಹರಿಸಬೇಕು? ಬಹುಷಃ ಪ್ರತಿಕ್ರಿಯೆಯ ಪಟ್ಟಿ ಕಾರ್ಯ ಲಾಭ, ಯೂನಿಟ್ ಎಕನಾಮಿಕ್ಸ್, ಉತ್ಪನ್ನ ಭಿನ್ನತೆ ಮತ್ತು ಗ್ರಾಹಕ ಅಭ್ಯಾಸವನ್ನು ಒಳಗೊಂಡಿರಬಹುದು. 2014 ಮತ್ತು 2015ರ ಹೈಪರ್ ಫಂಡಿಂಗ್ ಎಲ್ಲವನ್ನೂ ಹಾಳುಗೆಡವಿದೆ, ಇದು ಮೂಲಭೂತ ಅಂಶಗಳಿಗೆ ಮರಳಿ ಹೋಗುವ ಸಮಯ. ಆದ್ರೂ ಹೈಪರ್ ಅನುದಾನಿತ ಭಾರತೀಯ ಉದ್ಯಮಗಳ ಮರ್ಮಸ್ಥಾನ ಬೇರೆ ಏನಾದರೂ ಇರಬಹುದು. ಅದನ್ನು ನಾವು ಊಹಿಸುವುದು ಕಷ್ಟ. ಹೈಪರ್ ಫಂಡಿಂಗ್ನ ಕ್ಯಾನ್ಸರ್​ಕಾರಕ ಅಂಶಗಳು ನಮ್ಮನ್ನೇ ತಿಂದುಹಾಕುವಂತಹ ಕ್ಯಾನ್ಸರ್​ಗೆ ತುತ್ತು ಮಾಡಿದೆ, ಅದರಿಂದ ನಾವು ಚೇತರಿಸಿಕೊಳ್ಳದಂತೆ ಮಾಡಿದೆ. ಇದು ಸಮಗ್ರತೆಯ ಕ್ಯಾನ್ಸರ್. ಕಂಪನಿಗಳು ಅವಲಂಬಿಸಿರುವ ಸಮಗ್ರತೆಯನ್ನು ಕೊಲ್ಲುವ ಕ್ಯಾನ್ಸರ್​ ಬ್ರಾಂಡ್​ನ ಕೆಲ ಲಕ್ಷಣಗಳು ಇಲ್ಲಿವೆ.

image


ವ್ಯಾಪಾರಿ ರಹಸ್ಯ ಮತ್ತು ಬೌದ್ಧಿಕ ಆಸ್ತಿ ಕದಿಯುವಿಕೆ...

ಸಾಯುವ ಹಂತದಲ್ಲಿರುವ ಉದ್ಯಮ ಮುಖ್ಯ ಆಧಾರವನ್ನು ಅವಲಭಿಸುತ್ತದೆ ಮತ್ತು ಹೈಪರ್ ಫಂಡ್ ಗಿಟ್ಟಿಸಿಕೊಳ್ಳುವ ಕ್ಷೇತ್ರಕ್ಕೆ ಪ್ರವೇಶಿಸುತ್ತದೆ. ಆ ಸಂಸ್ಥೆಯ ಕಲೆ ಉದ್ಯೋಗಿಗಳು ಅದನ್ನು ಬಿಟ್ಟು ಉನ್ನತ ಅನುದಾನಿತ ಕಂಪನಿ ಸೇರುತ್ತಾರೆ. ಕೆಲ ತಿಂಗಳುಗಳ ನಂತರ ವ್ಯಾಪಾರದ ರಹಸ್ಯ, ಗ್ರಾಹಕ ಅಂಕಿ-ಅಂಶಗಳು, ಕೋಡ್ಗಳನ್ನು ತಿಳಿದುಕೊಂಡು ಮರಳುತ್ತಾರೆ. ಸಂಸ್ಥೆ ಹಾಗೂ ನೌಕರರು ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗಾಗಿ ಏನೂ ನಡೆಯುವುದಿಲ್ಲ. ಇದು ಜಾಗತಿಕ ನಿಧಿಯಿಂದ ಬರುತ್ತದೆ. ಒಂದು ಹೆಸರಾಂತ ಕಾನೂನು ಸಂಸ್ಥೆ ಅವರಿಗೆ ಕ್ಲೀನ್ ಚಿಟ್ ನೀಡುವಂತೆ ಅಭಿಪ್ರಾಯ ವ್ಯಕ್ತಪಡಿಸಿ ಪತ್ರ ಬರೆಯುತ್ತಾನೆ, ಬಂಡವಾಳ ಕೈತಪ್ಪಿ ಹೋಗುತ್ತದೆ. ಇದರ ಪರಿಣಾಮ ಸಾವಿನ ಹೋರಾಟದಲ್ಲಿ ಎರಡೂ ಕಂಪನಿಗಳು ಮುಂದಿನ ಸುತ್ತಿನ ಫಂಡಿಂಗ್ಗಾಗಿ ಅತ್ಯಂತ ವೇಗದಲ್ಲಿ ಬೆಳವಣಿಗೆ ಹೊಂದುತ್ತವೆ.

ಕಂಪನಿಯ ಅಧಿಕಾರಿಗಳಿಂದ ಕಪ್ಪು ಹಣ ವೈಟ್ ಮಾಡುವಿಕೆ

ತಮ್ಮ ಹೈಪರ್ ಫಂಡೆಡ್ ಕಂಪನಿಗಳಿಗೆ ಸೇವೆ ಒದಗಿಸಬಲ್ಲ ಹೊಸ ಕಂಪನಿಯನ್ನು ಸ್ಟಾರ್ಟ್ಅಪ್​ನ ಹಿರಿಯ ಉನ್ನತ ಆಡಳಿತ ಆರಂಭಿಸುತ್ತದೆ. ಸ್ಟಾರ್ಟ್ಅಪ್ ಹಣ ಕಳೆದುಕೊಂಡ್ರೆ, ಸರ್ವೀಸ್ ಪ್ರೊವೈಡರ್​ಗಳು ಒಳ್ಳೆ ಲಾಭ ಮಾಡಿಕೊಳ್ಳುತ್ತಾರೆ. ಸರ್ವೀಸ್ ಪ್ರೊವೈಡರ್​ಗಳು ಡಿವಿಡೆಂಡ್ ಮತ್ತು ಶುಲ್ಕದ ಮೂಲಕ ಷೇರುದಾರರನ್ನು ಸರಿದೂಗಿಸುತ್ತದೆ. ದೊಡ್ಡ ಇ-ಕಾಮರ್ಸ್ ಕಂಪನಿಯ ಸಂಸ್ಥಾಪಕರ ಸಂಬಂಧಿಗಳು ವೇದಿಕೆಯಲ್ಲಿ ಮಾರಾಟಗಾರರಾಗಿ ಬದಲಾಗುತ್ತಾರೆ. ಪರಿಣಾಮ ಕಂಪನಿ ನಷ್ಟದಲ್ಲಿ ಮಾರಾಟವಾಗುತ್ತದೆ. ಕಡಿಮೆ ಬೆಲೆಯಲ್ಲಿ ಹೆಚ್ಚಿನ ಸಗಟನ್ನು ಕೊಳ್ಳಲು ಹೆಚ್ಚಿನ ಬೆಲೆಗೆ ಇ-ಕಾಮರ್ಸ್ ಕಂಪನಿಗಳಿಗೆ ಮಾರಾಟ ಮಾಡುತ್ತಾರೆ.

ಇದನ್ನೂ ಓದಿ...

ಜಪಮಾಲೆಗೆ ಫ್ಯಾಷನ್ ಟಚ್ –ಕಾಶಿ ಗ್ರಾಮಗಳಲ್ಲಿ ಮೋದಿ ಸ್ಟಾರ್ಟ್ ಅಪ್ ಇಂಡಿಯಾ ಕನಸು ನನಸು

ಮಾಧ್ಯಮಗಳಿಗೆ ಬೇಕೆಂದೇ ಸುಳ್ಳು ಮತ್ತು ತಪ್ಪು ವರದಿ ನೀಡುವುದು

ಏಳೆಂಟು ವರ್ಷಗಳ ನಂತರ ಹೂಡಿಕೆದಾರರಿಗೆ ಹಣ ಹಿಂದಿರುಗಿಸಲು ಹೆಣಗಾಡುತ್ತಿರುವ ವಿಸಿ ಸಂಸ್ಥೆ, ಬಂಡವಾಳ ಕಂಪನಿಯೊಂದನ್ನು ಕಂಡುಕೊಳ್ಳುತ್ತದೆ. ಕಾರಣ ಹೈಪರ್ ಫಂಡೆಡ್ ಚೀನೀ ಸಂಸ್ಥೆಯೊಂದಕ್ಕೆ ಸಮನಾದ ಕಂಪನಿ, ಜಾಗತಿಕ ಹೂಡಿಕೆದಾರರ ಕಣ್ಣಂಚಿನಲ್ಲಿರುತ್ತದೆ. ಅಂತಹ ಮೌಲ್ಯಮಾಪನಗಳಲ್ಲಿ ವಿಸಿ 5 ಮಿಲಿಯನ್ ಡಾಲರ್ ಹೂಡಿಕೆ ಮಾಡುತ್ತದೆ. ಶೇ.50ರಷ್ಟು ಮೌಲ್ಯಮಾಪನ ಮಾಡಿ, ಹೂಡಿಕೆಗಿಂತ ದುಪ್ಪಟ್ಟು ಹಣದ ಅಂಕಿಅಂಶಗಳನ್ನು ಸ್ಟಾರ್ಟ್ಅಪ್ ಮಾಧ್ಯಮಗಳಿಗೆ ನೀಡುತ್ತದೆ. ಈ ಮೌಲ್ಯಮಾಪನ ಮತ್ತು ಹೂಡಿಕೆ ಹೆಚ್ಚಳವನ್ನು ನೋಡಿ ಪೈಪೋಟಿದಾರರು ಭಯಪಡಲಿ ಎಂಬುದೇ ಅವರ ಉದ್ದೇಶ. ಇದರಿಂದ ಮಾರುಕಟ್ಟೆಯಲ್ಲಿ ಜನಪ್ರಿಯತೆ ಸಿಗುತ್ತೆ, ಹೊಸ ಫಂಡ್ ಕೂಡ ದಕ್ಕುತ್ತೆ ಅನ್ನೋ ಕಾರಣಕ್ಕೆ ವಿಸಿಗಳು ಖುಷಿಪಡ್ತಾರೆ. ಜಾಗತಿಕ ಹೂಡಿಕೆದಾರರ ಬೆಸ್ಟ್ ಆಯ್ಕೆಯಲ್ಲಿ ತಮ್ಮ ಕಂಪನಿಯೂ ಒಂದಾಗಬೇಕು ಎನ್ನುವ ನಿಟ್ಟಿನಲ್ಲಿ ಜೊತೆಯಾಗಿ ಕೆಲಸ ಮಾಡ್ತಾರೆ. ಅಂತಹ ಸಂದರ್ಭಗಳಲ್ಲಿ ವರದಿಗಾರ ಉದ್ಯಮಿಯ ಸಂಬಂಧಿಕನೇ ಆಗಿರುತ್ತಾನೆ.

ವಸ್ತು ಸಂಘರ್ಷ ಆಸಕ್ತಿ...

ಹೈಪರ್ ಫಂಡಿಂಗ್ ಸೃಷ್ಟಿಸಿದ ಭಯಾನಕ ಹವ್ಯಾಸಗಳಿಂದಾಗಿ ಜಾಗತಿಕ ಫಂಡ್ ಮಾಡಿದ ಹೂಡಿಕೆ ದಕ್ಷಿಣದ ಪಾಲಾಗಲಿದೆ. ಹೂಡಿಕೆ ಬಗ್ಗೆ ನಕಲಿ ಅಂಕಿ-ಅಂಶ ಪ್ರಕಟಿಸುವ ಬದಲು, ಕೆಟ್ಟ ಹೂಡಿಕೆಯ ಏಂಜೆಲ್ ಎನಿಸಿಕೊಂಡಿರುವ ಸಂಸ್ಥಾಪಕನ ಪೋರ್ಟ್​ಫೊಲಿಯೋ ಕಂಪನಿಯೊಂದಿಗೆ ವಿಲೀನಗೊಳಿಸಬಹುದು. ಇದರಿಂದ ಆ ಕಂಪನಿಗೆ ಮಾರುಕಟ್ಟೆಯಲ್ಲಿ ಮೌಲ್ಯ ಹೆಚ್ಚಾಗಲಿದೆ. ಭವಿಷ್ಯದ ಹೂಡಿಕೆಗಳಲ್ಲಿ ಬಂಡವಾಳಗಾರರು ಅದನ್ನೂ ಪರಿಗಣಿಸಬಹುದು. ವಿಲೀನಗೊಂಡ ಕಂಪನಿಯಲ್ಲಿ ಏಂಜೆಲ್ ಹಾಗೂ ಫಂಡ್ ಪಾಲು ದೊರೆಯಲಿದೆ. ಇಲ್ಲಿ ಬ್ಯುಸಿನೆಸ್ ಮಧ್ಯೆ ಯಾವುದೇ ರೀತಿಯ ಒಡಂಬಡಿಕೆಗಳಿರುವುದಿಲ್ಲ. ಪರಸ್ಪರ ಷೇರುದಾರರ ಹಿತಾಸಕ್ತಿಯ ಸಂಘರ್ಷ, ಉಳಿದ ಶೇರ್ ಹೋಲ್ಡರ್​ಗಳ ಮೇಲೆ ಪರಿಣಾಮ ಬೀರಲಿದೆ.

ಕಲ್ಪನೆಗಳನ್ನು ಕದಿಯಲು ಹೂಡಿಕೆದಾರರ ವೇಷ

ಏಂಜೆಲ್ ಹೂಡಿಕೆದಾರ ಹೊಸ ಕಂಪನಿಯೊಂದನ್ನು ಆರಂಭಿಸಲು ಈಗಾಗ್ಲೇ ಅಸ್ಥಿತ್ವದಲ್ಲಿರುವ ಕಂಪನಿಯ ನೆರವು ಪಡೆಯುವುದು ಸಾಮಾನ್ಯ. ಹೂಡಿಕೆದಾರರನಂತೆ ತೋರಿಸಿಕೊಂಡು ಆತ ಅವರ ಪರ್ಯಾಯ ಕಂಪನಿಯ ಹೆಸರು ಸೇರಿದಂತೆ ಎಲ್ಲ ವಿವರವನ್ನೂ ತಿಳಿದುಕೊಳ್ಳುತ್ತಾನೆ. ಅವುಗಳಲ್ಲಿ ಒಂದು ಹೆಸರಿಗೆ ಡೊಮೈನ್ ಕೊಂಡುಕೊಂಡು, ಪೈಪೋಟಿ ಉದ್ಯಮ ಆರಂಭಿಸುತ್ತಾನೆ. ಅಷ್ಟೇ ಅಲ್ಲ ಸೀಡ್ ಫಂಡಿಂಗ್ ಅನ್ನೂ ಗಿಟ್ಟಿಸಿಕೊಳ್ತಾನೆ. ವಿಸಿ ಜೊತೆಗೂ ನಡೆಯುವುದು ಇಂಥದ್ದೇ ಕಥೆ. ವಿಸಿ ಸಂಸ್ಥೆ ಟರ್ಮ್ ಶೀಟ್ ಹೊರಗೆಡವದೆ ತಮ್ಮ ಎದುರಾಳಿ ಕಂಪನಿಯನ್ನು ಹತ್ತಿರದಿಂದ ಅವಲೋಕಿಸುತ್ತದೆ. ಹಲವು ವಾರಗಳ ಬಳಿಕ ಒಪ್ಪಂದ ಘೋಷಣೆಯಾಗುತ್ತದೆ. ಪೈಪೋಟಿದಾರರ ಇಮೇಲ್​ಗಳಿಗೆ ವಿಸಿ ಉತ್ತರಿಸುವುದೇ ಇಲ್ಲ.

ಸಂಸ್ಥಾಪಕರು ಸ್ಟಾರ್ಟ್ಅಪ್ ತ್ಯಜಿಸುತ್ತಾರೆ, ಸಂಸ್ಥೆ ವಿಲೀನಗೊಂಡಂತೆ ಪೋಸ್ ಕೊಡುತ್ತಾರೆ...

ಬಿ2ಬಿ ಲಾಜಿಸ್ಟಿಕ್ಸ್​ನಲ್ಲಿ ಉದ್ಯಮಿಗಳು ಒಂದು ತಿಂಗಳಲ್ಲಿ ಕೋಟಿಗಟ್ಟಲೆ ಹಣ ವ್ಯಯಿಸುತ್ತಾರೆ. ಬಹುತೇಕ ಹಣವೆಲ್ಲ ಖಾಲಿಯಾದಾಗ, ಫಂಡಿಂಗ್ ಕೂಡ ಕೈಗೆಟುಕದೇ ಇದ್ದಾಗ ರೇಸ್​ನಿಂದ ಹಿಂದೆ ಸರಿದುಬಿಡ್ತಾರೆ. ಕಾರ್ಯಾಚರಣೆ ಸ್ಥಗಿತಗೊಳಿಸಬೇಕಾಗಿ ಬಂದಾಗ ಡೆಲಿವರಿ ಬಾಯ್ಸ್ ಕಚೇರಿಯನ್ನು ಧ್ವಂಸ ಮಾಡಿ ಅಲ್ಲಿರುವ ವಸ್ತುಗಳನ್ನೆಲ್ಲ ಕದಿಯುತ್ತಾರೆ. ಬಳಿಕ ಸಂಸ್ಥಾಪಕರು ಅಳಿದುಳಿದ ಹಣವನ್ನು ಬ್ಯಾಂಕ್ನಿಂದ ವಿತ್ಡ್ರಾ ಮಾಡಿ ಅದನ್ನು ತಮ್ಮ ಪರ್ಸನಲ್ ಅಕೌಂಟ್ಗೆ ಹಾಕಿಕೊಳ್ತಾರೆ. ಬೇರೊಂದು ಲಾಜಿಸ್ಟಿಕ್ ಕಂಪನಿ ಸ್ವಾಧೀನಪಡಿಸಿಕೊಂಡಿದೆ ಎಂದು ಪತ್ರಿಕೆಗಳಲ್ಲಿ ಸುದ್ದಿಯಾಗುತ್ತದೆ. ಆ ಕಂಪನಿಯಲ್ಲಿ ಸಂಸ್ಥಾಪಕರಿಗೆ ಒಳ್ಳೆ ವೇತನ, ಉನ್ನತ ಹುದ್ದೆ ಸಿಗುತ್ತದೆ.

ಸ್ಟಾಕ್ ಆಯ್ಕೆಗೆ ಅತೃಪ್ತ ಭರವಸೆ..

ಷೇರುಗಳ ಆಯ್ಕೆಯ ಭರವಸೆ, ಮೌಖಿಕ ಬಾಧ್ಯತೆಗಳ ಮೇಲೆ ವಾಣಿಜ್ಯೋದ್ಯಮಿಗಳು ಜನರನ್ನು ನೇಮಕ ಮಾಡಿಕೊಳ್ತಾರೆ. ಎರಡು ಸುತ್ತಿನ ಫಂಡಿಂಗ್ ಹೊರತಾಗಿಯೂ ಆಯ್ಕೆಗಳನ್ನು ಮಂಜೂರು ಮಾಡುವುದಿಲ್ಲ. ಆದ್ರೂ ನೌಕರ ಆ ಆಯ್ಕೆಯನ್ನು ಗಿಟ್ಟಿಸಿಕೊಳ್ಳುವ ಆಸೆಯಿಂದ ಶ್ರಮವಹಿಸಿ ಕೆಲಸ ಮಾಡುತ್ತಲೇ ಇರುತ್ತಾನೆ. ಅಸಮಾಧಾನ ವ್ಯಕ್ತಪಡಿಸಿದಲ್ಲಿ ಪ್ರಸ್ತುತ ಬೆಲೆಗೆ ಸ್ಟಾಕ್ ಆಯ್ಕೆಗಳನ್ನು ನೀಡಲಾಗಿರುತ್ತದೆ, ಅದು ಆತ ಕೆಲಸಕ್ಕೆ ಸೇರಿದ ಸಮಯದಲ್ಲಿದ್ದುದರ 15 ಪಟ್ಟು ಹೆಚ್ಚಾಗಿರುತ್ತದೆ. ರೂಪಾಯಿ ಮೌಲ್ಯ ಪರಿಗಣಿಸಿ ಸಂಬಳ ಗಣನೆಗೆ ತೆಗೆದುಕೊಳ್ಳುತ್ತಾರೆ. ಅದರಲ್ಲೂ ಹೂಡಿಕೆದಾರರಿಗೆ ಅಧಿಕ ಪಾಲು ಮೀಸಲು. ತನಗೆ ಕಂಪನಿ ವಂಚಿಸಿದೆ ಅನ್ನೋದು ಗೊತ್ತಾಗುತ್ತಿದ್ದಂತೆ ನೌಕರ, ಸಂಬಳ ಹೆಚ್ಚಿಸಿಕೊಂಡು, ಅನುಭವ ಗಳಿಸಿಕೊಂಡು ಕೆಲಸ ಬಿಡಲು ಸಜ್ಜಾಗುತ್ತಾನೆ. ಹೈಪರ್ ಫಂಡೆಡ್ ಸ್ಟಾರ್ಟ್ಅಪ್​ಗಳಲ್ಲಿರುವ ಬ್ಯಾಚ್​ಮೇಟ್​ಗಳ ಜೊತೆ ಮಾತನಾಡಿ ಸಂಸ್ಥಾಪಕನಾಗಿ ಹೊಸ ಕಂಪನಿ ಕಟ್ಟಲು ಯೋಜನೆ ರೂಪಿಸ್ತಾನೆ. ಷೇರುಗಳನ್ನೆಲ್ಲ ಹೂಡಿಕೆದಾರರಿಗೆ ಮಾರಾಟ ಮಾಡಿ, ಯಾವುದೇ ಷೇರುಗಳನ್ನು ಉದ್ಯೋಗಿಗಳಿಗೆ ಕೊಡದೇ ಭಾರತೀಯ ನೌಕರರು ಸ್ಟಾಕ್ ಆಯ್ಕೆಗಳಿಗೆ ಮಹತ್ವ ನೀಡುವುದಿಲ್ಲ ಎಂಬ ಬಗ್ಗೆ ಚರ್ಚೆಗೆ ಕೂರ್ತಾನೆ. ಸ್ಟಾರ್ಟ್ಅಪ್ಗಳನ್ನು ಕಟ್ಟಿ ಬೆಳೆಸುವುದು ಹೇಗೆ? ಸಂಸ್ಥಾಪಕರು ಶ್ರೀಮಂತರು, ಜನಪ್ರಿಯವೂ ಆಗುವುದು ಹೇಗೆ ಅನ್ನೋ ಯುವ ಪದವೀಧರರ ಪ್ರಶ್ನೆಗೆ ಇದೇ ಉತ್ತರ.

ಇದನ್ನೆಲ್ಲ ಓದ್ತಾ ಓದ್ತಾ ನನಗೂ ಇಂತಹ ಅನುಭವ ಆಗಿದೆ ಎಂದು ನಿಮಗೂ ಅನಿಸಿರಬಹುದು. ಪ್ರತಿ ಹೂಡಿಕೆದಾರ ಹಾಗೂ ಉದ್ಯಮಿಯ ಬದುಕಿನಲ್ಲೂ ಇಂತಹ ಘಟನೆಗಳು ನಡೆದಿರುತ್ತವೆ. ವಿಶ್ವದಲ್ಲಿ 6 ಮಂದಿ ಕ್ಯಾನ್ಸರ್ ಪೀಡಿತರಲ್ಲಿ ಒಬ್ಬರು ಸಾಯುತ್ತಿದ್ದಾರೆ. ಅದೇ ರೀತಿ ಹೈಪರ್ ಫಂಡೆಂಡ್ ಭಾರತೀಯ ಸ್ಟಾರ್ಟ್ಅಪ್ಗಳು ಸಮಗ್ರತೆ ಎಂಬ ಕ್ಯಾನ್ಸರ್​ನಿಂದ ಬಳಲುತ್ತಿವೆ. ಆದ್ರೆ ಹೈಪರ್ ಅನುದಾನಿತ ಉದ್ಯಮಗಳು ಟೆಕ್ ಉದ್ಯಮಿಗಳಿಗೆ ಸ್ಪೂರ್ತಿಯ ಮೂಲವಾಗಿವೆ. ಹಾಗಾಗಿ ಸಮಗ್ರತೆ ಎಂಬ ಕ್ಯಾನ್ಸರ್ ಗಡಿಯನ್ನು ದಾಟಿ ಇಡೀ ಪರಿಸರಕ್ಕೂ ಪಸರಿಸುತ್ತಿದೆ. ಜಾಗತಿಕ ಹೂಡಿಕೆದಾರರಲ್ಲಿ ಅನಾರೋಗ್ಯದ ಚಿಹ್ನೆಗಳು ಕಾಣಿಸಲಾರಂಭಿಸಿವೆ.

ದೆಹಲಿಯಲ್ಲಿ ನಡೆದ ನನ್ನ ''ದಿ ಗೋಲ್ಡನ್ ಟ್ಯಾಪ್ - ದಿ ಇನ್​ಸೈಡ್​ ಸ್ಟೋರಿಸ್ ಆಫ್ ಹೈಪರ್ ಫಂಡೆಡ್ ಇಂಡಿಯನ್ ಸ್ಟಾರ್ಟ್ಅಪ್ಸ್'' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸೈನಾ ನೇತೃತ್ವದ ಸಿಎನ್​ಬಿಸಿ ಯಂಗ್ ಟರ್ಕ್ಸ್​ ತಂಡ ಪಾಲ್ಗೊಂಡಿತ್ತು. ಮೂರು ತಲೆಮಾರುಗಳ ಉದ್ಯಮಿಗಳು ಅಲ್ಲಿ ಉಪಸ್ಥಿತರಿದ್ರು. ಇನ್ಫೋ ಎಡ್ಜ್ ಸಂಸ್ಥಾಪಕ ಸಂಜೀವ್ ಬಿಕ್​ಚಂದಾನಿ, ಜೊಮ್ಯಾಟೋ ಸಂಸ್ಥಾಪಕ ದೀಪಿಂದರ್ ಗೋಯಲ್, ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಚರ್ಚೆಯಲ್ಲಿ ಪಾಲ್ಗೊಂಡಿದ್ರು. ಕಾರ್ಯಕ್ರಮದಲ್ಲಿ ನನ್ನನ್ನು ಅತಿ ಹೆಚ್ಚಾಗಿ ಸೆಳೆದಿದ್ದು ಮಿಂಟ್ ಎಡಿಟರ್ ಆರ್.ಸುಕುಮಾರ್ ಅವರ ಮಾತು.

ತಂತ್ರಜ್ಞಾನ ಉದ್ಯಮ ಭಾರತದ ಮುಖ್ಯವಾಹಿನಿಯಾಗಲಿದೆ ಎಂದು ನಾವೆಲ್ಲ ಕನಸು ಕಂಡಿದ್ದೇವೆ. ಜ್ಞಾನ ಮತ್ತು ಉದ್ಯೋಗಿ ಮಾಲೀಕತ್ವ ಮುನ್ನಡೆಸುತ್ತಿರುವ ಪಾರದರ್ಶಕತೆ ಹಾಗೂ ಅರ್ಹತೆಯ ಆಧಾರದ ಮೇಲೆ ಕಟ್ಟಿದ ಹೊಸ ತಳಿಯ ಉದ್ಯಮ ಅದು. ಯಾವುದೇ ಭ್ರಷ್ಟಾಚಾರವಿಲ್ಲದೆ ದೇಶದ ಸಮಸ್ಯೆಯನ್ನು ಬ್ಯುಸಿನೆಸ್ ಪರಿಹರಿಸುತ್ತೆ. ತಂತ್ರಜ್ಞಾನ ಉದ್ಯಮಕ್ಕೆ ಉಳಿಗಾಲವಿದೆ ಎಂದೆನಿಸುತ್ತಿದೆ ಅನ್ನೋದು ಸುಕುಮಾರ್ ಅವರ ಅಭಿಪ್ರಾಯವಾಗಿತ್ತು.

ನನ್ನನ್ನು ಅತಿಯಾಗಿ ಬಾಧಿಸಿದ ಪ್ರಶ್ನೆಯೆಂದ್ರೆ, 1999ರಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದಾಗ್ಲೇ ಕಂಪನಿ ಆರಂಭಿಸಿದ್ದ ನಾನು ಕೂಡ ಸುಕುಮಾರ್ ಅವರು ಕಂಡ ಕನಸನ್ನೇ ಕಂಡಿದ್ದೆ. ಇನ್ಫೋಸಿಸ್ ಸಂಸ್ಥಾಪಕರ ಬಗ್ಗೆ ಕಥೆಗಳನ್ನು ಕೇಳುತ್ತಿದ್ದೆ, ಕಂಪನಿ ತೆರಿಗೆಯನ್ನು ಹೇಗೆ ಪಾವತಿಸುತ್ತೆ? ಪಾರದರ್ಶಕತೆಯನ್ನು ಹೇಗೆ ಕಾಪಾಡಿಕೊಳ್ಳುತ್ತೆ ಅನ್ನೋ ಕುತೂಹಲ ನನ್ನಲ್ಲಿತ್ತು. 2014 ಮತ್ತು 2015ರಲ್ಲಿ ನನಗದರ ನೈಜ ದರ್ಶನವಾಗಿದೆ. ಹೊಸ ತಂತ್ರಜ್ಞಾನ ವ್ಯವಹಾರಗಳು, ಹಳೆಯ ಬ್ಯುಸಿನೆಸ್ ವಿರುದ್ಧ ಬಂಡೇಳುವ ಅದೇ ಅನಿಷ್ಠ ಹಾವಳಿಯಂತಿವೆ. ಇದು ಹಳೆಯದರ ಹೊಸ ಭಾಗವಷ್ಟೆ.

ಟೆಕ್ ಸ್ಟಾರ್ಟ್ಅಪ್ಗಳಿಗೆ ಭಾರತದಲ್ಲಿ ಸುದೀರ್ಘ ಮತ್ತು ಸಮರ್ಥನೀಯ ಮಾರ್ಗ ಬೇಕಾಗಿದೆ. ಅಲ್ಲಿ ಕಲ್ಪನೆಗಳು ಮತ್ತು ಹಣ ಹೇರಳವಾಗಿ ಉಳಿಯುತ್ತದೆ. ನಾವು ಸಮಗ್ರತೆಯ ಕ್ಯಾನ್ಸರ್ ಅನ್ನು ತೊಡೆದುಹಾಕಬೇಕಿದೆ. ಸಮರ್ಥ ಕಾನೂನು ವ್ಯವಸ್ಥೆಯ ಕೊರತೆಯಿರುವುದರಿಂದ ನಾವೆಲ್ಲ ಸಮಗ್ರತೆಯಿಂದ ಕಾರ್ಯನಿರ್ವಹಿಸಬೇಕು. ಕ್ಯಾನ್ಸರ್ ನಮ್ಮನ್ನು ಕೊಲ್ಲುವ ಮೊದಲು ನಾವದನ್ನು ಸಮರ್ಥವಾಗಿ ಎದುರಿಸೋಣ.

ಲೇಖಕರು: ಕಶ್ಯಪ್ ದಿಯೋರಾ

ಅನುವಾದಕರು: ಭಾರತಿ ಭಟ್

ಇದನ್ನೂ ಓದಿ...

ಸೆಲೆಬ್ರಿಟಿ ಬಾಲಿವುಡ್ ನಟರನ್ನು ಆಕರ್ಷಿಸುತ್ತಿರುವ ರೈಲ್ವೆ ಬಾಂಡ್ 

ಕೈಗಳೇ ಇಲ್ಲದ ಕಲಾವಿದೆಯ ಕುಂಚದಲ್ಲಿ ಅರಳಿದ ಕಲೆ...