ಸಾಮಾಜಿಕ ಜಾಲತಾಣಗಳ ಸೂಪರ್ ಸ್ಟಾರ್ ಈ “ಫಿಟ್ನೆಸ್ ಕೌರ್”

ಟೀಮ್​ ವೈ.ಎಸ್​. ಕನ್ನಡ

ಸಾಮಾಜಿಕ ಜಾಲತಾಣಗಳ ಸೂಪರ್ ಸ್ಟಾರ್ ಈ “ಫಿಟ್ನೆಸ್ ಕೌರ್”

Monday February 06, 2017,

2 min Read

ಬ್ಯುಸಿ ಲೈಫ್​ನ ಮಧ್ಯದಲ್ಲೂ ಫಿಟ್​ನೆಸ್​ಗೆ ಸ್ಥಾನ ಇದ್ದೇ ಇದೆ. ಫಿಟ್ ಆಗಿರಲು ಮಾಡುವ ಕಸರತ್ತುಗಳು ಅಷ್ಟಿಷ್ಟಲ್ಲ. ದೇಹ ಫಿಟ್ ಆಗಿದ್ದರೆ ಮನಸ್ಸು ಮತ್ತು ಆರೋಗ್ಯ ಕೂಡ ಫಿಟ್​ನೆಸ್​ನಿಂದ ಕೂಡಿರುತ್ತದೆ. ಹೀಗಾಗಿ ಫಿಟ್​ನೆಸ್ ವಿಡೀಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಲೈಕ್​ಗಳನ್ನು ಪಡೆಯುತ್ತವೆ. ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸುದ್ದಿ ಮಾಡುತ್ತಿರುವುದು ಗುರ್​ಪ್ರೀತ್ ಕೌರ್. ಯು.ಕೆ. ಮೂಲದ 21 ವರ್ಷದ ಸಿಕ್ ಹುಡುಗಿ ಫೇಸ್ ಬುಕ್ ಮತ್ತು ಇನ್ಸ್ಟಾ ಗ್ರಾಮ್​ಗಳಲ್ಲಿ "ಫಿಟ್ನೆಸ್ ಕೌರ್" ಅಂತಲೇ ಫೇಮಸ್ ಆಗಿದ್ದಾರೆ. ಗುರ್ ಪ್ರೀತ್ ತನ್ನ ಫಿಟ್ನೆಸ್ ವರ್ಕೌಟ್​ಗಳಿಂದ, ದಿನನಿತ್ಯದ ಫಿಟ್ನೆಸ್ ಚಟುವಟಿಕೆಗಳಿಂದ,ವೇಯ್ಟ್​​ ಟ್ರೈನಿಂಗ್ ಮತ್ತು ಯೋಗದಿಂದ ಸಾಕಷ್ಟು ಜನರ ಗಮನ ಸೆಳೆದಿದ್ದಾರೆ.

image


ಗುರ್​ಪ್ರೀತ್ ಕೌರ್ ತನ್ನ ವರ್ಕೌಟ್ ಮತ್ತು ಫಿಟ್ನೆಸ್ ಬಗ್ಗೆ ಇನ್ಸ್ಟಾ ಗ್ರಾಂ ಮತ್ತು ಫೇಸ್ ಬುಕ್​ಗಳಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ. ಗುರ್ ಪ್ರೀತ್ ಮಾಡುವ ಪುಷ್ ಅಪ್​ಗಳು, ರಿಂಗ್ ಡಿಪ್ಸ್ ಸೇರಿದಂತೆ ಕಠಿಣ ವರ್ಕೌಟ್​​ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಶಂಸೆಯನ್ನು ಗಿಟ್ಟಿಸಿಕೊಳ್ಳುತ್ತಿದೆ. ಗುರ್​ಪ್ರೀತ್ ಇನ್ಸ್ಟಾ ಗ್ರಾಂನಲ್ಲಿ 17000 ಪಾಲೋವರ್​​ಗಳನ್ನು ಹೊಂದಿದ್ದಾರೆ. ಅಷ್ಟೆ ಅಲ್ಲ ತನ್ನ ಅದ್ಭುತ ಫಿಟ್ನೆಸ್ ವರ್ಕೌಟ್ ಚಿತ್ರಗಳಿಗೆ ದಿನವೊಂದಕ್ಕೆ ಸಾವಿರಾರು ಲೈಕ್​ಗಳನ್ನು ಪಡೆಯುತ್ತಿದ್ದಾರೆ.

ಇದನ್ನು ಓದಿ: ಕನ್ನಡ ಬೆಳಸಲು ಆರಂಭವಾಯ್ತು "ಡಿಂಡಿಮ"

ಗುರ್​ಪ್ರೀತ್ ಅಮ್ಮ ಇಂಗ್ಲೆಂಡ್ ಮೂಲದವರಾದರೆ, ಅಪ್ಪ ಪಂಜಾಬ್​ನವರು. ಹೀಗಾಗಿ ಗುರ್​ಪ್ರೀತ್​ಗೆ ಸಿಖ್ ಮೂಲದ ಆಪ್ತತೆ ಇದೆ. ಗುರ್​ಪ್ರೀತ್ ಭಾರತಕ್ಕೆ ಆಗಾಗ ಬೇಟಿ ನೀಡುತ್ತಿರುತ್ತಾರೆ. ಅಮೃತಸರದ "ಗೋಲ್ಡನ್ ಟೆಂಪಲ್​ಗೆ" ಬೇಟಿ ಕೊಟ್ಟಾಗ ಆಕೆಗೆ ಒಂದು ಅದ್ಭುತ ಅನುಭವಾಗಿತ್ತು. ಅಮೃತ್ ಸಂಚಾರ್​ನಲ್ಲಿ ತನ್ನ ಹೆಸರು ಬರೆಯುವಾಗ ಗುರ್​ಪ್ರೀತ್​ಗೆ ದಿನನಿತ್ಯದ ಫಿಟ್​ನೆಸ್​​ ಬಗ್ಗೆ ಹೆಚ್ಚು ಆಸಕ್ತಿ ಮೂಡಿತ್ತು. ಸಿಖ್ಖರ ಶಬ್ದಾಸ್ ಮ್ಯೂಸಿಕ್ ಜೊತೆಗೆ ಗುರ್​ಪ್ರೀತ್ ಫಿಟ್ನೆಸ್ ವರ್ಕೌಟ್ ಆರಂಭಿಸಿದ್ರು. ಇದು ಅವರ ಮನಸ್ಸು ಹಾಗೂ ದೇಹದಲ್ಲಿ ಹೊಸ ಉಲ್ಲಾಸ ಮೂಡುವಂತೆ ಮಾಡಿತು.

ಗುರ್​ಪ್ರೀತ್ ಪ್ರಿಮೆಚ್ಯುರ್ಡ್ ಬೇಬಿಯಾಗಿ ಹುಟ್ಟಿ ಸಾಕಷ್ಟು ಅವಮಾನಗಳನ್ನು ಅನುಭವಿಸಿದ್ದರು. ಈ ರೀತಿಯ ಅವಮಾನಗಳು ಗುರ್​ಪ್ರೀತ್​ರನ್ನು ಫಿಟ್ನೆಸ್ ಕಡೆ ಮನಸ್ಸು ಮಾಡುವಂತೆ ಮಾಡಿತು. ಹೀಗಾಗಿ ತನ್ನ 17ನೇ ವರ್ಷದಲ್ಲೇ ಗುರ್​ಪ್ರೀತ್ ಫಿಟ್ನೆಸ್ ವರ್ಕೌಟ್​ಗಳನ್ನು ಆರಂಭಿಸಿದ್ದರು. ಈಗ ಗುರ್​ಪ್ರೀತ್ ತನ್ನ ವರ್ಕೌಟ್​​ಗಳಿಂದಲೇ ಫೇಮಸ್ ಆಗಿದ್ದಾರೆ. ಎಲ್ಲರಿಗೂ ಮಾದರಿ ಆಗಿದ್ದಾರೆ. ಅಷ್ಟೇ ಅಲ್ಲ ಸಾವಿರಾರು ಜನರು ಈಕೆಯನ್ನು ಫಾಲೋ ಮಾಡುವಷ್ಟು ಬೆಳೆದು ನಿಂತಿದ್ದಾರೆ. ಗುರ್​ಪ್ರೀತ್ ಸಾಧನೆಯನ್ನು ಎಲ್ಲರೂ ಕೊಂಡಾಡಲೇ ಬೇಕಿದೆ.

ಇದನ್ನು ಓದಿ:

1. ಅಜ್ಜಿಯರ ಶಿಕ್ಷಣಕ್ಕೆ ಹುಟ್ಟಿಕೊಂಡಿದೆ ಶಾಲೆ- 90 ವರ್ಷದ ವಿದ್ಯಾರ್ಥಿನಿಯೇ ಇಲ್ಲಿನ ಆಕರ್ಷಣೆ

2. ಸಿಂಪಾಡಿಪುರದಲ್ಲಿ "ಆಕಾರ"..! ಬೆಂಗಳೂರಿನಲ್ಲಿ "ಶ್ರುತಿ ಸಿಂಗಾರ"..!

3. ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ"ಕಲರ್​ಕಾಗೆ"