10ನೇ ಕ್ಲಾಸ್ ವಿದ್ಯಾರ್ಥಿಯ ಉತ್ಕೃಷ್ಟ ಯೋಜನೆ- ಸ್ವಚ್ಛಭಾರತ ಅಭಿಯಾನಕ್ಕೆ ವಿಭಿನ್ನ ಕೊಡುಗೆ

ಟೀಮ್​ ವೈ.ಎಸ್​. ಕನ್ನಡ

10ನೇ ಕ್ಲಾಸ್ ವಿದ್ಯಾರ್ಥಿಯ ಉತ್ಕೃಷ್ಟ ಯೋಜನೆ- ಸ್ವಚ್ಛಭಾರತ ಅಭಿಯಾನಕ್ಕೆ ವಿಭಿನ್ನ ಕೊಡುಗೆ

Monday June 12, 2017,

2 min Read

ಸಿದ್ಧಾರ್ಥ್ ರುನವಲ್ 10ನೇ ತರಗತಿಯ ವಿದ್ಯಾರ್ಥಿ. ಹದಿ ಹರೆಯಕ್ಕೆ ಕಾಲಿಟ್ಟಿರುವ ಹುಡುಗ. ಸಾಮಾನ್ಯವಾಗಿ ಈ ವಯಸ್ಸಿನ ಹುಡುಗರಿಗೆ ಕ್ರೀಡಾಚಟುವಟಿಕೆಗಳು ತುಂಬಾ ಇಷ್ಟ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲೂ ಕಾಲ ಕಳೆಯುತ್ತಾರೆ. ಆದ್ರೆ ಸಿದ್ಧಾಥ್ ಮಾತ್ರ ಇವರೆಲ್ಲರಿಗಿಂತಲೂ ವಿಭಿನ್ನ. ಈತ ಸಮಾಜದ ಬದಲಾವಣೆಯ ಬಗ್ಗೆ ಯೋಚನೆ ಮಾಡುತ್ತಾನೆ. ಅಷ್ಟೇ ಅಲ್ಲ ತಾನು ವಾಸಿಸುವ ಮುಂಬೈ ನಗರವನ್ನು ಸಾಧ್ಯವಾದಷ್ಟರ ಮಟ್ಟಿಗೆ ಆರೋಗ್ಯಕಾರಿಯಾಗಿ ಮತ್ತು ಶುದ್ಧವಾಗಿ ಇಡಬೇಕು ಅನ್ನುವ ಯೋಚನೆಯೊಂದಿಗೆ ಪರಿಶ್ರಮ ಪಡುತ್ತಾನೆ.

image


ಮುಂಬೈ ನಗರವನ್ನು ಸ್ವಚ್ಛವಾಗಿಡಲು ಶ್ರಮಪಡುವ ಪೌರ ಕಾರ್ಮಿಕರ ಸ್ಥಿತಿ ಮಾತ್ರ ಹೇಳ ತೀರದು. ನಗರವನ್ನು ಸ್ವಚ್ಛ ಮಾಡುವವರು ಊರ ಹೊರಗಿನ ಯಾವುದೋ ಪಾಳು ಕೊಂಪೆಯಲ್ಲಿ ವಾಸ ಮಾಡುತ್ತಾರೆ. ಇವರುಗಳು ವಾಸ ಮಾಡುವ ಕೆಲವು ಸ್ಥಳಗಳಂತೂ ಮನುಷ್ಯರು ವಾಸ ಮಾಡಲು ಯೋಗ್ಯವಾದ ಸ್ಥಳವೂ ಆಗಿರುವುದಿಲ್ಲ. ಆದ್ರೆ ನಗರವನ್ನು ಸ್ವಚ್ಛ ಮಾಡುವ ವಿಚಾರದಲ್ಲಿ ಇವರ ಕೊಡುಗೆ ಬಹುಮುಖ್ಯವಾಗಿದೆ. ಮುಂಬೈ ನಗರದ 17 ಮಿಲಿಯನ್ ಗಿಂತಲೂ ಅಧಿಕ ರಸ್ತೆಗಳನ್ನು ಶುಚಿಯಾಗಿಡುವುದು ಸುಲಭದ ಮಾತಲ್ಲ. ಕೆಲವು ಅನಾಗರಿಕ ಮನಸ್ಸಿನ ಜನರಂತೂ ಕಸವನ್ನು ಎಲ್ಲೆಂದರಲ್ಲಿ ಎಸೆದು ಪೌರ ಕಾರ್ಮಿಕರ ಕೆಲಸವನ್ನು ಮತ್ತಷ್ಟು ಕಠಿಣವಾಗಿಸುತ್ತಾರೆ. ಮಹತ್ವದ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಜನರು ಗೌರವ ಕೊಡುವುದಿಲ್ಲ. ಅಷ್ಟೇ ಅಲ್ಲ ಅವರನ್ನು ಮನುಷ್ಯರಂತೆ ಕಾಣುವುದೇ ಅಪರೂಪವಾಗಿದೆ.

ಇದನ್ನು ಓದಿ: ಇಂಟರ್​ನೆಟ್ ಸ್ಪೀಡ್ ವಿಚಾರದಲ್ಲಿ ಭಾರತ ಹಿಂದೆ- ಡಿಜಿಟಲ್ ಕ್ರಾಂತಿಗೆ ಇಂಟರ್​ನೆಟ್ ವೇಗದಿಂದ ಹಿನ್ನಡೆ

ಪೌರಕಾರ್ಮಿಕರಿಗೆ ಶುಚಿತ್ವದ ಮಹತ್ವವನ್ನು ಸಿದ್ಧಾರ್ಥ್ ಹೇಳಿಕೊಡುತ್ತಿದ್ದಾರೆ. "ಕ್ಲೀನ್ ಅಪ್" ಅನ್ನುವ ಎನ್​​ಜಿಒ ಒಂದನ್ನು ಆರಂಭಿಸಿರುವ ಸಿದ್ಧಾರ್ಥ್, ಈ ಮೂಲಕ ಪೌರ ಕಾರ್ಮಿಕರು ಶುಚಿಯಾದ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ. ಮುಂಬೈ ಮುನಿಸಿಪಲ್ ಕಾರ್ಪೋರೇಷನ್ ಜೊತೆ ಕೈ ಜೋಡಿಸಿರುವ ಸಿದ್ಧಾರ್ಥ್ ಬಾಂದ್ರಾದ ಹಲವು ಕಡೆ ಶುದ್ಧ ಕುಡಿಯುವ ನೀರನ್ನು ಪೌರಕಾರ್ಮಿಕರಿಗೆ ಒದಗಿಸುವ ಕೆಲಸ ಮಾಡುತ್ತಿದ್ದಾನೆ. ದಿನಕ್ಕೆರಡು ಬಾರಿ ಸುಮಾರು 1200ಕ್ಕೂ ಅಧಿಕ ಪೌರ ಕಾರ್ಮಿಕರು ಕುಡಿಯುವ ನೀರನ್ನು ಸಿದ್ಧಾರ್ಥ್ ಕೈಯಿಂದ ಪಡೆಯುತ್ತಿದ್ದಾರೆ. ಸಿದ್ಧಾರ್ಥ್ ಪಾಲಿಗೆ ಈ ಪೌರ ಕಾರ್ಮಿಕರು ಕ್ಲೀನ್ ಇಂಡಿಯಾದ ಚಾಂಪಿಯನ್​ಗಳು.

“ ಪ್ರತಿಯೊಬ್ಬ ಮನುಷ್ಯನಿಗೂ ಶುದ್ಧವಾದ ಕುಡಿಯುವ ನೀರು ಸಿಗಬೇಕು. ಆದರೆ ಇವರಿಗೆ ಶುದ್ಧವಾದ ನೀರು ಸಿಗುತ್ತಿಲ್ಲ. ನಾನು ಪೌರ ಕಾರ್ಮಿಕರ ಆರೋಗ್ಯ ಸ್ಥಿತಿಯನ್ನು ಅರಿತಿದ್ದೇನೆ. ನನ್ನ ಕೈಯಿಂದಾಗುವ ಸಹಾಯ ಮಾಡುತ್ತಿದ್ದೇನೆ ”
- ಸಿದ್ಧಾರ್ಥ್ ರುನವಲ್, 10ನೇ ತರಗತಿ ವಿದ್ಯಾರ್ಥಿ

ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛಭಾರತ ಯೋಜನೆ ಸಿದ್ಧಾರ್ಥ್ ಈ ಕೆಲಸಕ್ಕೆ ಇಳಿಯುವಂತೆ ಮಾಡಿದೆ. ಮೋದಿಯವರ ಯೋಜನೆಗಳಿಗೆ ಸಿದ್ಧಾರ್ಥ್ ತನ್ನ ಕೈಯಿಂದ ಆಗುವ ಸಹಾಯ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಿದ್ಧಾರ್ಥ್ ಪೌರ ಕಾರ್ಮಿಕರಿಗೆ ಮತ್ತಷ್ಟು ಸೌಲಭ್ಯ ನೀಡುವ ಯೋಚನೆ ಮಾಡುತ್ತಿದ್ದಾರೆ. 

ಇದನ್ನು ಓದಿ:

1. ಫ್ಯಾನ್ ಟೆಕ್ನಾಲಜಿಯಲ್ಲಿದೆ ಆತ್ಮಹತ್ಯೆ ತಡೆಯುವ ಪ್ರಯತ್ನ..!

2. ಅರುಣಾಚಲ ಪ್ರದೇಶದ ಬಿದಿರು- ಅಸ್ಸಾಂನಲ್ಲಿ ತಯಾರಾಗುತ್ತದೆ ಜೈವಿಕ ಇಂಧನ..!

3. ಆರೇ ತಿಂಗಳಲ್ಲಿ ಮುಗಿದು ಹೋಯಿತು ಸೇತುವೆ ನಿರ್ಮಾಣ..!