ನಾಯಿಗಳ ಪಾಲಿಗೆ ಸ್ವರ್ಗ- ಬೆಂಗಳೂರಿನಲ್ಲಿದೆ "ಡಾಗ್ಸ್​ಪಾರ್ಕ್​"

ಟೀಮ್​ ವೈ.ಎಸ್​. ಕನ್ನಡ

ನಾಯಿಗಳ ಪಾಲಿಗೆ ಸ್ವರ್ಗ- ಬೆಂಗಳೂರಿನಲ್ಲಿದೆ "ಡಾಗ್ಸ್​ಪಾರ್ಕ್​"

Monday April 10, 2017,

2 min Read

ನಾಯಿ ಮನುಷ್ಯನ ಪಾಲಿಗೆ ನೆಚ್ಚಿನ ಪ್ರಾಣಿ. ನಂಬಿಕೆ ಮತ್ತು ವಿಶ್ವಾಸಕ್ಕೆ ಮತ್ತೊಂದು ಹೆಸರು. ಮನೆ ಚಿಕ್ಕದಿರಲಿ, ದೊಡ್ಡದಿರಲಿ ಸಾಕಲು ಒಂದು ನಾಯಿ ಬೇಕೇ ಬೇಕು. ಇತ್ತೀಚಿನ ದಿನಗಳಲ್ಲಂತೂ ನಾಯಿ ಸಾಕುವುದು ಫ್ಯಾಷನ್​ ಆಗಿ ಬೆಳೆದಿದೆ. ವಿವಿಧ ತಳಿಯ ನಾಯಿಗಳನ್ನು ಸಾಕಿ ಅದರ ಉದ್ಯಮ ನಡೆಸುವವರು ಕೂಡ ಇದ್ದಾರೆ. ಆದರೆ ಬೆಂಗಳೂರಿನಂತಹ ನಗರಗಳಲ್ಲಿ ನಾಯಿ ಸಾಕುವುದು ಕೊಂಚ ಸವಾಲಿನ ಕೆಲಸ. ಯಾರಿಗೂ ತೊಂದರೆಯಾಗದಂತೆ ನಾಯಿಗಳನ್ನು ಸಾಕುವುದು ಕೂಡ ಸ್ವಲ್ಪ ಕಷ್ಟವೇ.

image


ಅಂದಹಾಗೇ, ಬೆಂಗಳೂರಲ್ಲಿ ಬಹುತೇಕ ಮನೆಗಳಲ್ಲಿ ನಾಯಿಗಳಿವೆ. ಆದರೆ ಆ ನಾಯಿಗೆ ಕಾಂಪೌಂಡ್ ಅಥವಾ ಮನೆ ಬಾಗಿಲು ದಾಟಿ ಆಚೆ ಹೋಗುವುದು ಕಷ್ಟ. ಅಂತಹ ನಾಯಿಗಳಿಗಾಗಿಯೇ ಬೆಂಗಳೂರಿನಲ್ಲಿ ಡಾಗ್ಸ್ ಪಾರ್ಕ್ ಇದೆ. ಅರೇ ಪಾರ್ಕ್ ಕೇಳಿದ್ದೇವೆ ಇದೇನಿದು ಡಾಗ್ಸ್ ಪಾರ್ಕ್ ಎಂದು ನಿಮಗೆ ಅಚ್ಚರಿಯಾಗಬಹುದು. ನಾಯಿ ಮನುಷ್ಯನ ನೆಚ್ಚಿನ ಪ್ರಾಣಿ ಮಾನವನೊಂದಿಗೆ ಅತಿ ಹೆಚ್ಚಾಗಿ ಬಾಂಧವ್ಯ ಹೊಂದುವ ಪ್ರಾಣಿ. ಹಾಗಾಗಿ ನಾಯಿಗೆ ನಮ್ಮ ಮನೆಯಲ್ಲಿ ಜಾಗವಿರುತ್ತದೆ. ಅದು ಸಹ ನಮ್ಮಂತೆ ಜೀವಿ. ಅದಕ್ಕೂ ಪ್ರಪಂಚ ನೋಡಬೇಕು ಎಂಬ ಆಸೆ ಇರುತ್ತದೆ. ಆದರೆ ಅದನ್ನು ತೋರಿಸುವವರು ಯಾರು..? ಯಾರಾದರೂ ಕತ್ತಿಗೆ ಚೈನ್​ ಹಾಕಿ ವಾಕಿಂಗ್ ಹೋಗುವಾಗ ಕರೆದುಕೊಂಡು ಹೋದರೆ ಮಾತ್ರ ಪ್ರಪಂಚ ನೋಡುವ ಭಾಗ್ಯ ಸಾಕಿದ ನಾಯಿಗೆ ಸಿಗುತ್ತದೆ. ಇಲ್ಲದಿದ್ದರೆ ಮನೆಯಲ್ಲೋ ಕಾಂಪೌಂಡ್​ನಲ್ಲೋ ಇರಬೇಕಾದ ಪರಿಸ್ಥಿತಿ ಅದಕ್ಕಿದೆ.

ಆದರೆ ಹಳ್ಳಿಗಳಲ್ಲಿ, ಮತ್ತು ಬೀದಿ ನಾಯಿಗಳ ಪರಿಸ್ಥಿತಿ ಹಾಗಿಲ್ಲ. ನಾಯಿಗಳಿಗೆ ತಿರುಗಾಡೋಕೆ ಸ್ವಚ್ಛಂದವಾದ ಜಾಗಗಳಿರುತ್ತವೆ. ಆದರೆ ಬೆಂಗಳೂರಿನಂತಹ ನಗರಗಳಲ್ಲಿ ಅದು ಕಷ್ಟದ ಕೆಲಸ. ಸಾವಿರಾರು ರೂಪಾಯಿ ಕೊಟ್ಟು ಪ್ರೀತಿಯಿಂದ ಸಾಕಿರುವ ನಾಯಿಗಳಿಗೆ ಸ್ವಚ್ಛಂದವಾಗಿ ಓಡಾಡಲು ಒಂದು ಜಾಗದ ಅವಶ್ಯಕತೆ ಇದೆ. ಈ ನಾಯಿ ಪ್ರೇಮಿಗಳ ಕಷ್ಟವನ್ನು ಅರ್ಥ ಮಾಡಿಕೊಂಡ ಕೆಲವರು ಬೆಂಗಳೂರಿನ ಜಿಗಣಿ ಬಳಿ ಎಲಿಫೆಂಟ್ ಪಾಂಡ್​ನಲ್ಲಿ ನಾಯಿಗಳಿಗಾಗಿಯೇ ಒಂದು ವಿಶಿಷ್ಟ ಪ್ರೈವೇಟ್ ಪಾರ್ಕ್​ನ್ನು ನಿರ್ಮಾಣ ಮಾಡಿದ್ದಾರೆ. ಅದಕ್ಕೆ "ಡಾಗ್ಸ್ ಪಾರ್ಕ್" ಎಂದು ಹೆಸರಿಟ್ಟಿದ್ದಾರೆ.

ಇದನ್ನು ಓದಿ: ಹುಬ್ಬಳ್ಳಿಯಿಂದ ದೆಹಲಿ ತನಕ- ಇದು ಬಣ್ಣದ ಕ್ಯಾನ್ವಾಸ್​​ನಲ್ಲಿ ಸಾಧನೆ ಕಥೆ

ಏನಿದು ಡಾಗ್ ಪಾರ್ಕ್..?

ನಾಯಿಗಳಿಗಾಗಿ ಇರುವ ವಿಶಾಲವಾದ ಪಾರ್ಕ್ ಇದು. ನಾಯಿಗಳನ್ನು ಇಷ್ಟಪಡುವವರು ಈ ಪಾರ್ಕ್​ಗಳಿಗೆ ನಾಯಿಗಳನ್ನು ಕರೆದುಕೊಂಡು ಹೋಗಬಹುದು. ಇಲ್ಲಿ ಕೆರೆ ಇದೆ, ಅಲ್ಲಿ ನಾಯಿಗಳಿಗಾಗಿ ಸ್ವಿಮ್ಮಿಂಗ್ ಪೂಲ್ ಇದೆ, ಎಷ್ಟು ಹೊತ್ತು ಬೇಕಾದರೂ ಅದನ್ನು ಸ್ವಿಮ್ ಮಾಡಿಸಬಹುದು. ವಿಶಾಲವಾದ ಮೈದಾನವಿದೆ. ನಾಯಿಗಳನ್ನು ಇಲ್ಲಿಗೆ ಕರೆದುಕೊಂಡು ಹೋದರೆ ಮನಸೋ ಇಚ್ಛೆ ಆಟವಾಡಿಕೊಂಡಿರುತ್ತದೆ. ಯಾವಾಗಲೂ ಮನೆಯೊಳಗೆ ಇರುವ ನಾಯಿಗಳಿಗಂತೂ ಇದು ಸ್ವರ್ಗ. ಇಲ್ಲಿರುವ ಕೆರೆಯಲ್ಲಿ ನಾಯಿಗಳು ಆಟವಾಡಿಕೊಂಡಿರುವುದನ್ನು ನೋಡುವುದೇ ಚೆಂದ.

" ನಾನು ಇಲ್ಲಿಗೆ ಬಹಳ ದಿನಗಳಿಂದ ನಮ್ಮ ಪ್ರೀತಿಯ ನಾಯಿಯನ್ನು ಕರೆದುಕೊಂಡು ಬರುತ್ತೇನೆ. ಆ ನಾಯಿ ಇಲ್ಲಿ ಬಂದು ಆಟ ಆಡುವುದನ್ನು ನೋಡುವುದೇ ಚೆಂದ. ನಾಯಿಗಳಿಗೂ ಮನುಷ್ಯರಂತೆ ಒಂದು ಪಾರ್ಕ್ ಮಾಡಿರುವುದು ಒಂದು ರೀತಿಯಲ್ಲಿ ಒಳ್ಳೆಯ ಪ್ರಯತ್ನ"
- ಪ್ರಸನ್ನ, ವಿಜಯನಗರ ನಿವಾಸಿ

ಟ್ರೈನರ್​ಗಳಿರುತ್ತಾರೆ...!

ನಿಮ್ಮ ನಾಯಿಗಳಿಗೆ ಪಾಠ ಕಲಿಸಬೇಕು ಅಂತಿದ್ದರೂ ಇಲ್ಲಿ ಟ್ರೇನರ್​ಗಳಿರುತ್ತಾರೆ. ನಾಯಿಗಳಿಗೆ ಏನು ತಿನ್ನಿಸಬೇಕು..? ಅವುಗಳ ಆಹಾರ ಕ್ರಮ ಹೇಗಿರಬೇಕು..? ನಾಯಿಗಳು ಯಾವಾಗ ಹೇಗೆ ವರ್ತಿಸುತ್ತವೆ ಅಂತೆಲ್ಲಾ ತಿಳಿದುಕೊಳ್ಳುವ ಆಸಕ್ತಿ ಇರುವವರಿಗೆ ಸೆಮಿನಾರ್​ಗಳನ್ನೂ ಇಲ್ಲಿ ಆಯೋಜಿಸಲಾಗುತ್ತದೆ. ಅಷ್ಟೇ ಅಲ್ಲ, ಇಲ್ಲಿ ನಾಯಿಗಳಿಗಾಗಿ ಒಂದಷ್ಟು ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಆಸಕ್ತಿ ಇರುವವರು ಈ ಸ್ಪರ್ಧೆ ಯಲ್ಲಿ ಭಾಗವಹಿಸಲು ತಮ್ಮ ನಾಯಿಗಳನ್ನು ಕರೆದುಕೊಂಡು ಹೋಗಬಹುದು. ಪೆಟ್ ಪಾರ್ಟಿಗಳನ್ನೂ ಇಲ್ಲಿ ಆಯೋಜಿಸಬಹುದು. ನಾಯಿಯನ್ನು ಪ್ರೀತಿಸುವವರು ಒಂದು ದಿನ ಟೈಮ್​ ಮಾಡಿಕೊಂಡು ಈ ಡಾಗ್ ಪಾರ್ಕ್​ಗೆ ಹೋಗಿ ಬನ್ನಿ. ನಾಯಿಗಳು ಎಷ್ಟು ಖುಷಿಯಾಗುತ್ತವೆ ಅಂತ ನೀವೇ ನೋಡಬಹುದು.

ಇದನ್ನು ಓದಿ:

1. ತರಕಾರಿ, ಸೊಪ್ಪು ಬೆಳಿತಾರೆ- ಡಿಸ್ಕೌಂಟ್​ನಲ್ಲಿ ವ್ಯಾಪಾರಾ ಮಾಡುತ್ತಾರೆ- ಇದು 'ಸಾಸ್ಕೆನ್ ಟೆಕ್ನಾಲಜಿಸ್'​ ಗೋ ಗ್ರೀನ್ ಮಂತ್ರ

2. ಪ್ರತಿ ಉದ್ಯೋಗಿಗೆ ನಾಲ್ಕು ಗಿಡ ಕಡ್ಡಾಯ : ದೆಹಲಿಯ ಈ ಕಚೇರಿಯಲ್ಲಿಲ್ಲ ವಾಯು ಮಾಲಿನ್ಯ

3. ಸಿನಿಮಾರಂಗದಲ್ಲಿ ಮೂವರು ಸಹೋದರರ ಸಾಹಸ- ಇದು ಖಾಸನೀಸ್​ ಕುಟುಂಬದ ಖಾಸ್​ಬಾತ್​​