ಲಿವರ್​ ಪ್ರಾಬ್ಲಂ ಬಗ್ಗೆ ಚಿಂತೆ ಬಿಡಿ- ಸಜ್ಜಾಗುತ್ತಿದೆ ಬಯೋ ಪ್ರಿಂಟೆಡ್​ ಪಿತ್ತಕೋಶ..!

ನೀಲಾ ಶಾಲು

0

ಅಂಗಾಂಗ ದಾನಗ ಬಗ್ಗೆ ಈಗೀಗ ಸಾಕಷ್ಟು ಅರಿವು ಮೂಡಿದೆ. ಮೆದುಳು ಸಾವು ಉಂಟಾದ ವ್ಯಕ್ತಿಯಿಂದ ಅಂಗಾಂಗ ದಾನ ನೀಡುವವರ ಸಂಖ್ಯೆ ಜಾಸ್ತಿಯಾಗಿದೆ.. ಇಷ್ಟೆಲ್ಲಾ ಅದ್ರೂ ಅಗತ್ಯವಿದ್ದಷ್ಟು ಅಂಗಗಳು ಸಿಗದೇ ಅನೇಕರು ನಗರದಲ್ಲಿ ಸಾವನ್ನಪುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೂ ಸಿಲಿಕಾನ್ ಸಿಟಿಯ ಒಂದಷ್ಟು ಬುದ್ದಿವಂತ ಸಂಶೋಧಕರು ಸೂಪರ್ ಪರಿಹಾರ ಕಂಡುಕೊಂಡಿದ್ದಾರೆ.

ಏನಿದು..?

ಲಿವರ್ ಅಥವಾ ಯಕೃತ್ತಿನ ಸಮಸ್ಯೆ ಇದ್ದವರಿಗೆ ಕಸಿ ಶಸ್ತ್ರಚಿಕಿತ್ಸೆ ಬಿಟ್ಟರೆ ಬೇರೆ ಶಾಶ್ವತ ಪರಿಹಾರ ಇಲ್ಲ.. ಅನೇಕ ರೋಗಿಗಳು ಸಮಯಕ್ಕೆ ಸರಿಯಾಗಿ ಬದಲಿ ಲಿವರ್ ಸಿಗದೇ ಸಾವನ್ನಪ್ಪುತ್ತಿದ್ದಾರೆ. ಈ ಸಂಖ್ಯೆ ದಿನೇ ದಿನೇ ಹೆಚ್ಚತ್ತಿರೋದು ನಿಜಕ್ಕೂ ಆತಂಕಕಾರಿ ಸಂಗತಿ. ಲಿವರ್ ಕಸಿ ಚಿಕಿತ್ಸೆಗಾಗಿ ಅವಶ್ಯಕತೆ ಇರುವ ರೋಗಿಗಳು ಜೆಡ್ ಸಿ ಸಿ ಕೆ(ZCCK) ಎನ್ನುವ ಸಂಸ್ಥೆಯ ಮೂಲಕ ತಮ್ಮ ಹೆಸರು ನೋಂದಾಯಿಸಿಕೊಂಡಿರ್ತಾರೆ. ಆ ವರದಿಯ ಪ್ರಕಾರ ಕರ್ನಾಟಕದಲ್ಲಿ ಡಿಸೆಂಬರ್ 10 ರವರೆಗೆ ನ 537 ಲಿವರ್ ಗಳು ಅಗತ್ಯವಿದೆ. ಆದ್ರೆ 2015 ರಲ್ಲಿ ವೆದುಳು ಸಾವಿನಿಂದ ದಾನ ದೊರಕಿರುವ ಲಿವರ್ ಗಳ ಸಂಖ್ಯೆ ಕೇವಲ 54. ಅಲ್ಲಿಗೆ ಲಿವರ್ ಅವಶ್ಯಕತೆ ಬೆಂಗಳೂರಿನಲ್ಲೇ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇರುವಾಗ ಇಡೀ ದೇಶದಲ್ಲಿ ಈ ಸಂಖ್ಯೆ ಎಷ್ಟು ದೊಡ್ಡದಿದೆ ಎಂದು ನೀವೇ ಯೋಚಿಸಿ.

ಇದನ್ನೆಲ್ಲಾ ಸಂಪೂರ್ಣವಾಗಿ ಅಧ್ಯಾಯನ ಮಾಡಿದ ಕೆಲ ಸಂಶೋಧಕರು ಎರಡು ವರ್ಷಗಳ ಕಾಲ ಧೀರ್ಘ ಸಂಶೋಧನೆ ಮಾಡಿ ಕೃತಕವಾಗಿ ಸೀರಮ್ ನನ್ನು ಅಭಿವೃದ್ಧಿ ಪಡಿಸಿದ್ದಾರೆ. ಹೌದು ಟಿಷ್ಯೂ ಎಂಜಿನಿಯರಿಂಗ್ ಮೇಲೆ ಕೆಲಸ ನಿರ್ವಹಿಸುತ್ತಿರುವತಂಹ ಬೆಂಗಳೂರು ಮೂಲದ ಜೈವಿಕ ತಂತ್ರಜ್ಞಾನ ಆಧಾರಿತ ಸ್ಟಾರ್ಟ್ ಅಪ್, ಪ್ಯಾಂಡೊರಂ ಎನ್ನುವ ಸಂಶೋಧನಾ ಸಂಸ್ಥೆಯ ಮೂಲಕ ಆರು ಜನ ಸಂಶೋಧಕರು ಕೃತಕವಾಗಿ ಲಿವರ್ ನ ಕೋಶಗಳನ್ನು ಬೆಳೆಸಲು ಅವಶ್ಯವಾದ ಸೀರಮ್ ನನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ 3ಡಿ ಮುದ್ರಿತ ಜೀವಂಥ ಟಿಷ್ಯೂಗಳು, ಪ್ರಾಣಿ ಹಾಗೂ ಮಾನವನ ಕನಿಷ್ಠ ಪ್ರಯೋಗಗಳೊಂದಿಗೆ ಕೈಗೆಟಕುವ ವೈದ್ಯಕೀಯ ಸಂಶೋಧನೆಯನ್ನು ಸಾಧ್ಯಗೊಳಿಸಿದೆ. ಅಷ್ಟೇಅಲ್ಲದೇ ಮುಂದಿನ 5 ವರ್ಷಗಳಲ್ಲಿ ಸಂಪೂರ್ಣವಾಗಿ ಮರುಜೋಡಣೆ ಮಾಡಬಲ್ಲಂತಹ ಅಂಗಾವಾಗಲ್ಲಿದೆ..

ಈ ರೀತಿಯ ಕೃತಕ ಅಂಗಾಂಗಳ ಅಭಿವೃದ್ಧಿಯಿಂದ ಅಸಂಖ್ಯಾತ ಚಿಕಿತ್ಸೆಗಳಿಗೆ ಮುಂದಿನ ದಿನಗಳಲ್ಲಿ ಉಪಯೋಗವಾಗಲ್ಲಿದೆ. ಪಿತ್ತಜನಕಾಂಗದ (ಲಿವರ್) ವೈಫಲ್ಯವಿರುವಂತಹ ರೋಗಿಗಳ ಜೀವವನ್ನು ಉಳಿಸಲು, ಜೈವಿಕ-ಕೃತಕ ಲಿವರ್ ಬೆಂಬಲ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸಲು, ಈ ರೀತಿಯ ಜೀವಕೋಶ ಆಧಾರಿತ ಅಂಗಾಗಂಗಳನ್ನು ಬಳಸಬಹುದು.. ಭವಿಷ್ಯದಲ್ಲಿ ಇಂತಹ ಬಯೊ ಪ್ರಿಂಟೆಡ್ ಅಂಗಾಗಂಗಳು ಶಸ್ತ್ರಚಿಕಿತ್ಸೆಯ ಮೂಲಕ ಅಂಗಾಗಂಗಳ ಮರುಜೋಡಣೆಯಲ್ಲಿ ಪ್ರಸ್ತುತ ವೈದ್ಯಕೀಯ ಕ್ಷೇತ್ರ ಎದುರಿಸುತ್ತಿರುವ ತೀವ್ರ ಮಾನವ ಅಂಗಾಗಂಗಳ ಕೊರತೆಯನ್ನು ನೀಗಿಸೊದ್ರಲ್ಲಿ ಯಾವುದೇ ಅನುಮಾನವಿಲ್ಲ. ಅಷ್ಟೇಅಲ್ಲ ಈ ಸಂಶೋಧನೆ ಕೃತಕ ಅಂಗಾಗಳನ್ನು ಬೆಳೆಸಲು ಉತ್ತಮ ದಾರಿಯಾಗಲಿದೆ .. ಬಹುಶಃ ಇನ್ನೊದಷ್ಟು ವರ್ಷಗಳಲ್ಲಿ ದೇಹದ ವಿವಿಧ ಅಂಗಗಳನ್ನು ಪ್ರಯೋಗಾಲಯದಲ್ಲೇ ಬೆಳೆಸಿ ಕಸಿ ಮಾಡುವಂಥ ವ್ಯವಸ್ಥೆ ಬಂದರೂ ಆಶ್ಚರ್ಯವಿಲ್ಲ. ಇಂತಹ ಯುವ ಸಂಶೋಧಕರ ಜೊತೆ ಸರ್ಕಾರವು ಕೂಡ ಕೈಜೋಡಿಸಿದ್ರೆ ಅನೇಕ ಜೀವಗಳು ಉಳಿಯೋದಂತು ಸತ್ಯ..

ಇಂಡಿಯನ್ ಇನ್ಸ್​​ಟಿಟ್ಯೂಟ್ ಆಫ್ ಸೈನ್ಸ್​​ನಿಂದ ಪಿ ಹೆಚ್ ಡಿಯನ್ನು ಪಡೆದಿರುವ ಕಂಪನಿಯ ಸಹ-ಸ್ಥಾಪಕರೂ ಆಗಿರುವ ಡಾ.ತುಹಿನ್ ಬೌಮಿಕ್ ಹೇಳುವ ಹಾಗೆ, ಇದೊಂದು ಮಹತ್ವವಾದ ಮೈಲಿಗಲ್ಲು ಸಾಧನೆಯಾಗಿದೆ. ಮಾನವ ಪಿತ್ತಜನಕಾಂಗದಂತಹ (ಲಿವರ್) ಸಂಕೀರ್ಣವಾದ ಟಿಷ್ಯೂಗಳನ್ನು ಅಭಿವೃದ್ಧಿಪಡಿಸುವುದ ಸಾಧಾರಣ ಕೆಲಸವಲ್ಲ, ಅಷ್ಟೇ ಅಲ್ಲ ಲಿವರ್ ಟಾಕ್ಸಿಸಿಟಿ ಹಾಗೂ ಔಷಧಗಳ ಚಯಾಪಚಯಗಳು ಬಹುಮುಖ್ಯ ತೊಡಕುಗಳು ಹಾಗೂ ಮಾನವ ಪ್ರಯೋಗಗಳ ವೈಫಲ್ಯಕ್ಕೆ ಮುಖ್ಯ ಕೊಡುಗೆಯಾಗಿದೆ. ಮಾನವ ಲಿವರ್ ಗೆ ಪರ್ಯಾಯವಾಗಿರುವಂತಹ ನಮ್ಮ 3ಡಿ ಬಯೋ-ಪ್ರಿಂಟೆಡ್ ಮಿನಿ-ಲಿವರ್ ಗಳು, ಉತ್ತಮ ಸಾಮರ್ಥ್ಯ ಹಾಗೂ ಕಡಿಮೆ ದರಗಳಲ್ಲಿ ಯಾವುದೇ ಅಡ್ಡ ಪರಿಣಾಮವಿಲ್ಲದೆ, ಔಷಧಗಳ ಅಭಿವೃದ್ಧಿ ಹಾಗೂ ಆಪಿಷ್ಕಾರ ಪರೀಕ್ಷಾ ವೇದಿಕೆಗಳಾಗಿ ಉಪಯೋಗವಾಗಲ್ಲಿದೆ, ಎಂದು ಅಭಿಪ್ರಾಯ ಪಟ್ರು.