ವಿದ್ಯಾರ್ಥಿಗಳಿಂದ ಪ್ರಖ್ಯಾತಿ ಗಳಿಸಿದವರೆಲ್ಲರೂ ಹಿಂದಿ ಕಲಿಸು ಎಂದು ಆಕೆಯ ಬೆನ್ನು ಬಿದ್ದಿದ್ದರು..!

ಟೀಮ್​​ ವೈ.ಎಸ್​​.

0

ನೀವು ಕಡೇ ಬಾರಿ ಹಿಂದಿ ಭಾಷೆಯ ಪುಸ್ತಕ ಓದಿದ್ದು ಯಾವಾಗ ಅಥವಾ ದೇವನಗರಿ ಲಿಪಿಯಲ್ಲಿ ಬರೆದಿದ್ದು ಯಾವಾಗ? ಬಹುಷಃ ಶಾಲೆಯಲ್ಲಿ ಹಿಂದಿಯನ್ನು ಕಡೇ ಬಾರಿ ಓದಿ, ಅಭ್ಯಾಸ ಮಾಡಿ ನಂತ್ರ ಅದನ್ನು ಮರೆತದ್ದೇ ಹೆಚ್ಚು ಅನ್ನಿಸುತ್ತೆ. ಹಿಂದಿ ಮಾತೃ ಭಾಷೆ ಆಗಿಲ್ಲವೆಂದ್ರೆ ಅಥವಾ ಕೇವಲ ಶಾಲೆಯಲ್ಲಿ ಕಲಿಕೆಯ ಭಾಷೆಯಾಗಿದ್ದರೇ ಹೀಗಾಗೋದು ಹೆಚ್ಚು. ಒಂದು ವೇಳೆ ನಾವೇನಾದ್ರೂ ವಿದೇಶಕ್ಕೆ ಹೋಗಿ ಅಲ್ಲೇ ಬಹಳ ದಿನಗಳ ಕಾಲ ಉಳಿಯಬೇಕೆಂದಿದ್ದರೆ ಸಂವಹನಕ್ಕೆ ಅಲ್ಲಿನ ಭಾಷೆ ಕಲಿತುಕೊಳ್ಳೋದು ಕಡ್ಡಾಯ. ಉದಾಹರಣೆಗೆ ಜರ್ಮನ್, ಸ್ಪಾನಿಷ್, ಫ್ರೆಂಚ್ ಇತ್ಯಾದಿ... ಹಲವಾರು ದೇಶಗಳು ಅಲ್ಲಿನ ಸ್ಥಳಿಯ ಭಾಷೆ ಕಲಿಯಲು ಭಾಷಾ ತರಗತಿಗಳನ್ನು ನಡೆಸುತ್ತವೆ. ಆದ್ರೆ ಭಾರತದ ವಿಷಯಕ್ಕೆ ಬಂದ್ರೆ ಇಲ್ಲಿ ಹಾಗಿಲ್ಲ್ಲ. ಸ್ಥಳೀಯ ಭಾಷೆಗಳಾದ ಕನ್ನಡ ಅಥವಾ ತಮಿಳು ಕಲಿಯಲು ಭಾಷಾ ತರಗತಿಗಳನ್ನು ಕಾಣಬಹುದು. ಆದ್ರೆ ಹಿಂದಿ ಕಲಿಸೋ ತರಗತಿಗಳು ಬಹಳ ಕಡಿಮೆ. ಎಂಜಿನಿಯರ್ ಆಗಿ ಮನಶಾಸ್ತ್ರ ವಿದ್ಯಾರ್ಥಿಯಾಗಿರೋ ಪಲ್ಲವಿ ಸಿಂಗ್ ಇದನ್ನು ಬದಲಾಯಿಸಲು ಹೊರಟಿದ್ದಾಳೆ. ಆಗಲೇ ಹುಟ್ಟಿದ್ದು ಹಿಂದಿಲೆಸನ್ಸ್.ಕೊ.ಇನ್.

ದೆಹಲಿಯಲ್ಲೇ ಹುಟ್ಟಿ ಬೆಳೆದ ಪಲ್ಲವಿ ಸಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವೀಧರೆ. ವಿದೇಶದಲ್ಲಿ ಅಭ್ಯಾಸವಿರಬಹುದು ಅಥವಾ ಪ್ರಖ್ಯಾತ ಕಂಪನಿಗಳಲ್ಲಿ ಕೆಲಸ ಇರಬಹುದು, ಹೆಚ್ಚಿನಅವಕಾಶಗಳು ಮೇಲ್ಪಂಕ್ತಿಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಿಗುತ್ತಿದ್ದದ್ದು ಪಲ್ಲವಿ ಎಂಜಿನಿಯರಿಂಗ್ ಓದಬೇಕಾದ್ರೆ ಗಮನಿಸಿದ್ದರು. ಆದ್ದರಿಂದ ಆಕೆ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಮತ್ತು ಅರ್ನಸ್ಟ್ ಅಂಡ್ ಯಂಗ್ ನಂತಹ ಪ್ರಸಿದ್ಧ ಕಂಪನಿಗಳಿಗೆ ಕೆಲಸಕ್ಕೆ ಅರ್ಜಿ ಹಾಕಿದ್ದರು. ಆದ್ರೆ ಆಕೆ ಐಐಟಿ ಅಥವಾ ಎನ್ಐಟಿ ವಿದ್ಯಾರ್ಥಿಯಲ್ಲವೆಂದು ಕಂಪನಿಯವರು ಆಕೆಯ ಅರ್ಜಿಯನ್ನು ಸಹ ನೋಡಿರಲಿಲ್ಲ.

ಪಲ್ಲವಿ ಹಿಂದಿ ಕಲಿಸಬೇಕೆಂದು ನಿರ್ಧಾರ ಮಾಡಿದ್ದು ಆಕೆಯ ಎಂಜಿನಿಯರಿಂಗ್ ಮೂರನೇ ವರ್ಷದ ವಿದ್ಯಾಭ್ಯಾಸದಲ್ಲಿ. ಈ ಮಧ್ಯೆ ಆಕೆ ವಿದೇಶೀ ವಿದ್ಯಾರ್ಥಿಗಳ ಫೇಸ್ ಬುಕ್ ಗ್ರೂಪ್ ನಲ್ಲಿ ಆಗಾಗ್ಗೆ ಬ್ರೌಸ್ ಮಾಡ್ತಿದ್ದಳು. ಕಾಲೇಜು ದಿನಗಳಲ್ಲಿ ವಿದೇಶೀ ವಿದ್ಯಾರ್ಥಿಳ ಸುತ್ತ ಹಿಂದಿ ಮಾತನಾಡುವವರ ಗುಂಪೇ ಆಕೆಗೆ ಕಾಣಿಸ್ತಿತ್ತು. ಹಿಂದಿ ಮಾತನಾಡುವ ಉತ್ಸಾಹ ಈ ಗುಂಪುಗಳಲ್ಲಿ ಎದ್ದು ಕಾಣ್ತಿತ್ತು. ಇದೆಲ್ಲವನ್ನೂ ಮನದಲ್ಲಿಟ್ಟುಕೊಂಡು ಪಲ್ಲವಿ ದೆಹಲಿ ವಿಶ್ವವಿದ್ಯಾಲಯದ ವಿದೇಶೀ ವಿನಿಮಯ ವಿದ್ಯಾರ್ಥಿಯನ್ನು ಭೇಟಿ ಮಾಡಿದಳು. ಆಕೆಯ ಮೊದಲ ವಿದ್ಯಾರ್ಥಿನಿ ಆಫ್ರಿಕಾ ಪ್ರಜೆಯಾಗಿದ್ದಳು. ಅಲ್ಲದೇ ಆಕೆಯ ಸ್ನೇಹಿತೆಯೇ ಆಗಿದ್ದಳು. ಕೂಡಲೇ ಪಲ್ಲವಿ ಪಾಠ ಯೋಜನೆ ಮತ್ತು ಕಲಿಕೆಯ ಹಂತಗಳನ್ನು ನಿರ್ಧಾರ ಮಾಡಿ ಪಾಠ ಮಾಡಲು ಶುರುಮಾಡಿದಳು. ಇದಾದ ಮೇಲೆ ಆಕೆ ಹಿಂದಿರುಗಿ ನೋಡಿದ್ದೇ ಇಲ್ಲ.

ಮನಶಾಸ್ತ್ರ ವಿಷಯದಲ್ಲಿ ಪದವಿ ಪಡೆಯಲು ಪಲ್ಲವಿ ಮುಂಬೈಗೆ ಹೋಗೋ ನಿರ್ಧಾರ ಮಾಡಿದಳು. ಇದಕ್ಕಾಗಿ ಪೋಷಕರಲ್ಲಿ ಹಣ ಕೇಳಲು ಆಕೆಯ ಮನಸ್ಸು ಒಪ್ಪಲಿಲ್ಲ. ದುಬಾರಿ ನಗರ ಮುಂಬೈನಲ್ಲಿ ಜೀವನ ಮಾಡೋದು ಕಷ್ಟಕರವೆಂದು ಅರಿತಿದ್ದ ಪಲ್ಲವಿ ತನ್ನ ಅಗತ್ಯತೆಗಳನ್ನು ಪೂರೈಸಲು ಪಾಠ ಮಾಡೋದನ್ನು ಮುಂದುವರೆಸಲು ನಿರ್ಧರಿಸಿದಳು. ಆದ್ರೆ ಅರೆಕಾಲಿಕ ಕೆಲಸದಲ್ಲಿ ಸ್ಥಿರತೆ ಇಲ್ಲದ್ದನ್ನು ಪಲ್ಲವಿ ಗ್ರಹಿಸಿದ್ದಳು. ಅಲ್ಲದೇ ಆಕೆ ಅಂತರಾಷ್ಟ್ರೀಯ ಮನ್ಯತೆಯ ಬಗ್ಗೆಯೂ ಗಮನ ಹರಿಸಿದ್ದಳು. ವಿದೇಶೀ ವಲಸಿಗರಿಗೆ ಹಿಂದಿ ಕಲಿಸಿಕೊಡೋದು ಆಕೆಗೆ ಕೆಲಸದಲ್ಲಿ ಸ್ಥಿರತೆ ಮತ್ತು ಮಾನ್ಯತೆ ಎರಡನ್ನೂ ತಂದುಕೊಟ್ಟಿತ್ತು.

ನಾಲ್ಕು ವರ್ಷದಲ್ಲಿ ಪಲ್ಲವಿ 150ಕ್ಕೂ ಹೆಚ್ಚು ವಿದೇಶಿಗರಿಗೆ ಹಿಂದಿ ಕಲಿಸಿಕೊಟ್ಟಿದ್ದಳು. ಅಲ್ಲದೇ ಈಗ ಆಕೆ ಮುಂಬೈನಲ್ಲಿರೋ ಅಮೆರಿಕ ರಾಯಭಾರಿ ಕಚೇರಿಯಲ್ಲಿ ಹಿಂದಿ ಕಲಿಸುತ್ತಿದ್ದಾಳೆ. ಹಿಂದಿ ಕಲಿಸೋದು ಸುಲಭವಾದ್ರೂ ಆಕೆಗೆ ಸವಾಲುಗಳು ಹೆಚ್ಚಿದ್ದವು. ಆಕೆಯ ಅರ್ಹತೆ ಬಗ್ಗೆಯೇ ಕೆಲವರು ಪ್ರಶ್ನೆ ಮಾಡಿದ್ದರು. ಅವರಿಗೆ ಪಲ್ಲವಿ ಹೇಳಿದ್ದು ಹೀಗೆ, “ಭಾರತದಲ್ಲಿ ಹಿಂದಿಯನ್ನು ವಿದೇಶೀ ಭಾಷೆಯಾಗಿ ಕಲಿಸೋ ಯಾವುದೇ ಕೋರ್ಸ್ ಗಳಿಲ್ಲ. ಇದ್ದಿದ್ದರೆ ನಾನದನ್ನು ಖಂಡಿತ ಪಡೆಯುತ್ತಿದ್ದೆ”.

ಇದರ ಜತೆ ಪಲ್ಲವಿ ಮತ್ತೊಂದು ರೀತಿಯ ಸಮಸ್ಯೆಯನ್ನು ಎದುರಿಸಬೇಕಾಯಿತು. ಹಲವರು ಶುಲ್ಕ ಕಡಿಮೆ ಮಾಡುವಂತೆ ಆಕೆಗೆ ಒತ್ತಾಯಿಸಿದ್ದರು. ಆದ್ರೆ ಅಲ್ಲಿ ಉತ್ತಮ ಕ್ಷಣಗಳೂ ಇದ್ದವು. ಒಂದು ಘಟನೆಯನ್ನು ಪಲ್ಲವಿ ಮೆಲುಕು ಹಾಕೋದು ಹೀಗೆ. ನನ್ನ ವಿದ್ಯಾರ್ಥಿಯಾಗಿದ್ದ ಲೂನಿಯಾನಾ ದೇಶದ ಅಮಾಂಡ ಒಮ್ಮೆ ಬಾಂದ್ರಾದಿಂದ ಆಟೋದಲ್ಲಿ ಪ್ರಯಾಣ ಮಾಡ್ತಿದ್ದರು. ಆಗ ಇಬ್ಬರು ಬೈಕ್ ಸವಾರರು ಬಂದು ಆಟೋವಾಲಾನ್ನು ದಾರಿ ಕೇಳಿದರು. ಅವರು ಅಮಾಂಡಾ ವಿದೇಶೀ ಪ್ರಜೆಯಾಗಿರೋದ್ರಿಂದ ಆಕೆಗೆ ಈ ಬಗ್ಗೆ ಗೊತ್ತಿಲ್ಲವೆಂದೇ ಅಂದುಕೊಂಡಿದ್ದರು. ಆದ್ರೆ ಆಟೋವಾಲ ಮಾರ್ಗ ಹೇಳೋಕಿಂತ ಮುಂಚೆಯೇ ಆಕೆ ಸುಲಭವಾಗಿ ಹಿಂದಿಯಲ್ಲಿ ಮಾತನಾಡಿ ದಾರಿ ಹೇಳಿದ್ದನ್ನು ಕೇಳಿ ಬೈಕ್ ಸವಾರರು ಆಶ್ಚರ್ಯ ಚಕಿತರಾಗಿದ್ದರಂತೆ.

ಹಿಂದಿ ಕಲಿಸೋ ಈ ಪ್ರಯಾಣದಲ್ಲಿ ಪಲ್ಲವಿ ಕೆಲ ಸ್ಮರಣೀಯ ಕ್ಷಣಗಳನ್ನೂ ಅನುಭವಿಸಿದ್ದಾಳೆ. ಇತಿಹಾಸಕಾರ ವಿಲಿಯಂ ಡಾಲ್ರಿಂಪಲ್ ಹುಟ್ಟುಹಬ್ಬಕ್ಕೆ ಆನ್ ಲೈನ್ ನಲ್ಲಿ “ನೀವು ಬರ್ತ್ ಡೇ ಕೇಕ್ ಸವಿಯುವಾಗ ನಿಮಗೆ ಹಿಂದಿಯನ್ನು ಕಲಿಸಲು ನಾನು ಇಷ್ಟಪಡುತ್ತೇನೆ” ಎಂದು ಹಾರೈಸಿದ್ದರು. ಹೀಗೆ ಮಾತಿಗೆ ಮಾತು ಮುಂದುವರೆದು ಕೊನೆಗೆ ವಿಲಿಯಂ ಡಾಲ್ರಿಂಪಲ್ ಅನ್ನು ತನ್ನ ಗ್ರಾಹಕನನ್ನಾಗಿ ಮಾಡಿಕೊಳ್ಳೋದ್ರಲ್ಲಿ ಸಫಲಳಾದಳು. ವೃತ್ತಿ ಮುಂದುವರಿದಂತೆ ಆಕೆಗೆ ಬಾಲಿವುಡ್ ನ ಖ್ಯಾತ ಸೆಲಬ್ರಿಟಿ ಜಾಕ್ವೆಲೀನ್ ಫೆರ್ನಾಂಡಿಸ್​​ಗೆ ಸಹ ಹಿಂದಿ ಕಲಿಸೋ ಸಮಯ ಬಂದೊದಗಿತ್ತು.

ಮುಂದಿನ ಭವಿಷ್ಯದ ಬಗ್ಗೆ ಮಾತನಾಡುವಾಗ ಪಲ್ಲವಿ ಹೇಳೋದು ಹೀಗೆ, “ಮುಂದೊಂದು ದಿನ ನಾನು ವಿದೇಶೀಯರಿಗಾಗಿ ಸ್ವಂತವಾಗಿ ಹಿಂದಿ ತರಗತಿಗಳನ್ನು ನಡೆಸೋ ಬಗ್ಗೆ ಉತ್ಸುಕಳಾಗಿದ್ದೇನೆ” ಅಂತಾಳೆ. ಇದು ಮೊಬೈಲ್ ಆ್ಯಪ್​​ಗಳ ಯುಗ. ಭಾಷೆಯನ್ನು ಕಲಿಸೋಕೆ ಆ್ಯಪ್​​ಗಳ ಕೊರತೆಯೇನಿಲ್ಲ. ಆದ್ರೂ ಭಾಷೆ ಕಲಿಯಲು ಮನುಷ್ಯ ಪರಸ್ಪರ ಸಂವಹನ ಮಾಡೋದಕ್ಕಿಂತ ಬೇರೆ ಉತ್ತಮ ಮಾರ್ಗವಿಲ್ಲ ಅನ್ನೋದು ಪಲ್ಲವಿ ನಂಬಿಕೆ.

Related Stories