ಹೃದಯಾಘಾತವಾದರೆ ತಕ್ಷಣ ಸಿಪಿಆರ್ ಮಾಡಿ ಜೀವ ಉಳಿಸಿ

ಉಷಾ ಹರೀಶ್​

0

ತುರ್ತು ಪರಿಸ್ಥಿತಿಗಳಲ್ಲಿ ನೂರಾರು ಹೃದ್ರೋಗಿಗಳ ಜೀವ ಉಳಿಸಿ ಸಹಾಯ ಮಾಡಬಲ್ಲ ಸಿಪಿಆರ್(ಕಾರ್ಡಿಯೋಪಲ್ಮನರಿ ರಿಸ್ಸಸಿಟೇಶನ್) ಎಂಬ ವೈದ್ಯ ವಿಧಾನವನ್ನು ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಪೋರ್ಟಿಸ್ ಆಸ್ಪತ್ರೆಯು ಸುಮಾರು 11 ಸಾವಿರ ಕ್ಕೂ ಹೆಚ್ಚು ಬೆಂಗಳೂರಿಗರಿಗೆ ತರಬೇತಿ ನೀಡಿದೆ. ಈ ವೈದ್ಯ ವಿಧಾನವನ್ನು ಕಲಿಯುವುದರಿಂದ ತುರ್ತು ಸಂದರ್ಭದಲ್ಲಿ ವೈದ್ಯೇತರರರು ಸಹ ಹಲವು ಹೃದ್ರೋಗಿಗಳ ಜೀವ ಉಳಿಸಬಹದು. ಈ ಸೂಕ್ಷ್ಮತೆಯನ್ನು ಮನಗಂಡ ಫೋರ್ಟಿಸ್ ಆಸ್ಪತ್ರೆ ಈ ವಿಧಾನದ ಬಗ್ಗೆ ಬೆಂಗಳೂರಿಗರಿಗೆ ರತಬೇತಿ ನೀಡುವ ಮೂಲಕ ಉತ್ತಮ ನಾಗರೀಕ ಸಮಾಜ ನಿರ್ಮಾಣ ಮಾಡುವತ್ತ ತನ್ನ ದಾಪುಗಾಲಿಟ್ಟಿದೆ.

ಫೋರ್ಟಿಸ್ ಆಸ್ಪತ್ರೆ ವೈದ್ಯ ಡಾ. ದಿನಕರ್ ಮತ್ತವರ ತಂಡ ಬೆಂಗಳೂರಿನಾದ್ಯಂತ ಸಾಕಷ್ಟು ಶಾಲೆಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಈಗಾಗಲೇ ತರಬೇತಿ ನೀಡಿದೆ. ಆ ಮೂಲಕ 2 ಮಿಲಿಯನ್ ಹೃದಯಗಳನ್ನು ಸರಿಪಡಿಸಲು ಫೋರ್ಟಿಸ್ ಆಸ್ಪತ್ರೆಗೆ ಸಾಧ್ಯವಾಗಿದೆ. ಈ ತರಬೇತಿಯಲ್ಲಿ ಸಿಬಿಐ ಮತ್ತು ಪೊಲೀಸ್ ಕಮಿಷನರ್ ಕಚೇರಿ ಸಿಬ್ಬಂದಿ ಸೇರಿದಂತೆ ಸಾಕಷ್ಟು ಜನರು ಭಾಗವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಮಂದಿಗೆ ಈ ತರಬೇತಿ ನೀಡಲಾಗುವುದು. ಕನ್ನಿಂಗ್ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ಬೆಳ್ಳಿ ಹಬ್ಬದ ಸಲುವಾಗಿ ಮತ್ತಷ್ಟು ಜನರಿಗೆ ತರಬೇತಿ ನೀಡಲು ಮುಂದಾಗಿದೆ.

" ನಮ್ಮ ಸಿಪಿಆರ್ ತರಬೇತಿ ಕಾರ್ಯಕ್ರಮಕ್ಕೆ ನಾಗರೀಕರು ನೀಡಿದ ಸ್ಪಂದನೆಯಿಂದ ನಮಗೆ ಸಂತೋಷವಾಗಿದೆ. ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು, ಬ್ಯಾಂಕ್ ಮತ್ತು ಸರಕಾರಿ ನೌಕರರು ಸೇರಿದಂತೆ ಹಲವು ಈ ಕಾರ್ಯಕ್ರಮದಲ್ಲಿ ಆಸಕ್ತಿ ತೋರಿದ್ದಾರೆ. ಬರೀ ಶಾಲೆ ಕಾಲೇಜು ಮಾತ್ರವಲ್ಲದೇ ಬಿಎಸ್ಎಫ್ ಯೋಧರಿಗೂ ಈ ತರಬೇತಿ ನೀಡಿದ್ದೇವೆ’’
                                           - ಡಾ. ದಿನಕರ್, ಸಿಪಿಆರ್ ತರಬೇತುದಾರ

ಸಿಪಿಆರ್ ಎಂದರೇನು..?

ಸಿಪಿಆರ್ ಎಂದರೆ ಆಸ್ಪತ್ರೆಯ ಹೊರಗೆ ಅಂದರೆ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ರಸ್ತೆಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಇನ್ನಿತರ ಸಾರ್ವಜನಿಕ ಪ್ರದೇಶದಲ್ಲಿ ಅನರೀಕ್ಷಿತವಾಗಿ ಹೃದಯಾಘಾತಾವದರೆ ಅಂತಹ ಪರಿಸ್ಥಿತಿಯಲ್ಲಿ ರೋಗಿಗೆ ನೀಡಬಲ್ಲ ವೈದ್ಯ ವಿಧಾನವಾಗಿದೆ. ಇದನ್ನು ಮಾಡುವುದರಿಂದ ಕಾರ್ಡಿಯಾಕ್ ಅರೆಸ್ಟ್ಗೆ ಒಳಗಾದ ವ್ಯಕ್ತಿಯ ಮೆದುಳಿನ ಕಾರ್ಯವನ್ನು ಸಂರಕ್ಷಿಸಬಹುದು ಹಾಗೂ ರಕ್ತ ಸಂಚಾರ ಮತ್ತು ಉಸಿರಾಟವನ್ನು ಸ್ವಾಭಾವಿಕವಾಗಿರುವಂತೆ ಮಾಡಬಹುದು. ಹೃದಯ ಸ್ತಂಭನವಾದ ಕೂಡಲೇ ಎಷ್ಟು ಬೇಗ ಸಿಪಿಆರ್ ವಿಧಾನ ಅನುಸರಿಸುತ್ತಾರೋ ಅಷ್ಟು ಒಳ್ಳೆಯದು.

ಇದನ್ನು ಓದಿ: ಕನ್ನಡಕ್ಕೊಬ್ಬರೇ ಲೇಡಿ ಕೊರಿಯೋಗ್ರಾಫರ್..!

ಸಿಪಿಆರ್ ವಿಧಾನ ಅನುಸರಿಸುವುದು ಹೇಗೆ

ಸಾಮಾನ್ಯವಾಗಿ ಹೃದಯ ಸ್ತಂಭನವಾದ ವ್ಯಕ್ತಿ ಕೂಡಲೇ ಕುಸಿದು ಬೀಳುತ್ತಾನೆ. ಸುತ್ತಮುತ್ತಲಿದ್ದ ಜನ ಆಸ್ಪತ್ರೆಯ ಸಹಾಯಕ್ಕಾಗಿ ಕಾಯದೇ ಮೊದಲು ಕತ್ತಿನ ಬಳಿ ಪಲ್ಸ್ ಚೆಕ್ ಮಾಡಬೇಕು. ಹೃದಯ ಹೊಡೆದುಕೊಳ್ಳದೆ ಇದ್ದರೆ ತಮ್ಮ ಹಸ್ತದ ಮೂಲಕ ಎದೆಯ ಮಧ್ಯಭಾಗದಲ್ಲಿ 30 ಬಾರಿ ಪ್ರೆಸ್ ಮಾಡಬೇಕು, ನಂತರ ಎರಡು ಬಾರಿ ಬಾಯಿಂದ ಬಾಯಿಗೆ ಉಸಿರು ನೀಡಬೇಕು. ಆಸ್ಪತ್ರೆಯ ಸಹಾಯ ಬರುವವರೆಗೂ ಹೀಗೆ ಮಾಡುತ್ತಲೇ ಇರಬೇಕು. ಆಗ ಹೃದಯಾಘಾತವಾದ ವ್ಯಕ್ತಿ ಮೃತ ಪಡುವುದಿಲ್ಲ. ಬಾಯಿಂದ ಬಾಯಿಗೆ ಉಸಿರು ನೀಡುವುದು ಕಷ್ಟವಾದರೆ ಕಂಪ್ರಶೆನ್ ಮಾತ್ರ ಮಾಡಬೇಕು. ಈ ವಿಧಾನವನ್ನು ಅಂಧರು ಸೇರಿದಂತೆ ಯಾರು ಬೇಕಾದರೂ ಮಾಡಬಹುದು. ಮಕ್ಕಳಿಗೆ ಈ ವಿಧಾನವನ್ನು ಅನುಸರಿಸುವಾಗ ಹಸ್ತದ ಬದಲಿಗೆ ಮೊದಲ ಎರಡು ಬೆರಳುಗಳ ಮೂಲಕ ಕಂಪ್ರಶೆನ್ ಮಾಡಬೇಕು.

ಸಿಪಿಆರ್ ವೈದ್ಯ ವಿಧಾನದ ಬಗೆಗಿನ ಅರಿವು ನಮ್ಮ ದೇಶದಲ್ಲಿ ಬಹಳ ಕಡಿಮೆ ಸಾಮಾನ್ಯವಾಗಿ ಶೇ 95 ರಷ್ಟು ಹೃದಯ ಸಂಬಂಧಿ ಕಾಯಿಲೆಗಳು ಮನೆಯಲ್ಲಿ ಸಂಭವಿಸುತ್ತವೆ. ಈ ಸಮಸ್ಯೆಗೆ ಸ್ಪಂದಿಸಿರುವ ಫೋರ್ಟಿಸ್ ಆಸ್ಪತ್ರೆ ತನ್ನ ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ಪೋರ್ಟಿಸ್ ಹಾರ್ಟ್ ಸೇವರ್ಸ್ ಎಂಬ ಹೃದಯ ರೋಗದ ತುರ್ತು ಪರಿಸ್ಥಿತಿಯಲ್ಲಿ ಅನುಸರಿಸಬೇಕಾದ ಮಾಹಿತಿ ಮತ್ತು ಸಿಪಿಆರ್ ತರಬೇತಿ ಕಾರ್ಯಕ್ರಮ ಆರಂಭಿಸಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸವವರು ಸಿಪಿಆರ್ ತಂತ್ರಗಳನ್ನು ಮತ್ತು ಹೃದಯ ರೋಗದ ತುರ್ತು ಪರಿಸ್ಥಿತಿಯಲ್ಲಿ ಮಾಡಬೇಕಾದ ಕ್ರಮ ಮತ್ತು ಹೃದಯದ ಆರೋಗ್ಯದ ಬಗ್ಗೆ ಅಗತ್ಯವಾದ ಮಾಹಿತಿಯನ್ನು ಪಡೆಯಬಹುದು. ಈ ಕಾರ್ಯದಿಂದ ಜವಬ್ದಾರಿಯುತ ನಾಗರೀಕರನ್ನು ನಿರ್ಮಾಣ ಮಾಡಲು ಸಹಾಕಾರಿಯಾಗುತ್ತದೆ.

ಇದನ್ನು ಓದಿ

1. ಕಸ ದಿಂದ ರಸ, ಮನೆಯಲ್ಲೇ ಬೆಳೆಯಿರಿ ತಾಜಾ ತರಕಾರಿ..!

2. ಸ್ಮಾರ್ಟ್ ಜಮಾನದ ಸ್ಮಾರ್ಟ್ ಸ್ಕೂಟರ್ ಎಸ್340

3. ಕನಸುಗಳ ಬೆನ್ನತ್ತಿ ಹೋದ ಯುವಕನ ಸಾಧನೆ


Related Stories

Stories by YourStory Kannada