ಮಾಂಸಾಹಾರವನ್ನು ಸಂರಕ್ಷಿಸಲು ಬಂದಿದೆ ಹೊಸ ತಂತ್ರಜ್ಞಾನ

ಟೀಮ್​ ವೈ.ಎಸ್​. ಕನ್ನಡ

0

ಭಾರತದಲ್ಲಿ ಆಹಾರೋದ್ಯಮ ಈಗಷ್ಟೇ ಬೆಳೆಯುತ್ತಿರುವ ಉದ್ಯಮ. ಹೀಗಾಗಿ ಈ ವಲಯದಲ್ಲಿ  ಸಂಶೋಧನೆಗಳು ಅಷ್ಟಾಗಿ ನಡೆದಿಲ್ಲ. ಆದ್ರೆ ಇತ್ತೀಚಿನ ದಿನಗಳಲ್ಲಿ ಫುಡ್​ ಇಂಡಸ್ಟ್ರಿ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಅದ್ರಲ್ಲೂ ಮಾಂಸಾಹಾರ ಮತ್ತು ಅದನ್ನು ತುಂಬಾ ದಿನ ರುಚಿಕರವಾಗಿ ಕಾಪಾಡಿಕೊಳ್ಳುವ ಬಗ್ಗೆ ಸಂಶೋಧನೆ ಜೋರಾಗಿಯೇ ನಡೆಯುತ್ತಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಪ್ರಯೋಗಾಲಯವು ಮಾಂಸಾಹಾರಿಗಳಿಗೆ ಮತ್ತು ಮಾಂಸ ಉದ್ಯಮದ ಸಂಗ್ರಹ ವೆಚ್ಚ ಕಡಿಮೆ ಮಾಡುವ ಉತ್ತಮ ಅವಕಾಶ ನೀಡಿದೆ. ಮಾಂಸಾಹಾರವನ್ನು ವಾರಗಟ್ಟಲೆ ಶೀತಲ ಸಂಗ್ರಹ ಸೌಲಭ್ಯದಲ್ಲಿ ಕಾಪಾಡುವ ಸರಳ ತಂತ್ರಜ್ಞಾನವೊಂದನ್ನು ಅದು ಅಭಿವೃದ್ಧಿಪಡಿಸಿದೆ.

ಸಾಮಾನ್ಯವಾಗಿ ಮಾಂಸಾಹಾರವು ಕತ್ತರಿಸಿದ ನಂತರ ತಾಜಾ ಆಗಿ ಕೇವಲ ಆರು ಗಂಟೆಯವರೆಗೆ ಇಡಬಹುದು. ಎರಡು ದಿನಗಳವರೆಗೆ ಶೀತಲೀಕರಣ ಯಂತ್ರದಲ್ಲಿರುತ್ತದೆ. ಮಾಂಸ ಮಳಿಗೆಯ ಮಾಲೀಕರು ಮತ್ತು ಶೀತಲ ಸಂಗ್ರಹಕಾರರ ಪ್ರಕಾರ, 6 ಗಂಟೆಗಳ ನಂತರ ಮಾರಾಟವಾಗದ ಮಾಂಸ ನಷ್ಟವಾಗಿಬಿಡುತ್ತದೆ. ಹಾಗಾಗಿ ಮಾಂಸ ಮರಾಟಗಾರರಿಗೆ ತುಂಬಾ ನಷ್ಟವಾಗುತ್ತದೆ. ಆದರೆ ಅಂತಹ ನಷ್ಟ ತಪ್ಪಿಸಲು ಡಿಆರ್​ಡಿಓ ಒಂದು ಹೊಸ ತಂತ್ರಜ್ಞಾನ ಕಂಡು ಹಿಡಿದಿದೆ.

ಇದನ್ನು ಓದಿ: ಶಾಲೆಗೆ ಹೋಗಿ ಮಕ್ಕಳ ಫೀಸ್​ ಕಟ್ಟುವ ಚಿಂತೆ ಇಲ್ಲ- ಕುಳಿತಲ್ಲೇ ಶಾಲಾ ಶುಲ್ಕ ಭರಿಸಲು ಇದೆ ಇನ್ಸ್ಟಾಫೀಸ್​..!

ಡಿಆರ್​ಡಿಓ ಮೈಸೂರು ಮೂಲದ ರಕ್ಷಣಾ ಆಹಾರ ಸಂಶೋಧನಾ ಪ್ರಾಣಿಗಳ ಉತ್ಪನ್ನ ವಿಭಾಗದ ವಿಜ್ಞಾನಿಗಳು ನೂತನ ಸಂಶೋಧನೆ ಮಾಡಿದ್ದಾರೆ. ವಿಶೇಷ ರಸವನ್ನು, ದಾಳಿಂಬೆ ಸಿಪ್ಪೆಗಳಿಂದ ಅಭಿವೃದ್ಧಿಪಡಿಸಿದ್ದಾರೆ. ಅವುಗಳನ್ನು ಮಾಂಸಕ್ಕೆ ಚುಚ್ಚಿದರೆ ಅಥವಾ ಹಚ್ಚಿದರೆ ವಿನಾಶಕಾರಿ ಬ್ಯಾಕ್ಟೀರಿಯ ಕಾರ್ಯದಿಂದ ಮಾಂಸ ನಷ್ಟವಾಗುವುದನ್ನು ತಪ್ಪಿಸಬಹುದು. ಅದು ವಾರದವರೆಗೆ ಸಹಜವಾದ ರುಚಿಯಲ್ಲೇ ಯಾವುದೇ ಸಮಸ್ಯೆಯಿಲ್ಲದೆ ಉಳಿಯುತ್ತದೆ.

ಡಿಎಫ್‌ಆರ್‌ಎಲ್ ವಿಜ್ಞಾನಿಗಳು ತಮ್ಮ ಸಂಶೋಧನೆಯನ್ನು ಕುರಿ ಮಾಂಸದ ಮೇಲೆ ಮಾಡಿದ್ದಾರೆ. ಆದರೆ ದಾಳಿಂಬೆ ಸಿಪ್ಪೆ ರಸದ ತಂತ್ರಜ್ಞಾನದಿಂದ ಕೋಳಿ ಮತ್ತು ಹಂದಿ ಮಾಂಸವನ್ನೂ ಕಾಪಾಡಬಹುದು. ಈಗ ತಾಜಾ ಕುರಿ ಮಾಂಸವನ್ನು 20 ಗಂಟೆಗಳ ಮೇಲೆ ಕಾಪಾಡಲು ಯಾವುದೇ ರಾಸಾಯನಿಕ ಸಂಗ್ರಹಗಾರಗಳು ಲಭ್ಯವಿಲ್ಲ. ಪ್ರಕೃತಿ ಸಹಜವಾದ ಆಹಾರ ಸಂಗ್ರಹಾರಗಳನ್ನು ಗುರುತಿಸುವ ನಿಟ್ಟಿನಲ್ಲಿ ವಿಜ್ಞಾನಿಗಳು ದಾಳಿಂಬೆ ಸಿಪ್ಪೆ ರಸದ ಬಗ್ಗೆ ಪ್ರಯೋಗಗಳನ್ನು ಮಾಡಿದ್ದಾರೆ. ಇದರಿಂದ ಏಳು ದಿನಗಳ ಕಾಲ ಸಾಮಾನ್ಯ ಪರಿಸರದಲ್ಲೇ ಕುರಿ ಮಾಂಸ ತಾಜಾ ಆಗಿರುವುದು ತಿಳಿದಿದೆ.

" ದಾಳಿಂಬೆ ಸಿಪ್ಪೆಗಳು ಶಕ್ತಿಯುತ ಆ್ಯಂಟಿ ಆಕ್ಸಿಡಂಟ್​ಗಳಾಗಿ ಆ್ಯಂಟಿಮೈಕ್ರೋಬಿಯಲ್ ತತ್ವಗಳನ್ನು ಹೊಂದಿವೆ.ಕೋಣೆಯ ತಾಪಮಾನದಿಂದ ಹೊರಗಿಟ್ಟಾಗಲೂ ಬ್ಯಾಕ್ಟೀರಿಯವು ಮಾಂಸಾಹಾರದ ಮೇಲೆ ಸಕ್ರಿಯವಾಗುವುದನ್ನು ತಪ್ಪಿಸಿದೆ. ಸಾಮಾನ್ಯವಾಗಿ ಶೀತಲೀಕರಣ ವ್ಯವಸ್ಥೆಯಲ್ಲಿ ಬಹಳ ಸಮಯವಿಟ್ಟ ಮಾಂಸಕ್ಕೆ ಎಸ್ಚೆರಿಷಿಯ ಕೊಲಿ, ಸಾಲ್ಮೊನೆಲ್ಲ, ಕ್ಯಾಂಪಿಲೋಬ್ಯಾಕ್ಟರ್, ಜೆನುನಿ, ಕ್ಲೋಸ್ಟ್ರಿಡಿಯಂ ಬೊಟುಲಿನಮ್, ಕ್ಲೋಸ್ಟ್ರಿಡಿಯಂ ಪೆರಫ್ರಿಂಜೆನ್ಸ್ ಮೊದಲಾದ ಬ್ಯಾಕ್ಟೀರಿಯಗಳು ತಗಲುತ್ತವೆ. ಈ ಮಾಂಸ ಸೇವನೆಯಿಂದ ಹೊಟ್ಟೆ ನೋವು, ತಲೆನೋವು, ಜ್ವರ, ಅತಿಸಾರ ಮತ್ತು ಮರಣವೂ ಸಂಭವಿಸಬಹುದು. ಈ ಬ್ಯಾಕ್ಟೀರಿಯಗಳು ಮಾಂಸಾಹಾರಕ್ಕೆ ಬರದಂತೆ ಹೊಸ ತಂತ್ರಜ್ಞಾನದ ಮೂಲಕ ಸಂಗ್ರಹಿಸಬಹುದಾಗಿದೆ"
-  ಪಿ.ಇ ಪಾಟ್ಕಿ, ಮುಖ್ಯಸ್ಥ ಡಿಎಫ್‌ಆರ್‌ಎಲ್​ನ ಆಹಾರ ಸಂಗ್ರಹ 

ಮುಖ್ಯವಾಗಿ ಸಂಶೋಧನೆಯು ಪ್ರಾಕೃತಿಕ ರಕ್ಷಣೆಯ ಬಳಕೆಗೆ ಹಾದಿ ಹುಡುಕುವ ಗುರಿ ಹೊಂದಿದೆ. ದೂರದ ಸ್ಥಳಗಳಲ್ಲಿ ಕೆಲಸ ಮಾಡುವ ಸೇನಾ ಜವಾನರಿಗೆ ಆಹಾರ ಒದಗಿಸುವ ನಿಟ್ಟಿನಲ್ಲಿ ಬಹಳ ಸಮಯ ಶೀತಲೀಕರಣದಲ್ಲಿಡುವ ವಿಧಾನಕ್ಕಾಗಿ ಸಂಶೋಧನೆ ನಡೆದಿದೆ. ಈಗಿನ ಹೊಸ ತಂತ್ರಜ್ಞಾನ ಆ ನಿಟ್ಟಿನಲ್ಲಿ ಸಹಕಾರಿಯಾಗಲಿದೆ. ಹಿರಿಯ ಡಿಎಫ್‌ಆರ್‌ಎಲ್ ವಿಜ್ಞಾನಿಗಳು ಈ ತಂತ್ರಜ್ಞಾನವನ್ನು ಮಾಂಸೋದ್ಯಮಕ್ಕೆ ಮತ್ತು ಜನಸಾಮಾನ್ಯರಿಗೆ ತಲುಪಿಸುವುದಾಗಿ ಹೇಳಿದ್ದಾರೆ. ತಂತ್ರಜ್ಞಾನದ ಅಭಿವೃದ್ಧಿ ಬಳಿಕ ಅದರ ವಾಣಿಜ್ಯ ಬಳಕೆಯ ವಿಶ್ಲೇಷಣೆಯನ್ನು ಸಂಬಂಧಿಸಿದ ವಿಭಾಗಗಳು ನಡೆಸಲಿವೆ.

ಇದನ್ನು ಓದಿ:

1. ಅಂದು ಕೂಲಿ, ಇಂದು 5 ಕಂಪನಿಗಳ ಒಡೆಯ!

2. 70 ಕೊಠಡಿ, 11 ಸಿಬ್ಬಂದಿ, ಇರುವವನೊಬ್ಬನೇ ಭಿಕ್ಷುಕ : ಪುನರ್ವಸತಿ ಹೆಸರಲ್ಲಿ ಹಣ ಪೋಲು

3. ಜಪಾನಿನ ಹಿರಿಯಜ್ಜನ ಓದುವ ಆಸೆ- 96ರ ಹರೆಯದಲ್ಲಿ ದಕ್ಕಿತು ಪದವಿ ಗೌರವ

Related Stories

Stories by YourStory Kannada