ಉದ್ಯಮಿಗಳು ಓದಲೇಬೇಕಾದ 50 ಪುಸ್ತಕಗಳು ...

ಟೀಮ್​​ ವೈ.ಎಸ್​​.

ಉದ್ಯಮಿಗಳು ಓದಲೇಬೇಕಾದ 50 ಪುಸ್ತಕಗಳು ...

Sunday October 25, 2015,

7 min Read

ಬೃಹತ್ ಉದ್ಯಮವೊಂದನ್ನು ಆರಂಭಿಸುವ ಸಂದರ್ಭದಲ್ಲಿ ಅವರಿಗೆ ಸಲಹೆ ಹಾಗೂ ಪ್ರೋತ್ಸಾಹದ ಅಗತ್ಯವಿರುತ್ತದೆ. ಉದ್ಯಮಿಗಳು ಓದಲೇಬಾಕದಂತಹ ಸರ್ವವ್ಯಾಪಿಯಾದ 50 ಪುಸ್ತಕಗಳ ವಿವರ ಇಲ್ಲಿದೆ.

1. ದಿ ಸ್ಟಾರ್ಟ್‍ಅಪ್ ಪ್ಲೇ ಬುಕ್ : ಡೇವಿಡ್ ಕಿಡ್ಡರ್ ಬರೆದ `ಸೀಕ್ರೆಟ್ಸ್ ಆಫ್ ದಿ ಫಾಸ್ಟೆಸ್ಟ್ ಗ್ರೋವಿಂಗ್ ಸ್ಟಾರ್ಟ್‍ಅಪ್ಸ್ ಫ್ರಾಮ್ ದೇರ್ ಫೌಂಡಿಂಗ್ ಎಂಟರ್‍ಪ್ರೆನ್ಯೂರ್ಸ್'

image


ಈ ಪುಸ್ತಕದಲ್ಲಿ ನೂರಾರು ಖ್ಯಾತ ಉದ್ಯಮಿಗಳನ್ನು ಡೇವಿಡ್ ಕಿಡ್ಡರ್ ಸಂದರ್ಶಿಸಿದ್ದಾರೆ. ಅವರು ಬಿಲಿಯನ್ ಡಾಲರ್ ವಹಿವಾಟನ್ನು ಮಾಡಿದ್ಹೇಗೆ ಅನ್ನೋದನ್ನ ತಿಳಿದುಕೊಂಡಿದ್ದಾರೆ. ಅವರು ಎದುರಿಸಿದ ಸವಾಲುಗಳು ಹಾಗೂ ಕಠಿಣ ಪರಿಸ್ಥಿತಿಗಳನ್ನೂ ಓದುಗರ ಮುಂದಿಟ್ಟಿದ್ದಾರೆ.

2. ಝೀರೋ ಟು ಒನ್ - ಪೀಟರ್ ಥೇಲ್ ಬರೆದ `ಹೌ ಟು ಬಿಲ್ಡ್ ದ ಫ್ಯೂಚರ್'

ಬಂಡವಾಳ ಹೂಡಿಕೆ ಹಾಗೂ ಉದ್ಯಮದ ಬಗ್ಗೆ ತಮ್ಮ ಸ್ವಂತ ಅನುಭವದ ಆಧಾರದ ಮೇಲೆ ಪೀಟರ್ 10 ಟಿಪ್ಸ್ ನೀಡಿದ್ದಾರೆ. 210 ಪುಟಗಳ ಈ ಪುಸ್ತಕ ಉದ್ಯಮಿಗಳಿಗೆ ನಿಜಕ್ಕೂ ಸಹಯಾಕಾರಿಯಾಗಿದೆ. ಉದ್ಯಮದ ಆರಂಭದಲ್ಲಿ ಹೊಸ ಭವಿಷ್ಯವನ್ನು ಕಟ್ಟುವ ಬಗ್ಗೆ ನೀವು ಎಲ್ಲರನ್ನೂ ಒಪ್ಪಿಸುವ ಅವಶ್ಯಕತೆ ಇದೆ ಎನ್ನುತ್ತಾರೆ ಪೀಟರ್.

3. ಜೇಮ್ಸ್ ಆಲ್ಚರ್ ಬರೆದ `ದಿ ಚೂಸ್ ಯುವರ್‍ಸೆಲ್ಫ್ ಗೈಡ್ ಟು ವೆಲ್ತ್'

ಈ ಪುಸ್ತಕದಲ್ಲಿರುವ ವಿಷಯವಸ್ತು ಬಹಳ ಮೊನಚಾಗಿದೆ ಎನ್ನುತ್ತಾರೆ ವಿಮರ್ಷಕರು. ಹಣ ಮಾಡುವುದು ಹೇಗೆ ಅನ್ನೋ ಬಗ್ಗೆ ಜೇಮ್ಸ್ ಸಲಹೆ ನೀಡಿದ್ದಾರೆ. ಹೊಸ ಜಗತ್ತಿನಲ್ಲಿ ಹಳೆ ನಿಯಮಗಳೊಂದಿಗೆ ಆಡುವುದು ಸುಲಭವಲ್ಲ ಅನ್ನೋ ತತ್ವವನ್ನು ಜೇಮ್ಸ್ ವಿವರಿಸಿದ್ದಾರೆ.

4. ಗೇ ಕವಾಸಕಿ ಅವರ `ದಿ ಆರ್ಟ್ ಆಫ್ ದಿ ಸ್ಟಾರ್ಟ್'

ಪುಸ್ತಕದ ಹೆಸರೇ ಹೇಳುವಂತೆ ಇದು ಸಂಪೂರ್ಣವಾಗಿ ಉದ್ಯಮದ ಆರಂಭದ ಬಗ್ಗೆ ಇರುವಂಥದ್ದು. 2004ರಲ್ಲಿ ಈ ಪುಸ್ತಕದ ಮೊದಲ ಆವೃತ್ತಿ ಬಿಡುಗಡೆಯಾದ್ರೆ ಕಳೆದ ವರ್ಷ ಎರಡನೇ ಆವೃತ್ತಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

5. ಜೇಸನ್ ಫ್ರೈಡ್ ಮತ್ತು ಡೇವಿಡ್ ಹಿನೇಮಿರ್ ಹ್ಯಾನ್ಸನ್ ಬರೆದ `ರಿ ವರ್ಕ್'

ಉತ್ತಮವಾಗಿ, ವೇಗವಾಗಿ ಮತ್ತು ಸುಲಭವಾಗಿ ಉದ್ಯಮದಲ್ಲಿ ಯಶಸ್ಸು ಪಡೆಯೋದು ಹೇಗೆ ಅನ್ನೋದು ರಿ ವರ್ಕ್ ಪುಸ್ತಕದಲ್ಲಿ ಇದೆ. ಪ್ಲಾನಿಂಗ್ ಅನ್ನೋದು ಯಾಕೆ ಅಪಾಯಕಾರಿ? ಹೊರಗಿನ ಹೂಡಿಕೆದಾರರನ್ನು ಯಾಕೆ ಅವಲಬಿಸಬಾರದು? ಪೈಪೋಟಿಯನ್ನು ಏಕೆ ನಿರ್ಲಕ್ಷಿಸಬೇಕು ಅನ್ನೋದನ್ನೆಲ್ಲ ವಿವರಿಸಲಾಗಿದೆ. ಪೇಪರ್ ವರ್ಕ್ ಹಾಗೂ ಸಭೆ ಮಾಡುತ್ತ ನೀವು ಸಮಯ ವ್ಯರ್ಥ ಮಾಡಬೇಕಿಲ್ಲ. ಕಚೇರಿಯೂ ಇಲ್ಲದೆ ಉದ್ಯಮ ಹೇಗೆ ನಡೆಸೋದು ಅನ್ನೋದನ್ನು ಪುಸ್ತಕದಲ್ಲಿ ಬರೆದಿದ್ದಾರೆ.

6. ಸೇಥ್ ಗಾಡಿನ್ ಅವರು ಬರೆದ `ಟ್ರಾನ್ಸ್​​​ಫಾರ್ಮ್ ಯುವರ್ ಬ್ಯುಸಿನೆಸ್ ಬೈ ಬಿಯಿಂಗ್ ರಿಮಾರ್ಕೇಬೇಲ್'

ಒಮ್ಮೊಮ್ಮೆ ಉತ್ಪನ್ನಗಳ ಬೆಲೆ, ಬಡ್ತಿ ಹಾಗೂ ಪ್ರಚಾರಕ್ಕೆ ದಶಕಗಳೇ ಬೇಕಾಗುತ್ತವೆ. ಆದ್ರೆ ಅತಿ ಶೀಘ್ರವಾಗಿ ಜನಪ್ರಿಯತೆ ಪಡೆಯೋದು ಹೇಗೆ ಅನ್ನೋದನ್ನು ಗಾಡಿನ್ ವಿವರಿಸಿದ್ದಾರೆ.

7. ಎರಿಕ್ ರೈಸ್ ಅವರ `ದಿ ಲೀನ್ ಸ್ಟಾರ್ಟ್‍ಅಪ್'

ಪರಿಸರ ವ್ಯವಸ್ಥೆಯಲ್ಲಿನ ಸಂಶೋಧನೆಗೆ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಉದ್ಯಮಗಳಲ್ಲಿ ವಿಫಲರಾಗುವವರ ಸಂಖ್ಯೆಯೇ ಹೆಚ್ಚು. ಅಂತಹ ವೈಫಲ್ಯವನ್ನು ತಡೆಯುವುದ ಹೇಗೆ ಅನ್ನೋದನ್ನು ಎರಿಕ್ ವಿವರಿಸಿದ್ದಾರೆ.

image


8.ಜೆಫ್ರಿ ಎ. ಮೂರೆ ಅವರು ಬರೆದ `ಕ್ರಾಸಿಂಗ್ ದಿ ಚಾಸ್ಮ್'

ಈ ಪುಸ್ತಕದಲ್ಲಿ ಮಾರುಕಟ್ಟೆಯನ್ನು ಜೆಫ್ರಿ ಎರಡು ವಿಧವಾಗಿ ವಿಂಗಡಿಸಿದ್ದಾರೆ. ಮೊದಲನೆಯದು ಆರಂಭಿಕ ಅಳವಡಿಕೆ ಮತ್ತು ಒಳಗಿನವರ ಪ್ರಾಬಲ್ಯ. ಹೊಸ ಅಭಿವೃದ್ಧಿ ಸ್ವರೂಪ ಮತ್ತು ಪ್ರಯೋಜನಗನ್ನು ಪ್ರಶಂಸಿಸುವುದು ಅವರೇ. ಎರಡನೆಯದು ಹೊಸ ತಂತ್ರಜ್ಞಾನದ ಲಾಭವನ್ನು ಬಯಸುವ ಆದ್ರೆ ಅನುಭವ ಬೇಡದ ಪ್ರವೃತ್ತಿಯ ಮಾರುಕಟ್ಟೆ.

9. ಡಬ್ಲೂ.ಚಾನ್ ಕಿಮ್ ಬರೆದ `ಬ್ಲ್ಯೂ ಓಶನ್ ಸ್ಟ್ರ್ಯಾಟಜಿ'

2005ರಲ್ಲಿ ಬಿಡುಗಡೆಯಾದ ಉದ್ಯಮ ತಂತ್ರಗಳ ಪುಸ್ತಕ ಇದು. ಪೈಪೋಟಿಗೆ ಇಳಿಯುವ ಬದಲು ಹೊಸ ಬೇಡಿಕೆ ಹಾಗೂ ತಕರಾರು ಇಲ್ಲದ ಮಾರುಕಟ್ಟೆಯನ್ನು ಸೃಷ್ಟಿ ಮಾಡಬೇಕೆಂದು ಚಾನ್ ಕಿಮ್ ಸಲಹೆ ನೀಡಿದ್ದಾರೆ.

10. ಜಿಮ್ ಕಾಲಿನ್ಸ್ ಅವರ `ಗುಡ್ ಟು ಗ್ರೇಟ್'

ಒಳ್ಳೆಯದರಿಂದ ಮಹಾನ್ ಎನಿಸಿಕೊಂಡ ಕಂಪನಿಗಳ 7 ಗುಣಲಕ್ಷಣಗಳನ್ನು ಈ ಪುಸ್ತಕದಲ್ಲಿ ಜಿಮ್ ಕಾಲಿನ್ಸ್ ಬರೆದಿದ್ದಾರೆ.

11. ಕ್ಲೇ ಕ್ರಿಸ್ಟೆನ್ಸನ್ ಅವರ `ದಿ ಇನ್ನೋವೇಟರ್ಸ್ ಡೈಲೆಮಾ'

ಗ್ರಾಹಕರ ಅವಶ್ಯಕತೆಗಳನ್ನು ಪೂರೈಸಲು ಅತಿ ಹೆಚ್ಚು ಒತ್ತು ನೀಡಿದರೆ ಸಂಸ್ಥೆಯ ವೈಫಲ್ಯದ ಸಾಧ್ಯತೆ ಹೆಚ್ಚು ಎನ್ನುತ್ತಾರೆ ಕ್ರಿಸ್ಟೆನ್ಸನ್. ಯಶಸ್ಸು ಗಳಿಸಲು ವಿಚ್ಛಿದ್ರಕಾರಕ ನಾವೀನ್ಯತೆಯ ಅಗತ್ಯವಿದೆಯೆಂದು ಪ್ರತಿಪಾದಿಸಿದ್ದಾರೆ.

12. ರಿಚರ್ಡ್ ಬ್ರಾನ್ಸನ್ ಅವರು ಬರೆದ `ಲೂಸಿಂಗ್ ಮೈ ವರ್ಜಿನಿಟಿ'

ವರ್ಜಿನ್ ಗ್ರೂಪ್‍ನ ಸಂಸ್ಥಾಪಕ ಹಾಗೂ ಸಿಇಓ ರಿಚರ್ಡ್ ಬ್ರಾನ್ಸನ್ ಅವರ ಆತ್ಮಕಥೆ ಇದು. ಅವರ ಉದ್ಯಮ ಪಯಣದಲ್ಲಿನ ಅಸಾಮಾನ್ಯ ಹಾಗೂ ವಿಭಿನ್ನ ಆಯ್ಕೆಗಳ ಬಗ್ಗೆ ಪುಸ್ತಕದಲ್ಲಿದೆ.

13. ನಾಥನ್ ಫರ್ ಮತ್ತು ಪೌಲ್ ಅಲ್‍ಸ್ಟ್ರೋಮ್ ಬರೆದ `ನೇಲ್ ಇಟ್ ದೆನ್ ಸ್ಕೇಲ್ ಇಟ್'

ಯಶಸ್ಸು ಗಳಿಸಲು ಪ್ರಯಾಸಪಡುತ್ತಿರುವ ಕಂಪನಿಗಳಿಗೆ ಸರಳ ಸೂತ್ರಗಳನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಯಶಸ್ವಿ ಸಂಸ್ಥೆಗಳ ಮಾದರಿ ಮತ್ತು ತತ್ವಗಳನ್ನು ಬರೆದಿದ್ದಾರೆ.

14. ಸ್ಟೀಫನ್ ಆರ್. ಕೋವೇ ಅವರ `ಪವರ್‍ಫುಲ್ ಲೆಸ್ಸನ್ಸ್ ಇನ್ ಪರ್ಸನಲ್ ಚೇಂಜ್'

ಈ ಪುಸ್ತಕ ಬಿಡುಗಡೆಯಾಗಿ ದಶಕವೇ ಕಳೆದಿದೆ. ಆದ್ರೆ ಇದರಲ್ಲಿರುವ ಬುದ್ಧಿವಂತಿಕೆ ಮತ್ತು ಕಲ್ಪನೆಗಳು ಇವತ್ತಿಗೂ ಉದ್ಯಮಿಗಳು ಅಳವಡಿಸಿಕೊಳ್ಳುವಂಥದ್ದು. ಇದು ಅತಿ ಹೆಚ್ಚು ಮಾರಾಟವಾದ ಪುಸ್ತಕವೂ ಹೌದು.

15. ರಾಬರ್ಟ್ ಬಿ. ಸಿಲ್ಡಿನಿ ಅವರು ಬರೆದ `ದಿ ಸೈಕಾಲಜಿ ಆಫ್ ಪಸ್ರ್ಯುಯೇಶನ್'

ಯಾವುದೇ ಸಂಸ್ಥೆಯ ಅಭಿವೃದ್ಧಿಗೆ ಉದ್ಯಮಿಯ ಜಾಣ್ಮೆ ಅತ್ಯವಶ್ಯ. ಜನರಿಂದ ಸೈ ಎನಿಸಿಕೊಳ್ಳೋದು ಹೇಗೆ ಅನ್ನೋದು ಈ ಪುಸ್ತಕದಲ್ಲಿದೆ.

16. ಪೀಟರ್ ಡ್ರಕ್ಕರ್ ಅವರ `ಇನ್ನೋವೇಶನ್ & ಎಂಟರ್‍ಪ್ರೆನ್ಯೂರ್‍ಶಿಪ್'

ಬಹಳ ಹಿಂದೆಯೇ ಬರೆದ ಈ ಪುಸ್ತಕದಲ್ಲಿ ಉದ್ಯಮ ಶುರು ಮಾಡಲು ಬೇಕಾದ ಮೂಲಭೂತ ಅಂಶಗಳ ಬಗ್ಗೆ ಹೇಳಲಾಗಿದೆ. ಅವು ಇವತ್ತಿಗೂ ಪ್ರಸ್ತುತವಾದ ವಿಷಯಗಳು.

17. ಬೆನ್ ಹೋರೋವಿಜ್ ಅವರು ಬರೆದ `ದಿ ಹಾರ್ಡ್ ಥಿಂಗ್ ಎಬೌಟ್ ದಿ ಹಾರ್ಡ್ ಥಿಂಗ್ಸ್'

ಉದ್ದಿಮೆ ಪಯಣದ ವಾಸ್ತವಗಳನ್ನು ಈ ಪುಸ್ತಕದಲ್ಲಿ ಬರೆಯಲಾಗಿದೆ.

18. ಮಲ್ಕೊಲ್ಮ್ ಗ್ಲಾಡ್‍ವೆಲ್ ಬರೆದ `ದಿ ಸ್ಟೋರಿ ಆಫ್ ಸಕ್ಸಸ್'

ನಿಮ್ಮ ಆಕಾಂಕ್ಷೆಗಳ ಮೌಲ್ಯಮಾಪನ ಮತ್ತು ಕಾರ್ಯರೂಪಕ್ಕೆ ತರಲು ಇದು ಸೂಕ್ತವಾದ ಪುಸ್ತಕ. ಬಿಲ್ ಗೇಟ್ಸ್‍ರಂತಹ ಉದ್ಯಮಿಗಳ ಯಶೋಗಾಥೆಯನ್ನು ಪುಸ್ತಕದಲ್ಲಿ ಬರೆಯಲಾಗಿದೆ.

19. ಕ್ರಿಸ್ ಗಿಲ್‍ಬ್ಯೂ ಅವರ `ದಿ 100 $ ಸ್ಟಾರ್ಟ್‍ಅಪ್'

ವಿಭಿನ್ನ ವಿಷಯ ವಸ್ತುವಿನ ಮೇಲೆ ಇದು ಗಮನಹರಿಸಿದೆ. ಸಣ್ಣ ಸಣ್ಣ ಸಂಸ್ಥೆ ಮೂಲಕ ಆಸಕ್ತಿಯನ್ನು ಲಾಭವಾಗಿ ಬದಲಾಯಿಸುವ ಉದ್ಯಮಿಗಳ ಬಗ್ಗೆ ಬರೆಯಲಾಗಿದೆ.

20. ಬ್ರಾಡ್ ಸ್ಟೋನ್ ಬರೆದ `ಜೆಫ್ ಬೆಝೋಸ್ & ದಿ ಏಜ್ ಆಫ್ ಅಮೇಝಾನ್'

ನ್ಯೂಸ್ ವೀಕ್, ನ್ಯೂಯಾರ್ಕ್ ಟೈಮ್ಸ್​​ನಂತಹ ಪತ್ರಿಗೆಳಲ್ಲೂ ಬ್ರಾಡ್ ಬರೆದಿದ್ದಾರೆ. ಇ-ಕಾಮರ್ಸ್ ಮೂಲಕ ಉದ್ಯಮ ಲೋಕದಲ್ಲಿ ಸಂಚಲನ ಮೂಡಿಸಿದ ಅಮೇಝಾನ್ ಕಂಪನಿ ಬಗ್ಗೆ ಈ ಪುಸ್ತಕದಲ್ಲಿ ಬ್ರಾಡ್ ವಿವರಿಸಿದ್ದಾರೆ.

21. ನವಿ ರಾಡ್ಜು, ಜೈದೀಪ್ ಪ್ರಭು ಮತ್ತು ಸಿಮೋನ್ ಅಹುಜಾ ಅವರು ಬರೆದ `ಎ ಫ್ರಜೈಲ್ & ಫ್ಲೆಕ್ಸಿಬಲ್ ಅಪ್ರೋಚ್ ಟು ಇನ್ನೋವೇಶನ್ ಫಾರ್ ದಿ 21 ಸೆಂಚುರಿ'

ಗೂಗಲ್, ಪೆಪ್ಸಿಕೋ, ಫೇಸ್‍ಬುಕ್, ಸೀಮನ್ಸ್ ಟಾಟಾ ಗ್ರೂಪ್‍ನಂತಹ ಯಶಸ್ವಿ ಕಂಪನಿಗಳು ಅಳವಡಿಸಿಕೊಂಡಿರುವ ತತ್ವಗಳ ಬಗ್ಗೆ ಈ ಪುಸ್ತಕದಲ್ಲಿ ಹೇಳಲಾಗಿದೆ.

22. ಡೆರೆಕ್ ಲಿಡೋ ಅವರು ಬರೆದ `ಸ್ಟಾರ್ಟ್‍ಅಪ್ ಲೀಡರ್‍ಶಿಪ್'

ಹೊಸ ಕಂಪನಿ ಹಾಗೂ ಉತ್ಪನ್ನಗಳನ್ನು ಪರಿಚಯಿಸಿದಾಕ್ಷಣ ಉದ್ಯಮಿಗಳು ಯಶಸ್ವಿಯಾಗುತ್ತಾರೆ ಅನ್ನೋದು ಸುಳ್ಳು. ಬದಲಾಗಿ ನಿರ್ದಿಷ್ಟ ನಾಯಕತ್ವದ ಅಗತ್ಯವಿದೆ. ಪ್ರತಿ ಹಂತಕ್ಕೂ ಹೊಸ ಬಗೆಯ ಕೌಶಲ್ಯದ ಅಗತ್ಯವಿರುತ್ತದೆ ಅನ್ನೋದು ಡೆರೆಕ್ ಲಿಡೋ ಅವರ ಅಭಿಪ್ರಾಯ.

23. ಬಿಝ್ ಸ್ಟೋನ್ ಅವರು ಬರೆದ `ಥಿಂಗ್ಸ್ ಎ ಲಿಟಲ್ ಬರ್ಡ್ ಟೋಲ್ಡ್ ಮಿ : ಕನ್ಫೆಶನ್ಸ್ ಆಫ್ ದಿ ಕ್ರಿಯೇಟಿವ್ ಮೈಂಡ್'

ಟ್ವಿಟ್ಟರ್‍ನ ಸಹ ಸಂಸ್ಥಾಪಕ ಬಿಝ್ ಸ್ಟೋನ್ ಅವರು ಬರೆದ ಈ ಪುಸ್ತಕದಲ್ಲಿ ಕೌಶಲ್ಯತೆಯ ಶಕ್ತಿ ಏನು ಅನ್ನೋದನ್ನ ವಿವರಿಸಲಾಗಿದೆ. 224 ಪುಟಗಳ ಈ ಪುಸ್ತಕ ಬಿಝ್ ಸ್ಟೋನ್ ಅವರ ವೈಯಕ್ತಿಕ ಬದುಕಿನ ಚಿತ್ರಣವನ್ನೂ ಬಿಚ್ಚಿಟ್ಟಿದೆ.

24. ರಾಬರ್ಟ್ ಎಂ. ಪಿರ್ಸಿಗ್ ಅವರು ಬರೆದ `ಝೆನ್ & ದಿ ಆರ್ಟ್ ಆಫ್ ಮೋಟರ್‍ಸೈಕಲ್ ಮೆಂಟೇನನ್ಸ್ : ಆ್ಯನ್​​ ಎನ್‍ಕ್ವೈರಿ ಇನ್ ಟು ವ್ಯಾಲ್ಯೂಸ್'

ತತ್ವಶಾಸ್ತ್ರದ ವಿಚಾರಕ್ಕೆ ಬಂದ್ರೆ ದಶಕಗಳ ನಂತರವೂ ಅತಿ ಹೆಚ್ಚು ಓದಲ್ಪಡುತ್ತಿರುವ ಪುಸ್ತಕ ಇದು.

25. ಕೆರ್ರಿ ಪೆಟರ್ಸ್‍ನ್ ಅವರು ಬರೆದ `ಕ್ರೂಶಿಯಲ್ ಕಾನ್ವರ್ಸೇಶನ್ಸ್ : ಟೂಲ್ಸ್ ಫಾರ್ ಟಾಕಿಂಗ್ ವೆನ್ ಸ್ಟೇಕ್ಸ್ ಆರ್ ಹೈ'

ಸಂಭಾಷಣೆ ಅನ್ನೋದು ಸಂವಹನದ ಆತ್ಮವಿದ್ದಂತೆ. ಅತ್ಯಂತ ಕಠಿಣ ಸಂದರ್ಭಗಳಲ್ಲಿ ಸಂಭಾಷಣೆಗೆ ಬೇಕಾದ ಅಸ್ತ್ರಗಳನ್ನು ಕೆರ್ರಿ ವಿವರಿಸಿದ್ದಾರೆ.

26. ರಮಾ ಬಿಜಾಪುರ್ಕರ್ ಅವರು ಬರೆದ `ಎ ನೆವರ್ ಬಿಫೋರ್ ವರ್ಲ್ಡ್​​ : ಟ್ರ್ಯಾಕಿಂಗ್ ದಿ ಎವಲ್ಯೂಷನ್ ಆಫ್ ಕನ್ಸ್ಯೂಮರ್ ಇಂಡಿಯಾ'

ಭಾರತದ ಆರ್ಥಿಕತೆ ಬಗ್ಗೆ ರಮಾ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಜನರ ಬಳಿ ಎಷ್ಟು ಹಣವಿದೆ ಅನ್ನೋದರ ಬಗ್ಗೆ ಮಾತ್ರ ಗಮನಹರಿಸದೆ ಅವರಿಗಿರುವ ದುಖಃ, ಕೊರತೆಗಳ ಬಗ್ಗೆಯೂ ಯೋಚಿಸಿ ಎಂದು ಉದ್ಯಮಿಗಳಿಗೆ ಸಲಹೆ ನೀಡಿದ್ದಾರೆ.

27. ರಾಬರ್ಟ್ ಗ್ರೀನೆ ಅವರ `ದಿ 48 ಲಾಸ್ ಆಫ್ ದಿ ಪವರ್'

ಯಾರಿಗೆ ಅಧಿಕಾರ ಬೇಕು..? ಯಾರು ಅಧಿಕಾರವನ್ನು ನೋಡಬಯಸುತ್ತೀರಿ? ಅಧಿಕಾರದ ವಿರುದ್ಧ ತೋಳೇರಿಸಲು ಬಯಸುವವರಿಗಾಗಿಯೇ ಇರುವ ಪುಸ್ತಕ ಇದು ಅಂತಾ ರಾಬರ್ಟ್ ಬರೆದಿದ್ದಾರೆ.

28. ಹಿಂದೋಲ್ ಸೇನ್‍ಗುಪ್ತಾ ಬರೆದ `ರಿ ಕಾಸ್ಟಿಂಗ್ ಇಂಡಿಯಾ : ಹೌ ಎಂಟರ್‍ಪ್ರೆನ್ಯೂರ್‍ಶಿಪ್ ಈಸ್ ರೆವಲ್ಯೂಶನೈಸಿಂಗ್ ದಿ ವರ್ಲ್ಡ್​​ ಲಾರ್ಜೆಸ್ಟ್ ಡೆಮಾಕ್ರಸಿ'

ಭಾರತದಲ್ಲಿ ಎರಡು ಬಗೆಯ ಪ್ರಜಾಪ್ರಭುತ್ವ ಚಟುವಟಿಕೆಗಳಿವೆ. ಒಂದು ವಿವೇಚನೆಯಿಂದ ಬಂದಿದ್ದು, ಇನ್ನೊಂದು ಅನುಭವದ್ದು ಅನ್ನೋದನ್ನು ಹಿಂಧೋಲ್ ಸೇನ್‍ಗುಪ್ತಾ ಬರೆದಿದ್ದಾರೆ.

29. ಉಪೇಂದ್ರ ಕಚ್ರು ಅವರು ಬರೆದ `ಇಂಡಿಯಾ ಲ್ಯಾಂಡ್ ಆಫ್ ಎ ಬಿಲಿಯನ್ ಎಂಟರ್‍ಪ್ರೆನ್ಯೂರ್ಸ್'

ಭಾರತದಲ್ಲಿ ಆರ್ಥಿಕತೆಯ ವೇಗದ ಬೆಳವಣಿಗೆಗೆ ಉದ್ಯಮ ಹಾಗೂ ಸ್ವಯಂ ಉದ್ಯೋಗ ಕಾರಣ ಅನ್ನೋದನ್ನು ಈ ಪುಸ್ತಕದಲ್ಲಿ ವಿವರವಾಗಿ ಉಪೇಂದ್ರ ಬರೆದಿದ್ದಾರೆ.

30. ಅಲೈಸ್ ಶ್ರೋಡರ್ ಬರೆದ `ದಿ ಸ್ನೋ ಬಾಲ್ : ವಾರೆನ್ ಬಫೆಟ್ & ದಿ ಬ್ಯುಸಿನೆಸ್ ಆಫ್ ಲೈಫ್'

ಅಲೈಸ್ ಇವರೊಬ್ಬ ವಿಮರ್ಷಕರು, ಲೇಖಕರು ಹಾಗೂ ಮಾರ್ಗನ್ ಸ್ಟೆನ್ಲೀ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು. ಹೂಡಿಕೆ ಜಗತ್ತಿನ ದಂತಕಥೆ ವಾರೆನ್ ಬಫೆಟ್ ಅವರ ಬಗ್ಗೆ ಬರೆದಿದ್ದಾರೆ.

31. ಜೆಸ್ಸಿಕಾ ಲಿವಿಂಗ್ಸ್ಟನ್ ಬರೆದ ಫೌಂಡರ್ಸ್ ಎಟ್ ವರ್ಕ್ : ಸ್ಟೋರೀಸ್ ಆಫ್ ಸ್ಟಾರ್ಟ್‍ಅಪ್ಸ್, ಅರ್ಲಿ ಡೇಸ್'

ಈ ಪುಸ್ತಕದಲ್ಲಿ ಆ್ಯಪಲ್, ಲೋಟಸ್, ಫ್ಲಿಕರ್, ಹಾಟ್‍ಮೇಲ್ ನಂತಹ ಪ್ರಸಿದ್ಧ ಕಂಪನಿಗಳ ಮುಖ್ಯಸ್ಥರ ಬದುಕಿನ ಬಗ್ಗೆ ಜೆಸ್ಸಿಕಾ ವಿವರಿಸಿದ್ದಾರೆ.

32. ಟಾಮ್ ಸೀಯಾ ಬರೆದ `ಡೆಲಿವರಿಂಗ್ ಹ್ಯಾಪಿನೆಸ್'

ಗಮನಾರ್ಹ ಸಂಸ್ಕೃತಿ ಮತ್ತು ಬದ್ಧತೆ ಉದ್ಯಮ ಆರಂಭಿಸುವವರು ಎದುರಿಸುವ ಬಹುದೊಡ್ಡ ಸವಾಲು. ಅವರ ಸ್ವ ಅನುಭವದ ಮೂಲಕ ಇದನ್ನೆಲ್ಲ ಟಾಮ್ ಸೀಯಾ ಹೇಳಿಕೊಂಡಿದ್ದಾರೆ.

33. ವಾಲ್ಟರ್ ಇಸ್ಸಾಕ್ಸನ್ ಅವರು ಬರೆದ `ಸ್ಟೀವ್ ಜಾಬ್ಸ್'

ಸಿಎನ್‍ಎನ್‍ನ ಮುಖ್ಯಸ್ಥರಾಗಿರುವ ವಾಲ್ಟರ್ 2 ವರ್ಷಗಳಲ್ಲಿ ಆ್ಯಪಲ್ ಸಿಇಓ ಸ್ಟೀವ್ ಜಾಬ್ಸ್ ಅವರ 40 ಸಂದರ್ಶನಗಳನ್ನು ಮಾಡಿದ್ದರು. ಅವರ ಬಗ್ಗೆ ಈ ಪುಸ್ತಕದಲ್ಲಿ ಬರೆದಿದ್ದಾರೆ.

34. ಮಾಲ್ಕಮ್ ಗ್ಲಾಡ್‍ವೆಲ್ ಬರೆದ `ಬ್ಲಿಂಕ್'

ಇದೊಂದು ಅದ್ಭುತ ಪುಸ್ತಕ. ವಿವಿಧ ಸಂದರ್ಭಗಳಲ್ಲಿ ನಮ್ಮ ಮೆದುಳು ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಮಾಲ್ಕಮ್ ವಿಸ್ತ್ರತವಾಗಿ ಬರೆದಿದ್ದಾರೆ.

35. ಡಾನ್ ಏರಿಯಲ್ ಬರೆದ `ಪ್ರೆಡಿಕ್ಟೇಬಲಿ ಇರ್ರಾಶನಲ್'

ಬದುಕಿನಲ್ಲಿ ನಾವು ತೆಗೆದುಕೊಂಡ ನಿರ್ಧಾರಗಳನ್ನು ತಾರ್ಕಿಕವಾಗಿ ಸಮರ್ಥಿಸಿಕೊಳ್ಳುವುದು ಅವಶ್ಯಕವೆಂದು ನಾವು ಭಾವಿಸುತ್ತೇವೆ. ಮಹತ್ವದ ತೀರ್ಮಾನ ಕೈಗೊಳ್ಳುವಿಕೆ ಬಗ್ಗೆ ಈ ಪುಸ್ತಕದಲ್ಲಿ ಬರೆಯಲಾಗಿದೆ.

36. ರವಿ ವೆಂಕಟೇಶನ್ ಅವರ `ಕಾಂಕ್ವರಿಂಗ್ ಚೋಸ್'

ಉದ್ಯಮಿಗಳು ವಿಭಿನ್ನ ಹಾಗೂ ವಿಶಿಷ್ಟ ಸವಾಲುಗಳನ್ನು ಎದುರಿಸುವುದು ಹೇಗೆ ಎಂಬ ಬಗ್ಗೆ ರವಿ ಬರೆದಿದ್ದಾರೆ.

37. ಪೋರ್ಟರ್ ಎರಿಸ್ಮನ್ ಅವರ `ಅಲಿಬಾಬಾಸ್ ವರ್ಲ್ಡ್​​'

ಕಾಲೇಜು ಅರ್ಹತಾ ಪರೀಕ್ಷೆಯಲ್ಲಿ ಫೇಲಾಗಿದ್ರೂ ಇ ಕಾಮರ್ಸ್ ಉದ್ಯಮದಲ್ಲಿ ಯಶಸ್ವಿಯಾದ ವಿನಮ್ರ ಶಾಲಾ ಶಿಕ್ಷಕರೊಬ್ಬರ ಬಗ್ಗೆ ಈ ಪುಸ್ತಕದಲ್ಲಿ ಹೇಳಲಾಗಿದೆ.

38. ಚಿಪ್ ಹೀತ್ ಹಾಗೂ ಡಾನ್ ಹೀತ್ ಬರೆದ `ಮೇಡ್ ಟು ಸ್ಟಿಕ್ : ವೈ ಸಮ್ ಐಡಿಯಾಸ್ ಸರ್ವೈವ್ & ಅದರ್ಸ್ ಡೈ'

ಕೆಲ ಐಡಿಯಾಗಳು ವರ್ಕೌಟ್ ಆಗುತ್ತವೆ ಇನ್ನು ಕೆಲವು ವಿಫಲವಾಗುತ್ತವೆ. ಅವು ವಿಫಲವಾಗದಂತೆ ಮಾಡುವುದು ಹೇಗೆ ಅನ್ನೋದನ್ನ ಈ ಪುಸ್ತಕದಲ್ಲಿ ತಿಳಿಸಲಾಗಿದೆ.

39. ಕ್ರಿಸ್ ಆ್ಯಂಡರ್ಸನ್ ಬರೆದ ದಿ ಲಾಂಗ್ ಟೇಲ್ : ವೈ ದಿ ಫ್ಯೂಚರ್ ಆಫ್ ಬ್ಯುಸಿನೆಸ್ ಈಸ್ ಸೆಲ್ಲಿಂಗ್ ಲೆಸ್ ಆಫ್ ಮೋರ್'

image


ಕೆಲವೊಮ್ಮೆ ನಾವು ಮಿಸ್‍ಮಾಡಿಕೊಂಡದ್ದೇ ಹಿಟ್ ಆಗುವ ಸಾಧ್ಯತೆ ಯಾಕಿರುತ್ತೆ ಅನ್ನೋದನ್ನು ಕ್ರಿಸ್ ಹೇಳಿದ್ದಾರೆ.

40. ಸತ್ ತ್ಸು ಅವರು ಬರೆದ `ದಿ ಆರ್ಟ್ ಆಫ್ ವಾರ್'

ಇದು ಪ್ರಾಚೀನ ಚೀನಾದ ಯುದ್ಧ ತಂತ್ರದ ಕುರಿತಾದದ್ದು. ಇದರಲ್ಲೇ ಉದ್ಯಮದ ಜನಪ್ರಿಯ ನೀತಿ ಅಡಗಿದೆ.

41. ಪಾಕೋ ಅಂಡರ್‍ಹಿಲ್ ಅವರು ಬರೆದ `ವೈ ವಿ ಬೈ'

ಸಧ್ಯ ಪ್ರಚಲಿತದಲ್ಲಿರುವ ಆನ್‍ಲೈನ್ ಮಾರಾಟದ ಬಗ್ಗೆ ಪಾಕೋ ಈ ಪುಸ್ತಕದಲ್ಲಿ ವಿವರಣೆ ನೀಡಿದ್ದಾರೆ.

42. ಎಲಿಯಾಹು ಎಂ.ಗೋಲ್ಡ್​​ರಟ್ ಹಾಗೂ ಜೆಫ್ ಕಾಕ್ಸ್ ಬರೆದ `ದಿ ಗೋಲ್'

ಇದೊಂದು ಥ್ರಿಲ್ಲರ್ ಪುಸ್ತಕ. ತೋಟವೊಂದರ ಮ್ಯಾನೇಜರ್ ಆಗಿದ್ದ ಅಲೆಕ್ಸ್ ರೋಗೋ ಅವರ ಕುರಿತಾಗಿದೆ.

43. ಎಡ್ವರ್ಡ್ ಡಿ ಬೋನೋ ಅವರ `ಸಿಕ್ಸ್ ಥಿಂಕಿಂಗ್ ಹ್ಯಾಟ್ಸ್'

ಸೃಜನಾತ್ಮಕ ಯೋಚನೆ ಮತ್ತು ಅದನ್ನು ಕಾರ್ಯರೂಪಕ್ಕೆ ತರುವುದರ ಬಗ್ಗೆ ಈ ಪುಸ್ತಕದಲ್ಲಿ ವಿವರಿಸಲಾಗಿದೆ.

44. ಸೇಥ್ ಗೊಡಿನ್ ಅವರ `ಪರ್ಮಿಷನ್ ಮಾರ್ಕೆಟಿಂಗ್'

ಗ್ರಾಹಕರ ಗಮನ ಸೆಳೆಯಲು ಅವರ ಅನುಮತಿ ಬೇಕು ಎನ್ನುವ ತತ್ವವನ್ನು ವಿಸ್ತ್ರತವಾಗಿ ಈ ಪುಸ್ತಕದಲ್ಲಿ ಗೊಡಿನ್ ಬರೆದಿದ್ದಾರೆ.

45. ಬ್ರಾಡ್ ಫೆಲ್ಡ್ ಮತ್ತು ಜೇಸನ್ ಮೆಂಡೆಲ್ಸನ್ ಬರೆದ `ವೆಂಚರ್ ಡೀಲ್ಸ್'

ಈ ಪುಸ್ತಕದಲ್ಲಿ ಟರ್ಮ್ ಶೀಟ್ ಹಾಗೂ ಬಂಡವಾಳ ಸಂಗ್ರಹದ ಬಗ್ಗೆ ಟಿಪ್ಸ್ ಕೊಡಲಾಗಿದೆ.

46. ಡೇನಿಯಲ್ ಕಾಹ್ನೆಮನ್ ಅವರ `ಥಿಂಕಿಂಗ್ ಫಾಸ್ಟ್ & ಸ್ಲೋ'

ಅರ್ಥಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ ವಿಜೇತ ಕಹ್ನೆಮನ್ ಅವರ ಬಗ್ಗೆ ಈ ಪುಸ್ತಕದಲ್ಲಿ ಬರೆಯಲಾಗಿದೆ.

47. ರಿಚರ್ಡ್ ಕೋಚ್ ಅವರ `ದಿ 80/20 ಪ್ರಿನ್ಸಿಪಲ್'

ಕಡಿಮೆ ಬಂಡವಾಳದ ಮೂಲಕ ಅತ್ಯಧಿಕ ಯಶಸ್ಸನ್ನು ಗಳಿಸುವುದು ಹೇಗೆ ಎಂಬುದನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ.

48. ಡೊನಾಲ್ಡ್ ನಾರ್ಮನ್ ಅವರ `ದಿ ಡಿಸೈನ್ ಆಫ್ ಎವರಿಡೇ ಥಿಂಗ್ಸ್'

ಗ್ರಾಹಕರಿಗೆ ಸಂಪರ್ಕ ಸಾಧನವಾಗಿರುವ ವಿನ್ಯಾಸದ ಬಗ್ಗೆ ಈ ಪುಸ್ತಕದಲ್ಲಿ ನಾರ್ಮನ್ ಬರೆದಿದ್ದಾರೆ.

49. ಜೋಯಲ್ ಡಾಮಿಗ್ವೆಂಜ್ ಮತ್ತು ವಿಕ್ಕಿ ರಾಬಿನ್ ಅವರು ಬರೆದ `ಯುವರ್ ಮನಿ ಆರ್ ಯುವರ್ ಲೈಫ್'

ಸ್ವಚ್ಛ ಆರ್ಥಿಕ ಜೀವನಕ್ಕೆ ಭಾವನಾತ್ಮಕ ಮತ್ತು ಮಾನಸಿಕ ಬದ್ಧತೆ ಬಗ್ಗೆ ಈ ಪುಸ್ತಕ ತಿಳಿಸಿ ಹೇಳುತ್ತದೆ.

50. ಜೋಶ್ ಕೌಫ್‍ಮ್ಯಾನ್ ಬರೆದ `ದಿ ಪರ್ಸನಲ್ ಎಂಬಿಎ - ಮಾಸ್ಟರ್ ದಿ ಆರ್ಟ್ ಆಫ್ ಬ್ಯುಸಿನೆಸ್'

ಯಶಸ್ವಿ ಉದ್ಯಮಕ್ಕೆ ಬೇಕಾದ ಸೂತ್ರಗಳನ್ನು ಈ ಪುಸ್ತಕದಲ್ಲಿ ಕೊಡಲಾಗಿದೆ.

    Share on
    close