"ಹಿಮಾಲಯನ್​ ಸಾಲ್ಟ್​" ಸಖತ್​ ಡಿಮ್ಯಾಂಡ್​-  ಸಿಲಿಕಾನ್​ ಸಿಟಿಯಲ್ಲಿ ಸದ್ದು ಮಾಡಿದ ಸ್ಪೆಷಲ್​ ಉಪ್ಪು 

ಟೀಮ್​ ವೈ.ಎಸ್​. ಕನ್ನಡ

0

ಮನುಷ್ಯ ಅಲಂಕಾರ ಪ್ರಿಯ. ಪರಿಸ್ಥಿತಿ ಹೇಗಿದ್ರೂ ಪರ್ವಾಗಿಲ್ಲ, ನೋಡುವವರ ಕಣ್ಣಿಗೆ ಚೆನ್ನಾಗಿ ಕಾಣಿಸಬೇಕು ಅನ್ನೋ ಆಸೆ ಇದ್ದೇ ಇರುತ್ತದೆ. ಇದಕ್ಕಾಗಿ ಆತ ಏನು ಬೇಕಾದ್ರೂ ಮಾಡಬಲ್ಲ. ಕೈಯಲ್ಲಿ ಸ್ವಲ್ಪ ದುಡ್ಡಿದ್ರೆ ಮುಗಿದೇ ಹೋಯಿತು, ಯಾವ್ಯಾವ ಊರುಗಳಲ್ಲಿ ಏನೇನು ಸಿಗುತ್ತೆ ಅನ್ನುವುದರ ಬಗ್ಗೆ ಸರ್ಚ್​ ನಡೆಯುತ್ತಾ ಇರುತ್ತೆ. ಆದ್ರೆ ಇತ್ತಿಚೆಗೆ ಬೆಂಗಳೂರಿನಲ್ಲಿ ಫೇಮಸ್​ ಆಗಿರುವುದು "ಪಾಕ್​ ಸ್ಟೋನ್​"..! 

ಬೆಂಗಳೂರಿನಲ್ಲಿಗ ಪಾಕಿಸ್ತಾನದ ಕಲ್ಲಿಗೆ ಭರ್ಜರಿ ಬೇಡಿಕೆ ಬಂದಿದೆ. ಮಾರ್ಬಲ್ ಅಂಗಡಿಗಳಲ್ಲಿ ಈ ಕಲ್ಲು ಲಭ್ಯವಿದ್ದು ಸದ್ಯ ಗ್ರಾಹಕರನ್ನು ಈ ಪಾಕಿಸ್ತಾನದ ಕಲ್ಲು ಸೆಳೆಯುತ್ತಿದೆ. ಚಿತ್ತಾಕರ್ಷಕವಾಗಿ ಕಾಣಿಸುವ ಈ ಕಲ್ಲು ಮನೆಗಳಲ್ಲಿ ಅಲಂಕಾರಿಕ ವಸ್ತುವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಈ ಕಲ್ಲು ಮಾರಾಟ ನಡೆಯುತ್ತಿದೆ.

ಇದನ್ನು ಓದಿ: "ಮಿಸ್ಟರ್‍ ಏಷ್ಯಾ" ಈ ಬೆಂಗಳೂರು ಬಲಾಢ್ಯ..!

ಬೇರೆ ಕಲ್ಲಿಗಿಂತ ಇದು ತುಂಬಾ ವಿಭಿನ್ನವಾಗಿದೆ. ಮುಸ್ಸಂಜೆ ವೇಳೆ ನೀಲಿ ಆಕಾಶದಲ್ಲಿ ಸೂರ್ಯನಂತೆ ಕಂಗೊಳಿಸುವ ಇದು ಮನೆಗಳಲ್ಲಿ ಇಡುವ ಶೋ ಪೀಸ್. ಅಂದಹಾಗೆ ಇದು ಎಲ್ಲೆಂದರಲ್ಲಿ ಸಿಗೋದಿಲ್ಲ. ಇದು ಸಿಗೋದು ಪಾಕಿಸ್ತಾನ ಪಂಜಾಬ್ ಪ್ರದೇಶದಲ್ಲಿ ಮಾತ್ರ. ಇದಕ್ಕೆ ಹಿಮಾಲಯನ್ ಸಾಲ್ಟ್ ಎಂದು ಕರೆಯುತ್ತಾರೆ.

ಹಿಮಾಲಯನ್ ಸಾಲ್ಟ್ ಅಯ್ಯೋ ಇದೇನು ಅಂದುಕೊಳ್ಳಬೇಡಿ. ಅಂದಹಾಗೆ ಇದು ಕಲ್ಲುಪ್ಪು. ಪಂಜಾಬ್ ಪ್ರದೇಶದ ಗಣಿ ಭಾಗದಲ್ಲಿ ಮಾತ್ರ ಈ ಹಿಮಾಲಯನ್ ಸಾಲ್ಟ್ ಸಿಗುತ್ತದೆ. ಗಾಢ ಕೆಂಪು ಗುಲಾಬಿ ಮತ್ತು ಅರೆ ಬಿಳಿ ಬಣ್ಣದ ರೂಪದಲ್ಲಿ ಸಿಗುವ ಈ ಹಿಮಾಲಯನ್ ಸಾಲ್ಟ'ನ್ನು ಭೂಮಿ ಮೇಲೆ ಸಿಗುವ ಅತ್ಯಂತ ಶುದ್ದ ಉಪ್ಪೆಂದು ನಂಬಲಾಗಿದೆ. ಕಲಾವಿದ ಪ್ರಕಾಶ್ ಎಂಬುವವರು ಈ ಹಿಮಾಲಯನ್ ಸಾಲ್ಟ್ ನ್ನು ಪಾಕಿಸ್ತಾನದ ಪಂಜಾಬಿನಿಂದ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡ್ತಿದ್ದಾರೆ. ಸುಮಾರು 4 ರಿಂದ 10 ಕೆಜಿ ಯ ವರೆಗೂ ಕಲ್ಲಿನ ರೂಪದಲ್ಲಿ ಸಿಗುವ ಈ ಸಾಲ್ಟ್​ನ್ನು  ಪ್ರಕಾಶ್, ಗೋಲಾಕಾರ, ರೋಸ್ ಹಾಗೂ ಪಿರಾಮಿಡ್ ಶೇಪ್ ಗಳಾಗಿ ಕೆತ್ತುತ್ತಾರೆ.

ಈ ಕಲ್ಲು ವಿವಿಧ ಆಕಾರಗಳಲ್ಲಿ ಸಿದ್ಧವಾಗುತ್ತದೆ. ಈ ಸಾಲ್ಟ್​ಗೆ  ಸಣ್ಣ ಬಲ್ಬ್ ಅನ್ನು ಫಿಕ್ಸ್ ಮಾಡಿ ಸ್ವಿಚ್ ಆನ್ ಮಾಡಿದ್ರೆ ವಿವಿಧ ಬಣ್ಣಗಳಲ್ಲಿ ಕಂಗೊಳಿಸುತ್ತದೆ. ವಿಶೇಷವೆಂದರೆ ಈ ಬಣ್ಣ ಮುಸ್ಸಂಜೆಯ ಕೆಂಪಿನಂತೆ ಕಂಗೋಳಿಸುತ್ತದೆ. ಬಲ್ಬ್ ಬಣ್ಣಕ್ಕಿಂತ ಇದು ಚಿತ್ತಾಕರ್ಷಕವಾಗಿ ಕಾಣಿಸುತ್ತದೆ.

ಈ ಹಿಮಾಲಯನ್ ಸಾಲ್ಟ್ ಅಡುಗೆಗೆ ಬಳಸುವುದರಿಂದ ರಕ್ತದೊತ್ತಡ, ಮಧುಮೇಹ ತಡೆಗಟ್ಟಲಿದೆಯಂತೆ. ಜೊತೆಗೆ ಮನೆಯ ಒಳಾಂಗಣದಲ್ಲಿ ಅಥವಾ ಬೆಡ್ ರೂಂನಲ್ಲಿ ಇಡುವುದರಿಂದ ಚೆನ್ನಾಗಿ ನಿದ್ದೆ ಮಾಡಬಹುದಂತೆ. ಇಷ್ಟೆ ಅಲ್ದೇ ಅಸ್ತಮಾ, ಅಲರ್ಜಿ, ಖಿನ್ನತೆ, ಚರ್ಮದ ಕ್ಯಾನ್ಸರ್ ನಂತಹ ಸಮಸ್ಯೆಗಳಿಂದಲೂ ಕೂಡ ದೂರವಿರಬಹುದು. ಹಾಗಾಗಿ ಈ ವಿಶೇಷ ಕಲ್ಲು ಬೆಂಗಳೂರಿನಲ್ಲಿಗ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಒಟ್ಟಿನಲ್ಲಿ ಪಾಕ್​ ಸ್ಟೋನ್​ಗೆ ಸಿಲಿಕಾನ್​ ಸಿಟಿಯಲ್ಲಿ ಎಲ್ಲಿಲ್ಲದ ಬೇಡಿಕೆ.

ಇದನ್ನು ಓದಿ:

1. ಸ್ಯಾಂಡಲ್​ವುಡ್​ನಲ್ಲಿ ಟೆಕ್ಕಿಗಳ ಹವಾ- ಎಂಜಿನಿರಿಂಗ್​ ಕಲಿತ್ರೂ ಕಲೆಯೇ ಜೀವ..!

2. ಮುಖಬೆಲೆ ಎರಡೇ ಸಾವಿರ ರೂಪಾಯಿ- ಆದ್ರೆ ಫ್ಯಾನ್ಸಿ ನಂಬರ್​ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್​..!

3. ಹಿಂದೂ ಮಹಾಸಾಗರದಲ್ಲಿರೋ ಪ್ಲಾಸ್ಟಿಕ್ ತ್ಯಾಜ್ಯದಿಂದ ತಯಾರಾಗಿದೆ 'ಅಡಿಡಾಸ್' ಶೂ..

Related Stories

Stories by YourStory Kannada