ಕ್ಯಾನ್ಸರ್ ರೋಗದ ಬಗ್ಗೆ ರೋಗದಿಂದ ಬಳಲಿದವನಿಂದ ಜಾಗೃತಿ

ಉಷಾ ಹರೀಶ್​

ಕ್ಯಾನ್ಸರ್ ರೋಗದ ಬಗ್ಗೆ ರೋಗದಿಂದ ಬಳಲಿದವನಿಂದ ಜಾಗೃತಿ

Sunday April 17, 2016,

2 min Read

ಜೀವನೆದಲ್ಲಿ ಸಾಕಷ್ಟು ನೋವು ಅವಮಾನ ದುಃಖ ಎಲ್ಲವೂ ಬರುತ್ತವೆ ಅವುಗಳಿಗೆ ಹೆದರದೆ ಅಂಜದೆ ಅವುಗಳನ್ನೇ ಬಂಡವಾಳ ಮಾಡಿಕೊಂಡು ಅಂತಹ ಕಷ್ಟಗಳ ವಿರುದ್ಧ ಜಯ ಸಾಧಿಸಬೇಕು, ಅವರೇ ನಿಜವಾದ ಸಾಧಕರು. ಅಂತಹ ಸಾಧಕರ ಸಾಲಿಗೆ ಸೇರಿದವರು ಇದುವರೆಗೂ ಬಹಳಷ್ಟು ಮಂದಿ ಇದ್ದಾರೆ. ಅವರ ಸಾಲಿಗೆ ಹೊಸ ಸೇರ್ಪಡೆ ಎಂದರೆ ಸುಶಾಂತ್ ಕೊಡೆಲಾ ಎಂಬ ಯುವಕ.

image


ಹೌದು ಹೈದರಾಬಾದ್ ಮೂಲದ ಈ ಯುವಕ ಜನರಲ್ಲಿ ಕ್ಯಾನ್ಸರ್ ರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ವಿಶೇಷ ಎಂದರೆ ಈ ಸುಶಾಂತ್ ಒಂದು ಕಾಲದ ಕ್ಯಾನ್ಸರ್ ರೋಗಿ ಎಂಬುದು. ತನ್ನಲ್ಲಿರುವ ಕಾಯಿಲೆಯನ್ನು ಸಂಪೂರ್ಣ ಗುಣಪಡಿಸಿಕೊಂಡು ನಂತರ ಕ್ಯಾನ್ಸರ್ ಎಂಬ ಮಹಾಮಾರಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅನ್ ಕ್ಯಾನ್ಸರ್ ಎಂಬ ಸಂಸ್ಥೆಯನ್ನು ಆರಂಭಿಸಿದ್ದಾರೆ.

ಇದನ್ನು ಓದಿ: ಮಹಿಳಾ ಉದ್ಯಮಿಗಳಿಗಾಗಿ ``ಸ್ಟ್ಯಾಂಡ್‍ಅಪ್ ಇಂಡಿಯಾ''

ಸುಶಾಂತ್ ಅವರ ಬಾಲ್ಯ ನಮ್ಮ ನಿಮ್ಮಂತೆಯೆ ಬಹಳ ಚೆನ್ನಾಗಿತ್ತು. ಆದರೆ ಅವರು ಕಾಲೇಜು ಮೆಟ್ಟಿಲು ಹತ್ತಿತ ತಕ್ಷಣ ಅವರಿಗೆ ದಿನೇ ದಿನೇ ಒಂದೊಂದೇ ಸಮಸ್ಯೆಗಳು ಬರಲಾರಂಭಿಸಿತು ವೈದ್ಯರ ಬಳಿ ಚಿಕಿತ್ಸೆಗೆಂದು ಹೋದಾಗ ಅವರಿಗೆ ತಿಳಿಯಿತು ಅವರಿಗೆ ಮಾರಕ ಕ್ಯಾನ್ಸರ್ ಬಂದಿದೆ ಎಂದು. ತಕ್ಷಣ ಕಾರ್ಯಪ್ರವೃತ್ತರಾದ ಸುಶಾಂತ್ ಕುಟುಂಬ ಅವರನ್ನು ಸರಿಯಾದ ಸಮಯಕ್ಕೆ ಸಕಾಲದಲ್ಲಿ ವೈದ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದರು. ಸಕಾಲದಲ್ಲಿ ಚಿಕಿತ್ಸೆ ದೊರೆತ ಪರಿಣಾಮ ಸುಶಾಂತ್ ಸಾವನ್ನು ಗೆದ್ದು ಬಂದರು.

image


ತಾನು ಆಸ್ಪತ್ರೆಯಿಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಮಯದಲ್ಲಿ ಅನುಭವಿಸಿದ ಯಾತನೆಯನ್ನು ಗಮನದಲ್ಲಿಟ್ಟುಕೊಂಡ ಸುಶಾಂತ್ ರೋಗದಿಂದ ಗುಣಮುಖರಾದ ನಂತರ ಅದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕೆಂದು ತೀರ್ಮಾನಿಸಿದರು. ಆಗ ಪ್ರಾರಂಭವಾಗಿದ್ದೇ ಅನ್ ಕ್ಯಾನ್ಸರ್ ಎಂಬ ಲಾಭರಹಿತ ಸಂಸ್ಥೆ.

ನೂತನ ಚಿಕಿತ್ಸೆಗಳ ಮಾಹಿತಿ

ಸುಶಾಂತ್ ತಮ್ಮ ಅನ್ ಕ್ಯಾನ್ಸರ್ ಸಂಸ್ಥೆ ಮೂಲಕ ಕ್ಯಾನ್ಸರ್ ರೋಗಿಗಳಿಗೆ ನೈತಿಕ ಸ್ಥೈರ್ಯ ತುಂಬುವುದರ ಜೊತೆಗೆ ನೂತನ ಚಿಕಿತ್ಸಾ ವಿಧಾನಗಳ ಬಗ್ಗೆ ಮಾಹಿತಿ ಒದಗಿಸುತ್ತಿದ್ದಾರೆ.

ಮಾಹಿತಿ ಪಡೆಯುವುದು ಹೇಗೆ..?

ಈ ಅನ್ ಕ್ಯಾನ್ಸರ್ ಸೇವಾಸಂಸ್ಥೆಗೆ ಮೊದಲು ನೊಂದಣಿಯಾಗಬೇಕು. ಆ ಸಂಸ್ಥೆಯ ವೆಬ್ ಪೋರ್ಟಲ್​ಗೆ ರೋಗಿಗಳು ಅಥವಾ ಅವರ ಪೋಷಕರು ಸಂಬಂಧಿಗಳು, ಸ್ನೇಹಿತರು ಲಾಗ್ ಇನ್ ಆಗಿ ಹೆಸರು ನೋಂದಾಯಿಸಿಕೊಳ್ಳಬೇಕು. ನಂತರ ರೋಗಿಯ ವಿವರಗಳನ್ನು ದಾಖಲಿಸಬೇಕು. ಆ ರೋಗದ ಪರಿಸ್ಥಿತಿ ಮತ್ತು ಸ್ಟೇಜ್​ಗಳನ್ನು ನೋಡಿಕೊಂಡು ಅವರು ಅನ್ ಕ್ಯಾನ್ಸರ್ ಸಂಸ್ಥೆ ಯಾವ ರೀತಿ ಚಿಕಿತ್ಸೆ ನೀಡಬೇಕು, ಔಷಧೋಪಚಾರಗಳ ಮಾಹಿತಿ, ಹಣಕಾಸಿನ ತೊಂದರೆ ಇರುವವರಿಗೆ ಆರ್ಥಿಕ ನೆರವು ಎಲ್ಲಿ ಸಿಗುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.

image


ಮೊದಲು ನೈತಿಕ ಸ್ಥೈರ್ಯ

ಕ್ಯಾನ್ಸರ್​ನಂತಹ ಮಹಾಮಾರಿ ಬಂದಾಗ ರೋಗಿಗೆ ಮೊದಲು ಬೇಕಾಗಿರುವುದು ನೈತಿಕ ಸ್ಥೈರ್ಯ. ಅದನ್ನು ಅನ್ ಕ್ಯಾನ್ಸರ್ ಮೊಟ್ಟಮೊದಲಿಗೆ ಮಾಡುತ್ತದೆ. ನಂತರದ ಕೆಲಸ ಚಿಕಿತ್ಸೆ. ಸಾಮಾನ್ಯವಾಗಿ ಕ್ಯಾನ್ಸರ್ ಸಾವು ತರುವಂತಹ ರೋಗವಲ್ಲ ಸೂಕ್ತ ಸಮಯಕ್ಕೆ ಚಿಕಿತ್ಸೆ ಆರೈಕೆ ದೊರೆತರೆ ಅದನ್ನು ಗುಣಪಡಿಸಬಹುದು.

ಕ್ಯಾನ್ಸರ್ ಚಿಕಿತ್ಸೆ ಆರಂಭದಿಂದ ಹಿಡಿದು ಅದು ಪೂರ್ಣಗೊಳ್ಳುವವರೆಗೂ ತಾವು ಅನುಭವಿಸಿದ ಮಾನಸಿಕ ತಳಮಳ, ದೈಹಿಕ ಭಾದೆ, ಹಣಕಾಸಿನ ಅಡಚಣೆಗಳು ಸಾಕಷ್ಟು ಇದ್ದವು ಈ ಎಲ್ಲ ಕಷ್ಟಗಳು ಇತರೆ ಯಾವ ರೋಗಿಗಳನ್ನು ಕಾಡಬಾರದರು ನಾನು ಅನುಭವಿಸಿದ ನೋವು, ಸಂಕಷ್ಟಗಳನ್ನು ಯಾವ ರೋಗಿಯೂ ಅನುಭವಿಸಬಾರದು ಎಂಬ ಉದ್ದೇಶದಿಂದ ಅನ್ ಕ್ಯಾನ್ಸರ್ ಸಂಸ್ಥೆ ಸ್ಥಾಪಿಸಿದ್ದಾರೆ ಸುಶಾಂತ್. ಒಟ್ಟಿನಲ್ಲಿ ಇದರಿಂದ ನಾಲ್ಕಾರು ರೋಗಿಗಳಿಗೆ ಅನುಕೂಲವಾಗಿ ಸುಶಾಂತ್ ಅವರ ಈ ಪ್ರಯತ್ನ ಸಫಲವಾಗಲಿ ಎಂಬುದೇ ನಮ್ಮ ಆಶಯ.

ಇದನ್ನು ಓದಿ:

1. ಸಿನಿಮಾ ನಿರ್ಮಾಣ ಮಾಡೋದಷ್ಟೆ ನಮ್ಮ ಕೆಲಸ ಅಲ್ಲ...

2. ಎಸ್ಕೇಪ್ ಹಂಟ್- ಡಿಟೆಕ್ಟಿವ್ ರಹಸ್ಯ ಭೇದಿಸುತ್ತಾ...

3. ಪೆಟ್ರೋಲ್ ಡೀಸೆಲ್ ಬೇಡ್ವೇ ಬೇಡ..! ನೀರಿನಿಂದಲೇ ಓಡುತ್ತೆ ಈ ಅದ್ಭುತ ಕಾರು