`ಫ್ರೊಪ್‍ಕಾರ್ನ್' ಜೊತೆ ಮಸ್ತ್ ಮಜಾ ಪ್ರಯಾಣ: ಸಂಚಾರದುದ್ದಕ್ಕೂ ಸಿಗಲಿದೆ ಫುಲ್ ಮನರಂಜನೆ

ಟೀಮ್​​ ವೈ.ಎಸ್​. ಕನ್ನಡ

`ಫ್ರೊಪ್‍ಕಾರ್ನ್' ಜೊತೆ ಮಸ್ತ್ ಮಜಾ ಪ್ರಯಾಣ: ಸಂಚಾರದುದ್ದಕ್ಕೂ ಸಿಗಲಿದೆ ಫುಲ್ ಮನರಂಜನೆ

Friday December 11, 2015,

3 min Read

ಮುಂಬೈನಿಂದ ಬೆಂಗಳೂರುವರೆಗಿನ 18 ಗಂಟೆಗಳ ಸುದೀರ್ಘ ಬಸ್ ಪ್ರಯಾಣ. ನಿರ್ವಾಹಕರು 18 ಗಂಟೆಗಳಲ್ಲಿ ಬಸ್‍ನಲ್ಲಿರುವ ದೊಡ್ಡ ಪರದೆಯಲ್ಲಿ ಸುಮಾರು ಐದಾರು ಸಿನಿಮಾಗಳನ್ನು ಒಂದಾದ ಮೇಲೊಂದರಂತೆ ಪ್ರದರ್ಶಿಸಿದ್ರು. ಎಷ್ಟು ಜನರಿಗೆ ಆ ಸಿನಿಮಾ ಇಷ್ಟವಾಗಿತ್ತೋ? ಅದೆಷ್ಟು ಮಂದಿಗೆ ಕಿರಿಕಿರಿ ಹುಟ್ಟಿಸಿತ್ತೋ ಗೊತ್ತಿಲ್ಲ. ಆದ್ರೆ ನಿರ್ವಾಹಕರ ಬಳಿ ಬೇರೆ ಆಯ್ಕೆಗಳೇ ಇರಲಿಲ್ಲ. ಇದರ ಬದಲು ಅಂತರಾಷ್ಟ್ರೀಯ ವಿಮಾನಗಳಲ್ಲಿರುವಂತಹ ಮನರಂಜನಾ ವ್ಯವಸ್ಥೆ ಬಸ್‍ನಲ್ಲೂ ಇದ್ರೆ ಚೆನ್ನಾಗಿರುತ್ತೆ ಅಂತಾ ಬಹುತೇಕ ಪ್ರಯಾಣಿಕರು ಅಂದುಕೊಂಡಿರ್ತಾರೆ. ಕಾರ್ತಿಕ್ ಪೊದ್ದರ್ ಹಾಗೂ ಕಾರ್ತಿಕ್ ಬನ್ಸಲ್ ಈಗ ಅದೇ ಪ್ರಯತ್ನದಲ್ಲಿದ್ದಾರೆ. ಇವರಿಬ್ರೂ ಪರಸ್ಪರ 10 ವರ್ಷಗಳಿಂದ ಪರಿಚಿತರು. ಬರೀ ಹೆಸರಿನಲ್ಲಷ್ಟೇ ಅಲ್ಲ ಬೇರೆ ಎಷ್ಟೋ ವಿಚಾರಗಳಲ್ಲೂ ಸಮಾನ ಮನಸ್ಕರು. ಒಂದೇ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಇವರು, ಒಟ್ಟಿಗೆ ಮೈಕ್ರೋಸಾಫ್ಟ್‍ನಲ್ಲಿ ಕೆಲಸ ಕೂಡ ಮಾಡಿದ್ದಾರೆ. ಕಳೆದ ಸಪ್ಟೆಂಬರ್‍ನಲ್ಲಿ ಇಬ್ಬರೂ ಜೊತೆಯಾಗಿ `ಫ್ರೊಪ್‍ಕಾರ್ನ್' ಹೆಸರಿನ ಸ್ವಂತ ಉದ್ಯಮವನ್ನು ಶುರು ಮಾಡಿದ್ದಾರೆ. `ಫ್ರೊಪ್‍ಕಾರ್ನ್' ಸಂಸ್ಥೆಯ ಸಿಇಓ ಹಾಗೂ ಸಂಸ್ಥಾಪಕ ಕಾರ್ತಿಕ್ ಪೊದ್ದರ್, `ಕೋಮ್ಲಿ ಮೀಡಿಯಾ' ಮತ್ತು `ಮೈಕ್ರೋಸಾಫ್ಟ್'ನಲ್ಲಿ ಉತ್ಪನ್ನ ನಿರ್ವಹಣೆ ಮತ್ತು ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಂಸ್ಥಾಪಕ ಹಾಗೂ ಸಿಟಿಓ ಕಾರ್ತಿಕ್ ಬನ್ಸಲ್, ಈ ಮೊದಲು `ಶೈನ್‍ಡಿಗ್' ಮತ್ತು `ಮೈಕ್ರೋಸಾಫ್ಟ್'ನಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

image


ಸಂಸ್ಥೆಯ ಸ್ಥೂಲ ಪರಿಚಯ...

`ಬನ್ಯನ್‍ಪಾಡ್ ಟೆಕ್ನಾಲಜಿಸ್' ಬೇಡಿಕೆಯ ಮೇಲೆ ಮನರಂಜನೆಯನ್ನು ಒದಗಿಸುವ ಮಾಧ್ಯಮ ತಂತ್ರಜ್ಞಾನ ಸಂಸ್ಥೆ. `ಫ್ರೊಪ್‍ಕಾರ್ನ್' ವೈಫೈ ಮೂಲಕ ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಿಷಯಗಳನ್ನು ತಲುಪಿಸುತ್ತಿದೆ.

ಉತ್ಪನ್ನ/ಸೇವೆಯ ವಿವರ...

ಮನರಂಜನಾ ವಲಯಗಳಲ್ಲಿ `ಫ್ರೊಪ್‍ಕಾರ್ನ್' ವೈಫೈ ಅಳವಡಿಸುವ ಮೂಲಕ ಕಾರ್ಯನಿರ್ವಹಿಸುತ್ತಿದೆ. ಬಳಕೆದಾರರು ಸಿನಿಮಾ, ವಿಡಿಯೋ, ಹಾಡುಗಳು, ಇ-ಬುಕ್ಸ್, ಎಲ್ಲವನ್ನೂ ತಮ್ಮ ವೈಫೈ ಮೂಲಕ ಡೌನ್‍ಲೋಡ್ ಮಾಡಿಕೊಳ್ಳಬಹುದು.

ಆದಾಯ ಮಾದರಿ...

ಎ) ಬಳಕೆದಾರರು ಡೌನ್‍ಲೋಡ್‍ಗಳಿಗಾಗಿ `ಫ್ರೊಪ್‍ಕಾರ್ನ್'ನ ಚಂದಾದಾರರಾಗಬಹುದು.

ಬಿ) ಉದ್ಯಮ ಪಾಲುದಾರರಾದ ಕಾರ್ತಿಕ್ ಪೊದ್ದರ್ ಹಾಗೂ ಕಾರ್ತಿಕ್ ಬನ್ಸಲ್, ಗ್ರಾಹಕರ ಬೇಡಿಕೆ ಮೇಲೆ ಮನರಂಜನೆ ಒದಗಿಸುತ್ತಿದ್ದಾರೆ.

ಸಿ) ಶುಲ್ಕ ಸಹಿತ ಆ್ಯಪ್ ವಿತರಣೆ, ಪ್ರಾಯೋಜಿತ ವಿಷಯಗಳು ಮತ್ತು ಶ್ರೀಮಂತ ಜಾಹೀರಾತು ಮಾದರಿ ಮೂಲಕ ಹಣ ಗಳಿಸುವ ಯೋಜನೆಯನ್ನು ಸಂಸ್ಥೆ ಹಾಕಿಕೊಂಡಿದೆ.

ಸೆಳೆತ...

`ವಯೋಕಾಮ್', ಯಶ್ ರಾಜ್, ರಿಲಯನ್ಸ್, ಸನ್ ಟಿವಿ ಸೇರಿದಂತೆ ಪ್ರಖ್ಯಾತ ಸ್ಟುಡಿಯೋಗಳ ಜೊತೆ `ಫ್ರೊಪ್‍ಕಾರ್ನ್' ಹೊಂದಾಣಿಕೆ ಮಾಡಿಕೊಂಡಿದೆ. ಪ್ರಯಾಣದ ಸಂದರ್ಭದಲ್ಲಿ ವೈಫೈ ಅಳವಡಿಸುವತ್ತ `ಫ್ರೊಪ್‍ಕಾರ್ನ್' ಹೆಚ್ಚು ಗಮನಹರಿಸಿದೆ. ಈಗಾಗ್ಲೇ `ಫ್ರೊಪ್‍ಕಾರ್ನ್' ಅಪ್ಲಿಕೇಷನ್ ಜನಪ್ರಿಯವಾಗ್ತಾ ಇದ್ದು, ಈಗಾಗ್ಲೇ 500ಕ್ಕೂ ಹೆಚ್ಚು ಮಂದಿ ಅದನ್ನು ಡೌನ್‍ಲೋಡ್ ಮಾಡಿಕೊಂಡಿದ್ದಾರೆ. ಭಾರತದ ಬಹುತೇಕ ಎಲ್ಲ ನಗರಗಳಲ್ಲೂ ಈಗ ವೈಫೈ ಅನಿವಾರ್ಯ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ವಿಮಾನ ನಿಲ್ದಾಣ, ಮಾಲ್‍ಗಳು, ಹೋಟೆಲ್‍ಗಳು ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ `ಫ್ರೊಪ್‍ಕಾರ್ನ್' ವೈಫೈ ಸೌಲಭ್ಯವನ್ನು ಒದಗಿಸುತ್ತಿದೆ. ಸಂಸ್ಥಾಪಕರಾದ ಕಾರ್ತಿಕ್ ಪೊದ್ದರ್ ಹಾಗೂ ಕಾರ್ತಿಕ್ ಬನ್ಸಲ್ ಅನುಭವಿಗಳು. ವಿಮಾನ, ಹಡಗು, ವಾಹನಗಳು ಹೀಗೆ ಸಂಚಾರ ಮಾಧ್ಯಮ ಪ್ರಪಂಚದಲ್ಲಿ ಇವರಿಗೆ ದೊಡ್ಡ ಹೆಸರಿದೆ. ಗೇಮ್ ಹಾಗೂ ಅಪ್ಲಿಕೇಷನ್ ಡೆವಲಪರ್‍ಗಳಿಗೆ ಕೂಡ `ಫ್ರೊಪ್‍ಕಾರ್ನ್' ಉತ್ತಮ ವೇದಿಕೆ. ಸದ್ಯ `ಫ್ರೊಪ್‍ಕಾರ್ನ್' ಬೆಂಗಳೂರು, ಮುಂಬೈ ಮತ್ತು ಹೈದ್ರಾಬಾದ್‍ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಗ್ರಾಹಕರ ದೃಷ್ಟಿಕೋನ, ನಮ್ರತೆ ಮತ್ತು ವಿನೋದದ ಮೂಲಕ ಜನರನ್ನು ಗೆಲ್ಲುವುದೇ ನಮ್ಮ ತತ್ವ ಎನ್ನುತ್ತಾರೆ `ಫ್ರೊಪ್‍ಕಾರ್ನ್'ನ ಸಂಸ್ಥಾಪಕ ಹಾಗೂ ಸಿಇಓ, ಕಾರ್ತಿಕ್ ಪೊದ್ದರ್.

`ಫ್ರೊಪ್‍ಕಾರ್ನ್' ತಂಡ...

`ಫ್ರೊಪ್‍ಕಾರ್ನ್' 20 ಪ್ರತಿಭಾವಂತರನ್ನೊಳಗೊಂಡ ತಂಡ. ಉದ್ಯಮ ಬೆಳವಣಿಗೆ, ಕಾರ್ಯನಿರ್ವಹಣೆ, ತಾಂತ್ರಿಕ ಕೆಲಸಗಳು ಹೀಗೆ ವಿವಿಧ ವಿಭಾಗಗಳಲ್ಲಿ ಇವರು ಕೆಲಸ ಮಾಡ್ತಿದ್ದಾರೆ. ಹೃದಯದಲ್ಲಿ ಇದೊಂದು ಉತ್ಪಾದನೆ-ತಂತ್ರಜ್ಞಾನವನ್ನೊಳಗೊಂಡ ಸಂಸ್ಥೆ, ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಎಲ್ಲರೂ ಎಂಜಿನಿಯರ್‍ಗಳು, ತಾಂತ್ರಿಕ ಕೌಶಲ್ಯ ಹೊಂದಿದ್ದಾರೆ.

image


ಭವಿಷ್ಯದ ಹಾದಿ...

ಇನ್ನೂ ಹಲವು ಸ್ಥಳಗಳಲ್ಲಿ ತನ್ನ ಸೇವೆಯನ್ನು ವಿಸ್ತರಿಸಲು `ಫ್ರೊಪ್‍ಕಾರ್ನ್' ಮುಂದಾಗಿದೆ, ಜೊತೆಗೆ ಬೇರೆ ಬೇರೆ ನಗರಗಳಲ್ಲಿ ಕಚೇರಿ ತೆರೆಯುವ ಆಲೋಚನೆಯನ್ನೂ ಹೊಂದಿದೆ. ಈಗಾಗ್ಲೇ ಬಸ್‍ಗಳಲ್ಲಿ ವೈಫೈ ಸೇವೆ ಅಳವಡಿಸಲಾಗಿದ್ದು, ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ. ಗಮನಾರ್ಹ ಪ್ರಯಾಣ ಮತ್ತು ಜನರು ಸಮಯವನ್ನು ಮೌಲ್ಯಯುತವಾಗಿ ಕಳೆಯಲು `ಫ್ರೊಪ್‍ಕಾರ್ನ್'ನ ಕೊಡುಗೆ ಅಪಾರ. ಈ ಸೇವೆ ಅತ್ಯಂತ ಉತ್ತೇಜಕ ಅನ್ನೋ ಭಾವನೆಯನ್ನು ಬಳಕೆದಾರರಲ್ಲಿ ಮೂಡಿಸಲು, ಅತ್ಯಂತ ವಿಸ್ತಾರವಾದ ಮತ್ತು ಶ್ರೀಮಂತ ವಿಷಯಗಳನ್ನು ಒದಗಿಸಲು `ಫ್ರೊಪ್‍ಕಾರ್ನ್' ಯೋಜನೆ ರೂಪಿಸಿದೆ.

`ಟೆಕ್-30'ಯಲ್ಲಿನ ಅನುಭವ...

ಟೆಕ್-30 ಅನ್ನೋ ಗುರುತು ನಮಗೆ ಪ್ರಚಂಡ ವಿಶ್ವಾಸಾರ್ಹತೆಯನ್ನು ತಂದುಕೊಟ್ಟಿದೆ, ಜೊತೆಗೆ ಹೊಸ ಮಾರ್ಗವನ್ನೂ ತೋರಿಸಿದೆ ಅನ್ನೋದು ಕಾರ್ತಿಕ್ ಪೊದ್ದರ್ ಅವರ ಅಭಿಪ್ರಾಯ. ಟೆಕ್-30 ಘೋಷಣೆ ಹೊರಬಿದ್ದಾಗಿನಿಂದ್ಲೂ `ಫ್ರೊಪ್‍ಕಾರ್ನ್'ನ ಪ್ರಬಲ ಪಾಲುದಾರರು ಅತ್ಯಂತ ಆಸಕ್ತಿ ತೋರಿಸುತ್ತಿದ್ದಾರೆ. ಟೆಕ್-30 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವುದರಿಂದ ಇಡೀ ತಂಡದ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಿದೆ. ಉತ್ಪನ್ನವನ್ನು ಇನ್ನಷ್ಟು ಪ್ರಯೋಜನಕಾರಿಯಾಗಿ ಪರಿವರ್ತಿಸಬಲ್ಲೆವು ಎಂಬ ಆತ್ಮವಿಶ್ವಾಸ ಮೂಡಿದೆ ಅಂತಾ ಕಾರ್ತಿಕ್ ಖುಷಿಯಿಂದ ಹೇಳಿಕೊಂಡಿದ್ದಾರೆ.

`ಯುವರ್‍ಸ್ಟೋರಿ' ಮಾಹಿತಿ...

ಭಾರತದ ಬಹುತೇಕ ನಗರಗಳಲ್ಲಿ ಈಗ ವೈಫೈ ಮೂಲಭೂತ ಅಗತ್ಯದಂತೆ ಆಗಿಬಿಟ್ಟಿದೆ. ಏರ್‍ಪೋರ್ಟ್, ಮಾಲ್, ಹೋಟೆಲ್ ಎಲ್ಲಿ ಹೋದ್ರೂ ಜನರಿಗೆ `ಫ್ರೊಪ್‍ಕಾರ್ನ್' ಅಗತ್ಯತೆ ಕಾಡುವುದರಲ್ಲಿ ಅನುಮಾನವಿಲ್ಲ. ಗೇಮ್ ಹಾಗೂ ಆ್ಯಪ್ ಡೆವಲಪರ್‍ಗಳಿಗೆ ಕೂಡ ಈ ವೇದಿಕೆ ವರದಾನವಾಗಿ ಪರಿಣಮಿಸಿದೆ. ಅನುಭವಿಗಳೇ ಜೊತೆಯಾಗಿ ಕಟ್ಟಿರುವ ಈ ಸಂಸ್ಥೆ ಅತ್ಯಂತ ವೇಗವಾಗಿ ಯಶಸ್ಸಿನತ್ತ ಮುನ್ನಡೆಯುತ್ತಿದೆ.

ಲೇಖಕರು: ಡೋಲಾ ಸಮಂತಾ

ಅನುವಾದಕರು: ಭಾರತಿ ಭಟ್​​​​