ಲಿಮ್ಕಾ ದಾಖಲೆಯತ್ತ ನಾಯಿ..!

ಕೃತಿಕಾ

0

ಲಿಮ್ಕಾ ದಾಖಲೆ ಅಂದ್ರೆ ಸಾಕು ಸಾಧಕರು ಕಣ್ಣಮುಂದೆ ಬಂದು ನಿಲ್ಲುತ್ತಾರೆ. ಮನುಷ್ಯ ಸಾಧನೆ ಮಾಡೋದು ಅಪರೂಪದ ವಿಷಯವೇನಲ್ಲ. ಆದ್ರೆ ಇಲ್ಲೊಂದು ನಾಯಿ ತನ್ನ ಸಾಧನೆಯ ಮೂಲಕ ಲಿಮ್ಕಾ ದಾಖಲೆಯ ಸನಿಹಕ್ಕೆ ಬಂದು ನಿಂತಿದೆ.

ಮನುಷ್ಯನ ಬುದ್ಧಿಗಿಂತ ನಾಯಿ ಬುದ್ಧಿ ಚುರುಕು ಅನ್ನೋ ಮಾತಿದೆ. ಮನುಷ್ಯನಿಗೆ ಒಂದು ಬಾರಿ ಹೇಳಿದರೇ ಆತ ಕೇಳುವುದೇ ಇಲ್ಲ. ಆದ್ರೆ ನಾಯಿಗಳು ಹಾಗಲ್ಲ, ಈ ಮಾತನ್ನು ಬೆಂಗಳೂರಿನ ಒಂದು ನಾಯಿ ಅಕ್ಷರಶಃ ಸಾಭೀತು ಮಾಡಿದೆ. ಜಯನಗರದ ಅಭಿಷೇಕ್ ಗೌಡ ಅವರ ಲ್ಯಾಬ್ರಡಾರ್ ನಾಯಿ 'ಸ್ಕೂಫಿ' ಈಗ ಸಾಧನೆಯ ಉತ್ತುಂಗದಲ್ಲಿದ್ದು ಲಿಮ್ಕಾ ದಾಖಲೆಯ ಸನಿಹಕ್ಕೆ ಬಂದು ನಿಂತಿದೆ. ಈ ಸ್ಕೂಫಿ ತನ್ನ ಹಣೆಯ ಮೇಲೆ 40 ಬಿಸ್ಕತ್ತುಗಳನ್ನು ಇರಿಸಿಕೊಂಡು ಆ ಮೂಲಕ ಸಾಧನೆ ಮಾಡಲು ಹೊರಟಿದೆ.

ಮೊದಲು ಒರಟಾಗಿ ಕಂಡಕಂಡವರನ್ನೆಲ್ಲಾ ಕಚ್ಚಲು ಹೋಗುತ್ತಿದ್ದ ಸ್ಕೂಫಿಯನ್ನು ‘ಕೆ9 ಗುರುಕುಲ’ ಶ್ವಾನ ತರಬೇತಿ ಕೇಂದ್ರಕ್ಕೆ ಸೇರಿಸಿದರು. ಅಲ್ಲಿ ಉತ್ತಮ ನಡವಳಿಕೆಗಳನ್ನು ಕಲಿತ ಸ್ನೂಪಿ ಇಂದು ಲಿಮ್ಕಾ ದಾಖಲೆಯಲ್ಲಿ ತನ್ನ ಹೆಸರು ಮೂಡಿಸುವ ಹಾದಿಯಲ್ಲಿದೆ.

‘ಮೊದಲು ಸ್ನೂಪಿ ನಮ್ಮ ಕೆ9 ಗೆ ಬಂದಾಗ ತುಂಬಾ ಒರಟಾಗಿತ್ತು. ಮನುಷ್ಯರನ್ನು ಕಂಡರೆ ಆಗದವರಂತೆ ವರ್ತಿಸುತ್ತಿತ್ತು. ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಬೇರೆ ನಾಯಿಗಳನ್ನು ನೋಡಿದರೆ ಕಿರುಚಾಡುತ್ತಿತ್ತು. ಆದರೆ ನಾವು ನೀಡಿದ ತರಬೇತಿಯಿಂದಾಗಿ ಅದು ಊಹಿಸಲಾರದಷ್ಟು ಬದಲಾಗಿತ್ತು. ಎಲ್ಲಾ ನಾಯಿಗಳ ಹಾಗೆಯೇ ಇದ್ದರೂ ಅದರಲ್ಲೇನೋ ವಿಶೇಷ ಬೆಳವಣಿಗೆ ಇತ್ತು. ಹಾಗಾಗಿ ನನಗೆ ಸ್ನೂಪಿಯಿಂದ ಏನಾದರೂ ಸಾಧನೆ ಮಾಡಿಸಬೇಕು ಎಂಬ ಹಂಬಲವಾಯಿತು. ಒಮ್ಮೆ ‘ಯೂಟ್ಯೂಬ್‌’ನಲ್ಲಿ ವಿದೇಶಿ ನಾಯಿಯೊಂದು ಬಿಸ್ಕತ್‌ ಬ್ಯಾಲೆನ್ಸ್‌ ಮಾಡುವುದನ್ನು ನೋಡಿದ ನನಗೆ ಅದನ್ನು ಸ್ಕೂಫಿ ಬಳಿ ಮಾಡಿಸಬೇಕು ಅನ್ನಿಸಿತು ಅಂತಾರೆ ಕೆ9 ಶ್ವಾನ ತರಬೇತಿ ಕೇಂದ್ರದ ತರಬೇತುದಾರ ಸ್ವಾಮಿ.

ಹಾಗೆ ಸ್ಕೂಫಿ ಗೆ ಬಿಸ್ಕತ್ ಬ್ಯಾಲೆನ್ಸಿಂಗ್ ಮಾಡುವ ತರಬೇತಿ ಆರಂಭವಾಗಿತ್ತು. ಮೊದಲ ಬಾರಿಗೆ ಸ್ಕೂಫಿ ತಲೆಯ ಮೇಲೆ ಬಿಸ್ಕತ್ ಇಟ್ಟಾಗ ಅದನ್ನು ತಿಂದು ಮುಗಿಸಿತ್ತು..! ಹಾಗೇ ತರಬೇತಿ ಶುರುವಾದಂತೆ ಸ್ಕೂಫಿ ಬ್ಯಾಲೆನ್ಸ್ ಮಾಡುವುದಕ್ಕೆ ಆರಂಭಿಸಿತು. ಹೀಗೆ ಒಂದು ಬಿಸ್ಕತ್‌ನಿಂದ ಆರಂಭವಾದ ಸ್ನೂಪಿಯ ಬ್ಯಾಲೆನ್ಸಿಂಗ್ ಪಯಣ ಇಂದು 40 ಬಿಸ್ಕತ್‌ಗಳನ್ನು ಮೂತಿಯ ಮೇಲೆ ಇರಿಸಿಕೊಂಡು ಬ್ಯಾಲೆನ್ಸ್‌ ಮಾಡುವವರೆಗೆ ಮುಂದುವರಿದಿದೆ.

ಬೆಂಗಳೂರಿನಲ್ಲಿ ನಡೆಯುವ ಹಲವು ಡಾಗ್‌ ಷೋಗಳಲ್ಲಿ ಭಾಗವಹಿಸಿ ಬಹುಮಾನ ಗಿಟ್ಟಿಸಿಕೊಂಡ ಹೆಮ್ಮೆ ಸ್ನೂಫಿಗಿದೆ. ಈಗ ಸ್ನೂಪಿ 40 ಬಿಸ್ಕತ್‌ಗಳನ್ನು ಮೂತಿಯ ಮೇಲೆ ಇರಿಸಿಕೊಂಡು 3ರಿಂದ 4 ನಿಮಿಷ ಬ್ಯಾಲೆನ್ಸ್ ಮಾಡುತ್ತದೆ. ಮುಂದೆ ಇನ್ನೂ ಹೆಚ್ಚು ಬಿಸ್ಕತ್‌ಗಳನ್ನು ಹಾಗೂ ಇನ್ನೂ ಹೆಚ್ಚಿನ ಸಮಯ ಬ್ಯಾಲೆನ್ಸಿಂಗ್ ಮಾಡುವಂತೆ ತರಬೇತಿ ನೀಡಲಾಗುತ್ತಿದೆ. ಆ ಮೂಲಕ ಗಿನ್ನಿಸ್‌ ರೇಕಾರ್ಡ್‌ನಲ್ಲಿ ಸ್ನೂಫಿ ಹೆಸರು ಸ್ನೂಫಿ ಪ್ರಯತ್ನಿಸುತ್ತಿದೆ.

ಸ್ನೂಫಿ ನನ್ನ ಪಾಲಿನ ನಿಜವಾದ ಹೀರೋ. ಅದನ್ನು ನಮ್ಮ ಮನೆಯಲ್ಲಿ ನಾಯಿಯಂತೆ ಯಾರೂ ಟ್ರೀಟ್ ಮಾಡುವುದೇ ಇಲ್ಲ ಸ್ನೂಫಿ ನಮ್ಮ ಮನೆಯಬವರ ಪಾಲಿಗೆ ಒಬ್ಬ ಸದಸ್ಯ. ನನ್ನ ಪಾಲಿಗೆ ಸ್ನೂಫಿ ಬೆಸ್ಟ್ ಫ್ರೆಂಡ್. ಅವನ ಸ್ವಭಾವದ ಬಗ್ಗೆ ನಿಜಕ್ಕೂ ನನಗೆ ಹೆಮ್ಮೆ ಇದೆ. ಸ್ನೂಫಿ ಈಗ ಲಿಮ್ಕಾ ದಾಖಲೆಯ ಸನಿಹದಲ್ಲಿದೆ ಅನ್ನೋದೆ ನಮ್ಮ ಮನೆಯವರಿಗೆ ಸಂತೋಷದ ಸುದ್ದಿ. ಮನುಷ್ಯರು ಸಾಧನೆ ಮಾಡುವಂತೆ ನಾಯಿ ಕೂಡ ಸಾಧನೆ ಮಾಡುತ್ತಿದೆ. ಅಂತಹ ನಾಯಿಯನ್ನು ನಾನು ಸಾಕಿದ್ದೇನೆ ಅನ್ನೋದೆ ನನಗೆ ಹೆಮ್ಮೆ ಅಂತಾರೆ ಮಾಲೀಕ ಅಭಿಷೇಕ್ ಗೌಡ.

ಸ್ನೂಫಿ ತನ್ನ ಶಿಸ್ತಿನಿಂದಲೇ ‘ಬೆಸ್ಟ್ ಒಬೀಡಿಯೆಂಟ್ ಡಾಗ್‌’ ಎಂಬ ಪ್ರಶಸ್ತಿಯನ್ನು ಕೂಡ ಮುಡಿಗೇರಿಸಿಕೊಂಡಿದೆ. ಈಗ ಅಭಿಷೇಕ್ ಗೌಡ ಅವರ ಮನೆಯ ಸದಸ್ಯನಂತೆ ಇರುವ ಸ್ನೂಫಿ ಅವರ ಮನೆಯ ಕೆಲಸವನ್ನು ಚಾಚು ತಪ್ಪದೇ ಮಾಡುತ್ತದೆ. ಮನುಷ್ಯನಿಂಗಿಂತಲೂ ಮಿಗಿಲಾಗಿ ಸಾಧನೆಯ ಹಾದಿಯಲ್ಲಿರುವ ಸ್ಕೂಫಿ ಗೆ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್.