ಇ ಕಾಮರ್ಸ್ ಸಂಸ್ಥೆಗಳೇ ಬಂಡವಾಳ: ಶಿಪ್ಲರ್ ಮೂಲಕ ಲಾಭದ ವ್ಯವಹಾರ

ಟೀಮ್ ವೈ.ಎಸ್.

ಇ ಕಾಮರ್ಸ್ ಸಂಸ್ಥೆಗಳೇ ಬಂಡವಾಳ: ಶಿಪ್ಲರ್ ಮೂಲಕ ಲಾಭದ ವ್ಯವಹಾರ

Thursday October 01, 2015,

3 min Read

ಇ-ಕಾಮರ್ಸ್‌ನ ಪೋಷಣೆಯೊಂದಿಗೆ, ಲಾಜಿಸ್ಟಿಕ್ಸ್‌ ನಂತಹ ಉದ್ಯಮಗಳು ಉತ್ತಮವಾಗಿ ಪ್ರಗತಿಹೊಂದುತ್ತಿದೆ. ಡೆಲ್‌ಹಿವರಿ, ಗೋಜಾವಾಸ್ ಮತ್ತು ಇಕಾಮ್ ಎಕ್ಸ್ ಪ್ರೆಸ್ ನಂತಹ ಉದ್ಯಮಗಳು ಇ-ಕಾಮರ್ಸ್ ಉದ್ಯಮಿಗಳ ಶಿಪ್ಪಿಂಗ್ ತಲೆನೋವನ್ನು ದೂರವಾಗಿಸಿದೆ. ಕೆಲವೊಂದು ಉದ್ಯಮಗಳು ಸ್ಥಳೀಯ ಲಾಜಿಸ್ಟಿಕ್ಸ್ ಸಾಗಾಣಿಕೆಗೆ ಟ್ರಕ್ ನಂತಹ ವಾಹನಗಳನ್ನು ಸೇವೆ ಕೂಡ ಒದಗಿಸುತ್ತಿದೆ.

ಇಂಥದ್ದೇ ಒಂದು ಉದ್ಯಮ ನಡೆಸುತ್ತಿದೆ ಮುಂಬೈ ಮೂಲದ ಶಿಪ್ಲರ್ ಸಂಸ್ಥೆ. ಮೊಬೈಲ್ ಮೂಲಕ ಬುಕ್ ಮಾಡಿದರೆ ಟೆಂಪೋಗಳನ್ನು ಯಾವುದೇ ವೇಳೆಯಲ್ಲಿ, ಎಲ್ಲಿಯಾದರೂ ಶಿಪ್ಲರ್ ಒದಗಿಸುತ್ತದೆ. ಈ ಶಿಪ್ಲರ್ ಸಂಸ್ಥೆಯ ಸಂಸ್ಥಾಪಕರು ಮತ್ತು ಸಿಇಒ ಕೌಸ್ತುಭ್ ಪಾಂಡೆ.

image


ಸ್ಥಳೀಯ ಉದ್ಯಮಿಗಳಿಗೆ ಅವರ ಆದಾಯಕ್ಕೆ ತಕ್ಕಂತೆ ಎಲ್ .ಸಿ.ವಿ.ಗಳನ್ನು ಒದಗಿಸುತ್ತಿದೆ ಶಿಪ್ಲರ್. ಅಂದರೆ ನಿಗದಿತ ಲೊಕೇಶ್ ಗೆ(ಸ್ಥಳ) ಸರಕು(ಲಾಜಿಸ್ಟಿಕ್ಸ್)ಗಳನ್ನು ಸಾಗಿಸಬಲ್ಲ ವಾಹನ(ವೆಹಿಕಲ್) ಸೇವೆ ಒದಗಿಸುವುದು ಎಂದರ್ಥ. ಸ್ಥಳೀಯ ಉದ್ದಿಮೆದಾರರ ವ್ಯವಹಾರದ ಪ್ರಮಾಣವನ್ನಾಧರಿಸಿ ಈ ಸಾಗಾಣಿಕೆಯ ದರ ನಿಗದಿಪಡಿಸಲಾಗುತ್ತದೆ. ಎಲ್ಲಿಗೇ ಸರಕು ಸಾಗಿಸಲಾದರೂ ನಮ್ಮ ಈ ಪ್ಲಾ ಟ್ ಫಾರಂನಲ್ಲಿ ಸೇವೆ ಸದಾ ಸಿದ್ಧವಿರುತ್ತದೆ ಎಂದು ಕೌಸ್ತುಭ್ ಹೇಳಿದ್ದಾರೆ.

ಐಐಟಿಯಲ್ಲಿ ಕಲಿತ ಕೌಸ್ತುಭ್, ವಿನಯ್ ಜುಲ್ಮೆ, ಕಾರ್ತಿಕ್ ಕೊಚಾಲಿಯಾ, ಪ್ರತಿಭಾ ಪತಾನಿಯ ಹಾಗೂ ಸುಧೀರ್ ಜಝಾರಿಯಾರ ಕನಸಿನ ಸಂಸ್ಥೆ ಶಿಪ್ಲರ್. ಕೌಸ್ತುಭ್ ಈ ಸಂಸ್ಥೆ ಆರಂಭಿಸುವ ಮೊದಲು ಬಿ.ಸಿ.ರೇಡಿಯೋ ಹಾಗೂ ಹೌಸಿಂಗ್.ಕಾಮ್‌ನಲ್ಲಿ ಕಾರ್ಯನಿರ್ವಹಿಸಿದ್ದ ಅನುಭವ ಹೊಂದಿದ್ದರು. ಇನ್ನು ವಿನಯ್ ಮೋಫಸ್ಟ್ ಹಾಗೂ ಲರ್ನ್‌ ಕ್ಯೂ ಸಂಸ್ಥೆಗಳ ವೆಬ್ ಡೆವಲಪ್‌ಮೆಂಟ್ ಕ್ಷೇತ್ರದಲ್ಲಿ ಸುಮಾರು 7 ವರ್ಷ ಕೆಲಸ ಮಾಡಿದ್ದರು.

ಆಕರ್ಷಣೆ ಮತ್ತು ಹೂಡಿಕೆ

ಆರಂಭವಾದ ಎರಡೂವರೆ ತಿಂಗಳಲ್ಲೇ ಈ ಸಂಸ್ಥೆ ಪ್ರತಿದಿನವೂ ಸುಮಾರು 100ಕ್ಕೂ ಹೆಚ್ಚು ಬೇಡಿಕೆ ಕರೆಗಳನ್ನು ಸ್ವೀಕರಿಸುತ್ತಿದೆ. ಮುಂಬೈನ 600ಕ್ಕೂ ಹೆಚ್ಚು ಸಣ್ಣ ಹಾಗೂ ಮಧ್ಯಮ ಉದ್ದಿಮೆದಾರರ ಜೊತೆ ವ್ಯವಹರಿಸುತ್ತಿದೆ. ಪ್ರಸ್ತುತ ಸಂಸ್ಥೆ ಸುಮಾರು 75ವಾಹನಗಳನ್ನು ಬೇಡಿಕೆಯನ್ವಯ ಪೂರ್ವನಿಗದಿಯಂತೆ ಚಲಾಯಿಸುತ್ತಿದೆ.

ಕೌಸ್ತುಭ್ ಹೇಳುವಂತೆ, ಅವರ ಸಂಸ್ಥೆ 2ಕ್ಕಿಂತ ಹೆಚ್ಚು ಬೇಡಿಕೆಗಳಿಗೆ ನಿತ್ಯ ಅವರ ಸ್ವಂತ ವಾಹನವನ್ನು ಬಳಸುತ್ತಿದ್ದಾರೆ. ಮುಂಬೈನ ಬೇರೆ ಬೇರೆ ಭಾಗಗಳಿಗೆ ಸೇವೆಯನ್ನು ವಿಸ್ತರಿಸಿ ಪ್ರತಿನಿತ್ಯ 4 ಸೇವೆಗಳಿಗೆ ವಾಹನ ಒದಗಿಸುವ ಸದ್ಯದ ಗುರಿ ಅವರ ಮುಂದಿದೆ.

ಶಿಪ್ಲರ್ ತನ್ನ ಈ ಪ್ಲಾಟ್‌ಫಾರಂನಲ್ಲಿ ಪ್ರತಿ ಆರ್ಡರ್‌ಗೆ ತಲಾ ಇಂತಿಷ್ಟು ಅನ್ನುವ ನಿಗದಿತ ಆದಾಯ ಹೊಂದಿದೆ. ಸದ್ಯ ಸಣ್ಣ ಹಾಗೂ ಮಧ್ಯಮ ವರ್ಗದ ಉದ್ಯಮಿಗಳಿಗೆ ಸೇವೆ ಒದಗಿಸುತ್ತಿರುವ ಶಿಪ್ಲರ್ ಮುಂದೆ ಗ್ರಾಹಕರ ಅಗತ್ಯತೆಗಳಿಗೆ ತಕ್ಕಂತೆ ಸೇವಾ ವಿಸ್ತರಣೆಗಾಗಿ ಆ್ಯಪ್ ಒಂದನ್ನು ಲಾಂಚ್ ಮಾಡಿದೆ.

ಸ್ನ್ಯಾಪ್‌ಡೀಲ್ ಸಂಸ್ಥಾಪಕರಾದ ಕುನಾಲ್ ಭಾಲ್ ಮತ್ತು ರೋಹಿತ್ ಬನ್ಸಾಲ್‌ರೊಂದಿಗೆ ಇತ್ತೀಚೆಗಷ್ಟೇ ಶಿಪ್ಲರ್ ಒಂದು ಹಂತದ ಮಾತುಕತೆ ಮುಗಿಸಿದೆ. ಒಂದು ವೇಳೆ ಇಂಥ ಸಂಸ್ಥೆಗಳಿಂದ ಹೂಡಿಕೆ ದೊರೆತರೆ ಶಿಪ್ಲರ್, ತನ್ನ ತಾಂತ್ರಿಕತೆ ಹಾಗೂ ಅಭಿವೃದ್ಧಿ ಸಾಧಿಸಿ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ ಯೋಜನೆ ರೂಪಿಸಿಕೊಳ್ಳುತ್ತಿದೆ.

ಶಿಪ್ಲರ್‌ನಲ್ಲಿ ಗ್ರಾಹಕ- ಬಳಕೆದಾರರ ಸಂಪರ್ಕಿಸುವ ಆ್ಯಪ್ ಇದ್ದು ಇಲ್ಲಿ ಜನರು ತಮ್ಮ ಅವಶ್ಯಕತೆಗಳನ್ನು ನೇರವಾಗಿ ಪೋಸ್ಟ್ ಮಾಡುವ ಸೌಕರ್ಯವಿದೆ. ಜೊತೆಗೆ ನೋಟಿಫಿಕೇಶನ್ ಗಳನ್ನು ಈ ಆ್ಯಪ್‌ಗಳ ಮೂಲಕ ಪಡೆದುಕೊಳ್ಳಬಹುದು ಹಾಗೂ ಜಿಪಿಎಸ್ ತಂತ್ರಜ್ಞಾನದಿಂದ ಆಯಾ ಪ್ರದೇಶಗಳನ್ನು ಶೀಘ್ರದಲ್ಲಿ ಹುಡುಕುವ ವ್ಯವಸ್ಥೆ ಇದರಲ್ಲಿದೆ.

ಈ ಆ್ಯಪ್ ಬಳಸಿ ಗ್ರಾಹಕರು ತಮ್ಮ ವ್ಯವಹಾರದ ಹಂತವನ್ನು ನೇರವಾಗಿ ತಿಳಿದುಕೊಳ್ಳಬಹುದು. ಬೇಡಿಕೆ ಬಂದ ಸ್ಥಳಕ್ಕೆ ಕೇವಲ 25 ನಿಮಿಷಗಳಲ್ಲಿ ತಲುಪಬಲ್ಲ ಸಾಮರ್ಥ್ಯವನ್ನು ಶಿಪ್ಲರ್ ಅಭಿವೃದ್ಧಿಪಡಿಸಿದೆ. ಅದಕ್ಕೆ ಈ ಆ್ಯಪ್ ಸಾಕಷ್ಟು ನೆರವಾಗಬಲ್ಲದು.

ಸಾಮಾನ್ಯ ಮಾರುಕಟ್ಟೆ ಹಾಗೂ ಪ್ರತಿಸ್ಪರ್ಧಿಗಳು

ಈ ಕ್ಷೇತ್ರದಲ್ಲಿ ಲಾಜಿಸ್ಟಿಕ್ಸ್‌ನ್ನು ಮನೆ ಬಾಗಿಲಿಗೆ ಅಥವಾ ಗ್ರಾಹಕರ ಸ್ಥಳಕ್ಕೆ ತಲುಪಿಸಬಲ್ಲ ಹತ್ತಾರು ಸಂಸ್ಥೆಗಳು ಹುಟ್ಟಿಕೊಂಡಿದೆ. ಅವುಗಳಲ್ಲಿ ಪೋರ್ಟರ್ ಶಿಪ್ಪರ್, ಬ್ಲೋಹಾರ್ನ್, ದಿ ಕ್ಯಾರಿಯರ್ ಮುಖ್ಯವಾದವು. ಆದರೂ ಕೌಸ್ತುಭ್ ಹೇಳುವಂತೆ ಶಿಪ್ಲರ್‌ನ ತಂತ್ರಜ್ಞಾನ ಇವೆಲ್ಲವುಗಳಿಗಿಂತ ನೂತನವಾದದ್ದಾಗಿದೆ.

ಈಗ ಶಿಪ್ಲರ್‌ನ ಸ್ಪರ್ಧಿಗಳು ಕರೆ ಸ್ವೀಕರಿಸುವ ಮೂಲಕ ಆರ್ಡರ್ ಪಡೆಯುತ್ತಿದ್ದಾರೆ. ಶಿಪ್ಲರ್ ಇದಕ್ಕಿಂತ ಒಂದು ಹೆಜ್ಜೆ ಮುಂದೆ ಯೋಚಿಸುತ್ತಿದೆ. ಅಂದರೆ ತನ್ನ ಸ್ಪರ್ಧಿಗಳಿಗಿಂತ ಮುಂಚಿತವಾಗಿ ಗ್ರಾಹಕರ ಬೇಡಿಕೆ ಸ್ವೀಕರಿಸಿ ಅವರ ಅಗತ್ಯತೆಗಳಿಗೆ ಸ್ಪಂದಿಸುವುದು ಶಿಪ್ಲರ್‌ನ ಯೋಜನೆ.

ಶಿಪ್ಲರ್ ತನ್ನ ಸೇವೆಯನ್ನು ವಿಸ್ತರಿಸುವತ್ತ ಗಮನ ಹರಿಸಿದ್ದು 10ಕ್ಕೂ ಹೆಚ್ಚು ಮುಖ್ಯ ಪಟ್ಟಣಗಳಲ್ಲಿ ಹಾಗೂ ಅಂತರ್ ನಗರ ಸೇವೆಗಳನ್ನು ಸೃಷ್ಟಿಸುವ ತೀರ್ಮಾನ ಮಾಡಿದೆ.

ಗ್ರಾಹಕರು ಹಾಗೂ ಉದ್ದಿಮೆದಾರರು ಭಾರತದ ಯಾವುದೇ ಮೂಲೆಗೆ ತಮ್ಮ ಸರಕು ಸಾಗಿಸಲು ಅಗತ್ಯವಿರುವ ವಾಹನಗಳ ಸೌಕರ್ಯವನ್ನು ನೀಡುವ ಉದ್ದೇಶ ಶಿಪ್ಲರ್‌ಗಿದೆ. ಸದ್ಯದಲ್ಲೇ ಸಂಸ್ಥೆ ಮತ್ತಷ್ಟು ಬಂಡವಾಳ ಹೂಡಿ ತನ್ನ ಯೋಜನೆಯನ್ನು ವಿಸ್ತಾರಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ ಎಂದು ಕೌಸ್ತುಭ್ ಮಾಹಿತಿ ನೀಡಿದ್ದಾರೆ.

ಸ್ಪರ್ಧೆ ಮತ್ತು ಬಂಡವಾಳ ಹೂಡಿಕೆ

ಈಗಾಗಲೇ ಹೇಳಿರುವಂತೆ ಶಿಪ್ಲರ್‌ಗೆ ಸಾಕಷ್ಟು ಪ್ರತಿಸ್ಪರ್ಧಿಗಳಿದ್ದಾರೆ. ಅವರಲ್ಲಿ ಕೆಲವರು ಹೆಚ್ಚುವರಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಬೆಂಗಳೂರು ಮೂಲದ ಬ್ಲೋ ಹಾರ್ನ್ ಸಂಸ್ಥೆ ಯುನಿಟಸ್ ಸೀಡ್ ಫಂಡ್‌ನಿಂದ ಹಣ ಹೂಡಿಕೆ ಮಾಡಿಕೊಂಡಿದೆ. ಇದೇ ವೇಳೆ ದಿ ಕ್ಯಾರಿಯರ್ ಸುಮಾರು 1.5ಕೋಟಿ ರೂ. ಹೆಚ್ಚುವರಿ ಹೂಡಿಕೆ ಮಾಡಿದೆ. ಹಾಗೂ ಮುಂಬೈ ಮೂಲದ ಪೋರ್ಟರ್ ಇತ್ತೀಚೆಗಷ್ಟೇ ಸಿಕೋಯಾ ಮತ್ತು ಕೀ ಕ್ಯಾಪಿಟಲ್ ನಿಂದ ತನ್ನ ಬಂಡವಾಳವಾದ 35 ಕೋಟಿ ರೂ.ಗಳನ್ನು ಸುರಿದಿದೆ.

ಎಸ್ಎಐಎಫ್ ಸಹಭಾಗಿಗಳಿಂದ ಸುಮಾರು 61.8 ಕೋಟಿ ರೂ.ಗಳಷ್ಟು ಬೃಹತ್ ಬಂಡವಾಳ ಹೂಡಿಕೆ ಮಾಡುವ ಮೂಲಕ ಗುರ್‌ಗಾಂವ್ ಮೂಲದ ಟ್ರಕ್‌ಫಸ್ಟ್‌ ಸಹ ತಾನೂ ಸ್ಪರ್ಧೆಯಲ್ಲಿದೆ ಎಂದು ಘೋಷಿಸಿದೆ.

ತಂತ್ರಜ್ಞಾನವನ್ನು ಬಳಸಿಕೊಂಡು ಅಸಂಘಟಿತ ಮಾರುಕಟ್ಟೆ ಉದ್ದಿಮೆದಾರರನ್ನು ಒಗ್ಗೂಡಿಸುವ ಪ್ರಯತ್ನ ಈ ವರ್ಷ ವ್ಯಾಪಕವಾಗಿ ಕಂಡು ಬಂದಿದೆ. ಅದರಲ್ಲೂ ಮುಖ್ಯವಾಗಿ ಸೂಪರ್‌ ಮಾಲ್‌ಗಳ ಸರಕು ಸಾಗಾಣಿಕೆ ಹಾಗೂ ಇನ್ನಿತರ ಉತ್ಪಾದನಾ ಕ್ಷೇತ್ರದ ವಸ್ತುಗಳ ಸಾಗಾಣಿಕೆಗೆ ವಾಹನಗಳನ್ನು ಒದಗಿಸುವ ಸಂಸ್ಥೆಗಳಿಗೆ ಹೂಡಿಕೆ ಹೆಚ್ಚುತ್ತಿದೆ. ನಿಧಾನವಾಗಿ ಲಾಜಿಸ್ಟಿಕ್ಸ್ ಹೊತ್ತೊಯ್ಯುವ ವಾಹನಗಳ ನಿರ್ವಹಣೆ ವ್ಯಾವಹಾರಿಕ ಕ್ಷೇತ್ರದಲ್ಲಿ ತನ್ನ ಸ್ಥಳವನ್ನು ಗಟ್ಟಿ ಮಾಡಿಕೊಳ್ಳುತ್ತಿದೆ.