ಗ್ರಾಹಕರ ಮನೋಸ್ಥಿತಿ ತಿಳಿಸುವ ರೇಡಿಯೋಲೋಕಸ್​..!

ಟೀಮ್​​ ವೈ.ಎಸ್​​. ಕನ್ನಡ

ಗ್ರಾಹಕರ ಮನೋಸ್ಥಿತಿ ತಿಳಿಸುವ ರೇಡಿಯೋಲೋಕಸ್​..!

Friday November 27, 2015,

4 min Read

ಇ-ಕಾಮರ್ಸ್ ಸಂಸ್ಥೆಗಳಿಗೆ ಬಳಕೆದಾರರ ಸಂಪೂರ್ಣ ಮಾಹಿತಿ ಇರುತ್ತದೆ. ಪ್ಲಿಫ್ ಕಾರ್ಟ್ ಆಗಿರಬಹುದು ಅಥವಾ ಅಮೆಜಾನ್ ಇರಬಹುದು.. ಯಾವ ಬಳಕೆದಾರ ಏನನ್ನು ಬಯಸುತ್ತಾನೆ.. ಆತನ ಅಭಿರುಚಿ ಏನು ಎಂಬ ಬಗ್ಗೆ ಈ ಕಾಮರ್ಸ್ ಸಂಸ್ಥೆಗಳಿಗೆ ಸ್ಪಷ್ಟ ಮಾಹಿತಿ ಕೋಶ ಇದೆ. ಆದರೆ ಚಿಲ್ಲರೆ ವ್ಯಾಪಾರಿಗಳಿಗೆ ಈ ಅದೃಷ್ಟ ಇಲ್ಲ. ತಮ್ಮ ಅಂಗಡಿಗೆ ಬರುವ ಗ್ರಾಹಕ ಏನನ್ನು ಬಯಸುತ್ತಾನೆ.. ? ಆತನ ಆದ್ಯತೆಗಳೇನು..? ವ್ಯಾಪಾರಿಗೆ ಏನೂ ತಿಳಿಯುವುದಿಲ್ಲ.. ಈ ಎಲ್ಲ ಪ್ರಶ್ನೆಗಳಿಗೆ ಸಮಸ್ಯೆಗಳಿಗೆ ಇದೀಗ ಉತ್ತರ ದೊರೆತಿದೆ. ಅದುವೇ ರೇಡಿಯೋಲೋಕಸ್ ( Radiolocus) ತಂತ್ರಜ್ಞಾನ. ಇದು ರೇಡಿಯೋ ವೇವ್ ಆಧಾರಿತ ತಂತ್ರಜ್ಞಾನವನ್ನು ಅವಲಂಬಿಸಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ 2. 5 ಮಿಲಿಯನ್ ಬಳಕೆದಾರರ ಮಾಹಿತಿ ಈ ಮೂಲಕ ಕಲೆಹಾಕಲಾಗಿದೆ.

image


2013ರಲ್ಲಿ ಹರ್ಷಲ್ ವೋರಾ ಅವರು ರೇಡಿಯೋ ಲೋಕಸ್ ಸ್ಥಾಪಿಸಿದರು. ವೈಫೈ ತಂತ್ರಜ್ಞಾನ ಬಳಸಿ ಒಳಾಂಗಣದ ವಸ್ತುಗಳ ಮೇಲೆ ನಿಗಾ ವಹಿಸಬಹುದು ಎಂಬುದನ್ನು ತಿಳಿದಾಗ ವೋರಾ ಅವರು ಆಶ್ಚರ್ಯ ಚಕಿತರಾದರು. ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ನೆರವು ನೀಡುವ ಪ್ರಕ್ರಿಯೆಯಲ್ಲಿ ಇದನ್ನು ಅರಿತುಕೊಂಡರು. ಮುಂದಿನ ದಿನಗಳಲ್ಲಿ ಅದು ಹೊಸ ತಂತ್ರಜ್ಞಾನದ ಆವಿಷ್ಕಾರಕ್ಕೆ ವೇದಿಕೆ ಕಲ್ಪಿಸಿತು. ಈ ಸಂದರ್ಭದಲ್ಲಿ ಅವರು ಕೋಮಿಲ್ ಮಿಡಿಯಾ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅದಕ್ಕಿಂತ ಮೊದಲು ಜಿಪಿಎಸ್ ಆಧಾರಿತ ಅಮೆರಿಕದ ಟೆಲೆನವ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಹರ್ಷಲ್ ಅವರು ಹೊಸ ತಂತ್ರಜ್ಞಾನದ ಕನಸು ಮೂಡಿ ಬಂದಿರುವುದನ್ನು ಯುವರ್ ಸ್ಟೋರಿಯಲ್ಲಿ ಬಿಚಿಟ್ಟಿದ್ದಾರೆ.

ಟೀಚ್ ಕ್ರಂಚ್ ನಲ್ಲಿ ಪ್ರಕಟಗೊಂಡ ಲೇಖನ. ಒಳಾಂಗಣದ ಖರೀದಿ ಮಾಹಿತಿ ಹೇಗೆ ಚಿಲ್ಲರೆ ವ್ಯಾಪಾರಿಗಳಿಗೆ ನೆರವಾಗುತ್ತದೆ ಎಂಬ ಬಗ್ಗೆ ಬೆಳಕು ಚೆಲ್ಲಿತ್ತು. ಇದು ನನ್ನ ಕನಸನ್ನು ಇನ್ನಷ್ಟು ಹೆಮ್ಮರಗೊಳಿಸಿತು ಎನ್ನುತ್ತಾರೆ ಹರ್ಷಲ್. ಕೋಮಿಲಿ ಮಿಡಿಯಾ ತನ್ನದೇ ಆದ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದರೂ ಅದು ವ್ಯಾಪಾರಿಗಳಿಗೆ ನೆರವಿಗೆ ಬರುತ್ತಿರಲಿಲ್ಲ. ಈ ಎಲ್ಲ ಸಾಧ್ಯಾ ಸಾಧ್ಯತೆಗಳನ್ನು ಪರಿಶೀಲಿಸಿ ಹೊಸ ಆವಿಷ್ಕಾರದತ್ತ ಮನಸು ಮಾಡಲಾಯಿತು. ತಮ್ಮ ಅಂಗಡಿಗೆ ಬಂದ ಬಳಕೆದಾರ ಮುಂದೆ ಯಾವ ಅಂಗಡಿಗೆ ತೆರಳಿ ವಸ್ತು ಖರೀದಿಸಿದ, ಆತ ಏನನ್ನು ಹುಡುಕುತ್ತಿದ್ದ ಆತನ ಆಯ್ಕೆಗಳೇನು ಎಂಬ ಬಗ್ಗೆ ಮಾಹಿತಿ ಇಲ್ಲದೆ ಅಂಗಡಿ ಮಾಲಿಕ ಪರದಾಡುತ್ತಿರುವುದನ್ನು ಗಮನಿಸಿದ್ದೆ ಎನ್ನುತ್ತಾರೆ ಹರ್ಷಲ್ ವೋರಾ...

ರೇಡಿಯೋಲೋಕಸ್ ಸುತ್ತ ಮುತ್ತ

ತಮ್ಮ ಅಂಗಡಿಗಳಿಗೆ ಬರುವ ಬಳಕೆದಾರರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಅಂಗಡಿ ಮಾಲಿಕನಿಗೆ ಇರುತ್ತದೆ. ಪದೇ ಪದೇ ಭೇಟಿ ನೀಡುತ್ತಿರುವವರ ಬಗ್ಗೆ ಆತ ವಿಶೇಷ ಆಸಕ್ತಿ ವಹಿಸುತ್ತಾನೆ. ಬಾಗಿಲಲ್ಲಿ ಇರುವ ಟಿಕ್ಕರ್, ವೀಡಿಯೋ ದೃಶ್ಯಾವಳಿಯ ಪುನರ್ ಪರಿಶೀಲನೆ ಮತ್ತು ಇತರ ನಿಗಾ ವಸ್ತುಗಳ ಆಧಾರದಲ್ಲಿ ಆತ ಬಳಕೆದಾರರನ್ನು ಗುರುತಿಸಿಕೊಳ್ಳುತ್ತಿದ್ದ.

image


ಆನ್ ಲೈನ್ ಮಾಹಿತಿ ಇದ್ದರಷ್ಟೇ ಸಾಲದು ಆಫ್ ಲೈನ್ ಮಾಹಿತಿ ಅಷ್ಟೇ ಮುಖ್ಯ ಎನ್ನುತ್ತಾರೆ ಹರ್ಷಲ್.. ಅಂಗಡಿಗೆ ಭೇಟಿ ನೀಡುವ ಪ್ರತಿಯೊಬ್ಬ ಗ್ರಾಹಕ ಎಷ್ಟು ಸಮಯ ಕಳೆಯುತ್ತಾನೆ, ವಿವಿಧ ವಿಭಾಗಗಳಿಗೆ ಭೇಟಿ ನೀಡಿದಾಗ ಆತನ ಪ್ರತಿಕ್ರಿಯೆ ಹೇಗಿರುತ್ತದೆ.. ಹೀಗೆ ಮಾಹಿತಿ ಕೋಶ ವಿಶಾಲವಾಗುತ್ತದೆ. ಬಳಕೆದಾರನೊಬ್ಬನ ಅಭಿರುಚಿ ಪರಿಗಣಿಸಿ ಆತನ ಆದ್ಯತೆಗೆ ಅನುಗುಣವಾಗಿ ವಸ್ತುಗಳನ್ನು ಜೋಡಿಸಿ ಇಡಲು ಸೇವೆ ನೀಡಲು ಅಂಗಡಿ ಮಾಲಿಕನಿಗೆ ಸಾಧ್ಯವಾಗುತ್ತದೆ. ವೈವಿಧ್ಯತೆಗೆ ಹೆಸರುವಾಸಿಯಾಗಿರುವ ನಮ್ಮ ದೇಶದಲ್ಲಿ ಪ್ರತಿಯೊಬ್ಬ ಬಳಕೆದಾರ , ನೀಡುವ ಪ್ರತಿಕ್ರಿಯೆ ಸ್ಥಳೀಯ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಲು ಕೂಡ ನೆರವಾಗುತ್ತದೆ ಎನ್ನುತ್ತಾರೆ ಹರ್ಷಲ್.

ರೇಡಿಯೋಲೋಕಸ್ ಹೇಗೆ ಕಾರ್ಯನಿರ್ವಹಿಸುತ್ತದೆ..?

ಅಂಗಡಿಯೊಳಗೆ ಪ್ರವೇಶಿಸಿದ ಬಳಕೆದಾರ ಆತ ಬಳಿಕ ಯಾವುದೆಲ್ಲ ಚಟುವಟಿಕೆಯಲ್ಲಿ ನಿರತನಾಗುತ್ತಾನೆ ಎಂಬುದನ್ನು ತಂತ್ರಜ್ಞಾನದ ಆಧಾರದಲ್ಲಿ ಗಮನಿಸಲಾಗುತ್ತದೆ. ಈ ರೀತಿ ಪಡೆದ ದತ್ತಾಂಶಗಳನ್ನು ಸಿಎಸ್ ವಿ ಅಧವಾ ಎಪಿಐ ಮೂಲಕ ಎಕ್ಸ್​​ಪೋರ್ಟ್ ಮಾಡಲಾಗುತ್ತದೆ. ಅಂಗಡಿಯೊಂದಕ್ಕೆ ಭೇಟಿ ನೀಡುವ ಬಳಕೆದಾರರ ಸಂಖ್ಯೆ, ಅವರಿಗೆ ಗುಣಮಟ್ಟದ ಸೇವೆ, ಹೊಸ ಬಳಕೆದಾರನೋ, ಪದೇ ಪದೇ ಭೇಟಿ ನೀಡುವ ಬಳಕೆದಾರನೊ..? ಆತನ ನಿರ್ದಿಷ್ಟ ಆದ್ಯತೆಗಳೇನು..? ಹೀಗೆ ಎಲ್ಲ ವಿಧದ ವರ್ಗೀಕರಣ ಮತ್ತು ಮಾಹಿತಿಗಳನ್ನು ಕಲೆ ಹಾಕಿ, ಮಾಲಿಕರಿಗೆ ಒದಗಿಸಲಾಗುತ್ತದೆ. ಒಂದು ಇಡೀ ಸಂಸ್ಥೆಯ ಚಟುವಟಿಕೆ ಅಥವಾ ಒಂದು ನಿರ್ದಿಷ್ಟ ವ್ಯಾಪ್ತಿಗೆ ಸೀಮಿತ ಎಂಬಂತೆ ಆಯ್ಕೆ ಮಾಡುವ ಅವಕಾಶ ಕೂಡ ಇದೆ.

image


ಖಾಸಗಿತನ ಖಾಸಗಿತನ ಖಾಸಗಿತನ..!

ಒಬ್ಬನೇ ಬಳಕೆದಾರ ನಾಲ್ಕೈದು ಕಡೆ ಕಾಣಿಸಿಕೊಳ್ಳುವ ಸಂದರ್ಭದಲ್ಲಿ ಮಾಹಿತಿ ಸಂಕೀರ್ಣಗೊಳ್ಳುವ ಸಾಧ್ಯತೆಗಳಿವೆ. ಇಂತಹ ಸಂದರ್ಭದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕೂಡ ತೆಗೆದುಕೊಳ್ಳಲಾಗುತ್ತದೆ. ಒಂದು ಸಂಸ್ಥೆಗೆ ಸಂಬಂಧಿಸಿದ ಮಾಹಿತಿಯನ್ನು ಇನ್ನೊಂದು ಸಂಸ್ಥೆಯೊಂದಿಗೆ ಹಂಚಿಕೊಳ್ಳಲು ಹೋಗುವುದಿಲ್ಲ. ಒಪ್ಪಿಗೆ ಇಲ್ಲದೆ ಇಂತಹ ಕೆಲಸಕ್ಕೆ ಮುಂದಾಗುವುದಿಲ್ಲ. ಆದರೆ ಬಳಕೆದಾರರ ಪ್ರೊಫೈಲ್ ಬಳಸಲು ಮಾತ್ರ ಇದನ್ನು ಬಳಸಲಾಗುತ್ತದೆ ಎನ್ನುತ್ತಾರೆ ಹರ್ಷಲ್.

ಒಬ್ಬ ಬಳಕೆದಾರರ ಮಾಹಿತಿ ಇನ್ನೊಬ್ಬರಿಗೆ ಲಭಿಸುವ ಸಾಧ್ಯತೆಯನ್ನು ಹರ್ಷಲ್ ಪೂರ್ಣವಾಗಿ ತಳ್ಳಿಹಾಕುತ್ತಿದ್ದಾರೆ. ಈ ಸಂಬಂಧ ಅಗತ್ಯ ಇರುವ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳುತ್ತಾರೆ.

ರೇಡಿಯೋಲೋಕಸ್ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಹರ್ಷಲ್, ಈ ತಂತ್ರಜ್ಞಾನದ ಅಡಿಯಲ್ಲಿ ವೈಯಕ್ತಿಕ ಮಾಹಿತಿ ಕಲೆ ಹಾಕಲಾಗುತ್ತಿಲ್ಲ. ಸಂಪೂರ್ಣವಾಗಿರುವ ಮತ್ತು ಅನನ್ಯವಾಗಿರುವ ವಿಶ್ಲೇಷಣೆ ಮೂಲಕ ಬಳಕೆದಾರರ ಬೇಡಿಕೆ ಈಡೇರಿಸಲಾಗುತ್ತದೆ. ಇದರಲ್ಲಿ ಖಾಸಗಿತನಕ್ಕೆ ಯಾವುದೇ ಧಕ್ಕೆ ಇಲ್ಲ ಎಂದು ಸ್ಪಷ್ಟ ಶಬ್ದಗಳಲ್ಲಿ ನುಡಿಯುತ್ತಾರೆ ಹರ್ಷಲ್.

ಮಾಹಿತಿ ತಂತ್ರಜ್ಞಾನದ ಹಾದಿ...

ಒಂದು ಅಂಗಡಿಗೆ ಪ್ರವೇಶಿಸುವ ಬಳಕೆದಾರನ ಚಟುವಟಿಕೆ ಗಮನಿಸಲು ಹಲವು ಮಾರ್ಗಗಳಿವೆ. ವೈ ಫೈ ರೇಡಿಯೋ ಸಿಗ್ನಲ್ ತಂತ್ರಜ್ಞಾನ ಬಳಸುವ ಮೂಲಕ ಕಿರಿ ಕಿರಿ ಇಲ್ಲದ ರೀತಿಯಲ್ಲಿ ಬಳಕೆದಾರನನ್ನು ಗಮನಿಸಬಹುದಾಗಿದೆ. ಇದರ ಜೊತೆ ಜೊತೆಗೆ ಇನ್ನಿತರ ತಂತ್ರಜ್ಞಾನ ಕೂಡ ಜಾಲ್ತಿಯಲ್ಲಿದೆ. ಅವುಗಳಲ್ಲಿ

image


ಎನ್ಎಫ್​​ಸಿ ಆಧಾರಿತ ಕಾರ್ಡ್ ಒಂದು. ಈ ವ್ಯವಸ್ಥೆಯಲ್ಲಿ ಗ್ರಾಹಕ ವಿಧೇಯ ತಂತ್ರಜ್ಞಾನಕ್ಕೆ ಬಳಕೆದಾರನನ್ನು ಸೇರ್ಪಡೆಗೊಳಿಸಬೇಕಾಗಿದೆ. ಎಲ್ ಇ ಡಿ ತಂತ್ರಜ್ಞಾನಕ್ಕೆ ಮೊರೆ ಹೋಗಬೇಕಾದರೆ ಇದನ್ನು ಬಳಕೆದಾರ ಡೌನ್ ಲೋಡ್ ಮಾಡಬೇಕಿದೆ. ಆದರೆ ವೈ ಫೈ ಬೆರಳಚ್ಚು ಮುದ್ರಣ ತಂತ್ರಜ್ಞಾನದ ಮೂಲಕ ಗ್ರಾಹಕ ಅಂಗಡಿಯಲ್ಲಿ ಎಲ್ಲಿದ್ದಾನೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯ. ಆ್ಯಪಲ್ ಐ ಬಿಕೋನ್ ಬ್ಲೂ ಟೂತ್​ ಕಡಿಮೆ ಸಾಮರ್ಥ್ಯ ಹೊಂದಿದ್ದು ಗುರುತು ಪತ್ತೆ ಹಚ್ಚಿ ಸಂಕೇತ ರವಾನಿಸುತ್ತಿದೆ. ಹಲವು ಬ್ಲ್ಯೂ ಟೂತ್​ ಅದರಲ್ಲೂ 4 ಶ್ರೇಣಿಯ ಉತ್ಪನ್ನಗಳು ಸೂಕ್ತವಾದ ಮಾಹಿತಿ ರವಾನಿಸುವಲ್ಲಿ ವಿಫಲಲಾಗಿವೆ. ಇದಕ್ಕೆ ಆಪ್ ಕೂಡ ಅತ್ಯಗತ್ಯವಾಗಿದ್ದು, ಸಮಸ್ಯೆಗೆ ಕಾರಣವಾಗಿದೆ ಎನ್ನುತ್ತಾರೆ ಹರ್ಷಲ್.

ಈ ವ್ಯವಸ್ಥೆಯಡಿಯಲ್ಲಿ ಬಳಕೆದಾರರನ್ನು ಹಿಡಿದಿಟ್ಟುಕೊಳ್ಳುವ ಪ್ರಕ್ರಿಯೆ ಇಲ್ಲ. ವೈ ಫೈ ತಂತ್ರಜ್ಞಾನದ ಮಾಹಿತಿ ನಿಖರವಾಗಿದೆ. ಮತ್ತು ಸ್ಪಷ್ಟತೆಯಿಂದ ಕೂಡಿದೆ ಎನ್ನುತ್ತಾರೆ ಹರ್ಷಲ್. ಬಳಕೆದಾರರ ಅಥವಾ ಖರೀದಿದಾರರ ಮನೋಸ್ಥಿತಿ ಅರಿಯಲು ಅವರ ಚಟುವಟಿಕೆ ಗುರುತಿಸಲು ವೈ ಫೈಯಷ್ಟು ಸೂಕ್ತ ಇನ್ನೊಂದಿಲ್ಲ ಎಂಬುಂದು ಹರ್ಷಲ್ ಅವರ ಸ್ಪಷ್ಟ ಮಾತು..

ರೇಡಿಯೋಲೋಕಸ್ ತಂತ್ರಜ್ಞಾನ ಅಭಿವೃದ್ದಿ ಸಂದರ್ಭದಲ್ಲಿ ಎದುರಾಗಿದ್ದ ಪ್ರತಿಯೊಂದು ಸಮಸ್ಯೆಗೆ ಕೂಡ ಸ್ಪಂದಿಸಿದ್ದೇವೆ. ಅದನ್ನು ಬಗೆಹರಿಸಲು ಪ್ರಯತ್ನಿಸಿದ್ದೇವೆ. ನೆಟ್ ವರ್ಕಿಂಗ್ ಸೇರಿದಂತೆ ಎಲ್ಲ ಕ್ಲಿಷ್ಟ ಸಮಸ್ಯೆಗಳತ್ತ ಗಮನ ಹರಿಸಿದ್ದೇವೆ ಎನ್ನುತ್ತಾರೆ ಹರ್ಷಲ್. ತಂತ್ರಜ್ಞಾನದ ಬಗ್ಗೆ ಇನ್ನಷ್ಟು ಮಾಹಿತಿ ನೀಡಿರುವ ಅವರು ಹಡೋಪ್, ಸ್ಟ್ರೋಮ್, ನೆಟ್ಟಿ, ಕ್ಯಾತ್ಸಂದ್ರ, ಊಜಿ, ಕ್ಯೂಸ್ ಹೀಗೆ ಪಟ್ಟಿಯನ್ನೇ ನೀಡುತ್ತಾರೆ.. ಎಲ್ಲಕ್ಕಿಂತ ಮುಖ್ಯವಾಗಿ ವೈಯಕ್ತಿಕ ಖಾಸಗಿತನಕ್ಕೆ ಯಾವುದೇ ಧಕ್ಕೆ ಬರದಂತೆ ಎಚ್ಚರವಹಿಸಲಾಗಿದೆ ಎಂದು ಸ್ಪಷ್ಟ ಶಬ್ದಗಳಲ್ಲಿ ಹೇಳಿದ್ದಾರೆ.

ಇದು ಟೀಂ ವರ್ಕ್..

ತಂಡದ ಪ್ರತಿಯೊಬ್ಬ ಸದಸ್ಯರು ಅತೀ ಉತ್ಸಾಹದಿಂದ ಸಂಸ್ಥೆಯ ಅಭಿವೃದ್ದಿಗೆ ಕೊಡುಗೆ ನೀಡಿದ್ದಾರೆ. ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೊಸ ಚಿಂತನೆಗಳಿಗೆ ಕಾರಣಕರ್ತರಾಗಿದ್ದಾರೆ. ಇಲ್ಲಿ ಸ್ವಾತಂತ್ರ್ಯ ಕೂಡ ಇದೆ. ಎನ್ನುತ್ತಾರೆ ತಮ್ಮ ಸಹೋದ್ಯೋಗಿಗಳ ಬಗ್ಗೆ ಮೆಚ್ಚುಗೆಯ ಮಾತನ್ನಾಡುತ್ತಿದ್ದಾರೆ ಹರ್ಷಲ್. ಜಾಗತಿಕ ಪೈಪೋಟಿ ಅದರಲ್ಲೂ ವಿಶ್ಲೇಷಣೆ ಕ್ಷೇತ್ರದ ಬಗ್ಗೆ ಮಾಹಿತಿ ನೀಡಿದ ಹರ್ಷಲ್ ಅಮೆರಿಕದಲ್ಲಿ ಈಯುಕ್ಲಿಡ್, ನೋಮಿ, ರಿಟೈಲ್ ನೆಕ್ಟ್ ಜೊತೆ ಪೈಪೋಟಿ ಇದೆ ಎಂದು ಮಾಹಿತಿ ನೀಡಿದರು.ತಂತ್ರಜ್ಞಾನದ ಬಗ್ಗ ಹೇಳುವುದಾದರೆ. ಗೂಗಲ್, ಆಪಲ್, ನೋಕಿಯಾ ನಮ್ಮ ಪ್ರತಿಸ್ಪರ್ಧಿಗಳು ಎನ್ನುತ್ತಾರೆ ಹರ್ಷಲ್. ಭಾರತದಲ್ಲಿ ಇದುವರೆಗೆ ಇತರ ಸಂಸ್ಥೆಗಳಿಂದ ಪೈಪೋಟಿ ಎದುರಾಗಿಲ್ಲ . ಇದು ಹರ್ಷಲ್ ಅವರ ವಿನಯದ ನುಡಿ.

ಇದು ಮೇಕಿಂಗ್ ಇನ್ ಇಂಡಿಯಾದ ಕಲ್ಪನೆಯ ಕೂಸು. ಜಾಗತಿಕ ಮಾರುಕಟ್ಟೆಗೆ ಭಾರತದ ಉತ್ಪನ್ನದ ಕೊಡುಗೆ. ವಿಮಾನ ನಿಲ್ದಾಣದಲ್ಲಿರುವ ಅಂಗಡಿಗಳಿರಬಹುದು, ಸಾರ್ವಜನಿಕ ಸ್ಥಳಗಳಾಗಿರಬಹುದು , ಅಥವಾ ವೈವಿಧ್ಯಯಮಯವಾದ ಮಾರುಕಟ್ಟೆ ಪ್ರದೇಶವಾಗಿರಬಹುದು. ಪ್ರತಿಯೊಬ್ಬರಿಗೂ ತಮ್ಮ ಬಳಕೆದಾರನ ಅಥವಾ ಗ್ರಾಹಕನ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದ್ದೇ ಇರುತ್ತದೆ. ಹಿಂದೆ ಸಣ್ಣ ಸಣ್ಣ ಊರುಗಳಿದ್ದಾಗ ಅಲ್ಲಿಯ ಅಂಗಡಿ ಮಾಲಿಕನಿಗೆ ತನ್ನ ಅಂಗಡಿಗೆ ಬರುವ ಪ್ರತಿಯೊಬ್ಬರ ಬಗ್ಗೆ ಮಾಹಿತಿ ಇರುತ್ತಿತ್ತು. ಆದರೆ ಆ ಊರುಗಳ ಜಾಗದಲ್ಲಿ ಬೃಹತ್ ನಗರಗಳು ತಲೆ ಎತ್ತಿವೆ.. ಬಳಕೆದಾರರ ಸಂಖ್ಯೆ ಅಗಣಿತವಾಗಿದೆ. ಈ ಸಂದರ್ಭದಲ್ಲಿ ಮತ್ತೆ ಗ್ರಾಹಕರ ಬಗ್ಗೆ ತಿಳಿದುಕೊಳ್ಳುವ ಮನಸ್ಸಾಗುತ್ತಿದೆ. ಅವರ ಮನೋಸ್ಥಿತಿ ಅರಿಯುವ ಯತ್ನ ನಡೆಯುತ್ತಿದೆ. ಇದಕ್ಕೆಲ್ಲ ರೇಡಿಯೋಲೋಕಸ್ ಉತ್ತರ ನೀಡುತ್ತದೆ...

ಲೇಖಕರು: ಇಮ್ಯಾನುವಲ್​​ ಅಂಬರ್ಬರ್​​

ಅನುವಾದಕರು: ಎಸ್​​.ಡಿ