ಭಾರತದ ಮೊತ್ತಮೊದಲ ಪುಸ್ತಕಗಳ ಗ್ರಾಮ- ವೇಲ್ಸ್​​ಟೌನ್ ಸಾಧನೆ ಸರಿಗಟ್ಟಿದ ಮಹಾರಾಷ್ಟ್ರದ ಭಿಲಾರ್

ಟೀಮ್​ ವೈ.ಎಸ್​.ಕನ್ನಡ

1

ಭಿಲಾರ್, ಮಹಾರಾಷ್ಟ್ರದ ಸತಾರ ಜಿಲ್ಲೆಯ ಪುಟ್ಟ ಗ್ರಾಮ. ಆದ್ರೆ ಭಿಲಾರ್​ ಹೊಸ ಇತಿಹಾಸ ಬರೆದಿದೆ. ಭಾರತದ ಮೊತ್ತಮೊದಲ "ಪುಸ್ತಕಗಳ ಗ್ರಾಮ" ಅನ್ನುವ ಖ್ಯಾತಿ ಪಡೆದುಕೊಂಡಿದೆ. ಬ್ರಿಟನ್​ನ  ವೇಲ್ಸ್ ಟೌನ್, ಪುಸ್ತಕಗಳ ಅಂಗಡಿ ಮತ್ತು ಸಾಹಿತ್ಯಗಳ ಉತ್ಸವದ ನಾಡು ಅನ್ನುವ ಖ್ಯಾತಿ ಪಡೆದುಕೊಂಡಿದೆ. ಇದನ್ನೇ ಪ್ರೇರಣೆಯಾಗಿಟ್ಟುಕೊಂಡು ಭಿಲಾರ್​, ದೇಶದ ಮೊತ್ತ ಮೊದಲ ಪುಸ್ತಕಗಳ ಗ್ರಾಮವಾಗಿ ಬೆಳೆದುಕೊಂಡಿದೆ. ಮರಾಠಿಯಲ್ಲಿ ಭಿಲಾರ್ ಅನ್ನು "ಪುಸ್ತಕಾಂಚೆ ಗಾಂವ್" ಎಂದು ಕರೆಯಲಾಗುತ್ತಿದೆ. ಸರಕಾರದ ನೆರವಿನಿಂದ ಭಿಲಾರ್ ಗ್ರಾಮ ಈ ಖ್ಯಾತಿಗೆ ಪಾತ್ರವಾಗಿದೆ. ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಹಬ್ಬಿಕೊಂಡಿರುವ ಭಿಲಾರ್ ಗ್ರಾಮ ಪ್ರಸಿದ್ಧ ಗಿರಿಧಾಮ "ಪಂಚಗಣಿ"ಯಿಂದ ಕೇವಲ 8 ಕಿಲೋಮೀಟರ್ ದೂರದಲ್ಲಿದೆ.

ಭಿಲಾರ್ ಗ್ರಾಮವನ್ನು ಪುಸ್ತಕಗಳ ಗ್ರಾಮವನ್ನಾಗಿ ಮಾಡಲು ಮಹಾರಾಷ್ಟ್ರ ಸರಕಾರ ಕೂಡ ಸಾಕಷ್ಟು ಶ್ರಮವಹಿಸಿತ್ತು. ಮಹಾರಾಷ್ಟ್ರ ಶಿಕ್ಷಣ ಸಚಿವ ವಿನೋದ್ ತವಾಡೆ ಮತ್ತು ಮರಾಠಿ ಭಾಷಾ ವಿಭಾಗ ಸಾಕಷ್ಟು ಕೆಲಸ ಮಾಡಿತ್ತು. ಸರಕಾರದ ಬೇಡಿಕೆಯ ಮೇರೆಗೆ ಗ್ರಾಮದಲ್ಲಿ ಸುಮಾರು 75ಕ್ಕೂ ಅಧಿಕ ಕಲಾವಿದರೂ ಪೈಂಟಿಂಗ್ ಮೂಲಕ ಗ್ರಾಮವನ್ನು ಆಕರ್ಷಕವಾಗಿ ಕಾಣುವಂತೆ ಮಾಡಿದ್ದಾರೆ. ಈ ಫೈಂಟರ್​ಗಳು ಗ್ರಾಮದಲ್ಲಿ ಲಭ್ಯವಿರುವ ಪುಸ್ತಕಗಳ ಹೆಸರು ಮತ್ತು ಅದರ ವಿಭಾಗವನ್ನು ಗ್ರಾಫಿಕ್ಸ್ ಸೇರಿದಂತೆ ಇತರೆ ವಸ್ತುಗಳನ್ನು ಸೇರಿಸಿಕೊಂಡು ಓದುಗರ ಮನಮುಟ್ಟುವಂತೆ ಮಾಡಿದ್ದಾರೆ. ಈ ಗ್ರಾಮದಲ್ಲಿ ಸುಮಾರು 25ಕ್ಕೂ ಹೆಚ್ಚು ಸ್ಥಳಗಳನ್ನು ಪುಸ್ತಕಗಳನ್ನು ಓದುವ ಸ್ಥಳವಾಗಿ ಮಾರ್ಪಾಡು ಮಾಡಲಾಗಿದೆ. ಇತಿಹಾಸ, ಕವನ ಸಂಕಲನ, ಸಾಹಿತ್ಯ, ಜೀವನ ಚರಿತ್ರೆ ಸೇರಿದಂತೆ ಎಲ್ಲಾ ವಿಭಾಗಗಳ ಪುಸ್ತಕಗಳು ಈ ಗ್ರಾಮದಲ್ಲಿವೆ. ಓದುಗರು ಬಯಸುವ ಪುಸ್ತಕಗಳ ವ್ಯವಸ್ಥೆ ಮಾಡಿಕೊಡುವ ಪ್ರಯತ್ನ ನಡೆಯುತ್ತಿದೆ.

“ ಈ ಕಲಾವಿದರು ಸ್ವಯಂಪ್ರೇರಣೆಯಿಂದ ನಮ್ಮ ಆಮಂತ್ರವಣವನ್ನು ಸ್ವೀಕರಿಸಿ ಮಹಾಬಲೇಶ್ವರದಿಂದ ಬಸ್ ಹತ್ತಿ ಭಿಲಾರ್ ಗ್ರಾಮಕ್ಕೆ ಬಂದಿದ್ದರು. ಇಲ್ಲಿನ ಗೋಡೆಗಳಿಗೆ ತಮ್ಮ ಕಲ್ಪನೆಯ ಬಣ್ಣ ಹಚ್ಚಿ ಅದನ್ನು ಆಕರ್ಷಕವಾಗಿಸಿದ್ದಾರೆ. ಇದು ಎಲ್ಲರ ಮನ ಗೆದ್ದಿದೆ. ”
ವಿನೋದ್ ತವಾಡೆ, ಶಿಕ್ಷಣ ಸಚಿವ, ಮಹಾರಾಷ್ಟ್ರ ಸರಕಾರ

ಭಿಲಾರ್ ಗ್ರಾಮದಲ್ಲಿ ಮರಾಠಿ ಭಾಷೆಯ ಸುಮಾರು 15000ಕ್ಕೂ ಅಧಿಕ ಪುಸ್ತಕಗಳು ಲಭ್ಯವಿದೆ. ಓದುಗರಿಗೆ ಅನುಕೂಲವಾಗಲೆಂದು ಕುರ್ಚಿಗಳು, ಟೇಬಲ್​ಗಳು ಮತ್ತು ಛತ್ರಿಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಓದುಗರನ್ನು ಪ್ರೋತ್ಸಾಹಿಸುವ ಕಾರ್ಯಗಳು ಕೂಡ ನಡೆಯುತ್ತಿವೆ.

“ ಭಾಷೆ ಮತ್ತು ಸಾಹಿತ್ಯದ ಅಭಿರುಚಿ ಇರುವ ಓದುಗರಿಗೆ ಉಪಯೋಗವಾಗಲೆಂದು ಈ ವ್ಯವಸ್ಥೆ ಮಾಡಿಕೊಡಲಾಗಿದೆ. ಓದುಗರಿಗೆ ಈ ಪುಸ್ತಕಗಳು ಉಚಿತವಾಗಿ ಸಿಗಲಿದೆ. ಅಷ್ಟೇ ಅಲ್ಲ ಪುಸ್ತಕಗಳನ್ನು ಜೋಪಾನವಾಗಿ ಇಡಲು ಕೂಡ ವ್ಯವಸ್ಥೆಗಳನ್ನು ಮಾಡಲಾಗಿದೆ”

ಭಾರತದ ಉಳಿದ ಗ್ರಾಮಗಳಿಗೆ ಹೋಲಿಸಿದರೆ ಭಿಲಾರ್ ಗ್ರಾಮದಲ್ಲಿ ಸ್ವಲ್ಪ ಹೆಚ್ಚಾಗಿ ಪುಸ್ತಕ ಓದುವ ಹವ್ಯಾಸವಿದೆ. ಸರಾಸರಿಯಾಗಿ ಪ್ರತಿಯೊಬ್ಬರು ಕೂಡ ಪುಸ್ತಕ ಓದುವ ಹವ್ಯಾಸವನ್ನು ಇಟ್ಟುಕೊಂಡಿದ್ದಾರೆ. ಸದ್ಯಕ್ಕೆ ಭಿಲಾರ್​ನಲ್ಲಿ ಮರಾಠಿ ಭಾಷೆಯ ಪುಸ್ತಗಳು ಮಾತ್ರ ಲಭ್ಯವಿದೆ. ಮುಂದಿನ ದಿನಗಳಲ್ಲಿ ಇಂಗ್ಲೀಷ್ ಮತ್ತು ಹಿಂದಿ ಪುಸ್ತಕಗಳು ಕೂಡ ಲಭ್ಯವಾಗಲಿದೆ.

ಇದನ್ನು ಓದಿ: ಡಿಸ್ನಿಲ್ಯಾಂಡ್ ಮಾದರಿಯ ಪಾರ್ಕ್​ಗೆ ಚಿಂತನೆ- ಬೆಂಗಳೂರಿನಲ್ಲಿ ತಲೆ ಎತ್ತಲಿದೆ ವಂಡರ್​ಲ್ಯಾಂಡ್

ಭಿಲಾರ್ ಗ್ರಾಮವನ್ನು ಪುಸ್ತಕಗಳನ್ನು ಗ್ರಾಮವನ್ನಾಗಿಸುವ ಹಿಂದೆ ಮರಾಠಿ ಭಾಷೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಯ ಕನಸು ಕೂಡ ಇದೆ. ಭವಿಷ್ಯದ ಯೋಚನೆಗಳು ಏನೇ ಇರಬಹುದು. ಆದ್ರೆ ಒಂದು ಇಡೀ ಗ್ರಾಮವನ್ನು ಪುಸ್ತಗಳಿಂದ ಸಿಂಗರಿಸುವುದು ಕಷ್ಟದ ಮಾತೇ ಸರಿ. ಆದ್ರೆ ಭಿಲಾರ್ ಯಾವುದು ಅಸಾಧ್ಯವೋ ಅದನ್ನು ಮಾಡಿ ತೋರಿಸಿದೆ. 

ಇದನ್ನು ಓದಿ:

1. ಪತ್ರಕರ್ತನ ಸ್ಟಾರ್ಟ್​ಅಪ್ ಉದ್ಯಮ- "ನದಿಮನೆ"ಯಲ್ಲಿ ಪ್ರವಾಸಿಗರಿಗೆ ಸಿಗುತ್ತೆ ಸಂಭ್ರಮ

2. ಕೋಟಿಗಟ್ಟಲೆ ವ್ಯವಹಾರ ನಡೆಸಲು ಲಕ್ಷಗಟ್ಟಲೆ ಸಂಬಳ ಬರುವ ಕೆಲಸ ಬಿಟ್ಟ ಸಚಿನ್..!

3. ಮೆಕ್ ಡೊನಾಲ್ಡ್ಸ್​​, ಕೆಎಫ್​ಸಿಗೂ ಭಯ ಹುಟ್ಟಿಸಿದೆ 'ಪತಂಜಲಿ'..! 

Related Stories