ಮಕ್ಕಳಿಗೆ ‘ಗುಡ್ ಟಚ್’ ‘ಬ್ಯಾಡ್ ಟಚ್’ನ ವ್ಯತ್ಯಾಸ ತಿಳಿಸುವ ‘ರೆಡ್ ಬ್ರಿಗೇಡ್'

ಟೀಮ್​ ವೈ.ಎಸ್​. ಕನ್ನಡ

0


30 ಸದಸ್ಯರನ್ನು ಹೊಂದಿರುವ ‘ರೆಡ್ ಬ್ರಿಗೇಡ್’..

ಲಖನೌ ಮತ್ತು ವಾರಣಾಸಿಯಲ್ಲಿರುವ ‘ರೆಡ್ ಬ್ರಿಗೇಡ್’..

34 ಸಾವಿರ ಹುಡುಗಿಯರಿಗೆ ಸೆಲ್ಫ್ ಡಿಫೆನ್ಸ್ ಟ್ರೈನಿಂಗ್ ನೀಡಿದ್ದಾರೆ..

ಮಕ್ಕಳಿಗೆ ‘ಗುಡ್ ಟಚ್’ ‘ಬ್ಯಾಡ್ ಟಚ್’ನ ವ್ಯತ್ಯಾಸ ತಿಳಿಸುತ್ತದೆ..

ಒಂದು ಹುಡುಗಿ ಯಾರು ತನ್ನ ಉತ್ತಮ ಸ್ನೇಹಿತ ಎಂದು ನಂಬಿದ್ಲೋ ಅವನೇ ಅವಳ ಮೇಲೆ ಅತ್ಯಾಚಾರವೆಸಗಿದ. ಆ ಹುಡುಗಿ ಆ ನೋವಿನಿಂದ ಹೊರಬರಲು ಅದೆಷ್ಟೂ ದಿನಗಳು ಹಿಡಿದ್ವು. ಆಗ ಒಬ್ಬ ಹೋರಾಟಗಾರ್ತಿ ಮಹಿಳೆಯ ಸಮಾಜ ಮುಂದೆ ಬಂದ್ಲು ಅವರೇ ಉಷಾ ವಿಶ್ವಕರ್ಮ. ವಿಶ್ವದೆಲ್ಲೆಡೆ ಕಾಮುಕರು ಹುಡುಗಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಾರೆ. ಇಂತಹದನ್ನು ತಡೆಗಟ್ಟುವ ಸಲುವಾಗಿಯೇ ಉಷಾ ‘ರೆಡ್ ಬ್ರಿಗೇಡ್’ ಕಟ್ಟಿದ್ದು ಬಾಲಕಿಯರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಹುಡುಗಿಯರಿಗೆ ಸೆಲ್ಫ್ ಡಿಫೆನ್ಸ್ ತರಬೇತಿ ನೀಡುತ್ತಿದ್ದಾರೆ. ಅವಶ್ಯಕತೆ ಬಿದ್ದರೆ ಕಾಮುಕರಿಗೆ ಏಟಿನಿಂದ ಬುದ್ದಿ ಕಲಿಸಲು ‘ರೆಡ್ ಬ್ರಿಗೆಡ್’ ಸನ್ನದ್ದವಾಗಿದೆ. ಹಾಗಾಗಿ ವಾರಣಾಸಿಯ ಬಿದಿಯಲ್ಲಿ ‘ರೆಡ್ ಬ್ರಿಗೆಡ್’ನ ಹುಡುಗಿಯರು ಬಂದ್ರೆ ಸಾಕೂ ಬೀದಿ ಕಾಮಣ್ಣರು ಮನೆ ಸೇರಿಕೊಳ್ತಾರೆ. ಇದುವರೆಗೂ 34 ಸಾವಿರ ಹುಡುಗಿಯರಿಗೆ ಸೆಲ್ಫ್ ಡಿಫೆನ್ಸ್ ತರಬೇತಿ ನೀಡಿದ್ದಾರೆ.

ಉಷಾ ವಿಶ್ವಕರ್ಮ ಉತ್ತರಪ್ರದೇಶದ ಸಣ್ಣ ಗ್ರಾಮದಲ್ಲಿ ಜನಿಸಿದ್ರು. ಅವರ ವ್ಯಾಸಾಂಗವೆಲ್ಲ ಲಖನೌದಲ್ಲಿ ನಡೆಯಿತು. ಮನೆಯಲ್ಲಿ ಬಡತನ ಇದ್ದಿದರಿಂದ ಅವರಿಗೆ ಪುಸ್ತಕ ಖರೀದಿಸುವಷ್ಟು ಅನುಕೂಲವಿರಲಿಲ್ಲ. ಕೇವಲ 10ನೇ ತರಗತಿಯವರೆಗೆ ಮಾತ್ರ ಅವರಿಗೆ ಓದಲು ಸಾಧ್ಯವಾಯ್ತು. ಆದರೆ ಅವರಿಗೆ ಗುಡಿಸಲಿನಲ್ಲಿರುವ ಮಕ್ಕಳ ಬಗ್ಗೆ ಅಪಾರ ಪ್ರೀತಿಯಿತ್ತು. ಹಾಗಾಗಿ ಅವರು ಅಲ್ಲಿರುವ ಬಡಮಕ್ಕಳಿಗೆ ಪಾಠ ಮಾಡುವ ಕೆಲಸ ಆರಂಭಿಸಿದ್ರು. ಅವರ ಬಳಿ ಓದಲು ಬರುತ್ತಿದ 11 ವರ್ಷದ ಬಾಲಕಿಯೊಬ್ಬಳು ಅವಳ ಚಿಕ್ಕಪ್ಪನಿಂದ ಅತ್ಯಾಚಾರಕ್ಕೆ ಒಳಗಾದ ಘಟನೆ ಅವರಿಗೆ ತಿಳಿಯಿತು. ಆದರೆ ಬಾಲಕಿಯ ಮನೆಯವರು ಅದು ಮನೆಯ ವಿಷಯವೆಂದು ಪೋಲೀಸ್ರಿಗೆ ದೂರು ಸಹ ನೀಡಲಿಲ್ಲ. ಇಂತಹ ವಿಷಯಗಳನ್ನು ಕೇವಲ ಟಿವಿ, ಪೇಪರ್​ನಲ್ಲಿ ನೋಡಿ ಓದಿ ತಿಳಿಯುತ್ತಿದ್ದ ಉಷಾಗೆ, ಕಣ್ಣಾರೆ ಕಂಡು ಒಂದು ಕ್ಷಣ ದಿಗ್ಬ್ರಾಂತರಾದ್ರು.

ಈ ಘಟನೆಯಾಗಿ ಹೆಚ್ಚು ದಿನಗಳಾಗಿರಲಿಲ್ಲ, ಉಷಾ ತನ್ನ ಕಷ್ಟ-ಸುಖ ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದ ಗೆಳೆಯನೇ ಅವರ ಮೇಲೆ ಬಲತ್ಕಾರ ಮಾಡಿಬಿಟ್ಟ. ಈ ಘಟನೆಯಿಂದ ಉಷಾ ಮಾನಸಿಕವಾಗಿ ಕುಸಿದು ಹೋದ್ರು. ಹಲವು ದಿನಗಳ ಕಾಲ ಕರಾಳ ಮೌನಕ್ಕೆ ಶರಣಾದ್ರು. ಅವರ ಮನೆಯವರು ಸಹ ಅವರನ್ನು ಮಾನಸಿಕ ಚಿಕಿತ್ಸಾ ಕೇಂದ್ರಕ್ಕೆ ತೋರಿಸುವ ನಿರ್ಧಾರ ಮಾಡಿದ್ರು. ಈ ಹಿನ್ನಲೆ ಅವರ ಶಿಕ್ಷಣ ಕೂಡ ಅರ್ಧಕ್ಕೆ ನಿಂತುಹೋಯ್ತು. ಇದೇ ವೇಳೆ ಅವರ ಕೆಲ ಗೆಳೆಯರು ಅವರಿಗೆ ಸತತ ಕೌನ್ಸಿಲಿಂಗ್ ಮಾಡುತ್ತಿದ್ರು.

ಸಮಯ ಕಳೆದಂತೆ ಉಷಾ ಸಾಮಾನ್ಯರಂತೆ ಬದುಕಲು ಆರಂಭಿಸಿದ್ರು. ಆಗಲೇ ಅವರು ಈ ವಿಷಯದ ಬಗ್ಗೆ ಯೋಚಿಸಲು ಆರಂಭಿಸಿದ್ರು. "ನನ್ನನ್ನು ನಾನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಮೇಲೆ ಈ ಶಿಕ್ಷಣವೆಲ್ಲಾ ಕಲಿತು ಏನೂ ಪ್ರಯೋಜನವೆಂದು ತಮ್ಮಷ್ಟಕ್ಕೆ ತಾವೇ ಪ್ರಶ್ನಿಸಿಕೊಂಡ್ರು". ಇದಕ್ಕೆಲ್ಲ ಒಂದು ಕೊನೆ ಹಾಡಬೇಕೆಂದು ಅವರಷ್ಟಕ್ಕೆ ಅವರೇ ಧೃಡ ಸಂಕಲ್ಪ ಮಾಡಿದ್ರು. ಆಗ ಒಂದು ಮಹಿಳೆಯರ ಕಾರ್ಯಗಾರದಲ್ಲಿ ಇವರು ಭಾಗವಹಿಸಿದ್ರು. ಅಲ್ಲಿ ಉತ್ತರಪ್ರದೇಶದ 4-5 ಜಿಲ್ಲೆಯ ಮಹಿಳೆಯರು ಆಗಮಿಸಿದ್ರು. ಅಲ್ಲಿ ಬಂದಿದ್ದ 55 ಮಹಿಳೆಯರಲ್ಲಿ 53 ಮಹಿಳೆಯರು, ಅವರ ಅಪ್ಪ, ಚಿಕ್ಕಪ್ಪ, ಸಹೋದರರಿಂದಲೇ ಬಲತ್ಕಾರ, ಲೈಂಗಿಕ ಶೋಷಣೆ, ದೈಹಿಕ ಹಿಂಸೆಗೆ ಒಳಗಾಗಿದ್ದವರು. ಇದನೆಲ್ಲಾ ಕೇಳಿ ಉಷಾಗೆ ಮತ್ತಷ್ಟು ಬೇಸರವಾಯ್ತು. ಆಗಲೇ ಈ 53 ಹುಡುಗಿಯರೊಂದಿಗೆ ಸೇರಿ, ಇಂತಹ ಕೆಟ್ಟ ವ್ಯವಸ್ಥೆ ವಿರುದ್ಧ ಹೋರಾಡಲು ಏನಾದ್ರು ಒಂದು ಮಾಡಬೇಕೆಂದು ನಿರ್ಧರಿಸಿದ್ರು.

ಲಖನೌನ ಮಡಿಯಾಂವ ಕ್ಷೇತ್ರದಲ್ಲಿರುವ ಹುಡುಗಿಯರು ದಿನಾಲು ಕಾಮುಕರ ಕೆಂಗಣ್ಣಿಗೆ ಗುರಿಯಾಗಬೇಕಿತ್ತು. ಅವರ ಜಡೆ ಎಳೆಯುವುದು, ಅವರ ಅಂಗಾಂಗಗಳನ್ನು ಮುಟ್ಟುವುದು, ಅಸಭ್ಯವಾಗಿ ಮಾತಾನಾಡುವುದು, ಇದೆಲ್ಲವೂ ಇಲ್ಲಿ ದಿನನಿತ್ಯದ ಕೆಲಸವಾಗಿತ್ತು. ಇದನ್ನು ವಿರೋಧಿಸುವ ಸಲುವಾಗಿ ಉಷಾ 15 ಹುಡುಗಿಯರ ಜೊತೆಗೂಡಿ ಒಂದು ಸಂಘಟನೆಯನ್ನು ಮಾಡಿಕೊಂಡ್ರು. ಯಾರು ಈ ರೀತಿ ಮಾಡುತ್ತಾರೋ ಅವರ ಮನೆಗೆ ಹೋಗಿ ಈ ಬಗ್ಗೆ ದೂರು ನೀಡುವುದು. ಅವರ ಮಗನನ್ನು ಸುಧಾರಿಸುವಂತೆ ಹೇಳುವ ಕೆಲಸ ಮಾಡುತ್ತಿದ್ರು. ಅಷ್ಟಕ್ಕೂ ನಿಲ್ಲದೆ ಹೋದಲ್ಲಿ ಅವರ ವಿರುದ್ಧ ಪೋಲೀಸ್ ಠಾಣೆಯಲ್ಲಿ ದೂರು ನೀಡುತ್ತಿದ್ರು. ಇದು ಹೀಗೆ 6-7 ತಿಂಗಳ ಕಾಲ ನಡೆಯಿತು. ಆದರೆ ಅದೊಂದು ದಿನ ಅವರ ಗುಂಪಿನ ಓರ್ವ ಸದಸ್ಯೆ ಕಾಮುಕನಿಗೆ ಮನಬಂದತೆ ಥಳಿಸಿ ಬಿಟ್ಟಿದ್ಳು. ತಮ್ಮ ಗುಂಪಿನೊಂದಿಗೆ ಹೋಗಿ ಚೆನ್ನಾಗಿ ಏಟು ಕೊಟ್ಟಿದ್ರು. ಇದರಿಂದ ಕೋಪಗೊಂಡ ಅವರ ಮೆನೆಯವರು, ಉಷಾ ವಿಶ್ವಕರ್ಮಗೆ ಮನಬಂದಂತೆ ಬೈದು ಬಿಟ್ರು. ಯಾವಾಗ ಅವರ ಮಗನ ತಪ್ಪು ಎಂದು ತಿಳಿಯಿತೋ, ಆಗ ಅವರ ಕುಟುಂಬದವರೇ ಇರಸು ಮುರುಸುಗೊಂಡ್ರು.

ಈ ಘಟನೆಯ ನಂತರ ಈ ಗುಂಪಿನ ಆತ್ಮವಿಶ್ವಾಸ ಹೆಚ್ಚಿತು. ಯಾವಾಗ ಯಾರಾದ್ರು ಹುಡುಗರು ಹುಡುಗೀಯರನ್ನು ಚೇಡಿಸಿದ್ರೆ, ಅವರಿಗೆ ಮಾತಿನಲ್ಲಿ ಬುದ್ದಿ ಕಲಿಸುವ ಕೆಲಸ ಮಾಡುತ್ತಿದ್ರು. ಅದಕ್ಕೂ ಅವರು ಮಣಿಯದೆ ಹಾಗೇ ಕೆಟ್ಟ ಕೆಲಸ ಮುಂದುವರೆಸಿದ್ರೆ. ಸರಿಯಾಗಿ ದಂಡಿಸುವ ಮೂಲಕ ಅವರನ್ನು ಸರಿಪಡಿಸುತ್ತಿದ್ರು. ಇದರಿಂದ ಹುಡುಗರಿಗೂ ಕೂಡ ಭಯ ಶುರುವಾಯ್ತು. ಈ ಗುಂಪು, ಕೆಂಪು ಮತ್ತು ಕಪ್ಪು ಬಣ್ಣದ ಸಮವಸ್ತ್ರ ಧರಿಸಲು ನಿರ್ಧರಿಸಿದ್ರು. ಏಕಂದ್ರೆ ಈ ಬಣ್ಣ ಸಂಘರ್ಷ, ಹೋರಾಟದ ಪ್ರತೀಕವಾಗಿತ್ತು. ಇವರು ಇದೆ ಬಟ್ಟೆಯಲ್ಲಿ ಓಡಾಡುತ್ತಿದ್ರು. ಅದಕ್ಕೆ ಜನರು ಇವರನ್ನು ‘ರೆಡ್ ಬ್ರಿಗೇಡ್’ ಎಂದು ಕರೆಯಲು ಆರಂಭಿಸಿದ್ರು. ಇವರ ಸಂಘಟನೆಗೆ ಯಾವುದೇ ಹೆಸರಿರಲಿಲ್ಲ. ಹಾಗಾಗಿ ಅವರಿಗೂ ಈ ಹೆಸರು ಇಷ್ಟವಾಯ್ತು. ಹಾಗಾಗಿ ತಮ್ಮ ಸಂಘಟನೆಗೆ ಯಾವುದೇ ಹೆಸರಿಲ್ಲದ ಕಾರಣ ಅವರು ಇದೇ ಹೆಸರನ್ನು ಇಟ್ಟುಕೊಂಡ್ರು.

"ರೆಡ್ ಬ್ರಿಗೇಡ್ ಆರಂಭದಲ್ಲಿ ನಮ್ಮ ಸುರಕ್ಷತೆಗಾಗಿ ಆರಂಭಿಸಿದ್ವಿ. ಆದರೆ ಸಮಯ ಕಳೆದಂತೆಲ್ಲ ನಮ್ಮ ಜವಾಬ್ದಾರಿ ಹೆಚ್ಚುತ್ತ ಸಾಗಿತು. ನಾವು ಕೂಡ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿಕೊಂಡ್ವಿ." ಎಂತಾರೆ ಉಷಾ ವಿಶ್ವಕರ್ಮ.

‘ರೆಡ್ ಬ್ರಿಗೇಡ್’ ಆರಂಭಿಸಿದ್ದಾಗ, ಗಲ್ಲಿ ಗಲ್ಲಿ ಸುತ್ತಿ, ಅಲ್ಲಿರುವ ಕಾಮುಕರಿಗೆ ಬುದ್ದಿ ಕಲಿಸುವುದು ಅವರ ಧ್ಯೇಯವಾಗಿತ್ತು. ಮಹಿಳೆಯರ ಮೇಲಿನ ಶೋಷಣೆಯನ್ನು ಎಲ್ಲೆಡೆ ವಿರೋಧಿಸುತ್ತಿದ್ರು. ಇಂದಿಗೂ ನಿರ್ಭಯ ಅವರ ನೆನಪಿನಲ್ಲಿ ಪ್ರತಿ ತಿಂಗಳು 29ನೇ ತಾರೀಖು ಮಹಿಳೆಯರ ವಿರುದ್ಧ ಅತ್ಯಾಚಾರದ ವಿರೋಧವನ್ನು ಮಾಡ್ತಾರೆ. ಬಲತ್ಕಾರಕ್ಕೆ ಬಲಿಯಾದವರು ಅಥವಾ ಆ್ಯಸಿಡ್ ದಾಳಿಗೆ ಬಲಿಯಾದ ಮಹಿಳೆಯರಿಗೆ ಸರ್ಕಾರದಿಂದ ಮಾಸಾಶನ ಸಿಗುವಂತೆ ‘ರೆಡ್ಬ್ರಿಗೇಡ್’ ಮಾಡಿದೆ. ಅವರ ಹೋರಾಟದ ಫಲವಾಗಿಯೇ ಇಂದು ಲಖನೌನ ಪ್ರತಿ ಬೀದಿಯಲ್ಲಿ ಸಿಸಿಟಿವಿ ಅಳವಡಿಸಲಾಗಿದೆ.

ರೆಡ್ಬ್ರಿಗೇಡ್ ಸದ್ಯ ಲಖನೌ ಮತ್ತು ವಾರಣಾಸಿಯಲ್ಲಿ ಕೆಲಸ ಮಾಡುತ್ತಿದೆ. ಎರಡು ಸ್ಥಳದಲ್ಲಿ 30-30 ಮಹಿಳೆಯ ತಂಡ ಕೆಲಸ ಮಾಡುತ್ತಿದೆ. ಈ ಗುಂಪಿನಲ್ಲಿರುವ ಬಹುತೇಕ ಮಹಿಳೆಯರು ಬಡವರು. ರೇಪ್ ಸರ್ವೈವರ್ ಆಗಿದ್ದಾರೆ. ಇವರೊಂದಿಗೆ ವಿಶ್ವದೆಲ್ಲಡೆಯ 8 ಸಾವಿರ ಹುಡುಗಿಯರು ಕೈ ಜೋಡಿಸಿದ್ದಾರೆ. ಮಹಿಳೆಯರಿಗೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡ್ತಾರೆ. ಅದನ್ನು ಬಗೆಹರಿಸಲು ಪ್ರಯತ್ನ ಪಡ್ತಾರೆ. ಇಷ್ಟೇ ಅಲ್ಲ ಇಲ್ಲಿನ ಅನೇಕರಿಗೆ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಅಮೇರಿಕಾದಿಂದ ಬಂದ ತಜ್ಞ ಮಾರ್ಶಲ್ ಆರ್ಟ್ಸ್ ತಜ್ಞರಿಂದ ಟ್ರೈನಿಂಗ್ ನೀಡಿದ್ದಾರೆ. ಹಲವು ಕೌಶಲ್ಯಗಳನ್ನು ಅವರಿಗೆ ಕಲಿಸಿದ್ದಾರೆ. ಇದರ ಜೊತೆಗೆ ಸೆಲ್ಫ್ ಡಿಫೆನ್ಸ್ ಕಲಿತಿರುವ ತಂಡ ಅನೇಕರಿಗೆ ತರಬೇತಿ ನೀಡಿದೆ. ತಮ್ಮ ಮಾರ್ಶಲ್ ಆರ್ಟ್ಸ್ ಸ್ವಲ್ಪ ಮಾರ್ಪಾಡು ಮಾಡಿಕೊಂಡು ಕಲಿಯುತ್ತಿರುವ ಇವರು. ತಮ್ಮ ಉದ್ದೇಶದಲ್ಲಿ ಸಫಲರಾಗಿದ್ದಾರೆ.

ಸದ್ಯ ಇವರು ಒಂದು ವನ್ ಮಿಲಿಯನ್ ಎಂಬ ಮಿಶನ್​ನಲ್ಲಿ ಬ್ಯುಸಿಯಾಗಿದ್ದಾರೆ. ದೇಶಾದ್ಯಂತ 10 ಲಕ್ಷ ಹುಡುಗಿಯರಿಗೆ ಸೆಲ್ಪ್ ಡಿಫೆನ್ಸ್ ತರಬೇತಿ ನೀಡುವುದು ಇವರ ಗುರಿಯಾಗಿದೆ. ಕಳೆದ ಒಂದೂವರೆ ವರ್ಷದಲ್ಲಿ 34 ಸಾವಿರ ಹುಡುಗಿಯರಿಗೆ ಸೆಲ್ಫ್ ಡಿಫೆನ್ಸ್ ತರಬೇತಿ ನೀಡಿದ್ದಾರೆ. ಇದರೊಂದಿಗೆ ಮಹಿಳೆಯರ ಶಿಕ್ಷಣ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ‘ಗುಡ್ ಟಚ್’ ‘ಬ್ಯಾಡ್ ಟಚ್’ ಬಗ್ಗೆ ಅವರಿಗೆ ಅರಿವು ನೀಡುತ್ತಿದ್ದಾರೆ. "ಇಂದು 5 ವರ್ಷದ ಮಕ್ಕಳಿಂದ 11 ವಯಸ್ಸಿನ ಮಕ್ಕಳು ಹೆಚ್ಚು ಬಲತ್ಕಾರಕ್ಕೆ ಒಳಗಾಗುತ್ತಿದ್ದಾರೆ. ಯಾಕಂದ್ರೆ ಆ ಮಕ್ಕಳಿಗೆ ‘ಗುಡ್ ಟಚ್’ ಮತ್ತು ‘ಬ್ಯಾಡ್ ಟಚ್’ನ ಅಂತರ ಅವರಿಗೆ ತಿಳಿಯುತ್ತಿಲ್ಲ. ಹಾಗಾಗಿ ವರ್ಷದಲ್ಲಿ 10 ಸಾವಿರ ಮಕ್ಕಳಿಗೆ ಇಂತಹುದರ ಬಗ್ಗೆ ಅರಿವು ಮೂಡಿಸುವುದು ನಮ್ಮ ಯೋಜನೆಯಾಗಿದೆ. ಯುಪಿಯಲ್ಲಿ ಶೌಚಾಲಯದ ಸಮಸ್ಯೆ ಹೆಚ್ಚಿದೆ. ಹಾಗಾಗಿ ಹುಡುಗಿಯರ ಮೇಲೆ ಬಲತ್ಕಾರ ಪ್ರಕರಣಗಳು ಹೆಚ್ಚುತ್ತಿವೆಯೆಂದು" ಉಷಾ ವಿಶ್ವಕರ್ಮ ತಿಳಿಸುತ್ತಾರೆ. 'ಹಾಗಾಗಿ ನಾವು ಒಂದು ಯೋಜನೆ ಮಾಡಿದ್ದೇವೆ ಅದರಂತೆ, ಹೆಚ್ಚಿಗೆ ಶೌಚಾಲಯ ನಿರ್ಮಿಸುವುದು ಕೂಡ ಒಂದು" ಎಂತಾರೆ ಉಷಾ.


ಲೇಖಕರು: ಹರೀಶ್ ಬಿಶ್ತ್

ಅನುವಾದಕರು: ರವಿ.ಎಸ್

Related Stories

Stories by YourStory Kannada