"ಮನಿ" ಮಾಸ್ಟರ್ ಅಶ್ವಿನಿ 

ಟೀಮ್​ ವೈ.ಎಸ್​. ಕನ್ನಡ

2

ಆನ್​​ಲೈನ್ ಪೋರ್ಟಲ್​ಗಳು ಹೆಚ್ಚಾದಂತೆ, ಶಾಪಿಂಗ್ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಜನ ಹೆಣ್ಣು ಮಕ್ಕಳು ತಮಗೆ ತಿಳಿದ ಕಲೆಯನ್ನೇ ಮೂಲ ಬಂಡವಳವನ್ನಾಗಿಸಿಕೊಂಡು ಅದರಲ್ಲಿ ಇಂದು ತಮ್ಮದೇ ಹೊಸ ಐಡೆಂಟಿಟಿ ಕಂಡುಕೊಂಡಿದ್ದಾರೆ. ಅದರಲ್ಲಿ ಅಶ್ವಿನಿ ಶ್ರೀಧರ್ ಕೂಡ ಒಬ್ಬರು. ಅಶ್ವಿನಿಗೆ ಕ್ರಿಯೇಟಿವಿಟಿ ಅನ್ನೋದು ಬಹಳ ಚೆನ್ನಾಗಿಯೇ ಒಲಿದಿದೆ. ಅದಕ್ಕೆ ಅನುಗುಣವಾಗಿ ಪರಿಸ್ಥಿತಿಗಳು ಕೂಡ ಅಶ್ವಿನಿಯವರ ಪ್ರತಿಭೆಗೆ ವೇದಿಕೆಗಳನ್ನು ನೀಡುತ್ತಾ ಬಂದಿದೆ. ಇದರ ಪರಿಣಾಮ ಇವತ್ತು ಅಶ್ವಿನಿ ಒಬ್ಬ ಯಶಸ್ವಿ ಎಂಟ್ರಪ್ರಿನರ್, ಸೆಲ್ಫ್ ಎಂಪ್ಲಾಯ್ಡ್, ಓನರ್ ಆಫ್ ಸ್ಟಾರ್ಟ್​ ಅಪ್ ಅನ್ನಬಹುದು. ತಮಗೆ ತಿಳಿದ ಕ್ರಿಯೆಟಿವಿಟಿ ಮೂಲಕ ಇಂದು ಒಬ್ಬ ಸಾಫ್ಟ್​ವೇರ್ ಇಂಜಿನಿಯರ್​​ಗಳಿಸುವ ಆದಾಯದಷ್ಟೇ ತಾನೂ ಕೂಡ ಆದಾಯ ಗಳಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಅವರ ಈ ಕಥೆ ಎಲ್ಲರಿಗೂ ಸ್ಫೂರ್ತಿ ತುಂಬುತ್ತದೆ.

ಮದುವೆ ನಂತರ ಬದುಕು ಬದಲಾಯಿತು

ಅಶ್ವಿನಿ,   ಶ್ರೀಧರ್ ಜೊತೆ ಪ್ರೇಮ ವಿವಾಹದ ನಂತರ ಬದುಕು ಬ್ಯೂಟಿಫುಲ್ ಆಗಿ ನಡೆದಿತ್ತು. ಈ ಹಂತದಲ್ಲಿ ಅವರು ಪ್ರೆಗ್ನೆಂಟ್ ಕೂಡ ಆಗ್ತಾರೆ. ಕೆಲಸ ಬಿಡಲೇಬೇಕಾದ ಸ್ಥಿತಿ ಬರುತ್ತದೆ. ಆಗ ಸುಮ್ಮನೇ ಮನೆಯಲ್ಲಿ ಕೂರುವುದು ಕಷ್ಟವೆನಿಸುತ್ತದೆ. ಶ್ರೀಧರ್ ಅವರು ಒಬ್ಬರೇ ಇಡೀ ಫ್ಯಾಮಿಲಿಯ ಆಧಾರವಾಗುತ್ತಾರೆ. ಅಂತಹ ಸಮಯದಲ್ಲಿ ಅಶ್ವಿನಿಗೆ ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಈ ಸಂದರ್ಭದಲ್ಲಿ ತಾವೇ 8 ಮಕ್ಕಳಿಗೆ ಟ್ಯೂಷನ್ ಆರಂಭಿಸುತ್ತಾರೆ. ಇದಕ್ಕಾಗಿ ಪಾಂಪ್ಲೆಟ್‍ಗಳನ್ನು ರೆಡಿ ಮಾಡಿಸುತ್ತಾರೆ. ಅದು ವರ್ಕ್​ಔಟ್ ಆಗುತ್ತದೆ. ಆದರೆ ಪ್ರೆಗ್ನೆಸ್ಸಿ ಸಮಯದಲ್ಲಿ ಬಹಳ ಹೊತ್ತು ಪಾಠ ಮಾಡುವುದು ಕಷ್ಟವೆನಿಸಿ ಎರಡು ತಿಂಗಳಲ್ಲೆ ಅದನ್ನು ನಿಲ್ಲಿಸಿ ಬಿಡುತ್ತಾರೆ. ಈ ಹಂತದಲ್ಲಿ ಅವರಿಗೆ ತಿಂಗಳಿಗೆ ಬರುತ್ತಿದ್ದ 12000 ಆದಾಯ ನಿಲ್ಲುತ್ತದೆ. ನಂತರ ಯಾವುದಕ್ಕೂ ಕೈ ಹಾಕಲು ಸಾಧ್ಯವಾಗದಾಗ ತಮ್ಮನ್ನು ತಾವು ಆಕ್ಟೀವ್ ಆಗಿ ಇರಿಸಿಕೊಳ್ಳಲು ಪೇಂಟಿಂಗ್ ಶುರು ಮಾಡುತ್ತಾರೆ. ನಂತರ ಡೆಲಿವರಿ, ಮಗಳು ನಕ್ಷತ್ರ ಹುಟ್ಟುತ್ತಾಳೆ. ಕಂಪ್ಲೀಟ್ ಮದರ್ ಹುಡ್ ಎಂಜಾಯ್ ಮಾಡಬೇಕು ಎನಿಸಿ, ಯಾವುದರಲ್ಲೂ ತೊಡಗಿಸಿಕೊಳ್ಳಲಾಗುವುದಿಲ್ಲ. ನಂತರ ಮತ್ತೆ ಗಿಲ್ಟ್ ಕಾಡಲು ಆರಂಭವಾಗುತ್ತೆ. ನಾನು ಏನು ಮಾಡ್ತಿಲ್ಲ. ಹೀಗಾದ್ರೆ ಹೇಗೇ ? ಅನಿಸಲು ಆರಂಭವಾಗುತ್ತೆ. ಪರಿಸ್ಥಿತಿಗಳು ಕೂಡ ಹಾಗೇ ಬದಲಾಗುತ್ತವೆ. ಈ ಹಂತದಲ್ಲೇ ಮತ್ತೊಂದು ಟ್ವಿಸ್ಟ್!

ಅನಿವಾರ್ಯತೆ ತಂದ ಯಶಸ್ಸು

ಹವ್ಯಾಸಕ್ಕೆ ಆರಂಭಿಸಿದ ಪೇಂಟಿಂಗ್ ಕೆಲಸವನ್ನು ಸುಮ್ಮನೇ ಫೇಸ್‍ಬುಕ್‍ಗೆ ಪೋಸ್ಟ್ ಮಾಡ್ತಾರೆ. ಇದನ್ನು ಮೆಚ್ಚಿದ ಎಷ್ಟೋ ಜನ ಆರ್ಡರ್ಸ್ ಕೂಡ ಕೊಡ್ತಾರೆ. ನಿಧಾನಕ್ಕೆ 600 ರೂಪಾಯಿ ಬಂಡವಾಳ ಹೂಡಿ ಆರಂಭಿಸಿದ ಪೇಟಿಂಗ್ ಕೆಲಸಕ್ಕೆ 4000 ಲಾಭ ಬರುತ್ತದೆ. ಇದು ಅಶ್ವಿನಿಗೆ ಹೊಸ ಭರವಸೆ ಮೂಡಿಸುತ್ತದೆ. ಕೆಲವರು ಅವರ ಹೆಸರನ್ನು ನೀಡಿ ಆ ಥೀಮ್‍ಗೆ ಅನುಗುಣವಾಗಿ ಪೇಂಟ್ ಮಾಡಲು ಕೇಳುತ್ತಿದ್ರು, ಅದು ಅಶ್ವಿನಿಗೆ ಒಳ್ಳೆ ಯಶಸ್ಸು ತಂದುಕೊಡುತ್ತದೆ. ನಂತರ 2000 ರೂ ಹಣವನ್ನು ಆಗ ತಾನೇ ಬರುತ್ತಿದ್ದ ದೀಪವಾಳಿ ಹಬ್ಬಕ್ಕೆ ಕುಂದನ್ ಕೊಂಡು ರಂಗೋಲಿ ಪ್ಲೇಟ್, ದೀಪಗಳನ್ನು ಮಾಡಿ ಅದನ್ನು ಮಾರಟ ಮಾಡಲು ಆರಂಭಿಸಿದ್ರು. ಇದು ಕೂಡ ಚೆನ್ನಾಗಿ ಕ್ಲಿಕ್ ಆಯಿತು. ಇದಾದ ನಂತರ ಕ್ರಿಸ್‍ಮಸ್ ಸಮಯದಲ್ಲಿ ಗಿಫ್ಟ್ ಬಾಕ್ಸ್, ಡೆಕೋರೇಷನ್ ಐಟಮ್‍ಗಳನ್ನು ಮಾಡಲು ಆರಂಭಿಸಿದ್ರು . ಇದೆಲ್ಲವೂ ಮೆಚ್ಚುಗೆ ಪಡೆಯುತ ಸಾಗಿತು. ಫೇಸ್‍ಬುಕ್ ಮೂಲಕ ಎಲ್ಲ ಗ್ರಾಹಕರನ್ನು ಸೆಳೇಯಲು ಆರಂಭಿಸಿದ್ರು ಅಶ್ವಿನಿ. ನಂತರ ಟೆರಕೋಟ ಜ್ಯುವೆಲರಿ ಆರಂಭಿಸಿದ್ರು, ಮೊದಲು ಸ್ನೇಹಿತರೊಬ್ಬರು ಅವರ ಗಲ್ ಫ್ರೆಂಡ್‍ಗೆ ಉಡುಗೊರೆ ನೀಡಲು, ನವಿಲಿನ ಥೀಮ್‍ನ 15 ಕಿವಿಯೊಲೆ ಆರ್ಡರ್ ನೀಡಿದ್ರು, ಇದನ್ನು ಅಶ್ವಿನಿ ಅದ್ಭುತವಾಗಿ ನಿಭಾಯಿಸಿದ್ರು. ಇದಕ್ಕಾಗಿ 1500 ರೂಪಾಯಿ ಲಾಭವನ್ನು ಗಳಿಸಿದ್ರು. ನಂತರ ಆನ್‍ಲೈನ್ ಪೋರ್ಟಲ್‍ಗಳಲ್ಲಿ ಇದನ್ನು ಮಾರಟ ಮಾಡಲು ಆರಂಭಿಸಿದರು. ನಂತರ ಸಿಲ್ಕ್ ಜ್ಯುವೆಲರಿ ಮಾಡಲು ಆರಂಭಿಸಿದ್ರು. ಅದಕ್ಕೆ ಒಳ್ಳೇ ಡಿಮ್ಯಾಂಡ್ ಕ್ರಿಯೆಟ್ ಆಯಿತು. ಇದಾದ ಮೇಲೇ, ಬಾಟೆಲ್ ಪೇಂಟಿಂಗ್, ಸೆರಾಮಿಕ್ ಪೇಂಟಿಂಗ್, ಡಿಕೋಪಾಜ್, ಮ್ಯೂರಲ್ ಪೇಂಟಿಂಗ್‍ನಿಂದ ಸಾಕಷ್ಟು ಆದಾಯ ಬರಲು ಆರಂಭಿಸಿತು. ಏನು ಮಾಡುವುದು ಎಂದು ಯೋಚಿಸುತಿದ್ದ ಹುಡುಗಿಗೆ ಕೈ ತುಂಬಾ ಕೆಲಸ ಶುರುವಾಯಿತು. ಈಗಂತೂ ಇನ್ನು ಬ್ಯುಸಿ ಆಗಿದ್ದಾರೆ. ಅದರ ನಡುವೆಯೂ ಕೆಲಸ ಮುಂದುವರೆಸಿದ್ದಾರೆ.

ಮೇಕಿಂಗ್ ಟಿಪ್ಸ್

ಈ ಎಲ್ಲಾ  ಆಭರಣಗಳನ್ನು ಮಾಡಲು ರಾ ಮೆಟಿರಿಯಲ್ ಬಹಳ ಮುಖ್ಯ. ಇದಕ್ಕಾಗಿ ಅಶ್ವಿನಿ ಮಾರುಕಟ್ಟೆಗೆ ಹೋಗುತ್ತಿದ್ರು. ಆದರೆ ಕ್ವಾಲಿಟಿ, ಅಷ್ಟು ಚೆನ್ನಾಗಿ ಇರುತ್ತಿರಲಿಲ್ಲ. ಜೊತೆಗೆ ಕಾಸ್ಟಲಿ ಆಗುತ್ತಿತ್ತು. ಇದಕ್ಕಾಗಿ ದೆಹಲಿ, ಮುಂಬೈನಿಂದ ರಾ ಮೆಟಿರಿಯಲ್ ತರಿಸಿಕೊಳ್ಳುತ್ತಿದ್ದಾರೆ. ಸದ್ಯ ಫೇಸ್‍ಬುಕ್, ಇನ್ಸಟಾಗ್ರಾಂನಿಂಧ ಬ್ಯುಸಿನೆಸ್ ಡೆವೆಲಪ್ ಮಾಡುತ್ತಿದ್ದು, ಮುಂಧಿನ ದಿನಗಳಲ್ಲಿ ಆನ್‍ಲೈನ್‍ನಲ್ಲಿ ಮಾರಟದ ಬಗ್ಗೆ ಯೋಚಿಸುತ್ತಿದ್ದಾರೆ ಅಶ್ವಿನಿ. ಇದಿಷ್ಟೇ ಅಲ್ಲದೇ ಶಾಲೆಗಳಲ್ಲಿ, ಮಹಿಳಾ ಸಂಘದಲ್ಲಿ ವರ್ಕ್​ಶಾಪ್ ಕೂಡ ತೆಗೆದುಕೊಳ್ಳುತ್ತಿದ್ದಾರೆ ಅಶ್ವಿನಿ.

ಇದನ್ನು ಓದಿ: ಸೌಂದರ್ಯ ಪ್ರಪಂಚದ ಕ್ವೀನ್ "ನಂದಿತಾ"

ಅಶ್ವಿನಿ ಟ್ವೀಟ್ಸ್

ಏನೇ ಆದರೂ ನೆವರ್ ಗಿವ್ ಅಪ್ ಮಂತ್ರ ಪಾಲಿಸಿ ಅಂತಾರೆ ಅಶ್ವಿನಿ. ಒಮ್ಮೆ ನನಗೆ ಆಕ್ಸಿಡೆಂಟ್ ಆಗಿ 2 ತಿಂಗಳು ಮನೆಯಲ್ಲೆ ಉಳಿದು ಬಿಟ್ಟೆ. ಆಗ ಒಂದು ಆರ್ಡರ್ ಪೂರೈಸೋದಕ್ಕೆ ಆಗಲಿಲ್ಲ. ಅದರಿಂದ ಸಾಕಷ್ಟು ನೋವಾಯಿತು. ಆದ್ರೆ ಅದರಿಂದ ಓವರ್ ಕಮ್ ಆಗಲೇಬೇಖಿತ್ತು. ಒಟ್ಟಿನಲ್ಲಿ ಏನೇ ಆದ್ರೂ ಮಾಡೋ ಕೆಲಸವನು ಬಿಡಬಾರದು ಅಂತಾರೆ ಅಶ್ವಿನಿ.

ಬ್ಯಾಲೆನ್ಸ್ಡ್ ಆಗಿರಬೇಕು

ಇನ್ನು ಈ ಎಲ್ಲಾ ಯಶಸ್ಸಿನ ಮುಂದೆ ಪತಿ ಶ್ರೀಧರ್‍ರವರ ಸಹಕಾರವನ್ನು ನೆನೆಯುತ್ತಾರೆ ಅಶ್ವಿನಿ. ಎಲ್ಲ ಗೃಹಿಣಿಯರಂತೆ ಬೆಳಗ್ಗೆ ಮನೆ ಕೆಲಸ ಮುಗಿಸಿ, ಸ್ವಲ್ಪ ಹೊತ್ತು ಜಿಮ್‍ನಲ್ಲಿ ಕಳೆಯುತ್ತಾರೆ. ನಂತರ ಒಂದು ಗಂಟೆ ಇದಕ್ಕಾಗಿ ಸಮಯ ಮೀಸಲಿಡುತ್ತಾರೆ. ನಂತರ ಮಧ್ಯಾಹ್ನ 2.30 ರಿಂದ 6 ಗಂಟೆಯ ತನಕ ಕಲೆಗಾಗಿ ಸಮಯ ಮೀಸಲಿಡುತ್ತಾರೆ. ನಂತರ ಫ್ಯಾಮಿಲಿಗೆ ಆದ್ಯತೆ. ಅಪ್ಪ ಮನೆಯೊಳಗೆ ಡಿಸೈನ್ ಮಾಡುತ್ತಿದ್ದರು, ಅದನ್ನು ನೋಡಿ ನೋಡಿ ನನಗೂ ಅಭ್ಯಾಸವಾಯ್ತು. ಬಾಲ್ಯದಿಂದಲೂ ಅಪ್ಪನನ್ನು ಗಮನಿಸುತ್ತಿದ್ದೆ ಅದೇ ನನಗೆ ಒಲಿದು ಬಂದಿರಬಹುದು ಅಂತಾರೆ ಅಶ್ವಿನಿ.

ಒಟ್ಟಿನಲ್ಲಿ ಕೆಲಸ ಮಾಡಬೇಕು ಅನ್ನೋ ಛಲವಿದ್ರೆ, ಹೊಸದನ್ನು ಕಲಿಯುವ ತುಡಿತವಿದ್ರೆ ಜಿವನದಲ್ಲಿ ಅಂದುಕೊಂಡಿದ್ದನ್ನ ಸಾಧಿಸಬಹುದು ಅನ್ನೋದಕ್ಕೆ ಅಶ್ವಿನಿ ಗ್ರೇಟ್ ಎಕ್ಸಾಂಪಲ್.!

ಇದನ್ನು ಓದಿ:

1. ಸಿರಿಧಾನ್ಯಗಳ ಬೇಕರಿ ಈ"ಹನಿ ಕೆಫೆ"..!

2. ಜುಲೈ 1ರಿಂದ GST ಯುಗಾರಂಭ : ಇಲ್ಲಿದೆ ಹೊಸ ತೆರಿಗೆಗಳ ಸಮಗ್ರ ವಿವರ 

3. ಆರೋಗ್ಯಕ್ಕೆ ಹಾನಿಕಾರಕ- ಪರಿಸರಕ್ಕೆ ಮಾರಕ-ಪ್ಲಾಸ್ಟಿಕ್​ಗೆ ಗುಡ್​ ಬೈ ಹೇಳಲು ಸ್ಯಾನ್​ಫ್ರಾನ್ಸಿಸ್ಕೋ ನಿರ್ಧಾರ

Related Stories