ಭಾರತದ ವಾರೆನ್ ಬಫೆಟ್ ಕಥೆ ಗೊತ್ತಾ..? ಅಂಬಾನಿ ಸಂಪತ್ತಿಗೆ ಸವಾಲೆಸೆದ “ಧಮನಿ”..!

ಟೀಮ್​ ವೈ.ಎಸ್​. ಕನ್ನಡ

1

ಭಾರತದ ಅತೀ ಶ್ರೀಮಂತ ವ್ಯಕ್ತಿಗಳ ಹೆಸರು ಹೇಳಿ ಅಂದ್ರೆ ಅಂಬಾನಿ ಮನೆತನದ ಅನಿಲ್ ಅಂಬಾನಿಯ ಹೆಸರನ್ನು ಮೊದಲು ಹೇಳಬಹುದು. ಸ್ವಲ್ಪ ಓದಿಕೊಂಡವರಾಗಿದ್ದರೆ ರಾಹುಲ್ ಬಜಾಜ್, ಲಕ್ಷ್ಮೀಮಿತ್ತಲ್, ಅದಾನಿ ಬ್ರದರ್ಸ್ ಅನ್ನುವ ಹೆಸರನ್ನು ಹೇಳಬಹುದು. ಆದ್ರೆ ಇವರೆಲ್ಲರಿಗಿಂತಲೂ ಹೆಚ್ಚು ಸಂಪಾದನೆ ಮತ್ತು ಶ್ರೀಮಂತಿಕೆಯನ್ನು ಹೊಂದಿರುವ ವ್ಯಕ್ತಿಯೊಬ್ಬರಿದ್ದಾರೆ. ಸೈಲೆಂಟಾಗೇ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅವರ ಹೆಸರು ರಾಧಾಕೃಷ್ಣನ್ ಧಮನಿ. ಹೀಗೆ ಹೇಳಿದ್ರೆ ಅವರ್ಯಾರು ಅನ್ನುವುದು ಗೊತ್ತಾಗುವುದಿಲ್ಲ. ಆದ್ರೆ "ಡಿ ಮಾರ್ಟ್" ಸೂಪರ್ ಮಾರ್ಕೆಟ್​ನ ಸಂಸ್ಥಾಪಕ ಅಂದ್ರೆ ಸ್ವಲ್ಪ ಅರ್ಥವಾಗಿಬಿಡುತ್ತದೆ. ರಾಧಾಕೃಷ್ಣನ್ ಧಮನಿ ಸ್ಟಾಕ್ ಬ್ರೋಕರ್ ಆಗಿದ್ದರು. 2000ನೇ ಇಸವಿಯಲ್ಲಿ ರಾಧಾಕೃಷ್ಣನ್ ಧಮನಿ "ಡಿ ಮಾರ್ಟ್" ಅನ್ನುವ ಸೂಪರ್ ಮಾರ್ಕೆಟ್ ಚೈನ್ ಅನ್ನು ಸ್ಥಾಪಿಸಿದ್ರು. ಇದರ ಮೂಲಕವೇ ಸಂಪಾದನೆ ಮಾಡಿದ ರಾಧಾಕೃಷ್ಣನ್ ಧಮನಿ ಇವತ್ತಿಗೆ ಬರೋಬ್ಬರಿ 40,000 ಕೋಟಿ ರೂಪಾಯಿಗಳ ಒಡೆಯ. ಅಂದಹಾಗೇ ಧಮನಿಯ ಆಸ್ತಿ, ಸಂಪತ್ತು ಭಾರತದ ಖ್ಯಾತ ಶ್ರೀಮಂತ ವ್ಯಕ್ತಿಗಳ ಸಂಪತ್ತಿಗಿಂತ ಸಾಕಷ್ಟು ಹೆಚ್ಚಿದೆ.

ಧಮನಿಗೆ ಸ್ಟಾಕ್ ಮಾರ್ಕೆರ್ಟ್​ಗೆ  ಎಂಟ್ರಿ ಆಗಲು ಒಂಚೂರು ಮನಸ್ಸಿರಲಿಲ್ಲ. ಆದ್ರೆ ತಾನು ಕೆಲಸ ಮಾಡಿಕೊಂಡಿದ್ದ ಬಾಲ್ ಬೇರಿಂಗ್ ಕಂಪನಿ ನಷ್ಟದಲ್ಲಿದ್ದಾಗ ಅದನ್ನು ಮುಚ್ಚುವ ಪರಿಸ್ಥಿತಿ ಎದುರಾಯಿತು. ಈ ಹಂತದಲ್ಲಿ ಧಮನಿ ತನ್ನ ತಂದೆಯನ್ನು ಕಳೆದುಕೊಂಡ್ರು. ಅನಿವಾರ್ಯವಾಗಿ ತನ್ನ ಸಹೋದರ ನಡೆಸುತ್ತಿದ್ದ ಸ್ಟಾಕ್ ಬ್ರೋಕಿಂಗ್ ಕಂಪನಿ ಸೇರಿಕೊಂಡ್ರು. 32 ವರ್ಷದಲ್ಲೇ ಸ್ಟಾಕ್ ಬ್ರೋಕರ್ ಆಗಿ ಎಂಟ್ರಿಕೊಟ್ಟ ಧಮನಿಗೆ ಅಲ್ಲಿನ ಗಂಧಗಾಳಿ ಗೊತ್ತಿರಲಿಲ್ಲ. ಆದ್ರೆ ಅಲ್ಲಿನ ವಿಚಾರಗಳನ್ನು ಕಲಿಯಲು ಮುಂದಾದ್ರು. ಚಂದ್ರಕಾಂತ್ ಸಂಪತ್ ಅನ್ನುವ ಖ್ಯಾತ ಉದ್ಯಮಿ ಜೊತೆ ಸೇರಿಕೊಂಡು ಸ್ಟಾಕ್ ಮಾರ್ಕೆಟ್ ನಲ್ಲಿನ ಆಳ ಅಗಲಗಳನ್ನು ಕಲಿತುಕೊಂಡ್ರು.

ಷೇರು ಮಾರುಕಟ್ಟೆಯ ಒಳಗುಟ್ಟುಗಳನ್ನು ಕಲಿತ್ರೂ ಅದ್ರಲ್ಲಿ ಲಾಭ ಪಡೆಯುವ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ಹೀಗಾಗಿ ರಾಧಾಕೃಷ್ಣ ಧಮನಿ ಆರಂಭದಲ್ಲಿ ಕೊಂಚ ಕೈ ಸುಟ್ಟುಕೊಂಡ್ರೂ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಬದಲಾಗಿ ಷೇರು ಮಾರುಕಟ್ಟೆಯಲ್ಲಿ ಹೇಗೆ ಬೆಳೆಯಬಹುದು ಅನ್ನುವುದನ್ನು ತನ್ನದೇ ಸ್ಟ್ರಾಟಜಿ ಮೂಲಕ ಕಲಿಯಲು ಆರಂಭಿಸಿದ್ರು. ಲಾಂಗ್ ಟರ್ಮ್ ರಿಸಲ್ಟ್​ಗಳ ಬಗ್ಗೆ ಹೆಚ್ಚು ನಂಬಿಕೆ ಇಟ್ಟುಕೊಂಡ್ರು. ಇದು ರಾಧಾಕೃಷ್ಣ ಧಮನಿಯವರ ಕೈ ಹಿಡಿಯಿತು. ಮುಂದಿನ ಕೆಲವೇ ಕೆಲವು ವರ್ಷಗಳಲ್ಲಿ ಧಮನಿ ಮುಂಬೈನ ದಲಾಲ್ ಸ್ಟ್ರೀಟ್​ನಲ್ಲಿ ದೊಡ್ಡ ಹೆಸರಾಗಿ ಬೆಳೆದಿದ್ದರು. ಉದ್ಯಮದಲ್ಲಿ ಎದುರಾದ ಈಗೋಗಳನ್ನು ಬಿಟ್ಟು ತನ್ನ ಲಾಭವನ್ನು ಹೇಗೆ ಮಾಡಬೇಕು ಅನ್ನುವುದರ ಕಡೆಗೆ ಹೆಚ್ಚು ಗಮನ ಕೊಟ್ಟರು. 1990ರ ದಶಕದಲ್ಲಿ ಧಮನಿ ತನ್ನ ಅದೃಷ್ಟವನ್ನೇ ಬದಲಿಸಿಕೊಂಡು ಶ್ರೀಮಂತಿಕೆಯ ಹಾದಿ ತುಳಿದಿದ್ದರು.

ಇದನ್ನು ಓದಿ: ನಮ್ಮ ಮೆಟ್ರೋದ ಪಿಲ್ಲರ್​ಗಳಿಗೆ ಹೊಸ ಜೀವ- ಹೊಸ ತಂತ್ರಜ್ಞಾನದ ಮೂಲಕ ಪರಿಸರ ಕಾಯುವ ಕೆಲಸ

ದಲಾಲ್ ಸ್ಟ್ರೀಟ್​​ನಲ್ಲಿ ಮಿಸ್ಟರ್ ವೈಟ್ ಅಂತನೇ ಖ್ಯಾತಿ ಪಡೆದಿದ್ದ ಧಮಿನಿ ಮೊದಲು ಹರ್ಷದ್ ಮೆಹ್ತಾ ಜೊತೆಗಿನ ಜಿದ್ದಿನಿಂದ ಸುದ್ದಿಮಾಡಿದ್ದರು. ಆದ್ರೆ ಮೆಹ್ತಾ ಮೋಸದ ಮೂಲಕ ಉದ್ಯಮಿಗಳನ್ನು ವಂಚಿಸಿದ್ರೆ, ಧಮನಿ ನಂಬಿಕೆ ಮೂಲಕ ಹೂಡಿಕೆದಾರರ ಮನಸ್ಸು ಗೆದ್ರು. ಸದ್ಯ ಡಿ ಮಾರ್ಟ್ ಚೈನ್​ನಲ್ಲಿ ಧಮನಿ ಶೇಕಡಾ 82.36ರಷ್ಟು ಷೇರು ಹೊಂದಿದ್ದಾರೆ. ಸುಮಾರು 32, 934 ಕೋಟಿ ರೂಪಾಯಿ ಒಡೆಯನಾಗಿದ್ದಾರೆ. ವಿಎಸ್ ಟಿ ಇಂಡಸ್ಟ್ರೀಸ್, ಟಿವಿ18, ಸೋಮ್ನಿ ಸೆರಾಮಿಕ್ಸ್, ಜೇಶ್ರೀ ಟೀ, ಸಾಮ್ಟೆಲ್ ಲಿಮಿಟೆಡ್, ಸುಂದರಂ ಫಾಸ್ಟನರ್ಸ್, ಜಿಇ ಕ್ಯಾಪಿಟಲ್ ಟ್ರಾನ್ಸ್ಪೋರ್ಟೇಷನ್ ಇಂಡಸ್ಟ್ರೀಸ್ ಮತ್ತು 3ಎಂ ಇಂಡಿಯಾ ಕಂಪನಿಗಳಲ್ಲಿ ಷೇರು ಹೊಂದಿದ್ದಾರೆ.

ಡಿ ಸೂಪರ್ ಮಾರ್ಕೆಟ್ ಚೈನ್ ಅವೆನ್ಯೂ ಸೂಪರ್ ಮಾರ್ಟ್ಸ್ ಲಿಮಿಟೆಡ್​ನ ಮಾಲೀಕತ್ವ ಹೊಂದಿದೆ. ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ, ಮಧ್ಯಪ್ರದೇಶ, ಕರ್ನಾಟಕ, ತೆಲಂಗಾಣ, ಚತ್ತೀಸ್​ಘಡ ಮತ್ತು ಎನ್.ಸಿ.ಆರ್ ಸೇರಿದಂತೆ ಒಟ್ಟು 117 ಸ್ಥಳಗಳಲ್ಲಿ ಡಿ ಮಾರ್ಟ್ ಶಾಖೆಗಳನ್ನು ಹೊಂದಿದೆ.

ಫೋರ್ಬ್ಸ್ ಇತ್ತೀಚೆಗೆ ಬಿಡುಗಡೆ ಮಾಡಿರುವ ಶ್ರೀಮಂತ ಪಟ್ಟಿಯಲ್ಲಿ ಧಮಿನಿ ಒಟ್ಟು 35,775 ಕೋಟಿ ರೂಪಾಯಿಗಳನ್ನು ಹೊಂದಿದ್ದಾರೆ. ಸದ್ಯಕ್ಕೆ ಧಮನಿಯವರನ್ನು ಭಾರತದ ವಾರೆನ್ ಬಫೆಟ್ ಅಂತ ಕರೆಯಲಾಗುತ್ತಿದೆ. ಧಮನಿ ಮುಂಬೈನ ಗೇಟ್ ವೇ ಬಳಿಯ ಅಲಿಬಾಗ್ ಬೀಜ್ ಬಳಿಯಲ್ಲಿ 156 ರೂಮ್​​ಗಳನ್ನು ಹೊಂದಿರುವ ರಾಡಿಸನ್ ಬ್ಲೂ ರೆಸಾರ್ಟ್ ಅನ್ನು ಕೂಡ ಹೊಂದಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದೆ. ಧಮನಿ ಯಶಸ್ಸಿನ ಉತ್ತುಂಗದಲ್ಲಿದ್ದರೂ ಯಾರ ಕಣ್ಣಿಗೂ ಬೀಳಬಾರದು ಅನ್ನುವ ವ್ಯಕ್ತಿತ್ವದವರು. ಹೀಗಾಗಿ ಧಮನಿ ಯಶಸ್ಸಿನ ಕಥೆ ಹೆಚ್ಚಿನವರಿಗೆ ಗೊತ್ತಿಲ್ಲ. ರಾಧಾಕೃಷ್ಣನ್ ಧಮನಿಯವರ ಕಥೆ ನಿಜಕ್ಕೂ ಸ್ಫೂರ್ತಿದಾಯಕ ಅನ್ನುವುದರಲ್ಲಿ ಎರಡು ಮಾತಿಲ್ಲ.

ಇದನ್ನು ಓದಿ:

1. ಪೆಟ್ರೋಲ್ ಬಂಕ್ ಕೆಲಸಗಾರನ ಸಾಮಾಜಿಕ ಕಳಕಳಿ- ಬುಲ್​ಟೆಂಪಲ್ ಬಳಿ ಇರುವ ಆಪತ್ಭಾಂಧವನ ಕಥೆ ಓದಿ

2. ಇಳಿವಯಸ್ಸಿನಲ್ಲೂ ದೇಶ ಸುತ್ತುವ ಸಾಹಸಿ : ವಿಶ್ವಪರ್ಯಟನೆ ಮಾಡ್ತಿದ್ದಾರೆ 95ರ ಅಮ್ಮಾಚಿ 

3. ಹೈ-ವೇನಲ್ಲೇ ಡಾಬಾಕ್ಕೆ ಹೋಗಬೇಕಿಲ್ಲ- ಸಿಟಿಗೂ ಎಂಟ್ರಿಯಾಗಿದೆ..! 

Related Stories