ಅಂದುಕೊಂಡಿದ್ದನ್ನು ಸಾಧಿಸುವ ಛಲಗಾತಿ- ಅನುಭವದಿಂದ ಪಾಠ ಕಲಿತ ದಿಟ್ಟ ಯುವತಿ- ಅಸಾಧ್ಯದ ಬೆನ್ನುಹತ್ತಿ ಗೆದ್ದ ಬ್ಯಾಂಕ್​​ ಉದ್ಯೋಗಿ

ಟೀಮ್​ ವೈ.ಎಸ್​​.

0

ಕ್ವಿಕ್​ವಾಲೆಟ್​​​. ಭಾರತದ ಮೊತ್ತ ಮೊದಲ ಪಾವತಿ ಆ್ಯಪ್​​. ಸ್ಮಾರ್ಟ್‌ಫೋನ್‌ಗಳ ಮೂಲಕ ಹಣವನ್ನು ಪಾವತಿಸಬಹುದಾದ ಪೇಮೆಂಟ್ ಆ್ಯಪ್ ಕ್ವಿಕ್​​ ವಾಲೆಟ್​​ನ ಸಂಸ್ಥಾಪಕಿ ಸುಮಾ ಭಟ್ಟಾಚಾರ್ಯ. ಸಂಪರ್ಕ ಕ್ಷೇತ್ರದಲ್ಲಿ ಅಭಿವೃದ್ಧಿ ಹಾಗೂ ಕ್ಷಿಪ್ರ ಬೆಳವಣಿಗೆಯ ಹಿನ್ನೆಲೆಯಲ್ಲಿ ರೂಪುಗೊಂಡ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ಈ ನಿಟ್ಟಿನಲ್ಲಿ ಉದ್ಯಮ ಆರಂಭಿಸಿರುವ ಹತ್ತು ಹಲವು ಉದ್ಯಮಿಗಳ ಸಾಲಿನಲ್ಲಿ ಸುಮಾ ಭಟ್ಟಾಚಾರ್ಯ ನಿಲ್ಲುತ್ತಾರೆ. ಸುಮಾ ಪ್ರಾರಂಭಿಸಿದ ಸ್ಮಾರ್ಟ್‌ಫೋನ್ ಆ್ಯಪ್ ಕ್ವಿಕ್ ವ್ಯಾಲೆಟ್ ಕ್ಯು ಆರ್ ಕೋಡ್ ಅಥವಾ ಕ್ವಿಕ್ ರೆಸ್ಪಾನ್ಸ್(ಯು.ಆರ್) ಕೋಡ್ಸ್ ಮೂಲಕ ಕಾರ್ಯನಿರ್ವಹಿಸುತ್ತದೆ.

ಲಿವ್ ಕ್ವಿಕ್ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಹಸಂಸ್ಥಾಪಕರೂ ಆದ ಸುಮಾರ ಸಂಸ್ಥೆಯ ಮಹತ್ವಾಕಾಂಕ್ಷಿ ಉತ್ಪನ್ನ ಈ ಕ್ವಿಕ್ ವ್ಯಾಲೆಟ್.

ಬಾಲ್ಯದ ಕಹಿ ನೆನಪುಗಳು

ಸುಮಾರ ತಂದೆ ಕೋಲ್ಕತ್ತಾ ಮೂಲದವರು.ಸುಮಾಗೆ ಆಗ ಜಸ್ಟ್​​​ 7 ವರ್ಷ. ಈ ಹಂತದಲ್ಲಿ ಸುಮಾ ತಂದೆ ತಾಯಿ ವಿಚ್ಛೇದನ ಪಡೆದುಕೊಂಡಿದ್ದರು. ತಾಯಿಯೊಂದಿಗೆ ಬೆಳೆದ ಸುಮಾ ತಂದೆಯ ಪ್ರೀತಿಯಿಂದ ವಂಚಿತರಾಗಿದ್ದರು. ಸುಮಾರ ತಂದೆ ಬ್ರಿಟಿಷ್ ರೈಲ್‌ನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸುಮಾರ ತಾಯಿ ಅವರಿಗೆ ಎರಡನೇ ಪತ್ನಿಯಾಗಿದ್ದರು. ಕೋಲ್ಕತ್ತಾದವರೇ ಆದ ಅವರ ತಾಯಿ ಗಂಡನೊಂದಿಗೆ ಇಂಗ್ಲೆಂಡ್‌ನಲ್ಲಿ ಸುಮಾರು 20 ವರ್ಷ ವಾಸ ಮಾಡಿದ್ದರು. ಹಾಗಾಗಿ ಸುಮಾ ಲಂಡನ್‌ನಲ್ಲಿ ಜನಿಸಿದರು. 1990ರಲ್ಲಿ ತಂದೆ ನಿವೃತ್ತಿ ಹೊಂದಿದ ಬಳಿಕ ಅವರ ಕುಟುಂಬದೊಳಗೆ ಕಲಹ ಆರಂಭವಾಯಿತು. ಲಂಡನ್‌ ಕೋರ್ಟ್‌ನಲ್ಲಿ ವಿಚ್ಛೇದನ ಪಡೆದ ತಾಯಿ ಸುಮಾರನ್ನು ತಮ್ಮೊಂದಿಗೆ ಬೆಳೆಸಿದ್ದರು. ಲಂಡನ್‌ನ ಅತ್ಯುತ್ತಮ ಚೈಲ್ಡ್ ಕೇರ್ ಸೆಂಟರ್‌ನಲ್ಲಿ ತಮ್ಮ ಮಗಳು ಸುಮಾರನ್ನು ಬಿಟ್ಟು ತಾಯಿ ತಮ್ಮ ಕೆಲಸಕ್ಕೆ ಹೋಗುತ್ತಿದ್ದರು. ಹೀಗಾಗಿ ಸುಮಾಗೆ ತಾಯಿಯ ಪ್ರೀತಿಯೂ ಸರಿಯಾಗಿ ಸಿಗಲಿಲ್ಲ.

ಇಂಪಿರಿಯಲ್ ಕಾಲೇಜಿನಲ್ಲಿ ಪದವಿ

ಬೆಳೆಯುತ್ತಿರುವಾಗ ತಮ್ಮ ಶಾಲಾ ವಿದ್ಯಾಭ್ಯಾಸಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದ ಸುಮಾ ನಂತರ ಲಂಡನ್‌ನ ಪ್ರಸಿದ್ಧ ಇಂಪಿರಿಯಲ್ ಕಾಲೇಜ್‌ನಲ್ಲಿ ಭೌತ ಶಾಸ್ತ್ರ ವಿಭಾಗದಲ್ಲಿ ಪದವಿ ಪಡೆದುಕೊಂಡರು. ಓದುವ ಮಧ್ಯೆ ರಂಗ ಶಿಕ್ಷಣ ಪಡೆದುಕೊಳ್ಳುವ ಆಸಕ್ತಿ ಅವರಿಗಿತ್ತು. ಸುಮಾ ಕಥಕ್ ನೃತ್ಯ ತರಬೇತಿ ಪಡೆದರು.

2006ರಲ್ಲಿ ಪದವಿ ಪಡೆದುಕೊಂಡ ಸುಮಾ ಆ ಸಂದರ್ಭದಲ್ಲಿ ಎಲ್ಲಾ ಇಂಜಿನಿಯರ್‌ಗಳು ಹಾಗೂ ವಿಜ್ಞಾನಿಗಳಂತೆ ಮ್ಯಾನೇಜ್‌ಮೆಂಟ್ ಸಂಸ್ಥೆಗಳು ಅಥವಾ ಇನ್ನಿತರ ಇನ್ವೆಸ್ಟ್ ಮೆಂಟ್ ಬ್ಯಾಂಕಿಂಗ್ ವಿಭಾಗದ ಉದ್ಯಮಗಳಲ್ಲಿ ವೃತ್ತಿಬದುಕು ಆರಂಭಿಸುವ ಇಚ್ಛೆ ಹೊಂದಿದ್ದರು. ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಈ ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳೂ ಇದ್ದವು. ಹೀಗಾಗಿ ಲಂಡನ್‌ನ ಕ್ರೆಡಿಟ್ ಸ್ವಿಸ್ಸಿ ಇನ್ವೆಸ್ಟ್ ಮೆಂಟ್ ಬ್ಯಾಂಕ್ ನಲ್ಲಿ ತಮ್ಮ ಇಂಟರ್ನ್ ಶಿಪ್ ಮುಗಿಸಿದರು. ಅಲ್ಲಿ ಅವರಿಗೆ ದೊರೆತ ತಂಡದಿಂದ ಸುಮಾರವರಿಗೆ ಅತ್ಯುತ್ತಮ ಅನುಭವ ದೊರೆಯಿತು.

ಅವರು ಗಮನಿಸಿದಂತೆ ಮ್ಯಾಕ್ರೋ ಎನ್ವಿರಾನ್‌ಮೆಂಟ್ ಅಥವಾ ಬ್ಯಾಂಕರ್‌ಗಳಿಂದ ಸಣ್ಣ ಪ್ರಮಾಣದ ಸಾಲ ನೀಡುವ ವ್ಯವಸ್ಥೆಯಿಂದಾಗಿ ಮಹತ್ತರ ಬದಲಾವಣೆಗಳು ಶುರುವಾಗಿದ್ದವು. ಸಂಸ್ಥೆಯಲ್ಲಿ ಗ್ರಾಹಕರೆಂದರೆ ಬ್ಯಾಂಕ್‌ಗಳು ಹಾಗೂ ಇತರೆ ಹಣಕಾಸಿನ ಫೈನಾನ್ಸ್ ಸಂಸ್ಥೆಗಳೇ ಆಗಿದ್ದವು. ಹಾಗಾಗಿ ಅವರು ಈ ಸಂಸ್ಥೆಗಳಲ್ಲಿ ಹಣದ ಹರಿವು ಉಳಿಸಿಕೊಳ್ಳುವ ಹಾಗೂ ಬಾಂಡ್‌ಗಳ ಮೂಲಕ ಭದ್ರತಾ ಠೇವಣಿ ಹೆಚ್ಚಿಸಿಕೊಳ್ಳುವ ಉಪಾಯ ಸೂಚಿಸುತ್ತಿದ್ದರು. ಸುಮಾ ಹೇಳುವಂತೆ ಆ ಸಂಸ್ಥೆಯಲ್ಲಿ ಸುಮಾರು 4 ವರ್ಷಗಳ ಕಾಲ ಕೆಲಸ ಮಾಡಿದ್ದರು. ಅವರು ಸಂಸ್ಥೆಯನ್ನು ಬಿಡುವಾಗ ಸಹಾಯಕ ಹುದ್ದೆಯಲ್ಲಿದ್ದರು.

ಇದೇ ಸಂದರ್ಭದಲ್ಲಿ ಕೋಲ್ಕತ್ತಾದಲ್ಲಿದ್ದ ಅವರ ತಂದೆಗೆ ಪಾರ್ಶ್ವವಾಯು ಸಮಸ್ಯೆ ಉಂಟಾಯಿತು. ಹಾಗಾಗಿ 2 ತಿಂಗಳ ಕಾಲ ಅವರೊಂದಿಗೆ ಕಾಲ ಕಳೆಯಲು ಸುಮಾ ಕೋಲ್ಕತ್ತಾಕ್ಕೆ ಮರಳಿದರು. ಇದೇ ಸಂದರ್ಭದಲ್ಲಿ ಅವರು ಕೆಲಸ ಮಾಡುತ್ತಿದ್ದ ಕ್ರೆಡಿಟ್ ಸ್ವಿಸ್ಸೇ ಇನ್ವೆಸ್ಟ್ ಮೆಂಟ್ ಬ್ಯಾಂಕ್‌ನಿಂದ ಹೊರಬರಲು ತೀರ್ಮಾನಿಸಿದ್ದರು. ಅದು ಅತ್ಯಂತ ದೊಡ್ಡ, ಅತೀ ಪರಿಣಿತರನ್ನು ಹೊಂದಿದ್ದ ಸಂಸ್ಥೆಯಾಗಿತ್ತು. ಜೊತೆಗೆ ಸುಮಾರವರಿಗೆ ಅತ್ಯಂತ ದೊಡ್ಡ ಪ್ರಮಾಣದ ಸಂಬಳ, ಸೌಕರ್ಯಗಳೂ ಇದ್ದವು. ಹಾಗಾಗಿ ಅವರು ರಾಜೀನಾಮೆ ನೀಡುವ ಹಿನ್ನೆಲೆಯಲ್ಲಿ ಸಾಕಷ್ಟು ಯೋಚಿಸಬೇಕಾಯಿತು. ಸಂಸ್ಥೆ ಬಿಟ್ಟು ಹೊರಬಂದ ನಂತರವೂ ಅವರ ರಾಜೀನಾಮೆ ಪ್ರಕ್ರಿಯೆ ಪೂರ್ಣಗೊಳ್ಳಲು 6 ತಿಂಗಳು ಬೇಕಾಯಿತು.

2009ರ ಅಂತ್ಯದ ವೇಳೆಗೆ ಕೋಲ್ಕತ್ತಾದಲ್ಲಿದ್ದ ಸುಮಾರವರ ತಂದೆಯ ಆರೋಗ್ಯ ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟು ಕೋಮಾ ಸ್ಥಿತಿ ತಲುಪಿದರು. ಇನ್ನೊಂದು ಕಡೆ ಕೆಲಸಕ್ಕೆ ರಾಜೀನಾಮೆ ನೀಡಿದ್ದ ಸುಮಾ ಬೇರೆ ಯಾವ ಸಮರ್ಪಕ ತೀರ್ಮಾನವನ್ನೂ ತೆಗೆದುಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಏಕೆಂದರೆ ಕೋಲ್ಕತ್ತಾದಲ್ಲಿ ಅಂತಹ ಯಾವುದೇ ಪೂರಕ ವಾತಾವರಣ ಇರಲಿಲ್ಲ.

ಕೈಬೀಸಿ ಕರೆದ ಬಣ್ಣದ ಜಗತ್ತು

ಈ ಸಂದರ್ಭದಲ್ಲಿ ಸುಮಾ ಏನಾದರೂ ಸಾಧಿಸ ಬೇಕೆಂಬ ಛಲದಿಂದ ಮುಂಬೈಗೆ ಬಂದಿಳಿದರು. ಅದೃಷ್ಟವಶಾತ್ ಅವರಿಗೆ ಬಣ್ಣದ ಜಗತ್ತಿನಲ್ಲಿ ಕೆಲಸ ಮಾಡುವ ಅವಕಾಶ ಲಭಿಸಿತು. ಕೆಲವು ಸಿನಿಮಾ, ಜಾಹೀರಾತುಗಳು ಹಾಗೂ ಇನ್ನಿತರ ಯೋಜನೆಗಳಲ್ಲಿ ಸಹಾಯಕರಾಗಿ ಕೆಲಸ ಮಾಡಲು ಆರಂಭಿಸಿದರು. ಸುಮಾ ಕೆಲವು ಜಾಹೀರಾತುಗಳಲ್ಲಿ ಸಲ್ಮಾನ್ ಖಾನ್ ಜೊತೆಗೂ ಕೆಲಸ ಮಾಡಿದರು. ಅವರಿಗೆ ಈ ಪ್ರಪಂಚವನ್ನು ಬಿಟ್ಟು ಮತ್ತೆ ಕೋಲ್ಕತ್ತಾ ಹೋಗುವುದು ಇಷ್ಟವಿರಲಿಲ್ಲ. ತಮ್ಮ ಆರಂಭಿಕ ದಿನಗಳಲ್ಲಿ ಮುಂಬೈನಲ್ಲಿ, ಸ್ನೇಹಿತರೊಂದಿಗೆ ಬದುಕಲು ಆರಂಭಿಸಿದ್ದರು. ಇದೇ ಸಂದರ್ಭ ಸುಮಾರ ತಂದೆ ನಿಧನರಾದ ಸುದ್ದಿ ತಡವಾಗಿ ಅವರನ್ನು ತಲುಪಿತು. ಭಾರತದಲ್ಲಿ ಅವರ ತಂದೆಗೆ ಮಗಳೊಬ್ಬಳಿದ್ದಾಳೆ ಅನ್ನುವ ವಿಚಾರ ಗೊತ್ತಿದ್ದರೂ ತಂದೆಯ ಸಂಬಂಧಿಗಳು ಮಗಳು ಬರುವ ಮುನ್ನವೇ ಅಂತ್ಯ ಸಂಸ್ಕಾರ ನೆರವೇರಿಸಿದ್ದು ಸುಮಾಗೆ ಇನ್ನಿಲ್ಲದ ಬೇಸರ ಮೂಡಿಸಿತು.

ಮುಂಬೈ ಸುಮಾಗೆ ಕನಸಿನ ಸ್ಥಳವೇನೂ ಆಗಿರಲಿಲ್ಲ. ಜೊತೆಗೆ ಅಲ್ಲಿನ ಬಿಗುವಿನ ಹವಾಮಾನ ಅವರಿಗೆ ಹಿಡಿಸುತ್ತಿರಲಿಲ್ಲ. ಮಹಾರಾಷ್ಟ್ರ ರಾಜ್ಯ ಚುನಾವಣಾ ಸಂದರ್ಭದಲ್ಲಿ ಆಟೋ ಒಂದರಲ್ಲಿ ಏರ್‌ಪೋರ್ಟ್‌ನಿಂದ ಮುಖ್ಯ ರಸ್ತೆಯಲ್ಲಿ ಸಾಗುತ್ತಿದ್ದಾಗ ಸುಮಾರು ರಾತ್ರಿ 11 ಗಂಟೆ ವೇಳೆಯಲ್ಲಿ ಅವರಿಗೆ ಆಘಾತವಾಗುವ ಘಟನೆ ಸಂಭವಿಸಿತ್ತು. ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಆಟೋ ರಿಕ್ಷಾದಿಂದ ಸುಮಾರವರನ್ನು ಹೊರಗೆಳೆದು ಅವರ ಮೇಲೆ ದೌರ್ಜನ್ಯ ನಡೆಸಿದ್ದರು. ಈ ಪರಿಸ್ಥಿತಿಯಿಂದ ಹೊರಬರಲು ಸುಮಾ ಸಾಕಷ್ಟು ಪರದಾಡಿದ್ದರು. ಇಂದಿಗೂ ಇದೊಂದು ದುಃಸ್ವಪ್ನವಾಗಿ ಸುಮಾರನ್ನು ಕಾಡುತ್ತಲೇ ಇದೆ. ಈ ಕಾರಣದಿಂದ ಅವರ ತಾಯಿ ಲಂಡನ್‌ನಿಂದ ಬಂದು ಮಗಳೊಂದಿಗೆ ಕೆಲ ಕಾಲ ಇದ್ದರು.

2011ರಲ್ಲಿ ಅವರಿಗೆ ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ಕೆಲಸ ಮಾಡುವ ಅವಕಾಶ ಒದಗಿ ಬಂದಿತ್ತು. ಅವರು ಅದನ್ನು ಆಸಕ್ತಿಯಿಂದಲೇ ಒಪ್ಪಿಕೊಂಡರು. ಪ್ರಾದೇಶಿಕ ಭಾಷೆಗಳ ಚಿತ್ರಗಳಲ್ಲಿ ನಾಯಕಿಯನ್ನು ಆಯ್ಕೆ ಮಾಡುವ ವಿಷಯದಲ್ಲಿ ಕೂಡ ನಟರು ಹಸ್ತಕ್ಷೇಪ ಮಾಡುತ್ತಿದ್ದ ವಿಷಯ ಅವರಿಗೆ ತಿಳಿದಿತ್ತು. ಹಾಗಾಗಿ ಬಹುತೇಕ ಸಂದರ್ಭದಲ್ಲಿ ಪ್ರತಿಭೆಯಿದ್ದರೂ ಮಹಿಳೆಯರು ಪೋಷಕ ಪಾತ್ರಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರು. ಸುಮಾ ಕೆಲಸ ಮಾಡಿದ್ದು ಕೆಲವೇ ಚಿತ್ರಗಳಲ್ಲಾದರೂ ಕಮರ್ಷಿಯಲ್ ಅಲ್ಲದ ಚಿತ್ರಗಳಾಗಿದ್ದವು.

ಕ್ವಿಕ್ ವ್ಯಾಲೆಟ್ ಮೂಲಕ ಉದ್ಯಮ ಪ್ರಪಂಚಕ್ಕೆ ಪಾದಾರ್ಪಣೆ

ಭಾರತದಲ್ಲಿ ಇಕೋ ಸಿಸ್ಟಂ ಚಾಲ್ತಿಗೆ ಬರುತ್ತಿದ್ದ ಸಂದರ್ಭದಲ್ಲಿ ಈ ಸ್ಥಿತಿಯ ಲಾಭ ಪಡೆದ ಸುಮಾ ಈ ನಿಟ್ಟಿನಲ್ಲಿ ಏನಾದರೂ ತಂತ್ರಜ್ಞಾನ ಆಧಾರಿತ ಸಾಧನೆ ಮಾಡಲು ಮುಂದಾದರು. ಇಂಟೆಲ್ ಸಂಸ್ಥೆಯ ಇ-ಕಾಮರ್ಸ್ ಉತ್ಪನ್ನ ಅಭಿವೃದ್ಧಿಯಾಗತೊಡಗಿತ್ತು. ಹಾಗಾಗಿ ಇದನ್ನೇ ಗಮನದಲ್ಲಿಟ್ಟುಕೊಂಡು ಸಮೀನಾ ಕ್ಯಾಪಿಟಲ್ ಸಂಸ್ಥೆಯಿಂದ ಹೂಡಿಕೆ ಮಾಡಿಸಿ ಹೊಸ ಉದ್ಯಮವನ್ನು ಆರಂಭಿಸಿದರು.

ಹೂಡಿಕೆ ಮಾಡಿಕೊಳ್ಳಬೇಕಾದ ಸಂದರ್ಭದಲ್ಲಿ ಸುಮಾ, ಮೋಹಿತ್ ಲಾಲ್ವಾನಿಯ ಭೇಟಿ ಮಾಡಿದ್ದರು. ಈ ವೇಳೆ ಲಾಲ್ವಾನಿ ತಮ್ಮ ಉದ್ಯಮದ ಯೋಜನೆಗಳು ಹಾಗೂ ಬಿಸಿನೆಸ್‌ನ ಆಶಯಗಳನ್ನು ಸಂಪೂರ್ಣವಾಗಿ ತೆರೆದಿಟ್ಟಿದ್ದರು. ಇದನ್ನು ಒಪ್ಪಿಕೊಂಡ ಸುಮಾ ಹೂಡಿಕೆ ಬೋರ್ಡ್‌ನಲ್ಲಿ ಸಕ್ರಿಯರಾಗಿ ಮ್ಯಾನೇಜ್‌ಮೆಂಟ್‌ನ ಭಾಗವಾಗಿ ಗುರುತಿಸಿಕೊಂಡರು.

2012ರಲ್ಲಿ ರೂಪಿಸಲಾದ ಯೋಜನೆ ಕ್ವಿಕ್ ವ್ಯಾಲೆಟ್. ಇದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲಾಗುತ್ತಿತ್ತು. ಆದರೂ ಇದಕ್ಕೆ ಹೂಡಿಕೆ ಮಾಡಿರಲಿಲ್ಲ. ಇದರ ಮೇಲೆ ನಂಬಿಕೆ ಹೊಂದಿದ್ದ ಸುಮಾ ಇದರ ಕಾರ್ಯಾಚರಣೆ ಕುರಿತಾಗಿ ಸಂಸ್ಥೆಯಲ್ಲಿ ತಾರ್ಕಿಕವಾಗಿ ಹಾಗೂ ಯೋಜನಾಬದ್ಧವಾಗಿ ವಿವರಣೆ ನೀಡಿದರು. ಅವರ ದೃಷ್ಟಿಕೋನದಂತೆ ಈ ಉತ್ಪನ್ನದ ವ್ಯಾಪ್ತಿ ಹಾಗೂ ಅವಕಾಶ ಸಂಸ್ಥೆಯಲ್ಲಿರುವ ಮುಖ್ಯ ನಿರ್ವಾಹಕರ ಮನವೊಲಿಸುವಲ್ಲಿ ಸಫಲವಾಯಿತು.

ಉದ್ಯೋಗಿಗಳ ನೇಮಕಾತಿ, ಪ್ರತಿಭಾವಂತರ ತಂಡ ನಿರ್ಮಾಣದಂತಹ ಕೆಲಸಗಳ ಸಂಪೂರ್ಣ ಜವಾಬ್ದಾರಿಯನ್ನು ಸಂಸ್ಥೆ ಸುಮಾರವರಿಗೆ ವಹಿಸಿತು.

ಪ್ರದರ್ಶನ ಕಲೆಗಳಲ್ಲಿ ಆಸಕ್ತಿ

ಸುಮಾ ಈಗ ನೃತ್ಯ ಸಂಯೋಜನೆ ಸಂಸ್ಥೆಯೊಂದನ್ನು ಆರಂಭಿಸಲು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ಉತ್ತಮ ಸ್ನೇಹಿತರು ಹಾಗೂ ಅತ್ಯುತ್ತಮ ನೃತ್ಯ ತರಬೇತುದಾರರ ಸಂಪರ್ಕವಿದೆ. ಇತ್ತೀಚೆಗಷ್ಟೇ ನೃತ್ಯ ಕಲೆಗೆ ಸಂಬಂಧಿಸಿದ ಕಾರ್ಯಾಗಾರವೊಂದನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಹಾಗಾಗಿ ಸುಮಾ ಜಾಗತಿಕವಾಗಿ ಗುರುತಿಸಿಕೊಳ್ಳಬಲ್ಲ ಬೃಹತ್ ನೃತ್ಯ ಸಂಯೋಜನಾ ಸಂಸ್ಥೆಯೊಂದನ್ನು ಹುಟ್ಟುಹಾಕುವತ್ತ ಗಮನ ಹರಿಸಿದ್ದಾರೆ.

Related Stories