ಊರಿಗೆ ಹೋಗಬೇಕಾ..? ಹಾಗಾದ್ರೆ, ನಿಮ್ಮ ಸಾಕುಪ್ರಾಣಿಯನ್ನ ಇಲ್ಲಿ ಬಿಡಿ..!

ಆರಾಧ್ಯ

0

ನಾಯಿ ಅಂದ್ರೆ ಎಲ್ಲರಿಗೂ ಪ್ರೀತಿ.. ಹಾಗಾಗಿಯೇ ಸಿಲಿಕಾನ್ ಸಿಟಿಯ ಬಹುತೇಕ ಮನೆಗಳಲ್ಲಿ ಮುದ್ದು ಮುದ್ದಾದ ನಾಯಿಗಳನ್ನ ಸಾಕ್ತಾರೆ.. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಬೆಳಗ್ಗಿನ ಸಮಯದಲ್ಲಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರೆ ಹತ್ತು ಮಂದಿಯಾದರೂ ನಾಯಿ ಜೊತೆಗೆ ವಾಕಿಂಗ್ ಹೋಗುವುದನ್ನು ನೋಡಬಹುದು. ಮನೆಯಲ್ಲಿ ಇದ್ದಷ್ಟು ಸಮಯ ನಾಯಿಯನ್ನು ಮುದ್ದಿಸಿ, ಅದರ ಜೊತೆ ಆಟ ಆಡ್ತಾ ಸಮಯ ಕಳೆಯುತ್ತಾರೆ.. ಆದ್ರೆ ನಾಯಿಯನ್ನು ವಿಪರೀತ ಹಚ್ಚಿಕೊಂಡವರಿಗೆ ಯಾವಾಗ ಕಷ್ಟ ಆಗುತ್ತೆ ಅಂದ್ರೆ ಒಂದೆರಡು ದಿನದ ಮಟ್ಟಿಗೆ ಊರಿಗೆ ಹೊರಡಬೇಕು ಅಂದ್ರೆ ಸಾಕು ಎಲ್ಲಿಲ್ಲದ ಚಿಂತೆ ಹುಟ್ಟಿಕೊಳ್ಳುತ್ತೆ..

ನಾಯಿಗಳನ್ನು ಊರಿಗೆ ಕರೆದುಕೊಂಡು ಹೋಗಲು ಸಾಧ್ಯವಾಗೊಲ್ಲ, ಹಾಗಂತ ಮನೆಯಲ್ಲೇ ಬಿಟ್ಟರೆ ಅದನ್ನ ನೋಡಿಕೊಳ್ಳುವವರಿಲ್ಲ. ಪಕ್ಕದ ಮನೆಯವರಿಗೂ ಸ್ನೇಹಿತರಿಗೂ ಹೇಳಲು ಸರಿಯೊಗುವುದಿಲ್ಲ. ಇಂಥಾ ಸಂದರ್ಭದಲ್ಲಿ ಏನು ಮಾಡಬೇಕು ಅನ್ನೋ ಚಿಂತೆ ಎಲ್ಲರಿಗೂ ಎದುರಾಗುತ್ತದೆ. ಅಂಥಾ ಸಮಯದಲ್ಲಿ ಪಾರು ಮಾಡುವುದಕ್ಕೆ ಪೆಟ್ ಸ್ಪೇಸ್ ಇದೆ.

ಏನಿದು ಪೆಟ್ ಸ್ಪೇಸ್?

ಪೆಟ್ ಸ್ಪೇಸ್ ಸಂಸ್ಥೆ ಕಳೆದ ಐದು ವರ್ಷಗಳಿಂದ ಸಾಕುಪ್ರಾಣಿಗಳನ್ನು ನೋಡಿಕೊಳ್ಳುವ ತಾಣವಾಗಿದೆ. ನೀವು ಬೇರೆ ಊರಿಗೆ ಹೊರಟಿದ್ದರೆ ನಿಮ್ಮ ಸಾಕುಪ್ರಾಣಿಗಳನ್ನು ಇಲ್ಲಿಗೆ ತಂದು ಬಿಟ್ಟರೆ ಸಾಕು. ಇವರು ನಿಮ್ಮ ಪ್ರೀತಿಯ ಸಾಕು ಪ್ರಾಣಿಗಳ ಕಾಳಜಿ ಮಾಡ್ತಾರೆ.. ಹೊತ್ತು ಹೊತ್ತಿಗೆ ಊಟ ಕೊಟ್ಟು, ಸ್ನಾನ ಮಾಡಿಸಿ ಪ್ರೀತಿಯಿಂದ ಆರೈಕೆ ಮಾಡ್ತಾರೆ.. ಹೌದು ಈ ಪೆಟ್ ಸ್ಪೇಸ್ ನಲ್ಲಿ ನಿಮ್ಮ ಪ್ರೀತಿಯ ಪೆಟ್ ಗಳನ್ನ ಬಹಳ ಕಾಳಜಿಯಿಂದ ಆರೈಕೆ ಮಾಡ್ತಾರೆ.. ಅದಕ್ಕೆ ಬೆಳಗ್ಗೆ ವಾಕಿಂಗ್ ನಂತರ ಸಮಯಕ್ಕೆ ಸರಿಯಾಗಿ ತಾಜಾ ಹಾಗೂ ರುಚಿಕಾರವಾದ ಊಟ, ತಿಂಡಿ ನಂತರ ಬೇರೆ ನಾಯಿಗಳ ಜೊತೆ ಆಟವಾಡಿಸ್ತಾ.. ಆಮೇಲೆ ಎಲ್ಲ ನಾಯಿಗಳಿಗೂ ಹೆಲ್ತ್ ಚೆಕ್ ಮಾಡಿ, ಮಧ್ಯಾಹ್ನದ ಊಟ ನೀಡ್ತಾರೆ.. ಹೀಗೆ ಅವರ ವೇಳಾ ಪಟ್ಟಿಯ ಪ್ರಕಾರ ಅವುಗಳನ್ನ ಆರೈಕೆ ಮಾಡ್ತಾರೆ.. ಇದಕ್ಕೆ ಅಂತಲೇ ಪ್ರತಿದಿನ ವೇಳಾ ಪಟ್ಟಿಯನ್ನ ಊಟದ ವಿವರವನ್ನ ಪ್ರಕಟಿಸ್ತಾರೆ..

ಇನ್ನು ನಾಯಿಗಳು ಆಟವಾಡೋದಕ್ಕೆ ಜಾಗ ಬೇಕು, ನಮ್ಮ ಬೆಂಗಳೂರಿನಲ್ಲಿ ಗಾಡಿ ನಿಲ್ಲಿಸೋಕ್ಕೆ ಜಾಗ ಇರಲ್ಲ ಅಂತದ್ರಲ್ಲಿ ನಾಯಿಗಳು ಆಟ ಆಡೋದಕ್ಕೆ ಜಾಗ ಎಲ್ಲಿದೆ ಅಂತ್ತೀರಾ.. ಅಂದ್ರೆ ಇಲ್ಲಿ ಆ ಸಮಸ್ಯೆ ಇಲ್ಲ, ನಿಮ್ಮ ಮುದ್ದು ಪ್ರಾಣಿಗಳು ಆಟವಾಡೋದಕ್ಕೆ ಬಹಳ ವಿಶಾಲವಾದ ಜಾಗ ಈ ಪೆಟ್ ಸ್ಪೇಸ್ ನಲ್ಲಿದೆ.. ಅವುಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಿಬ್ಬಂದಿಗಳು ನೋಡಿಕೊಳ್ತಾರೆ.. ಜೊತೆಗೆ ಸಿಸಿಟಿವಿಯ ವ್ಯವಸ್ಥೆಯು ಕೂಡ ಇದೆ.. ಈ ಪೆಟ್ ಸ್ಪೇಸ್ ನಲ್ಲಿ ಸ್ವಚ್ಛತಗೆ ಬಹಳ ಪ್ರಾಮುಖ್ಯತೆಯನ್ನ ಕೊಡ್ತಾರೆ.. ಯಾವುದೇ ರೀತಿ ನಾಯಿಗಳಿಗೆ ಇನ್​ಫೆಕ್ಷನ್​​ ಆಗದ ರೀತಿಯಲ್ಲಿ ನೋಡಿಕೊಳ್ತಾರೆ..

ಅಷ್ಟೇ ಅಲ್ಲದೇ ಈ ಸಂಸ್ಥೆಯಲ್ಲಿ ಯಾವ ವಯಸ್ಸಿನ ನಾಯಿ ಆದ್ರು ಕೂಡ ಅವುಗಳಿಗೆ ಪ್ರತಿದಿನ ಟ್ರೈನಿಂಗ್ ನೀಡ್ತಾರೆ, ಅಂದ್ರೆ ನಾವುಗಳು ಮಾತನಾಡುವ ಭಾಷೆ ಹಾಗೂ ಸಣ್ಣ ಪುಟ್ಟ ಕೆಲಸ ಮಾಡೋದ್ದನ್ನ ಹೇಳಿಕೊಡ್ತಾರೆ.. ನಿಮಗೆ ಎಷ್ಟು ದಿನ ಬೇಕೋ ಅಷ್ಟು ದಿನ, ನಿಮ್ಮ ಸಾಕು ಪ್ರಾಣಿಯನ್ನ ಇಲ್ಲಿ ಬಿಡಬಹುದು.. ಇದಕ್ಕೆ ನೀವು ಮಾಡಬೇಕಾಗಿರೋದು ಅವರ ವೆಬ್ ಸೈಟ್ ಗೆ ಹೋಗಿ ಅಲ್ಲಿ ನಿಮ್ಮ ಸಾಕು ಪ್ರಾಣಿಯ ವಿವರ ಹಾಗೂ ಎಷ್ಟು ದಿನ ಎಂದು ತಿಳಿಸಿದ್ರೆ ಸಾಕು, ಅವರೆ ನಿಮಗೆ ಕಾಲ್ ಮಾಡಿ ಮುಂದೆ ಏನು ಮಾಡಬೇಕು ಎಂದು ತಿಳಿಸ್ತಾರೆ..

ಇನ್ನು ಈ ಸಂಸ್ಥೆಯಲ್ಲಿ ಡೇ ಕೇರ್ ಸೌಲಭ್ಯವು ಕೂಡ ಇದೆ.. ನೀವು ಕೆಲಸಕ್ಕೆ ತೆರಳುವ ಸಮಯ ನಿಮ್ಮ ನಾಯಿಯನ್ನ ತಂದು ಬಿಟ್ಟು, ಮನೆಗೆ ಹೋಗುವಾಗ ಕರೆದುಕೊಂಡು ಹೋಗಬಹುದು.. ಈ ಪೆಟ್ ಸ್ಪೇಸ್ ಸಂಸ್ಥೆಯಲ್ಲಿ ನಿಮ್ಮ ಸಾಕು ಪ್ರಾಣಿಯನ್ನ ಬಿಟ್ಟರೇ ಬಹಳ ನೆಮ್ಮದಿಯಾಗಿ ಯಾವುದೇ ಚಿಂತೆ ಇಲ್ಲದೆ ಇರಬಹುದು, ಯಾಕಂದ್ರೆ ಅಷ್ಟು ಕಾಳಜಿಯಿಂದ ಇವರು ಆರೈಕೆ ಮಾಡ್ತಾರೆ.. 

Related Stories