ನ್ಯೂ ಲುಕ್‍ನಲ್ಲಿ, ನ್ಯೂ ಆರ್ಯ ಭವನ್ ಸ್ವೀಟ್ಸ್

ವಿಸ್ಮಯ

0

ಕಾಲಕ್ಕೆ ತಕ್ಕಂತೆ ಬದಲಾವಣೆ ಆಗುವುದು ಸರ್ವೇ ಸಾಮಾನ್ಯ.  ಬದಲಾವಣೆ ಜಗದ ನಿಯಮ ಅನ್ನೊ ಹಾಗೇ ಹಳೇ ಪದ್ಧತಿಗೆ ಗುಡ್‍ಬೈ ಹೇಳಿ, ಹೊಸ ತಲೆಮಾರಿಗೆ ತಕ್ಕಂತೆ ಹೊಸ ಲುಕ್‍ನಲ್ಲಿ ಮಿಂಚಿತ್ತಿದೆ ನ್ಯೂಆರ್ಯ ಭವನ್ ಸ್ವೀಟ್ಸ್. ಬೆಂಗಳೂರಿನ ಹೃದಯ ಭಾಗವಾಗಿರೋ ಎಂ.ಜಿ. ರಸ್ತೆಗೆ ಬಂದ್ರೆ ಮೊದಲಿಗೆ ನಮ್ಮಗೆ ಸಿಗುವುದೇ ನ್ಯೂ ಆರ್ಯಭವನ್ ಸ್ವೀಟ್ಸ್. ತನ್ನ ರುಚಿಕರ ಖಾದ್ಯಗಳಿಂದಲ್ಲೇ ಹೆಚ್ಚು ಫೇಮಸ್ ಪಡೆದುಕೊಂಡಿದೆ.

ಎಂ.ಜಿ.ರಸ್ತೆಗೆ ಹೋದಾಗ ಮೊದಲು ಕಣ್ಣಿಗೆ ಬೀಳುವುದೇ ನ್ಯೂ ಆರ್ಯ ಭವನ್ ಸ್ವೀಟ್ಸ್.. ದಿನಕ್ಕೆ ಸಾವಿರಾರು ಮಂದಿ ಎಂ ಜಿ ರೋಡ್‍ಗೆ ಬರುತ್ತಿತ್ತಾರೆ.. ಬರುವವರು ಇಲ್ಲಿನ ಸಿಹಿ ತಿನಿಸು, ಚಾಟ್ಸ್​​ಗಳನ್ನು ಸವಿಯದೇ ಹೋಗುವುದಿಲ್ಲ.. ವರ್ಷ ವರ್ಷಗಳ ಕಾಲ ತನ್ನ ಅಸ್ಥಿತ್ವವನ್ನು ಹಾಗೇ ಉಳಿಸಿಕೊಂಡು ಬಂದಿದೆ.. 1945ರಲ್ಲಿ ಆರಂಭವಾದ ಈ ಸಂಸ್ಥೆ ಇಂದು ಬೇರೆ ಬೇರೆ ಸ್ಥಳಗಳಲ್ಲಿ ನಿರ್ಮಾಣವಾಗಿ ತನ್ನದೇ ಹೆಸ್ರು ಹೊಂದಿದೆ.. ವರ್ಷಗಳು ಹುರಿಳಿದಂತೆ, ಜನಕ್ಕೆ ತಕ್ಕಂತೆ ಬದಲಾವಣೆಯನ್ನ ಒಪ್ಪಿಕೊಂಡಿದೆ..

ಇದನ್ನು ಓದಿ: ಗೋಲ್ಡ್, ರೋಲ್ ಗೋಲ್ಡ್ ಆಭರಣ ಬೊರ್ ಆಗಿದ್ಯಾ! ಹಾಗಾದ್ರೆ ಹೂವಿಂದ ತಯಾರದ ಡಿಫರೆಂಟ್ ಆಭರಣ ಟ್ರೈ ಮಾಡಿ

ಈಗಲೇನಾದ್ರೂ ಜನ್ರು ಆತ ಹೋದ್ರೆ ಇಲ್ಲಿ ಇದ್ದ ಸ್ವೀಟ್ಸ್ ಅಂಗಡಿಯಲ್ಲಿ ಎಂದು ಹುಡುಕಾಟ ಮಾಡದೇ ಇರಾರು.. ಯಾಕೆಂದ್ರೆ ಹೊಸ ವಿನ್ಯಾಸದೊಂದಿಗೆ, ಹೊಸ ರೂಪದೊಂದಿಗೆ, ಹೊಸ ಶೈಲಿಯಲ್ಲಿ ನ್ಯೂ ಆರ್ಯ ಭವನ್ ಕಂಗೊಳಿಸುತ್ತಿದೆ.. ಹೌದು ಹೊಸ ವಿನ್ಯಾಸದಲ್ಲಿ ಸಣ್ಣದಾದ ಬೆಳಕಿನ ಕೆಳಗೆ ಮರದ ಬೆಂಚಿನಲ್ಲಿ ಕುಳಿತಾಗ ನಿಜಕ್ಕೂ ಖುಷಿ ನೀಡುತ್ತೆ.. ಅಷ್ಟೇ ಅಲ್ಲ ಗೋಡೆಗಳ ಮೇಲೂ ಹಳೇ ಕಾಲವನ್ನು ನೆನಪಿಸುವ ಚಿತ್ರಗಳನ್ನು ಹಾಕಲಾಗಿದೆ. ಅವರು ನಡೆದು ಬಂದ ದಾರಿಯನ್ನು ನೆನಪಿಸುವ ಪ್ರಯತ್ನವನ್ನು ಮಾಡಲಾಗ್ತಿದೆ. ಇವಿಷ್ಟೇ ಅಲ್ಲ ಬರುವ ಗ್ರಾಹಕರಿಗಾಗಿ ಲೈಟ್ ಮ್ಯೂಸಿಕ್ ನಿಜಕ್ಕೂ ಥ್ರಿಲ್ ಕೊಡುತ್ತೆ. ಹೊರಗೆ ಅಷ್ಟು ಟ್ರಾಫಿಕ್‍ಗಳು ವಾಹನಗಳ ಶಬ್ಧಗಳು ಇದ್ರೂ, ಒಳಗೆ ಬಂದಾಗ ಹೊಸ ಲೋಕಕ್ಕೆ ಭೇಟಿ ನೀಡುವ ಅನುಭವ ನೀಡುತ್ತೆ..

ಯಾವುದು ಹೆಚ್ಚು ಫೇಮಸ್..?

ನ್ಯೂ ಆರ್ಯ ಭವನ್ ಸ್ವೀಟ್ಸ್​​ನಲ್ಲಿ ಸುಮಾರು ನೂರಾರು ಬಗೆಯ ಸ್ವೀಟ್ಸ್​​ಗಳಿವೆ. ಅದ್ರಲ್ಲೂ ರಾಜಸ್ತಾನಿಯ ಬಗೆ ಬಗೆಯ ಸ್ವೀಟ್ಸ್​​ಗಳು ಬಾಯಲ್ಲಿ ನೀರೂರುವಂತೆ ಮಾಡುತ್ತೆ.. ಅಷ್ಟೇಅಲ್ಲದೇ ಸಮೋಸ, ಕಾಚೋರಿ, ದಹಿಕಾಚೋರಿ, ಆಲು ಪಾರಟ, ಸೇರಿದಂತೆ ಚಾಟ್ಸ್, ಸ್ಯಾಕ್ಸ್, ರೋಟಿಗಳಿಗೆ ಹೆಚ್ಚು ಫೇಮಸ್. ರಾಜಸ್ತಾನದ ಬಾಣಸಿಗರು ಮಾಡಿರುವ ಈ ಐಟಂಗಳಿಗೆ ಎಲ್ಲಿಲ್ಲದ ಬೇಡಿಕೆ. ಕೋಲ್ಡ್ ಬಾದಮಿ ಹಾಲು, ಸ್ವೀಟ್ ಲಸ್ಸಿಗಳಿಂಗತೂ ಜನ ಮುಗಿಬಿಳುತ್ತಾರೆ. ನಾರ್ಥ್ ಇಂಡಿಯಾ ಫುಡ್‍ಗಳಿಗೆ ಹೆಚ್ಚು ಫೇಮಸ್.. ಯಾಕೆಂದ್ರೆ ಎಂ ಜಿ ರೋಡ್‍ಗೆ ಹೆಚ್ಚಾಗಿ ನಾರ್ಥ್ ಇಂಡಿಯನ್ಸ್ ಬರೋದ್ರಿಂದ, ಇಲ್ಲಿ ನಾರ್ಥ್ ಇಂಡಿಯಾ ಫೂಡ್‍ಗಳಿಗೆ ಹೆಚ್ಚು ಬೇಡಿಕೆ..

ಏನ್ ಹೇಳ್ತಾರೆ ಆಹಾರ ಪ್ರಿಯರು..?

ನಾನು ವಿಕೇಂಡ್‍ಗೆ ಎಂ ಜಿ ರೋಡ್‍ಗೆ ಬರ್ತಾನೆ ಬಂದಾಗ ಮೊದಲಿಗೆ ಇಲ್ಲಿಗೆ ಬಂದು ಇಲ್ಲಿ ಸಿಗುವ ಚಾಟ್ಸ್ ತಿಂದು ಹೋಗುತ್ತೇನೆ. ಅಷ್ಟು ಫೇಮಸ್.. ಹಾಗೇ ನಾವು ಚಿಕ್ಕವರಿದ್ದಾಗ ನಮ್ಮ ತಂದೆ ಇಲ್ಲಿಗೆ ಕರೆದುಕೊಂಡು ಬರುತ್ತಿದ್ದರು. ಈಗ ನಾನು ನನ್ನ ಫ್ರೆಂಡ್ಸ್ ಬರುತ್ತಿವೆ ಅಂತಾರೆ ರಾಹುಲ್..

ಮತ್ತೊಬ್ಬ ರ್ಪಮೆಂಟ್ ಕಸ್ಟಮರ್ ಆಗಿರೋ ಶಿವು ಹೇಳುವುದು ಹೀಗೆ. ಮೊದಲಿನಿಂದಲ್ಲೂ ನನಗೆ ಸಿಹಿ ತಿನಿಸುಗಳು ಅಂದ್ರೆ ತುಂಬಾ ಇಷ್ಟ. ನಮ್ಮ ಮನೆಯ ಯಾವುದೇ ಸಮಾರಂಭಗಳು ಇದ್ರೂ ನಾನು ಇಲ್ಲನಿಂದಲ್ಲೇ ಸ್ವೀಟ್ಸ್​​ಗಳನ್ನು ಖರೀದಿ ಮಾಡುವುದು ಅಂತಾರೆ. ಇಲ್ಲಿನ ಸಿಹಿ ತಿನಿಸುಗಳು ತುಂಬಾನೇ ಚೆನ್ನಾಗಿ ಇರುತ್ತೆ.. ಮತ್ತೆ ಮತ್ತೇ ತಿನ್ನಬೇಕು ಅನ್ನಿಸುತ್ತೆ ಅಂತಾರೆ ಶಿವು..

ನ್ಯೂಆರ್ಯಭವನ್ ಸ್ವೀಟ್ಸ್ ಹೊಸ ಲುಕ್‍ನಲ್ಲಿ, ಹೊಸ ವಿನ್ಯಾಸದೊಂದಿಗೆ ಬದಲಾಗಿದೆ.. ಅದೇ ರುಚಿ ಶುಚಿ ಕಾಪಡಿಕೊಂಡು ಬಂದಿದೆ. ಇಂದಿಗೂ ಅದೆಷ್ಟೋ ಜನ ಎಂ ಜಿ ರೋಡ್‍ಗೆ ಬಂದಾಗ ನ್ಯೂ ಆರ್ಯ ಭವನ್‍ಗೆ ಹೋಗದೇ ಇರೋಲ್ಲ.. ಕಾಲ ಬದಲಾದಂತೆ ಎಲ್ಲರೊಂದಿಗೆ ನಾವು ಬದಲಾವಣೆ ಆಗಲ್ಲೇ ಬೇಕು.. ಆದ್ರೆ ಹಳೆಯ ರುಚಿಯನ್ನು ಉಳಿಸಿಕೊಂಡು, ಹೊಸ ಲುಕ್‍ನಲ್ಲಿ ಮಿಂಚಿತ್ತಿದೆ.

ಇದನ್ನು ಓದಿ

1. ಒಂದು ‘ಚಿಪ್ಸ್'ನ ಕಥೆ.. ಹಳ್ಳಿಯಿಂದ ಮೆಟ್ರೋವರೆಗೆ ಹಬ್ಬಿದ ಸ್ವಾದ.. !

2. ಕನ್ನಡಕ್ಕೊಬ್ಬರೇ ಲೇಡಿ ಕೊರಿಯೋಗ್ರಾಫರ್..!

3. ಒನ್ ಡೇ ರೆಸ್ಟೋರೆಂಟ್‍ನಲ್ಲಿ ವಿಕೆಂಡ್ ಮಸ್ತಿ

Related Stories