ರಾಸಾಯನಿಕ ಐಟಂಗಳಿಗಿಂತ- ಹ್ಯಾಂಡ್‍ಮೇಡ್ ಐಟಂಗಳಿಗೆ ಭಾರೀ ಡಿಮ್ಯಾಂಡ್​​..! 

ವಿಸ್ಮಯ

0

ನಾವು ಹಲ್ಲು ಉಜ್ಜುವ ಪೇಸ್ಟ್​​ನಿಂದ ಹಿಡಿದು, ಪ್ರತಿಯೊಂದು ವಸ್ತುವು ಹಾನಿಕಾರಕ ರಾಸಾಯನಿಕದಿಂದ ತುಂಬಿ ಹೋಗಿವೆ. ಅದಕ್ಕಾಗಿ ಇತ್ತೀಚಿನ ದಿನಗಳಲ್ಲಿ ಅದಷ್ಟು ಕಡಿಮೆ ಕೆಮಿಕಲ್ಸ್ ಇರೋ ವಸ್ತುಗಳ ಕಡೆ ಜನ ಆಸಕ್ತಿ ತೋರುತ್ತಿದ್ದಾರೆ. ಅದ್ರಲ್ಲೂ ಈಗ ಹೆಚ್ಚು ಟ್ರೆಂಡ್‍ನಲ್ಲಿ ಇರೋದು ಅಂದ್ರೆ ಹ್ಯಾಂಡ್ ಮೇಡ್ ಸೋಪ್‍ಗಳು.

ಒಂದಕ್ಕಿಂತ ಒಂದು ವಿಭಿನ್ನವಾದ ಬಣ್ಣ ಬಣ್ಣದ ಸುಗಂಧ ಭರಿತ ಸೋಪ್‍ಗಳು. ಕಿತ್ತಳೆ, ವೈನ್, ಗುಲಾಬಿ, ಚಾಕಲೇಟ್, ವೆನಿಲಾ, ಹಾಲು, ಕಾಫೀ ಹೀಗೆ ಯಾರಿಗೆ ಯಾವ ಫ್ಲೇವರ್ ಇಷ್ಟಾನೋ ಆ ಫ್ಲೇವರ್ ಸೋಪ್‍ಗಳು ಸಿಗುತ್ತವೆ. ಇನ್ನು ಹೆಚ್ಚು ರಾಸಾಯನಿಕ ಅಂಶ ಬಳಸದೇ ಮನೆಯಲ್ಲಿ ತಯಾರಿಸುವ ಈ ಸೋಪ್‍ಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ ಶುರುವಾಗಿದೆ.. ಸದ್ಯ ಇರೋ ವೆರೈಟಿಗಳಲ್ಲದೇ ಮತ್ಯಾವುದಾದ್ರು ಇದ್ದರೆ ಆ ಸೋಪ್‍ಗಳನ್ನು ಕೂಡ ತಯಾರು ಮಾಡಿಕೊಡುತ್ತಾರೆ.

ಇದನ್ನು ಓದಿ: ಕೈ ತುಂಬಾ ಸಂಬಳ, ಅತ್ಯುನ್ನತ ವ್ಯಕ್ತಿಗಳೊಡನೆ ನೆಟ್‍ವರ್ಕ್, ಬೆಂಗಳೂರಿನ ಹೈ-ಫೈ ಲೈಫ್​​ ಬಿಟ್ಟು ವಿದ್ಯೆ ಕಲಿಸಲು ಹೊರಟ "ಯುವಸಂತ"

ಅಂದಹಾಗೇ ಇವುಗಳ ತಯಾರಕರು ಪ್ರಿಯಜೈನ್. ಮಿಶಿಕ್ರಾಫ್ಟ್ ಮಾಲೀಕರು ಮನೆಯಲ್ಲಿ ಕುಳಿತು ಹ್ಯಾಂಡ್ ಮೇಡ್ ಬ್ಯುಸಿನೆಸ್ ಮಾಡುತ್ತಿದ್ದಾರೆ. ಆರಂಭದಲ್ಲಿ ಮೊದಲಿಗೆ 2 ಫ್ಲೇವರ್‍ನಲ್ಲಿ ಹೋಮ್‍ಮೆಡ್ ಬ್ಯುಸಿನೆಸ್ ಅನ್ನು ತಯಾರು ಮಾಡಿದ್ರು. ಡ್ರೈ ಸ್ಕಿನ್ ಹೊಂದಿರೋವವರಿಗೆ ಹಾಲಿನಿಂದ ತಯಾರಿಸಿದ ಸೋಪ್ ಹಾಗೂ ಸಾಮಾನ್ಯ ತ್ವಚ್ಚೆಯ ಸೋಪ್‍ಅನ್ನು ತಯಾರು ಮಾಡಿದ್ರು. ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಈಗ 15ಕ್ಕೂ ಹೆಚ್ಚು ಬಗೆಯ ಫ್ಲೇವರ್‍ನ ಸೋಪ್‍ಗಳನ್ನು ತಯಾರು ಮಾಡುತ್ತಾರೆ. ಇನ್ನು ಇದನ್ನು ಆನ್‍ಲೈನ್‍ನಲ್ಲೂ ಬುಕ್ ಮಾಡಬಹುದು.ಅದಕ್ಕಾಗಿ ಇವರದ್ದೇ ಆದ ವೆಬ್‍ಸೈಟ್ ಇದ್ದು www.mishikrafts.biz ಬೇಟಿ ನೀಡಬಹುದು.

ಕೆಲವೇ ನಿಮಿಷದಲ್ಲಿ ತಯಾರು ಮಾಡೋ ಈ ಸೋಪ್‍ಗಳು ಉತ್ತಮ ಗುಣಮಟ್ಟವನ್ನು ಹೊಂದಿವೆ. ಪ್ರತಿಯೊಬ್ಬರಿಗೂ ಅವ್ರ ಚರ್ಮಕ್ಕೆ, ಅಭಿರುಚಿಗೆ ಹೊಂದುವಂತೆ ಸೋಪ್‍ಗಳು ಸಿಗೋದು ವಿಶೇಷ.  ಸಣ್ಣ ಮಕ್ಕಳಿಗೆ ಹಾಲು ಮತ್ತು ವೆನಿಲಾಗಳನ್ನು ಬಳಸಿ ತಯಾರಿಸಿ ಸೋಪುಗಳನ್ನು ವಿಶೇಷವಾಗಿ ತಯಾರಿಸಲಾಗುತ್ತೆ. ಅದೇ ರೀತಿ ಮೊಡವೆಯ ಸಮಸ್ಯೆ ಇರೋರಿಗೆ ಬೇವಿನ ಬಳಕೆ, ಒಣ ಚರ್ಮದವರಿಗೆ ಬಾದಾಮಿಯ ಬಳಕೆ ಹೀಗೆ ಅವರವರ ಅವಶ್ಯಕತೆಗೆ ತಕ್ಕಂತೆ ಆಯಾ ಸಾಮಾಗ್ರಿಗಳನ್ನು ಬಳಸಿ ಸೋಪುಗಳನ್ನು ತಯಾರಿಸಲಾಗುತ್ತೆ.

ಹರ್ಷಾ ಅವರು ಹೇಳುವಂತೆ, ಮೊದಲು ನನ್ನ ಸ್ಕಿನ್ ತುಂಬಾನೇ ಡ್ರೈ ಆಗಿತ್ತು.. ಯಾವ ಸೋಪ್‍ಗಳು ನನಗೆ ಒಪ್ಪುತ್ತಿರಲಿಲ್ಲ.. ನಂತ್ರ ಮನೆಯಲ್ಲೇ ತಯಾರಿಸುವ ಈ ಸೋಪ್ ಬಗ್ಗೆ ಕೇಳಿ ಒಮ್ಮೆ ಟ್ರೈ ಮಾಡದೇ ಒಳ್ಳೆ ಫಲಿತಾಂಶ ಸಿಕ್ತು ಅಂತಾ ಖುಷಿ ವ್ಯಕ್ತಪಡಿಸುತ್ತಾರೆ.

ಇಲ್ಲಿ ಕ್ವಾಲಿಟಿ ಸೋಪ್​ಗಳ ಜೊತೆ ಶ್ಯಾಂಪೂಗಳನ್ನು ಕೂಡ ತಯಾರು ಮಾಡುತ್ತಾರೆ. ಹಾಗೇ ನಿಮ್ಮ ತ್ವಚ್ಚೆಗಾಗಿ ನೈಟ್ ಕ್ರೀಮ್, ಬಿಸಿಲಿನಿಂದ ಒಣಗಿರುವ ತುಟಿಗಳಿಗೂ ಲಿಪ್‍ಬ್ಲಾಸ್ ಕೂಡ ಮನೆಯಲ್ಲೇ ರೆಡಿ ಮಾಡ್ತಾರೆ. ಇವಿಷ್ಟೇನಾ ಅಂದುಕೊಂಡರೆ ರೆಡಿಮೇಡ್ ಬ್ಲೌಸ್‍ಗಳು, ಡೆಕೋರೇಟಿವ್ ಪೂಜಾ ಐಟಂಗಳು, ಬಾಡಿ ಆಯಿಲ್, ಫೇಸ್ ಪ್ಯಾಕ್, ಹ್ಯಾಂಡ್ ಮೇಡ್ ಜ್ಯೂವೆಲರಿ, ಕ್ಯಾಂಡಲ್‍ಗಳು ಸೇರಿದಂತೆ ಹತ್ತಾರು ಐಟಂಗಳನ್ನು ಮನೆಯಲ್ಲೇ ರೆಡಿ ಮಾಡುತ್ತಾರೆ ಈ ಮಹಿಳೆ.

ಬಾಯಲ್ಲಿ ನೀರೂರಿಸುವ ಚಾಕಲೇಟ್‍ಗಳನ್ನು ಕೂಡ ತಯಾರಿಸಲಾಗುತ್ತೆ. ಬೇರೆ ಬೇರೆ ಫ್ಲೇವರ್‍ನಲ್ಲಿ ಒಟ್ಟು 8 ಬಗೆಯ ಚಾಕಲೇಟ್‍ಗಳು ಲಭ್ಯವಿದೆ. ಸ್ನಾನ ಮಾಡುವಾಗ ನಿಮ್ಮ ಮನಸ್ಸಿಗೆ ಆಹ್ಲಾದಕರವಾಗಿದ್ದು ದಿನವಿಡೀ ಫ್ರೆಶ್‍ನೆಸ್ ಫೀಲ್ ಆಗೋಕ್ಕೆ ಹ್ಯಾಂಡ್‍ಮೇಡ್ ಸೋಪ್‍ಗಳು ಬಹಳ ಸಹಕಾರಿ. ಜೊತೆಗೆ ಇವುಗಳ ಬೆಲೆ ಕೂಡ ಕಡಿಮೆ ಅನ್ನೋದು ಪ್ಲಸ್ ಪಾಯಿಂಟ್. ಅದನೇ ಹೇಳಿ ಮನೆಯಲ್ಲೇ ಕುಳಿತು ಹೀಗೆ ಫಟಾಫಟ್ ಕೆಲಸ ಮಾಡಿ ಕೈ ತುಂಬಾ ಕಾಂಚಣ ಎಣಿಸಿಕೊಳ್ಳುತ್ತಿದ್ದಾರೆ.

ಇದನ್ನು ಓದಿ:

1. ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗ್ತಿದೆ ಮಣ್ಣಿನ ಹೂಜಿಗೆ ಡಿಮ್ಯಾಂಡ್

2. ವರ್ತಕರ ಸಮಸ್ಯೆಗೆ ಪರಿಹಾರ ಒದಗಿಸಿಲಿದೆ ರೋಡ್ ರನ್ನರ್

3. ಸಾವಾಧಾನವಾಗಿ ಊಟ ಮಾಡಿ...ಹೊಟ್ಟೆ ತುಂಬಿಸಿಕೊಂಡ ಸಂತೋಷವಾಗಿರಿ...!

Related Stories

Stories by YourStory Kannada