ಅನುಭವದಿಂದಲೇ ಸ್ವಂತ ಉದ್ಯಮ ಸ್ಥಾಪಿಸಿದ ಸಂಜಯ್ ಸೇಥಿ

ಟೀಮ್​​ ವೈ.ಎಸ್​​.ಕನ್ನಡ

0

ಯಾವುದೇ ಉದ್ಯಮದಲ್ಲಾದರೂ ಯಶ ಕಾಣಬೇಕೆಂದರೆ ಅದಕ್ಕೆ ಶ್ರಮ ಅತ್ಯಗತ್ಯ. ಹೀಗೆ ಶ್ರಮ ಮತ್ತು ಅನುಭವದಿಂದಲೇ ತಮ್ಮದೇ ಆದ ಬೃಹತ್ ಉದ್ಯಮ ಸ್ಥಾಪಿಸಿದವರೆಂದರೆ ಸಂಜಯ್ ಸೇಥಿ. ಒಂದೊಮ್ಮೆ ತಾಜ್ ಹೋಟೆಲ್ ಸಮೂಹದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಜಯ್ ಇದೀಗ ಸಂಸ್ಥೆಯನ್ನು ಸ್ಥಾಪಿಸಿ ದೇಶದ ಹೋಟೆಲ್ ಉದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

ತಾಜ್ ಗ್ರೂಪ್ ಆಫ್ ಹೋಟೆಲ್‍ನ ಹೈದರಾಬಾದ್ ಪ್ರಾದೇಶಿಕ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ ಸಂಜಯ್ ಸೇಥಿ ಮೊದಲಿಗೆ ಬರ್ಗ್ಯೂನ್ ಹೋಟೆಲ್ ಸ್ಥಾಪಿಸಿದರು. ತಾಜ್ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಲೇ ಹೋಟೆಲ್ ಉದ್ಯಮದ ಎಲ್ಲಾ ಕಲೆ ಮತ್ತು ಅದನ್ನು ಮುನ್ನಡೆಸುವ ಬಗೆಯನ್ನು ಕರತಗ ಮಾಡಿಕೊಂಡ ಸಂಜಯ್ ಬರ್ಗ್ಯೂನ್ ಹೋಟೆಲ್ ಸಮೂಹವನ್ನು ಸ್ಥಾಪಿಸಿದರು. ಇದೀಗ ಅದೇ ಹೋಟೆಲ್ ಊದ್ಯಮದ ಅನುಭವವನ್ನಿಟ್ಟುಕೊಂಡು “ಕೀಸ್” ಹೋಟೆಲ್ ಸಮೂಹ ಸ್ಥಾಪಿಸಿದ್ದಾರೆ. ಸದ್ಯ 14 ಕೀಸ್ ಹೋಟೆಲ್ ತೆರೆದಿರುವ ಅವರು, ಅದರಲ್ಲಿ 6 ತಮ್ಮ ಮೆಲ್ವಿಚಾರಣೆಯಲ್ಲಿ ನಡೆಸುತ್ತಿದ್ದರೆ, ಉಳಿದ ಎಂಟನ್ನು ಬೇರೆಯವರಿಗೆ ಮೇಲುಸ್ತುವಾರಿ ನೀಡಿದ್ದಾರೆ. ಈ ಎಲ್ಲಾ ಹೋಟೆಲ್‍ಗಳಲ್ಲಿ ಒಟ್ಟು 1,300 ಕೊಠಡಿಗಳಿವೆ. ಉಳಿದಂತೆ 21 ಹೋಟೆಲ್‍ಗಳ ಅಭಿವೃದ್ದಿಯಲ್ಲಿ ತೊಡಗಿದ್ದಾರೆ. ಕೀಸ್ ಹೋಟೆಲ್‍ಗಳು ಬೆಂಗಳೂರು ಸೇರಿದಂತೆ ಔರಂಗಾಬಾದ್, ಚೆನೈ, ಲುಧಿಯಾನ, ಮುಂಬೈ, ಪುಣೆ ಮತ್ತು ತಿರುವನಂತಪುರಂನಲ್ಲಿ ಸೇವೆ ನೀಡುತ್ತಿವೆ. ಹೋಟೆಲ್ ಅಷ್ಟೇ ಅಲ್ಲದೆ , ಬೆಂಗಳೂರಿನ ವೈಟ್‍ಫೀಲ್ಡ್​​​ನಲ್ಲಿ ಕೀಸ್ ಅಪಾರ್ಟ್‍ಮೆಂಟ್‍ಗಳನ್ನು ನಿರ್ಮಿಸಲಾಗಿದೆ. ಹಾಗೆಯೇ, ಮಹಬಲೇಶ್ವರ, ಗೋವಾ ಮತ್ತು ದೆಹಲಿಯಲ್ಲಿ ಕೀಸ್ ರೆಸಾರ್ಟ್ ನಿರ್ಮಿಸಿದ್ದಾರೆ ಸಂಜಯ್.

ಬ್ರಾಂಡ್ ಸ್ಥಾಪನೆ

ತಾಜ್‍ನಲ್ಲಿ ತಾವು ಮಾಡುತ್ತಿದ್ದ ಕೆಲಸ ಅನುಭವದಿಂದಲೇ ಕೀಸ್ ಹೋಟೆಲ್‍ಗೆ ಬ್ರಾಂಡ್ ಮೌಲ್ಯ ಸ್ಥಾಪನೆಗೆ ಸಂಜಯ್ ಮುಂದಾಗಿದ್ದಾರೆ. ಬರ್ಗ್ಯೂನ್ ಹೋರ್ಡಿಂಗ್ಸ್ ಸಂಸ್ಥೆಯ ನೆರವಿನಿಂದ ಹೋಟೆಲ್ ಉದ್ಯಮಕ್ಕೆ ಧಮಿಕಿದ ಸಂಜಯ್ ಇದೀಗ ಅದರಲ್ಲಿ ಯಶ ಕಂಡಿದ್ದಾರೆ. "ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿರುವಾಗಲೇ ಸ್ವಂತ ಉದ್ಯಮ ಪ್ರಾರಂಭಿಸುವ ಕನಸು ಕಂಡಿದ್ದೆ" ಎಂದು ಹೇಳುವ ಸಂಜಯ್ ಅದಕ್ಕೆ ಬರ್ಗ್ಯೂನ್ ನೆರವು ನೀಡಿದೆ ಎಂದು ಹೇಳುತ್ತಾರೆ.

ತಮ್ಮದೇ ಉದ್ಯಮ ಸ್ಥಾಪನೆಗೂ ಮುನ್ನ ಸ್ವಂತ ತಂಡವನ್ನು ಸ್ಥಾಪಿಸಿದ್ದ ಸಂಜಯ್, ಅದರೊಂದಿಗೆ ಉದ್ಯಮದಲ್ಲಿ ಈಗಾಗಲೇ ತೊಡಗಿಕೊಂಡಿದ್ದವರೊಂದಿಗೆ ಚರ್ಚೆ ನಡೆಸಿದ್ದರು. ಅಲ್ಲದೆ, ಉದ್ಯಮದಲ್ಲಿ ಸಾಕಷ್ಟು ಅನುಭವವುಳ್ಳವರೊಂದಿಗೆ ಚರ್ಚಿಸಿ ಅವರನ್ನೇ ತಮ್ಮ ಉದ್ಯಮಕ್ಕೆ ಸೇರಿಸಿಕೊಂಡರು. ಅವರನ್ನೆಲ್ಲಾ ಕೆಲಸಗಾರರಾಗಲ್ಲದೆ ಸಹಭಾಗಿಗಳನ್ನಾಗಿ ಮಾಡಿಕೊಂಡಿದ್ದಾರೆ. ತಮ್ಮದೇ ತಂಡವನ್ನು ರಚಿಸಿಕೊಂಡ ಸಂಜಯ್ ನಂತರ ಉದ್ಯಮ ಆರಂಭಿಸಲು ಸರಿಯಾದ ಸ್ಥಳವನ್ನು ಹುಡುಕಲು ಶುರು ಮಾಡಿದರು. ಆಗ ಅವರಿಗೆ ದೊರಕಿದ್ದು ಔರಂಗಬಾದ್ ಮತ್ತು ತಿರುವನಂತಪುರಂ. ನಂತರ ಆ ನಗರಗಳಲ್ಲಿ ಈಗಾಗಲೆ ಇರುವ ಹೋಟೆಲ್‍ಗಳಲ್ಲಿನ ವ್ಯವಸ್ಥೆ ಮತ್ತು ಗ್ರಾಹಕರ ಬೇಡಿಕೆಯನ್ನು ಅಧ್ಯಯನ ನಡೆಸಿದರು. ನಂತರ ಸ್ವಂತ ಹೋಟೆಲ್ ಸ್ಥಾಪನೆಗೆ ಮುಂದಾದ ಅವರು, ಮೊದಲ ಹೋಟೆಲ್ ನಿರ್ಮಿಸಿದ್ದು 2009. ಇನ್ನು ಮುಂದುವರೆದು 2011ರಲ್ಲಿ ಕೀಸ್ ರೆಸಾರ್ಟ್ ಸ್ಥಾಪಿಸಿದರು. ಇದೀಗ ಕೀಸ್ ಕ್ಲಬ್ ಕೂಡ ಕೀಸ್ ಗ್ರೂಪ್‍ಗೆ ಸೇರ್ಪಡೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಕೀಸ್ ಗ್ರೂಪ್‍ನ ಬ್ರ್ಯಾಂಡ್ ಮೌಲ್ಯ ಹೆಚ್ಚಳಕ್ಕೆ ಹೆಚ್ಚಿನ ಒತ್ತು ನೀಡಿರುವ ಸಂಜಯ್,

ತಮ್ಮ ಎಲ್ಲಾ ಉದ್ಯಮದಲ್ಲೂ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯ ಗ್ರಾಹಕರಿಗೆ ಸಿಗುವಂತೆ ಮಾಡಿದ್ದಾರೆ. ಇದೇ ಅವರ ಯಶಸ್ಸಿನ ಗುಟ್ಟಾಗಿ ಮಾರ್ಪಟ್ಟಿದೆ. ಅದರೊಂದಿಗೆ ತಮ್ಮ ಉದ್ಯಮಕ್ಕೆ ಗ್ರಾಹಕರನ್ನು ಆಕರ್ಷಿಸಲು ಉತ್ತಮ ಸೇಲ್ಸ್ ಟೀಮ್ ಸ್ಥಾಪಿಸಿದ್ದಾರೆ. ಹೀಗಾಗಿಯೇ ಇಂದು 13 ಸೇಲ್ಸ್ ಕಚೇರಿಯನ್ನು ಹೊಂದಿರುವ ಕೀಸ್ ಗ್ರೂಪ್, 75 ಅತ್ಯತ್ತಮ ಸಿಬ್ಬಂದಿಗಳು ಅದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೇಲ್ಸ್ ಮತ್ತು ಸೇವೆಯಿಂದಾಗಿ ಕೀಸ್ ಹೋಟೆಲ್‍ಗೆ ಪ್ರಸ್ತುತ ಕಾಪೋರೇಟ್ ಸಂಸ್ಥೆಯವರೆ ಹೆಚ್ಚಿನ ಗ್ರಾಹಕರಾಗಿದ್ದಾರೆ. ಶೇ. 75ರಷ್ಟು ಗಳಿಕೆ ಕಾಪೋರೇಟ್ ಸಂಸ್ಥೆಗಳೊಂದಿಗಿನ ಒಪ್ಪಂದದಿಂದ ಬರುತ್ತದೆ. ಸಿಬ್ಬಂದಿಗಳು ಕೂಡ ಗ್ರಾಹಕರ ಬೇಕು ಬೇಡಗಳನ್ನು ಗಮನಿಸಿ ಸೇವೆ ನೀಡುತ್ತಿರುವುದು ಕೂಡ ಉದ್ಯಮ ಬೆಳವಣಿಗೆಗೆ ಸಹಕಾರಯಾಗಿದೆ ಎನ್ನುವುದು ಸಂಜಯ್ ಅವರ ಅಭಿಪ್ರಾಯವಾಗಿದೆ.

ಭವಿಷ್ಯದ ಯೋಜನೆಗಳು

ಕೀಸ್ ಹೋಟೆಲ್‍ಗಳನ್ನು ಮತ್ತಷ್ಟು ನಗರಳಿಗೆ ವಿಸ್ತರಿಸುವ ಚಿಂತನೆಯನ್ನು ಸಂಜಯ್ ಹೊಂದಿದ್ದಾರೆ ಅದರಲ್ಲಿ ಪ್ರಮುಖವಾಗಿ ಕೊಚ್ಚಿ, ವೈಜಾಕ್, ಶಿರಡಿ, ವೃಂದಾವನ ಮತ್ತು ಹರಿದ್ವಾರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಉದ್ಯಮ ಮತ್ತು ಮುಂದಿನ ಯೋಜನೆ ಬಗ್ಗೆ ಮಾತನಾಡುವ ಸಂಜಯ್ "ನಮ್ಮ ಮೊದಲ ಉದ್ಯಮ ಆರಂಭವಾದದ್ದು 2009ರಲ್ಲಿ, ಇದೀಗ 170 ಕೋಟಿ ರೂ.ನಷ್ಟು ವಹಿವಾಟು ಮಾಡಲಾಗುತ್ತಿದೆ. ಮುಂದೆ ಇದು ಇನ್ನಷ್ಟು ಹೆಚ್ಚಿಸಲಾಗುವುದು. ಅಲ್ಲದೆ ಭಾರತವಷ್ಟೇ ಅಲ್ಲದೆ ಮಾಲ್ಡೀವ್ಸ್, ಮಧ್ಯ ಪ್ರಾಚ್ಯ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಆಫ್ರಿಕಾ ದೇಶದಲ್ಲೂ ಕೀಸ್ ಹೋಟೆಲ್ ಸೇರಿದಂತೆ ಮತ್ತಿತರ ಉದ್ಯಮ ಆರಂಭಿಸುವ ಚಿಂತನೆ ಇದೆ" ಎಂದು ತಿಳಿಸಿದ್ದಾರೆ.

ಲೇಖಕರು: ಪ್ರೀತಿ ಚಮುಕುಟ್ಟಿ
ಅನುವಾದಕರು: ಗಿರಿ

Related Stories