ಸಮಾಜದ ಒಳಿತಿಗಾಗಿ ಎನ್‍ಜಿಒಗಳಿಗೆ ಸಹಾಯ ಮಾಡುತ್ತಿರುವ 'ಕನ್ಸಲ್ಟಿಂಗ್ ಫಾರ್ ಸೋಷಿಯಲ್ ಗುಡ್' ಸಂಸ್ಥಾಪಕ-ಐಐಟಿ-ಡಿ ಅಲುಮ್ನಿ

ಟೀಮ್​ ವೈ.ಎಸ್​. ಕನ್ನಡ

0

ಕಾಮೇಶ್ ಸಲಾಂ ಅವರು ' ಸೌತ್ ಏಷಿಯನ್ ಬ್ಯಾಂಬೂ ಫೌಂಡೇಷನ್' ನ ಸಂಸ್ಥಾಪಕರು. ಇವರು ಮಣಿಪುರದಲ್ಲಿ ಬಿದಿರಿನ ಬೊಂಬಿನಿಂದ ಸೈಕಲ್ ತಯಾರಿಸುವ ಕೆಲಸಗಾರರನ್ನ ಕಾರ್ಯನಿರತರಾಗಿರುವಂತೆ ಮಾಡಿದ್ದಾರೆ. ಬಿದಿರಿನ ಬೊಂಬುಗಳಿಂದ ಮಾಡಿದ ಬೈಸಿಕಲ್‍ಗಳು ಹಾಗೂ ಬಿದಿರಿನ ಬೊಂಬುಗಳಿಂದ ಮಾಡಿದ ಇತರೆ ವಸ್ತುಗಳ ವ್ಯಾಪಾರವನ್ನು ಉತ್ತೇಜಿಸುತ್ತಾ ಬಂದಿದ್ದಾರೆ. 'ಕನ್ಸಲ್ಟಿಂಗ್ ಫಾರ್ ಸೋಷಿಯಲ್ ಗುಡ್'ಈ ನಿಟ್ಟಿನಲ್ಲಿ ಎಸ್‍ಎಬಿಎಫ್ ಗೆ ಸಹಾಯ ಮಾಡುತ್ತಾ ಬಂದಿದೆ ಅಂತಾ ಸಿಎಸ್‍ಜಿಯ ಸಹ ಸಂಸ್ಥಾಪಕ ಶಿವ ಧವನ್ ತಿಳಿಸುತ್ತಾರೆ.

ನಾವು ಪ್ರಪಂಚದಾದ್ಯಂತ ಈ ಬಗೆಯ ಕೆಲಸದ ಬಗ್ಗೆ ಅಧ್ಯಯನ ನಡೆಸಿ, ಬಿದಿರಿನ ಬೊಂಬಿನ ತಂತ್ರಜ್ಞಾನದಲ್ಲಿ ನಿಪುಣರಾದ ದೆಹಲಿಯ ಐಐಟಿಯ ಪ್ರೊಫೆಸರ್ ವಿ ಎಮ್ ಚಾರಿಯರ್' ಅವರನ್ನ ಭೇಟಿ ಮಾಡಿ, ಈ ಉದ್ಯಮದಲ್ಲಿ ಯಶಸ್ಸು ಗಳಿಸುವ ಬಗ್ಗೆ ಚರ್ಚೆ ಮಾಡಿದ್ದೆವು. ಹಾಗೂ ತಾಜ್ ಮಹಲ್ ಸೇರಿದಂತೆ ಇತರೆ ಪುರಾತತ್ವ ಸ್ಥಳಗಳನ್ನ ಗುರುತಿಸಿ ಈ ಸ್ಥಳಗಳಲ್ಲಿ ಬೊಂಬಿನಿಂದ ಮಾಡಿದ ಬೈಸಿಕಲ್‍ಗಳನ್ನ ಬಳಸುವಂತೆ ಪುರಾತತ್ವ ಇಲಾಖೆಗೆ ಹಾಗೂ ಉತ್ತರ ಪ್ರದೇಶ ಸರ್ಕಾರಕ್ಕೆ ಮನವಿ ಮಾಡಿದ್ದೆವು.

'ಬೊಂಬಿನ ಉತ್ಪನ್ನಗಳ ಮಾರುಕಟ್ಟೆಯನ್ನ ಒದಗಿಸುವಲ್ಲಿ ಇವರು ನಮಗೆ ಬಹಳ ಸಹಾಯ ಮಾಡಿದರು. ಇವರು ಪ್ರಪಂಚ ಜ್ಞಾನ ಹೊಂದಿರುವಂತ ಬುದ್ದಿವಂತ ಯುವ ಪೀಳಿಗೆ, ಇಂದಿನ ಸಮಾಜ ಬಯಸುವ ವಿಶಿಷ್ಟವಾದ ವಸ್ತುಗಳನ್ನು ತಯಾರಿಸುವಂತೆ ನಮಗೆ ತಿಳಿಸಿದರು.' ಅಂತಾರೆ ಕಾಮೇಶ್ ಸಲಾಮ್.

ಇವರು ನಡೆದು ಬಂದ ಹಾದಿ

ದೆಹಲಿಯ ಐಐಟಿಯಲ್ಲಿ ವ್ಯಾಸಾಂಗ ಮಾಡುತ್ತಿರುವಾಗಲೇ 2014ರ ಜನವರಿಯಲ್ಲಿ ಶಿವ ಧವನ್ ಹಾಗೂ ದೇವ್ ಪ್ರಿಯ ಅವರು 'ಕನ್ಸಲ್ಟಿಂಗ್ ಫಾರ್ ಸೋಷಿಯಲ್ ಗುಡ್'ಅನ್ನ ಸ್ಫಾಪಿಸಿದರು.

ಇವರಿಬ್ಬರು ಸಿಎಸ್‍ಜಿಯನ್ನ ಸ್ಥಾಪಿಸುವ ಮೊದಲು ಎನ್‍ಜಿಒಗಳಲ್ಲಿ ಕೆಲಸ ಮಾಡಿದ್ದರು. ಇವರು ಹೇಳುವಂತೆ ಎನ್‍ಜಿಒಗಳಲ್ಲಿ ವಿದ್ಯಾರ್ಥಿಗಳ ಕಾರ್ಯಕ್ಷಮತೆ ಅಸಮರ್ಥವಾಗಿರುತ್ತದೆ. ವಿದ್ಯಾರ್ಥಿಗಳ ಕಾರ್ಯದಕ್ಷತೆಯನ್ನು ಹೆಚ್ಚಿಸಲು ಅವರನ್ನು ನಿರ್ಧಿಷ್ಟ ಹಾಗೂ ತಾಂತ್ರಿಕ ಕೌಶಲ್ಯದೊಂದಿಗೆ ಕಾರ್ಯನಿರತರಾಗುವಂತೆ ಮಾಡಬೇಕು. ಆಗ ಮಾತ್ರ ಅವರು ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಲು ಸಾಧ್ಯ. ಎನ್ನುತ್ತಾರೆ ಶಿವ ಧವನ್.

2012-2013ರ ಬೇಸಿಗೆಯಲ್ಲಿ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕೆಲಸ ಮಾಡಿದ ವಿದ್ಯಾರ್ಥಿಗಳನ್ನ ಸಂದರ್ಶಿಸಿದಾಗ, ವಿದ್ಯಾರ್ಥಿಗಳಲ್ಲಿ ಸಾಕಷ್ಟು ಅನುಭವದ ಕೊರತೆ ಇರುವುದು ಕಂಡುಬಂತು. ಹಾಗಾಗಿ ವಿದ್ಯಾರ್ಥಿಗಳ ಕೌಶಲ್ಯತೆ ಹಾಗೂ ಎನ್‍ಜಿಒಗಳ ಬೇಡಿಕೆಯನ್ನ ಮನನ ಮಾಡಿಕೊಂಡು ಒಂದು ಕಾರ್ಯವಿಧಾನವನ್ನು ರೂಪಿಸುವ ತುರ್ತು ಅಗತ್ಯತೆಇದೆ.

ಸಿಎಸ್‍ಜಿಯ ಉದ್ದೇಶಗಳು

ಪರಸ್ಪರ ಸಹಕಾರದೊಂದಿಗೆ ನುರಿತ ಹಾಗೂ ಸಾಮಥ್ರ್ಯವಿರುವ ವಿದ್ಯಾರ್ಥಿ ವರ್ಗವನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳುವುದು ಸಿಎಸ್‍ಜಿಯ ಗುರಿಯಾಗಿದೆ. ಈ ಗುರಿಯನ್ನ ಸಾಧಿಸಲು ಎನ್‍ಜಿಒಗಳ ಕಾರ್ಯಾಚರಣೆಯನ್ನು ಉತ್ತಮಗೊಳಿಸಲು ಅವರನ್ನು ಆರ್ಥಿಕವಾಗಿ ಸಮರ್ಥವಾಗಿರುವಂತೆ ನೋಡಿಕೊಳ್ಳಬೇಕಾಗಿದೆ. ಸಂಸ್ಥೆಗಳ ಕಾರ್ಯನೀತಿ, ದತ್ತಾಂಶ ಇವುಗಳನ್ನ ಪರಿಶೀಲಿಸಿ ಸಂಸ್ಥೆಗಳಿಗೆ ಸಹಾಯ ಮಾಡಲಾಗುತ್ತಿದೆ. ಹಾಗೂ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನ ಉತ್ತೇಜಿಸುವ ಕಾರ್ಯಕ್ರಮವನ್ನು ಆಯೋಜಿಸಿರುತ್ತೇವೆ. ಅಂದಿನಿಂದಲೂ ಸಿಎಸ್‍ಜಿಯ ಕಾರ್ಯಕರ್ತರು ಹಲವು ಸಾಮಾಜಿಕ ಸಂಸ್ಥೆಗಳು ಹಾಗೂ ಎನ್‍ಜಿಒಗಳ ಜೊತೆ ತೊಡಗಿಕೊಂಡಿದ್ದಾರೆ. ಐಐಟಿಯಲ್ಲಿ ಮೂರನೆ ವರ್ಷದ ಸಿವಿಲ್ ಇಂಜಿನಿಯರಿಂಗ್ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಯು 'ಉರುವು' ಎಂಬ ಎನ್‍ಜಿಒ ಮೂಲಕ ಗ್ರಾಮೀಣ ಪ್ರದೇಶದ ಜನರ ಆದಾಯ ಉದ್ಯೋಗ ಖಾತ್ರಿಗಾಗಿ ಕೆಲಸ ಮಾಡುತ್ತಿದ್ದಾನೆ. ಸಿಎಸ್‍ಜಿಯ ಸುಕೃತಾ ಗೋಯಲ್ ಎಂಬ ಸದಸ್ಯೆ ಸಾಹಿದ್ ಸುಖ್‍ದೇವ್ ಕಾಲೇಜ್ ಆಫ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಸ್ಟಡೀಸ್ ನ್ಲಲಿ ಪದವಿ ವ್ಯಾಸಾಂಗ ಮಾಡುತ್ತಿದ್ದು, ಆರೋಹಣ್ ಲರ್ನಿಂಗ್ ಸೆಂಟರ್ ಫೌಂಡೇಷನ್ ಎಂಬ ಪ್ರಾಜೆಸ್ಟ್‍ನ್ಲಲಿ ಕೆಲಸ ಮಾಡುತ್ತಿದ್ದಾರೆ. ಸಿಎಸ್‍ಜಿಯು ಮಕ್ಕಳ ರಕ್ಷಣೆ , ಸಮಾಜದಲ್ಲಿ ಸಮಾನತೆ ಹಾಗೂ ಇನ್ನಿತರೆ ಸಮಾಜಸೇವೆ ಕೆಲಸಗಳನ್ನು ಮಾಡುತ್ತಿದೆ. ದೇವ್ ಹಾಗೂ ಶಿವ್ ಇಬ್ಬರೂ ತಮ್ಮ ಉದ್ಯೋಗ ಮಾಡುತ್ತಾ ಎನ್‍ಜಿಒ ಹಾಗೂ ಸಾಮಾಜಿಕ ಸಂಸ್ಥೆಗಳಲ್ಲಿ ಯಾವಾಗಲೂ ಕಾರ್ಯನಿರತರಾಗಿರುತ್ತಾರೆ.

ಇದು ಸಾಧ್ಯಾನಾ..?

ದೇವ್ ಹಾಗೂ ಶಿವ್‍ಗೆ ಎನ್‍ಜಿಒ ನಡೆಸುವಷ್ಟು ಸಮಯ ಸಿಗತ್ತಾ ನ್ನೋ ಪ್ರಶ್ನೆಗೆ ಹೌದು ಅಂತಾ ತಟ್ಟನೇ ಉತ್ತರಿಸ್ತಾರೆ. ವಿದ್ಯಾರ್ಥಿಗಳು ಸಿಎಸ್‍ಜಿಯ ಮುಖ್ಯ ವಿಭಾಗವನ್ನು ನಿರ್ವಹಿಸಿ ಇದು ಸಮರ್ಥವಾಗಿ ಕೆಲಸ ಮಾಡಲು ಕಾರಣರಾಗಿದ್ದಾರೆ. ಕಠಿಣ ಪ್ರಕ್ರಿಯೆಯ ಮೂಲಕ ಹೊಸಬರನ್ನ ನೇಮಿಸಿಕೊಳ್ಳಲಾಗುತ್ತದೆ. ಪ್ರತಿ ವರ್ಷವೂ ಒಬ್ಬ ಮುಖ್ಯಸ್ಥ ಹಾಗೂ ಮುಖ್ಯ ವಿಭಾಗವನ್ನು ನಿರ್ವಹಿಸುವ ವಿದ್ಯಾರ್ಥಿಗಳ ತಂಡವನ್ನು ನೇಮಕ ಮಾಡಿ ಸಿಎಸ್‍ಜಿಯ ಯೋಜನೆಗಳನ್ನು ನಿರ್ವಹಿಸುತ್ತಾರೆ. ವಿದ್ಯಾರ್ತೀಗಳ ಓದು ಮುಗಿದು ಕಾಪೋರೇಟ್ ಜಗತ್ತಿಗೆ ಕಾಲಿಟ್ಟ ನಂತ್ರವೂ ಸಿಎಸ್‍ಜಿಯಲ್ಲಿ ನಿರಂತರವಾಗಿ ತಮ್ಮನ್ನ ತಾವು ತೊಡಗಿಸಿಕೊಂಡಿರುವುದರಿಂದ ಸಿಎಸ್‍ಜಿ ಸದಸ್ಯರ ಸಂಖ್ಯೆ ದೊಡ್ಡದಾಗುವಂತೆ ಮಾಡಿದೆ.

ವಿದ್ಯಾರ್ಥಿ ತಂಡಗಳನ್ನ ಸದುಪಯೋಗಕ್ಕೆ ಬಳಸಿಕೊಳ್ಳುವುದು , ಮುಖ್ಯಸ್ಥರನ್ನ ಯಶಸ್ಸಿನೆಡೆಗೆ ಕಾರ್ಯನಿರತರಾಗುವಂತೆ ಮಾಡುವುದು, ಹಾಗೂ ಗ್ರಾಹಕರ ಮನಸಿಗೆ ಒಪ್ಪುವಂತಾ ಕಾರ್ಯಗಳನ್ನ ಮಾಡುವುದು ಸಿಎಸ್‍ಜಿಯ ಪಾತ್ರವಾಗಿದೆ. ವಾರದಲ್ಲಿ ಒಮ್ಮೆ ಎಲ್ಲಾ ಸದಸ್ಯರು ಸಭೆ ಕರೆಯುತ್ತೇವೆ. ಅಲ್ಲದೆ, ಹದಿನೈದು ದಿನಗಳಿಗೊಮ್ಮೆ ಗ್ರಾಹಕರೊಂದಿಗೂ ಚರ್ಚೆ ನಡೆಸಿ ನಮ್ಮ ಕೆಲಸಗಳನ್ನ ಪರಿಣಾಮಕಾರಿಯಾಗಿ ಮಾಡುತ್ತೇವೆ.

ಸಂಪನ್ಮೂಲ ಹಾಗೂ ಸವಾಲುಗಳು

ಈ ಸಂಸ್ಥೆಯನ್ನು ಆರ್ಥಿಕವಾಘಿ ಸದೃಡವನ್ನಾಗಿ ಮಾಡಲು ಅರ್ಪಣ ಮನೋಭಾವವಿರುವ ಪಾಲುದಾರರು ಮತ್ತು ಮಾರ್ಗದರ್ಶನ ತೋರುವ ಪಾಲುದಾರರ ಅವಶ್ಯಕತೆ ಇದೆ ಎಂದು ದೇವ್ ಹೇಳುತ್ತಾರೆ.

ಸಿಎಸ್‍ಜಿ ಸಂಸ್ಥೆಯು ತನ್ನ ಸ್ವಂತ ಆರ್ಥಿಕ ಶಕ್ತಿಯಿಂದ ಮುನ್ನಡೆಯಬೇಕೆಂಬುದು ನಮ್ಮ ದೂರದೃಷ್ಟಿಯ ಆಲೋಚನೆಯಾಗಿದೆ. ಹೊಸದಾಗಿ ಸೇರಿಕೊಳ್ಳುವ ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ಮತ್ತು ತರಭೇತಿಗಳನ್ನು ಕಡುವುದು ಹಾಗೂ ಪದವಿ ಮುಗಿಸಿ ತಮ್ಮ ವೃತ್ತಿ ಜೀವನಕ್ಕೆ ಕಾಲಿಡುವ ವಿದ್ಯಾರ್ಥಿಗಳು ಈ ಎರಡು ವರ್ಗಗಳ ಸಮತೋಲನವನ್ನ ಕಾಪಾಡುವುದು ಅವಶ್ಯಕವಾಗಿದೆ.

ಸಲಹೆಗಳನ್ನು ಕೊಡಲು ಸಮಸ್ಯೆಗಳನ್ನು ಬಗೆಹರಿಸಲು ವಿದ್ಯಾರ್ಥಿಗಳು ಆತುರರಾಗಿದ್ದಾರೆ. ಸಮಾಜದ ನೈಜತೆಯು ವಿದ್ಯಾರ್ಥಿಗಳ ಕಣ್ಣು ತೆರೆಸುತ್ತದೆ. ಹಾಗೂ ನೈತಿಕತೆಯ ಪಾಠವನ್ನು ಕಲಿಸುತ್ತದೆ ಎಂದು ಅವರು ಹೇಳುತ್ತಾರೆ.

ಲೇಖಕರು: ಸ್ನಿಗ್ಧ ಸಿನ್ಹಾ
ಅನುವಾದಕರು: ಪಿ.ಅಭಿನಾಷ್​​

Related Stories