ಅರುಣಾಚಲ ಪ್ರದೇಶದ ಬಿದಿರು- ಅಸ್ಸಾಂನಲ್ಲಿ ತಯಾರಾಗುತ್ತದೆ ಜೈವಿಕ ಇಂಧನ..!

ಟೀಮ್​​ ವೈ.ಎಸ್​. ಕನ್ನಡ

ಅರುಣಾಚಲ ಪ್ರದೇಶದ ಬಿದಿರು- ಅಸ್ಸಾಂನಲ್ಲಿ ತಯಾರಾಗುತ್ತದೆ ಜೈವಿಕ ಇಂಧನ..!

Wednesday June 07, 2017,

2 min Read

ಜೈವಿಕ ಇಂಧನದ ಬಳಕೆ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಇಂಧನವನ್ನು ಜೈವಿಕವಾಗಿ ಹೇಗೆಲ್ಲಾ ಉತ್ಪತ್ತಿ ಮಾಡಿ ಬಳಕೆ ಮಾಡಬಹುದು ಅನ್ನುವ ಬಗ್ಗೆ ಚರ್ಚೆಗಳು ಸಾಮಾನ್ಯವಾಗಿಬಿಟ್ಟಿವೆ. ಆದ್ರೆ ಭಾರತದಲ್ಲಿ ಜೈವಿಕ ಇಂಧನದ ಬಳಕೆಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿಲ್ಲ. ಆದ್ರೆ ಈಗ ಜೈವಿಕ ಇಂಧನದ ಬಳಕೆ ಹಾಗೂ ಉತ್ಪಾದನೆ ಬಗ್ಗೆ ಹೊಸ ಹೆಜ್ಜೆ ಇಡಲಾಗಿದೆ.

ಭಾರತದ ಚೊಚ್ಚಲ ಜೈವಿಕ ಇಂಧನ ಉತ್ಪಾದನಾ ಕೇಂದ್ರ ಅಸ್ಸಾಂನಲ್ಲಿ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಇದರ ಹೆಸರು "ನುಮಲಿಗರ್ ರಿಫೈನರಿ ಲಿಮಿಟೆಡ್". ಅರುಣಾಚಲ ಪ್ರದೇಶದಲ್ಲಿ ಹೇರಳವಾಗಿ ಸಿಗುವ ಬಿದಿರನ್ನು ಬಳಸಿಕೊಂಡು ಜೈವಿಕ ಇಂಧನವನ್ನು ತಯಾರು ಮಾಡಲಿದೆ. ಈ ಬಗ್ಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪಷ್ಟನೆಯನ್ನು ಕೂಡ ನೀಡಿದ್ದಾರೆ.

image


ಅರುಣಾಚಲ ಪ್ರದೇಶ ಸರಕಾರ ಕೂಡ ಎನ್​​ಆರ್​ಎಲ್​​ ಜೊತೆ ಒಪ್ಪಂದವನ್ನು ಮಾಡಿಕೊಂಡಿದೆ. ವರ್ಷಕ್ಕೆ 3 ಲಕ್ಷ ಟನ್ ಬಿದಿರು ಒದಗಿಸುವ ಬಗ್ಗೆ ಒಪ್ಪಂದ ನಡೆದಿದೆ. ಅರುಣಾಚಲ ಪ್ರದೇಶದಲ್ಲಿ ಬಿದಿರು ಸಾಕಷ್ಟು ಬೆಳೆಯುವುದರಿಂದ ಅದರ ಉಪಯೋಗವನ್ನು ಪಡೆಯುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಲಾಗಿದೆ. ಈ ಯೋಜನೆ ಯಶಸ್ವಿಯಾದಲ್ಲಿ ಭಾರತದ ಆರ್ಥಿಕ ಅಭಿವೃದ್ಧಿಗೆ ಹೊಸ ಆಯಾಮ ಸಿಗಲಿದೆ. ಅಷ್ಟೇ ಅಲ್ಲ ಗ್ರಾಮೀಣ ಭಾಗದಲ್ಲಿ ದೊಡ್ಡ ದೊಡ್ಡ ಯೋಜನೆಗಳನ್ನು ರೂಪಿಸಲು ಸಹಾಯ ಮಾಡಲಿದೆ.

ಇದನ್ನು ಓದಿ: ಜಾಗತಿಕ ಭಾವೈಕ್ಯ ಸಾರುವ "ದಿ ಒನ್ ಸಾಂಗ್"

ಅರುಣಾಚಲ ಪ್ರದೇಶ ಹೇರಳವಾಗಿ ಬಿದಿರು ಬೆಳೆಯುವ ರಾಜ್ಯವಾಗಿದೆ. ಅರುಣಾಚಲ ಪ್ರದೇಶದಲ್ಲಿ ಬೆಳೆಯುವ ಬಿದಿರಿನ ಪೈಕಿ ಕೇವಲ ಶೇಕಡಾ 5ರಷ್ಟು ಮಾತ್ರ ಪೇಪರ್ ತಯಾರಿಕೆಗೆ ಬಳಕೆಯಾಗುತ್ತಿದೆ. ಇನ್ನೊಂದು 5 ಪ್ರತಿಶತ ಬಿದಿರಿನಲ್ಲಿ ಫರ್ನಿಚರ್ ಸೇರಿದಂತೆ ಇತರೆ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಉಳಿದ ಶೇಕಡಾ 90 ರಷ್ಟು ಬಿದಿರು ಉಪಯೋಗವಿಲ್ಲದೆ ಉಳಿದುಕೊಂಡಿದೆ. ಈಗ ಅದೇ ಉಳಿಕೆ ಬಿದಿರಿನ ಮೂಲಕ ಜೈವಿಕ ಇಂಧನ ತಯಾರಿಸು ಬಗ್ಗೆ ಯೋಜನೆಗಳು ಸಿದ್ಧಗೊಂಡಿವೆ.

ಜೈವಿಕ ಇಂಧನಕ್ಕೆ ಬಿದಿರು ಖರೀದಿ ವೇಳೆಯಲ್ಲಿ ಮಧ್ಯವರ್ತಿಗಳ ಸಹವಾಸ ಇರಬಾರದು ಎಂದು ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆಯಂತೆ. ಅಷ್ಟೇ ಅಲ್ಲ ಗ್ರಾಮೀಣ ಭಾಗದಲ್ಲಿ ಉದ್ಯೋಗ ಕಲ್ಪಿಸಿ, ಅಲ್ಲಿನ ಜನರ ಜೀವನಕ್ಕೂ ದಾರಿ ಮಾಡಿಕೊಡುವ ಉದ್ದೇಶವನ್ನು ಹೊಂದಲಾಗಿದೆ. ಗುಜರಾತ್​ನ ಅಮುಲ್ ಮಾದರಿಯ ವ್ಯವಸ್ಥೆಯನ್ನು ಇಲ್ಲಿ ಅಳವಡಿಸುವ ಬಗ್ಗೆ ಚಿಂತನೆಗಳು ನಡೆದಿವೆ.

ಕೇಂದ್ರ ಸರಕಾರ ಈಗಾಗಲೇ ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ವಿಷನ್ 2020 ಅನ್ನುವ ಯೋಜನೆಗಳನ್ನು ರೂಪಿಸಿದೆ. ಈ ಮೂಲಕ ಅಲ್ಲಿನ ಅಭಿವೃದ್ಧಿಗೆ ಹೆಚ್ಚು ಪ್ರಾಶಸ್ತ್ಯ ನೀಡಿದೆ. ತೈಲ, ನೈಸರ್ಗಿಕ ಅನಿಲಗಳ ಉತ್ಪಾದನೆ ಮತ್ತು ಅವುಗಳಿಗೆ ಸರಕುಗಳನ್ನು ಒದಗಿಸುವ ಬಗ್ಗೆಯೂ ಪ್ರಸ್ತಾವನೆಗಳನ್ನು ಇಡಲಾಗಿದೆ. ರಾಜ್ಯಗಳ ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸಲು ಕೂಡ ಪ್ಲಾನ್ ಮಾಡಿಕೊಳ್ಳಲಾಗಿದೆ. ಒಟ್ಟಿನಲ್ಲಿ ದೇಶ ಅಭಿವೃದ್ಧಿ ಕಾಣಬೇಕಾದರೆ, ರಾಜ್ಯಗಳು ಆರ್ಥಿಕವಾಗಿ ಸದೃಢವಾಗುವುದು ಅವಶ್ಯ ಅನ್ನುವುದನ್ನು ಕೇಂದ್ರ ಸರಕಾರ ಅರಿತುಗೊಂಡಿದೆ. 

ಇದನ್ನು ಓದಿ:

1. ಆರೇ ತಿಂಗಳಲ್ಲಿ ಮುಗಿದು ಹೋಯಿತು ಸೇತುವೆ ನಿರ್ಮಾಣ..!

2. ಇಂಟರ್​ನೆಟ್ ಸ್ಪೀಡ್ ವಿಚಾರದಲ್ಲಿ ಭಾರತ ಹಿಂದೆ- ಡಿಜಿಟಲ್ ಕ್ರಾಂತಿಗೆ ಇಂಟರ್​ನೆಟ್ ವೇಗದಿಂದ ಹಿನ್ನಡೆ

3. ಅಪ್ರಾಪ್ತ ಮಕ್ಕಳಿಗಾಗಿ ಹೊಸ ಆ್ಯಪ್- ಪೋಷಕರ ಚಿಂತೆ ದೂರ ಮಾಡಲಿದೆ ಫೇಸ್​ಬುಕ್..!