ಭಾರತೀಯ ಕರಕುಶಲತೆಗೆ ವೇದಿಕೆ ಕಲ್ಪಿಸಿದ ಜಯಾ ಜೇಟ್ಲಿಯ ದಸ್ತಕರಿ ಹಾತ್ ಸಮಿತಿ

ಟೀಮ್​​ ವೈ.ಎಸ್​​. ಕನ್ನಡ

ಭಾರತೀಯ ಕರಕುಶಲತೆಗೆ ವೇದಿಕೆ ಕಲ್ಪಿಸಿದ ಜಯಾ ಜೇಟ್ಲಿಯ ದಸ್ತಕರಿ ಹಾತ್ ಸಮಿತಿ

Thursday November 19, 2015,

4 min Read

ಜಯಾ ಜೇಟ್ಲಿಯವರು ದಸ್ತಕರಿ ಹಾತ್ ಸಮಿತಿ ಸ್ಥಾಪಿಸಿ, ಈ ಸಂಸ್ಥೆಯ ಮೂಲಕ ಹಲವಾರು ಕರಕುಶಲಕರ್ಮಿಗಳಿಗೆ ಕೆಲಸವನ್ನೊದಗಿಸಿದ್ದಾರೆ. ಅವರೀಗ ಗುಜರಾತ್ ರಾಜ್ಯ ಕೈಮಗ್ಗ ಅಭಿವೃದ್ದಿ ನಿಗಮ ದಲ್ಲಿ ವಿನ್ಯಾಸ ಮತ್ತು ಮಾರ್ಕೆಟಿಂಗ್ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

‘ಕಚ್‍ನಲ್ಲಿ ಬರಪೀಡಿತ ಮಹಿಳೆಯರಿಗೆ ಕಸೂತಿ ಕೆಲಸ ಕೊಟ್ಟು ನೆರವಾಗಿದ್ದೆವು, ಬರಗಾಲದ ಆ ಪರಿಸ್ಥಿತಯಲ್ಲಿ ಕಚ್ ಕುಟುಂಬಗಳಿಗೆ ಲಭ್ಯವಿದ್ದ ಏಕೈಕ ಕೆಲಸವೆಂದರೆ ಬಿಸಿಲಿನಲ್ಲಿ ಕಲ್ಲು ಒಡೆಯುವುದಾಗಿತ್ತು. ನಾವು ಕೇವಲ 2 ಮನೆಗಳಲ್ಲಿ ಕೆಲಸ ಆರಂಭ ಮಾಡಿದ್ದೆವು, ಈಗ ನಮ್ಮ ಸಂಸ್ಥೆ 500 ಹಳ್ಳಿಗಳಿಗೆ ಚಾಚಿಕೊಂಡಿದೆ. "ಬರಗಾಲದಲ್ಲಿ ಮೇವಿಲ್ಲದೆ ದನ-ಕರುಗಳು ಸತ್ತರೂ, ಕಚ್‍ನಲ್ಲಿದ್ದ ಮಹಿಳೆಯರ ಕರಕುಶಲ ಪ್ರತಿಭೆ ಅವರ ಜೀವನಕ್ಕೆ ದಾರಿದೀಪವಾಯ್ತು" ಎಂದು ಹೇಳುವಾಗ ಜಯಾ ಅವರ ಕಣ್ಣುಗಳಲ್ಲಿ ನೀರು ತುಂಬಿತ್ತು. ಈಗ ಆ ಮಹಿಳೆಯರು ಓದು ಬರಹ ಕಲಿತಿದ್ದಾರೆ, ಅವರದೇ ಆದ ಬ್ಯಾಂಕ್ ಖಾತೆಗಳೂ ಇವೆ. ಈಗ ಅವರ ಹಳ್ಳಿಗಳಲ್ಲಿ ವಿದ್ಯುತ್ ಸೌಕರ್ಯವೂ ಲಭ್ಯವಿದೆ. ಕಚ್ ಮಹಿಳೆಯರು ಈ ಮಟ್ಟಕ್ಕೆ ಬೆಳೆದಿರುವುದೇ ನನ್ನ ಯಶಸ್ಸು ಎಂದು ಜಯಾ ಹೇಳುತ್ತಾರೆ. ಇಲ್ಲಿ ಮಹಿಳೆ ಮತ್ತು ಪುರುಷರಿಗೆ ನೇರವಾಗಿ ಕೆಲಸ ಕೊಡಲಾಗುತ್ತದೆ. ನಾವು ಮಹಿಳಾ ಸಬಲೀಕರಣಕ್ಕಾಗಿ ಅವರ ಮೇಲೆ ಪಾಶ್ಚಾತ್ಯ ಸಂಸ್ಕೃತಿಯನ್ನು ಹೇರುವುದಿಲ್ಲ, ಇಲ್ಲಿಯ ಹೆಂಗಸರು ಈಗಲೂ ತಲೆಯ ಮೇಲೆ ಸೆರಗು ಹಾಕಿಕೊಳ್ಳುತ್ತಾರೆ, ನಾವು ಅವರ ಅಭಿಪ್ರಾಯವನ್ನು ಗೌರವಿಸುತ್ತೇವೆ. ಅಲ್ಲಿಯ ಜನರಿಗೆ, ವೈದ್ಯಕೀಯ ಸೌಲಭ್ಯ ಪಡೆಯುವುದರ ಬಗ್ಗೆ, ಶಿಕ್ಷಣ ಪಡೆಯುವುದರ ಬಗ್ಗೆ ಸಲಹೆಗಳನ್ನ ಕೊಡುತ್ತೇವೆ. ಎಲ್ಲರೂ ಅವರವರ ಕೆಲಸಗಳ ಬಗ್ಗೆ ತುಂಬ ಹೆಮ್ಮೆ ಪಡುತ್ತಾರೆ ಅಂತಾರೆ ಜಯಾ.

image


ಜಯಾ ತಮ್ಮ ಬಹುತೇಕ ಬಾಲ್ಯ ಕಳೆದಿದ್ದು ಜಪಾನ್‍ನಲ್ಲಿ. ಅವರಿಗೆ ನೈಸರ್ಗಿಕ, ಕರಕುಶಲ ವಸ್ತುಗಳೆಂದರೆ ಎಲ್ಲಿಲ್ಲದ ಪ್ರೀತಿ. ಜಯಾ 1965ರಲ್ಲಿ ಕಾಶ್ಮೀರದಲ್ಲಿ ಮದುವೆಯಾದರು. ಗಲ್ಲಿಯಲ್ಲಿ ಅನೇಕ ನುರಿತ ಕುಶಲಕರ್ಮಿಗಳಿದ್ದಾರೆಂದು ಜಯಾ ಅವರಿಗೆ ತಿಳಿಯಿತು. ಆ ಕುಶಲಕರ್ಮಿಗಳಿಗೆ ತಮ್ಮ ವಸ್ತುಗಳನ್ನು ಮಾರಲು ಸರಿಯಾದ ಮಾರುಕಟ್ಟೆ ದೊರೆಯದ ಕಾರಣ, ಪ್ರವಾಸಿಗರೂ ಹಾಗೂ ಗ್ರಾಹಕರಲ್ಲಿ ತಮ್ಮ ಸರಕನ್ನು ಖರೀದಿ ಮಾಡಿರೆಂದು ಅಂಗಲಾಚುತಿದ್ದರು. ಜಯಾ ಅವರು ಕರಕುಶಲ ವಸ್ತುಗಳಿಗೆ ತುಂಬಾ ಬೆಲೆ ಕೊಟ್ಟು, ಕುಶಲಕರ್ಮಿಗಳು ಹಾಗೂ ಹಿಂದುಳಿದ ವರ್ಗದವರು ಮುಂಬರಲೆಂದು ಸಾಮಾಜಿಕವಾಗಿ, ರಾಜಕೀಯವಾಗಿ ಮೀಸಲಾತಿ ಹೆಚ್ಚಿಸಲು ಹೋರಾಡಿದರು. ಆದರೆ ಅದರಿಂದ ಏನೂ ದಕ್ಕಲಿಲ್ಲ. ಖಾದಿ ಕಡೆಗೆ ಒಲವಿದ್ದ ಮಹಾತ್ಮಾ ಗಾಂಧಿ, ಕಮಲಾದೇವಿ ಚಟ್ಟೋಪಾಧ್ಯಾಯ (ಸ್ವತಂತ್ರ್ಯ ಭಾರತದಲ್ಲಿ ಕಲೆಯ ಪ್ರತಿಪಾದಕಿ) ಇವರ ಪುಸ್ತಕಗಳನ್ನ ಓದಿದಾಗ, ಏನಾದರೂ ಮಾಡಿ ಕುಶಲಕರ್ಮಿಗಳಿಗೆ ತಮ್ಮ ಉತ್ಪನ್ನಗಳ ಮಾರಾಟಕ್ಕಾಗಿ ಒಳ್ಳೆಯ ಮಾರುಕಟ್ಟೆ, ಸಾಮಾಜಿಕ ಹಾಗೂ ಆರ್ಥಿಕ ಸೌಕರ್ಯಗಳನ್ನು ಒದಗಿಸಿಕೊಡಬೇಕು, ಅವರಿಗೆ ಸಮಾಜದಲ್ಲಿ ಸ್ಥಾನ ಮಾನ ಒದಗಿಸಿಕೊಡಬೇಕು ಎಂದು ನಿರ್ಧರಿಸಿ, 1986ರಲ್ಲಿ ದಸ್ತಕರಿ ಹಾತ್ ಭಾರತೀಯ ಕರಕುಶಲ ರಾಷ್ಟ್ರೀಯ ಅಸೋಸಿಯೇಷನ್ ಸ್ಥಾಪಿಸಿದರು. ಈ ಸಮಿತಿ 30-35 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಕರಕುಶಲಕರ್ಮಿಗಳಿಗೆ ಪುನರ್​​ಜೀವನ ನೀಡಿದೆ.

‘ಖುರ್ಜಾ ಕುಂಬಾರಿಕೆ ನೆಲ ಕಚ್ಚಿದ್ದಾಗ, ನಾವು ಅವರಿಗೆ ವಸ್ತುಗಳ ಮಾರಾಟಕ್ಕೆ ಮಾರುಕಟ್ಟೆ ಒದಗಿಸುವುದರ ಮೂಲಕ ಸಹಾಯ ಹಸ್ತ ನೀಡಿದೆವು. ಅವರ ವಸ್ತುಗಳಿಗೆ ಬಣ್ಣ ಹಚ್ಚಿ ಇನ್ನೂ ಉತ್ತಮಗೊಳಿಸಲು ಸಲಹೆ ನೀಡಿದೆವು. ಈಗ ಆ ಕರಕುಶಲ ವಸ್ತುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟವಾಗುತ್ತಿವೆ.’ ಅಂತ ಹೇಳಲು ಹೆಮ್ಮಪಡುತ್ತಾರೆ ಜಯಾ. ಅವರ ವಿವಿಧ ಅ ನುಭವಗಳಿಂದ ಕರಕುಶಲಕರ್ಮಿಗಳ ಕೆಲಸಗಳು ಇನ್ನು ಉತ್ತಮವಾಗುತ್ತಿವೆ. ಕರಕುಶಲ ವಸ್ತುಗಳ ಮೇಲೆ ಭಾರತೀಯ ಭಾಷೆಯಲ್ಲಿ ಕ್ಯಾಲಿಗ್ರಫಿ ಪ್ರಯೋಗ ಮಾಡಲು ಪ್ರೋತ್ಸಾಹಿಸುತ್ತಿದ್ದಾರೆ. ಮಣ್ಣಿನ ವಸ್ತುವಿನ ಮೇಲೆ ಬಂಗಾಳಿ ವರ್ಣಮಾಲೆ, ತನ್ನ ಕೊಕ್ಕಿನಲ್ಲಿ ಪತ್ರ ಒಯ್ಯುತ್ತಿರುವ ಗಿಳಿ, ಆಂಗ್ಲ ಭಾಷೆಯಲ್ಲಿ ಕೆತ್ತುವ ಬದಲು ಸ್ಥಳೀಯ ಭಾಷೆಯಲ್ಲಿ ಕೆತ್ತನೆ ಮಾಡುವುದು ಕರಿಗರಿಗೆ ಹಾಗೂ ತೆಸೆಕರಿಗರಿಗೆ ಹೆಮ್ಮೆ ಎಂದೆನಿಸುತ್ತದೆ. ಹೀಗೆ ಕರಕುಶಲಕರ್ಮಿಗಳು ತಮ್ಮದೇ ಭಾಸೆಯಲ್ಲಿ ಪ್ರಯೋಗ ಮಾಡಲಾರಂಭಿಸಿದರು. ಓರ್ವ ಕಾರ್ಯಗಾರನಂತು, ರೇಷ್ಮೆಯ ಬಟ್ಟೆ ತುಂಡಿನ ಮೇಲೆ ಹನುಮಾನ್ ಚಾಲೀಸ ಬಿಡಿಸಿದ್ದ, ಅಂತಹ 15-20 ಪ್ರತಿಗಳನ್ನು ಮಾರಿ ಬರೋಬ್ಬರಿ 25 ಲಕ್ಷ ರೂಪಾಯಿ ಗಳಿಸಿದ್ದ. 36 ಅಡಿ ಉದ್ದದ ಕ್ಯಾನ್ವಾಸ್ ಮೇಲೆ ಅದೇ ಕೆಲಸ ಮಾಡಿ, ಇತಿಹಾಸ ರಚಿಸಿದ ಸಾಧನೆ ಅವನದ್ದು. ಮಾರುಕಟ್ಟೆಯಲ್ಲಿನ ಬೇಡಿಕಯ ಪ್ರಕಾರ ಕೆಲಸ ನಿರ್ವಹಿಸಲಾಗುತ್ತದೆಂದು ಹೆಮ್ಮೆಯಿಂದ ಜಯಾ ಹೇಳಿಕೊಳ್ಳುತ್ತಾರೆ.

image


"ಕರಿಗಾಸ್ ಒಳಿತಿಗಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಗೆ ತಕ್ಕಂತೆ, ಕರಕುಶಲಕರ್ಮಿಗಳ ಕೌಶಲ್ಯ ವಿನಿಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದೂ ಕೂಡ ಜಯಾ ಅವರು ಮಾಡುತ್ತಿರುವ ಸಮಾಜಮುಖೀ ಕಾರ್ಯಗಳಲ್ಲೊಂದು. 45 ಹಳ್ಳಿಗಳಿಗೆ ಈ ಕಲೆ ತಲುಪಲೆಂದು ನಾವು ಕೆಲ ಈಜಿಪ್ಟ್ ಕುಶಲಕರ್ಮಿಗಳಿಗೆ ತರಬೇತಿ ನೀಡಿದೆವು. ಆ ಕಲೆಗಳನ್ನು ಬೋಧಿಸುವಾಗ ಇತರೆ ದೇಶದ ತಂತ್ರ, ಕಲ್ಪನೆ, ಆಚರಣೆಗಳನ್ನು ತಿಳಿಸಿ, ಪ್ರವಾಸಿ ಸ್ನೇಹಿ ಉತ್ಪನ್ನಗಳನ್ನು ತಯಾರಿಸಲು ಸಲಹೆ ದೊರೆಯಿತು. ಪರಸ್ಪರ ಕಲಿಯುವಿಕೆ, ಹೊಸದನ್ನ ಕಲಿಯಲು ಅವಕಾಶ, ಇವೆಲ್ಲವನ್ನು ಜನವರಿಯಲ್ಲಿ ದೆಹಲಿಯಲ್ಲಿ ನಡೆಯುವ ಕರಕುಶಲಕರ್ಮಿಗಳ ಕಾರ್ಯಕ್ರಮದಲ್ಲಿ ಒದಗಿಸಲಾಗುವುದು. ಅಲ್ಲಿ ಕಾಗದದ ಛತ್ರಿಗಳನ್ನು ಅದ್ಭುತವಾಗಿ ಮಾಡುವ ನಿಪುಣತೆ ಹೊಂದಿರುವ ಮಯನ್ಮಾರ್ ನ ಕುಶಲಕರ್ಮಿಗಳೂ ಬಂದಿರುತ್ತಾರೆ. ಅವರೆಲ್ಲರೂ ಸ್ಥಳೀಯ ಕುಶಲಕರ್ಮಿಗಳ ಜೊತೆ ಸೇರಿ, ಉತ್ತಮ ವಸ್ತುಗಳಿಗಾಗಿ ಪ್ರಯೋಗ ಮಾಡುತ್ತಾರೆ. "ನಮ್ಮಲ್ಲಿ ಕರಿಗರಂದ ಸುಮಾರು 10 ಕೋಟಿ ರೂ. ವ್ಯಾಪಾರವಾಗುತ್ತದೆ. ಅದರಲ್ಲಿ ಶೇ.10% ರಷ್ಟು ಹಣ ನಮ್ಮ ಸಮಿತಿಗೆ ಕರಿಗರು ಹಿಂದಿರುಗಿಸುತ್ತಾರೆ. ಆ ಹಣವನ್ನ ಜನರೇಟರ್, ವಿದ್ಯುತ್, ಅಲಂಕಾರ, ಜಾತ್ರೆಗಳಲ್ಲಿ ಸಿಬ್ಬಂದಿ ವೇತನ, ವಿನ್ಯಾಸ ಕಲಿಯುವಿಕೆ ಹಾಗೂ ಇತರೆ ಖರ್ಚುಗಳಿಗೆ ಬಳಸಿಕೊಳ್ಳಲಾಗುತ್ತದೆ". ಎಂದು ಜಯಾ ಉತ್ಸಾಹದಿಂದ ಹೇಳಿಕೊಳ್ಳುತ್ತಾರೆ. ಭಾರತ ಚೀನಾ ಆರ್ಥಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮದಲ್ಲಿ, ಸಮಿತಿಯ ವತಿಯಿಂದ 25 ಕುಶಲಕರ್ಮಿಗಳು ಭಾಗವಹಿಸಿದ್ದರು. 21 ಕರಕುಶಲಗಳಲ್ಲಿ 14 ಅಂತರರಾಷ್ಟ್ರೀಯ ಭಾಷೆಗಳಿದ್ದು ಅದನ್ನು ಪ್ರದರ್ಶಿಸುವುದು ಬಹಳ ಹೆಮ್ಮೆಯ ಸಂಗತಿ. ನಾವು ಚೀನಾಗೆ ಹೋಗುತ್ತಿದ್ದೇವೆ ಎಂದು ಅಲ್ಲಿಯ ಯುವಕರು ತಂಬಾ ಉತ್ಸುಕರಾಗಿದ್ದರು ಮತ್ತು ಹೆಮ್ಮೆ ಪಡುತ್ತಿದ್ದರು.

ಜಯಾ ಯಾವಾಗಲೂ ಕೈಮಗ್ಗದ ಸೀರೆ ಧರಿಸುತ್ತಾರೆ, ಹಣೆಯ ಮೇಲೆ ದೊಡ್ಡ ಬಿಂದಿ ಇರುತ್ತದೆ ಮತ್ತು ಯಾವಾಗಲೂ ಪ್ರಶಾಂತವಾಗಿರುತ್ತಾರೆ. ಅವರು ಯಾವಾಗಲೂ ತಮ್ಮ ಹೊಸ ಯೋಜನೆ ಬಗ್ಗೆ ಮಾತನಾಡಲು ಉತ್ಸುಕರಾಗಿರುತ್ತಾರೆ. ಕಳೆದ ವರ್ಷದ ಬಡ್ಜೆಟ್ ನಲ್ಲಿ ಸರ್ಕಾರದಿಂದ ಸಂಶೋಧನೆ ಮತ್ತು ದಾಸ್ತಾವೆಗಾಗಿ ಬರೊಬ್ಬರಿ 30 ಕೋಟಿ ರೂ. ಹಣ ಮಂಜೂರು ಮಾಡಲಾಗಿತ್ತು ಎಂದು ಜಯಾ ಹೇಳುತ್ತಾರೆ. ನಾವು ಸಾಂಸ್ಕøತಿಕ ಕಥೆಗಳನ್ನ ಕರಕೌಶಲ್ಯತೆಯಿಂದ ಪ್ರಸ್ತುತಪಡಿಸಬೇಕು ಎಂದುಕೊಂಡಿದ್ದೆವು. ಆದರೆ ಅದು ಸಾಧ್ಯವಾಗಲಿಲ್ಲ. ಅದನ್ನು ಕೆಲ ಬಣ್ಣಗಳನ್ನು ಉಪಯೋಗಿಸಿ ಅಕಾಡೆಮಿ ಮೂಲಕ ದಾಖಲಿಸುತ್ತೇವೆ ಎಂದು ಜಯಾ ಹೇಳುತ್ತಾರೆ. ನಮ್ಮ ಕರಕುಶಲತೆಯಲ್ಲಿ ಅನೇಕ ಅಂಶಗಳಿವೆ. ನಾವು ಕಲೆ ಹಾಗೂ ಬಣ್ಣಗಳ ಬಗ್ಗೆ ಜಾಗೃತಿ ಮೂಡಿಸಲು ಕೆಲವು ಕ್ರಾಫ್ಟ್‍ಗಳನ್ನು ವರ್ಷದ ಕೆಲವು ತಿಂಗಳುಗಳಲ್ಲಿ ಮಾತ್ರ ಉತ್ಪಾದಿಸುತ್ತೇವೆ ಅಂತಾರೆ ಜಯಾ. ಈ ಕರಕುಶಲ ವಸ್ತುಗಳಲ್ಲಿ ಒಂದು ಸಂಸ್ಕøತಿಯನ್ನು ನೋಡಬಹುದು. ಪ್ರತಿಯೊಂದು ಕರಕುಶಲ ವಸ್ತುವೂ ಒಂದೊಂದು ಪರಂಪರೆ ಹಾಗೂ ಸಂಸ್ಕøತಿಯ ಪ್ರತೀಕವಾಗಿದೆ. ಪ್ರವಾಸಿಗರು, ವಿದೇಶಿಯರು ಹಾಗೂ ವಿದ್ಯಾರ್ಥಿಗಳಿಗಾಗಿಯೇ ಅಕಾಡೆಮಿ ಕಡಿಮೆ ಅವಧಿಯ ಕೋರ್ಸ್‍ಗಳನ್ನು ಆಯೋಜಿಸುವುದು ವಿಶೇಷ. ಹಸ್ತಕಲಾ ಅಕಾಡೆಮಿಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಲು, ರಾಜಕೀಯದಿಂದ ದೂರವಿಡುವ ನಿಟ್ಟಿನಲ್ಲಿ, ಖಾಸಗೀ ಸಹಭಾಗಿತ್ವಕ್ಕೂ ಒತ್ತು ಕೊಡುವ ಕುರಿತು ಜಯಾ ಚಿಂತನೆ ನಡೆಸಿದ್ದಾರೆ.

ಜಯಾ ತಮ್ಮ ವೃತ್ತಿಜೀವನ ಪ್ರಾರಂಭಿಸಿದಾಗಿನಿಂದ ಸಮಯ ಬದಲಾಗಿದೆ. ‘ಈಗ ಕರಕುಶಲಕರ್ಮಿಗಳ ಮಕ್ಕಳು ತಂತ್ರಜ್ಞಾನ ಮತ್ತು ಭಾಷಾ ಬಳಕೆಯನ್ನು ಚೆನ್ನಾಗಿ ನಿಭಾಯಿಸುವುದನ್ನು ಕಲಿತಿದ್ದಾರೆ. ವಿನ್ಯಾಸದ ಬಗ್ಗೆ ತಿಳಿಯಲು, ಇಂಟರ್‍ನೆಟ್‍ನಲ್ಲಿ ಹುಡುಕಲು, ವಿದೇಶೀ ಗ್ರಾಹಕರೊಂದಿಗೆ ಈಮೇಲ್ ಮೂಲಕ ಚರ್ಚಿಸಲು, ಪ್ರಿಂಟ್‍ಔಟ್‍ಗಳನ್ನು ಪಡೆದು ಅವುಗಳ ಸಹಾಯದಿಂದ ಕರಕುಶಲ ವಸ್ತು ಉತ್ಪಾದಿಸಲು ಅವರೀಗ ಐಫೋನ್, ಐಪ್ಯಾಡ್, ಮತ್ತು ವಾಟ್ಸಾಪ್ ಬಳಸುವುದನ್ನೂ ಕಲಿತಿದ್ದಾರೆ. ಅವರ ಜೀವನಶೈಲಿ ಕೂಡ ಬದಲಾಗುತ್ತಿದೆ. ಕೆಲವರು ಎಸ್‍ಯುವಿಯಂತಹ ಐಶಾರಾಮಿ ಕಾರ್‍ಗಳನ್ನು ಖರೀದಿಸಿದ್ದಾರೆ. ಬರಗಾಲಪೀಡಿತ ಕಛ್ ಪ್ರದೇಶದ ಕರಿಗಾರನೊಬ್ಬ ಈಗ ರೆಸಾರ್ಟ್ ನಡೆಸುತ್ತಿದ್ದಾನೆ. ನಾನು ಅವರಿಗೆ ಆಗಾಗ ಆರ್ಥಿಕವಾಗಿ ಬೆಳೆಯುವುದು ಒಳ್ಳೆಯದೇ, ಆದ್ರೆ ಕರಕುಶಲ ಕಲೆಯೊಂದಿಗೆ ಬೆಳೆಯುವುದು ಇನ್ನೂ ಉತ್ತಮ ಅಂತ ಹೇಳುತ್ತಿರುತ್ತೇನೆ. ಅವರು ಈ ಕಲೆಯನ್ನು ಇಲ್ಲಿಗೇ ನಿಲ್ಲಿಸಬಾರದು. ಯಾಕಂದ್ರೆ ಅವರು ಇವತ್ತು ಏನಾಗಿದ್ದಾರೋ ಅದಕ್ಕೆ ಕಾರಣ ಈ ಕಲೆ. ಕೆಲವರು ಕರಕುಶಲ ಕಲೆ ಸಾಯುತ್ತಿದೆ ಅಂತ ಬೊಬ್ಬಿಡುತ್ತಾರೆ. ಆದರೆ ನನಗೆ ಹಾಗೆ ಅನ್ನಿಸುವುದಿಲ್ಲ. ಇಲ್ಲಿ ತುಂಬಾ ಅವಕಾಶಗಳಿವೆ. ಅಕಸ್ಮಾತ್ ಒಂದು ಕಲೆ ಸತ್ತರೆ, ಮತ್ತೊಂದು ಹೊಸ ಕಲೆ ಹುಟ್ಟಿಕೊಳ್ಳುತ್ತದೆ. ಅದೇ ಕಲೆಯ ಜೀವನಕ್ರಮ. ಮಹಾರಾಷ್ಟ್ರದಲ್ಲಿ ಕರಕುಶಲಕ್ಕೆ ಅಷ್ಟಾಗಿ ಮಹತ್ವವಿರಲಿಲ್ಲ. ಆದ್ರೆ ಈಗ ಹೊಸ ತಂಡವೊಂದು ಕಲ್ಲುಗಳನ್ನು ಕೆತ್ತಿ, ಕಂಚಿನ ಸಹಾಯದೊಂದಿಗೆ ಪ್ರಾಣಿಗಳ ಮೂರ್ತಿ ಮಾಡುತ್ತಿದ್ದಾರೆ. ಉತ್ತರಾಖಂಡದಲ್ಲಿ ಮಹಿಳೆಯರ ತಂಡವೊಂದು, ಸ್ವಯಂಸೇವಾ ಸಂಘದ ಸಹಾಯದಿಂದ ಬಟ್ಟೆ ನೇಯುತ್ತಿದ್ದಾರೆ. ಇಲ್ಲಿ ಕರಿಗಾರರು ಪ್ರತಿದಿನ ಒಂದೊಂದು ಕರಕುಶಲ ವಸ್ತುವನ್ನು ಮಾಡುತ್ತಿದ್ದಂತೆಯೇ, ನನಗೆ ನಮ್ಮ ಪರಂಪರೆ ಹೊಸ ಎತ್ತರಕ್ಕೆ ಏರಿದ ಅನುಭವ ನೀಡುತ್ತದೆ. ನಾನು ಬದುಕಿರುವವರೆಗೂ ಈ ಕೆಲಸವನ್ನು ಹೀಗೇ ಮುಂದುವರಿಸುವ ಆಸೆ ನನ್ನದು.’ ಅಂತ ನಗುತ್ತಾರೆ ಜಯಾ ಜೇಟ್ಲಿ.

ಲೇಖಕರು: ಇಂದ್ರಜಿತ್​​ ಡಿ ಚೌಧರಿ

ಅನುವಾದಕರು: ವಿಶಾಂತ್​​​​