30 ನಿಮಿಷಗಳಲ್ಲಿ ಶೇಕಡಾ 15ರಷ್ಟು ರಿಯಾಯತಿಯಲ್ಲಿ ಮನೆಬಾಗಿಲಿಗೆ ಔಷಧಿ... ಬೆಂಗಳೂರು ಸ್ನೇಹಿತರ ಸಾಧನೆ

ಟೀಮ್​​ ವೈ.ಎಸ್​​. ಕನ್ನಡ

30 ನಿಮಿಷಗಳಲ್ಲಿ ಶೇಕಡಾ 15ರಷ್ಟು ರಿಯಾಯತಿಯಲ್ಲಿ ಮನೆಬಾಗಿಲಿಗೆ ಔಷಧಿ... ಬೆಂಗಳೂರು ಸ್ನೇಹಿತರ ಸಾಧನೆ

Sunday December 13, 2015,

3 min Read

ನಿಮಗೆ ಹುಷಾರಿಲ್ವಾ ಜ್ವರ ಮತ್ತೇನಾದ್ರೂ ಖಾಯಿಲೆ ಬಂದಿದ್ಯಾ..? ಮೆಡಿಕಲ್ ಶಾಪ್‍ಗೆ ಹೋಗಿ ಔಷಧಿ ತರಬೇಕಾ..? ಆದ್ರೆ ನಿಮಗೆ ಮೆಡಿಕಲ್ ಶಾಪ್‍ನಲ್ಲಿ ಡಾಕ್ಟರ್ ಬರೆದುಕೊಟ್ಟ ಔಷಧಿ ಸಿಗ್ತಿಲ್ವಾ..? ಹಾಗಾದ್ರೆ ನೀವು ಮೈರಾ ಮೆಡ್ ಆ್ಯಪ್‍ಗೆ ಒಂದು ಎಸ್‍ಎಂಎಸ್ ಅಥವಾ ಒಂದ್ ಕಾಲ್ ಮಾಡಿ. ಕೇವಲ ಅರ್ಧಗಂಟೆಯಲ್ಲೇ ನಿಮ್ಮ ಮನೆಗೆ ತಲುಪುತ್ತೆ ನಿಮಗೆ ಬೇಕಾದ ಔಷಧಿ.

ಮೈರಾ ಮೆಡಿಸಿನ್ಸ್ ಕಲ್ಪನೆ ಹುಟ್ಟಿದ್ದೇ ಔಷಧಿಯ ಕೊರತೆ ಎದುರಾದಾಗ...ಅಂದು ಬೆಂಗಳೂರಿನಲ್ಲಿ ಮೆಳೆಗಾಲ ಶುರುವಾಗಿತ್ತು. ವಾತಾವರಣದ ಬದಲಾವಣೆಯಿಂದಾಗಿ ಫೈಜಾನ್ ಅಜೀಜ್ ಅನಾರೋಗ್ಯಕ್ಕೊಳಗಾಗಿದ್ರು. ವೈದ್ಯರು ಬರೆದುಕೊಟ್ಟ ಮಾತ್ರೆ ತೆಗೆದುಕೊಂಡು ಗುಣಮುಖರಾಗುವಷ್ಟರಲ್ಲೇ, ಅವರ ಪತ್ನಿ ತೀವ್ರ ಅನಾರೋಗ್ಯಕ್ಕೆ ತುತ್ತಾದ್ರು. ಪತ್ನಿಗೆ ಔಷಧ ತರಲು ಮೆಡಿಕಲ್ ಶಾಪ್‍ಗೆ ಹೋದ ಫೈಜಾನ್ ಔಷಧಿ ಕೊಳ್ಳೋಕೆ ಬರೋಬ್ಬರಿ ಒಂದು ಗಂಟೆ ಕಾಯ್ಬೇಕಾಯ್ತು...ಒಂದುಕಡೆ ಔಷಧಿ ತೆಗೆದುಕೊಳದೇ ಫೈಜಾನ್ ಪತ್ನಿ ಆರೋಗ್ಯ ಏರುಪೇರಾಗ್ತಿದ್ರೆ, ಇನ್ನೊಂದೆಡೆ ಫೈಜಾನ್ ಔಷಧಿ ಕೊಳ್ಳೋಕೆ ಹರಸಾಹಸ ಪಡಬೇಕಾಯ್ತು.

ಮರುದಿನ ಈ ನೋವಿನ ಅನುಭವವನ್ನ ಫೈಜಾನ್ ತನ್ನ ಸ್ನೇಹಿತ ಅನಿರುದ್ಧ ಬಳಿ ಹೇಳಿಕೊಂಡ್ರು. ಆಗ ಇಬ್ಬರು ಸ್ನೇಹಿತರು ಕೂತು ವಿಮರ್ಶಾತ್ಮಕವಾಗಿ ಯೋಚಿಸಿ, ತಂತ್ರಜ್ಞಾನದಿಂದಲೇ ಇಂತಹ ಸಮಸ್ಯೆಯನ್ನ ಪರಿಹರಿಸಬಹುದು ಎಂದು ಅರಿತುಕೊಂಡ್ರು. ಆಗ ಹುಟ್ಟಿದ್ದೇ ಮೈರಾ ಮೆಡಿಸಿನ್ಸ್. 2015 ಏಪ್ರಿಲ್ ರಲ್ಲಿ ಮೈರಾ ತನ್ನ ಕಾರ್ಯಾರಂಭ ಮಾಡಿತು.

ಬೆಂಗಳೂರು ಮೂಲದ ಸ್ನೇಹಿತರು ಸೇರಿ ಆರಂಭಿಸಿದ ಮೈರಾ ಮೆಡಿಸಿನ್ಸ್ ಈಗ ಆರು ಡೆಲವರಿ ಬಾಯ್ಸ್ ಮತ್ತು 12 ನೌಕರರನ್ನ ಹೊಂದಿದೆ. ಹೆಚ್‍ಆರ್‍ಬಿಆರ್ ಲೇಔಟ್, ಹಲಸೂರು, ಕಾಕ್ಸ್​​​ಟೌನ್, ಜಯಮಹಲ್​​​, ಬೆನ್ಸನ್ ಟೌನ್‍ಗಳಲ್ಲಿ ಸಧ್ಯ ಔಷಧಿಗಳನ್ನ ರವಾನಿಸಲಾಗುತ್ತೆ. ಪ್ರಸ್ತುತ ಮೈರಾ ಮೆಡಿಸಿನ್‍ಗೆ 200 ಡೆಲವರಿ ಸಿಗ್ತಿದೆ. ಔಷಧಿಗಳ ಆರ್ಡರ್ 600 ರೂಪಾಯಿಂದ 1200 ರೂಪಾಯಿಯವರೆಗೂ ಇರುತ್ತವೆ. ಜೊತೆಗೆ ಮೈರಾ ಮೆಡಿಸಿನ್‍ನಲ್ಲಿ ಬುಕ್‍ಮಾಡಿದ್ರೆ ಗ್ರಾಹರಿಗೆ ಶೇಕಡಾ 15 ರಷ್ಟು ಕಡಿಮೆ ದರದಲ್ಲಿ ಔಷಧಿಗಳು ದೊರೆಯಲಿವೆ.

image


ಮೈರಾ ಮಡಿಸಿನ್ಸ್‍ನಲ್ಲಿ ದೇಶಾದ್ಯಂತ ಸದ್ಯ 40 ಮಂದಿ ಕೆಲಸ ಮಾಡ್ತಿದ್ದು, ಅವರೊಂದಿಗೆ ವ್ಯವಹರಿಸುತ್ತಿರುವ ಪ್ರತಿಯೊಬ್ಬರ ಪರವಾನಗಿಯನ್ನು ಪರಿಶೀಲಿಸಲಾಗುತ್ತೆ.

ಫೈಜಾನ್ ಮತ್ತು ಅನಿರುದ್ಧ ಇಬ್ಬರೂ ಆರ್.ವಿ.ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದವರು. ಫೈಜಾನ್ ಡೆಕ್ಸ್​​ಟ್ರಾ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ರು. ಹಾಗೆಯೇ ಸಿಟಿಒ ಆಗಿ ಬಡ್ತಿ ಹೊಂದಿದ್ರು. ತಮ್ಮ ವೃತ್ತಿಯಲ್ಲಿ ಫೈಜಾನ್ ಪಡೆದ ಪ್ರಮೋಷನ್ ಮೈರಾ ಮೆಡಿಸಿನ್ ಬೆಳವಣಿಗಗೆ ಸಹಕಾರಿಯಾಯ್ತು.

ಮೈರಾ ಮೆಡಿಸಿನ್ಸ್ ಆರಂಭವಾಯ್ತು. ಆದ್ರೆ ಅದನ್ನು ಆರ್ಥಿಕವಾಗಿ ಬಲಪಡಿಸಲೇ ಬೇಕಿತ್ತು. ಈ ವೇಳೆ ಸ್ನೇಹಿತರಿಗೆ ಹಲವಾರು ಸವಾಲುಗಳು ಎದುರಾದವು. ಜೋಡಿ ಟೀಂ ಇದಕ್ಕಾಗಿ ಹರಸಾಹಸ ಪಡೋಕೆ ಶುರುಮಾಡ್ತು. ಅದಾಗ್ಯೂ ಈ ಸ್ನೇಹಿತರು 1 ಕೋಟಿ ಕಲೆ ಹಾಕಿದ್ರು.

ಮೈರಾ ಮೆಡಿಸಿನ್ಸ್ ಮೊದಲ ವರ್ಷವೇ 50 ರಿಂದ 70 ರಷ್ಟು ಪ್ರಗತಿ ನಿರೀಕ್ಷಿಸುತ್ತಿದೆ. ಜೊತೆಗೆ ಒಂದು ವರ್ಷದೊಳಗೆ ಬೆಂಗಳೂರಿನ ಎಲ್ಲಾ ಭಾಗಗಳಲ್ಲೂ ಔಷಧಿ ವಿತರಿಸುವ ಯೋಜನೆ ಹೊಂದಿದೆ.

ಸಾಮಾನ್ಯವಾಗಿ ಔಷಧಿಗಳ ವ್ಯವಹಾರ ಮಾಡುವಾಗ ಬಂಡವಾಳ ಹೆಚ್ಚಾಗಿ ಬೇಕಾಗುತ್ತೆ. ಆದ್ರೆ ಮೈರಾ ಮೆಡಿಸಿನ್ಸ್‍ಗೆ ತಂತ್ರಜ್ಞಾನದ ಬಳಕೆಯಿಂದ ಹಣದ ಬಳಕೆ ಕಡಿಮೆಯಾಯ್ತು. ಡಾಟಾ ಮೂಲಕ ಗ್ರಾಹಕರ ಬೇಡಿಕೆ ಊಹಿಸಲು, ಔಷಧಿಗಳ ಖರೀದಿ ಮಾದರಿಗಳನ್ನು ಪಡೆಯಲು, ಬಳಕೆದಾರರ ವರ್ತನೆಯನ್ನು ವಿಶ್ಲೇಷಿಸಲು ಅಂದ್ರೆ ಔಷಧಿ, ಕ್ರಮಬದ್ಧತೆ ಮತ್ತು ಗ್ರಾಹಕರ ಅವಲಂಭನೆ ನೋಡಲು ಡಾಟಾ ತಂತ್ರಜ್ಞಾನ ಬಳಸಲಾಗ್ತಿದೆ. ಇದ್ರಿಂದಾಗಿ ನಿಖರವಾಗಿ ಗ್ರಾಹಕರಿಂದ ಔಷಧಗಳ ಬೇಡಿಕೆ ಮತ್ತು ಔಷಧಗಳ ಸ್ಟಾಕ್‍ಗಳ ಬಗ್ಗೆ ತಿಳಿಯಲು ಡಾಟಾ ತಂತ್ರಜ್ಞಾನ ಸಹಾಯವಾಗ್ತಿದೆ.

ಕಂಪನಿಯಿಂದ ಔಷಧಗಳನ್ನು ಗ್ರಾಹಕರಿಗೆ ರವಾನಿಸಲು ಒಯ್ದ ಡೆಲಿವರಿ ಬಾಯ್ಸ್ ಎಲ್ಲಿದ್ದಾರೆ ಎಂದು ಪತ್ತೆ ಹಚ್ಚಲು ಇಆರ್‍ಪಿ ಪ್ರಿಸಂ ಎಂಬ ಆಪ್ ಕೂಡಾ ಫೈಜಾನ್ ಅಭಿವೃದ್ಧಿ ಪಡಿಸಿದ್ರು. ಹಾಗೆಯೇ ಆರ್ಡರ್‍ಗಳನ್ನು ಪಡೆದ ನಂತರ, ಯಾವುದನ್ನ ಮೊದಲಿಗೆ ಕಳಿಸಬೇಕು, ಯಾವುದನ್ನ ನಿಧಾನವಾಗಿ ಕಳಿಸಬಹುದು ಎಂಬುದು ಇಆರ್‍ಪಿಯಿಂದ ಡೆಲವರಿ ಬಾಯ್ಸ್ ತಿಳಿದುಕೊಳ್ತಾರೆ.

ಮೈರಾ ಮೆಡಿಸಿನ್ಸ್‍ನಲ್ಲಿ ಡೆಲವರಿ ಬಾಯ್ಸ್​​​ಗಳ ಸಂಖ್ಯೆ ತುಂಬಾ ಕಡಿಮೆಯಿದೆ. ಕಾರಣ ಮೈರಾದಲ್ಲಿರುವ ಮ್ಯಾಪಿಂಗ್ ವ್ಯವಸ್ಥೆ. ಇದರ ಸಹಾಯದಿಂದ ಡೆಲವರಿ ಬಾಯ್ಸ್​​​ಗೆ ನಿಖರವಾಗಿ ರಸ್ತೆ ವೇಗ ಊಹಿಸಲು ಸಹಾಯವಾಗ್ತಿದೆ. ಹೀಗಾಗಿ ಕಂಪನಿಯಲ್ಲಿರುವ ಹುಡುಗರೆ ಬೇಗ ಬೇಗ ಔಷಧಿಗಳನ್ನು ಗ್ರಾಹಕರಿಗೆ ತಲುಪಿಸುತ್ತಿದ್ದಾರೆ. ಇನ್ನು ಈ ಮ್ಯಾಪಿಂಗ್‍ನಲ್ಲಿ ಎರಡು ವಿಧಗಳಿವೆ. ಒಂದು ಮಾಹಿತಿ ಸಂಗ್ರಹ ಮತ್ತೊಂದು ಸಂಚಾರ ಊಹಿಸುವುದು.

ಕಳೆದ ಒಂದು ವರ್ಷದಲ್ಲಿ ಭಾರತದಲ್ಲಿ ಆನ್‍ಲೈನ್ ಬೇಡಿಕೆಗಳು ಹೆಚ್ಚಾಗ್ತಿವೆ. ಆನ್‍ಲೈನ್ ಫಾರ್ಮಸಿ ಉದ್ಯಮ ತೀವ್ರಗತಿಯಲ್ಲಿ ಬೆಳೆಯುತ್ತಿದೆ. ಇವುಗಳಲ್ಲಿ 1ಜಿಎಂಆಯುಷ್.ಕಾಮ್, ಹೆಲ್ತ್​​​ಕಾರ್ಟ್, ಹೆಲ್ತ್​​​ ಗೇನ್, ಹೆಲ್ತ್ ಅಡ್ಡಾ, ಎಂಕೆಮಿಸ್ಟ್, ಮತ್ತು ಡಿಮಾರ್ಕ್ ಹೆಲ್ತ್ ನಂತಹ ಆನ್‍ಲೈನ್ ಮೆಡಿಸಿನ್ ಉದ್ಯಮಿಗಳಲ್ಲಿ ತೀವ್ರ ಪೈಪೋಟಿ ಇದೆ. ಸಧ್ಯ ಆನ್‍ಲೈನ್ ಮೆಡಿಸಿನ್ ಉದ್ಯಮದಲ್ಲಿ ಹೆಲ್ತ್​​​ಕಾರ್ಟ್ 2015ರಲ್ಲಿ ಹೆಚ್ಚಿನ ಆದಾಯ ಪಡೆಯೋ ಮೂಲಕ ಆನ್‍ಲೈನ್ ಮೆಡಿಸಿನ್ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿದೆ.

ಐಟಿ ಮೂಲಸೌಕರ್ಯ, ಸಾಫ್ಟ್​​​ವೇರ್, ಮತ್ತು ಪೂರೈಕೆ ಇವು ಇ-ಫಾರ್ಮಸಿಯ ನಾವೀನ್ಯತೆಗೆ ಸರಪಳಿಗಳಂತಿದ್ದು , ಇವು ಪ್ರಮುಖ ಪಾತ್ರವಹಿಸುತ್ತಿವೆ. `ಕೆನ್' ಆರೋಗ್ಯ ವರದಿಯ ಪ್ರಕಾರ ಭಾರತದಲ್ಲಿ ಆರೋಗ್ಯ ಉತ್ಪನ್ನಗಳ ಆನ್‍ಲೈನ್ ಮಾರಾಟದ ಆದಾಯ 2012ರಲ್ಲಿ 771.0 ಮಿಲಿಯನ್ ನಷ್ಟಿತ್ತು. 2015ರಲ್ಲಿ 5.075.9 ಮಿಲಿಯನ್‍ನಷ್ಟಾಗಿದೆ ಆದಾಯ.

ಈ ಮೇಲಿನ ಅಂಕಿ ಅಂಶಗಳನ್ನ ಭಾರತೀಯ ಆನ್‍ಲೈನ್ ಆರೋಗ್ಯ ಉತ್ಪನ್ನ ಉದ್ಯಮ ಎಫ್‍ಐ ನೀಡಿದ್ದು, 2020ರಲ್ಲಿ ಇ-ವಾಣಿಜ್ಯ ಉದ್ಯಮದಲ್ಲಿ ಮತ್ತಷ್ಟು ಗಮನಾರ್ಹ ಬೆಳವಣಿಗೆಯಾಗಲಿದೆ ಎಂದು ಎಫ್‍ಐ ತಿಳಿಸಿದೆ.

ಲೇಖಕಿ: ಅಪರಾಜಿತ ಚೌಧರಿ

ಅನುವಾದಕರು: ಟಿಎಎ