ಡೀಪ್ ಲರ್ನಿಂಗ್ ಕ್ಷೇತ್ರದಲ್ಲಿ ಹೆಚ್ಚುವರಿ ಬಂಡವಾಳ ಹೂಡಿ ನಾಗಾಲೋಟದಿಂದ ಸಾಗುತ್ತಿದೆ ಹೈಪರ್ವರ್ಜ್:

ಟೀಮ್​ ವೈ.ಎಸ್​​.

0

ಡಿಸೆಂಬರ್ 2013ರಲ್ಲಿ ಕೇದಾರ್ ಕುಲಕರ್ಣಿ, ವಿಘ್ನೇಶ್ ಕೃಷ್ಣಕುಮಾರ್, ಕಿಶೋರ್ ನಟರಾಜನ್, ಸಾಯಿ ವೆಂಕಟೇಶ್ ಅಶೋಕ್ ಕುಮಾರ್, ಹಾಗೂ ಪ್ರವೀಣ್ ಕುಮಾರ್​​ರ 5 ಜನರ ತಂಡ ಸ್ಥಾಪಿಸಿದ ಸಂಸ್ಥೆಯೇ ಈ ಹೈಪರ್​​ವರ್ಜ್. ಮದ್ರಾಸ್ ಐಐಟಿಯಲ್ಲಿ ಕಲಿತ ಇವತ್ತು ಕೇವಲ 6 ಲಕ್ಷ ಮೂಲಬಂಡವಾಳ ಹೂಡಿಕೆಯೊಂದಿಗೆ ಸಂಸ್ಥೆಯನ್ನು ಪ್ರಾರಂಭಿಸಿದರು.

ಮದ್ರಾಸ್​​ನ ಐಐಟಿಯಲ್ಲಿ ಕಲಿಯುತ್ತಿರುವಾಗಲೇ ಈ ತಂಡ ಕಂಪ್ಯೂಟರ್ ವಿಷನ್ ಹಾಗೂ ಮೆಷಿನ್ ಲರ್ನಿಂಗ್ ಪರಿಹಾರಗಳಿಗೆ ಸಂಬಂಧಿಸಿ ರಿಸರ್ಚ್ ಹಾಗೂ ಡೆವಲಪ್​​ಮೆಂಟ್​​​​ ಭಾಗವಾಗಿದ್ದರು. ಅವರ ಸಂಶೋಧನೆಯ ಫಲವಾಗಿ ಅಂತರಾಷ್ಟ್ರೀಯ ರೊಬೋಟಿಕ್ಸ್ ಸ್ಫರ್ಧೆಯಲ್ಲಿ ಭಾರತವೂ ಸ್ಫರ್ಧಿಸಿತ್ತು.

ಡೀಪ್ ಲರ್ನಿಂಗ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿರುವ ಹೈಪರ್​ವರ್ಜ್ ಸಂಸ್ಥೆ ಇತ್ತೀಚೆಗಷ್ಟೇ ಅಮೇರಿಕಾ ಮೂಲದ ನ್ಯೂ ಎಂಟರ್​​ಪ್ರೈಸಸ್ ಅಸೋಸಿಯೇಟ್ (ಎನ್ಇಎ) ಮಿಲ್ಲಿ ವೇಯ್ಸ್ ವೆಂಚರ್, ನಯಾ ವೆಂಚರ್ ಸಂಸ್ಥೆಗಳಿಂದ 1 ಮಿಲಿಯನ್ ಡಾಲರ್ ಹೂಡಿಕೆ ಹೆಚ್ಚು ಮಾಡುವ ಘೋಷಣೆ ಮಾಡಿತು. ಈ ಹೂಡಿಕೆಯಿಂದ ತನ್ನ ಸಿಲ್ವರ್ ಅನ್ನುವ ಮೊಬೈಲ್ ಅಪ್ಲೀಕಶನ್ ಅಭಿವೃದ್ಧಿಪಡಿಸಿ, ತನ್ನ ತಾಂತ್ರಿಕ ವರ್ಗವನ್ನು ವಿಸ್ತರಿಸುವ ತೀರ್ಮಾನ ಮಾಡಿದೆ.

ಎನ್ಇಎನಂತಹ ಸಂಸ್ಥೆಗಳ ಹೂಡಿಕೆಯ ಬಲ ಹೊಂದಿರುವ ಈ ಸಂಸ್ಥೆ 17 ಬಿಲಿಯನ್ ಡಾಲರ್ ಮೌಲ್ಯದ ವಿಶ್ವದ ಬಲಾಢ್ಯ ಸಂಸ್ಥೆಯಾಗುವ ಗುರಿ ಹೊಂದಿದೆ. ಜೊತೆಗೆ ಇದಕ್ಕೆ ಭಾಗಶಃ ಬಂಡವಾಳ ಹೂಡಿಕೆ ಸೇಲ್​ಫೋರ್ಸ್.ಕಾಮ್, ಜುನಿಪರ್ ನೆಟ್​ವರ್ಕ್​ನಂತಹ ಸಂಸ್ಥೆಗಳಿಂದಲೂ ಸಿಕ್ಕಿದೆ. ಇನ್ನೊಂದು ಕಡೆ ಮಿಲ್ಲಿವೇಯ್ಸ್ ವೆಂಚರ್ ಸಂಸ್ಥಾಪಕರಾದ ಆನಂದ್ ರಾಜಾರಾಮನ್, ವೆಂಕಿ ಹರಿನಾರಾಯಣ್, ಫೇಸ್​​ಬುಕ್, ಸ್ನಾಪ್​​ಡೀಲ್, ಜಂಗ್ಲೀ.ಕಾಮ್ ನಂತಯಹ ಸಂಸ್ಥೆಗೂ ಹೂಡಿಕೆ ಮಾಡುತ್ತಿದೆ. ಸಂಸ್ಥೆಗೆ ಹಿಲಿಯನ್ ವೆಂಚರ್​​ನ ಸಹಸಂಸ್ಥಾಪಕರಾದ ಶ್ರೀಕಾಂತ್ ಸುಂದರ್​​ರಾಜನ್​ರಿಂದಲೂ ಹೂಡಿಕೆ ಮಾಡಿಕೊಂಡಿದೆ.

ಹೈಪರ್​​ವರ್ಜ್​ನ ಸಹ ಸಂಸ್ಥಾಪಕ ಕೇದಾರ್ ಕುಲಕರ್ಣಿ ಹೇಳುವಂತೆ ಇಂತಹ ಹೂಡಿಕೆಗಳಿಂದ ಸಂಸ್ಥೆ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿ ಉದ್ಯಮ ಕ್ಷೇತ್ರದ ಮಾರ್ಗದರ್ಶಕ ಸಂಸ್ಥೆಯಾಗಿ ದಾಪುಗಾಲಿಡುತ್ತಿದೆ. ಒಂದು ಕಡೆ ಮಿಲ್ಲಿವೇಯ್ಸ್​​ನ ಆನಂದ್ ಹಾಗೂ ವೆಂಕಿ ಗ್ರಾಹಕರ ವಿಭಾಗದಲ್ಲಿ ಸಂಸ್ಥೆಯ ಕಾರ್ಯಾಚರಣೆ ನೋಡಿಕೊಳ್ಳುತ್ತಿದ್ದರೆ, ಇನ್ನೊಂದು ಕಡೆ ನಯಾ ವೆಂಚರ್ ಉದ್ದಿಮೆಯ ಇನ್ನಿತರ ಜವಬ್ದಾರಿಗಳನ್ನು ನಿರ್ವಹಿಸುತ್ತಿದೆ. ಎನ್ಇಎ ಸಂಸ್ಥೆಯ ಮಾರ್ಕೆಟಿಂಗ್ ಹಾಗೂ ಇನ್ನಿತರೆ ಕಾರ್ಯಕ್ರಮಗಳನ್ನು ನೋಡಿಕೊಳ್ಳುತ್ತಿದೆ.

ಹೈಪರ್​​ವರ್ಜ್ ಮುಖ್ಯ ಬಾಕಿ ಉಳಿದಿರುವ 3 ಪೇಟೆಂಟ್​​ಗಳ (ಅಮೇರಿಕಾದಲ್ಲಿ 3 ಪೇಟೆಂಟ್ ಹಾಗೂ ಭಾರತದಲ್ಲಿ 1 ಪೇಟೆಂಟ್) ವಿಷಯದಲ್ಲಿ ಕೆಲಸ ಮಾಡುತ್ತಿದೆ. ಜೊತೆಗೆ ಇದರ ಕಂಟೆಂಟ್ (ವ್ಯಕ್ತಿ, ಸ್ಥಳ, ವಿಚಾರ, ಹಾಗೂ ಕಾರ್ಯಕ್ರಮ) ಗುರುತಿಸುವ ವಿಷಯದಲ್ಲಿ ಗಮನಹರಿಸುತ್ತಿದೆ. ಇವೆಲ್ಲವೂ ಇದರ ಮೊಬೈಲ್ ಅಪ್ಲಿಕೇಶನ್ ಸಿಲ್ವರ್​​ನಲ್ಲಿ ಉಲ್ಲೇಖಿಸಲಾಗುತ್ತದೆ. 2014ರಲ್ಲಿ ಸಿಲಿಕಾನ್ ವ್ಯಾಲಿಯಲ್ಲಿ ಈ ಸಂಸ್ಥೆ ನೊಂದಣಿ ಮಾಡಿಸಿದೆ.

ಡೀಪ್ ಲರ್ನಿಂಗ್ ತಂತ್ರಜ್ಞಾನ ಇತ್ತೀಚೆಗಿನ ದಿನಗಳಲ್ಲಿ ಅತಿ ಹೆಚ್ಚು ವ್ಯಾಪ್ತಿ ಹೊಂದುತ್ತಿದೆ. ಕಳೆದ ವರ್ಷ ಜನವರಿಯಲ್ಲಿ ಈ ಕ್ಷೇತ್ರದಲ್ಲಿ ಉದ್ಯಮ ಆರಂಭಿಸಿದಾಗಿದ್ದ ಅವಕಾಶಗಳಿಗಿಂತ ಇಂದು ಹೆಚ್ಚಾಗಿದೆ. ಭಾರತೀಯ ಮಾರುಕಟ್ಟೆಗಿಂತ ಈ ತಂತ್ರಜ್ಞಾನ ಯುಎಸ್ ಮಾರುಕಟ್ಟೆಯಲ್ಲಿ ಹೆಚ್ಚು ಪ್ರಸ್ತುತವೂ ಹಾಗೂ ಆಶದಾಯಕವೂ ಆಗಿದೆ.

ಸದ್ಯ ಸಂಸ್ಥೆ ದೊಡ್ಡ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಬೇಕಿರುವ ವ್ಯಾಪ್ತಿ ಸಂಸ್ಥೆ ಪಾಲಿಗೆ ಅತಿ ದೊಡ್ಡ ಸವಾಲು ಹುಟ್ಟುಹಾಕಿದೆ. ಮಿಲಿಯನ್​​ಗಟ್ಟಲೇ ಬಳಕೆದಾರರಿಗೆ ಈಗ ಇಮೇಜ್​​ಗಳನ್ನು ಪ್ರೊಸೆಸ್ ಮಾಡುತ್ತಿದೆ. ಸದ್ಯ ಸಂಸ್ಥೆಯ ಪ್ರೊಸೆಸರ್​​ನಲ್ಲಿ ಸುಮಾರು 75 ಸಾವಿರ ಇಮೇಜ್​​ಗಳು ಪ್ರತೀ ನಿಮಿಷ ಬಳಕೆದಾರರಿಂದ

ಡೀಪ್ ಲರ್ನಿಂಗ್ ಅಂದರೇನು?

ಡೀಪ್ ಲರ್ನಿಂಗ್ ಅನ್ನುವುದು ಮೆಷಿನ್ ಲರ್ನಿಂಗ್​​ನ ಇನ್ನೊಂದು ವಿಭಿನ್ನ ಸ್ವರೂಪ. ಪ್ರತ್ಯೇಕ ಹಾಗೂ ವಿಶೇಷ ಗಣಿತದ ಮಾದರಿಯನ್ನು ಹೊಂದಿರುವ ಈ ವ್ಯವಸ್ಥೆ, ಕಂಪ್ಯೂಟರ್ ಕಲಿಕೆಯನ್ನು ಸರಳವಾಗಿ ಅನುಕರಿಸುತ್ತದೆ. ದೊಡ್ಡ ಪ್ರಮಾಣದಲ್ಲಿ ವಿಷ್ಯುವಲ್​​ಗಳ ಡಾಟಾ ಪ್ರೊಸೆಸ್ ಮಾಡಲು ಇದು ಅನುಕೂಲಕಾರಿ. ಕಾರ್ಯಕ್ರಮ, ದಾಖಲೆಗಳು, ಮುಖದ ಪರಿಚಯ, ಹಾಗೂ ಇಮೇಜ್​​ಗಳನ್ನು ನಕಲು ಮಾಡುವಂತಹ ಕೆಲಸಗಳನ್ನು ಕ್ಷಣಾರ್ಧದಲ್ಲಿ ಮುಗಿಸುತ್ತದೆ.

ಭವಿಷ್ಯದ ಯೋಜನೆ:

ಸಂಸ್ಥೆ ಭವಿಷ್ಯ ಯೋಚಿಸಿ ಸುಮಾರು ಶೇ 90ರಷ್ಟು ಹೂಡಿಕೆಯನ್ನು ಕೇವಲ ಗ್ರಾಹಕರ ಅಪ್ಲಿಕೇಶನ್ ಹಾಗೂ ಕ್ಲಿಷ್ಟ ತಂತ್ರಜ್ಞಾನಗಳ ಅಭಿವೃದ್ಧಿಗೆ ವಿನಯೋಗಿಸುವ ತೀರ್ಮಾನಕ್ಕೆ ಬಂದಿದೆ. ಸೆಪ್ಟೆಂಬರ್ ಉಪಾಂತ್ಯದ ವೇಳೆಗೆ ಸಂಸ್ಥೆ ಖಾಸಗಿ ಬೇಟಾ ವರ್ಷನ್ ಅಪ್ಲಿಕೇಶನ್ ಲಾಂಚ್ ಮಾಡುವ ಯೋಜನೆ ಹೊಂದಿದೆ.

ಇದೇ ವೇಳೆ ಕಂಪೆನಿ ಈ ವರ್ಷಾಂತ್ಯದೊಳಗೆ ಎ ಸರಣಿಯ ಕಾರ್ಯಯೋಜನೆಯನ್ನು ಬಿಡುಗಡೆಗೊಳಿಸುವ ಗುರಿ ಹೊಂದಿದೆ. ಹೆಚ್ಚುವರಿ ಯೋಜನೆಗಾಗಿ ಸಂಸ್ಥೆ ಮತ್ತಷ್ಟು ಬಾಹ್ಯ ಬಂಡವಾಳ ಹೂಡಿಕೆಯ ಗುರಿ ಇಟ್ಟುಕೊಂಡಿದೆ. ಇದರ ಜೊತೆ ತನ್ನ ತಾಂತ್ರಿ ವರ್ಗವನ್ನು ಅಭಿವೃದ್ಧಿಪಡಿಸಿ ಬೆಳೆಸುವತ್ತಲೂ ಸಂಸ್ಥೆ ಆಲೋಚಿಸುತ್ತಿದೆ. ಮುಂದಿನ 6 ತಿಂಗಳಲ್ಲಿ 10 ಹೊಸ ತಾಂತ್ರಿಕ ಸದಸ್ಯರ ನೇಮಕಕ್ಕೆ ಯೋಜಿಸಿದೆ. ಸದ್ಯ ಸಂಸ್ಥೆಯಲ್ಲಿ ಒಟ್ಟು 15 ಸದಸ್ಯರ ಬಲವಿದೆ (ಚೆನ್ನೈನಲ್ಲಿ 12 ಹಾಗೂ ಅಮೇರಿಕಾದಲ್ಲಿ 3) ಇದರಲ್ಲಿ 7 ಜನ ತಾಂತ್ರಿಕ ಸದಸ್ಯರೂ ಇದ್ದಾರೆ.

ಆಶಯ:

ಭವಿಷ್ಯದಲ್ಲಿ ಸ್ಕೈ-ಫೈ ಕಾರ್ಯಕ್ರಮದಂತೆ ದಾಖಲಾತಿಗಳನ್ನು ಇಂಪೋರ್ಟ್ ಮಾಡಿಕೊಳ್ಳುವ ಮೂಲಕ ಆದಾಯ ಹೆಚ್ಚಿಸಿಕೊಳ್ಳುವತ್ತ ಸಂಸ್ಥೆ ಗಮನಹರಿಸಿದೆ. ವ್ಯಕ್ತಿಯೊಬ್ಬನನ್ನು ನೋಡಿದ ಕೂಡಲೇ ಆತನ ಸಂಪೂರ್ಣ ವಿವರಣೆಗಳು ಸಿಗುವ ಗ್ಯಾಡ್ಜೆಟ್ ಅಭಿವೃದ್ಧಿಗೆ ಸಂಸ್ಥೆ ತಯಾರಿ ನಡೆಸಿದೆ.

ಉದ್ಯಮ:

ಕ್ಲಾರಿಫೈ ಸಂಸ್ಥೆ, ನಿರ್ವಾಣ ಸಿಸ್ಟಂ, ಎಂಟಿಲಿಕ್ ಫಂಕ್ಷನಿಂಗ್ ಕ್ರಮವಾಗಿ 10 ಮಿಲಿಯನ್ ಡಾಲರ್, 20.5 ಮಿಲಿಯನ್ ಡಾಲರ್ ಹಾಗೂ 2 ಮಿಲಿಯನ್ ಡಾಲರ್ ಬಂಡವಾಳ ಹೂಡಿ ಸಂಸ್ಥೆ ಪ್ರಾರಂಭಿಸಿವೆ. ಏಕೆಂದರೆ ಈ ಕ್ಷೇತ್ರದಲ್ಲಿ ಅವಕಾಶಗಳ ಹರಿವು ಅಷ್ಟು ವಿಸ್ತಾರವಾಗಿದೆ.

ಕಳೆದ ವರ್ಷ ಡೀಪ್ ಲರ್ನಿಂಗ್ ಕ್ಷೇತ್ರದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಸಮಸ್ಥೆಗಳ ಮೈತ್ರಿ ಹಾಗೂ ವಿಲೀನ ಪ್ರಕ್ರಿಯೆ ಕಂಡುಬಂದಿತ್ತು. 2014ರ ಜೂನ್​​ನಲ್ಲಿ ವಿಶುವಲ್ ಇಂಟೆಲಿಜೆನ್ಸಿ ತಂತ್ರಜ್ಞಾನ ಟ್ವಿಟರ್ ಸರಾಗ ಕಾಯಾಚರಣೆಯಲ್ಲೂ ಕಂಡುಬಂದಿತ್ತು.

2013ರಲ್ಲಿ ಯಾಹೂ, ಮೆಷಿನ್ ಲರ್ನಿಂಗ್ ಸೇವೆ ಒದಗಿಸುತ್ತಿದ್ದ ಲುಕ್​ಫೋ ಸಂಸ್ಥೆಯನ್ನೂ ವಶಪಡಿಸಿಕೊಂಡಿತ್ತು. ಈ ಮೂಲಕ ಐಕ್ಯೂ ಎಂಜಿನ್​​ಗಳು ಹಾಗೂ ಇಮೇಜ್ ಗುರುತು ಹಚ್ಚುವ ವಿಧಾನವನ್ನು ಅಭಿವೃದ್ಧಿಪಡಿಸಿಕೊಂಡಿತ್ತು.

ಗೂಗಲ್ ಸಂಸ್ಥೆಯೂ ಕಳೆದ ವರ್ಷ ತನ್ನ ಗೂಗಲ್ ಬ್ರೈನ್ ಡೀಪ್ ಲರ್ನಿಂಗ್ ಯೋಜನೆಗಾಗಿ 5 ಸಂಸ್ಥೆಗಳನ್ನು ವಿಲೀನಪಡಿಸಿಕೊಂಡಿತ್ತು. ಅತ್ಯುತ್ತಮ ಇಮೇಜ್ ಗುರುತು ಹಚ್ಚುವಿಕೆ ಹಾಗೂ ನ್ಯೂರಲ್ ನೆಟ್ವರ್ಕ್ ಕೆಲಸಗಳಿಗಾಗಿ ಈ ರೀತಿಯ ವಿಲೀನ ಪ್ರಕ್ರಿಯೆಗಳು ನಡೆದಿವೆ.

ಡೀಪ್ ಲರ್ನಿಂಗ್ ತಂತ್ರಜ್ಞಾನದ ಅಭಿವೃದ್ಧಿ ಹೊಂದುತ್ತಿರುವ ಸಂದರ್ಭದಲ್ಲಿ ಇಂತಹ ಮೈತ್ರಿ, ವಿಲೀನ ಹಾಗೂ ಸಹಭಾಗಿತ್ವ ಅತ್ಯಗತ್ಯ ಅಂಶಗಳಾಗಿವೆ. ಕ್ಷಿಪ್ರ ಅಭಿವೃದ್ಧಿ ಕಡೆಗೆ ಗುರಿ ಇಟ್ಟುಕೊಂಡಿರುವ ಹೈಪರ್​​ವರ್ಜ್ ಮುಂದಿನ ದಿನಗಳಲ್ಲಿ ಯಾವುದಾದರೂ ಲೀಡಿಂಗ್ ಸಂಸ್ಥೆಗಳೊಂದಿಗೆ ಕೈ ಜೋಡಿಸಿಕೊಂಡರೂ ಆಶ್ಚರ್ಯವಿಲ್ಲ.

Related Stories