ಸ್ಮಾರ್ಟ್​ಶಿಫ್ಟ್​​ನಲ್ಲಿದೆ ಭವಿಷ್ಯದ ಕನಸು- ಉದ್ಯಮಿ ಮತ್ತು ಟ್ರಕ್ ಮಾಲೀಕರ ನಡುವಿನ ಸಂಬಂಧಕ್ಕೆ ಹೊಚ ಟಚ್..!

ಟೀಮ್​ ವೈ.ಎಸ್​. ಕನ್ನಡ

ಸ್ಮಾರ್ಟ್​ಶಿಫ್ಟ್​​ನಲ್ಲಿದೆ ಭವಿಷ್ಯದ ಕನಸು- ಉದ್ಯಮಿ ಮತ್ತು ಟ್ರಕ್ ಮಾಲೀಕರ ನಡುವಿನ ಸಂಬಂಧಕ್ಕೆ ಹೊಚ ಟಚ್..!

Sunday May 28, 2017,

3 min Read

ಉದ್ಯಮದಲ್ಲಿ ಜಯಿಸುವುದು ಸುಲಭದ ಮಾತಲ್ಲ. ಅಲ್ಲಿ ಬುದ್ಧಿವಂತಿಕೆ ಮತ್ತು ಎದುರಾಗುವ ಸಮಸ್ಯೆಗಳನ್ನು ನಿಭಾಯಿಸುವ ಶಕ್ತಿ ಇರಬೇಕು. ಬೆಂಗಳೂರು ನಿವಾಸಿ ಕೆ.ಸಿ. ದೇವಯ್ಯ ತನ್ನ ಪರಿಶ್ರಮ ಮತ್ತು ಬುದ್ಧಿವಂತಿಕೆಯಿಂದ ಟೈಲ್ಸ್ ಉದ್ಯಮದಲ್ಲಿ ಯಶಸ್ಸು ಕಂಡಿದ್ದರು. 5 ವರ್ಷಗಳ ಹಿಂದೆ ದೇವಯ್ಯ ಬನ್ನೇರುಘಟ್ಟ ರಸ್ತೆಯಲ್ಲಿ ಟೈಲ್ಸ್ ಅಂಗಡಿಯೊಂದನ್ನು ಆರಂಭಿಸಿದ್ದರು. ಟೈಲ್ಸ್ ಉದ್ಯಮ ನಡೆಸಲು ಬಿಲ್ಡರ್​​ಗಳ ಮತ್ತು ರಿಯಲ್ ಎಸ್ಟೇಟ್ ಕಾಂಟ್ರಾಕ್ಟರ್​​ಗಳ ಸಂಬಂಧ ಬೇಕೇ ಬೇಕು ಎಂಬುದನ್ನು ಅರಿತುಕೊಂಡರು. ದಕ್ಷಿಣ ಬೆಂಗಳೂರಿನ ಬಹುತೇಕ ರಿಯಲ್ ಎಸ್ಟೇಟ್ ಮತ್ತು ಬಿಲ್ಡರ್​​ಗಳ ಜೊತೆ ಉತ್ತಮ ಸಂಬಂಧ ಬೆಳೆಸಿಕೊಂಡರು. ಪರಿಣಾಮವಾಗಿ ಇವತ್ತು ದೇವಯ್ಯರ ವಾರ್ಷಿಕ ಟರ್ನ್ ಓವರ್ 6 ಕೋಟಿ ರೂಪಾಯಿಗಳನ್ನು ದಾಟಿದೆ. ಹೌಸಿಂಗ್ ಪ್ರಾಜೆಕ್ಟ್​​ಗಳಿಗೆ ಟೈಲ್ಸ್ ಮತ್ತಿತರ ಸಾಮಾಗ್ರಿಗಳನ್ನು ಒದಗಿಸುತ್ತಿದ್ದಾರೆ.

image


ಟೈಲ್ಸ್ ವ್ಯವಹಾರದಲ್ಲಿ ಟ್ರಾನ್ಸ್​​ಪೋರ್ಟ್ ದೇವಯ್ಯ ಪಾಲಿಗೆ ದೊಡ್ಡ ಸವಾಲಾಗಿತ್ತು. ಅಷ್ಟೆ ಅಲ್ಲ ಅದರಲ್ಲಿ ಹೆಚ್ಚು ಖರ್ಚು ಬರುವುದು ಗೊತ್ತಾಗಿತ್ತು. ಪ್ರತಿಯೊಂದ ಆರ್ಡರ್ ಅನ್ನು ಡೆಲಿವರಿ ಮಾಡುವಾಗಲೂ ಟ್ರಾನ್ಸ್ ಪೋರ್ಟ್ ಮಾಲೀಕರಿಗೆ ಅಥವಾ ಡ್ರೈವರ್​ಗಳಿಗೆ ಫೋನ್ ಮಾಡುವ ಸ್ಥಿತಿ ಇತ್ತು. ಅಷ್ಟೇ ಅಲ್ಲ ಸರಿಸುಮಾರು 10 ಕಿಲೋಮೀಟರ್​​ಗಳ ಡೆಲಿವರಿಗೆ ಸುಮಾರು 1200 ರೂಪಾಯಿಗಳನ್ನು ಚಾರ್ಜ್ ಮಾಡುತ್ತಿದ್ದರು. ಅಷ್ಟೇ ಅಲ್ಲ ಡ್ರೈವರ್ ಬಂದಾಗ ಡೆಲಿವರಿ ಅನ್ನುವ ಸ್ಥಿತಿ ಇತ್ತು.

ಆದ್ರೆ ಈಗ ಪರಿಸ್ಥಿತಿ ಬದಲಾಗಿದೆ. ಸ್ಮಾರ್ಟ್ ಶಿಫ್ಟ್​​ ಅನ್ನುವ ಆ್ಯಪ್ ವೊಂದು ದೇವಯ್ಯರಂತಹವರ ನೆರವಿಗೆ ಬಂದಿದೆ. ಸ್ಮಾರ್ಟ್ ಶಿಫ್ಟ್​​ ಆ್ಯಪ್ ಹಲವು ಟ್ರಕ್​​ಗಳನ್ನು ಒಂದುಗೂಡಿಸಿದೆ. ಅಷ್ಟೇ ಅಲ್ಲ ಗ್ರಾಹಕರನ್ನು ಪಡೆಯಲು ದರಗಳ ಮೇಲೆ ಕಾಂಪಿಟೇಷನ್​ಗೆ ಇಳಿದಿವೆ.

“ನಾನು ನನ್ನ ವ್ಯವಹಾರದಲ್ಲಿ ಖರ್ಚಿನ ಲೆಕ್ಕವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದೇನೆ. ಟ್ರಾನ್ಸ್​​ಪೋರ್ಟ್ ಖರ್ಚಿನಲ್ಲಿ ಶೇಕಡಾ 40ರಷ್ಟು ಕಡಿಮೆ ಆಗಿದೆ. ಅಷ್ಟೇ ಅಲ್ಲ ಆನ್ ಟೈಮ್ ನಲ್ಲಿ ಟೈಲ್ಸ್ ಡೆಲಿವರಿ ಸಾಧ್ಯವಾಗುತ್ತಿದೆ. ಅಷ್ಟೇ ಅಲ್ಲ ನನಗೆ ಹಲವು ಆಯ್ಕೆಗಳು ಕೂಡ ಸಿಗುತ್ತಿವೆ. ”
- ದೇವಯ್ಯ, ಸನ್ನಿಧಿ ಎಂಟರ್​ಪ್ರೈಸಸ್ ಮಾಲೀಕ

ಸಾಗಾಣಿಕೆ ಮತ್ತು ಉದ್ಯಮದ ನಡುವೆ ರಿಯಲ್ ಟೈಮ್ ಅನ್ನು ತಂದಿರುವುದು ಸ್ಮಾರ್ಟ್ ಶಿಫ್ಟ್​​ ಅನ್ನುವ ಆ್ಯಪ್. ಮಹೀಂದ್ರಾ ಅಂಡ್ ಮಹೀಂದ್ರಾ ಗ್ರೂಪ್ ತಂದಿರುವ ಲಾಜಿಸ್ಟಿಕ್ ಟೆಕ್ನಾಲಜಿ ಇದಾಗಿದೆ.

ಉದ್ಯಮದ ಅವಕಾಶ

2014ರಲ್ಲಿ ಮಹೀಂದ್ರಾ ಅಂಡ್ ಮಹೀಂದ್ರಾ ಗ್ರೂಪ್ ನಲ್ಲಿ ಸೀನಿಯರ್ ಮ್ಯಾನೇಜ್ ಮೆಂಟ್ ಎಕ್ಸಿಕ್ಯುಟಿವ್ ಬೋರ್ಡ್ ನಲ್ಲಿದ್ದ ಕೌಸಲ್ಯ ನಂದಕುಮಾರ್, ಚಿಕ್ಕ ಮತ್ತು ಮಧ್ಯಮ ಉದ್ಯಮಗಳ ಟ್ರಾನ್ಸ್ ಪೋರ್ಟ್ ಗಳನ್ನು ಒಂದುಗೂಡಿಸುವ ಪ್ರಯತ್ನ ಮಾಡಿದ್ದರು. ಆಗ ಚಾಲ್ತಿಯಲ್ಲಿದ್ದ ರಿವಿಗೋ(Rivigo) ಮತ್ತು ಬ್ಲಾಕ್ ಬಕ್ (Blackbuck) ಗಿಂತ ಈ ಮಾಡೆಲ್ ಭಿನ್ನವಾಗಿರಬೇಕಿತ್ತು. ಆದ್ರೆ ಕೌಸಲ್ಯ ಬೋರ್ಡ್​ಗೆ ಚಿಕ್ಕ ಉದ್ಯಮದಾರರು ಸಾಗಾಣಿಕೆಗಾಗಿ ಬಳಸುವ ಟ್ರಾನ್ಸ್ ಪೋರ್ಟ್ ಖರ್ಚು 10ಕೋಟಿಗೂ ಮೀರಿದ್ದು ಅನ್ನುವುದನ್ನು ಮನವರಿಕೆ ಮಾಡಿದ್ದರು.

ಇವತ್ತು ಕೌಸಲ್ಯ ಆರಂಭಿಸಿದ್ದ ಸ್ಮಾರ್ಟ್ ಶಿಫ್ಟ್ ಸುಮಾರು 3500 ಕ್ಕೂ ಅಧಿಕ ಟ್ರಾನ್ಸ್ ಪೋರ್ಟ್ ಪಾಲುದಾರರನ್ನು ಹೊಂದಿದೆ. ಹೈದ್ರಾಬಾದ್, ಮುಂಬೈ ಮತ್ತು ಬೆಂಗಳೂರುಗಳಲ್ಲಿ 12000 ಕ್ಕೂ ಅಧಿಕ ಆರ್ಡರ್​​ಗಳನ್ನು ಪಡೆಯುತ್ತಿದೆ. ಈ ಪೈಕಿ ಮುಂಬೈ ಒಂದರಲ್ಲೇ ಹೆಚ್ಚು ಬ್ಯುಸಿನೆಸ್ ನಡೆಯುತ್ತಿದೆ. ಪ್ರತಿದಿನ ಸರಿಸುಮಾರು 1,200 ವಹಿವಾಟುಗಳು ನಡೆಯುತ್ತಿದೆ. ಮುಂದಿನ 3 ವರ್ಷಗಳಲ್ಲಿ 10 ಲಕ್ಷ ಸ್ಟೇಕ್ ಹೋಲ್ಡರ್ ಗಳನ್ನು ಹೊಂದುವ ಗುರಿ ಹೊಂದಲಾಗಿದೆ.

“ ಫೀಚರ್ ಫೋನ್ ಬಳಕೆದಾರರಿಗೆ ನಾವು ಎಲ್ಲಾ ರೀತಿಯಲ್ಲಿ ಸಹಾಯಕವಾಗಿದ್ದೇವೆ. ಟ್ರಕ್ ಮತ್ತು ಸಗಟು ವ್ಯಾಪಾರಿಗಳ ಮಧ್ಯೆ ಚಿಕ್ಕ ಅಂತರವೂ ಇಲ್ಲ. ಸಗಟು ವ್ಯಾಪಾರಿಗಳ ಬೇಡಿಕೆಗೆ ತಕ್ಕಂತೆ ಟ್ರಕ್ ಮಾಲೀಕರು ಅಥವಾ ಡ್ರೈವರ್​​ಗಳು ಆಫರ್​​ಗಳನ್ನು ನೀಡಬಹುದು. ”
- ಕೌಸಲ್ಯ ನಂದಕುಮಾರ್​, ಸ್ಮಾರ್ಟ್ ಶಿಫ್ಟ್ ಸಂಸ್ಥಾಪಕಿ

ಕೌಸಲ್ಯ ಹೂಡಿಕೆ ಮತ್ತು ಫೈನಾನ್ಸಿಯಲ್ ಡಿಟೈಲ್ ಗಳನ್ನು ಸದ್ಯಕ್ಕೆ ಬಿಟ್ಟುಕೊಡುತ್ತಿಲ್ಲ. 2017-18ರ ಅಂತ್ಯದಲ್ಲಿ ಕೌಸಲ್ಯ ಅಹ್ಮದಾಬಾದ್ ಮತ್ತು ಇತರೆ ಮೂರು ನಗರಗಳಲ್ಲಿ ಸ್ಮಾರ್ಟ್ ಶಿಫ್ಟ್ ಅನ್ನು ಲಾಂಚ್ ಮಾಡುವ ಪ್ಲಾನಿಂಗ್ ಹೊಂದಿದ್ದಾರೆ. ಆದ್ರೆ ಇವತ್ತು ನಾಳೆಯಲ್ಲಿ ಈ ಉದ್ಯಮದಲ್ಲಿ ಯಶಸ್ಸು ಸಾಧಿಸುವುದು ಕಷ್ಟವಾಗಬಹುದು. ಆದರೆ ತಾಂತ್ರಿಕತೆ ಬದಲಾದಂತೆ ಮತ್ತು ತಂತ್ರಜ್ಞಾನಕ್ಕೆ ಜನರು ಒಗ್ಗಿಕೊಂಡಂತೆ ಉದ್ಯಮ ಕೂಡ ಲಾಭದತ್ತ ಮುಖ ಮಾಡಲಿದೆ.

ಇತರೆ ಸವಾಲುಗಳು ಮತ್ತು ಲಾಭಗಳು

ಬಾಬಜಾನ್ ಟಾಟಾ ಏಸ್ ಗಾಡಿಯೊಂದರ ಮಾಲೀಕರು. ಪ್ರತಿದಿನ ಒಂದೆರಡು ಚಿಕ್ಕ ಟ್ರಿಪ್​​ಗಳನ್ನು ಪಡೆಯುತ್ತಿದ್ದರು. ಸರಿ ಸುಮಾರು 1000 ರೂಪಾಯಿ ಸಂಪಾದನೆ ಬರುತ್ತಿತ್ತು. ಇದ್ರಲ್ಲಿ ಸಾಲಾ ಮತ್ತು ಮೈಂಟೇನೆನ್ಸ್ ಖರ್ಚು ಹೋಗಿ ಕೇವಲ 300 ರೂಪಾಯಿ ಮಾತ್ರ ಉಳಿಯುತ್ತಿತ್ತು. ಸ್ಮಾರ್ಟ್ ಶಿಫ್ಟ್​ ಮೂಲಕ ಬಾಬಜಾನ್ ತನ್ನ ಟ್ರಿಪ್​​ಗಳನ್ನು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ಖರ್ಚಿನಲ್ಲಿ ಕಡಿಮೆ ಆಗುತ್ತಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಿಗಳ ಡ್ರಾಪ್ ಪಾಯಿಂಟ್ ಗಳನ್ನು ತಿಳಿದುಕೊಂಡು ಆರ್ಡರ್ ಗಳನ್ನು ಪಡೆಯುತ್ತಾರೆ. ಈ ಮೂಲಕ ಸಮಯ ಉಳಿತಾಯವಾಗುತ್ತದೆ ಮತ್ತು ಹೆಚ್ಚು ಟ್ರಿಪ್ ಗಳನ್ನು ಮಾಡಲು ಸಾಧ್ಯವಾಗುತ್ತಿದೆ. ಅಷ್ಟೇ ಅಲ್ಲ ದಿನವೊಂದಕ್ಕೆ 500 ರೂಪಾಯಿ ಹೆಚ್ಚು ದುಡಿಯುತ್ತಿದ್ದಾರೆ. ಒಟ್ಟಿನಲ್ಲಿ ಸ್ಮಾರ್ಟ್ ಶಿಫ್ಟ್ ಮೂಲಕ ಎಲ್ಲರು ಲಾಭ ಪಡೆಯುತ್ತಿದ್ದಾರೆ. ಉದ್ಯಮ ನಿರಾಳವಾಗಿ ನಡೆಯುತ್ತಿದೆ. 

ಇದನ್ನು ಓದಿ:

1. ಅಜ್ಜಿ ಕಥೆಗೆ ಸರಕಾರಿ ಆರ್ಡರ್..!

2. ಫೇಸ್​ಬುಕ್​, ಇನ್ಸ್ಟಾಗ್ರಾಂನಲ್ಲಿ ಯುವ ಮನಸ್ಸುಗಳ ಖದರ್​- ಡಬ್​ಸ್ಮಾಶ್​ನಲ್ಲಿ ಇವರು ಸೂಪರ್​..! 

3. ಪಾರಿವಾಳಗಳ ಪಾಲಿಗೆ ಅನ್ನದಾತ- ಪಕ್ಷಿ ಸಂಕುಲವನ್ನು ಕಾಪಾಡುವ ಸಂರಕ್ಷಕ