ಶಾಲೆ ತೊರೆದ ಉದ್ಯಮಿಯ ಸಾಧನೆಗೆ ರಾಷ್ಟ್ರಪತಿ ಭವನದಲ್ಲಿ ಮನ್ನಣೆ

ಟೀಮ್​ ವೈ.ಎಸ್​​.

1

ಕ್ರೀಟರ್​​​ಬೋಟ್​​​ ಸಂಸ್ಥೆ ಶಿವರಾಂ ಹಾಗೂ ಕೃಷ್ಣಾರ ಕನಸಿನ ಕಣ್ಮಣಿ. ಸಾಕಷ್ಟು ಪರಿಶ್ರಮಪಟ್ಟು ನಿರ್ಮಿಸಿದ 3ಡಿ ಪ್ರಿಂಟಿಂಗ್ ಮಾದರಿಯ ಉದ್ಯಮ ಈಗ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿದೆ. ಇಲ್ಲಿದೆ ಶಿವರಾಂ ಹಾಗೂ ಕೃಷ್ಣಾರ ಉದ್ಯಮ ಬೆಳೆದು ನಿಂತ ಹಾದಿಯ ಸವಿವರ ಕಥಾನಕ.

23 ವರ್ಷದ ಶಿವರಾಮ್​​ಗೆ ಎಲೆಕ್ಟ್ರಾನಿಕ್ ಪರಿಕರಗಳ ಮೇಲೆ ಇನ್ನಿಲ್ಲದ ಪ್ರೀತಿ. ಅವರ ಆಸಕ್ತಿಕರ ವಿಷಯ ಎಲೆಕ್ಟ್ರಾನಿಕ್ಸ್. ಅವರು ಬೆಂಗಳೂರಿನ ಎಸ್ಪಿ ರಸ್ತೆಯಲ್ಲಿ ಸುಮ್ಮನೆ ಸುತ್ತುತ್ತಿದ್ದ ದಿನಗಳಲ್ಲೇ ಅವರಿಗೆ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಮೋಹ ಬೆಳೆಯಿತು.

ಅವರಿಗೆ ಯಾವಾಗಲೂ ಅಸಂಪ್ರದಾಯಿಕ ಕಲಿಕೆಯಲ್ಲಿ ಆಸಕ್ತಿಯಿತ್ತು. ಪುಸ್ತಕಗಳ ಕಲಿಕೆಗಿಂತ ಹೊರಗಿನ ಕಲಿಕೆಯಲ್ಲೇ ಅವರಿಗೆ ಸದಾ ಆಸಕ್ತಿ. ಕಲಿಕೆಯ ಹೊಸ ಹೊಸ ಪ್ರಯೋಗಗಳಿಗೆ ದಾರಿಯಾಗಬೇಕು. ಈ ಮೂಲಕ ಹೊಸ ಆಯಾಮಗಳು ಸೃಷ್ಟಿಯಾಗಬೇಕು ಅನ್ನುವುದು ಶಿವರಾಮ್​​ ಅಭಿಪ್ರಾಯ.

ಉದ್ಯಮಶೀಲತೆಯ ಕಾರ್ಯಾಗಾರವೊಂದರಿಂದ ಪ್ರೇರಿತರಾದ ಶಿವರಾಮ್ ತಮ್ಮ ಶಾಲಾ ಕಲಿಕೆಯ ನಂತರ ಉಳಿದ ವಿದ್ಯಾರ್ಥಿಗಳಂತೆ ಕಾಲೇಜು ಮೆಟ್ಟಿಲೇರಲಿಲ್ಲ. ಅದರ ಬದಲಿಗೆ ಅವರು ಎಲೆಕ್ಟ್ರಾನಿಕ್ ಟೆಸ್ಟಿಂಗ್ ಮಾಧ್ಯಮವೊಂದರ ಪ್ರಯೋಗಕ್ಕೆ ಮುಂದಾದರು. ಆದರೆ ಅವರು ಕಂಡುಹಿಡಿದ ಉತ್ಪನ್ನಕ್ಕೆ ಸರಿಯಾದ ಮಾರ್ಕೆಟಿಂಗ್ ಹಾಗೂ ಪ್ರಚಾರವಿಲ್ಲದೇ ವಿಫಲವಾಯಿತು.

ಕಳೆದ ವರ್ಷ ಜೂನ್​​ನಲ್ಲಿ ಶಿವರಾಮ್ ಬೆಂಗಳೂರಿನಲ್ಲಿ ನಡೆದ 3ಡಿ ಪ್ರಿಂಟಿಂಗ್ ಸಂಬಂಧಿ ಕಾರ್ಯಾಗಾರದಲ್ಲಿ ಕೃಷ್ಣ ಅವರನ್ನು ಭೇಟಿ ಮಾಡಿದರು. ಅದೇ ವೇಳೆ ಕೃಷ್ಣ ಅವರೂ ತಮ್ಮ ಮೊದಲ ವೈಫಲ್ಯದ ಬಳಿಕ ಚೇತರಿಕೆಯ ಹಂತದಲ್ಲಿದ್ದರು. ಈ ಭೇಟಿಯಲ್ಲಿ ಒಬ್ಬರನ್ನೊಬ್ಬರು ಪರಿಚಯಿಸಿಕೊಂಡು ತಮ್ಮ ಮೊದಲ ವಿಶೇಷ ಪ್ರಯತ್ನವನ್ನು ವಿವರಿಸಿದರು. ಬಳಿಕ ಇಬ್ಬರಿಂದ ಸಹಭಾಗಿತ್ವದಲ್ಲಿ ಹೊಸತೊಂದು ಯೋಜನೆ ಪ್ರಾರಂಭವಾಯಿತು. ಅದೇ ಕ್ರೀಟರ್​​ಬೋಟ್​​.

ವಿನ್ಯಾಸಕರು ಹಾಗೂ ಸ್ವತಂತ್ರ್ಯ ಉದ್ಯಮಿಗಳಿಗೆ ಕಡಿಮೆ ಬಜೆಟ್​​ನಲ್ಲಿ 3ಡಿ ಪ್ರಿಂಟರ್ ಟೂಲ್ ಉತ್ಪಾದಿಸಿ ಕೊಡುವ ಯೋಜನೆಯೇ ಕ್ರೀಟರ್​ಬೋಟ್. 3ಡಿ ಪ್ರಿಂಟರ್ ಹಾಗೂ ಸಣ್ಣ ಕಂಪ್ಯೂಟರ್ ಆಧಾರಿತ ಎಲೆಕ್ಟ್ರಾನಿಕ್​​​ ಪರಿಕರ ಸಿಎನ್​ಸಿ ಯಂತಹ ಅತ್ಯುತ್ತಮ ಗುಣಮಟ್ಟದ ಡಿಜಿಟಲ್ ಉತ್ಪಾದಕರಿಗೆ ಈ ಟೂಲ್ ಒದಗಿಸಿಕೊಡುವ ಮೂಲಕ ಹಾರ್ಡ್​ವೇರ್ ಸಂಗ್ರಹಕರಿಗೂ ಇದು ಅತ್ಯಗತ್ಯವೆನಿಸಿತು. ಇದರಿಂದ ಇದಕ್ಕೆ ತಕ್ಕ ಮಟ್ಟಿನ ಪ್ರೋತ್ಸಾಹದ ಹೂಡಿಕೆಯೂ ಕಂಡುಬಂದಿತು.

ಅವರ ಯಶೋಗಾಥೆ ಇಷ್ಟಕ್ಕೆ ಮುಗಿಯಲಿಲ್ಲ. ಇತ್ತೀಚೆಗಷ್ಟೆ ಅಹಮದಾಬಾದ್​​ನಲ್ಲಿ ನಡೆದ ಮಾರುಕಟ್ಟೆ ಉತ್ಸವದಲ್ಲಿ ಅವರ ಈ ಉತ್ಪನ್ನವನ್ನು ಇಂಟೆಲ್ ಬಹುವಾಗಿ ಮೆಚ್ಚಿಕೊಂಡಿತ್ತು. ಜೊತೆಗೆ ಹೊಸ ವರ್ಷನ್ 3ಡಿ ಪ್ರಿಂಟರ್ ತಯಾರಿಸಿಕೊಡುವ ಬೇಡಿಕೆಯನ್ನು ಮುಂದಿಟ್ಟಿತ್ತು. ಇಷ್ಟೇ ಅಲ್ಲ ಅವರ ಸಂಶೋಧನೆಯ ಪ್ರಿಂಟರ್ ಅನ್ನು ರಾಷ್ಟ್ರಪತಿ ಭವನದ ನವಚರ ಕಕ್ಷ್​​ನ ಮ್ಯೂಸಿಯಂನಲ್ಲಿ ವೈಜ್ಞಾನಿಕ ಪ್ರದರ್ಶನದಲ್ಲಿ ಇಡಲಾಗಿತ್ತು. ಈ ಪ್ರದರ್ಶನ ಮೇಳವನ್ನು ಉದ್ಘಾಟಿಸಿದ್ದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ. ಇದು ನಿಜಕ್ಕೂ ಕ್ರೀಟರ್​​ಬೋಟ್​​ ಪಾಲಿನ ಹೆಮ್ಮೆಯ ದಿನವಾಗಿತ್ತು. ಅಶೋಕ ಚಕ್ರ, ಭಾರತದ ರಾಷ್ಟ್ರಧ್ವಜ ಮುಂತಾದ ಮಾದರಿಗಳನ್ನು ತಯಾರಿಸಲು ಮಕ್ಕಳು ಈ 3ಡಿ ಪ್ರಿಂಟರ್​​ಗಳನ್ನು ಬಳಸುತ್ತಿದ್ದಾರೆ.

ಸವಾಲು ಹಾಗೂ ಪ್ರಯತ್ನ

ಜನವರಿ-2015ರಲ್ಲಿ ತಮ್ಮ ಹೊಸ ಹೆಜ್ಜೆಯನ್ನಿಟ್ಟಿದ್ದ ಅವರಿಗೆ ಎದುರಾದ ಸವಾಲುಗಳು ಅಷ್ಟೇನು ಸರಳವಾದುದ್ದಾಗಿರಲಿಲ್ಲ. ಸಹ ಸಂಸ್ಥಾಪಕ ಕೃಷ್ಣ ಹೇಳುವ ಪ್ರಕಾರ, ಸರಿಯಾದ ಉತ್ಪನ್ನವನ್ನು ಸರಿಯಾದ ಯೋಜನೆಯಂತೆ ಹಾಗೂ ಸರಿಯಾದ ಸಮಯದಲ್ಲಿ, ಅತ್ಯುತ್ತಮ ಪ್ರತಿಭಾವಂತ ತಂಡದೊಂದಿಗೆ ಕಲೆತು ನಿರ್ಮಿಸುವುದು ಅವರಿಬ್ಬರು ಎದುರಿಸಿದ ಅತಿ ದೊಡ್ಡ ಸವಾಲು.

ತಮ್ಮ ಯಶಸ್ಸನ್ನು ವಿವರಿಸುವಾಗ, ಅವರು ನಿರ್ಮಿಸಿದ ಮೊದಲ ಪ್ರಿಂಟರ್ ವೈಫಲ್ಯ ಹೊಂದಿದ್ದನ್ನು ಹೇಳಿದರು. ಅದಾದ ಬಳಿಕ 5 ಬಾರಿ ಸತತವಾಗಿ ಅವರು ಈ ಪ್ರಿಂಟರ್ ನಿರ್ಮಾಣದಲ್ಲಿ ಎಡವಿದ್ದನ್ನು ಹೇಳಿದರು. ಆ ಬಳಿಕ ಅತ್ಯಂತ ಆಸ್ಥೆಯಿಂದ ಯಶಸ್ಸನ್ನು ಕರಗತ ಮಾಡಿಕೊಂಡ ಹೋರಾಟದ ಬಗ್ಗೆ ವಿಶ್ವಾಸದಿಂದ ವಿವರಿಸಿದರು. ಅವರ ಆಲೋಚನೆಯಲ್ಲಿ ಸಾಕಷ್ಟು ವಿಶೇಷತೆಗಳಿತ್ತು ಹಾಗೂ ನಿರ್ಮಿಸಬಹುದಾದ ಮೂಲ ಆಸಕ್ತಿ ಅವರಲ್ಲಿತ್ತು. ಎಲ್ಲದಕ್ಕಿಂತ ಮುಖ್ಯವಾಗಿ ಏನಾದರೂ ಸಾಧಿಸಲಬೇಕೆಂಬ ತುಡಿತ ಅವರಲ್ಲಿತ್ತು.

ಪ್ರತಿಭಾವಂತರು ಯಾವುದೇ ಉದ್ಯಮವನ್ನು ಆರಂಭಿಸಬೇಕಿದ್ದರೇ ಅವರಿಗೆ ಅತ್ಯಗತ್ಯವಾಗಿ ಅಗತ್ಯವಿರುವುದು ಒಂದು ಪ್ರಬಲ ವಿಶ್ವಾಸಾರ್ಹ ಆಲೋಚನೆ. ಇದರಿಂದ ಆಲೋಚನೆಗಳು ಉತ್ಪನ್ನಗಳಾಗಿ ಬದಲಾಗುತ್ತವೆ. ಇಂದು ಒಂದು ಕಂಪ್ಯೂಟರ್ ಹಾಗೂ ಕ್ರೆಡಿಟ್ ಕಾರ್ಡ್ ಇದ್ದರೇ ಯಾರು ಬೇಕಾದರೂ ಸಾಫ್ಟ್​ವೇರ್ ಸಂಸ್ಥೆಯೊಂದನ್ನು ಹುಟ್ಟುಹಾಕಬಹುದು. ಆದರೆ ನಮಗೆ ಕ್ರೀಟರ್​​ಬೋಟ್ ಸಂಸ್ಥೆ ಸ್ಥಾಪಿಸಿದ ನಂತರ ಸಮಯ ಹಾಗೂ ಬದ್ಧತೆಯ ಅರಿವಾಯಿತು. ನಮಗೆ ನಮ್ಮದೇ ಆದ ಮಿತಿಯೊಳಗೆ ಕೆಲಸಮಾಡಬೇಕಾದ ಅನಿವಾರ್ಯತೆಯ ಅರಿವಾಯಿತು ಅಂತ ಕೃಷ್ಣ ಹೇಳಿದ್ದಾರೆ.

ತಮ್ಮ ತಂತ್ರಜ್ಞಾನ ಹಾಗೂ ನವೀನ ವಿನ್ಯಾಸ ಐಡಿಯಾಗಳಿಂದಾಗಿ ಕ್ರೀಟರ್​​ಬೋಟ್​​​ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳ ಕಲ್ಪನಾ ಸಾಮರ್ಥ್ಯಕ್ಕೆ ಪೋಷಣೆ ನೀಡುತ್ತಿದೆ. ಅವರ 3ಡಿ ತಂತ್ರಜ್ಞಾನದ ಪ್ರಿಂಟರ್ ಸಾಕಷ್ಟು ಸೃಜನಾತ್ಮಕ ಆಲೋಚನೆಗಳಿಗೆ ವೇದಿಕೆ ಒದಗಿಸಿಕೊಡುತ್ತಿದೆ.

ಕಾರ್ಯಕ್ಷೇತ್ರ ವಿಸ್ತರಣೆ ಹಾಗೂ ಜಾರಿ

ಜನವರಿಯಿಂದ ಇಲ್ಲಿಯವರೆಗೆ ಅವರ ಐದು ಸದಸ್ಯರ ತಂಡ ಒಟ್ಟು 29 ಪ್ರಿಂಟರ್​​ಗಳ ಮಾದರಿಯನ್ನು ಮಾರಾಟ ಮಾಡಿದೆ. ಮುಂದಿನ ದಿನಗಳಲ್ಲಿ ಅವರ ಸಂಸ್ಥೆ ಸಿಎನ್​​ಸಿ ರೂಟರ್ ಉತ್ಪನ್ನವನ್ನು ಲಾಂಚ್ ಮಾಡುವ ತಯಾರಿಯಲ್ಲಿದೆ. ಸಂಸ್ಥೆ ಈ ವರ್ಷಾಂತ್ಯದಲ್ಲಿ ಸುಮಾರು 100 ಪ್ರಿಂಟರ್ ಹಾಗೂ 50 ಸಿಎನ್​​ಸಿ ತಯಾರಿಸಿ ಮಾರುಕಟ್ಟೆಗೆ ಬಿಡುವ ಗುರಿಯಿಟ್ಟುಕೊಂಡಿದೆ.

ತಿಂಗಳಿನಿಂದ ತಿಂಗಳಿಗೆ ಸಂಸ್ಥೆ ಶೇ 10ರಷ್ಟು ಅಭಿವೃದ್ಧಿ ಸಾಧಿಸತೊಡಗಿದೆ. ಸಧ್ಯ ಫ್ಯಾಬ್ಲಾಬ್, ಕೊಚ್ಚಿನ್​​ನ ವಿಜ್ಞಾನ ಹಾಗೂ ತಂತ್ರಜ್ಞಾನ ವಿಶ್ವವಿದ್ಯಾನಿಲಯ, ಐಸಿಐಸಿಐ ನಾಲೆಡ್ಜ್ ಪಾರ್ಕ್ ಹಾಗೂ ರಾಷ್ಟ್ರಪತಿ ಭವನಕ್ಕೆ ತನ್ನ ಸೇವೆ ಒದಗಿಸುತ್ತಿದೆ.

ಭವಿಷ್ಯದ ಯೋಜನೆಗಳು

ಮುಂಬರುವ ದಿನಗಳಲ್ಲಿ ಕ್ರೀಟರ್​​ಬೋಟ್​​, ಔದ್ಯಮಿಕ ಕ್ಷೇತ್ರ ಹಾಗೂ ವೃತ್ತಿಪರ ಮಾರುಕಟ್ಟೆಯಲ್ಲಿ ಇನ್ನೊಂದು ಅತ್ಯಾಧುನಿಕ ಪ್ರಿಂಟರ್ ಮಾದರಿಯನ್ನು ಪರಿಚಯಿಸಲು ಮುಂದಾಗಿದೆ. ತನ್ನ ತಂತ್ರಜ್ಞಾನದ ವಿಸ್ತರಣೆ ಹಾಗೂ ಉತ್ಪನ್ನದ ಸುಧಾರಣೆಗಾಗಿ ಹೆಚ್ಚುವರಿ ಹೂಡಿಕೆ ಮಾಡಲು ಸಂಸ್ಥೆ ಯೋಚಿಸುತ್ತಿದೆ. 2019ರ ಅಂತ್ಯದ ವೇಳೆಗೆ ಭಾರತದ ಮಾರುಕಟ್ಟೆಯಲ್ಲಿ ಸುಮಾರು 46 ಮಿಲಿಯನ್ ಯುಎಸ್ ಡಾಲರ್ ವಹಿವಾಟು ನಡೆಯಲಿರುವ ಸಾಧ್ಯತೆ ಇದೆ. ಹಾಗಾಗಿ ಈ ಅವಕಾಶವನ್ನು ಉಪಯೋಗಿಸಿಕೊಂಡು 3ಡಿ ಪ್ರಿಂಟಿಂಗ್ ಮಾರುಕಟ್ಟೆಯ ಅವಕಾಶಗಳನ್ನು ಬಾಚಿಕೊಳ್ಳಲು ಕ್ರೀಟರ್​​ಬೋಟ್​​ ಆಲೋಚಿಸುತ್ತಿದೆ.

3ಡಿ ಪ್ರಿಂಟಿಂಗ್ ಕ್ಷೇತ್ರ ಜಾಗತಿಕ ಸಂಸ್ಥೆಗಳಾದ ಫ್ಯಾಬ್ಲಾಸ್ಟಾರ್, 3ಡಿ ಸಿಸ್ಟಂಸ್, ಲೀಪ್​​ಫ್ರಾಂಗ್​​​​​​ ಎಂಡ್ ಫ್ರಾಶ್​​ಜಾರ್ಜ್, ಭಾರತೀಯ ಮಾರುಕಟ್ಟೆಯಲ್ಲಿ ಹೆಜ್ಜೆ ಇಡುವ ತಯಾರಿಯಲ್ಲಿವೆ. ಇದರ ಜೊತೆಗೆ ಸ್ವದೇಶಿ ದೊಡ್ಡ ಸಂಸ್ಥೆಗಳಾದ ಆಲ್ಟೆಮ್ ಟೆಕ್ನಾಲಜೀಸ್, ಇಮೇಜಿನರಿಯಮ್, ಬ್ರಹ್ಮಾ 3, ಕೆಸಿಬೋಟ್ಸ್, ಜೆ ಗ್ರೂಪ್ ರೊಬೋಟಿಕ್ಸ್ ಸಂಸ್ಥೆಗಳ ಜೊತೆಯೂ ಕ್ರೀಟರ್​​ಬೋಟ್​​​ ಪೈಪೋಟಿ ನಡೆಸಬೇಕಾದ ಅನಿವಾರ್ಯತೆಯಿದೆ.

Related Stories

Stories by YourStory Kannada