ಸ್ವಂತ ಅನುಭವವೇ ಉದ್ಯಮಕ್ಕೆ ದಾರಿ.. ಇದು ಪಿಕ್ ಮೈ ಲಾಂಡ್ರಿ ಸ್ಟೋರಿ.. ! 

ಟೀಮ್​ ವೈ.ಎಸ್​. ಕನ್ನಡ

0

ಸ್ವಂತದ್ದೊಂದು ಉದ್ಯಮ ಆರಂಭಿಸುವ ಕನಸನ್ನ ಕಾಣೋದು ಬದುಕಿನ ಒಂದು ಭಾಗವಾದ್ರೆ, ಅದನ್ನ ನನಸಾಗಿಸಿಕೊಳ್ಳೋದು ಇನ್ನೊಂದು ಸಾಹಸ. ಆದ್ರೆ ಕೆಲವರು ಮಾತ್ರ ಜಗತ್ತೇ ಭಿನ್ನ ರಾಗ ತೆಗೆದ್ರೂ ತಾವು ಸವೆಸಲು ಶುರುಮಾಡಿದ ಹಾದಿಯಲ್ಲಿ ವಿರಮಿಸಲು ಇಚ್ಛಿಸೋದಿಲ್ಲ. ಇನ್ನು ಕೆಲವರು ತೆಗೆದುಕೊಂಡ ಹೊಸ ಉದ್ದಿಮೆಯ ಸಾಹಸದ ಬಗ್ಗೆ ಅದೆಷ್ಟೋ ಮಂದಿ ಅಪಸ್ವರವೆತ್ತುತ್ತಾರೆ. ಆದ್ರೂ ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೆ ಕೆಲವರು ಮಾತ್ರವೇ ಯಶಸ್ಸಿನ ಪತಾಕೆ ಹಾರಿಸುತ್ತಾರೆ. ಇಂತಹ ಸಾಲಿನಲ್ಲಿ ನಿಲ್ಲುವವರು ಓಡಿಶಾದ ಗೌರವ್ ಅಗರ್ವಾಲ್ ಮತ್ತು ಫ್ರೆಂಡ್ಸ್.. ಆದ್ರೆ ಇವರು ಆಯ್ದುಕೊಂಡ ಸಂಪಾದನೆಯ ಹಾದಿ ಕೊಂಚ ಡಿಫರೆಂಟ್.. ಅದು ಲಾಂಡ್ರಿ ಸರ್ವೀಸ್.. ವಿಶೇಷ ಅಂದ್ರೆ ಅದು ಶುರುವಾಗಿದ್ದು ಸ್ವಂತ ಅನುಭವದ ಮೇಲೆ.

ಓಡಿಶಾದಲ್ಲಿರುವ ಗೌರವ್ ಗರ್ವಾಲ್ ತಮ್ಮ ಬಟ್ಟೆಗಳನ್ನ ಒಗೆಯಲು ದೂರದಲ್ಲಿದ್ದ ವಾಶಿಂಗ್ ಮಷೀನನ್ನ ಅವಲಂಬಿಸಿದ್ರು. ಆದ್ರೆ ಅದು ಮನೆಯಿಂದ ತುಂಬಾ ಅಂತರದಲ್ಲಿ ಇದ್ದಿದ್ರಿಂದ ಅದು ಸ್ವಲ್ಪ ಕಿರಿಕಿರಿಯನ್ನುಂಟು ಮಾಡ್ತಿತ್ತು. ಇದನ್ನೇ ಬ್ಯುಸಿನೆಸ್ ಕೋನದಲ್ಲಿ ಯೋಚಿಸಿದ ಅಗರ್ವಾಲ್ ಕೊನೆಗೂ ಅದಕ್ಕೊಂದು ಹೊಸ ಟಚ್ ನೀಡಿದ್ರು. ಇದ್ರ ಪರಿಣಾಮ ಹುಟ್ಟಿಕೊಂಡಿದ್ದೇ ಲಾಂಡ್ರಿ ಸರ್ವೀಸ್. ಇದನ್ನ ಪಕ್ವಗೊಳಿಸಲು ಒಂದು ಟಾರ್ಗೆಟ್ ಗ್ರೂಪ್ ಸಿದ್ಧಪಡಿಸಿದ ಅಗರ್ವಾಲ್, ಕೆಲವು ಸಪ್ಲೈ ಮತ್ತು ಡಿಮ್ಯಾಂಡ್ ನಡುವಿನ ವ್ಯತ್ಯಾಸ ಗುರುತಿಸಿದ್ರು. ಅಲ್ಲದೆ ತಮ್ಮ ವ್ಯವಹಾರದಲ್ಲಿ ಸಿಟಿ ಮಂದಿಯ ಕೊರತೆಗಳನ್ನೇ ಬಂಡವಾಳವನ್ನಾಗಿಸಿಕೊಂಡ ಗೌರವ್, ಲೌಂಡ್ರೋಮೇಟ್ಸ್ ಆರಂಭಿಸಿದ್ರು. ಇವರ ಈ ಅಪೂರ್ವ ಸಾಹಸಕ್ಕೆ ಅಂಕೂರ್ ಜೈನ್, ಸಮರ್ ಸಿಸೋಡಿಯಾ ಕೈಜೋಡಿಸಿದ್ರು. ಇವರೆಲ್ಲರ ಪರಿಶ್ರಮದ ಫಲವಾಗಿ 2015ರ ಮೇ ನಲ್ಲಿ ಪಿಕ್ ಮೈ ಲಾಂಡ್ರಿ ಶುರುವಾಯ್ತು. ಇವರ ಬ್ಯುಸಿನೆಸ್ ಗೆ ವರ್ಕಿಂಗ್ ಕಪಲ್ಸ್, ಗೃಹಿಣಿಯರು, ಹಿರಿಯ ನಾಗರೀಕರು ಟಾರ್ಗೆಟ್ ಆದ್ರು. ಹೀಗಾಗಿ ಅಂದುಕೊಂಡಿದ್ದಕ್ಕಿಂತಲೂ ವೇಗವಾಗಿ ಪಿಕ್ ಮೈ ಲಾಂಡ್ರಿ ಬೆಳೆದಿದ್ದು ವಿಶೇಷ.

ಸವಾಲನ್ನ ಸ್ವೀಕರಿಸಿದ ಗೆಳೆಯರು ಬಳಗ..

ಪಿಕ್ ಮೈ ಲಾಂಡ್ರಿ ಸಮಸ್ಯೆಯಾಗಿ ಕಾಡಿದ್ದು ಗ್ರಾಹಕರು ನಿರೀಕ್ಷಿಸುವ ಇನ್ ಟೈಂ ಸರ್ವೀಸ್... ಆದ್ರೆ ಈ ಸವಾಲನ್ನ ಸಮರ್ಥವಾಗಿ ನಿಭಾಯಿಸಲು ನೆರವಾಗಿದ್ದು ಟೆಕ್ನಾಲಜಿ. “ ಅರ್ಧಂಬರ್ಧ ಬೆಳೆದಿರುವ ಮಾರ್ಕೆಟ್ ಹಾಗೂ ಈ ರೀತಿಯ ಬ್ಯುಸಿನೆಸ್ ಟ್ರೆಂಡ್ ನಲ್ಲಿ ಗ್ರಾಹಕರ ನಿರೀಕ್ಷೆಗಳಿಗೆ ಸ್ಪಂದಿಸುವುದು ದೊಡ್ಡ ಚಾಲೆಂಜ್. ಕೆಲವರು ಕ್ಲೀನ್ ಆದ ನಂತ್ರ ಅದನ್ನ ನೇರವಾಗಿ ಧರಿಸಲು ಸಾಧ್ಯವಾಗುವಂತೆ ರೆಡಿಮಾಡಲು ತಿಳಿಸುತ್ತಾರೆ. ಆದ್ರೆ ನಾವು ವಿಧಿಸುವ ದರಕ್ಕೆ ಅದು ಸ್ವಲ್ಪ ಕಷ್ಟ ಸಾಧ್ಯ ” ಅಂತಾರೆ ಪಿಕ್ ಮೈ ಲಾಂಡ್ರಿಯ ಮಾಲಿಕ ಗೌರವ್..

ಬ್ಯುಸಿನೆಸ್ ತಂತ್ರಗಾರಿಕೆ..

ಗೌರವ್ ತಂಡದ ಈ ಸ್ಟಾರ್ಟ್ ಅಪ್ ಶುರುವಾಗಿದ್ದು 10 ಲಕ್ಷ ರೂಪಾಯಿ ವೆಚ್ಚದಲ್ಲಿ. ಆದ್ರೆ ಅದನ್ನ ಇವರು ವಿನಿಯೋಗಿಸಿರುವುದು ಬಾಡಿಗೆ ನೀಡಲು ಹಾಗೂ ಮಾರ್ಕೆಟಿಂಗ್ ಗಾಗಿ. ಆದ್ರೆ ಇದ್ರ ಸಂಸ್ಥಾಪಕರಿಗೆ ಲಾಜಿಸ್ಟಿಕ್ಸ್ ಹಾಗೂ ಟೆಕ್ನಾಲಜಿಗೆ ಹಣ ಪಾವತಿಸಲು ಸಾಧ್ಯವಾಗಿರಲಿಲ್ಲ.. ಆದ್ರೂ ಟೆಕ್ನಾಲಜಿಯತ್ತ ಹೂಡಿಕೆ ಮಾಡಿದರ ಪರಿಣಾಮ ಇವರ ಆಪನ್ನ ಸುಮಾರು 7500 ಮಂದಿ ಡೌನ್ ಲೋಡ್ ಮಾಡಿದ್ರು. ಹೀಗಾಗಿ ಇವರಿಗೆ ಪ್ರತೀ ನಿತ್ಯವೂ 2500ಕ್ಕೂ ಹೆಚ್ಚು ಬಟ್ಟೆಗಳು ವಾಶಿಂಗ್ ಗೆ ಆರ್ಡರ್ ಸಿಗುತ್ತಿದೆ. ಇದನ್ನ 10 ಸೆಂಟರ್ ಗಳಲ್ಲಿ ನಿಭಾಯಿಸುತ್ತಿರುವುದರಿಂದ ಕ್ವಾಲಿಟಿ ಹಾಗೂ ಸಮಯದ ಪರಿಪಾಲನೆ ಮಾಡಲು ಸಾಧ್ಯವಾಗ್ತಿದೆ. ವಿಶೇಷ ಅಂದ್ರೆ ಶೇಕಡಾ 65ರಷ್ಟು ಮಂದಿ ಪಿಕ್ ಮೈ ಲಾಂಡ್ರಿಗೆ ಪುನರಾವರ್ತಿತ ಗ್ರಾಹಕರಾಗಿದ್ದಾರೆ. ಇದು ಪ್ರತೀ ತಿಂಗಳು ಶೇಕಡಾ 25ರಷ್ಟು ಹೆಚ್ಚುತ್ತಲೇ ಇದೆ.

ಇದನ್ನು ಓದಿ

ಸಮಾಜದಲ್ಲಿ ಕಂಡೂ ಕಾಣಿಸದ ಪ್ರತಿಭಾ ಸಂಪನ್ನರು

ಬೆಳವಣಿಗೆಯ ಅಂದಾಜು..

ಯಾವುದೇ ಸ್ಟಾರ್ಟ್ ಅಪ್ ಆದ್ರೂ ಅದೂ ಸಕ್ಸಸ್ ಆಗ್ಬೋಕು ಅಂದ್ರೆ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಜೊತೆಗೆ ಅದಕ್ಕೆ ಬಾಯಿಯಿಂದ ಬಾಯಿಗೆ ಪ್ರಚಾರವೂ ಸಿಗ್ಬೇಕು. ಇದು ಪ್ರತಿ ನಿತ್ಯದ ಹಾದಿಯಲ್ಲಿ ಸಾಗಿದ್ರೆ ಮಾತ್ರ ಉದ್ದಿಮೆಯೊಂದು ಗಟ್ಟಿಯಾಗಿ ನೆಲೆಯೂರಲು ಸಾಧ್ಯವಾಗುತ್ತದೆ. ಅಂತದ್ರಲ್ಲೂ ಲಾಂಡ್ರಿಯಂತಹ ಸರ್ವೀಸ್ ಗಟ್ಟಿಯಾಗಲು ಇಂತಹ ಪ್ರಯತ್ನಗಳು ಅನಿವಾರ್ಯ. ಇನ್ನು ಲಾಂಡ್ರಿಯಂತಹ ಸರ್ವೀಸ್ ಗಳು ಜನರನ್ನ ಬೇಗನೆ ತಲುಪುತ್ತವೆ. ಇದೇ ಮಾದರಿಯಲ್ಲಿ ಪಿಕ್ ಮೈ ಲಾಂಡ್ರಿ ಕೂಡ ಯಶಸ್ಸಿನೆಡೆ ಸಾಗುತ್ತಿದೆ. ಇನ್ನು ಗ್ರಾಹಕರ ಮೆಚ್ಚುಗೆಗಳಿಸಲು ಪಿಕ್ ಮೈ ಲಾಂಡ್ರಿಯೂ ಯತ್ನಿಸುತ್ತಲೇ ಇದೆ. ಡೇ ಡೆಲಿವರಿ, ಓವರ್ ನೈಟ್ ಡ್ರೈ ಕ್ಲೀನಿಂಗ್ ಸರ್ವೀಸ್ ಗಳನ್ನ ನೀಡುತ್ತಲಿದೆ. ಇದೀಗ ರಾಜಧಾನಿ ದೆಹಲಿಯತ್ತ ಚಿತ್ತ ನೆಟ್ಟಿರುವ ಪಿಕ್ ಮೈ ಲಾಂಡ್ರಿ, ಕ್ರಮೇಣ ದೇಶಾದ್ಯಂತ ವ್ಯಾಪಿಸುವ ಲೆಕ್ಕಾಚಾರದಲ್ಲಿದೆ.

ಇಷ್ಟೆಲ್ಲಾ ಆದ್ರೂ ಪಿಕ್ ಮೈ ಲಾಂಡ್ರಿಯಂತಹ ಉದ್ದಿಮೆಗಳು ನಿರಂತರವಾದ ಸವಾಲುಗಳನ್ನ ಎದುರಿಸುತ್ತಲೇ ಇರುತ್ತವೆ. ಭಾರತದಲ್ಲಿ ನಿತ್ಯ ಲಾಂಡ್ರಿ ಬ್ಯುಸಿನೆಸ್ ಅಂದಾಜು 2.2 ಲಕ್ಷ ಕೋಟಿ ಮೊತ್ತದಷ್ಟು ನಡೆಯುತ್ತಲೇ ಇರುತ್ತದೆ. ಇಲ್ಲದೆ ಕೆಲವು ಸರ್ವೆಗಳ ಪ್ರಕಾರ ಆನ್ ಲೈನ್ ಸರ್ವೀಸ್ ಗಳಿಗೆ ಇನ್ನಿಲ್ಲದ ಬೇಡಿಕೆಗಳು ಹೆಚ್ಚುತ್ತಲೇ ಇದೆ. ಇಷ್ಟೆಲ್ಲಾ ಸವಾಲುಗಳ ನಡುವೆಯೂ ಗೌರವ್ ಅಂಡ್ ಟೀಂ ಅದ್ಭುತವಾದುದನ್ನ ಸಾಧಿಸಲು ಮುಂದಾಗಿದೆ.

ಲೇಖಕರು – ತೌಸಿಫ್ ಆಲಂ
ಅನುವಾದ – ಬಿ ಆರ್ ಪಿ , ಉಜಿರೆ

ಇದನ್ನು ಓದಿ

1. ಲೈಂಗಿಕ ಅಲ್ಪಸಂಖ್ಯಾತರು, ತೃತೀಯ ಲಿಂಗಿಗಳು, ಜೋಗಪ್ಪ ಸಮುದಾಯದ ಹಕ್ಕುಗಳಿಗಾಗಿ ಹೋರಾಟ: ಸಾಮಾಜಿಕ ಬದಲಾವಣೆಗೆ ಸಾಲಿಡಾರಿಟಿ ಫೌಂಡೇಷನ್ ಸಂಕಲ್ಪ

2. ಹಸಿತ್ಯಾಜ್ಯ ಸಂಸ್ಕರಣೆಯಿಂದ ಅಡುಗೆ ಅನಿಲ, ತರಕಾರಿ ಬೆಳೆದ ಬೆಂಗಳೂರಿಗರು

3. ನಾವು ಯಾರಿಗೂ ಕಮ್ಮಿ ಇಲ್ಲ – ಚಿಕ್ಕವರೆಲ್ಲಾ ಜಾಣರಲ್ಲ


Related Stories