ಕೈಮಗ್ಗ ಉದ್ಯಮದಲ್ಲಿ ಹೊಸ ಅಲೆ ಎಬ್ಬಿಸಿರುವ ‘ಮಾಕು’

ಟೀಮ್​​ ವೈ.ಎಸ್​​.

0

ಹೊಸತೊಂದು ಉದ್ಯಮವನ್ನು ಹುಟ್ಟುಹಾಕುವುದು ಒಂದು ಕ್ರೇಜ್. ಅಲ್ಲದೇ ಕಾಲೇಜು ವಿದ್ಯಾಭ್ಯಾಸ ಮುಗಿಸಿದ ಕೂಡಲೇ ಉದ್ಯಮವನ್ನು ಆರಂಭಿಸುವುದೂ ಕೂಡ ಆಶ್ಚರ್ಯಕರವಾದ ವಿಚಾರವಲ್ಲ. ಇದಕ್ಕಾಗಿ ಅಂತರ್ಜಾಲದಲ್ಲಿ ಹೊಸ ಅಲೆಯೇ ಸೃಷ್ಟಿಯಾಗಿದೆ. 

ಕನಸುಕಂಗಳ, ಸಾಧಿಸುವ ಇಚ್ಛೆಯುಳ್ಳವರಿಗೆ ಅಂತರ್ಜಾಲ ಹೊಸ ದಾರಿಯನ್ನೂ ಕೂಡ ತೋರಿಸಿಕೊಡುತ್ತದೆ. ತಮ್ಮದೇ ಆದ ಭವಿಷ್ಯವನ್ನು ಸೃಷ್ಟಿಸಿಕೊಳ್ಳುವ ಅವಕಾಶವನ್ನೂ ನೀಡುತ್ತದೆ. ಎಲ್ಲಾ ಮಾಧ್ಯಮಗಳನ್ನೂ ಮೀರಿ ಅಂತರ್ಜಾಲ ತನ್ನ ಅಸ್ತಿತ್ವ ಕಂಡುಕೊಂಡಿದೆ. ಹೀಗಾಗಿ ಆಫ್‌ಲೈನ್ ಉದ್ಯಮಗಳು ಅನೇಕ ಬಾರಿ ಮೂಲೆಗೆ ತಳ್ಳಲ್ಪಡುತ್ತದೆ. ಅಲ್ಲದೇ ತಮ್ಮ ಉತ್ಪನ್ನಗಳಿಗೆ ಅವರು ನೀಡುವ ಪ್ರಚಾರಗಳೂ ಸಹ ಬೆಳಕಿಗೆ ಬರುವುದಿಲ್ಲ.

ಇದಕ್ಕೆ ಒಂದು ಉದಾಹರಣೆ ಮಾಕು ಟೆಕ್ಸ್‌ ಟೈಲ್ಸ್. ಇದೊಂದು ಡಿಸೈನರ್ ಬ್ರಾಂಡ್ ಆಗಿದ್ದು, ಇದು ಕೈಯಿಂದ ನೇಯ್ದ ವಸ್ತ್ರಗಳ ಬಳಕೆಯನ್ನು ಪ್ರೋತ್ಸಾಹಿಸುತ್ತದೆ. ನೇಯುವಿಕೆ ಅಳಿವಿನಂಚಿನಲ್ಲಿರುವ ಒಂದು ಕಲೆಯಾಗಿದೆ. ಈ ಕಲೆಯನ್ನು ಪ್ರೋತ್ಸಾಹಿಸಲು ಸರ್ಕಾರವೂ ಅನೇಕ ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ.

ಈ ಪರಿಸ್ಥಿತಿಯ ಅರಿವಿದ್ದವರು ಶಂತನು ದಾಸ್. ಶಂತನುದಾಸ್ ಅಹಮದಾಬಾದ್‌ನ ಎನ್‌ಐಡಿಯಲ್ಲಿ ಪದವಿ ಪಡೆದ ವಿನ್ಯಾಸಗಾರ. ನೇಕಾರರಿಗೆ ಸಹಾಯ ಮಾಡುವ ಸಲುವಾಗಿ ಏನಾದರೂ ಮಾಡಬೇಕೆಂಬುದು ಶಂತನು ಅವರ ಇಚ್ಛೆಯಾಗಿತ್ತು. ಇವರೊಂದಿಗೆ ಕೈಜೋಡಿಸಿದ್ದು ನಿರ್ಮಾ ವಿವಿಯ ಇಂಜಿನಿಯರಿಂಗ್ ಪದವೀಧರ ಚಿರಾಗ್ ಗಾಂಧಿ. ಕಳೆದ ಒಂದು ವರ್ಷದ ಹಿಂದೆ ಮಾಕು ಟೆಕ್ಸ್​​​ಟೈಲ್ಸ್ ಆರಂಭಿಸಿದ ಈ ಇಬ್ಬರು ಸ್ನೇಹಿತರು ಈಗ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರತರಾಗಿದ್ದಾರೆ.

ಶಂತನು ದಾಸ್​​​ ಮತ್ತು ಚಿರಾಗ್​​ ಗಾಂಧಿ
ಶಂತನು ದಾಸ್​​​ ಮತ್ತು ಚಿರಾಗ್​​ ಗಾಂಧಿ

ಶಂತನು ಮತ್ತು ಚಿರಾಗ್ ಏನು ಮಾಡಿದರು?

ನೇಕಾರರು ಹೇಳುವಂತೆ ಶಂತನು ಮತ್ತು ಚಿರಾಗ್ ವಿನ್ಯಾಸಗಳನ್ನು ರಚಿಸುತ್ತಿದ್ದರು ಮತ್ತು ಅವುಗಳ ನೇಕಾರಿಕೆ ಕೆಲಸಕ್ಕಾಗಿ ವಿನ್ಯಾಸಗಳನ್ನು ಪಶ್ಚಿಮ ಬಂಗಾಳ, ಕಚ್, ಗುಜರಾತ್ ಗಳಿಗೆ ಕಳಿಸುತ್ತಿದ್ದರು. ಅಲ್ಲಿಂದ ನೇಯ್ದು ಬಂದ, ವಿನ್ಯಾಸಗೊಂಡ ಬಟ್ಟೆಗಳನ್ನು ಮಾರುಕಟ್ಟೆಯಲ್ಲಿ ಮಾರುತ್ತಿದ್ದರು. ಆದರೆ ಅದಕ್ಕಿಂತ ದೊಡ್ಡ ಕಥೆ ಇಲ್ಲಿದೆ.

ಮಧ್ಯವರ್ತಿಗಳ ಪಾತ್ರ

ಜವಳಿ ಉದ್ಯಮದಲ್ಲಿ ಬಹಳಷ್ಟು ದೊಡ್ಡ ಮೊತ್ತದ ಹೂಡಿಕೆ ಮತ್ತು ಅದರ ಕಾರ್ಯಾಚರಣೆಗೆ ಅದರದ್ದೇ ಆದ ಅಳತೆಗೋಲುಗಳಿವೆ. ಆದರೆ ಇದನ್ನು ನಿಯಂತ್ರಿಸುವವರು ಬಹಳ ಕಡಿಮೆ. ಕೆಳ ಮಟ್ಟದಲ್ಲಿ ಈ ಉದ್ಯಮ ಹರಡಿಕೊಂಡಿದೆ. ಆದರೆ ಮೇಲ್ಮಟ್ಟದಲ್ಲಿ ಅಷ್ಟೇ ಸಂಕೀರ್ಣವಾಗಿದೆ. ಈ ಉದ್ಯಮದಲ್ಲಿ ಮಧ್ಯವರ್ತಿಗಳ ಪಾತ್ರ ದೊಡ್ಡದು. ಕೆಳಮಟ್ಟದಲ್ಲಿ ನೇಕಾರರಿಂದಲೇ ನಡೆಯುವ ಕೈಮಗ್ಗದ ಜವಳಿ ಉದ್ಯಮವನ್ನು ನಿರ್ವಹಿಸುವವರು ಮತ್ತು ಬಟ್ಟೆಗಳನ್ನು ಟೆಕ್ಸ್ ಟೈಲ್ಸ್ ನವರಿಗೆ ವಿತರಿಸುವುದು ಸ್ಥಳೀಯ ಮಧ್ಯವರ್ತಿಗಳು. ನಂತರ ಈ ಬಟ್ಟೆಗಳು ವಸ್ತುಪ್ರದರ್ಶನಗಳಲ್ಲಿ ಅಥವಾ ಬೊಟಿಕ್‌ಗಳಲ್ಲಿ ಮಾರಲ್ಪಡುತ್ತವೆ. ಈ ಬಟ್ಟೆಗಳು ಬಲು ದುಬಾರಿ ಬೆಲೆಗೆ ಮಾರಲ್ಪಟ್ಟರೂ ಅದರಲ್ಲಿ ನೇಕಾರರನ್ನು ತಲುಪುವುದು ಕೇವಲ ಶೇ.5ರಷ್ಟು ಮಾತ್ರ.

ಬದಲಾವಣೆ

ಇಂತಹ ಹಾವಳಿಯನ್ನು ತಪ್ಪಿಸುವುದು ಮಾಕು ಮತ್ತು ಮಾರುಕಟ್ಟೆಯಲ್ಲಿರುವ ಕೆಲ ಉದ್ಯಮಿಗಳ ಪ್ರಯತ್ನವಾಗಿದೆ. ನೇಕಾರರಿಗೆ ನಷ್ಟವಾಗದಂತಹ ಉತ್ತಮ ವಾತಾವರಣವನ್ನು ನಿರ್ಮಿಸುವುದು ಮತ್ತು ಈ ಉದ್ಯಮದಲ್ಲಿರುವ ಎಲ್ಲರಿಗೂ ನ್ಯಾಯ ಒದಗಿಸುವುದು(ನೇಕಾರರಿಂದ ಹಿಡಿದು ಮಧ್ಯವರ್ತಿಗಳು ಹಾಗೂ ಕಟ್ಟ ಕಡೆಯ ಗ್ರಾಹಕನಿಗೆ ನ್ಯಾಯಯುತ ಬೆಲೆ ನೀಡುವುದು) ನಮ್ಮ ಉದ್ದೇಶವಾಗಿದೆ ಎನ್ನುತ್ತಾರೆ ಚಿರಾಗ್ ಮತ್ತು ಶಂತನು.

ಶಂತನು ಮತ್ತು ಚಿರಾಗ್ ಆ್ಯಂಟಿ-ಫ್ಯಾಶನ್ ಎಂಬ ಧ್ಯೇಯವಾಕ್ಯದೊಡನೆ ತಮ್ಮ ಮಾಕು ಸಂಸ್ಥೆಯನ್ನು ಆರಂಭಿಸಿದವರು. ಇವರ ಉತ್ಪನ್ನಗಳು ಯಾವುದೇ ಫ್ಯಾಶನ್ ಶೋಗಳನ್ನು ಪ್ರದರ್ಶಿಸಲ್ಪಡುವುದಿಲ್ಲ. ತಮ್ಮನ್ನು ತಾವು ಸದಾ ನೇಕಾರರ ಪರವಾಗಿ ನಿಲ್ಲುವಂತೆ ವ್ಯವಹರಿಸುವುದು ಎಂಬ ಮಾದರಿಯಲ್ಲೇ ಇವರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಇವರ ಉದ್ಯಮದ ಮಾದರಿ ಇನ್ನೂ ಸರಿಯಾದ ದಾರಿಗೆ ಬಂದಿಲ್ಲ. ತಮ್ಮ ಪೋಷಕರಿಂದ ಪಡೆದ ಹಣ ಮತ್ತು ತಮ್ಮ ಉಳಿತಾಯದ ಹಣದಿಂದ ಈ ಉದ್ಯಮವನ್ನು ಆರಂಭಿಸಿದವರು ಚಿರಾಗ್ ಮತ್ತು ಶಂತನು. ಪ್ರಸ್ತುತ ಪ್ರತಿ ತಿಂಗಳಿಗೆ 1 ಲಕ್ಷ ಸರಾಸರಿ ಆದಾಯ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತದ ಪ್ರಮುಖ ವಸ್ತುಪ್ರದರ್ಶನಗಳಲ್ಲಿ ಪ್ರಮಖವಾಗಿ ಈ ಉತ್ಪನ್ನಗಳು ಮಾರಾಟವಾಗುತ್ತಿದೆ. ಇದಲ್ಲದೇ ಮಳಿಗೆಗಳಲ್ಲಿ ಮತ್ತು ಫೇಸ್‌ಬುಕ್ ಪೇಜ್‌ ಮತ್ತಿತರ ಸಂಪರ್ಕಗಳ ಮೂಲಕ ನೇರವಾಗಿ ಮಾರಾಟವಾಗುತ್ತಿದೆ.

ಮುಂದಿನ ಯೋಜನೆ

ಈಗ ಅಹಮದಾಬಾದ್‌ನಲ್ಲಿ ಉತ್ಪಾದನಾ ಘಟಕ ಹೊಂದಿರುವ ಮಾಕು ಸಂಸ್ಥೆ, ಕೋಲ್ಕತ್ತಾಗೆ ಶೀಘ್ರದಲ್ಲೇ ತನ್ನ ಉತ್ಪಾದನಾ ಘಟಕ ಆರಂಭಿಸಲಿದೆ. ಅಲ್ಲದೇ ತನ್ನ ಸಂಸ್ಥೆಯ ವಿಸ್ತರಣೆಯತ್ತ ಕಾರ್ಯನಿರ್ವಹಿಸುತ್ತಿದೆ. ತನ್ನ ಸಂಸ್ಥೆಗೆ ಅನೇಕ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಉದ್ದೇಶ ಹೊಂದಿದೆ. ಈ ಉದ್ಯಮವನ್ನು ಮತ್ತಷ್ಟು ಹರಡಲು ಭವಿಷ್ಯದಲ್ಲಿ ಬ್ಯಾಂಕ್‌ನಿಂದ ಲೋನ್‌ ಪಡೆಯುವ ಬಗ್ಗೆಯೂ ಆಲೋಚಿಸುತ್ತಿದ್ದಾರೆ ಶಂತನು ಮತ್ತು ಚಿರಾಗ್. ವಿನ್ಯಾಸಗಾರ ಮತ್ತು ಇಂಜಿನಿಯರ್ ಜೋಡಿ ಆಶಾವಾದಿಗಳಾಗಿದ್ದಾರೆ. ಮಾಕುವನ್ನು ಸಾಮಾಜಿಕ ಕಳಕಳಿಯ ಬ್ರಾಂಡ್ ಆಗಿ ನಿರ್ಮಿಸಲು ಇರುವ ಸಾಧ್ಯತೆಗಳ ಕುರಿತು ಚಿಂತಿಸುತ್ತಿದ್ದಾರೆ.

Related Stories