ಸೀರೆಯ ಮೇಲೆ "ಮಾನಸ" ಚಿತ್ತಾರ!

ಟೀಮ್​ ವೈ.ಎಸ್​. ಕನ್ನಡ

ಸೀರೆಯ ಮೇಲೆ "ಮಾನಸ" ಚಿತ್ತಾರ!

Sunday March 05, 2017,

3 min Read

ನಮಗಿರುವ ಪ್ಯಾಷನ್ ಎಂದೆಂದಿಗೂ ನಮ್ಮ ಗುರಿಯತ್ತ ತಲುಪಿಸುತ್ತೆ ಅನ್ನುವುದಕೆ ಮಾನಸ ರಾವ್ ಬೆಸ್ಟ್ ಎಕ್ಸಾಂಪಲ್. ಹೌದು! ಫ್ಯಾಬ್ರಿಕ್ ಪೇಂಟಿಂಗ್ ಮೂಲಕ ಇಂದು ತನ್ನದೊಂದು ಸ್ವಂತ ಉದ್ಯಮ ನಡೆಸುತ್ತಿರುವ, ಆ ಮೂಲಕ ದೇಶ ವಿದೇಶದಲ್ಲೂ ನಮ್ಮ ಭಾರತದ ಸೀರೆ ಕಲಾ ಪರಂಪರೆಯನ್ನು ಹರಿಸುತ್ತಿರುವ ಕೀರ್ತಿ ಮಾನಸಗೆ ಸಲ್ಲುತ್ತದೆ. ಫ್ಯಾಭ್ರಿಕ್ ಪೇಟಿಂಗ್ ಅಂದ್ರೆ ವಸ್ತ್ರಗಳ ಮೇಲೆ ಚಿತ್ತಾರಗಳನ್ನು ಬಿಡಿಸುವುದು, ಸೀರೆ, ಸೆಲ್ವಾರ್, ಟಾಪ್ಸ್ ಯವುದಾದರೂ ಸರಿ. ಅದನ್ನು ಚಿತ್ತಾರದ ಮೂಲಕ ಡಿಸೈನ್ ಮಾಡಲಾಗುತ್ತೆ. ಸದ್ಯ ಈಗ ಇದು ಹೆಚ್ಚು ಟ್ರೆಂಡ್‍ನಲ್ಲಿದೆ. ಇಂಥ ಸೀರೆಯ ಮೇಲೆ ಚಿತ್ತಾರ ಬಿಡಿಸುವ ಫ್ಯಾಭ್ರಿಕ್ ಪೇಂಟಿಂಗ್ ಆರ್ಟ್​ನಲ್ಲಿ ಮಾನಸ ಎಕ್ಸ್​​ಪರ್ಟ್. ಮಾನಸ ಅವರ ಸ್ಪೆಷಲ್ ಥೀಮ್ ಒಳಗೊಂಡ ರಾಧಾಕೃಷ್ಣರ ಚಿತ್ತಾರ ಎಲ್ಲ ಹೆಂಗಳೆಯರನ್ನು ಸೆಳೆಯುತ್ತಿದೆ. ಆ ಮೂಲಕ ಕರ್ನಾಟಕದಲ್ಲಿ ಅಲ್ಲದೇ ಹೊರ ರಾಜ್ಯವೂ ಸೇರಿದಂತೆ, ವಿದೇಶದಲ್ಲಿಯೂ ತಮ್ಮ ಗ್ರಾಹಕರನ್ನು ಹೊಂದಿದ್ದಾರೆ ಮಾನಸ.

image


ಬಾಲ್ಯದಿಂದಲೇ ಮೂಡಿತ್ತು ಅಸಕ್ತಿ

ಬಾಲ್ಯದಿಂದಲೂ ಕಲೆಯ ಬಗ್ಗೆ ಬಹಳ ಆಸಕ್ತಿ ಹೊಂದಿದ್ದ ಮಾನಸ ಪ್ರತಿಭಾನ್ವಿತ ಚಿತ್ರಕಾರರು. ಆದರೆ ಓದಿದ್ದು ಮಾತ್ರ ಬಿ.ಕಾಂ. ಡಿಗ್ರಿ. ಈ ಹಂತದಲ್ಲೇ ಮಾನಸ ಅವರಿಗೆ ಮದುವೆಯೂ ಆಗುತ್ತದೆ. ಮದುವೆ ನಂತರ ಮಾನಸ ಕುಟುಂಬಕ್ಕಷ್ಟೇ ಸೀಮಿತವಾಗಲಿಲ್ಲ. ತಮ್ಮೊಳಗಿದ್ದ ಕಲೆಯನ್ನು ಆಚೆ ತರಲು ತವಕಿಸುತ್ತಿದ್ದರು. ಇದೇ ಸಮಯ ಕರ್ನಾಟಿಕ್ ಸಂಗೀತಾಭ್ಯಸವನ್ನು ಮುಗಿಸಿದರು. 2013 ರಲ್ಲಿ ತಮ್ಮ ಮೊದಲ ಪ್ರಗ್ನೆನ್ಸಿ ಸಮಯದಲ್ಲಿ ಸಮಯ ಕಳೆಯಲು ಪೇಂಟಿಂಗ್​​ಗಳನ್ನು ಬರೆಯಲು ಆರಂಭಿಸಿದ್ರು. ಹಗಲು ರಾತ್ರಿ ಎನ್ನದೇ ಪೇಂಟಿಂಗ್​​ನಲ್ಲಿ ತೊಡಗಿಕೊಂಡರು. ಈ ಸಮಯದಲ್ಲಿ ಮೊದಲ ಮಗುವಿನ ಡೆಲಿವರಿ ನಂತರವೂ ಮಗು ನಿದ್ರಿಸಿದ ಮೇಲೆ ಪೇಂಟಿಂಗ್ಸ್ ಮಾಡುತ್ತಿದ್ದರು. ಹೀಗಿರುವಾಗ ಒಮ್ಮೆ ಆಕಸ್ಮಿಕವಾಗಿ ಘಟಿಸಿದ ಘಟನೆ ಮಾನಸರ ಕಲೆ ಹೊರ ಹೊಮ್ಮುವಂತೆ ಮಾಡಿತು.

image


ಟಿವಿಯಿಂದ ಪ್ರೇರಣೆ

ಹೀಗೆ ಒಮ್ಮೆ ಟಿವಿ ನೋಡುವಾಗ ಒಬ್ಬರು ಫ್ಯಾಬ್ರಿಕ್ ಪೇಂಟಿಂಗ್ಸ್ ಮಾಡಿ ತೋರಿಸುತ್ತಿದ್ದರು. ಇದು ಮೊದಲ ಬಾರಿಗೆ ಇಂಪ್ರೆಸಿವ್ ಅನಿಸಿತು. ನಂತರ ಸೀರೆ ಪ್ರದರ್ಶನಗಳಿಗೆ ಹೋದಾಗ ಅಲ್ಲೂ ಕೂಡ ಇಂಥದ್ದೇ ಒಂದು ಸೀರೆಯನ್ನು ನೋಡಿದರು. ಬಹಳ ಸಿಂಪಲ್ ಪೇಂಟಿಂಗ್ ಒಳಗೊಂಡಿದ್ದ ಆ ಸೀರೆಯ ಬೆಲೆ 4500 ರೂಪಾಯಿ ಎಂದು ತಿಳಿದಾಗ ತಾವೇ ಇದನ್ನು ಡಿಸೈನ್ ಮಾಡಿದ್ರೆ ಹೇಗೆ ಅನ್ನೋ ಆಲೋಚನೆ ಮೂಡಿತು. ಆಗಲೇ ನೋಡಿ ತಡ ಮಾಡದೇ ಮೊದಲ ಪೇಂಟಿಂಗ್ ಅನ್ನು ಸೀರೆ ಮೇಲೆ ಪ್ರಾರಂಭಿಸಿಯೇಬಿಟ್ರು. ಏನಾಶ್ಚರ್ಯ ತಾವು ಅಂದುಕೊಂಡಿದ್ದಕ್ಕಿಂತಲೂ ಸುಂದರವಾಗಿ ಸೀರೆಯ ಮೇಲೆ ಚಿತ್ತಾರ ಮೂಡಿತ್ತು.

ಫೇಸ್‍ಬುಕ್ ಕಸ್ಟಮರ್ಸ್

ಮಾನಸ ಅವರದು ಒಂದು ಯೂನಿಕ್ ಥೀಮ್ ಇದೆ. ತಾವು ಇಷ್ಟ ಪಡುವ ಕೃಷ್ಣ ಮತ್ತು ರಾಧೆಯನ್ನು ಒಳಗೊಂಡ ಸೀರೆಯನ್ನು ಡಿಸೈನ್ ಮಾಡಿದ್ರು. ಇದನ್ನು ತಮ್ಮ ಫೇಸ್‍ಬುಕ್ ವಾಲ್‍ನಲ್ಲಿ ಪೋಸ್ಟ್ ಮಾಡಿದ್ರು. ಸ್ನೇಹಿತರು ಇದನ್ನು ಮೆಚ್ಚಿಕೊಂಡರು. ಈ ಹಂತದಲ್ಲಿ ಫೇಸ್‍ಬುಕ್ ನಲ್ಲಿ ಮೊದಲ ಬಾರಿಗೆ ಇಬ್ಬರು ಗ್ರಾಹಕರು ಸಿಕ್ಕರು. ಮೊದಲ ಬಾರಿಗೆ 3 ಫ್ಯಾಬ್ರಿಕ್ ಪೇಂಟಿಂಗ್ ಸೀರೆಗಳನ್ನು ಮಾನಸ ಡಿಸೈನ್ ಮಾಡಿಕೊಟ್ಟರು. ಇಲ್ಲಿಂದ ಮುಂದೆ ಪೇಂಟ್ ಮಾಡುವುದು. ಪೋಸ್ಟ್ ಮಾಡುವುದು ಮಾಡುತ್ತಲೇ ಹಲವಾರು ಗ್ರಾಹಕರನ್ನು ಸಂಪಾದಿಸಿದರು ಮಾನಸ.

image


ಕರ್ನಾಟಕದಾಚೆಗೂ ಇದ್ದಾರೆ ಕಸ್ಟಮರ್ಸ್

ಹೌದು. ಫೇಸ್ ಬುಕ್‍ನಿಂದ ಆರಂಭವಾದ ಈ ಜರ್ನಿ ಮಾನಸರಿಗೆ ದೆಹಲಿ, ಕೇರಳ , ಅಹಮದ್‍ಬಾದ್ ಸೇರಿದಂತೆ ವಿವಿಧ ರಾಜ್ಯಗಳ ಗ್ರಾಹಕರನ್ನು ನೀಡಿದೆ. ಅಷ್ಟೇ ಅಲ್ಲದೇ ಶ್ರೀಲಂಕಾ, ದುಬೈನಲ್ಲೂ ಕೂಡ ನಮ್ಮ ಭಾರತದ ಸಂಪ್ರದಾಯಿಕ ಫ್ಯಾಬ್ರಿಕ್ ಪೇಂಟಿಂಗ್ ಕಲೆಯನ್ನು ಗ್ರಾಹಕರ ಮೂಲಕ ಅರಳಿಸಿದ್ದಾರೆ, ಸದ್ಯ ಇಂಟಿರಿಯರ್ ಕಂಪನಿಯೊದರಲ್ಲಿ ಸೇಲ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಈ ಬ್ಯುಸಿನೆಸ್ ಕೂಡ ನಿಭಾಯಿಸುತ್ತಿದ್ದಾರೆ.

image


ನೀವು ಆರಂಭ ಮಾಡ್ತೀರಾ?

ಹಾಗಾದ್ರೆ ನಿಮಗೆ ಆಸಕ್ತಿ ಶ್ರದ್ಧೆ ಜೊತೆಗೆ ದೂರದೃಷ್ಟಿಕೋನವೂ ಇರಬೇಕು, ಸೋಶಿಯಲ್ ಮಿಡಿಯಾದ ಸಂಪರ್ಕವಿರಬೇಕು. ಇನೋವೇಟಿವ್ ಆಗಿ ಯೋಚಿಸಬೇಕು. ಬಣ್ಣ ವಿನ್ಯಾಸದ ಬಗ್ಗೆ ತಿಳಿದುಕೊಳ್ಳಬೇಕು, ಅದನ್ನು ಸರಿಯಾದ ರೀತಿಯಲ್ಲಿ ಅಭಿವ್ಯಕ್ತಿಸಬೇಕು ಅಂತಾರೆ ಮಾನಸ. ಇನ್ನು ಇದಕ್ಕೆ ಯಾವ ಹಣವೂ ಬಂಡವಾಳವಾಗಿ ಬೇಕಾಗಿಲ್ಲ. ಪೇಂಟಿಂಗ್ ಮತ್ತು ಬ್ರಶ್‍ಗಳಿಗೆ ಮಾತ್ರ ಹಣ ತೊಡಗಿಸಬೇಕು ಅಂತಾರೆ. ಇಲ್ಲಿ ನಿಮ್ಮ ಪ್ರತಿಭೆಗೆ ಹಣ ದಕ್ಕುವುದು. ನಿಮಗಲ್ಲ ಅನ್ನೋದು ನೆನಪಿರಬೇಕು ಅಂತಾರೆ. ಆ ಮೂಲಕ ಇದನ್ನು ಸ್ಟಾರ್ಟ್ ಅಪ್ ಮಾಡೋದಕ್ಕೆ ರೆಡಿಯಾಗಿ ಅಂತಲೂ ಹಾರೈಸುತ್ತಾರೆ.

ಮನಸು ಮಾಡಿದ್ರೆ ಮನಸೊಳಗೊಂದು ಪ್ಯಾಷನ್ ಇದ್ದರೇ ಅದು ಸದಾ ಜೀವಂತ ಇದ್ರೆ ಏನ್ ಬೇಕಾದ್ರೂ ಮಾಡಬಹುದು ಅನ್ನೋದಕೆ ಮಾನಸ ಉತ್ತಮ ನಿದರ್ಶನ. ಸದ್ಯ ತಮ್ಮ ಬ್ಯುಸಿನೆಸ್ ವಿಸ್ತರಿಸುವಲ್ಲಿ ಚಿಂತಿಸುತ್ತಿರುವ ಮಾನಸ ಫ್ಯಾಬ್ರಿಕ್ ಪೇಂಟಿಂಗ್ ಕ್ಲಾಸ್ ಕೂಡ ಕಂಡಕ್ಟ್ ಮಾಡಲಿದ್ದಾರಂತೆ. ಆ ಮೂಲಕ ಇನ್ನಿತರ ಯುವ ಮನಸುಗಳಿಗೆ ಸ್ವತಂತ್ರ ದುಡಿಮೆಯ ಪಾಠ ಹೇಳಿಕೊಡಲಿದ್ದಾರೆ. 

ಇದನ್ನು ಓದಿ:

1. 31 ವರ್ಷಗಳ ಬಳಿಕ ತಂದೆ ಸಾವಿಗೆ ಸಿಕ್ತು ನ್ಯಾಯ – ಎಲ್ಲರಿಗೂ ಮಾದರಿ ಐಎಎಸ್ ಅಧಿಕಾರಿಯ ಈ ಹೋರಾಟ

2. ಪ್ರತಿಯೊಬ್ಬರ ಹೆಜ್ಜೆಗೂ "ಗೆಜ್ಜೆ"ಕಟ್ಟುವ ರೂಪಿಕಾ

3. ಕನ್ನಡ ಶಾಲೆಗಳಿಗೆ "ಶ್ರೀನಿವಾಸ"ಕೃಪೆ..!